Daily Horoscope 5 July: ಇಂದಿನ ರಾಶಿಭವಿಷ್ಯ, ಈ ರಾಶಿಯವರಿಗೆ ನಾನಾ ಮೂಲಗಳಿಂದ ವಿವಿಧ ಸಂಪತ್ತುಗಳು ಬರಲಿದೆ
ಇಂದಿನ (2023 ಜುಲೈ 05) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಕೆಲವರು ಪ್ರತಿನಿತ್ಯ ಬೆಳಗ್ಗೆ ಎದ್ದ ಕೂಡಲೇ ತಮ್ಮ ರಾಶಿ ಭವಿಷ್ಯ (Daily horoscope) ನೋಡುವ ಹವ್ಯಾಸವನ್ನು ಇಟ್ಟುಕೊಂಡಿರುತ್ತಾರೆ. ಇಂದಿನ ರಾಶಿ ಭವಿಷ್ಯ ಏನು ಹೇಳುತ್ತದೆ ಅಥವಾ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಇದರ ಜೊತೆಗೆ ನಿತ್ಯಪಂಚಾಂಗ ಕೂಡ ಓದುತ್ತಾರೆ. ಹಾಗಾದರೆ ಇಂದಿನ (2023 ಜುಲೈ 05) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಭವಿಷ್ಯ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಮಿಥುನ ಮಾಸ, ಮಹಾನಕ್ಷತ್ರ: ಆರ್ದ್ರಾ, ಮಾಸ: ಆಷಾಢ, ಪಕ್ಷ: ಕೃಷ್ಣ, ವಾರ: ಬುಧ, ತಿಥಿ: ದ್ವಿತೀಯಾ, ನಿತ್ಯನಕ್ಷತ್ರ: ಶ್ರವಣಾ, ಯೋಗ: ವೈಧೃತಿ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 09 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 04 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:37 ರಿಂದ 02:14ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 07:46 ರಿಂದ 09:23ರ ವರೆಗೆ, ಗುಳಿಕ ಕಾಲ ಬೆಳಗ್ಗೆ 11:00 ರಿಂದ ಮಧ್ಯಾಹ್ನ 12:37ರ ವರೆಗೆ.
ಮೇಷ: ಆರೋಗ್ಯದಿಂದ ನಿಮ್ಮ ಉತ್ಸಾಹವು ಇಮ್ಮಡಿಸಬಹುದು. ಆತ್ಮವಿಶ್ವಾಸವನ್ನು ಕಳೆದುಕೊಳ್ಳದೇ ಮುಂದೆ ಸಾಗಿರಿ. ಇಷ್ಟಪಟ್ಟವರ ಜೊತೆ ಸಮಯವನ್ನು ಕಳೆಯಬಯಸುವಿರಿ. ಮಕ್ಕಳ ವಿಚಾರದಲ್ಲಿ ನೀವು ಅಸ್ವಂತ್ರರು. ನಿಮ್ಮ ಮಾತು ಇತರರಿಗೆ ಇಷ್ಟವಾಗದೇ ಇದ್ದೀತು. ಒಳ್ಳೆಯದರ ನಿರೀಕ್ಷೆಯಲ್ಲಿ ನೀವು ಇದ್ದು, ದಿನಾಂತ್ಯದಲ್ಲಿ ಸಿಗುವ ಸಾಧ್ಯತೆ ಇದೆ. ಧಾರ್ಮಿಕ ಆಚರಣೆಗಳನ್ನು ಮಾಡಲು ಇಷ್ಟಪಡಬಹುದು. ನಿಮ್ಮ ದೃಷ್ಟಿಕೋನವನ್ನು ಬದಲಿಸಿಕೊಳ್ಳಲು ಪ್ರಯತ್ನಿಸಿ. ಉದ್ಯೋಗಾವಕಾಶಗಳನ್ನು ಹುಡುಕುವಿರಿ.
