Horoscope Today July 9, 2024:ಈ ರಾಶಿಯವರು ಕೆಲಸಕ್ಕಾಗಿ ಕಾಯಬೇಕಾದೀತು, ಮಾನಸಿಕವಾಗಿ ಕುಗ್ಗಿಸಬಹುದು; ದಿನ ಭವಿಷ್ಯ ಇಲ್ಲಿದೆ

ಜ್ಯೋತಿಷ್ಯವನ್ನು ಅಥವಾ ನಿತ್ಯ ಭವಿಷ್ಯವನ್ನು ಕೆಲ ಜನರು ನಂಬುತ್ತಾರೆ. ಮತ್ತೆ ಕೆಲ ಜನರು ನಂಬುವುದಿಲ್ಲ. ಆದಾಗ್ಯೂ ಮತ್ತೆ ಕೆಲ ಜನರು ಹವ್ಯಾಸಕ್ಕಾಗಿ ಅಥವಾ ಇಂದು ಅವರ ಜೀವನದಲ್ಲಿ ಏನು ಘಟಿಸಲಿದೆ ಎಂಬುವುದನ್ನು ತಿಳಿಯಲು ನಿತ್ಯ ತಮ್ಮ ರಾಶಿ ಭವಿಷ್ಯವನ್ನು ನೋಡುತ್ತಾರೆ. ವ್ಯಕ್ತಿಯ ಜನನದ ಸಮಯವನ್ನು ಅವರ ವ್ಯಕ್ತಿತ್ವವನ್ನು, ಸಂಬಂಧಗಳು ಅವರ ಭವಿಷ್ಯದ ಮೇಲೆ ಪ್ರಭಾವ ಬೀರಬಹುದು ಎಂಬ ಪರಿಕಲ್ಪನೆ ಇದೆ. ಇನ್ನು ಜುಲೈ 08ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ.

Horoscope Today July 9, 2024:ಈ ರಾಶಿಯವರು ಕೆಲಸಕ್ಕಾಗಿ ಕಾಯಬೇಕಾದೀತು, ಮಾನಸಿಕವಾಗಿ ಕುಗ್ಗಿಸಬಹುದು; ದಿನ ಭವಿಷ್ಯ ಇಲ್ಲಿದೆ
ಜ್ಯೋತಿಷ್ಯ
Follow us
| Updated By: ರಮೇಶ್ ಬಿ. ಜವಳಗೇರಾ

Updated on: Jul 08, 2024 | 8:23 PM

ಜ್ಯೋತಿಷ್ಯವು ಪ್ರಪಂಚದಾದ್ಯಂತದ ಸಂಸ್ಕೃತಿಗಳಲ್ಲಿ ಶತಮಾನಗಳಿಂದಲೂ ಕಾಣಬಹುದು. ಕೆಲವರು ಜ್ಯೋತಿಷ್ಯವನ್ನು ಆತ್ಮಾವಲೋಕನ ಮತ್ತು ತಿಳುವಳಿಕೆಗೆ ಉಪಯುಕ್ತ ಸಾಧನವೆಂದು ಪರಿಗಣಿಸಿದರೆ, ಮತ್ತೆ ಕೆಲವರು ಎಲ್ಲರಂತೆ ತಮ್ಮ ರಾಶಿ ಭವಿಷ್ಯವನ್ನು ನೋಡುತ್ತಾರೆ. ಮಂಗಳವಾರದ (ಜುಲೈ 09) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ? ರಾಹು ಕಾಲ, ಯಮಘಂಡ ಕಾಲ, ಗುಳಿಕ ಕಾಲದ ಸಮಯ ಮತ್ತು ಪಂಚಾಂಗವನ್ನು ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಮಿಥುನ ಮಾಸ, ಮಹಾನಕ್ಷತ್ರ: ಪುನರ್ವಸು, ಮಾಸ: ಆಷಾಢ, ಪಕ್ಷ: ಶುಕ್ಲ, ವಾರ: ಮಂಗಳ, ತಿಥಿ: ಚತುರ್ಥೀ, ನಿತ್ಯನಕ್ಷತ್ರ: ಆಶ್ಲೇಷಾ, ಯೋಗ: ಹರ್ಷಣ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 11 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 04 ನಿಮಿಷಕ್ಕೆ, ರಾಹು ಕಾಲ 15:51 ರಿಂದ 17:28ರ ವರೆಗೆ, ಯಮಘಂಡ ಕಾಲ 09:24 ರಿಂದ 11:01ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:38ರಿಂದ 14:15ರ ವರೆಗೆ.

