Daily Horoscope 5 August 2024: ಊಹಾಪೋಹಗಳಿಗೆ ಕಿವಿಗೊಡದೇ ನಿಮ್ಮ ಕಾರ್ಯದಲ್ಲಿ ಮುಂದುವರೆಯುವುದು ಈ ರಾಶಿಯವರಿಗೆ ಉತ್ತಮ
ಆಗಸ್ಟ್ 5, 2024ರ ನಿಮ್ಮ ರಾಶಿಭವಿಷ್ಯ: ಕಷ್ಟವು ನಿಮ್ಮನ್ನು ಒಂದರಮೇಲೊಂದು ಬಂದು ಕಾಡಿದರೂ ನಿಮ್ಮ ಧೈರ್ಯವು ಕುಗ್ಗದು. ಹೊಸ ಕೆಲಸವನ್ನು ನೀವು ಆರಂಭಿಸುವ ಹುನ್ನಾರವು ಒಳ್ಳೆಯದೇ. ಧಾರ್ಮಿಕ ವೃತ್ತಿಯಲ್ಲಿ ಇರುವವರಿಗೆ ಶುಭಫಲ. ಹಾಗಾದರೆ ಆಗಸ್ಟ್ 5ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.
ಜಾತಕವು ಒಬ್ಬ ವ್ಯಕ್ತಿಯ ಹುಟ್ಟಿನ ಸಮಯದಲ್ಲಿ ಗ್ರಹಗಳು ಮತ್ತು ನಕ್ಷತ್ರಗಳ ಸ್ಥಾನಗಳ ಆಧಾರದ ಮೇಲೆ ಭವಿಷ್ಯದ (Horoscope) ಮುನ್ಸೂಚನೆ ನೀಡಲಾಗುತ್ತದೆ. ಇದು ಸಾಮಾನ್ಯವಾಗಿ ಜ್ಯೋತಿಷ್ಯ ಶಾಸ್ತ್ರದೊಂದಿಗೆ ಸಂಬಂಧಿಸಿದೆ. ಜ್ಯೋತಿಷ್ಯವು ಮಾನವ ವ್ಯವಹಾರಗಳು ಮತ್ತು ಭೂಮಂಡಲದ ಸಂಗತಿಗಳನ್ನು ತಿಳಿಯಬಹುದಾಗಿದೆ. ಜಾತಕವನ್ನು ಸಾಮಾನ್ಯವಾಗಿ ಹನ್ನೆರಡು ಜ್ಯೋತಿಷ್ಯ ಚಿಹ್ನೆಗಳಾಗಿ ವಿಂಗಡಿಸಲಾಗಿದೆ. ಪ್ರತಿಯೊಂದೂ ವ್ಯಕ್ತಿಯ ಜೀವನ ಮತ್ತು ವ್ಯಕ್ತಿತ್ವದ ಮೇಲೆ ಪ್ರಭಾವ ಬೀರುತ್ತವೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕರ್ಕಾಟಕ ಮಾಸ, ಮಹಾನಕ್ಷತ್ರ: ಆಶ್ಲೇಷಾ, ಮಾಸ: ಶ್ರಾವಣ, ಪಕ್ಷ: ಶುಕ್ಲ, ವಾರ: ಸೋಮ, ತಿಥಿ: ಪ್ರತಿಪತ್, ನಿತ್ಯನಕ್ಷತ್ರ: ಆಶ್ಲೇಷಾ, ಯೋಗ: ವ್ಯತಿಪಾತ್, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 18 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06:58 ಗಂಟೆ, ರಾಹು ಕಾಲ ಬೆಳಿಗ್ಗೆ 07:53 ರಿಂದ 09:28, ಯಮಘಂಡ ಕಾಲ 11:03 ರಿಂದ ಮಧ್ಯಾಹ್ನ 12:39ರ ವರೆಗೆ, ಗುಳಿಕ ಕಾಲ ಮಧ್ಯಹ್ನ 02:14 ರಿಂದ ಸಂಜೆ 03:49ರ ವರೆಗೆ.