ವೃಷಭ: ಕಾರ್ಯದಲ್ಲಿ ವಿಳಂಬಗತಿಯಾಗಲಿದೆ. ನಂಬಿಕೆಯನ್ನು ಉಳಿಸಿಕೊಳ್ಳಲು ಬೇಕಾದ ಪ್ರಯತ್ನ ಮಾಡುವಿರಿ. ಯಶಸ್ಸಿಗೆ ಅಡ್ಡದಾರಿಯನ್ನು ಹುಡುಕಬೇಡಿ. ಸಂಬಂಧಗಳಲ್ಲಿ ಹದವು ತಪ್ಪಬಹುದು. ಅನಿರೀಕ್ಷಿತ ಸುದ್ದಿಗಳು ನಿಮ್ಮ ಬೇಸರಕ್ಕೆ ಕಾರಣವಾಗುವುದು. ಹಣಕಾಸಿನ ವಿಚಾರದಲ್ಲಿ ಬಹಳ ತೊಂದರೆಪಡುವಿರಿ. ಆಪ್ತರ ಮಾತು ನಿಮ್ಮನ್ನು ಚೇತರಿಸಿಕೊಳ್ಳಲು ಸಹಾಯ ಮಾಡಬಹುದು. ಸಂಗಾತಿಯ ಸ್ವಭಾವವನ್ನು ಅರ್ಥಮಾಡಿಕೊಳ್ಳಲು ಬಯಸುವಿರಿ. ಆಪ್ತವಲಯನ್ನು ಕಟ್ಟಿಕೊಳ್ಳಬಹುದು.
ಮಿಥುನ: ಚಂಚಲಸ್ವಭಾವವನ್ನು ನಿಯಂತ್ರಿಸಲು ಕಷ್ಟವಾದೀತು. ಅಲಂಕಾರಿಕಕ್ಕೆ ಹೆಚ್ಚು ಒತ್ತನ್ನು ನೀಡುವಿರಿ. ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ಮನಸ್ಸು ಮಾಡುವರು. ತಾಯಿಯ ಸಂಪತ್ತನ್ನು ಪಡೆಯುವ ಸಾಧ್ಯತೆ ಇದೆ. ನಿಮ್ಮ ಕಾರ್ಯಗಳಿಗೆ ಪ್ರಶಂಸೆಯು ಸಿಗಬಹುದು. ಖುಷಿಯಿಂದ ಇರಲು ಅನೇಕ ವಿಧಾನಗಳನ್ನು ಅನುಸರಿಸುವಿರಿ. ಹೆಚ್ಚಿನ ಸಮಯವನ್ನು ಮಾತುಕತೆಯಲ್ಲಿ ಕಳೆಯುವಿರಿ. ನಿಮಗೆ ಮಾರ್ಗದರ್ಶನದ ಅಗತ್ಯವು ಹೆಚ್ಚಿದೆ. ಸರಳವಾಗಿ ಜೀವನವನ್ನು ನಡೆಸಲು ಇಂದು ಇಷ್ಟಪಡುವಿರಿ.
