Horoscope: ನಿಮ್ಮ ನಿರ್ಲಕ್ಷ್ಯವೇ ಇನ್ನೊಬ್ಬರಿಗೆ ಅನುಕೂಲವಾಗುವುದು

| Updated By: ಗಂಗಾಧರ​ ಬ. ಸಾಬೋಜಿ

Updated on: Jan 14, 2025 | 12:12 AM

14 ಜನವರಿ​​ 2025: ಮಂಗಳವಾರದಂದು ತುಲಾ, ವೃಶ್ಚಿಕ, ಧನು, ಮಕರ, ಕುಂಭ, ಮೀನ ರಾಶಿಯವರ ರಾಶಿ ಭವಿಷ್ಯ ಹೇಗಿದೆ? ಹಳೆಯ ಸ್ನೇಹಿತರ ಸಮಾಗಮವಾಗಲಿದ್ದು, ಸಂತೋಷವಾಗಲಿದೆ. ಸಮೀಪದ ಪ್ರಸಿದ್ಧ ದೇವಾಲಯಕ್ಕೆ ಹೋಗಿ ನೆಮ್ಮದಿಯನ್ನು ಪಡೆದುಕೊಳ್ಳುವಿರಿ. ಹಾಗಾದರೆ ಜನವರಿ 14ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Horoscope: ನಿಮ್ಮ ನಿರ್ಲಕ್ಷ್ಯವೇ ಇನ್ನೊಬ್ಬರಿಗೆ ಅನುಕೂಲವಾಗುವುದು
ನಿಮ್ಮ ನಿರ್ಲಕ್ಷ್ಯವೇ ಇನ್ನೊಬ್ಬರಿಗೆ ಅನುಕೂಲವಾಗುವುದು
Follow us on

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಧನು ಮಾಸ, ಮಹಾನಕ್ಷತ್ರ: ಉತ್ತರಾಷಾಢ, ಮಾಸ: ಪೌಷ, ಪಕ್ಷ: ಕೃಷ್ಣ, ವಾರ: ಮಂಗಳ, ತಿಥಿ: ಪ್ರತಿಪತ್, ನಿತ್ಯನಕ್ಷತ್ರ: ಪುಷ್ಯಾ, ಯೋಗ: ವಿಷ್ಕಂಭ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 07 ಗಂಟೆ 02 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 21 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 03:32 ರಿಂದ ಸಂಜೆ 04:56ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 09:52ರಿಂದ 11:17 ರವರೆಗೆ, ಗುಳಿಕ ಮಧ್ಯಹ್ನಾ 12:42 ರಿಂದ 02: 07 ರವರೆಗೆ.

