Horoscope 05 Nov: ದಿನಭವಿಷ್ಯ, ಇಂದು ನೀವು ಎಲ್ಲರನ್ನು ಮಾತಿನಿಂದ ಗೆಲ್ಲುವಿರಿ, ಹೊಗಳಿಕೆಗೆ ಪಾತ್ರರಾಗುವಿರಿ
ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹಾಗಾದರೆ ಇಂದಿನ (2023 ನವೆಂಬರ್ 05) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಇದರ ಜೊತೆಗೆ ಪಂಚಾಂಗ ಹೇಗಿದೆ? ಎಂಬುದನ್ನು ಒಂದಷ್ಟು ಮಂದಿ ನೋಡುತ್ತಾರೆ. ಹಾಗಾದರೆ ಇಂದಿನ (2023 ನವೆಂಬರ್ 05) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಶರತ್ ಋತು, ತುಲಾ ಮಾಸ, ಮಹಾನಕ್ಷತ್ರ: ಸ್ವಾತೀ, ಮಾಸ: ಆಶ್ವಯುಜ, ಪಕ್ಷ: ಕೃಷ್ಣ, ವಾರ: ಭಾನು, ತಿಥಿ: ಅಷ್ಟಮೀ, ನಿತ್ಯನಕ್ಷತ್ರ: ಪುಷ್ಯ, ಯೋಗ: ವಿಷ್ಕಂಭ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 30 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 01 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 04:35 ರಿಂದ 06:02 ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:16 ರಿಂದ 13:43 ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:09 ರಿಂದ 04:35ರ ವರೆಗೆ.
ಮೇಷ ರಾಶಿ: ಸುಮ್ಮನೇ ಆಡಿದ ಮಾತಿನಿಂದ ವಾಗ್ವಾದವು ಆರಂಭವಾಗಬಹುದು. ಕೃಷಿಗೆ ಸಂಬಂಧಿಸಿದ ಚಟುವಟಿಕೆ ಬಹಳ ವೇಗದ ರೂಪದಲ್ಲಿ ನಡೆಯಬಹುದು. ನಿಮ್ಮ ಮಾತುಗಳಿಗೆ ತೂಕವು ಕಡಿಮೆ ಆಗಬಹುದು. ಸ್ಥಾನಕ್ಕಾಗಿ ನೀವು ಎದುರುನೋಡುತ್ತಿದ್ದರೆ ನಿಮಗೆ ಅದು ಸಿಗಬಹುದು. ಇಂದು ನಿಮ್ಮಲ್ಲಿ ಕ್ರೀಡಾ ಮನೋಭಾವವು ಇಲಿದೆ. ವಾಹನ ಚಾಲನೆಯನ್ನು ಎಚ್ಚರಿಕೆಯಿಂದ ಮಾಡಿ. ಆತ್ಮವಿಶ್ವಾಸವನ್ನು ಕಳೆದುಕೊಳ್ಳದೇ ಮುಂದಡಿ ಇಡುವಿರಿ. ನಿಮ್ಮನ್ನು ಇಷ್ಟಪಟ್ಟವರ ಜೊತೆ ಸಮಯವನ್ನು ಕಳೆಯುವಿರಿ. ನಿಮ್ಮ ನಿರ್ಧಾರವನ್ನು ಮಕ್ಕಳು ಒಪ್ಪದೇ ಇರುವುದು ನಿಮಗೆ ಕೋಪಬರಬಹುದು. ಸೌಂದರ್ಯದ ವಿಚಾರದಲ್ಲಿ ಹೆಚ್ಚು ಆಸಕ್ತಿ ಇರಲಿದೆ. ನೀವು ಇಂದು ಪ್ರೀತಿಯನ್ನು ಹೇಳಿಕೊಳ್ಳುವಿರಿ. ಸಂಬಂಧವಿಲ್ಲದ ವಿಚಾರದಲ್ಲಿ ಮೂಗುತೂರಿಸುವುದು ಬೇಡ. ಮಕ್ಕಳ ಬಯಕೆಯನ್ನು ಈಡೇರಿಸುವಿರಿ.
