ನಾಗರ ಪಂಚಮಿ: ಯಾವ ಯಾವ ರಾಶಿಯ ಅದೃಷ್ಟ ಬದಲಾಗಲಿದೆ?

| Updated By: ಅಕ್ಷಯ್​ ಪಲ್ಲಮಜಲು​​

Updated on: Aug 05, 2024 | 12:39 PM

Naga Panchami: ನಾಗದೋಷದಿಂದ ಸಂಕಷ್ಟದಲ್ಲಿರುವವರು ಈ ನಾಗರ ಪಂಚಮಿಯಂದು ಇಷ್ಟಾರ್ಥ ಪೂಜೆ ಮಾಡಿ ಪರಿಹಾರವನ್ನು ಪಡೆದು ಉತ್ತಮ ಆರೋಗ್ಯ, ಸುಖ, ನೆಮ್ಮದಿ ಸಂಪತ್ತು, ಉದ್ಯೋಗ, ವಿವಾಹ, ಸಂತಾನ ಭಾಗ್ಯವನ್ನು ಪಡೆಯಲು ಅವಕಾಶವಿದೆ.

ನಾಗರ ಪಂಚಮಿ: ಯಾವ ಯಾವ ರಾಶಿಯ ಅದೃಷ್ಟ ಬದಲಾಗಲಿದೆ?
ಸಾಂದರ್ಭಿಕ ಚಿತ್ರ
Follow us on

ಶ್ರಾವಣ ಮಾಸ ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಹಬ್ಬಗಳೂ ಒಂದರ ಹಿಂದೆ ಒಂದರಂತೆ ಸರಮಾಲೆಯಾಗಿ ಬರಲಿವೆ. ಇವು ಮನುಷ್ಯನ ಬದುಕಿಗೆ ಬೇಕಾದ ಪರಿವರ್ತನೆಯನ್ನೂ ಮಾಡಿಕೊಡಲು ಸಾಧ್ಯವಿದೆ. ಹಬ್ಬಗಳ ಯಾದಿಯಲ್ಲಿ ಮೊದಲಿರುವ ಹಬ್ಬ ನಾಗರ ಪಂಚಮೀ. ಈ ಹಬ್ಬವು ಅನೇಕ‌ ಕಾರಣಗಳಿಂದ ಪ್ರಸಿದ್ಧಿ ಪಡೆದಿದೆ. ಅದರಲ್ಲೂ ನಾಗ ದೋಷನಿವಾರಣೆಗೆ ಉಚಿತವಾದ ಹಬ್ಬ ಇದು. ಎಲ್ಲರೂ ಆಚರಿಸಬಹುದಾದ ಹಬ್ಬವಾದರೂ ಕೆಲವು ರಾಶಿಯವರಿಗೆ ಇದು ವಿಶೇಷ ಫಲವನ್ನು ಪಡೆಯಲು ಇರುವ ಹಬ್ಬವಾಗಿದೆ. ಶ್ರಾವಣ ಶುಕ್ಲ ಪಂಚಮಿಯಂದು ಈ ಹಬ್ಬ ಬರಲಿದೆ. ಪಂಚಮೀ ತಿಥಿಯ ದೇವತೆ ಸರ್ಪ. ಹಾಗಾಗಿ ಈ ದಿನಕ್ಕೆ ವಿಶೇಷ ಮಹತ್ತ್ವ. ಅದರಲ್ಲಿಯೂ ಈ ವರ್ಷ ಶುಕ್ರವಾರ ಬಂದಿದೆ. ಸಿದ್ಧಿ ಯೋಗದಲ್ಲಿ ಹಬ್ಬವು ಮನೋರಥವನ್ನು ಸಿದ್ಧಿಸಿಕೊಳ್ಳುವ ದಿನವಾಗಿದೆ.