ಮೇಷ ರಾಶಿ: ನಿಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಮುಂದುವರಿಯುವ ಅವಕಾಶವು ಮತ್ತೆ ಸಿಗುವುದು. ವಿವಾದಗಳಿಂದ ನೀವು ಆತಂಕದಲ್ಲಿ ಇರುವಿರಿ. ಇತರರಿಗೆ ಒಳ್ಳೆಯದನ್ನು ಮಾಡುವ ಕಾರ್ಯಕ್ಕೆ ಪ್ರತಿಫಲವಿದೆ. ನಿಮ್ಮ ಕಾರ್ಯಗಳಿಗೆ ಇಂದು ಸಂಗಾತಿಯು ಬೆಂಬಲ ನೀಡಬಹುದು. ಕಛೇರಿಯಲ್ಲಿ ಉಳಿದ ಕೆಲಸಗಳನ್ನು ಮಾಡಲು ನೀವು ಇಂದು ಆದ್ಯತೆ ನೀಡುವಿರಿ. ಬೇಕಾದ ವಿಷಯದಲ್ಲಿ ಬೇಕಾದಷ್ಟನ್ನು ಮಾತ್ರ ಮಾತನಾಡಿ. ನಿಮ್ಮನ್ನು ನಂಬಿದವರಿಗೆ ಸರಿಯಾದ ವ್ಯವಸ್ಥೆಯನ್ನು ಮಾಡಿಕೊಡುವಿರಿ. ನಿಮ್ಮ ಕಲ್ಪನೆಗಳು ವಾಸ್ತವಕ್ಕೆ ಹತ್ತಿರವಿರಲಿ. ಯುಕ್ತಿಯಿಂದ ಕೆಲಸವನ್ನು ಮಾಡಿ. ವಾಹನ ಖರೀದಿಗೆ ನಿಮ್ಮ ಬಳಗದ ಸಹಕಾರ ಇರುವುದು. ಕೇಳಿದವರಿಗೆ ನಿಮ್ಮ ಸಹಾಯವು ಸಿಗಲಿದೆ. ಹೆಚ್ಚಿನ ಆದಾಯದ ಬಗದಗೆ ಚಿಂತನೆ ಮಾಡುವಿರಿ. ಕೇಳಿದ್ದಕ್ಕೆ ಮಾತ್ರ ನಿಮ್ಮ ಉತ್ತರವಿರಲಿ. ಕಳೆದ ಕೆಟ್ಟ ಕಾಲವನ್ನು ನೆನಪಿಸಿಕೊಳ್ಳುವಿರಿ. ಯಾರಾದರೂ ಸಲುಗೆಯನ್ನು ದುರುಪಯೋಗ ಮಾಡಿಕೊಳ್ಳಬಹುದು.
ವೃಷಭ ರಾಶಿ: ಕೌಟುಂಬಿಕ ತೊಂದರೆಯನ್ನು ಧಾರ್ಮಿಕ ವಿಧಾನದಿಂದ ಸರಿಮಾಡಿಕೊಳ್ಳುವುದು ಉತ್ತಮ. ಆಪ್ತರ ಜೊತೆ ಹೊಸ ಉದ್ಯೋಗವನ್ನು ಆರಂಭಿಸುವ ಪ್ರಯತ್ನದಲ್ಲಿ ಇರುವಿರಿ. ಗೃಹ ಕೃತ್ಯಗಳನ್ನು ಪೂರೈಸಲು ಇಂದು ಅನುಕೂಲ ದಿನ. ನಿಮ್ಮ ಮಾತುಗಳನ್ನು ನಿರ್ಲಕ್ಷ್ಯ ಮಾಡಿದ್ದು ನಿಮಗೆ ಗೊತ್ತಾಗಿ ನೀವು ಅವರನ್ನು ದೂರವಿಡುವಿರಿ. ಕೊನೆಯ ಹಂತದಲ್ಲಿ ಆತುರ ತೋರಿ ಎಲ್ಲ ಕಾರ್ಯವನ್ನೂ ವ್ಯತ್ಯಾಸ ಮಾಡುವಿರಿ. ಹೊರ ಬರಲು ಸಮಯವನ್ನು ಕಾಯಬೇಕಾಬಹುದು. ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವ ಮನಸ್ಸಾಗಲಿದೆ. ಹಳೆಯ ನೆನಪಿನಿಂದ ನಿಮಗೆ ಸಂಕಟವಾಗುವುದು. ನಿಮಗಿಂತ ಹಿರಿಯರಿಗೆ ಗೌರವವನ್ನು ಕೊಡುವುದು ನೆನಪಿನಲ್ಲಿ ಇರಲಿ. ಭೂಮಿಯ ವ್ಯವಹಾರವು ಸ್ವಲ್ಪ ಹಿಮ್ಮುಖವಾಗಿ ಹೋಗಬಹುದು. ಊಹಾಪೋಹಗಳಿಗೆ ಕಿವಿಗೊಡದೇ ನಿಮ್ಮ ಕಾರ್ಯದಲ್ಲಿ ಮುಂದುವರಿಯಿರಿ. ನೀವು ಇಂದು ಮಕ್ಕಳ ಜೊತೆ ಹೆಚ್ಚಿನ ಸಮಯವನ್ನು ಕಳೆಯುವಿರಿ.