ತುಲಾ ರಾಶಿ: ನಿಮ್ಮ ಬೆಳವಣಿಗೆ ಇನ್ನೊಬ್ಬರು ಸಹಿಸುವಂತೆ ಇರಲಿ. ಮನಸ್ಸಿನ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಇಂದು ಕಷ್ಟವಾದೀತು. ಮಾನಸಿಕ‌ ಸ್ಥೈರ್ಯವು ಬಹಳ ಮುಖ್ಯವಾಗುವುದು. ಶೂನ್ಯದಿಂದ ಆರಂಭಿಸುವ ಕಲೆ ನಿಮಗೆ ಗೊತ್ತಿದೆ. ನಿರೀಕ್ಷಿತ ಗೌರವವು ನಿಮಗೆ ಸಿಗಲಿದೆ.‌ ಕೆಲವು ವ್ಯಕ್ತಿಗಳಿಂದ ನೀವು ದೂರವಿರಲು ಇಚ್ಛಿಸುವಿರಿ. ಸಹೋದ್ಯೋಗಿಯೊಬ್ಬನಿಗೆ ಸಹಾಯ ಮಾಡುವ ಸ್ಥಿತಿಯು ನಿಮಗೆ ಬರಬಹುದು. ಆಗಬೇಕಾದ ಕಾರ್ಯಗಳು ಒತ್ತಡ ಇಲ್ಲದೇ ಆಗುವುದು. ಯಾರ ಬಲವಂತಕ್ಕೂ ಮಣಿಯುವುದಿಲ್ಲ. ರತ್ನ ವ್ಯಾಪಾರದಲ್ಲಿ ಹಿನ್ನಡೆಯಾಗಬಹುದು. ಇಂದಿನ ಸಮಯವನ್ನು ವ್ಯರ್ಥಮಾಡಿಕೊಂಡು ಬೇಸರಿಸುವಿರಿ.‌ ನಿಮ್ಮ‌ ಸ್ವಭಾವವು ಇತರರಿಗೆ ಅಸಹಜತೆಯಂತೆ ಕಾಣಿಸಬಹುದು. ಎಲ್ಲರ ಮೇಲೂ ಹಿಡಿತ ಸಾಧಿಸುವ ಪ್ರಯತ್ನವು ಬೇಡ. ಮಾತನಾಡಿ ಇಂದು ಸಮಯವನ್ನು ವ್ಯರ್ಥ ಮಾಡುವಿರಿ. ವಹಿಸಿಕೊಂಡ ಕಾರ್ಯವನ್ನು ಸಮಯಕ್ಕೆ ಮುಗಿಸುವಿರಿ. ಕೃಷಿಕರು ಆದಾಯದ ಮೂಲವನ್ನು ಹೆಚ್ಚಿಸಿಕೊಳ್ಳುವರು. ಹಿತಶತ್ರುಗಳನ್ನು ಸರಿಯಾಗಿ ಬಳಸಿಕೊಳ್ಳುವುದು ನಿಮಗೆ ಗೊತ್ತಾಗುವುದು.

ವೃಶ್ಚಿಕ ರಾಶಿ; ನೆರೆಯವರ ಮಾತು ನಿಮಗೆ ಬೇಸರ ತರಿಸಿ, ಅದಕ್ಕೆ ಪ್ರತಿಯಾಗಿ ಏನನ್ನಾದರೂ ಹೇಳಲು ಹೋಗುವಿರಿ. ನಿಮ್ಮ ಉದ್ವೇಗದ ಮಾತುಗಳು ಇತರರ ಬಾಯಿಗೆ ಆಹಾರ. ಅಮೇಧ್ಯವಾದ ಆಹಾರವನ್ನು ಸೇವಿಸುವ ಸಂದರ್ಭವು ಬರಬಹುದು. ರಕ್ಷಣೆಯ ಜವಾಬ್ದಾರಿ ಇದ್ದವರಿಗೆ ಒತ್ತಡವಿರುವುದು. ಮಕ್ಕಳಲ್ಲಿ ಪ್ರೀತಿಯನ್ನು ತೋರುವಿರಿ. ಅಪರಿಚಿತರಿಗೆ ಮಾಡಿದ ಸಹಾಯವು ದುರುಪಯೋಗವಾಗುವುದು. ನಿಮ್ಮ ಗುಣಗಳು ಅಪ್ರಕಾಶವಾಗಬಹುದು. ದೂರದ ಸ್ಥಳಕ್ಕೆ ಉದ್ಯೋಗಕ್ಕೆ ಹೋಗಲು ಮನೆಯಿಂದ ನಕಾರಾತ್ಮಕ ಸೂಚನೆ ಬರಬಹುದು. ಯಾರನ್ನೂ ಅವಲಂಬಿಸದೇ ನಡೆಯಬೇಕು ಎನ್ನುವ ಹಠವು ಬರುವುದು. ಪ್ರಶಂಸೆಯು ಇಲ್ಲದೇ ಕೆಲಸದಲ್ಲಿ ನಿಮ್ಮ ಆಸಕ್ತಿಯು ಕಡಿಮೆ‌ ಆಗಬಹುದು. ನಿಮ್ಮ ಕಾರ್ಯಕ್ಕೆ ಮಕ್ಕಳಿಂದ ವಿರೋಧವು ಇರಲಿದೆ. ಸ್ಥಳ ಬದಲಾವಣೆಯನ್ನು ಅನಿವಾರ್ಯವಾಗಿ ಮಾಡಬೇಕಾದೀತು. ಸ್ನೇಹಿತರ ಜೊತೆ ಎಲ್ಲಿಗಾದರೂ ಪ್ರಯಾಣವನ್ನು ಮಾಡುವಿರಿ. ಸತ್ಯವನ್ನು ಸಂಗಾತಿಯಿಂದ ಮುಚ್ಚಿಡಲು ಪ್ರಯತ್ನಿಸುವಿರಿ.

