Nithya Bhavishya: ಉದ್ವೇಗ ಒಳಗಾಗಬೇಡಿ, ಮಾತನಾಡುವಾಗ ಎಚ್ಚರವಿರಲಿ: ಹನುಮನ ಸ್ಮರಣೆ ಮಾಡಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Mar 10, 2023 | 6:00 AM

ಇಂದಿನ(2023 ಮಾರ್ಚ್ 10) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

Nithya Bhavishya: ಉದ್ವೇಗ ಒಳಗಾಗಬೇಡಿ, ಮಾತನಾಡುವಾಗ ಎಚ್ಚರವಿರಲಿ: ಹನುಮನ ಸ್ಮರಣೆ ಮಾಡಿ
ಪ್ರಾತಿನಿಧಿಕ ಚಿತ್ರ
Image Credit source: maharashtratimes.com
Follow us on

ಶುಭೋದಯ ಓದುಗರೇ….ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಕೆಲವರು ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದ್ರೆ ಇಂದಿನ(2023 ಮಾರ್ಚ್ 10) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1945, ಶುಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಕುಂಭ ಮಾಸ, ಮಹಾನಕ್ಷತ್ರ: ಪೂರ್ವಾಭಾದ್ರ, ಮಾಸ: ಫಾಲ್ಗುಣ, ಪಕ್ಷ: ಕೃಷ್ಣ, ವಾರ:ಶುಕ್ರ, ತಿಥಿ: ತೃತೀಯಾ, ನಿತ್ಯನಕ್ಷತ್ರ: ಚಿತ್ರ, ಯೋಗ: ವೃದ್ಧಿ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 45 ನಿಮಿಷಕ್ಕೆ, ಸೂರ್ಯಾಸ್ತ ಬೆಳಗ್ಗೆ 06 ಗಂಟೆ 40 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 02: 13 ರಿಂದ ಮಧ್ಯಾಹ್ನ 03:42ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 06:46 ರಿಂದ ಬೆಳಗ್ಗೆ 08:15ರ ವರೆಗೆ, ಗುಳಿಕ ಕಾಲ ಬೆಳಗ್ಗೆ 09:45 ರಿಂದ 11:1ರ ವರೆಗೆ.

ಮೇಷ: ಕೆಲವು ವಿಷಯಗಳಲೂ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಬಹುದು. ನೀವು ಅಪೇಕ್ಷಿಸಿದ್ದ ಜಾಯಾತ್ರೆಗೆ ಸಿದ್ಧತೆ ಮಾಡಿಕೊಳ್ಳುವಿರಿ. ವೃತ್ತಿರಂಗದಲ್ಲಿ ನಿಮ್ಮ ಸ್ಥಾನವು ಹೆಚ್ಚಾಗುವುದಿಲ್ಲ. ಕೆಲಸಕ್ಕೂ ಇನ್ನೊಬ್ಬರ ಮೇಲೆ ಅವಲಂಬಿಸಬೇಡಿ. ಹೆಚ್ಚು ಚುರುಕಾಗಿ ಜನಗಳ ಮಧ್ಯೆ ಓಡಾಡುವುದು ಅತಿ ಅಗತ್ಯ. ಹಣದ ಒಳಹರಿವು ನಿಮ್ಮ ಅಗತ್ಯಕ್ಕೆ ತಕ್ಕಂತೆ ಇರುತ್ತದೆ. ಸ್ಥಿರಾಸ್ತಿ ವಿಚಾರಗಳನ್ನು ತೀರ್ಮಾನ ಮಾಡಲು ಹೋದ ನಮಗೆ ನಮ್ಮ ಗೋಜಲುಗಳನ್ನು ಕಂಡು ಗಾಬರಿಯಾಗುವುದು ಬೇಡ ‌.