ಕಟಕ: ಇಂದು ಪರರ ವಿಚಾರದಲ್ಲಿ ಹೆಚ್ಚು ಮನಸ್ಸು ಇರಲಿದೆ. ನಿಮ್ಮ ಸುಳ್ಳು ಇತರರಿಗೆ ಗೊತ್ತಾಗಲಿದೆ. ಸಮಯಾಭಾವದಿಂದ ನೀವು ಒದ್ದಾಡುವ ಸಾಧ್ಯತೆ ಇದೆ. ಸಂಗಾತಿಯ ಮುನಿಸನ್ನು ನೀವು ಸಮಾಧಾನ ಮಾಡುವಿರಿ. ದೊಡ್ಡ ಕೆಲಸಕ್ಕೆ ಸೇರಲು ಯೋಚಿಸಬಹುದು. ನಿಮ್ಮ ಸರ್ಕಾರಿ ಸಂಬದ್ಧವಾದ ಕೆಲಸವು ಅಂತಿಮ ಘಟ್ಟವನ್ನು ತಲುಪಿದ್ದು ಪೂರ್ಣವಾಗಲು ಸಮಯವನ್ನು ತೆಗೆದುಕೊಳ್ಳಬಹುದು. ಮಾತಿನ ಮೇಲೆ ಯಾರನ್ನೂ ಅಳೆಯಬೇಡಿ. ಜೀವನ ನಿರ್ವಹಣೆಗೆ ಮತ್ತೊಂದು ವೃತ್ತಿಯನ್ನು ಆಶ್ರಯಿಸುವ ಸಂಭವವೂ ಇದೆ. ನಿಮ್ಮನ್ನು ನೀವು ಹೊಗಳಿಕೊಳ್ಳುವಿರಿ.
ಸಿಂಹ: ವಿದ್ಯುತ್ ಉಪಕರಣಗಳ ಮಾರಾಟವನ್ನು ನೀವು ಮಾಡುತ್ತಿದ್ದರೆ ಲಾಭವನ್ನು ಪಡೆಯಬಹುದಾಗಿದೆ. ಸಾರ್ವಜನಿಕವಾಗಿ ನೀವು ಹೆಚ್ಚು ಪ್ರಭಾವ ಉಳ್ಳವರಾಗಿದ್ದು ನಿಮಗೆ ಗೌರವವೂ ಸಿಗಲಿದೆ. ಸಹೋದ್ಯೋಗಿಗಳು ನಿಮ್ಮ ಮೇಲೆ ಒತ್ತಡ ಕೊಡುವ ಪ್ರಯತ್ನ ಮಾಡಬಹುದು. ಸ್ನೇಹಿತ ಬಳಗವನ್ನು ದೊಡ್ಡ ಮಾಡಿಕೊಳ್ಳುವಿರಿ. ಭೂಮಿಯ ಖರೀದಿಗೆ ಸ್ಥಳ ಪರಿಶೀಲನೆಗೆ ಹೋಗುವಿರಿ. ದಾಖಲೆಗಳು ಕಾಣೆಯಾಗಿದ್ದು ನಿಮಗೆ ಆತಂಕ ಉಂಟಾಗಬಹುದು. ಹೊಸ ಕೆಲಸಕ್ಕೆ ಹೋಗುವ ಸಾಧ್ಯತೆ ಇದೆ. ನಿಮ್ಮಿಂದ ಆಗುವ ಕೆಲಸಕ್ಕೆ ಹೆಚ್ಚು ಒತ್ತು ಕೊಡಿ.
ಕನ್ಯಾ: ನಿಮ್ಮ ಬಗ್ಗೆ ಸದ್ಭಾವನೆ ಇರುವವರು ನಿಮಗೆ ಶ್ರೇಯಸ್ಸನ್ನು ಹರಸುವರು. ಹಣಕಾಸಿನ ವಿಚಾರಕ್ಕೆ ಸಲ್ಲದ ಅಪವಾದ ಬಂದೀತು. ನಿಮ್ಮ ಸಮಸ್ಯೆಗಳನ್ನು ಆಪ್ತರ ಜೊತೆ ಹಂಚಿಕೊಳ್ಳುವುದು ಉತ್ತಮ. ಇಂದು ಕುಟುಂಬದ ಮಂಗಲ ಕಾರ್ಯದಲ್ಲಿ ಭಾಗಿಯಾಗುವಿರಿ. ಇಷ್ಟವಿಲ್ಲದಿದ್ದರೂ ಸಂಗಾತಿಯ ಮಾತನ್ನು ಅನುಸರಿಸಿ. ಮಕ್ಕಳನ್ನು ವಿದ್ಯಾಭಾಸಕ್ಕೆ ನೀವು ಪ್ರೇರೇಪಿಸುವಿರಿ. ನಿಮ್ಮ ಲಾಭಾಂಶವನ್ನು ದಾನ ಮಾಡುವಿರಿ. ನಿಮ್ಮ ಒಳಗುಟ್ಟನ್ನು ಬಿಟ್ಟುಕೊಡಬೇಡಿ. ನಿಮ್ಮನ್ನು ಹಗುರಾಗಿ ಕಾಣಬಹುದು. ನಿಮ್ಮ ಸಣ್ಣ ವಿಷಯಗಳೂ ಬೇಕಾದಷ್ಟು ಪ್ರಯೋಜನಕಾರಿಯಾಗಲಿವೆ.