ಧನು ರಾಶಿ: ಇಂದು ಅಲಂಕಾರಕ್ಕೆ ಹೆಚ್ಚು ಸಮಯವನ್ನು ಕೊಡುವಿರಿ ಮತ್ತು ಅದಕ್ಕೆ ಸಂಬಂಧಿಸಿದ ವಸ್ತುಗಳನ್ನೂ ಪಡೆಯುವಿರಿ. ಹಲವು ದಿನಗಳಿಂದ ನಿರೀಕ್ಷಿಸುತ್ತಿದ್ದ ಉದ್ಯೋಗದ ಭಡ್ತಿಯು ಸಿಗಲಿದೆ. ನೀವು ಜವಬ್ದಾರಿಯನ್ನೂ ಪಡೆಯಲು ಹಿಂಜರಿಯುವುದಿಲ್ಲ. ನಿಮ್ಮ ವಾಹನವನ್ನು ಬದಲಾಯಿಸುವ ಸಾಧ್ಯತೆ ಇದೆ.‌ ನಿಂದಕರಿಗೆ ಉತ್ತರವನ್ನು ಕೊಟ್ಟು ಸಿಟ್ಟಗುವಿರಿ. ಬರಲಿರುವ ಧನಾಗಮನದ ನಿರೀಕ್ಷೆಯಲ್ಲಿ ಇರುವಿರಿ. ಭಾವುಕರಾಗುವ ಸಂದರ್ಭವು ಬರಬಹುದು. ನಿರಂತರ ಕಾರ್ಯದಿಂದ ವಿಶ್ರಾಂತಿಯನ್ನು ಪಡೆಯುವಿರಿ. ಕೆಲಸದ ಸಮಯವು ವ್ಯತ್ಯಾಸವಾಗಿದ್ದು ನಿಮಗೆ ಹೊಂದಿಕೊಳ್ಳುವುದು ಕಷ್ಟವಾದೀತು. ನಿಮ್ಮ ಮೇಲೆ ಸಹಾನುಭೂತಿ ಇರಬಹುದು. ವಿದೇಶೀ ವ್ಯಾಪಾರದಿಂದ ಆದಾಯವು ಹೆಚ್ಚಾಗಬಹುದು. ನಿಮ್ಮ ಅಜ್ಞಾನವನ್ನು ನೀವೇ ತೋರಿಸಿಕೊಳ್ಳುವಿರಿ. ನಮ್ಮದೇ ಸರಿ ಎನ್ನುವ ವಾದವು ಸರಿಯಾಗದು. ನೀವು ಇಂದು ಯಾರ ಜೊತೆಯೂ ಬೆರೆಯಲು ಇಷ್ಟಪಡುವುದಿಲ್ಲ. ಉದ್ಯಮವನ್ನು ಮುನ್ನಡೆಸಲು ಉತ್ತಮ ವ್ಯಕ್ತಿಗಳ ಅನ್ವೇಷಣೆ ಮಾಡುವಿರಿ. ದೇವತಾರಾಧನೆಯಲ್ಲಿ ಮನಸ್ಸು ನಿಲ್ಲಲಿದೆ.

