ಈ ವರ್ಷ ನಿಮಗೆ ಶುಭಪ್ರದವಾಗಿದೆ. ಕಳೆದ ವರ್ಷದ ಎಲ್ಲ ಸಂಕಟವನ್ನು ದೂರಮಾಡಿಕೊಂಡು ಹೊಸ ಹುರುಪಿನಲ್ಲಿ ನೀವು ಮುಂದುವರಿಯುವಿರಿ. ಗುರುಬಲವು ನಿಮ್ಮ ಆತ್ಮಸ್ಥೈರ್ಯವನ್ನು ಹೆಚ್ಚಿಸುವುದು. ಪಂಚಮದ ರಾಹುವು ಹಾಗೂ ಏಕಾದಶದಲ್ಲಿ ಕೇತು ಮತ್ತು ಷಷ್ಠದಲ್ಲಿ ಶನಿ ಇವರು ಅರ್ಧವರ್ಷಗಳ ಕಾಲ ಸ್ಥಿತವಾಗಿರುವ ಗ್ರಹಗಳಾಗಿವೆ. ವಿದ್ಯಾಭ್ಯಾಸ ಹಾಗೂ ಆದಾಯ ವಿಚಾರದಲ್ಲಿ, ಆರೋಗ್ಯದಲ್ಲಿ ಸ್ಥಿರತ್ವ ಉಳಿಯುವುದು.
ಈ ವರ್ಷದಲ್ಲಿ ನಿಮ್ಮ ಆರೋಗ್ಯದಲ್ಲಿ ಯಥಾಸ್ಥಿತಿ ಇರಲಿದ್ದು, ಅದನ್ನು ಕಾಪಾಡಿಕೊಳ್ಳಿ. ವರ್ಷದ ಮಧ್ಯಾವಧಿಯವರೆಗೆ ಆರೋಗ್ಯ ಹದತಪ್ಪಿ ಬಹಳ ಕಷ್ಟವಾಗುವುದು. ಔಷಧೋಪಚಾರವೂ ನಿಮಗೆ ಬೇಸರ ತರಿಸಬಹುದು. ಅನಂತರ ಆರೋಗ್ಯದಲ್ಲಿ ಸುಧಾರಣೆಯಿರಲಿದೆ.
ವಿವಾಹಕ್ಕೆ ಈ ವರ್ಷ ಉತ್ತಮವಾಗಿದ್ದು, ಮೇ ತಿಂಗಳ ಅನಂತರ ತಯಾರಾಗುವುದು ಉತ್ತಮ. ಅದರೆ ಅದಕ್ಕಿಂತ ಮೊದಲು ಆಗುವ ಪ್ರೇಮವು ತಪ್ಪಿಹೋಗುವುದು. ಒಮ್ಮೆ ಅದರ ವಿವಾಹ ಆದರೂ ನ್ಯಾಯಾಲಯದ ಮೆಟ್ಟಿಲೇರುವುದು. ಇದರಿಂದ ನಾನಾ ತೊಂದರೆಗಳನ್ನು ಎದುರಿಸಬೇಕಾಗುವುದು.
ಉದ್ಯಮ ಕ್ಷೇತ್ರದಲ್ಲಿ ಕನಸು ಕಂಡವರಿಗೆ ವರ್ಷಾರಂಭದಲ್ಲಿ ಉತ್ತಮ ಪ್ರಗತಿ ಕಾಣಿಸದು. ನಿಮ್ಮ ಶ್ರಮವೆಲ್ಲ ವ್ಯರ್ಥವಾಗಿ ಬೇಸರವಾಗುವುದು. ಭೂಮಿಯ ಉದ್ಯಮದಿಂದ ನಾನಾಪ್ರಕಾರದ ಸಮಸ್ಯೆಗಳು ಹುಟ್ಟಿಕೊಳ್ಳುವವು. ಕುಜ ದಶೆಯವರು ಉದ್ಯಮದ ವಿಸ್ತಾರಕ್ಕೆ ಹೋಗುವುದೇ ಬೇಡ.