ಮೇಷ ರಾಶಿ :ಇಂದು ನೀವು ಪರರ ಇಂಗಿತವನ್ನು ಅರ್ಥಮಾಡಿಕೊಂಡು ಮಾತನಾಡುವಿರಿ. ಅಧ್ಯಾತ್ಮದಲ್ಲಿ ಆಸಕ್ತಿಯು ಕಂಡುಬರುವುದು. ಸಂತೋಷದ ಅನಂತರ ದುಃಖ ಎಂಬ ಮೂಢನಂಬಿಕೆಯನ್ನು ಬಿಡಿ.‌ ಸಂತೋಷವಾಗಿ ದಿನವನ್ನು ಕಳೆಯಿರಿ. ಖರ್ಚಿಗೆ ಬರುವ ಎಲ್ಲ ಮಾರ್ಗವನ್ನೂ ನೀವು ನಿಲ್ಲಿಸುವಿರಿ. ಕೆಲಸಕ್ಕಾಗಿ ದೂರದ ಊರಿಗೆ ಹೋಗಬೇಕಾಗಬಹುದು. ಕೆಲಸಕ್ಕಾಗಿ ನೀವು ಕಾಯಬೇಕಾದೀತು. ನೀವು ಯಾರ ಮಾತನ್ನೂ ಪೂರ್ಣವಾಗಿ ಆಲಿಸಲಾರಿರಿ. ಮರೆತು ಸಹಜಸ್ಥಿತಿಗೆ ಬರುವುದು ಒಳ್ಳೆಯದು. ನಿಮ್ಮ ಅನನುಕೂಲತೆಯನ್ನು ಯಾರ ಬಳಿಯೂ ಹೇಳಲಾರಿರಿ. ವಾತಾವಣವು ನಿಮ್ಮನ್ನು ಮಾನಸಿಕವಾಗಿ ಕುಗ್ಗಿಸಬಹುದು. ಹಣವನ್ನು ಕೊಟ್ಟು ಕಳೆದುಕೊಳ್ಳುವಿರಿ. ಸೂಕ್ಷ್ಮ ವ್ಯವಹಾರವನ್ನು ನಿರ್ವಹಿಸಲು ಸುಲಭವಾಗಿ ಸಾಧ್ಯವಾಗದು. ಇಷ್ಟವಾದವರಿಗೆ ನಿಮ್ಮ ವಸ್ತುವನ್ನು ಸಂತೋಷದಿಂದ ಕೊಡುವಿರಿ.

ವೃಷಭ ರಾಶಿ :ಇಂದು ನಿಮಗೆ ಹೊಸ ಉತ್ಪನ್ನಗಳ ಅವಶ್ಯಕತೆ ಇದ್ದರೆ ಮಾತ್ರ ಖರೀದಿಸಿ. ಪ್ರೇಮಿಯ ಜಾಣತನದ ಮಾತಿಗೆ ಮಾರು ಹೋಗಿ ಮಾತು ಕೊಡುವಿರಿ. ಹೊರಗೆ ಓಡಾಡುವಾಗ ಜಾಗರೂಕತೆ ಮುಖ್ಯ.‌ ಮೈ ಮರೆವಿನಲ್ಲಿ ಅಪಾಯವನ್ನು ತಂದುಕೊಳ್ಳುವಿರಿ. ಕಛೇರಿಯ ವ್ಯವಹಾರಗಳು ಸಂಪೂರ್ಣವಾಗಿ ಅರ್ಥವಾಗದೇ ಏನನ್ನೂ ಮಾಡಲು ಹೋಗಬೇಡಿ. ಅಂತಿಮವಾಗಿ ನಿಮ್ಮ ತಲೆಗೇ ಬಂದೀತು. ವೈವಾಹಿಕ ಜೀವನದ ಚಿಂತೆಯು ಅಧಿಕಾಗಿ ಕಾಡಬಹುದು. ಹೂಡಿಕೆಯ ಬಗ್ಗೆ ಮನಸ್ಸಿದ್ದರೂ ಅದು ಅರ್ಥವಾಗದೇ ಸುಮ್ಮನೇ ಇರುವಿರಿ. ಅಕಾರಣವಾಗಿ ಸುತ್ತಾಟ ಮಾಡಬಹುದು. ನಿಮ್ಮ ಅಸ್ತಿತ್ವವನ್ನು ಗುರುತಿಸಿಲ್ಲ ಎಂಬ ಬೇಸರ ಇರುವುದು. ಮಾತಿನಲ್ಲಿ ಸಹಜತೆ ಇರಲಿ. ಏನನ್ನಾದರೂ ಹೇಳಿ ಅವಮಾನ ಮಾಡಿಕೊಳ್ಳುವ ಸಾಧ್ಯತೆ ಇದೆ. ಯಾರಿಗಾದರೂ ಇಂದು ಸಾಲವಾಗಿ ಹಣವನ್ನು ಕೊಡುವಿರಿ.