ಮಕರ ರಾಶಿ: ಇಂದಿನ ಕೆಲವು ಮಾತುಗಳನ್ನು ನೀವು ನಿರ್ಲಕ್ಷಿಸುವಿರಿ. ಕಛೇರಿಯ ವ್ಯವಹಾರದಲ್ಲಿ ನಿಮಗೆ ಒತ್ತಡವು ಬರಬಹುದು. ಎಲ್ಲವನ್ನೂ ನಿಮ್ಮ ಅನುಭವದ ಮೂಲಕವೇ ತಿಳಿದುಕೊಳ್ಳಬೇಕೆಂದಿಲ್ಲ. ಇತರ ಅನುಭವವೂ ನಿಮಗೆ ಪಾಠವಾಗುವುದು. ಹಠದ ಸ್ವಭಾವದಿಂದ ಹೊರಬನ್ನಿ. ನಿಮ್ಮ ಸ್ವೇಚ್ಛಾಚಾರವು ಮನೆಯವರಿಗೆ ಇಷ್ಟವಾಗದು. ಅನಿರೀಕ್ಷಿತ ಧನಾಗಮನದಿಂದ ಸಂತೋಷವು ಇಮ್ಮಡಿಯಾಗಬಹುದು. ನಿಮಗೆ ಸಿಕ್ಕ ಜವಾಬ್ದಾರಿಯಿಂದ ಬೀಗುವಿರಿ. ಹೊಸ ಪರಿಚಯವು ಅತಿಯಾಗಿ ಆಪ್ತವಾಗಬಹುದು. ಇನ್ನೊಬ್ಬರ ಗೌಪ್ಯತೆಯನ್ನು ಬಿಚ್ಚಿಡುವುದು ಸಂತೋಷದ ವಿಚಾರವಾಗುವುದು. ನಿಮ್ಮ ಬಗ್ಗೆ ನೀವೇ ಹೇಳಕೊಳ್ಳುವುದು ಜಂಭವೆನಿಸುವುದು. ಅತಿ ಲೋಭದಿಂದ ಧನಾರ್ಜನೆಯನ್ನು ಮಾಡುವಿರಿ. ಉದ್ಯೋಗಕ್ಕೆ ಸಂಬಂಧಿಸಿದ ಓಡಾಟವು ವ್ಯರ್ಥಯವಾಗುವುದು. ಉಚಿತವಾಗಿ ಸಿಕ್ಕಿದ್ದನ್ನು ಪಡೆಯಲು ಇಚ್ಛಿಸುವುದಿಲ್ಲ. ಶ್ರಮಕ್ಕೆ ಹೆಚ್ಚು ಮಹತ್ವವನ್ನು ಕೊಡುವಿರಿ.

ಕುಂಭ ರಾಶಿ; ಹಳೆಯ ಸ್ನೇಹಿತರ ಸಮಾಗಮವಾಗಲಿದ್ದು, ಸಂತೋಷವಾಗಲಿದೆ. ಸಮೀಪದ ಪ್ರಸಿದ್ಧ ದೇವಾಲಯಕ್ಕೆ ಹೋಗಿ ನೆಮ್ಮದಿಯನ್ನು ಪಡೆದುಕೊಳ್ಳುವಿರಿ. ಎಲ್ಲವನ್ನೂ ತಿಳಿದವರ ತೆಗಳಿಕೆಯಿಂದ ನೀವು ಸಿಟ್ಟಾಗಬಹುದು. ಸಾಧಕರ ಒಡನಾಟವು ನಿಮ್ಮ ಆಲೋಚನೆಯ‌ ಕ್ರಮವನ್ನು ಬದಲಿಸುವುದು. ಪ್ರಶಾಂತವಾದ ಚಿತ್ತದಿಂದ ಇದ್ದರೆ ಸಕಾರಾತ್ಮಕ ಅಂಶಗಳನ್ನು ಕಾಣುವಿರಿ. ಒತ್ತಡದ ಕಾರಣ ಜವಾಬ್ದಾರಿಯನ್ನು ಒಪ್ಪಿಕೊಳ್ಳುವುದಿಲ್ಲ. ಸಂಗಾತಿಯ ಕಾರಣದಿಂದ ನಿಮಗೆ ಬೇಸರವಾಗುವುದು. ಅತಿ ಭೋಜನದಿಂದ ಉದರ ಬಾಧೆ. ಕೆಲವರು ನಿಮ್ಮ ದಾರಿ ತಪ್ಪಿಸಬಹುದು. ಮಿತ್ರರ ಸಹಾನುಭೂತಿಯು ನಿಮಗೆ ಉತ್ಸಾಹವನ್ನು ಕೊಡುವುದು. ಉತ್ತಮವಾದ ಉಡುಗೊರೆಯೊಂದು ನಿಮ್ಮ ಕೈ ಸೇರಬಹುದು. ಪ್ರಮುಖ ಅಂಶಗಳು ದೂರಾಗಿ ಅಪ್ರಧಾನಾಂಶಗಳೇ ಮುನ್ನೆಲೆಗೆ ಬರುವುದು. ಕಾರ್ಯದ ಅನಿವಾರ್ಯತೆಯು ಎದ್ದು ಕಾಣಿಸುವುದು. ನಿಮ್ಮ ಸರಳ ವ್ಯಕ್ತಿತ್ವವು ಮಾದರಿಯಾಗುವುದು.

