Horoscope: ಕೊಟ್ಟ ಮಾತನ್ನು ಯಾರಾದರೂ ನೆನಪಿಸಬೇಕಾದೀತು
7 ಮಾರ್ಚ್ 2025: ಶುಕ್ರವಾರದಂದು ತುಲಾ, ವೃಶ್ಚಿಕ, ಧನು, ಮಕರ, ಕುಂಭ, ಮೀನ ರಾಶಿಯವರ ರಾಶಿ ಭವಿಷ್ಯ ಹೇಗಿದೆ? ಪೋಷಕರನ್ನು ಕಡೆಗಣಿಸಿದ್ದು ನಿಮಗೆ ಪಾಪಪ್ರಜ್ಞೆ ಕಾಡಬಹುದು. ಕುಟುಂಬದಲ್ಲಿ ಸಂತಸದ ವಾತಾವರಣವಿರುವಂತೆ ಮಾಡುವಿರಿ. ಹಾಗಾದರೆ ಮಾರ್ಚ್ 7ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

ಬೆಂಗಳೂರು, ಮಾರ್ಚ್ 06: ನಿತ್ಯ ಪಂಚಾಗ: ಶಾಲಿವಾಹನ ಶಕೆ ೧೯೪೭ರ ಕ್ರೋಧೀ ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಸೌರ ಮಾಸ : ಕುಂಭ ಮಾಸ, ಮಹಾನಕ್ಷತ್ರ : ಪೂರ್ವಾಭಾದ್ರಾ, ಮಾಸ : ಫಾಲ್ಗುಣ, ಪಕ್ಷ : ಶುಕ್ಲ, ವಾರ : ಶುಕ್ರ, ತಿಥಿ : ಅಷ್ಟಮೀ, ನಿತ್ಯನಕ್ಷತ್ರ : ಮೃಗಶಿರಾ, ಯೋಗ : ಪ್ರೀತಿ, ಕರಣ : ವಣಿಜ, ಸೂರ್ಯೋದಯ – 06 – 46 am, ಸೂರ್ಯಾಸ್ತ – 06 – 40 pm, ಇಂದಿನ ಶುಭಾಶುಭಕಾಲ : ರಾಹು ಕಾಲ 11:14 – 12:44, ಯಮಘಂಡ ಕಾಲ 15:42 – 17:11, ಗುಳಿಕ ಕಾಲ 08:16 – 09:45.
ತುಲಾ ರಾಶಿ: ನೀವಿಲ್ಲದೇ ಇರುವಾಗ ವ್ಯಾಪಾರದಲ್ಲಿ ತೊಡಕು ಬರಬಹುದು. ಆದರೆ ಇದನ್ನು ನಿವಾರಿಸಿಕೊಳ್ಳುವ ತಂತ್ರವು ನಿಮಗೆ ಅನುಭವದಿಂದ ಸಿದ್ಧವಾಗಿರುವುದು. ಕ್ರೀಡಯಲ್ಲಿ ಹೆಚ್ಚಿನ ಸಮಯವನ್ನು ಕಳೆಯುವಿರಿ. ವೃತ್ತಿಗೆ ಸಂಬಂಧಿಸಿದ ಸಲಹೆಗಳನ್ನು ಪಡೆಯುವಿರಿ. ವಿದ್ಯುತ್ ಉಪಕರಣಗಳನ್ನು ಬಳಕೆ ಮಾಡುತ್ತಿರುವವರು ಇತರರಿಗೆ ಅದನ್ನು ನೀಡಬೇಕಾದೀತು. ತೀರಾ ಆಪ್ತರಿಗೆ ಸಹಾಯದ ಅಗತ್ಯ ಬೀಳುತ್ತದೆ. ಪ್ರಭಾವವನ್ನು ಬಳಸಿಕೊಳ್ಳಬೇಕಾಗುತ್ತದೆ. ನಿಮ್ಮ ನಿಷ್ಠೆಯನ್ನು ಬದಲಾಯಿಸುವುದು ಬೇಡ. ನಿಮ್ಮ ಇಂದಿನ ಸ್ಥಿತಿಯು ಅಭಿವೃದ್ದಿಗೆ ಹಲವಾರು ದಾರಿಗಳನ್ನು ಹುಡುಕುವಿರಿ. ನಿಮ್ಮ ಮೇಲೆ ಅಪೂರ್ಣವಾದ ವಿವರದ ಕಾರಣ ತಪ್ಪು ಕಲ್ಪನೆಯನ್ನು ಇಟ್ಟುಕೊಳ್ಳುವರು. ನಿಮಗಿರುವ ಚಂಚಲ ಮನಸ್ಸಿನಿಂದ ನಕಾರಾತ್ಮಕ ಯೋಚನೇಗಳೇ ಕಾಣಿಸಬಹುದು. ಸಂಗಾತಿಯ ಆಯ್ಕೆಯನ್ನು ನಾನಾ ಕಾರಣದಿಂದ ಮುಂದೂಡುವುದು ಸರಿಯಾಗದು. ಸಂಗಾತಿಯ ಜೊತೆ ಸಾಮಾಜಿಕ ಕಾರ್ಯದಲ್ಲಿ ಭಾಗಿಯಾಗುವಿರಿ. ಆಸ್ತಿಯನ್ನು ಅನ್ಯರಿಗೆ ಕೊಡುವ ಚಿಂತನೆಯೂ ನಿಮ್ಮ ಮನಸ್ಸಿಗೆ ಬರಬಹುದು. ಚರಾಸ್ತಿಯ ದಾಖಲೆಯನ್ನು ಪರಿಶೀಲಿಸುವಿರಿ.
ವೃಶ್ಚಿಕ ರಾಶಿ; ನಟನೆಯಲ್ಲಿ ಆಸಕ್ತಿ ಇರುವವರಿಗೆ ಅವಕಾಶಗಳು ಸಿಗದೇ ಇರುವುದು ಬೇಸರವಾಗುವುದು. ಎಲ್ಲರಿಂದ ದೂರವಿದ್ದು ನಿಮ್ಮ ಹಳೆಯ ಎಲ್ಲ ಘಟನೆಗಳನ್ನು ಪುನಃ ಅವಲೋಕನ ಮಾಡುವಿರಿ. ಸರಿಯಾದ ಸಮಯಕ್ಕೆ ಯೋಗ್ಯ ತೀರ್ಮಾನದಿಂದ ವ್ಯವಹಾರದಲ್ಲಿ ದೊಡ್ಡ ಪ್ರಮಾಣದ ನಷ್ಟವನ್ನು ತಪ್ಪಿಸಲು ಸಾಧ್ಯವಾಗುತ್ತದೆ. ಮಾತಿನ ಮೂಲಕ ಇತರರನ್ನು ಮೋಡಿ ಮಾಡಲಿದ್ದೀರಿ. ದೈವಾನುಗ್ರಹ ನಿಮ್ಮ ಮೇಲಿರಲಿದೆ. ಆದರೂ ತೊಂದರೆಗೆ ಸಿಕ್ಕಿಕೊಳ್ಳಲು ನಿಮ್ಮ ಮೊಂಡುತನವೇ ಕಾರಣ. ಇದೇ ನಿಮಗೆ ಮುಳುವಾಗಬಹುದು. ಇನ್ನೊಬ್ಬರಿಗೆ ನಿಮ್ಮನ್ನು ಹೋಲಿಸಿಕೊಂಡು ಬೇಸರಿಸುವಿರಿ. ಕುಟುಂಬದ ಬಗ್ಗೆ ನಿಮಗೆ ಅಭಿಮಾನದ ಕೊರತೆ ಕಾಣುವುದು. ಸಾಲಗಾರರ ಹಿಂಸೆ ಹೆಚ್ಚಾಗುವುದು. ನಿಮಗೆ ಸಿಕ್ಕ ಪ್ರಶಂಸೆಯಿಂದ ಸಹೋದ್ಯೋಗಿಗಳು ತೊಂದರೆಯನ್ನು ಕೊಡಬಹುದು. ಮಿತ್ರರು ನಿಮಗೆ ಬೇಕಾದ ಸಹಾಯ ಮಾಡಲು ಸ್ವಲ್ಪ ಆಲೋಚಿಸುವರು. ಮಕ್ಕಳ ವಿಚಾರದಲ್ಲಿ ನಿಷ್ಪಕ್ಷಪಾತಿಯಾಗುವುದು ಒಳ್ಳೆಯದು.