ಮಿಥುನ ರಾಶಿ :ವೈವಾಹಿಕ ಜೀವನದಲ್ಲಿ ಸಂಗಾತಿಯಿಂದ ಒತ್ತಡ ಇರುವುದು. ಅದನ್ನು ಸೂಕ್ಷ್ಮವಾಗಿ ನಿರ್ವಹಿಸಬೇಕಾಗುವುದು. ಮತ್ತಾವುದೋ ಕಾರ್ಯಗಳಿಗೆ ಉಪಯೋಗಕ್ಕೆಂದು ಇಟ್ಟಿದ್ದ ಹಣವು ಖಾಲಿಯಾಗಲಿದೆ. ವಿರುದ್ಧ ಆಹಾರವನ್ನು ಸ್ವೀಕರಿಸಿ ಅನಾರೋಗ್ಯವನ್ನು ತಂದುಕೊಳ್ಳಬಹುದು. ಆಯ್ಕೆಯ ಗೊಂದಲದಿಂದ ಚಿಂತೆಗೊಳ್ಳಬಹುದು. ಖರೀದಿಯನ್ನು ಆದಷ್ಟು ಕಡಮೆ ಮಾಡುವುದು ಉತ್ತಮ. ನಿರುದ್ಯೋಗವು ನಿಮ್ಮನ್ನು ಕೆಣಕಬಹುದು. ಏನನ್ನಾದರೂ ಹೊಸತನ್ನು ಮಾಡುವ ಹುಮ್ಮಸ್ಸು ಇರಲಿದೆ. ಸಹಾಯಕ್ಕಾಗಿ ಬರುವವರ ಮೇಲೆ ಒಂದು ಕಣ್ಣಿರಲಿ. ಅಧ್ಯಾತ್ಮವನ್ನು ನಿಮ್ಮ ರಕ್ಷಣೆಗೆ ಬಳಸಿಕೊಳ್ಳಬಹುದು. ಆಪ್ತರಿಗೆ ನಿಮ್ಮ ಒಡಲಾಳವನ್ನು ಹೇಳಿಕೊಳ್ಳುವಿರಿ. ಹಠದ ಸ್ವಭಾವವು ವ್ಯವಸ್ಥೆಯನ್ನು ಹಾಳುಮಾಡೀತು. ಅನಗತ್ಯ ಮಾತುಗಳಿಗಿಂತ ಮೌನವೇ ಲೇಸೆನಿಸಬಹುದು. ಸ್ವಭಾವ ಸಹಜವಾದುದನ್ನು ಬಿಡಲಾಗದು.

ಕಟಕ ರಾಶಿ :ಯಾರದೋ ಕೆಳಗೆ ಕೆಲಸ ಮಾಡುವ ಮನಸ್ಸು ಹೋಗುವುದು. ನಿಮ್ಮದಾದ ಉದ್ಯಮದ ಕಡೆ ಮನಸ್ಸು ಇರುವುದು. ಹಳೆಯ ಹೂಡಿಕೆಯಿಂದ ಉಪಯೋಗವಾಗಲಿದೆ. ವಾಹನದ ದುರಸ್ತಿಯನ್ನು ಮಾಡಬೇಕಾಗಿಬರಬಹುದು. ಕೊಟ್ಟಿದ್ದನ್ನು ಪುನಃ ಕೇಳಲು ಹೋಗಬೇಡಿ. ನಿಮ್ಮದಲ್ಲ ಎಂಬ ನಿರ್ಧಾರವನ್ನು ಮಾಡಿಬಿಡಿ. ಸಂಗಾತಿಯು ಕಾಲು ಕೆರದು ಕಲಹಕ್ಕೆ ಬರಬಹುದು. ಸಿಟ್ಟಿನಿಂದ ಎಲ್ಲವನ್ನೂ ಹಾಳುಮಾಡಿಕೊಳ್ಳುವಿರಿ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಂಡು ಸಂತೋಷವಾಗಲಿದೆ. ವಿದೇಶಕ್ಕೆ ಸುತ್ತಾಟ ಮಾಡಲು ಹೋಗಬಹುದು. ಕೆಲಸವು ನಿಧಾ‌ವಾಗಿ ಸಾಗುವುದು. ವಿವಾಹದ ಮಾತುಕತೆಯು ಸರಿಯಾಗಿ ಆಗದೇ ನೆಮ್ಮದಿ ಹಾಳಾಗುವುದು. ಯಾರನ್ನೂ ನೀವು ಕೇವಲವಾಗಿ ನೋಡುವುದು ಬೇಡ. ಅವರದ್ದೇ ಆದ ಸ್ಥಾನವು ಅವರಿಗೆ ಕೊಡಿ. ಅಸಹಾಯಕರಿಗೆ ಕಿಂಚಿತ್ತಾದರೂ ಕೊಡಿ.

ಸಿಂಹ ರಾಶಿ :ನೀವು ಇಂದು ಆಪ್ತರಿಂದ ಅಲ್ಪ ಹಣವನ್ನು ಸಾಲವಾಗಿ ಪಡೆಯುವಿರಿ. ನಿಮಗೆ ಉನ್ನತ ಸ್ಥಾನವನ್ನು ನೀಡುವ ಕುರಿತು ಚರ್ಚೆಗಳು ನಡೆಯುವುದು. ಸಂತೋಷದಿಂದ ಇರಲು ನಿಮಗೆ ಅನೇಕ ಕಾರಣಗಳು ಸಿಗುವುದು. ಸ್ವಾವಲಂಬಿಯಾಗಿ ಬದುಕುವ ನಿಮ್ಮ ಸಂಕಲ್ಪ ಸಂಪೂರ್ಣ ಸಾಕಾರವಾಗದು. ಹಳೆಯ ರೋಗವು ಪುನಃ ಕಾಣಿಸಿಕೊಳ್ಳಲಿದ್ದು ನಿಮ್ಮ ಉತ್ಸಾಹವನ್ನು ಕಡಿಮೆ ಮಾಡೀತು. ಶಿಸ್ತುಬದ್ಧ ಜೀವನದಿಂದ ನೀವು ಸ್ವಲ್ಪ ಆಚೆ ಬರಲಿದ್ದೀರಿ. ದ್ವೇಷಕ್ಕಾಗಿ ದ್ವೇಷ ಮಾಡದೇ ಸರಿಯಾದ ಕಾರಣವಿರಲಿ. ಆತ್ಮೀಯರು ನಿಮ್ಮನ್ನು ಮನೆಗೆ ಆಹ್ವಾನಿಸಬಹುದು. ಪ್ರಾಣಿಗಳಿಂದ ತೊಂದರೆಯಾಗಲಿದೆ. ನಿಮ್ಮ ತಪ್ಪಿಗೆ ಕಾರಣವನ್ನು ಹುಡುಕುವ ಬದಲು ವ್ಯಕ್ತಿಗಳನ್ನು ಹುಡುಕುತ್ತ ಇರುವಿರಿ. ಅನ್ಯರಿಂದ ಸಂತೋಷವನ್ನು ಪಡೆಯುವಿರಿ. ಉದ್ಯೋಗಕ್ಕೆ ವಿದೇಶದತ್ತ ಗಮನವಿರುವುದು. ಸರ್ಕಾರಿ ನೌಕರರು ಅಧಿಕಾರಿಗಳಿಂದ ಸಮಸ್ಯೆಯನ್ನು ಎದುರಿಸಬೇಕಾದೀತು. ನಿಮ್ಮ ಪ್ರಾಮಾಣಿಕ ಪ್ರಯತ್ನವನ್ನು ಬಿಡದೇ ಮುಂದುವರಿಯಲಿ.

ಕನ್ಯಾ ರಾಶಿ :ನಿಮ್ಮ ಉದ್ಯಮಕ್ಕೆ ಸಲಹೆಗಾರರನ್ನು ನಿಯಮಿಸಿಕೊಳ್ಳುವ ಸಾಧ್ಯತೆ ಇದೆ. ವಿದ್ಯಾರ್ಥಿಗಳು ಸ್ಪರ್ಧಾತ್ಮಕವಾಗಿ ಸೋಲುವ ಸಂಭವವಿದೆ. ಉದ್ಯೋಗದಲ್ಲಿ ಇರುವವರಿಗೆ ಕೆಲವು ಆಯ್ಕೆಗಳನ್ನು ಯಾರಾದರೂ ಕೊಡಬಹುದು. ಅತಿಯಾಗಿ ಉದ್ಯಮದ ಆದಿಯಲ್ಲಿಯೇ ಆಸೆ ಪಡುವುದು ಅನುಕೂಲವಲ್ಲ. ಕಾಲಾಂತರದಲ್ಲಿ ಅದು ಸಾಧ್ಯವಾಗಲಿದೆ. ನಿಮ್ಮ ಪ್ರಾಮಾಣಿಕ ಪ್ರಯತ್ನವು ಉದ್ಯೋಗದಲ್ಲಿ ಇರಲಿ. ಪಾಲುದಾರಿಕೆಯಲ್ಲಿ ನೀವು ನಡೆಸುತ್ತಿರುವ ಉದ್ಯಮವನ್ನು ಮುಂದುವರಿಸಬಹುದು. ಕ್ರೀಡೆಯಲ್ಲಿ ಹೆಚ್ಚು ಆಸಕ್ತಿಯಿಂದ ಪಾಲ್ಗೊಳ್ಳುವಿರಿ. ಗೃಹೋಪಕರಣದ ಖರೀದಿಯಿಂದ ಹಣಕಾಸು ಸ್ವಲ್ಪ ಕುಸಿಯಬಹುದು. ವಿವಾಹವು ನಿಶ್ಚಯವಾಗುವ ಸಾಧ್ಯತೆ ಇದೆ. ಆಹಾರವನ್ನು ಸಮಯಕ್ಕೆ ಸರಿಯಾಗಿ ಸೇವಿಸಿ. ಎಲ್ಲವನ್ನೂ ಬಲ್ಲವರಂತೆ ತೋರಿಸಿಕೊಳ್ಳುವಿರಿ. ನಿಮ್ಮ ಉತ್ಸಾಹಕ್ಕೆ ಯಾರಾದರೂ ಭಂಗ ಮಾಡಬಹುದು. ಮಕ್ಕಳ ಜೊತೆ ಎಲ್ಲಿಗಾದರೂ ಸುತ್ತಾಡಲು ಹೋಗುವಿರಿ.