ವೃಷಭ ರಾಶಿ: ಒಲ್ಲದ ಮನಸ್ಸಿನಿಂದ ಕಾರ್ಯವನ್ನು ಆರಂಭ ಮಾಡಿದರೂ ಅನಂತರ ಉತ್ಸಾಹವು ಬರುವುದು. ಇಂದು ಕುಟುಂಬದಲ್ಲಿ ಆತಂಕವು ಇರಲಿದ್ದು ದೈವದ ಮೊರೆ ಹೋಗುವಿರಿ. ವಿದ್ಯಾರ್ಥಿಗಳ ಸಾಧನೆಗೆ ಪ್ರಶಂಸೆ ಸಿಗುವುದು. ನೀವು ಇಂದು ಮಾನಸಿಕವಾಗಿ ಕುಗ್ಗುವಿರಿ. ಯಾರ ಸಮಾಧಾನವೂ ನಿಮಗೆ ಸಾಂತ್ವನವನ್ನು ನೀಡದು. ನಿಮ್ಮ ಇಂದಿನ ಕಾರ್ಯದಲ್ಲಿ ಸಾವಧಾನತೆ ಇರಲಿದೆ. ನಂಬಿಕೆಯನ್ನು ಉಳಿಸಿಕೊಳ್ಳಲು ಪ್ರಯತ್ನ ಮಾಡುವಿರಿ. ನಿಜವಾದ ಯಶಸ್ಸಿಗೆ ಅಡ್ಡದಾರಿಯನ್ನು ಹುಡುಕಿ ಪ್ರಯೋಜನವಾಗದು. ಕಲಾವಿದರು ಸನ್ಮಾನಕ್ಕೆ ಭಾಜರಾಗುವರು. ಹಣಕಾಸಿನ ವಿಚಾರದಲ್ಲಿ ಬಹಳ ತೊಂದರೆಯಲ್ಲಿ ಸಿಕ್ಕಿಕೊಳ್ಳುವಿರಿ. ನೂತನ ಗೃಹ ನಿರ್ಮಾಣಕ್ಕೆ ಯೋಜನೆಯನ್ನು ಸಿದ್ಧಪಡಿಸಿಕೊಳ್ಳುವಿರಿ.
ಮಿಥುನ ರಾಶಿ: ಇಷ್ಟವಿಲ್ಲದ ಕಡೆ ಬಲವಂತವಾಗಿ ಹೋಗಬೇಕಾದೀತು. ಆಪ್ತರು ನೀಡಿದ ವಸ್ತುವನ್ನು ಕಳೆದುಕೊಳ್ಳುವಿರಿ. ಸ್ವಯಂ ಕೃತ ಅಪರಾಧವೇ ನಿಮಗೆ ಮುಳುವಾಗಬಹುದು. ಆಕಸ್ಮಿಕ ಲಾಭದ ನಿರೀಕ್ಷೆಯಲ್ಲಿ ನೀವು ಇರುವಿರಿ. ಬೇಕಾದಷ್ಟು ಮಾತ್ರ ಮಾತುಗಳನ್ನಾಡಿ. ಅತಿಥಿಗಳ ಆಗಮನದಿಂದ ಸಂತೋಷವಾಗುವುದು. ನಿಮ್ಮ ಬಲದ ಪ್ರದರ್ಶನವನ್ನು ಮಾಡುವಿರಿ. ಸಂಗಾತಿಯ ಜೊತೆ ಸಣ್ಣ ವಿಚಾರಕ್ಕೂ ಕಲಹ ಮಾಡಿಕೊಳ್ಳುವಿರಿ. ನಿಮ್ಮ ಚಂಚಲವಾದ ಸ್ವಭಾವವನ್ನು ನಿಯಂತ್ರಿಸಲು ಪ್ರಯತ್ನಿಸಿದರೂ ಕಷ್ಟವಾದೀತು. ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ದೂರ ಹೋಗುವ ಮನಸ್ಸು ಮಾಡುವಿರಿ. ತಪ್ಪು ಮಾಡದಿರುವ ವಿಚಾರಕ್ಕೆ ಕ್ಷಮೆ ಕೇಳಬೇಕಾದೀತು. ಸುಲಭವಾದ ಮಾರ್ಗವನ್ನು ನೀವು ಕ್ಲಿಷ್ಟ ಮಾಡಿಕೊಳ್ಳುವಿರಿ. ದೈವಭಕ್ತಿಯು ಅಧಿಕವಾಗುವುದು. ಇಂದು ಸಂಯಮವು ಮುಖ್ಯ.