ಮಿಥುನ ರಾಶಿ: ಅಧಿಕಾರವು ನಿಮ್ಮದಾದ ಕಾರಣ ಜವಾಬ್ದಾರಿಯೂ ನಿಮ್ಮದೇ ಆಗಿರುತ್ತದೆ. ನಿಮಗೆ ಇಂದು ಧೈರ್ಯವು ಕಡಿಮೆ ಆದಂತೆ ತೋರುತ್ತದೆ. ಯಾವ ಕೆಲಸವನ್ನೂ ನೀವು ಭಯಮುಕ್ತವಾಗಿ ಮಾಡಲಾರಿರಿ. ಆಸ್ತಿಯನ್ನು ಇನ್ನೊಬ್ಬರು ಒಡೆದುಕೊಳ್ಳಲು ಸಂಚು ರೂಪಿಸುತ್ತಿರುವರು. ಆಹಾರವು ನಿಮಗೆ ಸರಿಯಾದ ಸಮಯಕ್ಕೆ ಸಿಗದು. ನಿಮ್ಮ ಬೇಜವಾಬ್ದಾರಿಯ ಮಾತುಗಳು ನಿಮ್ಮ ಉದ್ಯೋಗಕ್ಕೆ ತೊಂದರೆಯಾಗುವುದು. ತಾಯಿಯಿಂದ ನಿಮಗೆ ಬೆಂಬಲವು ಸಿಗಬಹುದು. ಆಲಸ್ಯದಿಂದ ಹೊರಬಂದರೆ ನಿಮಗೆ ಹತ್ತಾರು ದಾರಿಗಳು ಕಾಣಿಸಿಕೊಂಡಾವು. ಮಿತಿ ಮೀರಿದ ನಿಮ್ಮ ವರ್ತನೆಯು ಕಿರಿಕಿರಿಯನ್ನು ಉಂಟುಮಾಡೀತು. ನಿಮ್ಮ ಮಾತನ್ನು ಸಂಗಾತಿಯು ತಳ್ಳಿಹಾಕಿದ್ದು ನಿಮಗೆ ಬೇಸರ ತಂದೀತು. ಪರಿಹಾರವನ್ನು ಕಂಡುಕೊಳ್ಳಬಹುದು. ನಿಮ್ಮ ಇಷ್ಟದವರನ್ನು ಭೇಟಿ ಮಾಡುವಿರಿ.
ಕಟಕ ರಾಶಿ: ನಾಯಕರಾಗುವುದಕ್ಕಿಂತ ಹಾಗೆ ನಡೆದುಕೊಳ್ಳುವುದೂ ಮುಖ್ಯವಾಗಲಿದೆ. ಕಠಿಣ ಪರಿಶ್ರಮದಿಂದ ಅಂದುಕೊಂಡಿದ್ದು ಸಾಧಿಸುವಿರಿ. ನಿಮ್ಮ ಗೌಪ್ಯತೆಯನ್ನು ಕಾಪಾಡಲು ನೀವು ವಿಫಲರಾಗುವಿರಿ. ಉದ್ಯೋಗದಲ್ಲಿ ನೀವು ದಿಕ್ಕು ತೋಚದೆ ಬಹಳ ಆತಂಕ ಪಡುವಿರಿ. ದಿನಚರ್ಯೆಯಿಂದ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವಿರಿ. ನಿಮ್ಮದೇ ಆದ ಕೆಲಸಗಳು ನಿಮಗೆ ಬೇಕಾದಷ್ಟು ಇದ್ದರೂ ನೀವು ಅವುಗಳನ್ನು ಲೆಕ್ಕಿಸದೇ ನೀವು ಆರಾಮಾಗಿ ಇರುವಿರಿ. ವಿದೇಶಕ್ಕೆ ಹೋಗುವ ಸೂಚನೆ ಇಂದು ಸಿಗಬಹುದು. ಮಕ್ಕಳಿಂದ ಸ್ವಲ್ಪ ಕಿರಿಕಿರಿಯಾದೀತು. ಮಾತನಾಡದೇ ನಿಮ್ಮ ಕೆಲಸದಲ್ಲಿ ಮಗ್ನರಾಗಿರಿ. ಹೊಸ ಜನ, ಹೊಸ ಸ್ಥಳ ಹಾಗೂ ಹೊಸ ವಿಚಾರದ ಕಡೆ ಗಮನವು ಬೇಕೆನಿಸುವುದು. ನಿಮ್ಮ ಯಶಸ್ಸನ್ನು ಮನೆಯವರು ಸಂಭ್ರಮಿಸಬಹುದು. ರಾಜಕಾರಣದತ್ತ ನಿಮ್ಮ ಒಲವು ಹೆಚ್ಚಾಗುವುದು. ಪ್ರಭಾವಿ ವ್ಯಕ್ತಿಗಳು ನಿಮ್ಮನ್ನು ಪರಿವರ್ತಿಸುವರು. ಇನ್ನೊಬ್ಬರಿಂದ ನಿಮಗೆ ಉತ್ತೇಜನ ಸಿಗಲಿದೆ. ಸಹೋದ್ಯೋಗಿಗಳ ಬಗ್ಗೆ ನಿಮಗೆ ಅನಾದರ ಬರಬಹುದು.