ಮೀನ ರಾಶಿ: ನಿರ್ಲಕ್ಷ್ಯದಿಂದ ಇಂದು ನಿಮ್ಮ ವಸ್ತುವು ಇನ್ನೊಬ್ಬರ ಪಾಲಾಗಬಹುದು. ಕಳೆದ ವಿಚಾರವನ್ನು ಮತ್ತೆ ಮತ್ತೆ ನೆನಪಿಸಿಕೊಂಡು ದುಃಖಿಸುವುದಕ್ಕಿಂತ ಪ್ರಯತ್ನ ಮಾಡಿ. ಅಪರಿಚಿತ ಕರೆಗಳು ನಿಮ್ಮನ್ನು ಪೀಡಿಸಬಹುದು. ಇಂದು ಉಪಾಯದಿಂದ ಕೆಲಸವನ್ನು ಮಾಡುವುದು ಉತ್ತಮ. ನಿಮ್ಮ ಅನುಪಸ್ಥಿತಿಯಲ್ಲಿ ಕಾರ್ಯಗಳು ಆಗುವುದು. ನಿಮ್ಮಿಂದಾಗಿ ಕುಟುಂಬದ ಒತ್ತಡವು ಕಡಿಮೆ ಆಗುವುದು. ಅವಸರ ಮಾಡದೇ ಕೆಲಸವನ್ನು ಮಾಡಿ. ಸಂಗಾತಿಯ ಮಾತಿನಂತೆ ಇಂದು ನಡೆದುಕೊಳ್ಳುವ ಅನಿವಾರ್ಯತೆ ಇದೆ. ವ್ಯಾಪಾರವು ಮಧ್ಯಮಗತಿಯಲ್ಲಿ ಇರುವುದು. ನಿಮ್ಮದಾದ ನಿಯಮವನ್ನು ಬಿಡಲು ನೀವು ತಯಾರಿರುವುದಿಲ್ಲ. ಕೆಲವರ‌ ಮನೋಗತವನ್ನು ಅರಿತುಕೊಳ್ಳುವಿರಿ. ಯಾರದೋ ಒತ್ತಾಯಕ್ಕೆ ಮಣಿದು ಬೇಸರಪಡುವಿರಿ. ಇಂದು ನಿಮ್ಮ ಬೆಂಬಲಕ್ಕೆ ಬರುವವರನ್ನು ಅತಿಯಾಗಿ ನಂಬುವಿರಿ. ಅರ್ಥಿಕ ಕ್ರಮವನ್ನು ಸರಿಯಾಗಿ ಇಟ್ಟುಕೊಳ್ಳುವಿರಿ.