ಕಟಕ ರಾಶಿ: ಆಪ್ತರ ಬಗ್ಗೆ ಇಟ್ಟುಕೊಂಡ ಭಾವಿ ಇಂದು ಹೊರಹಾಕುವಿರಿ. ಗೆಳತಿಯ ಜೊತೆ ಆತ್ಮೀಯ ಒಡನಾಡವನ್ನು ಇಟ್ಟುಕೊಳ್ಳುವಿರಿ. ಮನೆಯಲ್ಲಿ ಆಸ್ತಿಯ ವಿಚಾರವಾಗಿ ಸಣ್ಣ ಬಿರುಸಿನ ಮಾತುಗಳು ಕೇಳಿಬರಬಹುದು. ಮೇಲಧಿಕಾರಿಗಳು ನಿಮ್ಮ ಮೇಲೆ ಒತ್ತಡ ಹೇರಬಹುದು. ನಿಮ್ಮ ಮೇಲೆ ಪಿತೂರಿ ಮಾಡಿದ ಅನುಮಾನ ಇರಲಿದೆ. ಮನಸ್ಸಿನ ದುಗುಡವನ್ನು ಶಾಂತಮಾಡಿಕೊಳ್ಳುವಿರಿ. ನಿಮ್ಮ ವಿಚಾರವನ್ನು ನೀವು ಗುಪ್ತವಾಗಿ ತಿಳಿದುಕೊಳ್ಳುವಿರಿ. ನಿಮ್ಮ ಕಾರ್ಯದಲ್ಲಿ ಉದ್ದೇಶವು ಸ್ಪಷ್ಟವಾಗಿ ಇರಲಿ. ಕೆಲಸವು ಪೂರ್ಣವಾಗದೇ ಒದ್ದಾಡಿಕೊಂಡು ಇಂದಿನ ಕೆಲಸವನ್ನು ಮಾಡುವಿರಿ. ಸಂಗಾತಿಯ ಕೋಪವನ್ನು ನೀವು ಕಡಿಮೆ ಮಾಡುವಿರಿ. ಆಹಾರವು ನಿಮ್ಮ ಆರೋಗ್ಯವನ್ನು ಕೆಡಿಸೀತು. ಪಾಲುದಾರಿಕೆಯಲ್ಲಿ ನಿಮ್ಮ ನಿಮಗೆ ವ್ಯಥೆಯು ಇರಲಿದೆ. ಉಪಕರಿಸಿದವರ ಮೇಲೆ ನಿಮಗೆ ಸ್ಮರಣೆ ಇರಲಿ. ಬೆಂಬಲವನ್ನು ಅಪೇಕ್ಷಿಸಿದರೂ ಸಿಗದು.
ಸಿಂಹ ರಾಶಿ: ಅಸಹಜ ವರ್ತನೆಯ ಬಗ್ಗೆ ನೀವು ಏನನ್ನೂ ಹೇಳುವುದು ಬೇಡ. ಮಕ್ಕಳಿಂದ ನಿಮಗೆ ಆರ್ಥಿಕ ನೆರವು ಸಿಗುವುದು. ನಿಮಗೆ ಗೌರವಕ್ಕೆ ತೊಂದರೆ ಆಗಬಹುದು. ಇದರಿಂದ ಸಿಟ್ಟುಗೊಳ್ಳುವಿರಿ. ಆರೋಗ್ಯವು ಕೆಡಲಿದ್ದು ಹತ್ತಾರು ಆಲೋಚನೆಗಳು ಬರಬಹುದು. ನಿಮ್ಮನ್ನು ಭಾವನಾತ್ಮಕವಾಗಿ ಕಟ್ಟಿಹಾಕಬಹುದು. ದೂರದಲ್ಲಿರುವ ನಿಮ್ಮ ಮಕ್ಕಳ ಬಗ್ಗೆ ಚಿಂತೆಯಾಗುವುದು. ನೀವು ಇಂದು ವಿದ್ಯುತ್ ಉಪಕರಣದ ಮಾರಟಗಾರರಾಇದ್ದರೆ ಅಧಿಕ ಲಾಭವು ಸಿಗುವುದು. ಸಾರ್ವಜನಿಕವಾಗಿ ಹೆಚ್ಚು ಪ್ರಭಾವ ಉಳ್ಳವರಾಗಿದ್ದು ಗೌರವವು ಸಿಗಲಿದೆ. ಸಹೋದ್ಯೋಗಿಗಳು ನಿಮ್ಮ ಮೇಲೆ ಒತ್ತಡವನ್ನು ಹೇಳಬಹುದು. ನಿಮ್ಮ ಸ್ನೇಹ ಬಳಗವು ದೊಡ್ಡದಾಗುವುದು. ಮಾತುಗಾರಿಕೆಗೆ ಪ್ರಶಂಸೆಯು ಸಿಗಲಿದೆ.
ಕನ್ಯಾ ರಾಶಿ: ಕುಟುಂಬದ ಭಿನ್ನಮತವು ದೂರಾಗಬಹುದು. ಪ್ರೀತಿಪಾತ್ರರನ್ನು ಭೇಟಿಯಾಗಿ ಸಂತೋಷಪಡುವಿರಿ. ಮಾತಿನಲ್ಲಿ ಹಿಡಿತಬೇಕು ಎನಿಸಬಹುದು. ಯಾರಿಗೂ ಹೇಳಿಕೊಳ್ಳದೇ ನೀವೊಬ್ಬರೇ ರೋಗವನ್ನು ಅನುಭವಿಸುವಿರಿ. ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಉತ್ತಮಸ್ಥಾನವು ಸಿಗಲಿದೆ. ನಿಮ್ಮ ಬಗ್ಗೆ ಪ್ರೀತಿಯುಳ್ಳವರು ನಿಮ್ಮನ್ನು ಹರಸುವರು. ಹಣಕಾಸಿನ ವಿಚಾರಕ್ಕೆ ಅಪವಾದ ಬರಬಹುದು. ನಿಮ್ಮನ್ನು ಪರೋಕ್ಷವಾಗಿ ಯಾರದರೂ ನಿವಾರಿಸಬಹುದು. ಸಂಗಾತಿಯ ಮಾತಿಗೆ ನೀವು ಉತ್ತರಿಸಲಾರಿರಿ. ನಿಮ್ಮ ಲಾಭಾಂಶದ ಕೆಲವು ಭಾಗವನ್ನು ನೀವು ದಾನ ಮಾಡುವಿರಿ. ನಿಮ್ಮ ಒಳಗುಟ್ಟನ್ನು ಯಾರ ಮುಂದೂ ಬಿಚ್ಚಿಡುವುದು ಬೇಡ. ಆರ್ಥಿಕತೆಯು ನಿಮಗೆ ನೆಮ್ಮದಿಯನ್ನು ಕೊಟ್ಟೀತು.
ತುಲಾ ರಾಶಿ: ಅಸಾಧ್ಯವಾದ ಕಾರ್ಯದಲ್ಲಿರುವ ನಿಮ್ಮ ಮಾನಸಿಕ ದಾರ್ಢ್ಯವು ನಿಮ್ಮ ಯಶಸ್ಸಿಗೆ ಕಾರಣವಾಗಿರುವುದು. ನಿಮಗೆ ಬೇಡದ ವಸ್ತುಗಳನ್ನು ನೀವು ಇನ್ನೊಬ್ಬರಿಗೆ ದಾನವಾಗಿ ಕೊಡುವಿರಿ. ರಾಜಕೀಯ ಮುಖಂಡರ ಜೊತೆ ಗುರುತಿಸಿಕೊಳ್ಳಲು ಇಷ್ಟಪಡುವಿರಿ. ದುರ್ಜನರ ಸಹವಾಸದಿಂದ ನಿಮಗೆ ಅಪವಾದವು ಬರಬಹುದು. ಕೆಲಸಗಳಲ್ಲಿ ನೀವು ಜಯವನ್ನು ಸಾಧಿಸಬಹುದು. ಸೊಂಟದ ನೋವು ಅಧಿಕವಾಗಿ ಕಾಡಬಹುದು. ಸಂಗಾತಿಯ ಮೇಲೆ ಯಾರದೋ ಕಾರಣಕ್ಕೆ ಮುನಿಸಿಕೊಳ್ಳುವಿರಿ. ಪೋಷಕರ ಜೊತೆ ನಿಮ್ಮ ವರ್ತನೆಯು ಆಪ್ತವಾಗಿ ಇರಲಿದೆ. ಅರಂಭಗಳಿಗೆ ಸ್ನೇಹಿತರ ಜೊತೆ ಭೇಟಿ ಕೊಡುವಿರಿ. ವಿರೋಧಿಗಳಿಗೆ ನಿಮ್ಮ ಬಲವನ್ನು ತೋರಿಸುವಿರಿ. ಹೆಚ್ಚು ಆದಾಯ ಸಿಗುವ ಉದ್ಯೋಗವನ್ನು ಹುಡುಕಲು ಬಯಸುವಿರಿ. ನಿಮ್ಮದಲ್ಲದ ಪರಿಸರಕ್ಕೆ ಹೊಂದಿಕೊಳ್ಳಲು ಕಷ್ಟವಾದೀತು.