ಸಿಂಹ ರಾಶಿ: ಮಕ್ಕಳಿಂದ ನಿಮ್ಮ ತೊಂದರೆ ದೂರಾಗುವುದು. ನಿಮ್ಮರ ಜೊತೆ ನಿಮಗೆ ಕೆಲಸ ಮಾಡಲು ಸಾಧ್ಯವಾಗದೇ ಇರಬಹುದು. ನಿಮ್ಮ ಜೊತೆ ಕೆಲಸ ಮಾಡುವವರೂ ನಿಮ್ಮ ವರ್ತನೆಯನ್ನು ಸಹಿಸಲಾರದೇ ದೂರ ಉಳಿಯಬಹುದು. ಹೂಡಿಕೆಯಿಂದ ನಿಮಗೆ ಆರ್ಥಿಕ ತೊಂದರೆ ಅನಿಸುವುದು. ಆಂತರಿಕ ಕಲಹವು ಅತಿಯಾದ ವ್ಯಥೆಯನ್ನು ಉಂಟುಮಾಡೀತು. ತುರ್ತು ಖರ್ಚಿಗೆ ಯಾರನ್ನಾದರೂ ಆಶ್ರಯಿಸುವಿರಿ. ಸೌಂದರ್ಯಕ್ಕೆ ಮನಸೋಲುವ ಸಾಧ್ಯತೆ ಇದೆ. ನಿಮ್ಮ ಮನಸ್ಸಿನ ಮೇಲೆ ಆದಷ್ಟು ನಿಯಂತ್ರಣವಿರಲಿ. ಬೇಡದ್ದರ ಕಡೆಗೆ ಮನಸ್ಸನ್ನು ಹರಿಸುವುದು ಬೇಡ. ಎಲ್ಲವನ್ನೂ ನಂಬಿಕೆಯ ಆಧಾರದ ಮೇಲೆ ಸ್ವೀಕರಿಸಬೇಕಿಲ್ಲ. ಮಕ್ಕಳಿಗೆ ಜವಾಬ್ದಾರಿಯನ್ನು ಕೊಟ್ಟು ನಿಶ್ಚಿಂತೆಯಿಂದ ಇರುವುದು ಸುಖವೆನಿಸಬಹುದು. ಸರ್ಕಾರಿ ಉದ್ಯೋಗಿಗಳಿಗೆ ನಿಮ್ಮ ಚಾತುರ್ಯದ ಕಾರಣದಿಂದ ಹೆಚ್ಚಿನ ಅಧಿಕಾರವು ಪ್ರಾಪ್ತವಾಗುವುದು. ಧೈರ್ಯದಿಂದ ಮುನ್ನಡೆದರೆ ಯಾವ ತೊಂದರೆಯೂ ಕ್ಲಿಷ್ಟವಾಗದು.
ಕನ್ಯಾ ರಾಶಿ: ಕುಟುಂಬದಲ್ಲಿ ಬರುವ ಕಲಹಕ್ಕೆ ವಿರಾಮದ ಅಗತ್ಯವಿದೆ. ದೀರ್ಘ ಮಾಡಿಕೊಂಡು ದಿನವನ್ನು ಹಾಳುಮಾಡಿಕೊಳ್ಳಬೇಕಾಗುವುದು. ಅನೀಕ್ಷಿತ ತಿರುವುಗಳು ನಿಮಗೆ ಬಹಳ ಉದ್ವೇಗವನ್ನು ಉಂಟುಮಾಡೀತು. ಆತುರದಲ್ಲಿ ಏನನ್ನಾದರೂ ಮಾಡಿಕೊಳ್ಳುವ ಸಾಧ್ಯತೆ ಇದೆ. ಪಕ್ಷಪಾತಕ್ಕೆ ಸಂಬಂಧಿಸಿದಂತೆ ಅಪವಾದಗಳು ಕೇಳಿಬರಬಹುದು. ಉಪಕಾರದ ಸ್ಮರಣೆಯನ್ನು ನೀವು ಸದಾ ಇಟ್ಟಕೊಳ್ಳಬೇಕಾದೀತು. ದೂರ ಪ್ರಯಾಣವನ್ನು ಮಾಡುವ ಉತ್ಸಾಹವಿಲ್ಲದಿದ್ದರೂ ಮಾಡಬೇಕಾಗುವುದು. ಮಕ್ಕಳ ಜೊತೆಗಿನ ಸಲುಗೆಯು ನಿಮಗೆ ಕಷ್ಟವಾದೀತು. ಕೆಟ್ಟ ಕೆಲಸಗಳು ನಿಮ್ಮನ್ನು ಆಕರ್ಷಿಸಬಹುದು. ಸ್ವಂತಿಕೆಯನ್ನು ಇಲ್ಲಿ ಉಪಯೋಗಿಸಿ ಕೆಲಸಮಾಡಿ. ನ್ಯಾಯಾಲಯದ ವಿಚಾರದಲ್ಲಿ ನಿಮಗೆ ಹಿನ್ನಡೆಯ ಸಾಧ್ಯತೆ ಇದೆ. ಮಕ್ಕಳ ತೀರ್ಮಾನಕ್ಕೆ ನೀವು ಬದ್ಧರಾಗಬೇಕಾಗುವುದು. ಮನೆಯಲ್ಲಿಯೂ ನಿಮ್ಮ ಮಾತಿಗೆ ಸರಿಯಾದ ಬೆಲೆಯೂ ಸಿಗದು.
ತುಲಾ ರಾಶಿ: ನಿಮಗೆ ಸಿಗುವ ಜಯದಿಂದ ಕುಟುಂಬಕ್ಕೆ ಸಂತಸ. ನಿಮಗೆ ಸಮಾಜಮುಖೀ ಕಾರ್ಯವನ್ನು ಮಾಡಲು ಉತ್ಸಾಹವಿದ್ದು ನಿಮಗೆ ಮಾರ್ಗದರ್ಶನದ ಕೊರತೆ ಕಾಣಬಹುದು. ಅನ್ನಸಂತರ್ಪಣೆಯ ಪುಣ್ಯವು ಪ್ರಾಪ್ತವಾಗಲಿದೆ. ಸಂಗಾತಿಯ ವಿಚಾರದಲ್ಲಿ ನೀವು ನಿರ್ಲಕ್ಷ್ಯ ತೋರಿಸಿದ್ದೀರಿ ಎಂದು ನಿಮ್ಮನ್ನು ದೂರಬಹುದು. ಅಕಾರಣಾವಾಗಿ ಬೈಯುವುದು ಸರಿಯಲ್ಲ. ನಿಮ್ಮ ಮೇಲೆ ಅಪನಂಬಿಕೆಗಳು ಬರಬಹುದು. ವೈಯಕ್ತಿಕ ಖರ್ಚುಗಳ ಬಗ್ಗೆ ಲಕ್ಷ್ಯವಿರಲಿ. ತಂದೆಯ ಸಹಕಾರವು ನಿಮಗೆ ಸಿಗಲಿದೆ. ಸೋಲಿಂದ ಹೆದರುವ ಅವಶ್ಯಕತೆ ಇಲ್ಲ. ಧೃತಿಗೆಡದೇ ಕಾರ್ಯವನ್ನು ಸಾಧಿಸಲು ಯೋಜನೆಯನ್ನು ಹೂಡಿ. ಜೀವನಕ್ಕೆ ಸಂಬಂಧಿಸಿದ ವಿಚಾರದಲ್ಲಿ ಗಟ್ಟಿಯಾದ ತೀರ್ಮಾನವನ್ನು ಪಡೆಯುವುದು ಕಷ್ಟವಾಗುವುದು. ವಿವಾದವನ್ನು ಮಾಡಿಕೊಳ್ಳಲು ಮನಸ್ಸಾಗದು. ವಿಶ್ವಾಸವನ್ನು ಉಳಿಸಿಕೊಳ್ಳುವ ಬಗ್ಗೆ ನಿಮ್ಮ ಪ್ರಯತ್ನ ಇರುವುದು.