ತುಲಾ ರಾಶಿ :ಇಂದು ವ್ಯಾಪಾರದ ಪೈಪೋಟಿಯು ನಿಮ್ಮ ನೆಮ್ಮದಿಯನ್ನು ಕೆಣಕಬಹುದು. ಪರರ ಬಗ್ಗೆ ಇರುವ ಅಸಮಾಧಾನವನ್ನು ಹೇಳಿಕೊಂಡು ಕಳೆಯುವಿರಿ. ದ್ವಂದ್ವಗಳು ಬಹಳ ನಿಮ್ಮನ್ನು ಕಾಡಲಿದ್ದು ಆಯ್ಕೆಗೆ ಬಹಳ ಕಷ್ಟ ಪಡುವಿರಿ. ಆಲಸ್ಯದಿಂದ ನಿಮ್ಮ ಆದಾಯವನ್ನು ಹಾಳುಮಾಡಿಕೊಳ್ಳುವಿರಿ. ತಾಳ್ಮೆಯಿಂದ ಆಗುವ ಲಾಭವನ್ನು ಸ್ವತಃ ಅನುಭವಿಸುವಿರಿ. ಮಕ್ಕಳು ನಿಮ್ಮ ಮಾತನ್ನು ಕೇಳದೇ ಸ್ವೇಚ್ಛೆಯಿಂದ ವರ್ತಿಸುವರು.‌ ಕಂಡೂ ಕಾಣದಂತೆ ಇರಬೇಕಾದ ಸ್ಥಿತಿ ಬರಬಹುದು. ಕಛೇರಿಯಲ್ಲಿ ನೀವು ಇಂದು ಸ್ವತಂತ್ರರು. ಎಲ್ಲವನ್ನೂ ತಿಳಿದವರಂತೆ ವರ್ತಿಸುವುದು ಬೇಡ. ಅದನ್ನು ಮುಂದೂ ಇಟ್ಟುಕೊಳ್ಳುವಂತೆ ಇರಬೇಕಾಗಿರುತ್ತದೆ. ಅಲ್ಪರ ಸಹವಾಸದಿಂದ ಅಭಿಮಾನಕ್ಕೆ ತೊಂದರೆಯಾಗುವುದು. ಕಲಾವಿದರು ವಿದೇಶಗಳಿಗೆ ಹೋಗುವ ಅವಕಾಶ ಇರುವುದು. ನಿಮ್ಮ ಬಗ್ಗೆ ನೀವೇ ಹೇಳಿಕೊಳ್ಳಬೇಕಾಗುವುದು. ಹಣಕಾಸಿನ ವ್ಯವಹಾರವು ಪಾರದರ್ಶಕವಾಗಿ ಇರಲಿ.

ವೃಶ್ಚಿಕ ರಾಶಿ :ನೀವು ಎಲ್ಲವೂ ದೈವಾನುಗ್ರದಂತೆ ಆಗುತ್ತದೆ ಎಂದು ಸುಮ್ಮನಿರದೇ ಪ್ರಯತ್ನವನ್ನೂ ಮಾಡಿ. ವೃತ್ತಿಯಲ್ಲಿ ಕೆಲವು ಅನಿರೀಕ್ಷಿತ ಜವಾಬ್ದಾರಿಯನ್ನು ನಿರ್ವಹಣೆ ಮಾಡಬೇಕಾಗುವುದು. ಮನಸ್ಸಿದ್ದರೆ ಮಾರ್ಗ ಎನ್ನುವಂತೆ ನಿಮಗೆ ಒಳ್ಳೆಯದನ್ನು ಮಾಡಬೇಕು ಎಂಬ ಆಸೆ ಶುರುವಾದರೆ ಸಾಕು ದಾರಿ ತಾನಾಗಿಯೇ ತೆರೆದುಕೊಳ್ಳುತ್ತದೆ. ಇಷ್ಟವಿರುವ ವಸ್ತುವು ನಿಮ್ಮಿಂದ ನಷ್ಟವಾಗಬಹುದು. ಸ್ನೇಹಿತರ ನಡುವೆ ವಾಗ್ವಾದ ನಡೆದು ವಿಯೋಗದಿಂದ ಮುಕ್ತಾಯವಾಗಬಹುದು. ಸ್ತ್ರೀಮೂಲದಿಂದ ಸಂಪತ್ತು ಅಥವಾ ಸಹಕಾರ ಸಿಗಬಹುದು. ತಾನಾಗಿಯೇ ಬಂದಿದ್ದನ್ನು ನೀವು ದೂರ ಮಾಡಬೇಡಿ.‌ ನಿಮಗೆ ಅದು ಅನುಕೂಲವನ್ನು ಮಾಡಿಕೊಡಲಿದೆ. ಕಣ್ತಪ್ಪಿನ ದೋಷಗಳಿಂದ ಹೇಳಿಕೊಳ್ಳಬೇಕಾಗುವುದು. ಹುಡುಗಾಟದ ಬುದ್ಧಿಯಿಂದ ಕೆಲವು ವಿಚಾರಗಳು ನಿಮಗೆ ಗೊತ್ತಾಗದೇ ಹೋಗಬಹುದು. ನಿಮ್ಮ ನಿರ್ಧಾರಕ್ಕೆ ಸಂಗಾತಿಯ ಬೆಂಬಲವು ಸಿಗದು. ನಿಮ್ಮವರ ಜೊತೆಗಿನ ಒಡನಾಟವು ಮಿತಿಯಲ್ಲಿ ಇರಲಿ.