ವೃಶ್ಚಿಕ ರಾಶಿ: ಇಂದು ನಿಮ್ಮ ಮಾರ್ಗದರ್ಶನವನ್ನು ಕೇಳಿಕೊಂಡು ಬರಬಹುದು. ಇಂದಿನ ನಿಮ್ಮ ಕೆಲಸಗಳು ಬಹಳ ವಿಳಂಬವಾಗುದು. ನೀವು ಹೇಳಿದ ಕೆಲಸವೂ ವೇಗವಾಗಿ ಮುಗಿಯದು. ಸ್ನೇಹಿತರಿಗೆ ಬೇಸರವಾಗಬಾರದೆಂದು ಅವರ ಜೊತೆ ಸಮಸ್ಯೆ ಕಳೆಯುವಿರಿ. ನಿಮ್ಮ ಪಕ್ಷಪಾತವು ನೌಕರರ ಮೇಲೆ ಕೆಟ್ಟ ಪರಿಣಾಮವನ್ನು ಉಂಟುಮಾಡೀತು. ದಾಂಪತ್ಯದಲ್ಲಿನ ವೈಮನಸ್ಯವು ಹಿರಿಯರ ಭೇಟಿಯಿಂದ ಸರಿಯಾಗುವುದು. ಅಧಿಕಾರಿಗಳು ನಿಮಗೆ ತೊಂದರೆ ಕೊಡಬಹುದು. ನಿಮ್ಮ ಬಳಿ ಇರುವ ವಸ್ತುಗಳನ್ನು ಬಳಸಿಕೊಂಡು ನಿಮ್ಮ ಕಾರ್ಯವನ್ನು ಪೂರೈಸಿಕೊಳ್ಳಿ. ಹೊಸ ವಸ್ತುವಿಗೆ ಧನವನ್ನು ವ್ಯಯಮಾಡುವುದು ಬೇಡ. ಇಂದಿನ ಓಡಾಟದಿಂದ ಶರೀರವು ದಣಿಯಬಹುದು. ಗೊಂದಲವಿರುವ ವಿಚಾರದಲ್ಲಿ ಮುಂದುರಿಯುವ ಸಾಹಸ ಬೇಡ.
ಧನು ರಾಶಿ: ಮನಸ್ಸು ಯಾವುದೇ ಉದ್ವಿಗ್ನಕ್ಕೆ ಸಿಲುಕದೇ ನಿರಾಳವಾಗಿ ಇರುವುದು. ನಿಮ್ಮವರು ನೀವಿಟ್ಟ ನಂಬಿಕೆಯನ್ನು ಉಳಿಸಿಕೊಳ್ಳುವರು. ಕುಟುಂಬದಲ್ಲಿ ನಿಮ್ಮ ಪ್ರಾಮುಖ್ಯವು ಅರಿವಿಗೆ ಬರಬಹುದು. ಬೇಡದ ಆಲೋಚನೆಯನ್ನು ದೂರಮಾಡಿಕೊಳ್ಳಿ. ಪ್ರೇಮಕ್ಕಾಗಿ ಹೆಚ್ಚು ಖರ್ಚನ್ನು ಮಾಡಬೇಕಾದೀತು. ಹಿತಶತ್ರುಗಳ ಬಗ್ಗೆ ನಿಮ್ಮ ಊಹೆಯು ಸುಳ್ಳಾಗಬಹುದು. ಆರೋಗ್ಯವು ಬಡವಾದಂತೆ ತೋರುವುದು. ಉದ್ಯೋಗವನ್ನು ಬಿಡುವ ಸಂದರ್ಭವೂ ಬರಬಹುದು. ಮನೋ ವ್ಯಥೆಯನ್ನು ಯಾರ ಬಳಿಯಾದರೂ ಹೇಳಿಕೊಳ್ಳುವಿರಿ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸೋಲಬೇಕಾಗುವುದು. ಸೋಲನ್ನು ಒಪ್ಪಿಕೊಳ್ಳುವ ಮಾನಸಿಕ ಸ್ಥಿತಿಯು ಇಂದು ಇಲ್ಲವಾಗುವುದು. ನಿಮ್ಮ ಗುರಿಯನ್ನು ತಲುಪಲು ಬೇರೆ ಮಾರ್ಗವನ್ನೂ ಅನುಸರಿಸಬೇಕಾದೀತು. ಉದ್ಯೋಗದಲ್ಲಿ ಸ್ತ್ರೀಯರಿಗೆ ಸಹಕಾರ ಮಾಡುವಿರಿ. ಇಂದು ನಿಮಗೆ ಅವ್ಯಕ್ತ ಭಯವು ಕಾಡಬಹುದು.
ಮಕರ ರಾಶಿ: ಆತ್ಮೀಯ ಸಂಬಂಧವು ಕಾರಣಾಂತರಗಳಿಂದ ಕಡಿತವಾಗಿದ್ದು ನೀವು ಪುನಃ ಸ್ಥಾಪಿಸಿಕೊಂಡು ಎಂದಿನಂತೆ ನೆಮ್ಮದಿಯಿಂದ ಇರುವಿರಿ. ಇಂದಿನ ಕಾರ್ಯಗಳಲ್ಲಿ ತೊಂದರೆಗಳು ಎದ್ದು ಕಾಣಿಸುವುದು. ಜಾಣ್ಮೆಯನ್ನು ಪ್ರದರ್ಶಿಸಲು ಹೋಗಿ ಮುಗ್ಗರಿಸುವಿರಿ. ತೀರ್ಥಕ್ಷೇತ್ರಗಳ ದರ್ಶನವನ್ನು ಮಾಡುವಿರಿ. ರಾಜಕೀಯ ವ್ಯಕ್ತಿಗಳ ಸಂಪರ್ಕವನ್ನು ನೀವು ಮಾಡುವಿರಿ. ಸ್ತ್ರೀಯರು ತಾಳ್ಮೆಯನ್ನು ಕಳೆದುಕೊಂಡು ಕೂಗಾಡಬಹುದು. ನಿಮ್ಮ ಅಭಿಪ್ರಾಯವನ್ನು ಹೇಳಬೇಕಾದಲ್ಲಿ ಹೇಳುವ ರೀತಿಯಲ್ಲಿ ಹೇಳಿ. ಸಾಹಸ ಕಾರ್ಯಗಳನ್ನು ಮಾಡಲು ನಿಮಗೆ ಉತ್ಸಾಹವು ಬರಬಹುದು. ನೀವು ಮಾಡಲು ಹೊರಟ ಕೆಲಸಕ್ಕೆ ಶುಭಸೂಚನೆಯು ಸಿಗುವುದು. ನಿಮ್ಮ ಆಲೋಚನೆಯ ದಿಕ್ಕು ಬದಲಾಗಬಹುದು. ದ್ವೇಷವನ್ನು ಮುಂದುವರಿಸಿ ಮನಸ್ಸನ್ನು ಹಾಳು ಮಾಡಿಕೊಳ್ಳಬೇಕಾದೀತು. ಅಪರೂಪದ ಬಂಧುಗಳ ಆಗಮನವು ನಿಮಗೆ ಕಷ್ಟವಾದೀತು. ಸಾಮಾಜಿಕ ಮುಖಂಡರಿಗೆ ಪ್ರಶಂಸೆ ಸಿಗಲಿದೆ.
