Nithya Bhavishya: ಧನು, ಮಕರ, ಕುಂಭ, ಮೀನಾ ರಾಶಿಯವರ ಇಂದಿನ ಭವಿಷ್ಯ ಹೀಗಿದೆ

Rakesh Nayak Manchi

| Edited By: ರಮೇಶ್ ಬಿ. ಜವಳಗೇರಾ

Updated on:Mar 16, 2023 | 6:39 AM

ನೀವು ಧನು, ಮಕರ, ಕುಂಭ, ಮೀನಾ ರಾಶಿವರೇ? ಹಾಗಿದ್ದರೆ ಇಂದಿನ (2023 ಮಾರ್ಚ್ 16) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Nithya Bhavishya: ಧನು, ಮಕರ, ಕುಂಭ, ಮೀನಾ ರಾಶಿಯವರ ಇಂದಿನ ಭವಿಷ್ಯ ಹೀಗಿದೆ
ಇಂದಿನ ರಾಶಿ ಭವಿಷ್ಯ

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಮಾರ್ಚ್ 16 ಗುರುವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1945, ಶುಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಕುಂಭ ಮಾಸ, ಮಹಾನಕ್ಷತ್ರ : ಪೂರ್ವಾಭಾದ್ರ, ಮಾಸ : ಫಾಲ್ಗುಣ, ಪಕ್ಷ : ಕೃಷ್ಣ, ವಾರ : ಗುರು, ತಿಥಿ : ನವಮೀ, ನಿತ್ಯನಕ್ಷತ್ರ : ಪೂರ್ವಾಷಾಢ, ಯೋಗ : ವ್ಯತಿಪಾತ್, ಕರಣ : ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 41 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 41 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ14:12 – 15:42ರ ವರೆಗೆ, ಯಮಘಂಡ ಕಾಲ ಬೆಳಗ್ಗೆ06:41 – 08:112ರವರೆಗೆ, ಗುಳಿಕ ಕಾಲ ಬೆಳಗ್ಗೆ09:41 – 11:11ರ ವರೆಗೆ.

ಧನುಸ್ಸು: ಇಂದು ನಿಮ್ಮ ಜೀವನದಲ್ಲಿ ಬಹಳಷ್ಟು ಪ್ರಮುಖ ಬದಲಾವಣೆಗಳು ಆಗಬಹುದು. ವೃತ್ತಿಜೀವನವು ಉತ್ತಮವಾದ ಬದಲಾವಣೆಯನ್ನು ಬಯಸಲಿದೆ‌. ತೀರ್ಥಕ್ಷೇತ್ರಗಳಿಗೆ ಪ್ರಯಾಣ ಮಾಡುವ ಸಂದರ್ಭಗಳು ಎದುರಾಗಬಹುದು. ನೀವು ಹೆಚ್ಚು ಶ್ರಮಪಡದೇ ಉತ್ತಮ ಮೊತ್ತವನ್ನು ಗಳಿಸಲು ಪ್ರಾರಂಭಿಸುವ ಸಾಧ್ಯತೆ ಇದೆ. ನೀವು ತೆಗೆದುಕೊಳ್ಳುವ ನಿರ್ಧಾರಗಳು ದೀರ್ಘಕಾಲೀನ ಪರಿಣಾಮಗಳನ್ನು ಬೀರುವುದರಿಂದ ಸಮಯವನ್ನು ತೆಗೆದುಕೊಳ್ಳಿ. ನೀವು ಚೆನ್ನಾಗಿ ಸಂವಹನ ಮಾಡಿ ಮತ್ತು ನಿಮ್ಮ ಕೆಲಸದ ಮೇಲೆ ಗಮನಹರಿಸಲು ಸಮಯವನ್ನು ತೆಗೆದುಕೊಳ್ಳುವಿರಿ.