ವೃಷಭ: ಕೃಷಿ ವಿಜ್ಞಾನವನ್ನು ಓದುತ್ತಿರುವವರಿಗೆ ಹೆಚ್ಚಿನ ಪ್ರೋತ್ಸಾಹ ದೊರೆಯುತ್ತದೆ. ವ್ಯವಹಾರಗಳ ಬಗ್ಗೆ ಪಾಲುದಾರರ ಜೊತೆ ತಕ್ಷಣದಲ್ಲಿ ಮಾತನಾಡಬೇಕಾದ ಹಾಗೂ ತೀರ್ಮಾನ ತೆಗೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಮಾತಿನಿಂದ ಕಾರ್ಯ ಸಾಧನೆ ಮಾಡಿ ಮೆಚ್ಚುಗೆ  ಪಡೆಯುವಿರಿ. ಆರ್ಥಿಕ ಪರಿಸ್ಥಿತಿಗಳ ಬಗ್ಗೆ ಹೆಚ್ಚು ಜಾಗರೂಕರಾಗಿರಿ. ಹಣದ ಒಳಹರಿವು ಸಾಮಾನ್ಯವಾಗಿರುತಗತವೆ. ಗೃಹ ನಿರ್ಮಾಣದ ಕೆಲಸದಲ್ಲಿ ಅತಿ ಆತುರ ಬೇಡ. ತಾಯಿಯಿಂದ ಹೆಚ್ಚಿನ ಸಹಕಾರಗಳು ನಿಮಗೆ ದೊರೆತು ಸಂತಸವಾಗುತ್ತದೆ. ಇಂದುಕೆಲವೊಮ್ಮೆ ನಿಮ್ಮ ವ್ಯವಹಾರದಲ್ಲಿ ಅನಿರೀಕ್ಷಿತ ಲಾಭವು ಬರಬಹುದು.

ಮಿಥುನ: ಅತ್ಯುತ್ತಮವಾದ ಜೀವನಶೈಲಿಯನ್ನು ಬಯಸುವವರು ಜೀವನೋಪಾಯಕ್ಕಾಗಿ ಬದಲಿ ಮಾರ್ಗವನ್ನು ಕಂಡುಕೊಳ್ಳಬೇಕಾಗುತ್ತದೆ. ಸಂಗಾತಿಯೊಂದಿಗೆ ಸ್ನೇಹದಿಂದ ವರ್ತಿಸಿ. ಇಲ್ಲವಾದರೆ ಭಿನ್ನಾಭಿಪ್ರಾಯಗಳು ಸವಕಾಶ ಸಿಗುತ್ತದೆ. ವಿದ್ಯಾರ್ಥಿಗಳಿಗೆ ಶ್ರಮಕ್ಕೆ ತಕ್ಕ ಫಲ ದೊರೆಯುತ್ತದೆ. ಬಹುಜನರ ಅಭಿಪ್ರಾಯವನ್ನು ಹೆಚ್ಚಿಗೆ ಗೌರವಿಸುವುದು ಒಳ್ಳೆಯದು. ಮಾತಿನಲ್ಲಿ ಹೆಚ್ಚಿನ ಎಚ್ಚರವಿರಲಿ, ಕುಹುಕವಾಡುವುದು ಬೇಡ. ಹಣದ ಹರಿವು‌ಕಡಿಮೆ ಇರುವುದರಿಂದ ಖರ್ಚನ್ನು ಸರಿಯಾಗಿ ನಿಭಾಯಿಸುವುದು ಒಳ್ಳೆಯದು.

ಕಟಕ: ಅಭಿಪ್ರಾಯಗಳ ವಿನಿಮಯದಿಂದ ವಿಷಯಗಳಿಗೆ ಸಂಬಂಧಿಸಿದಂತೆ ಸೂಕ್ತ ತೀರ್ಮಾನವನ್ನು ತೆಗೆದೊಳ್ಳಿ. ವಿದೇಶಿ ವಸ್ತುಗಳ ವ್ಯವಹಾರ ಮಾಡುವವರಿಗೆ ಸ್ವಲ್ಪ ಹಿನ್ನಡೆ ಆಗಬಹುದು. ಸಹೋದರನ ಆರೋಗ್ಯದಲ್ಲಿ ವ್ಯತ್ಯಾಸ ಕಾಣಬಹುದು. ವಿದ್ಯಾರ್ಥಿಗಳಿಗೆ ಸೂಕ್ತ ಸೌಲಭ್ಯಗಳ ಜೊತೆಗೆ ಸರಿಯಾಸ ಮಾರ್ಗದರ್ಶನದ ಅಗತ್ಯವಿದೆ. ಸಂಗಾತಿಯೇ ನಿಮ್ಮ ಕೆಲಸಗಳಿಗೆ ಮುನ್ನುಗ್ಗಿ ಸಹಾಯ ಮಾಡುವರು. ಸರ್ಕಾರಿ ಕಚೇರಿಯ ಕೆಲಸಗಳಲ್ಲಿ ಸ್ವಲ್ಪ ಚುರುಕುತನ ಕಾಣಬಹುದು. ಧಾರ್ಮಿಕ ಕೆಲಸವನ್ನು ಮಾಡುವವರಿಗೆ ಸಮಾಜದಿಂದ ಸಾಕಷ್ಟು ಸಹಾಯ ದೊರೆಯುತ್ತದೆ.