ಕುಂಭ ರಾಶಿ: ಸಂಗಾತಿಯ ವಿಷಯದಲ್ಲಿ ಅತಿಯಾಗಿ ಭಾವುಕರಾಗುವಿರಿ. ನಿಮ್ಮ ವರ್ತನೆಯನ್ನು ಕುಟುಂಬವು ಸಹಿಸುವುದು ಕಷ್ಟವಾಗಬಹುದು. ಅಮೂಲ್ಯ ವಸ್ತುವಿನ ಲಾಭದಿಂದ ಸಂತಸವಾಗಲಿದೆ. ಅಪರಿಚಿತರ ಜೊತೆ ವೃಥಾ ಕಲಹವಾಗಬಹುದು. ಮಕ್ಕಳ ವಿದ್ಯಾಭ್ಯಾಸದ ಚಿಂತೆ ಇರಲಿದೆ. ಕೆಲವು ಗೊಂದಲವು ಪರಿಹಾರವಾಗದೇ ಹಾಗೆಯೇ ಇರುವುದು. ವಾಹನದ ಖರೀದಿಗೆ ಬೆಂಬಲವು ಸಿಗಬಹುದು. ನಿಮ್ಮ ಕೆಲಸಕ್ಕೆ ಅಧಿಕಾರಿಗಳು ಪ್ರಶಂಸಿಸುವರು. ಬಹಳ ದಿನಗಳಿಂದ ನಡೆಯುತ್ತಿದ್ದ ನ್ಯಾಯಾಲಯದ ವ್ಯವಹಾರವನ್ನು ಮುಕ್ತಾಯ ಮಾಡಿಕೊಳ್ಳುವಿರಿ. ಮಿತ್ರರೆಂದು ಹೇಳಿಕೊಂಡು ಯಾರಾದರೂ ಬರಬಹುದು. ನಿಮ್ಮ ಜಾಗರೂಕತೆಯಲ್ಲಿ ನೀವಿರಿ. ಕುಟುಂಬದ ಸ್ಥಿರಾಸ್ತಿಯನ್ನು ಪಡೆಯಲು ಪ್ರೇರಣೆ ಪಡೆಯುವಿರಿ. ಪ್ರಮುಖ ನಿರ್ಧಾರವನ್ನು ಒಮ್ಮೆಲೇ ತೆಗೆದುಕೊಳ್ಳುವುದು ಬೇಡ.
ಮೀನ ರಾಶಿ: ಆಸೆಪಟ್ಟಿದ್ದ ಕಾರ್ಯವು ಇಂದು ಪೂರ್ಣಮಾಡಿಕೊಳ್ಳುವಿರಿ. ಇಂದು ನೀವು ಎಲ್ಲರ ಮಾತಿನಿಂದ ಗೆಲ್ಲುವಿರಿ. ನಿಮ್ಮನ್ನು ನೌಕರರು ಹೋಗಳುವರು. ಎದರುರಾಗು ಅಡ್ಡಿ, ಆತಂಕಗಳನ್ನು ನೀವು ಅನಾಯಾಸವಾಗಿ ದೂರ ಸರಿಸುವಿರಿ. ನಿಮ್ಮ ಇಂದಿನ ಶ್ರಮಕ್ಕೆ ತಕ್ಕುದಾದ ಫಲವು ಸಿಗಬಹುದು. ಭೂಮಿಯ ವ್ಯಾಪಾರದಲ್ಲಿ ಜಯವಾಗಲಿದೆ. ಇಂದು ಸರ್ಕಾರಿ ಕೆಲಸಕ್ಕೆ ಓಡಾಟ ಮಾಡುವಿರಿ. ಕುಲದೇವರ ಆರಾಧನೆಯನ್ನು ನೀವು ಮಾಡುವಿರಿ. ನಿಮಗೆ ಕೆಲಸದಲ್ಲಿ ಅನೇಕ ಗೊಂದಲಗಳು ಇರಬಹುದು. ಕುಟುಂಬದ ಹೊಣೆಗಾರಿಕೆಯನ್ನು ನಿರ್ವಹಿಸುವುದು ಕಷ್ಟವಾಗಬಹುದು. ಅಕ್ರಮ ಕೆಲಸಗಳು ಎಲ್ಲರಿಗೂ ತಿಳಿಯಬಹುದು. ಹಳೆಯ ನೆನಪುಗಳು ನಿಮ್ಮನ್ನು ಕಾಡುವುದು. ತಂದೆಯ ಆರೋಗ್ಯದಲ್ಲಿ ಏರುಪೇರಾಗಬಹುದು. ಮಕ್ಕಳ ಸಂತೋಷಕ್ಕಾಗಿ ಹಣವನ್ನು ವ್ಯಯಿಸುವಿರಿ.