ತುಲಾ: ತಂದೆ ತಾಯಿಗಳನ್ನು ಬಹಳ ಸಂತೋಷದಿಂದ ನೋಡಿಕೊಳ್ಳುವಿರಿ. ಅವರು ಅಪೇಕ್ಷಿಸಿದ ಸ್ಥಳಕ್ಕೆ ಅವರನ್ನು ಕರೆದೊಯ್ಯುವಿರಿ. ನಿಮ್ಮ ಕೈಲಾದವರಿಗೆ ಸಹಾಯವನ್ನು ಮಾಡುವುದು ಒಳ್ಳೆಯದು. ವಿರೋಧಿಗಳಿಗೆ ನಿಮ್ಮ ಬಲ ಪ್ರದರ್ಶನವಾಗಲಿದೆ. ಒಂದೇ ಕಡೆಯಲ್ಲಿ ಉದ್ಯೋಗವನ್ನು ಮಾಡಲು ನೀವು ಇಚ್ಛಿಸುವುದಿಲ್ಲ. ಹೊಸ ಜನರ ಭೇಟಿಯು ನಿಮಗೆ ಹೊಸ ದಾರಿಯನ್ನು ಮಾಡಿಕೊಟ್ಟೀತು. ನಿಮ್ಮದಲ್ಲದ ಪರಿಸರಕ್ಕೆ ಹೊಂದಿಕೊಳ್ಳಲು ಕಷ್ಟವಾದೀತು. ಸ್ನೇಹಿತರಿಂದ ಉದ್ಯೋಗದ ಪ್ರಾಪ್ತಿಯನ್ನು ನೀವು ನಿರೀಕ್ಷಿಸುವಿರಿ. ನಿಮ್ಮ ಗಾಯವನ್ನು ನಿಷ್ಕಾಳಜಿ ಮಾಡಿದ್ದರ ಫಲವು ಇಂದು ಗೊತ್ತಾಗುವುದು.
ವೃಶ್ಚಿಕ: ನಾನಾ ಮೂಲಗಳಿಂದ ವಿವಿಧ ಸಂಪತ್ತುಗಳು ಬರಲಿದೆ. ದಾಂಪತ್ಯದಲ್ಲಿ ವಿರಸವು ನಷ್ಟವಾಗುವುದು. ಅಧಿಕ ಆದಾಯಕ್ಕೆ ನಿಮ್ಮ ಉದ್ಯಮವನ್ನು ವಿಸ್ತರಿಸುವಿರಿ. ನಿಮ್ಮ ಬಳಿ ಇರುವ ವಸ್ತುಗಳನ್ನು ಬಳಸಿಕೊಂಡು ಆಗಬೇಕಾದುದನ್ನು ಮಾಡಿ. ಅನಗತ್ಯ ಓಡಾಟದಿಂದ ಶರೀರವು ದಣಿಯಬಹುದು. ಇದು ನಿಮ್ಮ ಔದಾಸೀನ್ಯಕ್ಕೆ ಕಾರಣವಾಗಲಿದೆ. ಮನಸ್ಸಿಗೆ ಶಾಂತಿಯು ಇರಲಿದ್ದು ಉದ್ವೇಗದ ಸಂದರ್ಭವನ್ನು ಆರಾಮಾಗಿ ದಾಟುವಿರಿ. ಇಂದು ಕೆಲವರ ವರ್ತನೆಯು ಬೇಸರ ತರಿಸಬಹುದು. ಇಂದು ನಿಮ್ಮಪೂರ್ವಜರ ಜ್ಞಾನವು ಸಿಗಲಿದೆ. ಸತ್ಸಂಗ ಮೂಲಕ ಸಮಯವನ್ನು ಕಳೆಯುವಿರಿ. ನಿಮ್ಮ ಉತ್ತರಕ್ಕೆ ಸಮಜಾಯಿಷಿಯ ಅಗತ್ಯವಿಲ್ಲ.