ದ್ವಿತೀಯಾಧಿಪತಿ ಕುಜನು ನೀಚನಾಗಿದ್ದು ಕೌಟುಂಬಿಕ ಕಲಹ. ಯಾರಲ್ಲಿಯೂ ನೆಮ್ಮದಿ ಇರದು. ಒಬ್ಬರ ಮತ್ತೊಬ್ಬರ ವಿರುದ್ಧ ಒಳ ಪಿತೂರಿಯ, ಹಿತಶತ್ರುತ್ವ ಹೆಚ್ಚಾಗುತ್ತದೆ. ಕೆಲವು ತಟಸ್ಥವಾಗಿದ್ದರೆ ಮುಂದೆ ಅನುಕೂಲಕರ ವಾತಾವರಣವನ್ನು ಕಾಣಬಹುದು.
ಶನಿಯು ಗುರುವಿನ ಸ್ಥಾನದಲ್ಲಿ ಇರುವ ಕಾರಣ ಶತ್ರುತ್ವ ಬರುವ ಮೊದಲೇ ಸಂಧಾನದಿಂದ ಪರಸ್ಪರ ಮನಸ್ಸನ್ನು ತಿಳಿಯಾಗಿಸಿಕೊಳ್ಳುವಿರಿ. ಇದು ನಿಮ್ಮ ಮುಂದಿನ ಹಂತಕ್ಕೆ ಹೋಗಲು, ಎಲ್ಲರನ್ನೂ ಗೆಲ್ಲಲು ಉಪಾಯವಾಗಿದೆ.
ಇದು ಇಡೀ ವರ್ಷದಲ್ಲಿ ನಿಮ್ಮನ್ನು ಕಾಯುವುದಾಗಿದೆ. ಗುರುವು ನವಮ ಸ್ಥಾನಕ್ಕೆ ಹೋಗಿ ಪೂರ್ವಪುಣ್ಯ ಫಲವನ್ನು ನೀಡುವನು. ಗುರುದಶೆಯಲ್ಲಿ ಇದ್ದವರಿಗೆ ಈ ವರ್ಷ ಉತ್ಕೃಷ್ಟ ಫಲಗಳು ಇವೆ. ಗೌರವ ಸಮ್ಮಾನಗಳು ನಿಮ್ಮನ್ನು ಅರಸಿಬರುವುದು. ಉತ್ತಮ ಕಾರ್ಯಕ್ಕೆ ಪ್ರೇರಣೆ ಲಭ್ಯ. ಬಯಸದೇ ಇರುವ ಸ್ಥಾನಗಳು ನಿಮಗೆ ಸಿಕ್ಕಿ ಖುಷಿಗೆ ಇನ್ನಷ್ಟು ಖುಷಿ ಸೇರಲಿದೆ. ಹೊಸ ಉದ್ಯಮದ ಕನಸಿನಲ್ಲಿ ಇದ್ದರೆ ಪೂರ್ಣ ಯಶಸ್ಸು ನಿಮ್ಮದೇ. ಗುರುವಿನ ದೃಷ್ಟಿ ನಿಮ್ಮ ಮೇಲೆ ಇರುವ ಕಾರಣ ಬೇರೆ ಗ್ರಹಗಳಿಂದ ಉಂಟಾಗುವ ಬಾಧೆ, ನಷ್ಟಗಳೂ ಕೇವಲ ಗುರುವಿನ ದೃಷ್ಟಿಯಿಂದ ನಾಶವಾಗುವುದು.
ಈ ವರ್ಷ ಗುರುವಿನ ಕೃಪೆಯನ್ನು ಮರೆಯದೇ ಪಡೆಯಿರಿ. ಗುರುದರ್ಶನದಿಂದ ಇರುವ ಅಲ್ಪ ದೋಷವೂ ನಾಶವಾಗಿ ಎಲ್ಲ ಮಾರ್ಗ ಕಾಣಿಸುವುದು ಮಾತ್ರವಲ್ಲ ಬೇಕಾದ ಅಂಶಗಳೂ ತಾನಾಗಿಯೇ ಸೇರಿಕೊಳ್ಳುವುದು.
-ಲೋಹಿತ ಹೆಬ್ಬಾರ್, ಇಡುವಾಣಿ