ಸಿಂಹ: ಇಂದು ನಿಮ್ಮ ಕೆಲಸಕಾರ್ಯಗಳು ಬಹಳ ನಿಧಾನವಾಗಲಿದೆ. ನಿಮ್ಮ‌ಮೇಲೆ ಅಪವಾದವನ್ನು ತರಲಿದ್ದಾರೆ. ನಿಃಸ್ವಾರ್ಥವಾಗಿ ಇಚಮಷ್ಟಪಡುವವರನ್ನು ಸಂಶಯಿಸಬೇಡಿ.‌ ನಿಮ್ಮ ಜೊತೆಗಿರುವವರು ಯಾರು ಯಾವ ರೀತಿಯವರು ಎಂಬುದು ಗೊತ್ತಾಗುತ್ತದೆ. ನೀವು ನಡೆಯಬೇಕಾದ ದಾರಿಯು ಸರಿ ಇದ್ದು ಅತ್ತ ಸಾಗುವಿರಿ. ಮನೆಯ ಆಗುಹೋಗುಗಳ ಬಗ್ಗೆ ಹಿರಿಯರೊಡನೆ ಚರ್ಚೆ ನಡೆಸಿ ತೀರ್ಮಾನಕ್ಕೆ ಬನ್ನಿ. ಅಧ್ಯಾತ್ಮದಲ್ಲಿ ಇರಲು ಹೆಚ್ಚು ಮನಸ್ಸು ಬಯಸುತ್ತಿದೆ. ಪ್ರಾತಃಕಾಲದ ಸೂರ್ಯನನ್ನು ಆರಾಧಿಸಿ.

ಕನ್ಯಾ: ನಿಮ್ಮ ಕಾರ್ಯಕ್ಕೆ ಗೌರವಗಳು ಸಿಗಲಿದೆ. ಅವಿವಾಹಿತರಿಗೆ ವಿವಾಹವಾಗುವ ಸೂಚನೆಯು ಗೊತ್ತಾಗಬಹುದು. ಬಂಧುಗಳ ಭೇಟಿಯಾಗಲಿದ್ದೀರಿ. ಇದು ನಿಮ್ಮ ‌ಮುಂದಿನ ಕಾರ್ಯಕ್ಕೆ ಅನುಕೂಲಕರವಾಗಿರಲಿದೆ. ಮನೆಯಲ್ಲಿ ದೇವಕಾರ್ಯಗಳು ನಡೆಯುವುವು. ವ್ಯಕ್ತಿ ಅವನ ಯೋಗ್ಯತೆಗೆ ಅನುಸಾರವಾಗಿ ಅಭಿವೃದ್ಧಿಯನ್ನು ಹೊಂದುವನು. ಎಲ್ಲ ಬಗೆಯ ಬೆಂಬಲ ಹಾಗೂ ಸಹಕಾರಗಳನ್ನು ಜನರು ಕೊಡುವರು. ಸಮಯಕ್ಕೆ ಸರಿಯಾಗಿ ಯಾವುದೂ ಅಗಲಿಲ್ಲವೆಂಬ ಬೇಸರ ಇರಲಿದೆ. ವಿಷ್ಣುವಿನ ಸ್ತೋತ್ರ ಮಾಡಿ.

