Astrology: ಜುಲೈ ತಿಂಗಳಲ್ಲಿ ಹುಟ್ಟಿದವರ ಇಂಟರೆಸ್ಟಿಂಗ್ ಮಾಹಿತಿ
ವ್ಯಕ್ತಿಗಳ ಸ್ವಭಾವಕ್ಕೂ ಹುಟ್ಟಿದ ತಿಂಗಳಿಗೂ ಏನಾದರೂ ಸಂಬಂಧ ಇದೆಯಾ? ಜುಲೈ ತಿಂಗಳಲ್ಲಿ ಹುಟ್ಟಿದವರ ಸ್ವಭಾವ ಹೇಗಿರುತ್ತದೆ ಎಂಬುದರ ಬಗ್ಗೆ ಇಲ್ಲಿದೆ ಆಸಕ್ತಿಕರ ಸಂಗತಿ.
ವ್ಯಕ್ತಿತ್ವಕ್ಕೂ ಆಯಾ ವ್ಯಕ್ತಿ ಹುಟ್ಟಿದ ತಿಂಗಳಿಗೂ ನೇರ ಸಂಬಂಧ ಇದೆಯಾ? ಈ ಲೇಖನ ಓದಿದ ಮೇಲೆ ನಿರ್ಧಾರ ಮಾಡಿಕೊಳ್ಳಿ; ಹೌದಾ ಅಥವಾ ಇಲ್ಲವಾ ಎಂಬ ಸಂಗತಿ. ಉದಾಹರಣೆಗೆ ಜುಲೈ ತಿಂಗಳಲ್ಲಿ ಹುಟ್ಟಿದವರ ಬಗ್ಗೆ ಹೇಳುವುದಾದರೆ, ಇವರೆಷ್ಟು ವಿಶೇಷ ಎಂಬುದು ಗೊತ್ತಾಗುತ್ತದೆ. ಜುಲೈ ತಿಂಗಳಲ್ಲಿ ಹುಟ್ಟಿದವರ ಸ್ವಭಾವ, ಗುಣಾವಗುಣಗಳ ಬಗ್ಗೆ ಇಂಟರೆಸ್ಟಿಂಗ್ ಮಾಹಿತಿಗಳು ಇಲ್ಲಿವೆ. ಅದೋ- ಇದೋ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು, ಈಗ ಇದನ್ನು ಆರಿಸಿಕೊಂಡರೆ, ಮತ್ತೊಮ್ಮೆ ಇನ್ನೊಂದು ಎಂದು ಆಲೋಚಿಸುವ ಗೊಂದಲದ ವ್ಯಕ್ತಿತ್ವ ಇವರದು. ತಮ್ಮ ಬಗ್ಗೆಯೇ ಒಂದು ರೀತಿಯ ಸಿಟ್ಟು ಆವರಿಸುತ್ತಲೇ ಇರುತ್ತದೆ ಇವರಿಗೆ. ರುಚಿಯಾದ ಆಹಾರ ಪದಾರ್ಥಗಳೆಂದರೆ ಇವರಿಗೆ ಬಲು ಪ್ರೀತಿ. ಊಟ- ವಿಚಾರಕ್ಕೆ ಬಂದಲ್ಲಿ ನೋ ಕಾಂಪ್ರಮೈಸ್. ಹೊಸ ರುಚಿ ಅಂದರೆ ಹುಡುಕಿಕೊಂಡು ಹೋಗಿ, ಅದನ್ನು ಪ್ರಯತ್ನಿಸುವಂಥ ಸ್ವಭಾವದವರು. ಹಾಗಿದ್ದರೆ ಜುಲೈ ತಿಂಗಳಲ್ಲಿ ಹುಟ್ಟಿದವರ ಬಗ್ಗೆ ಇನ್ನಷ್ಟು, ಮತ್ತಷ್ಟು ತಿಳಿದುಕೊಳ್ಳಿ.
ಇವರನ್ನು ಅರ್ಥ ಮಾಡಿಕೊಳ್ಳುವುದು ಬಲು ಕಷ್ಟ. ಭಾವನೆಗಳ ಆಧಾರದಲ್ಲೇ ನಿರ್ಧಾರಗಳನ್ನು ಮಾಡಿಬಿಡುತ್ತಾರೆ. ತಮ್ಮ ಬುದ್ಧಿ ಏನು ಹೇಳುತ್ತದೆ ಎಂಬುದನ್ನು ಕೇಳುವುದಕ್ಕಿಂತ ಹೆಚ್ಚಾಗಿ ಹೃದಯ ಏನು ಹೇಳುತ್ತದೆ ಅದನ್ನೇ ಕೇಳುತ್ತಾರೆ. ಆ ಕಾರಣಕ್ಕೆ ನಷ್ಟವನ್ನು ಅನುಭವಿಸಬೇಕಾಗುತ್ತದೆ. ಹಾಗೂ ವಂಚನೆಗೆ ಒಳಗಾಗಬೇಕಾಗುತ್ತದೆ. ಯಾರಿಂದಾದರೂ ಕೆಲಸ ಮಾಡಿಸಿಕೊಳ್ಳಬೇಕು ಅಂದರೆ ತಮ್ಮ ಮಾತುಗಳಿಂದ ಮಾಡಿಸಿಕೊಳ್ಳಬಲ್ಲ ನಿಸ್ಸೀಮರು. ಎಷ್ಟೇ ಕಷ್ಟದ ಕೆಲಸವಾದರೂ ಇತರರು ತಮ್ಮಿಂದ ಆಗದು ಎಂದು ಕೈ ಬಿಟ್ಟ ಕೆಲಸಗಳನ್ನೂ ಜುಲೈ ತಿಂಗಳಲ್ಲಿ ಹುಟ್ಟಿದ ಜನರು ಮಾಡಿ ಮುಗಿಸಬಲ್ಲರು.
ಸುಮಧುರವಾದ ಮಾತು, ಧ್ವನಿ ಈ ಎರಡೂ ಇವರ ಪಾಲಿನ ಶಕ್ತಿ. ಇವರ ಸಂಪರ್ಕಕ್ಕೆ ಬರುವ ವ್ಯಕ್ತಿಗಳ ಮೇಲೆ ಪ್ರಭಾವ ಬೀರುವಂಥ ಶಕ್ತಿ ಇರುತ್ತದೆ. ಕೆಲವು ಸಲ ಈ ಜನರ ಸರಳತೆಯನ್ನು ಇತರರು ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ. ಆ ಕಾರಣಕ್ಕೆ ಇತರರಿಂದ ನಷ್ಟವನ್ನು ಕೂಡ ಅನುಭವಿಸಬೇಕಾಗುತ್ತದೆ. ಜುಲೈ ತಿಂಗಳಲ್ಲಿ ಹುಟ್ಟಿದವರು ಮಾಧ್ಯಮ, ಸಿಸಿಮಾ, ಕ್ರೀಡಾ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುತ್ತಾರೆ. ಈ ವಲಯಗಳಲ್ಲಿ ವೃತ್ತಿಯನ್ನು ಆರಿಸಿಕೊಂಡರೆ ಯಶಸ್ವಿ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ಜೀವನದಲ್ಲಿ ಮುಂದುವರೆಯುತ್ತಿರಲೇಬೇಕು ಎಂಬುದು ಈ ಜನರ ನಂಬಿಕೆ. ಇವರು ಎಲ್ಲರಿಗೂ ಒಳ್ಳೆಯದಾಗಬೇಕು ಎಂದು ಬಯಸುತ್ತಾರೆ. ಈ ಕಾರಣಕ್ಕೆ ಮನೆಯಲ್ಲಿ ಎಲ್ಲರೂ ಇವರನ್ನು ಇಷ್ಟಪಡುತ್ತಾರೆ ಹಾಗೂ ಸಮಾಜದಲ್ಲಿ ಗೌರವ ಪಡೆಯುತ್ತಾರೆ.
ಇದನ್ನೂ ಓದಿ: Numerology: ಯಾವುದೇ ತಿಂಗಳ 3, 12, 21 ಅಥವಾ 30ನೇ ತಾರೀಕಿನಂದು ಹುಟ್ಟಿದವರ ಸ್ವಭಾವ ಹೇಗಿರುತ್ತದೆ?
( July month born people nature and characteristics on the basis of Astrology)