ಮಿಥುನ ರಾಶಿ :

ಈ ರಾಶಿಯವರಿಗೆ ನಾಗರ ಪಂಚಮೀ ಶುಭಫಲವನ್ನು ಕೊಡುವುದು. ಕುಟುಂಬ ಸೌಖ್ಯ ದಾಯದಿ ಕಲಹವು ಇದ್ದರೆ ಅದು ನಿವಾರಣೆಯಾಗಿ ಬಾಂಧವ್ಯವು ಸಹಜ ಸ್ಥಿತಿಗೆ ಮರಳುವುದು‌. ವಿದೇಶ ಪ್ರಯಾಣದ ಆಲೋಚನೆಯೂ ಕೈಗೂಡುವುದು.

ಕನ್ಯಾ ರಾಶಿ :

ಈ ರಾಶಿಯವರಿಗೆ ಸಂಗಾತಿಯ ನಡುವೆ ಮನಸ್ತಾಪ ದೂರವಾಗಿ ಸುಖ ದಾಂಪತ್ಯವು ಸಿದ್ಧಿಸುವುದು. ಅವಿವಾಹಿತರು ಸಂಗಾತಿಯ ಅನ್ವೇಷಣೆಯನ್ನು ಮಾಡಲು ಉತ್ತಮ ಅವಕಾಶ. ಉತ್ತಮ ಸಂಗಾತಿಯ ಪ್ರಾಪ್ತಿಯಾಗಲಿದೆ.

ತುಲಾ ರಾಶಿ :

ಈ ರಾಶಿಯವರಿಗೆ ಅನಾರೋಗ್ಯವು ಕಡಿಮೆಯಾಗಲಿದೆ. ಉತ್ತಮ ಚಿಕಿತ್ಸೆ ದೊರೆಯುವುದು. ಪಾಪವು ಪರಿಹಾರವಾಗಲಿದೆ. ನರದೌರ್ಬಲ್ಯವು ನಿವಾರಣೆಯಾಗಿ ಸ್ವಸ್ಥರಾಗಲು ಸಮಯವು ಬರುವುದು.

ಕುಂಭ ರಾಶಿ :

ಆರ್ಥಿಕ ಹೊರೆಯು ಕಡಿಮೆಯಾಗಲಿದೆ. ದುಷ್ಕಾರ್ಯಕ್ಕೆ ಕಳೆದು ಹೋಗುವ ಹಣವು ಸತ್ಕಾರ್ಯಕ್ಕೆ ವಿನಿಯೋಗವಾಗಲಿದೆ. ಒತ್ತಡದ ಮನಸ್ಸು ಹಗುರಾಗಲಿದೆ.

ಇದನ್ನೂ ಓದಿ: ಶ್ರಾವಣ ಮಾಸದಲ್ಲಿ ಆ ರಾಶಿಯವರಿಗೆ ಲಕ್ಷ್ಮಿ ಯೋಗ… ಮುಟ್ಟಿದ್ದೆಲ್ಲಾ ಚಿನ್ನವೇ

ಮೀನ ರಾಶಿ :

ಈ ರಾಶಿಯವರಿಗೆ ದೈಹಿಕ‌ ಹಾಗೂ ಮಾನಸಿಕ ಆರೋಗ್ಯದಲ್ಲಿ ಚೇತರಿಕೆ ಕಾಣಿಸುವುದು. ಮಾಡುವ ಕಾರ್ಯದಲ್ಲಿ ಸ್ಥೈರ್ಯ ಕಾಣಿಸುವುದು.‌ ಭಯವು ನಿವಾರಣೆಯಾಗಿ ಮಾಡುವ ಕೆಲಸದಲ್ಲಿ ಉತ್ಸಾಹ ಇರುವುದು.

ಇಷ್ಟು ರಾಶಿಯವರು ನಾಗದೇವರಿಗೆ ಶುದ್ಧ ಮನಸ್ಸಿನಿಂದ ಪೂಜೆ ಸಲ್ಲಿಸಿ ತಮ್ಮ ಬದುಕನ್ನು ಹಸನಾಗಿಸಿಕೊಳ್ಳಲು ಅವಕಾಶವನ್ನು ಭಗವಂತ ಕರುಣಿಸಿದ್ದಾನೆ.

-ಲೋಹಿತ ಹೆಬ್ಬಾರ್ – 8762924271

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