ತುಲಾ: ಮಾನಸಿಕವಾಗಿ ಚಿಂತೆಗಳು ಇರಲಿವೆ. ಇಂದು ನಿಮ್ಮವರ ಬಗ್ಗೆ ಅನುಮಾನ ಕಾಡಬಹುದು. ಪರೀಕ್ಷಿಸಿ ಒಂದು ತೀರ್ಮಾನಕ್ಕೆ ಬನ್ನಿ. ಉದ್ವೇಗಕ್ಕೆ ಒಳಗಾಗಲು ಅನೇಕ ಸಂದರ್ಭಗಳು ಬರಬಹುದು. ತಾಳ್ಮೆಯಿಂದಲೇ ಇರಿ. ಹಣಕಾಸಿನ ಒತ್ತಡದಿಂದ ಮನೆಯಲ್ಲಿ ಅಶಾಂತಿಯು ನಿರ್ಮಾಣವಾದೀತು. ಮನಸ್ಸನ್ನು ಹಿಡಿತದಲ್ಲಿ ಶಾಂತರಾಗಿರಿ.‌ ಯಾವುದೇ ಅಹಿತಕರ ಭಾವವನ್ನು ತೋರಿಸಬೇಡಿ. ದಿನದ ಕೆಲವು ಸಮಯದಲ್ಲಿ ನಿಮಗೆ ಉತ್ತಮ ಜೀವನದ ಸೂಚನೆ ಸಿಗಲಿದೆ. ಗಮನಿಸುತ್ತಿರಿ.

ವೃಶ್ಚಿಕ: ವೃತ್ತಿಯಲ್ಲಿ ಹೊಸ ಜವಾಬ್ದಾರಿಗಳು ಇರಲಿವೆ. ಮೇಲಧಿಕಾರಿಗಳು ನಿಮ್ಮನ್ನು ಪ್ರಶಂಸಿಸುವರು. ಪ್ರವಾಸವನ್ನು ಮಾಡುವ ನಿರ್ಧಾರಕ್ಕೆ ಬರಲಿದ್ದೀರಿ. ಮನಸ್ಸಿಗೆ ಖುಷಿಯಾಗುವಂಥ ಕೆಲಸಗಳನ್ನು ಮಾಡಲಿದ್ದೀರಿ.‌ ಭೂಮಿಯಿಂದ ಲಾಭವನ್ನು ಗಳಿಸುವಿರಿ. ವ್ಯವಸಾಯಗಾರರಿಗೆ ಧನಲಾಭವಾಗುವುದು. ವಾಹನದಿಂದ ಲಾಭವವಿ ಸಿಗುವುದು. ಧೈರ್ಯ ಕೆಲಸ ಮಾಡಿ, ಜಯ ಗಳಿಸಿ. ಇಂದು ಹಣದ ಹರಿವು ಬಹಳ ಉತ್ತಮವಾಗಿರಲಿದೆ. ಅಪರಿಚಿತರು ನಿಮ್ಮ ಹಾದಿ ತಪ್ಪಿಸಬಹುದು. ನಾಗದೇವರ ಪೂಜೆ ಮಾಡಿ.

ಧನಸ್ಸು: ನಿಮ್ಮ ಆಸೆಗಳು ಕೈಗೂಡುವ ಹಂತದಲ್ಲಿ ಇರದು. ಅತಿಯಾದ ಪ್ರವಾಸಕ್ಕೆ ಮನಸ್ಸು ಮಾಡುವಿರಿ. ಮನಸ್ಸಿಗೆ ಹಿತವಾದ ಸಂಗತಿಗಳು ನಡೆಯಲಿದೆ. ಇಂದು ನಿಮ್ಮ ಕೆಲಸವು ಅಡೆತಡೆಗಳಿಲ್ಲದೆ ಮುಂದೆ ಸಾಗುತ್ತದೆ. ಸರ್ಕಾರಿ ನೌಕರರಿಗೂ ಈಗ ಶುಭವಾಗಲಿದೆ. ‌ಆಭರಣದ ಖರೀದಿಯನ್ನು ಮಾಡುವಿರಿ. ವಾಹನದಿಂದ ಲಾಭ‌ವನ್ನು ಕಳಿಸುವಿರಿ. ಹೊಸ ವಾಹನ ಖರೀದಿ ಯೋಗ ಇದೆ. ‌ ವಿದೇಶ ಪ್ರಯಾಣದ ಸಂದರ್ಭವೂ ಬರಬಹುದು. ಆರೋಗ್ಯ ಉತ್ತಮವಾಗಿರಲಿದೆ.