ಧನು ರಾಶಿ :ಉದ್ಯಮಿಗಳು ಬಹಳ ಓಡಾಟದಿಂದ ಲಾಭವನ್ನು ಮಾಡಿಕೊಳ್ಳಬೇಕು. ಸರ್ಕಾರಿ ಉದ್ಯೋಗವು ಕಿರಿಕಿರಿ ಎನಿಸಿದರೂ ನೀವು ಅದನ್ನು ಬಿಡಲಾರಿರಿ. ಇಷ್ಟು ದಿನ ದ್ವೇಷಿಸುತ್ತಿದ್ದ ವ್ಯಕ್ತಿಯು ಇಂದು ನಿಮ್ಮ ಮಿತ್ರನಾಗಲು ಬಂದಾನು. ನಿಮಗೆ ಅದು ಆಪತ್ತಿಗೆ ಸೂಚನೆಯಂತೆ ಕಂಡೀತು. ಕಾರ್ಯದ ಸ್ಥಳದಲ್ಲಿ ನಿಮ್ಮ ಸಹಾಯವನ್ನು ಅನೇಕರು ಬಯಸಿಯಾರು. ವಿವಾದಗಳು ಆಗುವ ಸಂದರ್ಭವಿದ್ದರೆ ಅಲ್ಲಿಂದ ಪಲಾಯನ‌ ಮಾಡಿ ನಿಮ್ಮ ಕೆಲಸದಲ್ಲಿ ತೊಡಗಿಕೊಳ್ಳಿ. ಸಹೋದರನ ಅಪರೂಪದ ಭೇಟಿ ನಿಮಗೆ ಖುಷಿ ಕೊಡಲಿದೆ. ದೇಹಪೀಡೆಯಿಂದ ನಿಮಗೆ ಬಹಳ ಕಷ್ಟವಾಗುವುದು. ಅಲ್ಪವಾದರೂ ದಾನ ಮಾಡುವ ಮನಸ್ಸು ಇರಲಿ. ಭೂಮಿಯ ಖರೀದಿಸಲು ಸಂಗಾತಿಯ ಜೊತೆ ಆರಂಭಿಕ ಚರ್ಚೆ ನಡೆಸುವಿರಿ. ಸಹೋದರರ ನಡುವೆ ಆರ್ಥಿಕ ಸಂಬಂಧವು ಉತ್ತಮವಾಗಿ ಇರುವುದಿಲ್ಲ. ವಯಸ್ಸಿಗೆ ಬಂದ ಮಕ್ಕಳ ವಿವಾಹದ ಚಿಂತೆ‌ ಇರುವುದು. ಉದ್ಯಮದಲ್ಲಿ ಸ್ವಲ್ಪಮಟ್ಟಿನ ಒತ್ತಡ ಕಾಣಿಸಬಹುದು.

ಮಕರ ರಾಶಿ :ಆರ್ಥಿಕ ಕ್ಷೇತ್ರದ ಜನರಿಗೆ ತೊಂದರೆ ಬಾರದೇ ಕಾರ್ಯಗಳು ಮುಗಿಯುವುದು. ಯಾರಿಂದಲಾದರೂ ಸಿಗುವ ಪ್ರಶ‌ಂಸೆಯು ನಿಮಗೆ ಉತ್ತೇಜನ ಕೊಡಬಹುದು. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳ ಕಡೆಗೆ ಗಮನವು ಅಧಿಕವಾಗಲಿದೆ. ಖುಷಿಯಲ್ಲಿ ಇದ್ದೇನೆಂದು ಏನನ್ನಾದರು ಮಾಡಲು ಹೋಗಿ ದುಃಖವನ್ನು ತಂದುಕೊಳ್ಳಬಹುದು. ನಿಷ್ಠುರ ನಿಮ್ಮ ಮಾತನ್ನು ಕೇಳಿ ನಿಮ್ಮ ಬಗ್ಗೆ ಇರುವ ಮೃದುತ್ವವು ಹೋಗಬಹುದು. ಕಳ್ಳತನವಾಗುವ ಸಾಧ್ಯತೆ ಇದೆ. ವಿದ್ಯಾಭ್ಯಾಸದಿಂದ ಏನು ಪ್ರಯೋಜನವನ್ನು ಅರ್ಥಮಾಡಿಕೊಂಡು ಓದು ಮುಂದುವರಿಸಿ. ಸರಿಯಾದ ಮಾರ್ಗದರ್ಶನದ ಅವಶ್ಯಕತೆ ಇರುತ್ತದೆ. ಕುಂದು ಕೊರತೆಯನ್ನು ನೋಡುತ್ತ ಹೆಚ್ಚಿನ‌ ಕಾಲ ಕಳೆಯುವಿರಿ. ಉದ್ವೇಗವನ್ನು ಆದಷ್ಟು ಕಡಿಮೆ ಮಾಡಲು ಪ್ರಯತ್ನಿಸುವಿರಿ. ದಾಂಪತ್ಯದಲ್ಲಿ ಪರಸ್ಪರ‌ ವೈರಿಗಳಂತೆ ಕಚ್ಚಾಡುವುದು ಬೇಡ. ದೂರ ಪ್ರಯಾಣವು ನಿಮಗೆ ಇಂದು ಅನಿವಾರ್ಯವಾದೀತು. ಬೇಕಾದ ವಸ್ತುವು ಕಣ್ಮರೆಯಾಗಿ ಹುಡುಕಾಟ ಮಾಡುವಿರಿ. ಎಲ್ಲರಿಂದ ಪ್ರೀತಿ ಕಡಿಮೆಯಾದಂತೆ ತೋರುವುದು.

ಕುಂಭ ರಾಶಿ :ಇಂದು ನಿಮ್ಮ ಪರಿಧಿಯನ್ನು ಮೀರಿ ವರ್ತಿಸುವಿರಿ. ಸುತ್ತಲಿನ ಪರಿಸ್ಥಿತಿಯನ್ನು ಸಂದರ್ಭವನ್ನೂ ಗಮನಿಸಿಕೊಂಡು ವ್ಯವಹರಿಸಿ. ಉತ್ತಮವಾದ ಆಯ್ಕೆ ಮಾಡಿಕೊಳ್ಳಬೇಕೆಂದು ಹೋಗಿ ವಿಪರೀತವಾದ ಆಯ್ಕೆ ಮಾಡಿಕೊಂಡು ಬರುವಿರಿ. ಅದು ನಿಮ್ಮ ಮನಸ್ಸಿನ ಸಹಜತೆಯಲ್ಲ, ಗ್ರಹಗತಿಗಳು ಆ ಸಮಯದಲ್ಲಿ ಅಂತಹ ಯೋಚನೆಯನ್ನು ಮಾಡಲು ಪ್ರೇರಿಸಬಹುದು. ಸರಳತೆಯು ನಿಮ್ಮ ಸುತ್ತಲಿನ‌ ಜನಕ್ಕೆ ಇಷ್ಟವಾದೀತು. ಹಣವಿಲ್ಲದಿದ್ದರೂ ಗುಣದಿಂದ ಖ್ಯಾತಿಯನ್ನು ಪಡೆಯಬಲ್ಲಿರಿ. ಮಕ್ಕಳ ಮೋಹಕ್ಕೆ ಸಿಕ್ಕಿಕೊಳ್ಳುವಿರಿ. ಆರೋಗದಲ್ಲಿ ಇದ್ದಕ್ಕಿದ್ದಂತೆ ವ್ಯತ್ಯಾಸವಾದೀತು. ನಿಮ್ಮ ಪಾಲಿಗೆ ಬಂದಿದ್ದನ್ನು ಖುಷಿಯಿಂದ ಸ್ವೀಕರಿಸಬೇಕಾಗಬಹುದು. ಕಲಾವಿದರು ಸಿಕ್ಕ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳುವುದು ಉತ್ತಮ. ವೃತ್ತಿಯಲ್ಲಿ ಭಡ್ತಿಯನ್ನು ನೀವು ಅಪೇಕ್ಷಿಸುವಿರಿ. ಮೇಲಧಿಕಾರಿಗಳ ಮಾತುಗಳು ನಿಮ್ಮನ್ನು ಕಾಡಬಹುದು.

ಮೀನ ರಾಶಿ :ನಿಮ್ಮ ವ್ಯಾಪಾರದಲ್ಲಿ ಇಂದು ವೆಚ್ಚಗಳು ಕಡಿಮೆಯಾಗಿ ಆದಾಯವೂ ಎಣಿಕೆಗಿಂತ ಅಧಿಕವಾಗಲಿದೆ. ಸ್ವಂತ ಉದ್ಯಮಿಗಳಾಗಿದ್ದರೆ ಹೆಚ್ಚಿನ ಲಾಭವೂ ಇದೆ. ಅವಿವಾಹಿತರಿಗೆ ವಿವಾಹ ಸಂಬಂಧವು ಬರಬಹುದು. ಭವಿಷ್ಯದ ಬಗ್ಗೆ ಸರಿಯಾದ ದೃಷ್ಟಿಕೋನವಿರಲಿ. ನಿಮಗೆ ತೃಪ್ತಿ ಎನಿಸದರೆ ಅದೇ ಉದ್ಯೋಗದಲ್ಲಿ ಮುಂದುವರಿಯಿರಿ. ಪಶ್ಚಾತ್ತಾಪದಿಂದ ತಪ್ಪುಗಳು ಸರಿಯಾಗುವುದು. ಕೆಲವು ಸಂದರ್ಭಗಳು ನಿಮ್ಮನ್ನು ಪರೀಕ್ಷಿಸಲು ಬರಬಹುದು.‌ ಅದನ್ನು ಸುಂದರವಾಗಿ ನಿಭಾಯಿಸಲು ಕಲಿಯಿರಿ. ನಿಮ್ಮ ಪರಹಿತಕರವಾದ ಮಾನಸಿಕ‌ ಸ್ಥಿತಿಯನ್ನು ಹಲವರು ಇಷ್ಟಪಡುವರು. ಮನೆ ಕೆಲಸದಲ್ಲಿ ಇಂದು ಬಹುಪಾಲು‌ ಮಗ್ನರಾಗುವಿರಿ. ಕಫಕ್ಕೆ ಸಂಬಂಧಿಸಿದ ಖಾಯಿಲೆಯು ಹೆಚ್ಚಾದದೀತು. ಮನೆಯಲ್ಲಿ ಔಷಧೋಪಚಾರವನ್ನು ಮಾಡಿಕೊಳ್ಳಿ. ಇಂದು ನೀವು ಅಂದುಕೊಂಡಂತೆ ಆಗಿದ್ದು ಖುಷಿಯಿಂದ ಇರುವಿರಿ. ವಾಹನ ಖರೀದಿಯ ಆಲೋಚನೆಯನ್ನು ಸದ್ಯ ಕೈ ಬಿಡುವಿರಿ. ಉನ್ನತ ವಿದ್ಯಾಭ್ಯಾಸದ ಬಗ್ಗೆ ಅನಾದರ ಬರಬಹುದು.