ಧನು: ಕಛೇರಿಯಲ್ಲಿ ಉದ್ಯೋಗದ ಕಾರಣ ನಿಮ್ಮನ್ನು ದೂರದ ಊರಿಗೆ ಕಳುಹಿಸಬಹುದು. ಪರಿಚಯವಿಲ್ಲದವರ ಜೊತೆ ವೈಯಕ್ತಿಕವಿಚಾರಗಳನ್ನು ಹಂಚಿಕೊಳ್ಳುವುದು ಬೇಡ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭಾಗವಹಿಸಲು ಇಚ್ಛಿಸುವಿರಿ. ನಿಮ್ಮ ಗುರಿಯನ್ನು ತಪ್ಪಿಸಲು ಬೇಕಾದ ಪಿತೂರಿಯು ನಡೆಯಬಹುದು. ನಿಮ್ಮ ಮಾತಿನ ವೇಗವನ್ನು ಅರ್ಥಮಾಡಿಕೊಳ್ಳಲು ಕಷ್ಟವಾದೀತು. ಕಛೇರಿಯಲ್ಲಿ ಸ್ತ್ರೀಯರಿಂದ ಸಹಕಾರವನ್ನು ಪಡೆಯುವಿರಿ. ಭಯದಲ್ಲಿ ನೀವು ಬಹಳ ಇಂದಿನ ದಿನವನ್ನು ಕಳೆಯಬೇಕಾದೀತು. ಖಾಸಗಿ ಉದ್ಯೋಗದಲ್ಲಿ ಇರುವವರಿಗೆ ಆತಂಕವಿರಲಿದೆ.
ಮಕರ: ಸ್ತ್ರೀಯರು ಮನೆಯಲ್ಲಿ ಆದ ಘಟನೆಯಿಂದ ತಾಳ್ಮೆಯನ್ನು ಕಳೆದುಕೊಳ್ಳಬಾರದು. ಸಾಹಸೊ ಪ್ರವೃತ್ತಿಯಿಂದ ನಿನಗೆ ಯಶಸ್ಸು ಸಿಗಬಹುದು. ನಿಮ್ಮವರ ಆರೋಗ್ಯವನ್ನು ನೀವು ನೋಡಿಕೊಳ್ಳುವಿರಿ. ಶುಭಸೂಚನೆಯನ್ನು ನೀವು ಗಮನಿಸುವುದು ಉತ್ತಮ. ಪೂರ್ವ ಆಲೋಚನೆಗಳು ದಿಕ್ಕು ತಪ್ಪಬಹುದು. ದ್ವೇಷವನ್ನು ಮುಂದುವರಿಸದೇ ಮುಕ್ತಾಯ ಮಾಡಿಕೊಳ್ಳಿ. ಬಂಧುಗಳ ಆಗಮನವು ನಿಮಗೆ ಕಿರಿಕಿರಿಯನ್ನು ತಂದೀತು. ದೂರಾದ ಪ್ರೇಮಿಯನ್ನು ನೆನಪುಮಾಡಿಕೊಂಡು ದುಃಖಿಸುವಿರಿ. ಮೋಜಿನ ಆಟಕ್ಕೆ ಬಲಿಯಾಗುವ ಸಾಧ್ಯತೆ ಇದೆ. ಆಟದಲ್ಲಿ ಎಚ್ಚರವಿರಲಿ.