ಮಕರ: ಒಳ್ಳೆಯ ಕಾಲವನ್ನು ಎದುರುನೋಡುತ್ತ ಕುಳಿತಿರುವಿರಿ. ಮನೆಯಲ್ಲಿ‌ ಯಾರೂ ಹೇಳಿಕೊಳ್ಳಲಾಗದ ಅಸಮಾಧಾನವಿರಲಿದೆ.‌ ಪ್ರೀತಿಪಾತ್ರರ ಜೊತೆ ಹೆಚ್ಚು ಸಲುಗೆಯಿಂದ ಇರುವಿರಿ. ನಿಮ್ಮ ಕಷ್ಟಕ್ಕೆ ಆದವರನ್ನು ಮರೆಯಬೇಡಿ. ಸ್ತ್ರೀಮೂಲದಿಂದ ಧನಸಹಾಯವು ಸಿಗಲಿದೆ.‌ ದ್ಚಿತೀಯದ ಶನಿಯಿಂದ ಕುಟುಂಬದಲ್ಲಿ ಅಶಾಂತಿಯ ವಾತಾವರಣ ಇರಲಿದೆ. ಒಬ್ಬರಮೇಲೊಬ್ಬರು ಆರೋಪ ಪ್ರತ್ಯಾರೋಪಗಳನ್ನು ಮಾಡುತ್ತ ದಿನಕಳೆವರು. ಅಲ್ಪ ಭೋಜನವನ್ನು ಮಾಡುವ ಸಂದರ್ಭ ಬದಲಿದೆ. ಶನೈಶ್ಚರನ‌ ಸ್ತೋತ್ರವನ್ನು‌ ಮಾಡಿ.

ಕುಂಭ: ಇಲ್ಲಿಯೇ ಶನಿಯು ಇರುವುದರಿಂದ ಮಾನಕ್ಕೆ ತೊಂದರೆಯಾದೀತು. ಅಕಾರಣವಾಗಿ ಉದ್ವೇಗ ಒಳಗಾಗಬೇಡಿ. ಸಂಪತ್ತು ಬರುವುದು ಮಾತ್ರ ಕಾಣಿಸುತ್ತದೆ. ನೊಡು ನೋಡುತ್ತಿದ್ದಂತೆ ಎಲ್ಲವೂ ಖಾಲಿಯಾಗುವುದು. ಕೂಡಿಟ್ಟ ಹಣವೆಲ್ಲವೂ ಕರಗುತ್ತಿದೆ ಎನ್ನುವ ಭಯವು ಉಂಟಾಗಲಿದೆ. ಒಳ್ಳೆಯ ಕಾರ್ಯಕ್ಕೆ ಹಣವನ್ನು ಖರ್ಚು ಮಾಡಿ. ವಿವೇಚನೆಯಿಂದ ನಡೆದುಕೊಳ್ಳಿ. ಮಾತನಾಡುವಾಗ ಎಚ್ಚರವಿರಲಿ. ಹನುಮನ ಸ್ಮರಣೆ ಮಾಡಿ ಕೆಲಸದಲ್ಲಿ ಮುಂದುವರಿಯಿರಿ.

ಮೀನ: ಇಂದು ನಿಮಗೆ ಲೆಕ್ಕಕ್ಕೆ ಸಿಗದೇ ಬಹಳ ಖರ್ಚುಗಳಾಗಬಹದು. ಇದರಿಂದ ಮಾನಸಿಕ ಹಿಂಸೆಯನ್ನೂ ಅನುಭವಿಸುವಿರಿ. ಸವಾಲುಗಳು ಬೇಡವೆಂದರೂ ಬರುತ್ತವೆ. ಮನೆಯಲ್ಲಿ ನೆಮ್ಮದಿ ಇರದೇ ಸಿಟ್ಟು, ಕೂಗು ಇವೆಲ್ಲ ಇರಲಿವೆ. ಇಂದು ಏನನ್ನಾದರೂ ಮಾಡಿದರೆ ಯೋಚಿಸಿ ಮಾಡಿ. ಇಂದು ಹೆಚ್ಚು ತಾಳ್ಮೆಯಿದ್ದರೆ ಒಳ್ಳೆಯದು.ಆದಷ್ಟು ಜಗಳ ವಾದ-ವಿವಾದಗಳಿಂದ ದೂರವಿರಿ. ಇಂದು ಮಾತಿಗಿಂತ ಮೌನವೇ ಹಿತವಾಗಿರಲಿದೆ. ಶಿವನಿಗೆ ಪ್ರಿಯವಾದ ಬಿಲ್ವವನ್ನು ಅರ್ಚಿಸಿ.

-ಲೋಹಿತಶರ್ಮಾ, ಇಡುವಾಣಿ