ಧನು ರಾಶಿ: ಇಷ್ಟ ಮಿತ್ರರ ಭೇಟಿ ಆಗಲಿದ್ದು, ಸಂತೋಷದಿಂದ ಈ ದಿನವನ್ನು ಅವರ ಜೊತೆ ಕಳೆಯುವಿರಿ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವ ಅವಕಾಶವು ಅನಿರೀಕ್ಷಿತವಾಗಿ ಸಿಗಲಿದ್ದು, ಅದನ್ನು ಕಡೆಗಣಿಸುವುದು ಬೇಡ. ಯೋಗ್ಯವಾಗಿ ದುಡಿಯುವ ನಿಮ್ಮ ಗುಣವು ಅಧಿಕಾರಿಗಳ ಗಮನಕ್ಕೆ ಬರಲಿದ್ದು ಮೆಚ್ಚುಗೆಯ ಸಿಗಲಿದೆ. ಬೇರೆಯವರಿಗೆ ನಿಮ್ಮ ಬಗ್ಗೆ ನಕಾರಾತ್ಮಕ ಭಾವವು ಇರಬಹುದು. ಗುರಿಯನ್ನು ಬದಲಿಸದೇ ಮುನ್ನುಗ್ಗಿ. ಮಕ್ಕಳಿಗೆ ಪ್ರೋತ್ಸಾಹವನ್ನು ಕೊಡುವಿರಿ. ನಿಮ್ಮ ಉಳಿಕೆಯ ಹಣದ ಬಗ್ಗೆ ಎಚ್ಚರವಿರಲಿ. ಆಪ್ತರ ಬಗ್ಗೆ ಇರುವ ನಕಾರತ್ಮಕ ಭಾವವನ್ನು ನೀವು ಅವರಿಗೆ ಹೇಳುವಿರಿ. ಭೂಮಿಯ ಉತ್ಪನ್ನಗಳಿಂದ ಲಾಭವು ಸಿಗುವುದು. ದೀರ್ಘಾವಧಿ ಆರೋಗ್ಯ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮಾರ್ಗಗಳು ದೊರೆಯಲಿವೆ. ಆತುರದಲ್ಲಿ ಯಾವ ನಿರ್ಧಾರವನ್ನೂ ಮಾಡದೇ ಯೋಚಿಸಿ ಮುಂದುವರಿಯಬೇಕಾಗುವುದು. ಕುಟುಂಬದಲ್ಲಿ ಬಂದ ಭಿನ್ನಾಭಿಪ್ರಾಯವನ್ನು ನೀವು ಸರಿ ಮಾಡಲು ನೀವು ಸಮರ್ಥರಾಗುವಿರಿ. ಸಮೀಪದ ಬಂಧುಗಳ ವಿಯೋಗವೂ ಆಗಬಹುದು. ಸುಲಭಕ್ಕೆ ಸಿಗದ ವಸ್ತುಗಳನ್ನು ಬಲದಿಂದ ಪಡೆಯುವತ್ತ ಚಿಂತಿಸುವಿರಿ.
ಮಕರ ರಾಶಿ: ಆತ್ಮವಿಶ್ವಾಸವೇ ನಿಮ್ಮ ಎಲ್ಲ ಕೆಲಸಗಳನ್ನು ನಿಶ್ಚಿಂತೆಯಿಂದ ಮಾಡಲು ಅನುವು ಮಾಡಿಕೊಡುವುದು. ನಿಮ್ಮ ಯೋಜನೆಯು ಪೂರ್ಣ ವ್ಯತ್ಯಾಸವಾದ ಕಾರಣ ಮನೆಯಲ್ಲಿ ಕಲಹವಾಡುವಿರಿ. ಅತಿಯಾದ ಮರೆವಿನ ಸಮಸ್ಯೆಯಿಂದ ವಿದ್ಯಾಭ್ಯಾಸದ ಮೇಲೆ ದುಷ್ಪರಿಣಾಮವನ್ನು ಬೀರಬಹುದು. ಸಣ್ಣ ವಿಷಯಗಳಿಗೆ ಎಲ್ಲರನ್ನೂ ದೂಷಿಸುತ್ತಾ ಇರುವುದು ಉತ್ತಮ ನಾಯಕನ ಲಕ್ಷಣ ಅಲ್ಲ. ಉದ್ಯೋಗ ಸ್ಥಳದಲ್ಲಿನ ದೌರ್ಬಲ್ಯಗಳನ್ನು ಯಾರ ಜತೆಗೂ ಹಂಚಿಕೊಳ್ಳಬೇಡಿ. ಸೂಕ್ತ ಪರಿಹಾರದ ಕಡೆ ಗಮನವಿರಲಿ. ನಿವೃತ್ತಿಯ ಅಂಚಿನಲ್ಲಿದ್ದು ನಡತೆಯನ್ನು ಸರಿಯಾಗಿ ಇಟ್ಟುಕೊಳ್ಳಿ. ಒಂದೇ ವಿಚಾರವನ್ನು ಎಲ್ಲರಿಂದಲೂ ಕೇಳಿ ಜಿಗುಪ್ಸೆ ಬಂದೀತು. ಮನೆಮಂದಿಯವರ ಜೊತೆ ಸಿಟ್ಟಗೊಂಡರೆ ನಿಮಗೇ ತೊಂದರೆಯಾದೀತು. ನಿಮ್ಮ ಇಂದಿನ ಕಾರ್ಯದಿಂದ ಕಛೇರಿಯಲ್ಲಿ ನಿರೀಕ್ಷೆ ಮೀರಿ ಪ್ರಶಂಸೆ ಸಿಗುವುದು. ವಿನೋದಕ್ಕೆಂದು ಆಡಿದ ಮಾತು ಗಂಭೀರಸ್ವರೂಪವನ್ನು ಪಡೆದೀತು. ನಿಮ್ಮವರೇ ನಿಮ್ಮ ಯಶಸ್ಸನ್ನು ಸಹಿಸದೇ ತೊಂದರೆ ಕೊಡುವರು. ಹಣವನ್ನು ಸರಿಯಾಗಿ ಸಂಗ್ರಹಿಸಿ, ಕೂಡಿಡಿ. ಸಾಲದಿಂದ ನೀವು ಬೇಗ ಮುಕ್ತರಾಗುವಿರಿ.
ಕುಂಭ ರಾಶಿ: ಸಾಧಕರ ಸಹವಾಸವು ನಿಮಗೆ ಸಿಗಲಿದೆ. ಅವರಿಂದ ಪ್ರೇರಣೆಯನ್ನು ಪಡೆದು ಹೊಸತನ್ನು ಏನನ್ನಾದರೂ ಆರಂಭಿಸುವಿರಿ. ಮನೆಯಲ್ಲಿ ಹಬ್ಬದ ವಾತಾವರಣವು ಇರಲಿದ್ದು ಉತ್ಸಾಹದಿಂದ ಇರುವಿರಿ. ಬಂಧುಗಳ ಒಡನಾಟ ನಿಮಗೆ ಸಿಗಲಿದೆ. ನಿಮ್ಮ ಅತಿಯಾದ ಉತ್ಸಾಹದಿಂದ ಮಹತ್ತರ ಮಾಹಿತಿಗಳು ಅಪಾತ್ರರನ್ನು ತಲುಪಿ ಮಹತ್ತರ ಅಪಾಯವನ್ನು ಕೊಡಬಹುದು. ಸ್ನೇಹಿತರ ಜಗಳದಲ್ಲಿ ತಲೆ ಹಾಕಿ ಅಪಾಯಕ್ಕೆ ಸಿಕ್ಕಿಕೊಳ್ಳುವಿರಿ. ಹೊಸ ವಿಷಯಗಳತ್ತ ಉತ್ಸಾಹವೇ ಇರಲಿದ್ದು, ಇದು ತಾತ್ಕಾಲಿಕ ಅಷ್ಟೇ. ನೀವು ಖರೀದಿಸುವ ಭೂಮಿಯ ದಾಖಲೆಯನ್ನು ಸಮಾಧಾನಚಿತ್ತದಿಂದ ಕೂಲಂಕಷವಾಗಿ ಪರಿಶೀಲಿಸಿ. ದಾಂಪತ್ಯದಲ್ಲಿನ ವಿರಸದಿಂದ ಮಾನಸಿಕ ಆರೋಗ್ಯವನ್ನು ಕೆಡಿಸುವುದು. ಶ್ರಮದಿಂದ ನ್ಯಾಯಾಲಯಲ್ಲಿ ಗೆಲುವನ್ನು ಸಾಧಿಸುವಿರಿ. ನಿಮ್ಮಲ್ಲಿ ಅನಾರೋಗ್ಯದ ಭಯವು ಇರುವುದು. ಹಿರಿಯರಿಂದ ನಿಮ್ಮ ಜೀವನಕ್ಕೆ ಮಾರ್ಗದರ್ಶನ ಸಿಗಲಿದೆ. ನಿಮ್ಮನ್ನು ಯಾರಿಗಾದರೂ ಹೋಲಿಸುವುದು ನಿಮಗೆ ಇಷ್ಟವಾಗದು. ನೌಕರರಿಲ್ಲದೇ ಉದ್ಯಮಕ್ಕೆ ಅಡ್ಡಿಯಾದೀತು.
ಮೀನ ರಾಶಿ: ಹೊಸತನಕ್ಕೆ ನೀವು ತೆರೆದುಕೊಳ್ಳುವಿರಾದರೂ ಗೊಂದಲಗಳು ನಿವಾರಣೆಯಾಗದೇ ಇರಬಹುದು. ಹಳೆಯ ಮಾತುಗಳನ್ನು ಮರೆತುಬಿಡುವಿರಿ. ಕೊಟ್ಟ ಮಾತನ್ನು ಯಾರಾದರೂ ನೆನಪಿಸಬೇಕಾದೀತು. ಹೊಸ ಯೋಜನೆಯಲ್ಲಿ ಪುನಃ ಪುನಃ ವಿಘ್ನ ಕಂಡುಬರುವುದು. ನಿಶ್ಚಿತ ಆದಾಯದಲ್ಲಿ ಗಣನೀಯ ಇಳಿಕೆಯಾಗಿ, ಚಿಂತೆಗೆ ಕಾರಣವಾದೀತು. ದಾಂಪತ್ಯದ ವಾಗ್ವಾದವು ಅತಿರೇಕಕ್ಕೆ ಹೋಗಬಹುದು. ಮಿತ್ರರು ನಿಮ್ಮಆಸಕ್ತಿಯ ಕ್ಷೇತ್ರವನ್ನು ಬದಲಿಸಬಹುದು. ಇಂದಿನ ಕಾರ್ಯವನ್ನು ಮುಂದೂಡುವುದು ಬೇಡ. ನಿಮ್ಮ ಗುಣಗಳನ್ನು ಇತರರು ಆಡಿಕೊಳ್ಳಬಹುದು. ಪೋಷಕರನ್ನು ಕಡೆಗಣಿಸಿದ್ದು ನಿಮಗೆ ಪಾಪಪ್ರಜ್ಞೆ ಕಾಡಬಹುದು. ಕುಟುಂಬದಲ್ಲಿ ಸಂತಸದ ವಾತಾವರಣವಿರುವಂತೆ ಮಾಡುವಿರಿ. ವಾಹನವನ್ನು ಚಲಾಯಿಸುವಾಗ ಸ್ವಲ್ಪ ಎಚ್ಚರವಿರಲಿ. ಹೊಸ ವ್ಯಾಪಾರದಲ್ಲಿಯೂ ನಿಮಗೆ ಮನಸ್ಸಾಗಬಹುದು. ಯಂತ್ರಗಳಿಂದ ತೊಂದರೆಯಾಗಬಹುದು. ಬಹಳ ಎಚ್ಚರಿಕೆಯಿಂದ ಕಾರ್ಯವನ್ನು ಮಾಡಿ. ದೇಹವನ್ನು ಬೆಳೆಸುವ ಬಗ್ಗೆ ಕಾಳಜಿ ಬರುವುದು.