ಕುಂಭ: ನಿಮ್ಮ ಪ್ರಾಮಾಣಿಕ ಕೆಲಸಕ್ಕೆ ಅಧಿಕಾರಿಗಳಿಂದ ಪ್ರಶಂಸೆ ಸಿಗಲಿದೆ. ಬಹಳ ದಿನಗಳಿಂದ ಇದ್ದ ಕೋರ್ಟ್ ವ್ಯವಹಾರವು ಮುಕ್ತಾಯಗೊಳ್ಳಬಹುದು. ಮಿತ್ರರೆಂದು ಬಂದವರ ವಿಚಾರದಲ್ಲಿ ಜಾಗರೂಕತೆ ಇರಲಿ. ಮಾನಸಿಕವಾಗಿ ನಿಮಗೆ ಇಂದು ಅವರು ತೊಂದರೆ ಕೊಡಬಹುದು. ಕುಟುಂಬ ಆಸ್ತಿಯನ್ನು ನಯವಾಗಿ ಪಡೆಯಲು ಯತ್ನಿಸುವಿರಿ. ಬರಬೇಕಾದ ಹಣವು ಬಾರದೇ ಸಾಲವನ್ನು ಮಾಡಬೇಕಾಗಬಹುದು. ಕುಟುಂಬ ನಿರ್ವಹಣೆಯ ವಿಚಾರದಲ್ಲಿ ದಂಪತಿಗಳ ನಡುವೆ ಭಿನ್ನಾಭಿಪ್ರಾಯ ಬರಬಹುದು. ಕಛೇರಿಗೆ ಒಲ್ಲದ ಮನಸ್ಸಿನಿಂದ ಹೋಗುವಿರಿ.
ಮೀನ: ಪರಿಶ್ರಮವು ಎಂದಿಗಿಂತ ಅಧಿಕವಾಗಿದ್ದು, ಅದಕ್ಕೆ ಯೋಗ್ಯವಾದ ಫಲವು ಸಿಗುವುದು. ನಿಮ್ಮ ಸರ್ಕಾರಿ ಕೆಲಸಗಳಿಗೆ ಹೆಚ್ಚು ಓಡಾಟ ಆಗಬಹುದು. ಕುಲದೇವರ ಕಾರ್ಯದಲ್ಲಿ ನೀವು ಭಾಗವಹಿಸುವಿರಿ. ನಿಮಗೆ ಅನೇಕ ಗೊಂದಲಗಳು ಹುಟ್ಟಿಕೊಳ್ಳಬಹುದು. ಹಳೆಯ ಸಿಹಿ ನೆನಪು ನಿಮ್ಮನ್ನು ಕಾಡಬಹುದು. ಸಂಗಾತಿಯ ಜೊತೆ ಉದ್ಯಮದ ಬಗ್ಗೆ ಚರ್ಚಿಸುವಿರಿ. ತಂದೆಯ ಆರೋಗ್ಯದಲ್ಲಿ ವ್ಯತ್ಯಾಸವಾಗುವ ಸಾಧ್ಯತೆ ಇದೆ. ಭೂಮಿಯ ವ್ಯವಹಾರದಲ್ಲಿ ಹಿನ್ನಡೆಯಾಗಬಹುದು. ಮಕ್ಕಳ ಸಂತೋಷಕ್ಕಾಗಿ ಹಣವನ್ನು ಖಾಲಿ ಮಾಡುವಿರಿ. ಅದೃಷ್ಟವನ್ನು ನಂಬಿ ಕೆಲಸವನ್ನು ಮಾಡುವಿರಿ.
-ಲೋಹಿತಶರ್ಮಾ (ವಾಟ್ಸ್ಆ್ಯಪ್- 8762924271)