Daily Horoscope 7 July: ಈ ರಾಶಿಯವರು ಆತ್ಮವಿಶ್ವಾಸದ ಕೊರತೆ ಎದುರಿಸಲಿದ್ದಾರೆ

| Updated By: ಗಂಗಾಧರ​ ಬ. ಸಾಬೋಜಿ

Updated on: Jul 07, 2023 | 12:02 AM

ಇಂದಿನ (2023 ಜುಲೈ​ 07) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

Daily Horoscope 7 July: ಈ ರಾಶಿಯವರು ಆತ್ಮವಿಶ್ವಾಸದ ಕೊರತೆ ಎದುರಿಸಲಿದ್ದಾರೆ
ಪ್ರಾತಿನಿಧಿಕ ಚಿತ್ರ
Image Credit source: freepik
Follow us on

ರಾಶಿ ಭವಿಷ್ಯ ಪ್ರತಿಯೊಬ್ಬರ ಜೀವನದಲ್ಲಿ ಭಿನ್ನವಾಗಿರುತ್ತದೆ. ಕೆಲವರಿಗೆ ಪ್ರತಿನಿತ್ಯ ಬೆಳಗ್ಗೆ ಎದ್ದ ಕೂಡಲೇ ತಮ್ಮ ರಾಶಿ ಭವಿಷ್ಯ (Daily horoscope) ನೋಡುತ್ತಾರೆ. ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಹಾಗಾದರೆ ಇಂದಿನ (2023 ಜುಲೈ​ 07) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಮಿಥುನ ಮಾಸ, ಮಹಾನಕ್ಷತ್ರ: ಆರ್ದ್ರಾ, ಮಾಸ: ಆಷಾಢ, ಪಕ್ಷ: ಕೃಷ್ಣ, ವಾರ: ಶುಕ್ರ, ತಿಥಿ: ಪಂಚಮೀ, ನಿತ್ಯನಕ್ಷತ್ರ: ಶತಭಿಷಾ, ಯೋಗ: ಪ್ರೀತಿ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 09 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 04 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 11:00 ರಿಂದ ಮಧ್ಯಾಹ್ನ 12:37ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 03:51 ರಿಂದ 05:28ರ ವರೆಗೆ, ಗುಳಿಕ ಕಾಲ ಬೆಳಗ್ಗೆ 07:47 ರಿಂದ 09:24ರ ವರೆಗೆ.

ಮೇಷ: ಪಾಲುದಾರಿಕೆಯಲ್ಲಿ ನಿಮಗೆ ಆಸಕ್ತಿಯು ಕಡಿಮೆ ಆಗಲಿದೆ. ಮಕ್ಕಳಿಂದ ನಿಮಗೆ ಧನವು ಪ್ರಾಪ್ತವಾಗಬಹುದು. ಆಸ್ತಿಯನ್ನು ಖರೀದಿಸುವ ಯೋಚನೆ ಇರಲಿದೆ. ತಿಳಿದವರ ಜೊತೆ ಆಧ್ಯಾತ್ಮಿಕ ವಿಚಾರವನ್ನು ಚರ್ಚಿಸುವಿರಿ. ಮಿತ್ರರ ಸಹವಾಸದಿಂದ ನೀವು ಬದಲಾಗುವಿರಿ. ನಿಮ್ಮ ನಡವಳಿಕೆಯಲ್ಲಿ ಆದ ವ್ಯತ್ಯಾಸವು ಅನುಮಾನಕ್ಕೆ ಕಾರಣವಾಗಲಿದೆ. ಹಳೆಯ ವಸ್ತುಗಳನ್ನು ಮಾರಾಟ ಮಾಡುವಿರಿ. ಆದಾಯದ ಮೂಲವನ್ನು ಗಟ್ಟಿ ಮಾಡಿಕೊಳ್ಳುವುದು ಉತ್ತಮ. ನಾನಾ ಪ್ರಕಾರವಾಗಿ ಹಣದ ಹರಿವು ಇರಲಿದೆ. ಅತಿಯಾದ ನಿರೀಕ್ಷೆಯನ್ನು ಇಟ್ಟುಕೊಂಡು ಬೇಸರಗೊಳ್ಳುವಿರಿ.

ವೃಷಭ: ಉದ್ಯೋಗದಲ್ಲಿ ನೀವು ಪ್ರಗತಿಯನ್ನು ಬಯಸುವಿರಿ. ನಿಮ್ಮ‌ ಆಲೋಚನೆಗಳು ಸಫಲವಾಗಲು ಕೆಲವು ಸಮಯವು ಬೇಕಾದೀತು.‌ ಸ್ನೇಹಿತರು ನಿಮ್ಮ ಜೊತೆ ಇರಲು ಬಯಸುವರು. ಎಲ್ಲರೂ ನಿಮಗೆ ಸಹಕಾರವನ್ನು ನೀಡಲಾರರು. ಹೊಸ ಉದ್ಯೋಗದಲ್ಲಿ ಉತ್ಸಾಹವು ಹೆಚ್ಚು ಇರಲಿದೆ. ಆತ್ಮವಿಶ್ವಾಸದ ಕೊರತೆಯನ್ನು ನಿಮ್ಮ ಶ್ರಮದ ಕೆಲಸವು ನೀಗಿಸುವುದು. ಆಪ್ತರು ನಿಮಗೆ ಇಷ್ಟವಾಗದೇ ಹೋಗಬಹುದು. ನಿಮ್ಮ ಜಗತ್ತನ್ನು ಸೃಷ್ಟಿಸಿಕೊಳ್ಳಲು ನೀವು ಇಷ್ಟಪಡುವಿರಿ. ಕುಲದೇವರ ಸ್ಮರಣೆಯನ್ನು ಮಾಡುವಿರಿ.

ಮಿಥುನ: ಇಂದು ನಿಮಗೆ ಸಣ್ಣ ಭಯವು ಕಾಡಬಹುದು. ಸಹೋದರರು ನಿಮಗೆ ಬೇಕಾದ ಸಹಾಯವನ್ನು ಮಾಡುವರು. ವೇತನವನ್ನು ಹೆಚ್ಚಿಸಿಕೊಳ್ಳಲು ವಿನಂತಿ ಮಾಡಿಕೊಳ್ಳುವಿರಿ. ಸ್ತ್ರೀಯರು ಕೆಲಸಕ್ಕೆ ಸಹಾಯ‌ಮಾಡುವರು. ನಿಮ್ಮ ಸಾಮರ್ಥ್ಯವನ್ನು ಇತರರಿಗೆ ತಿಳಿಸಿ. ಇಂದು ಅಲಂಕಾರಕ್ಕೆ ಹೆಚ್ಚು ಸಮಯವನ್ನು ತೆಗೆದಿಡುವಿರಿ. ಹಣದ ಹೂಡಿಕೆಯಲ್ಲಿ ಆಸಕ್ತಿಯು ಕಡಿಮೆ ಆಗಲಿದೆ. ಕೆಟ್ಟ ಕನಸು ನಿಮ್ಮ ಮನಸ್ಸನ್ನು ಕದಡಲಿದೆ. ದಿನವನ್ನು ಉತ್ಸಾಹದಿಂದ ಆರಂಭಿಸುವಿರಿ.

ಕಟಕ: ಆದಾಯಕ್ಕಿಂತ ಖರ್ಚು ಹೆಚ್ಚಾಗಿ ನಿಮ್ಮ ಮನಸ್ಸಿನಲ್ಲಿ ತಳಮಳವಾಗಬಹುದು. ಅಧಿಕಾರಿಗಳಾಗಿದ್ದರೆ ನೀವೇ ಇಂದು ಕಾರ್ಯದಲ್ಲಿ ಪ್ರವೃತ್ತರಾಗುವಿರಿ. ತಂದೆಯ ಆರೋಗ್ಯದಲ್ಲಿ ವ್ಯತ್ಯಾಸವಾಗಲಿದ್ದು ಇದಕ್ಕೆ ಸೂಕ್ತ ಚಿಕಿತ್ಸೆಯನ್ನು ಕೊಡಿಸುವಿರಿ. ಎಲ್ಲವನ್ನೂ ಇನ್ನೊಬ್ಬರಿಗೆ ವಹಿಸಿ ನೀವು ನಿಶ್ಚಿಂತರಾಗಿರುವಿರಿ. ನಿಮ್ಮ ಕೆಲಸವು ಪೂರ್ಣವಾಗದೇ ಇನ್ನೊಬ್ಬರ ಬಳಿಯಲ್ಲಿ ಹೇಳಿಸಿಕೊಳ್ಳುವಿರಿ. ನೆಮ್ಮದಿಯನ್ನು ಪಡೆಯಲು ನಿಮಗೆ ಸಮಯ ಬೇಕಾದೀತು. ಅಪ್ರಾಮಾಣಿಕರಂತೆ ನಿಮಗೆ ಅನ್ನಿಸಬಹುದು. ಸಮಯವು ಕಳೆದುಹೋದದ್ದು ಗೊತ್ತಾಗದೇ ಹೋದೀತು.

ಸಿಂಹ: ನಿಮ್ಮ ಬಹಳ ದಿನದ ಆಸೆಗಳನ್ನು ಇಂದು ಪೂರೈಸಿಕೊಳ್ಳುವಿರಿ. ಹಣವು ಸಿಗದೇ ನಿಮಗೆ ನಿರಾಸೆಯಾಗಲಿದೆ. ಆರೋಗ್ಯವನ್ನು ಸುಧಾರಿಸಿಕೊಂಡು ಕೆಲಸದಲ್ಲಿ ಪ್ರವೃತ್ತರಾಗಿರಿ. ಅಧಿಕ ಖರ್ಚಾಗಲಿದೆ. ವಸ್ತುಗಳನ್ನು ಕಳೆದುಕೊಂಡು ದುಃಖಿಸುವಿರಿ. ಹಳೆಯ ಖಾಯಿಲೆಗಳು ಮತ್ತೆ ಬರಲಿದೆ. ಏಕಾಂತದಲ್ಲಿ ಸಮಯವನ್ನು ಕಳೆದುಕೊಳ್ಳುವಿರಿ. ನಿಮ್ಮ ಸ್ನೇಹಿತವು ದೂರಾಗಲಿದೆ. ಕಛೇರಿಯ ಕೆಲಸವನ್ನು ಬೇಗ ಮುಗಿಸಿಕೊಳ್ಳುವಿರಿ. ಬಂಧುಗಳ‌ ಮನೆಗೆ ನೀವು ಹೋಗಲಿದ್ದೀರಿ. ಸಮಸ್ಯೆಗಳನ್ನು ಎದುರಿಸಲು ಸಿದ್ಧರಾಗಿರುವಿರಿ.

ಕನ್ಯಾ: ದಾಂಪತ್ಯದಲ್ಲಿ ಹೊಂದಾಣಿಕೆಯ ಕೊರತೆ ಕಾಣಿಸಬಹುದು. ನಿಮ್ಮ ವಾಸದ ಮನೆಯನ್ನು ಬದಲಿಸುವಿರಿ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಾಣಬಹುದಾಗಿದೆ. ನಿಮ್ಮ ಬಗ್ಗೆ ಆಡುಕೊಳ್ಳುವರು. ಮನಸ್ಸುನ್ನು ಸ್ಥಿರವಾಗಿ ಇಟ್ಟುಕೊಳ್ಳಿ. ಭವಿಷ್ಯವನ್ನು ಕಟ್ಟಿಕೊಳ್ಳಲು ಬಹಳ ಶ್ರಮಿಸುವಿರಿ. ನಿಮ್ಮ ಉತ್ಸಾಹವನ್ನು ಅನಾರೋಗ್ಯವು ಕುಗ್ಗಿಸಲಿದೆ. ಅಪವಾದಕ್ಕೆ ಹೆದರಿಹೋಗುವಿರಿ. ಇದಕ್ಕಾಗಿ ನಿಮ್ಮವರನ್ನು ಶಪಿಸುವಿರಿ. ಸುತ್ತಾಟವನ್ನು ಬಯಸುವಿರಿ. ದೇವತಾರ್ಚನೆಯನ್ನು ಮಾಡಲು ಆಸಕ್ತಿ ಇರಲಿದೆ.

ತುಲಾ: ಉದ್ಯೋಗದಲ್ಲಿರುವ ಮಹಿಳೆಗೆ ಉನ್ನತ ಸ್ಥಾನವು ಸಿಗಬಹುದು. ಸ್ಥಿರಾಸ್ತಿಯ ಮಾರಾಟವಾಗಲಿದೆ. ಮಿತ್ರರು ನಿಮ್ಮನ್ನು ಹಣಕ್ಕಾಗಿ ಪೀಡಿಸಬಹುದು. ಹೂಡಿಕೆಯಲ್ಲಿ ಎಚ್ಚರಿಕೆ ಇರಲಿ. ಕುಟುಂಬದ ಜೊತೆ ಹೆಚ್ಚು ಸಮಯವನ್ನು ಕಳೆಯಲು ಇಚ್ಛಿಸುವಿರಿ. ನೀವು ಕೊಟ್ಟ ಉಡುಗೊರೆಯಿಂದ ಸಂಗಾತಿಗೆ ಸಂತೋಷವಾಗಲಿದೆ. ವೃತ್ತಿಯ ಸ್ಥಳದಲ್ಲಿ ಪ್ರೇಮವು ಅಂಕುರಿಸಬಹುದು. ನಿಮ್ಮ ಸ್ವಂತ ಕೆಲಸಗಳಿಗೆ ಪರರ ಸಹಾಯವನ್ನು ನೀವು ಬಯಸುವುದಿಲ್ಲ. ಜೀವನದ ಅಕಸ್ಮಾತ್ ತಿರುವುಗಳು ನಿಮಗೆ ಅನುಕೂಲಕರವಾಗಿ ಇರಲಿದೆ. ಇನ್ನೊಬ್ಬರ ವಿಷಯವನ್ನು ತಿಳಿಯಲು ಹೆಚ್ಚು ಖುಷಿ ಪಡುವಿರಿ.

ವೃಶ್ಚಿಕ: ನಿಮಗೆ ಸಿಕ್ಕ ಪ್ರಶಂಸೆಯಿಂದ ಅಸೂಯೆಗೊಂಡು ಸಹೋದ್ಯೋಗಿಗಳು ತೊಂದರೆಯನ್ನು ಕೊಡಬಹುದು. ಮಿತ್ರರು ನಿಮಗೆ ಬೇಕಾದ ಸಹಾಯವನ್ನು ಮಾಡುವರು. ಹಣಕಾಸಿನ ವ್ಯವಹಾರದಲ್ಲಿ ಅಪರಿಚಿತರ ಆಗಮನವಾಗಬಹುದು. ಎಚ್ಚರಿಕೆಯಿಂದ ಇರಿ. ನಿಮ್ಮನ್ನು ಕೆಲಸದಿಂದ ತೆಗೆಯುವ ಭಯವು ಇರಲಿದೆ. ಸದ್ಯವಷ್ಟೇ ಸಾಲದಿಂದ ಮುಕ್ತರಾಗಿದ್ದು ಪುನಃ ಸಾಲ ಮಾಡಬೇಕಾಗಿ ಬರಬಹುದು. ಸ್ನೇಹಿತರು ನಿಮ್ಮನ್ನು ಭೇಟಿಯಾಗಲು ಬರಬಹುದು. ಸ್ವತಂತ್ರವಾಗಿ ನೀವು ಚಿಂತನೆಯನ್ನು ಮಾಡುವುದು ಒಳ್ಳೆಯದು.‌ ಅಕಸ್ಮಾತ್ತಾಗಿ ನಿಮಗೆ ಹೊಣೆಗಾರಿಕೆಯು ಬರಬಹುದು.

ಧನು: ಭೂಮಿಯ ಉತ್ಪನ್ನಗಳಿಂದ ನಿಮಗೆ ಲಾಭವಾಗುವುದು. ಆತುರದಲ್ಲಿ ಯಾವ ನಿರ್ಧಾರವನ್ನೂ ಮಾಡದೇ ಯೋಚಿಸಿ ಮುಂದುವರಿಯುವುದು ಉತ್ತಮ. ಕುಟುಂಬದಲ್ಲಿ ಬಂದ ಭಿನ್ನಾಭಿಪ್ರಾಯವನ್ನು ನೀವು ಸರಿ ಮಾಡಲು ಪ್ರಯತ್ನಿಸುವಿರಿ. ಅವರವರ ಜೀವನವು ಬಹಳ ಭಿನ್ನವಾಗಿದ್ದು ಯಾರ ಜೊತೆಯೂ ನೀವು ಹೋಲಿಸಿಕೊಂಡು ಕಷ್ಟಪಡುವಿರಿ. ನಿಮಗೆ ಗೌರವ ಸಿಗದೆ ಕಡೆ ಹೋಗುವುದು ಇಷ್ಟವಿಲ್ಲ. ದಾಂಪತ್ಯದಲ್ಲಿ ಸುಖವಾಗಿ ಕಾಲವನ್ನು ಕಳೆಯುವುರಿ. ನೌಕರರ ವಿಚಾರದಲ್ಲಿ ಒಂದು ಕಣ್ಣಿರಲಿ. ತಾಳ್ಮೆ ಅವಶ್ಯಕ.

ಮಕರ: ನಿಮ್ಮ ಇಂದಿನ ಕಾರ್ಯದಿಂದ‌ ಕಛೇರಿಯಲ್ಲಿ ನಿರೀಕ್ಷೆಯನ್ನು ಮೀರಿದ ಪ್ರಶಂಸೆಯು ಬರಬಹುದು. ನಿಮ್ಮವರೇ ನಿಮ್ಮ‌ ಯಶಸ್ಸನ್ನು ಸಹಿಸದೇ ತೊಂದರೆ ಕೊಡುವರು. ಹಣವನ್ನು ಸರಿಯಾಗಿ ಸಂಗ್ರಹಿಸಿ. ಸಾಲದಿಂದ ನೀವು ಮುಕ್ತರಾಗುವಿರಿ. ನಿಮ್ಮ ಆತ್ಮವಿಶ್ವಾಸವು ಅಹಂಕಾರದಂತೆ ಕಾಣಲಿದೆ. ಇಂದು ಅಲ್ಪ ಆನಂದಕ್ಕೆ ಹೆಚ್ಚು ಹಣವನ್ನು ಕೊಡುವಿರಿ.‌ ದೂರ ಪ್ರಯಾಣವನ್ನು ಮಾಡದೇ ಮುಂದೂಡುವುದು ಒಳ್ಳೆಯದು. ಕೆಲಸದಲ್ಲಿ ಇಂದು ಏಕಾಗ್ರತೆಯ ಕೊರತೆ ಕಾಣಬಹುದು. ನಿಮ್ಮ ಇಂದಿನ ಸ್ಥಾನವು ಬಹಳ ಪರಿಶ್ರಮದ ಫಲವಾಗಿದೆ.

ಕುಂಭ: ಹಿರಿಯರಿಂದ ನಿಮ್ಮ ಜೀವನಕ್ಕೆ ಮಾರ್ಗದರ್ಶನ ಸಿಗಲಿದೆ. ಉದ್ಯೋಗದ ಕಾರಣಕ್ಕೆ ಇಂದು ನೀವು ಪ್ರಯಾಣವನ್ನು ಮಾಡಬೇಕಾಗಿ ಬರಬಹುದು. ವಿದ್ಯಾರ್ಥಿಗಳಲ್ಲಿ ಆಲಸ್ಯವು ಹೆಚ್ಚಾಗಿದ್ದು ಶ್ರಮದ ಅವಶ್ಯಕತೆ ಅಧಿಕವಾಗಿರುವುದು. ಇಂದು ನಿಶ್ಚಿಂತೆಯಿಂದ ಇರಬೇಕು ಎಂದು ಅಂದುಕೊಂಡರೂ ಒಂದೊಂದೇ ಕೆಲಸಗಳು ಬರಬಹುದು. ವ್ಯಾಪಾರದಲ್ಲಿ ನಷ್ಟವಾಗಲದ್ದು ಲಾಭದ ತಂತ್ರವನ್ನು ರಚಿಸುವಿರಿ. ನಿಮ್ಮ ವರ್ತನೆಯಿಂದ ಆಚ್ಚರಿಯಾದೀತು. ಸಮಸ್ಯೆಗಳನ್ನು ನೀವು ಎದುರಿಸುವ ರೀತಿಯು ಭಿನ್ನವಾಗಿರುವುದು. ವಾಸ್ತವದಿಂದ ದೂರವಾದ ಕಲ್ಪನೆಯಿಂದ ಯಾವ ಲಾಭವಾಗದು.

ಮೀನ: ಕುಟುಂಬದಲ್ಲಿ ಸಂತಸದ ವಾತಾವರವಿರಲಿದೆ. ವಾಹನವನ್ನು ಚಲಾಯಿಸುವಾಗ ಸ್ವಲ್ಪ ಎಚ್ಚರವಿರಲಿ. ಹೊಸ ವ್ಯಾಪಾರದಲ್ಲಿ ನಿಮಗೆ ಮನಸ್ಸಾಗಲಿದೆ. ಇಂದು ನಿಮ್ಮದೇ ಸ್ವಂತ ಕಾರ್ಯಗಳು ಇರಲಿದ್ದು, ಬೇರೆ ಕಡೆ ಮನಸ್ಸು ಕೊಡುವುದು ಕಷ್ಟವಾದೀತು‌. ಯಾವ ಸಂದರ್ಭದಲ್ಲಿಯೂ ಯಾರನ್ನೂ ಅವಲಂಬಿಸಬಾರದು ಎಂಬ ಸತ್ಯವು ನಿಮಗೆ ಗೊತ್ತಾಗಬಹುದು. ದೇವರಲ್ಲಿ ಭಕ್ತಿ ಕಡಿಮೆಯಾಗಬಹುದು. ಇಂದು ಹೆಚ್ಚಿನ ಸಮಯವನ್ನು ವಿಶ್ರಾಂತಿಯಲ್ಲಿ ಕಳೆಯುವಿರಿ. ಅಂದುಕೊಂಡ ಕೆಲಸಗಳು ಪೂರ್ಣವಾಗದೇ ಆತಂಕಕ್ಕೆ ಒಳಗಾಗುವಿರಿ. ನಿಮ್ಮ ಅನುಭವವು ಪಾಠವಾಗಲಿದೆ ನಿಮಗೆ.