ವೃಶ್ಚಿಕ ರಾಶಿ: ನಿಮ್ಮ ಸಮಾನರಿಗೂ ಕೆಲವು ಸಂದರ್ಭದಲದಲಿ ಗೌರವ ಕೊಡಬೇಕಾಗುವುದು. ಮಕ್ಕಳ ವಿಚಾರದಲ್ಲಿ ಸಂತೋಷವಿರಲಿದೆ. ಸ್ತ್ರೀಯರು ಪುರುಷರನ್ನೂ ಪುರುಷರು ಸ್ತ್ರೀಯರನ್ನು ದ್ವೇಷಿಸುವರು. ಪಾಲುದಾರಿಕೆಯ ವ್ಯವಹಾರಗಳಲ್ಲಿ ಸಂಯಮವಿರಲಿ. ಕಷ್ಟವು ನಿಮ್ಮನ್ನು ಒಂದರಮೇಲೊಂದು ಬಂದು ಕಾಡಿದರೂ ನಿಮ್ಮ ಧೈರ್ಯವು ಕುಗ್ಗದು. ಹೊಸ ಕೆಲಸವನ್ನು ನೀವು ಆರಂಭಿಸುವ ಹುನ್ನಾರವು ಒಳ್ಳೆಯದೇ. ಧಾರ್ಮಿಕ ವೃತ್ತಿಯಲ್ಲಿ ಇರುವವರಿಗೆ ಶುಭಫಲ. ಹಣದ ಚಿಂತೆ ಇರಲಿದ್ದು ಹೊಂದಿಸಿಕೊಳ್ಳಲು ಬೇಕಾದ ಕ್ರಮವನ್ನು ಕೈಗೊಳ್ಳುವಿರಿ. ನಿಮ್ಮ ದೌರ್ಬಲ್ಯಗಳನ್ನು ನೀವು ಇಂದು ಅವಲೋಕನ ಮಾಡಿಕೊಳ್ಳಬಹುದು. ಸಂದರ್ಭಕ್ಕೆ ಯೋಗ್ಯವಾದ ಮಾತುಗಳನ್ನು ನೀವಾಡಿ. ನಿಮ್ಮ ಸೋಲನ್ನು ಸಾಧಾರಣಕ್ಕೆ ಒಪ್ಪಿಕೊಳ್ಳಲಾರಿರಿ. ಅಂದುಕೊಂಡಂತೆ ಕಾರ್ಯವು ಸಾಗದು ಎಂಬ ಕೊರಗು ಇರುವುದು. ನಿಮ್ಮ ಬಲದ ಮೇಲೇ ಕೆಲಸವನ್ನು ಪ್ರಾರಂಭಿಸಿ. ಕೆಲವು ಅನುಭವಗಳು ನಿಮಗೆ ಪಾಠವಾಗಲಿವೆ.
ಧನು ರಾಶಿ: ಕಾನೂನಿಗೆ ಸಮ್ಮತವಾದ ಕಾರ್ಯವನ್ನು ಮಾಡುವಿರಿ. ನಿಮ್ಮ ತಿಳಿವಳಿಕೆಯ ಮಟ್ಟವು ಇತರರಿಗೆ ತಿಳಿಯಲಿದೆ. ನಿಮ್ಮ ಬಹುದಿನದ ನಿರೀಕ್ಷೆ ಇಂದು ಸಾಕಾರಗೊಳ್ಳಬಹುದು. ಕೃಷಿಯ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳುವಿರಿ. ನಕಾರಾತ್ಮಕ ಚಿಂತನೆಯನ್ನು ಮಾಡಿ ಅವಕಾಶಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ದುಃಖವನ್ನು ಮರೆಯುವ ಸಂದರ್ಭವು ಬರಲಿದೆ. ನಿಮಗೆ ಇಂದು ಅಪರಿಚಿತರಿಂದ ಅಪಮಾನವಾಗಬಹುದು. ನಿಮ್ಮ ಅಭಿಮಾನಕ್ಕೆ ತೊಂದರೆಯಾಗಬಹುದು. ಖಾಸಗಿ ಉದ್ಯೋಗಿಗಳಿಗೆ ವೇತನ ಹೆಚ್ಚಳಕ್ಕೆ ನಿಮ್ಮನ್ನು ಹಾಗೂ ನಿಮ್ಮ ಕಾರ್ಯವನ್ನೂ ವೀಕ್ಷಿಸಬಹುದು. ಹೂಡಿಕೆಯಿಂದ ಲಾಭವಾಗುವ ವಿಧಾನ ತಿಳಿಯುವಿರಿ. ವಿದ್ಯಾರ್ಥಿಗಳು ಪ್ರೋತ್ಸಾಹದ ಕೊರತೆಯಿಂದ ಹಿಂದೆ ಉಳಿದಾರು. ಯಾರಮೇಲೂ ಒತ್ತಡಬೇಡ. ಸಂಗಾತಿಯ ಮಾತುಗಳು ನಿಮಗೆ ಅನಿರೀಕ್ಷಿತ ಆದೀತು. ಸ್ಥಿರಾಸ್ತಿಯನ್ನು ಮಾರಾಟ ಮಾಡುವ ಪ್ರಯತ್ನದಲ್ಲಿ ಇರುವಿರಿ. ಸ್ವಂತ ಉದ್ಯಮಕ್ಕೆ ಒತ್ತಾಯ ಬರಬಹುದು.
ಮಕರ ರಾಶಿ: ಇಂದು ನೀವು ಬೇರೆಯವರ ಕಷ್ಟಕ್ಕೆ ಸ್ಪಂದಿಸಬೇಕಾಗಬಹುದು. ಸ್ವಂತ ಕಾರ್ಯಕ್ಕೆ ಸಮಯವನ್ನು ಪ್ರಯತ್ನಪೂರ್ವಕವಾಗಿ ತೆಗೆದುಕೊಳ್ಳಬೇಕಾಗಬಹುದು. ನಿರುದ್ಯೋಗದ ಬಗ್ಗೆ ನಿಮಗೆ ಬೇಸರವಾಗಬಹುದು. ನಿಮ್ಮ ಶಿಸ್ತನ್ನು ಪಾಲಿಸಲಾಗದೇ ಸಹೋದ್ಯೋಗಿಗಳು ಗೊಣಗುವರು. ಕುಟುಂಬವನ್ನು ನಿಭಾಯಿಸುವ ಸಾಮರ್ಥ್ಯವನ್ನು ನೀವು ಬೆಳಸಿಕೊಂಡಿದ್ದೀರಿ. ನಿಮ್ಮ ನಡೆಯನ್ನು ಆಡಿಕೊಳ್ಳುವುದು ನಿಮ್ಮವರಿಗೆ ಸಹಜವಾಗಿರುತ್ತದೆ. ವೇಗವಾದ ವಾಹನ ಚಾಲನೆಯಿಂದ ದಂಡ ತೆರಬೇಕಾಗಬಹುದು. ಕಾಲಿನ ಬಾಧೆಯಿಂದ ಕಷ್ಟವಾಗುವುದು. ಯಾವುದನ್ನೂ ಗಂಭೀರವಾಗಿ ತೆಗೆದುಕೊಳ್ಳುವ ಅವಶ್ಯಕತೆ ಇರುವುದಿಲ್ಲ. ಪಾಲುದಾರಿಕೆಯಲ್ಲಿ ಅನವಶ್ಯಕ ವಾದವನ್ನು ಮಾಡಬೇಕಾಗುವುದು. ಉದ್ಯಮವು ಬೆಳವಣಿಗೆಯಿಂದ ಸಂತೋಷವಾಗಲಿದೆ.
