
ಈ ದಿನ ಶ್ಯಾಮಲಾ ದಂಡಕವನ್ನು ಪಠಣ ಮಾಡಿ. ಅಥವಾ ಯೂಟ್ಯೂಬ್ ನಲ್ಲಿಯೋ ಅಥವಾ ಬೇರೆ ಯಾವುದಾದರೂ ಮಾಧ್ಯಮದ ಮೂಲಕವಾಗಿ ಕಾಳಿದಾಸನಿಂದ ರಚಿಸಲಾದ ಅಗಾಧ ಶಕ್ತಿಯ ಶ್ಯಾಮಲಾ ದಂಡಕವನ್ನು ಕೇಳಿಸಿಕೊಳ್ಳಿ. ನಿಮ್ಮಲ್ಲಿ ಆಕರ್ಷಣೆಯ ಶಕ್ತಿ ಬರುತ್ತದೆ. ಮಾತನಾಡುವಾಗ ಆತ್ಮವಿಶ್ವಾಸ, ನೆನಪಿನ ಶಕ್ತಿ, ಸಾರ್ವಜನಿಕ ಜೀವನದಲ್ಲಿ ಇರುವಂಥವರಿಗಂತೂ ದೊಡ್ಡ ಶಕ್ತಿ ಆಗಲಿದೆ. ಹಳದಿ ಅಥವಾ ಬಿಳಿ ಬಣ್ಣದ ಬಟ್ಟೆಯನ್ನು ಧರಿಸುವುದಕ್ಕೆ ಈ ದಿನ ಆದ್ಯತೆಯನ್ನು ನೀಡಿ.
ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಲಿದ್ದೀರಿ. ಇನ್ನು ಮನೆಯಲ್ಲಿ ದೇವತಾ ಆರಾಧನೆಯನ್ನು ಮಾಡುವುದಕ್ಕೆ ನಿರ್ಧಾರ ಮಾಡಲಿದ್ದೀರಿ. ರಾಜಕೀಯ ಕ್ಷೇತ್ರದಲ್ಲಿ ಇರುವವರಿಗೆ ಭವಿಷ್ಯಕ್ಕೆ ದೊಡ್ಡ ಜವಾಬ್ದಾರಿ ದೊರೆಯುವ ಕುರಿತು ಸೂಚನೆ ದೊರೆಯಲಿದೆ. ಯಾರು ಮರಕ್ಕೆ ಸಂಬಂಧಿಸಿದ ಕೆಲಸದಲ್ಲಿ ತೊಡಗಿಸಿಕೊಂಡವರೋ ಅಂಥವರಿಗೆ ದೀರ್ಘಾವಧಿಗೆ ಆದಾಯ ತರುವಂಥ ಅವಕಾಶಗಳು ತೆರೆದುಕೊಳ್ಳಲಿವೆ.
ಸಮಯ ಬಂದಾಗ ನಿರ್ಧಾರ ಮಾಡಿದರೆ ಆಯಿತು ಎಂದುಕೊಂಡು ಮುಂದಕ್ಕೆ ಹಾಕಿಕೊಂಡು ಬರುತ್ತಾ ಇದ್ದ ಕೆಲವು ತೀರ್ಮಾನಗಳನ್ನು ಈಗ ತೆಗೆದುಕೊಳ್ಳಲೇಬೇಕು ಎಂಬ ಸನ್ನಿವೇಶ ಸೃಷ್ಟಿಯಾಗಲಿದೆ. ಇದೊಮ್ಮೆ ಮಾತ್ರ ಸಹಾಯ ಮಾಡಿ ಎಂದು ಕೆಲವು ವ್ಯಕ್ತಿಗಳು ನಿಮ್ಮ ಬಳಿ ಬರಲಿದ್ದಾರೆ. ನಿಮ್ಮ ಅಗತ್ಯಕ್ಕಾಗಿ ಎಂದು ಕೂಡಿಟ್ಟಿದ್ದ ಹಣದ ಬಗ್ಗೆ ಯಾವುದೇ ಕಾರಣಕ್ಕೂ ಪ್ರಸ್ತಾವ ಮಾಡದಿರುವುದು ಕ್ಷೇಮ.
ಮನೆ ದೇವರು ಅಥವಾ ನೀವು ವಾಸವಿರುವ ಸ್ಥಳದ ವ್ಯಾಪ್ತಿಯಲ್ಲಿ ಇರುವಂಥ ದೇಗುಲಗಳಿಂದ ವಾರ್ಷಿಕೋತ್ಸವ- ಜೀರ್ಣೋದ್ಧಾರ ಹೀಗೆ ಏನಾದರೊಂದು ಕಾರಣಕ್ಕೆ ದೇಣಿಗೆಯೋ ಸಹಾಯವನ್ನೋ ಕೇಳಿಕೊಂಡು ಬರುವ ಸಾಧ್ಯತೆಯಿದ್ದು, ಯಥಾಶಕ್ತಿ ನೆರವನ್ನು ನೀಡಿ. ಒಂದು ವೇಳೆ ನೀವು ಈಗಾಗಲೇ ಮಾತನ್ನು ನೀಡಿದ್ದಿರಿ, ಕಾರಣಾಂತರಗಳಿಂದ ಅದರಂತೆ ನಡೆದುಕೊಳ್ಳಲು ಆಗಿಲ್ಲ ಎಂದಾದರೆ ಈ ದಿನ ಆ ಮಾತನ್ನು ಪೂರೈಸುವುದು ಒಳ್ಳೆಯದು.
ಲೇಖನ- ಸ್ವಾತಿ ಎನ್.ಕೆ.