-ಲೋಹಿತ ಹೆಬ್ಬಾರ್ – 8762924271 (what’s app only)

ತಾಜಾ ಸುದ್ದಿ
ಶಿಷ್ಯ ವಿನೋದ್ ದೋಂಡಾಳೆ ನಿಧನ, ಭಾವುಕರಾದ ಟಿಎನ್ ಸೀತಾರಾಂ
ಶಿಷ್ಯ ವಿನೋದ್ ದೋಂಡಾಳೆ ನಿಧನ, ಭಾವುಕರಾದ ಟಿಎನ್ ಸೀತಾರಾಂ
ನಿರಂತರ ಮಳೆಗೆ ಸಿಎಂ ತವರಲ್ಲಿ ಮುಖ್ಯರಸ್ತೆಯಲ್ಲೇ ಭೂಕುಸಿತ: ಸಂಚಾರಕ್ಕೆ ಅಡ್ಡ
ನಿರಂತರ ಮಳೆಗೆ ಸಿಎಂ ತವರಲ್ಲಿ ಮುಖ್ಯರಸ್ತೆಯಲ್ಲೇ ಭೂಕುಸಿತ: ಸಂಚಾರಕ್ಕೆ ಅಡ್ಡ
ಶಾಸಕರ ಮನೆಗಳಲ್ಲಿ ಸಭೆ ನಡೆಸಕೂಡದೆಂದು ಎಲ್ಲರಿಗೆ ತಿಳಿಸಲಾಗಿದೆ: ಶಿವಕುಮಾರ್
ಶಾಸಕರ ಮನೆಗಳಲ್ಲಿ ಸಭೆ ನಡೆಸಕೂಡದೆಂದು ಎಲ್ಲರಿಗೆ ತಿಳಿಸಲಾಗಿದೆ: ಶಿವಕುಮಾರ್
ಮೂರು ಹೆಣ್ಣುಮಕ್ಕಳ ತಂದೆ ಜಗನ್ನಾಥ ಮಣ್ಣಿನಡಿ ಸಿಲುಕಿ ಪ್ರಾಣ ತೆತ್ತರೇ?
ಮೂರು ಹೆಣ್ಣುಮಕ್ಕಳ ತಂದೆ ಜಗನ್ನಾಥ ಮಣ್ಣಿನಡಿ ಸಿಲುಕಿ ಪ್ರಾಣ ತೆತ್ತರೇ?
ನಾನು ಮುಖ್ಯಮಂತ್ರಿಯಾಗಿದ್ದಾಗ ಕೇಂದ್ರದ ನೆರವಿಗೆ ಕಾದಿರಲಿಲ್ಲ: ಕುಮಾರಸ್ವಾಮಿ
ನಾನು ಮುಖ್ಯಮಂತ್ರಿಯಾಗಿದ್ದಾಗ ಕೇಂದ್ರದ ನೆರವಿಗೆ ಕಾದಿರಲಿಲ್ಲ: ಕುಮಾರಸ್ವಾಮಿ
ಹಗರಣ ಮೈ ಸುತ್ತಿಕೊಂಡಾಗ ಸರ್ಕಾರಕ್ಕೆ ಗುಡ್ಡ ಕುಸಿತ, ಮಳೆ ನೆನಪಾಗಿದೆ: ಅಶೋಕ
ಹಗರಣ ಮೈ ಸುತ್ತಿಕೊಂಡಾಗ ಸರ್ಕಾರಕ್ಕೆ ಗುಡ್ಡ ಕುಸಿತ, ಮಳೆ ನೆನಪಾಗಿದೆ: ಅಶೋಕ
ಶಿರೂರು ಗುಡ್ಡ ಕುಸಿತದಂಥ ದುರ್ಘಟನೆ ಮಂಗಳೂರಲ್ಲೂ ನಡೆಯಬಾರದು!
ಶಿರೂರು ಗುಡ್ಡ ಕುಸಿತದಂಥ ದುರ್ಘಟನೆ ಮಂಗಳೂರಲ್ಲೂ ನಡೆಯಬಾರದು!
ಒಪ್ಪೊ ರೆನೋ 12 ಪ್ರೊ 5G ಸ್ಮಾರ್ಟ್​​ಫೋನ್ ಮಾರುಕಟ್ಟೆಗೆ ಎಂಟ್ರಿ
ಒಪ್ಪೊ ರೆನೋ 12 ಪ್ರೊ 5G ಸ್ಮಾರ್ಟ್​​ಫೋನ್ ಮಾರುಕಟ್ಟೆಗೆ ಎಂಟ್ರಿ
ನದಿ ಮಧ್ಯೆ ಇರುವ ಕಟೀಲು ಕ್ಷೇತ್ರದ ವಿಹಂಗಮ ನೋಟ ಡ್ರೋನ್ ಕ್ಯಾಮರಾದಲ್ಲಿ ಸೆರೆ
ನದಿ ಮಧ್ಯೆ ಇರುವ ಕಟೀಲು ಕ್ಷೇತ್ರದ ವಿಹಂಗಮ ನೋಟ ಡ್ರೋನ್ ಕ್ಯಾಮರಾದಲ್ಲಿ ಸೆರೆ
ಶಾಸಕ ಸೈಲ್ ಮತ್ತು ಸಚಿವ ಮಂಕಾಳ್ ನಡುವೆ ನಡೆದ ವಾಗ್ವಾದ ಡಿಸಿಎಂಗೆ ಗೊತ್ತಿಲ್ಲ
ಶಾಸಕ ಸೈಲ್ ಮತ್ತು ಸಚಿವ ಮಂಕಾಳ್ ನಡುವೆ ನಡೆದ ವಾಗ್ವಾದ ಡಿಸಿಎಂಗೆ ಗೊತ್ತಿಲ್ಲ