ಕುಂಭ ರಾಶಿ: ಇಂದು ನಿಮಗೆ ಧಾರ್ಮಿಕ ಕಾರ್ಯದಲ್ಲಿ ಆಸಕ್ತಿ ಕಡಿಮೆ ಆಗುವುದು. ಬಹಳ ದಿನಗಳ ಅನಂತರ ಹಿರಿಯರ ಭೇಟಿಯಿಂದ ಖುಷಿಯಾಗುವುದು. ಯಂತ್ರೋಪಕರಣಗಳಿಗೆ ನೀವು ಧನವನ್ನು ಕಳೆದುಕೊಳ್ಳುವಿರಿ. ಸಂಗಾತಿಯ ಮಾತನ್ನು ಕೇಳುವ ವ್ಯವಧಾನವು ಇಂದು ಕಡಿಮೆ ಇರುವುದು. ಸಾಮಾನ್ಯವಾದ ಕೆಲಸವನ್ನು ಮಾಡಲೂ ಇಂದು ಜಾಡ್ಯ ಬರಬಹುದು. ಕಳೆದುಹೋದ ವಸ್ತುಗಳಿಗೆ ದುಃಖವಾಗುವುದು. ಮಂದಗತಿಯ ನಿಮ್ಮ ಕೆಲಸಕ್ಕೆ ಸಮಯವು ಸಾಲದೆಂದು ಅನ್ನಿಸಲಿದೆ. ಬೇಸರವನ್ನು ನೀವು ನುಂಗಿಕೊಳ್ಳುವುದು ಅಭ್ಯಾಸವಾದ ಸಂಗತಿಯಾಗಿದೆ. ಭೂಮಿಯನ್ನು ಕಳೆದುಕೊಳ್ಳಬೇಕಾಗಬಹುದು. ವಿನಾ ಕಾರಣ ಕಾಲಹರಣ ಮಾಡಲಿದ್ದು ಕಛೇರಿಯ ಕೆಲಸದ ಬಗ್ಗೆಯೇ ಚಿಂತೆ ಇರದು. ಮಾರಾಟದ ವಿಚಾರವಾಗಿ ನೀವು ಬೇರೆ ಊರಿಗೆ ಹೋಗಬೇಕಾಗಬಹುದು. ವಾತರೋಗದಿಂದ ನಿಮಗೆ ಕಷ್ಟವಾಗುವುದು.
ಮೀನ ರಾಶಿ: ಇಂದು ನಿಮ್ಮ ಉದ್ಯೋಗದಲ್ಲಿ ಉತ್ತಮ ಪ್ರಗತಿಯು ಇರುವುದು. ವ್ಯವಹಾರಿಕ ನಷ್ಟವನ್ನು ಸರಿ ಮಾಡಿಕೊಳ್ಳುವ ಬಗೆಯನ್ನು ಚಿಂತಿಸುವಿರಿ. ದೈವಭಕ್ತಿಯ ಕೊರತೆ ಹೆಚ್ಚು ಇರಲಿದೆ. ನಿಮ್ಮ ಮಾತನ್ನು ಬದಲಾಯಿಸುವಿರಿ. ಮನ ಬಂದಂತೆ ವರ್ತನೆಯನ್ನು ನಿಲ್ಲಿಸಿ. ನಿಮ್ಮವರು ನಿಮಗೆ ಹತ್ತಿರವಾಗಲು ಅನೇಕ ಕಾರಣಗಳು ಇರಬಹುದು. ಈ ವಿಚಾರದಲ್ಲಿ ನೀವು ಅಸಹಾಯಕರಾಗುವುದು ಯೋಗ್ಯವಿದೆ. ವಾಹನ ಸಂಚಾರದಲ್ಲಿ ಗಮನಬೇಕು. ಸಂಗಾತಿಯನ್ನು ಹೆಚ್ಚು ಪ್ರೀತಿಸುವ ಅವಕಾಶ ಸಿಗಬಹುದು. ಆಕೆಗೆ ಬೇಕಾದ ವಸ್ತುಗಳನ್ನು ನೀವು ತಂದುಕೊಡುವಿರಿ. ನಿಮ್ಮ ನಡುವೆ ಸಂತೋಷದ ಬಾಂಧವ್ಯ ಇನ್ನಷ್ಟು ಬಿಗಿಯಾಗುವುದು. ಹಳೆಯ ಕೆಲಸದಲ್ಲಿ ಮಂದಗತಿ ಇರಲಿದೆ. ವ್ಯಾಪಾರದಲ್ಲಿ ಅಲ್ಪ ಲಾಭವೇ ಆದರೂ ನೆಮ್ಮದಿ. ಯಾರಿಗೋ ಸಹಾಯ ಮಾಡಲು ಹೋಗಿ ಆಪತ್ತಿನಲ್ಲಿ ಸಿಕ್ಕಿಕೊಳ್ಳಬಹುದು.
ಲೋಹಿತ ಹೆಬ್ಬಾರ್ – 8762924271 (what’s app only)