ಮಕರ: ಕುಟುಂಬಕ್ಕೆ ನೂತನ ಸದಸ್ಯರ ಆಗಮನವಾಗಲಿದೆ‌. ಈ ದಿನ ನಿಮಗೆ ವಿಶ್ರಾಂತಿ ಕಡಿಮೆಯಾಗಲಿದೆ. ನಿಮ್ಮ ಜೀವನದ ಪ್ರತಿಯೊಂದು ಅಂಶವು ನೀವು ಬಯಸಿದಂತೆ ಆಗಲಿದೆ. ನೀವು ಹೋರಾಟದ ಮೂಲಕ ಇಂದಿನ‌ ಸೌಲಭ್ಯವನ್ನು ಪಡೆದುಕೊಳ್ಳುವಿರಿ. ನಿಮಗಿಂತ ಕಿರಿಯ ಜನರು ನಿಮ್ಮ ಸ್ಥಾನವನ್ನು ಪಡೆದುಕೊಳ್ಳಲು ಪ್ರಯತ್ನಿಸುವರು. ನಿಮ್ಮ ಪ್ರತಿಭೆಯನ್ನು ನವೀಕರಿಸಿಕೊಳ್ಳುವುದು ಉತ್ತಮ. ಆದಾಯದ ಅಂದಾಜಿನ ಆಧಾರದ ಮೇಲೆ ನೀವು ಈಗಾಗಲೇ ಹೂಡಿಕೆ ಮಾಡಿರುತ್ತೀರಿ. ನಿಮಗೆ ಆರ್ಥಿಕತೆಯ ಕುರಿತು ನಿಮ್ಮಲ್ಲಿ ಆತಂಕ ಮತ್ತು ಚಿಂತೆಗಳು ಇರಲಿವೆ.

ಕುಂಭ: ಇಂದು ನಿಮ್ಮ ಎಂದಿಗಿಂತಲೂ ಪ್ರಬಲ ವ್ಯಕ್ತಿ ಎನ್ನುವುದನ್ನು ಸಾಬೀತುಪಡಿಸಲಿದ್ದೀರಿ. ನಿಮ್ಮ ವೃತ್ತಿಗೆ ನೀವು ಹೆಚ್ಚು ಸಮಯ ಮತ್ತು ಗಮನವನ್ನು ನೀಡುವುದು ಕಷ್ಟವಾದೀತು. ನಿಮ್ಮ ಸಂಗಾತಿಯಿಂದ ನೀವು ಸಾಕಷ್ಟು ಪ್ರೀತಿಯನ್ನು ಸ್ವೀಕರಿಸುತ್ತೀರಿ. ಇತರ ಜನರನ್ನು ಸಂತೋಷಪಡಿಸುವುದು ಇಂದು ನಿಮ್ಮ ಉತ್ಸಾಹವನ್ನು ಹೆಚ್ಚಿಸುತ್ತದೆ. ನಿಮ್ಮಿಂದ ಸಾಧ್ಯವಾದಷ್ಟು ಸಂತೋಷವನ್ನು ಕೊಡಲು ಪ್ರಯತ್ನಿಸಿ. ಕುಟುಂಬವು ನಿಮ್ಮ ರಕ್ಷಣೆಗೆ ಇರಲಿದೆ.

ಮೀನ: ಇಂದು ಸೌಂದರ್ಯದ ಕುರಿತು ಅತಿಯಾದ ಕಳಜಿಯನ್ನು ಹೊಂದಲಿದ್ದೀರಿ. ಪ್ರತಿಕೂಲ ಪರಿಸ್ಥಿತಿಗಳನ್ನು ನಿವಾರಿಸಿಕೊಳ್ಳುವ ಚಾಣಕ್ಷತನ ನಿಮ್ಮಲ್ಲಿದೆ. ಎದುರಾಳಿಗಳು ತಾವೇ ಆರಂಭಿಸಿದ ಆಟದಲ್ಲಿ ತಾವೇ ಸೋಲುವರು. ನಿಮ್ಮ ಕೆಲವು ಸಂಕೀರ್ಣ ಕೆಲಸಗಳು ಪರಿಹರಿಸಲ್ಪಡುತ್ತವೆ. ದಿನದ ಆರಂಭವು ಸುಂದರವಾಗಿಯೂ ಉತ್ಸಾಹಭರಿತವಾಗಿಯೂ ಇದ್ದರೆ ನಿಮ್ಮ ಪ್ರಯತ್ನಗಳು ಫಲಪ್ರದವಾಗುತ್ತವೆ. ಸರಿಯಾದ ಮಾರ್ಗವನ್ನು ಆಯ್ಕೆ ಮಾಡಿಕೊಂಡರೆ ಮಾತ್ರ ವಿಜಯಕ್ಕೆ ಕಾರಣವಾಗುತ್ತದೆ. ಹೊಸ ಆಲೋಚನೆಗಳನ್ನು ಪ್ರಶಂಸಿಸಲಾಗುತ್ತದೆ. ಧಾರ್ಮಿಕ ಆಸಕ್ತಿ ಹೆಚ್ಚಲಿದೆ.

ಲೇಖನ-ಲೋಹಿತಶರ್ಮಾ ಇಡುವಾಣಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada