
ನಿಮ್ಮನ್ನು ನೀವು ವಿಶ್ಲೇಷಿಸಿಕೊಳ್ಳುವ ದಿನ ಇದಾಗಿರುತ್ತದೆ. ಜನರ ಗುಂಪಿನ ನಡುವೆ ಇರುವುದಕ್ಕಿಂತ ಒಂಟಿಯಾಗಿ ಕೆಲಸ ಮಾಡಲು ಇಷ್ಟಪಡುತ್ತೀರಿ. ಸಂಶೋಧನೆ ಕ್ಷೇತ್ರದಲ್ಲಿ ಇರುವವರಿಗೆ ಮತ್ತು ಬರಹಗಾರರಿಗೆ ಹೊಸ ಆಲೋಚಬೆಗಳು ಹೊಳೆಯಲಿವೆ. ಧಾರ್ಮಿಕ ಕೆಲಸಗಳಿಗಾಗಿ ಸ್ವಲ್ಪ ಹಣ ವಿನಿಯೋಗಿಸುವಿರಿ. ಹಳೆಯ ಗೆಳೆಯನೊಬ್ಬ ಸಹಾಯ ಕೇಳಿ ಬರಬಹುದು, ಆದರೆ ಶಕ್ತಿ ಮೀರಿ ಸಾಲ ನೀಡಬೇಡಿ. ರಾತ್ರಿ ನಿದ್ರಾಹೀನತೆ ಕಾಡಬಹುದು, ಮಲಗುವ ಮುನ್ನ ಪುಸ್ತಕ ಓದುವ ಹವ್ಯಾಸ ರೂಢಿಸಿಕೊಳ್ಳಿ.
ಉದ್ಯೋಗಸ್ಥರಿಗೆ ಕಠಿಣ ಶ್ರಮದ ದಿನ. ಯುಪಿಐ ಪಾವತಿ ವಿಧಾನ ಬಳಸುತ್ತಿದ್ದೀರಿ ಅಂತಾದಲ್ಲಿ ಯಾವ ಸಂಖ್ಯೆಗೆ ಹಾಗೂ ಎಷ್ಟು ಮೊತ್ತ ವರ್ಗಾವಣೆ ಮಾಡುತ್ತಿದ್ದೀರಿ ಎಂಬುದನ್ನು ಪರಿಶೀಲಿಸಿಕೊಳ್ಳಿ. ಕಾನೂನು ಸಂಬಂಧಿತ ಸಮಸ್ಯೆಗಳು ಬಗೆಹರಿಯುವ ಲಕ್ಷಣಗಳಿವೆ. ಆಸ್ತಿ ಖರೀದಿ ಅಥವಾ ಮಾರಾಟಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆಸಲು ಇಂದು ಶುಭ ದಿನ. ಕೆಲಸಗಾರರ ಕೊರತೆ ಇಂದು ನಿಮ್ಮನ್ನು ಕಾಡಬಹುದು. ಆದರೂ ಸೋಲೊಪ್ಪದೆ ಕೆಲಸ ಮುಗಿಸುವಿರಿ. ಬೆನ್ನು ಅಥವಾ ಕುತ್ತಿಗೆ ನೋವು ಕಾಡಬಹುದು.
ನಿಮ್ಮ ಶಕ್ತಿಯ ಮಟ್ಟ ತುಂಬಾ ಹೆಚ್ಚಿರುತ್ತದೆ. ಆದರೆ ಆ ಶಕ್ತಿಯನ್ನು ಕೋಪಕ್ಕೆ ಬಳಸದೆ ಕೆಲಸಕ್ಕೆ ಬಳಸಿ. ಭೂ ವ್ಯವಹಾರ ಅಥವಾ ರಿಯಲ್ ಎಸ್ಟೇಟ್‌ನಲ್ಲಿ ತೊಡಗಿದವರಿಗೆ ಇಂದು ಲಾಭದಾಯಕ ಒಪ್ಪಂದಗಳು ಸಿಗಲಿವೆ. ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರಿಗೆ ಉತ್ತಮ ಫಲಿತಾಂಶದ ಮುನ್ಸೂಚನೆ ಇದೆ. ವಾಹನ ಚಾಲನೆಯಲ್ಲಿ ಅತಿ ವೇಗ ಬೇಡ. ರಕ್ತದೊತ್ತಡ ಇರುವವರು ಸ್ವಲ್ಪ ಎಚ್ಚರಿಕೆಯಿಂದ ಇರಬೇಕು. ಕೆಂಪು ಬಣ್ಣದ ಹಣ್ಣುಗಳ ಸೇವನೆ ಅಥವಾ ದಾನ ಮಾಡುವುದು ಶುಭದೆ.
ಲೇಖನ- ಎನ್.ಕೆ.ಸ್ವಾತಿ