Daily Horoscope: ಸಂಗಾತಿಯೊಂದಿಗಿನ ಕಲಹ ಸರಿ ಮಾಡಿಕೊಳ್ಳುವ ಸಮಯ

ನೀವು ಮೇಷ, ವೃಷಭ, ಮಿಥುನ, ಕಟಕ, ಸಿಂಹ, ಕನ್ಯಾ ರಾಶಿಯವರೇ? ಹಾಗಿದ್ದರೆ ಇಂದಿನ (2023 ಜುಲೈ 06) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Daily Horoscope: ಸಂಗಾತಿಯೊಂದಿಗಿನ ಕಲಹ ಸರಿ ಮಾಡಿಕೊಳ್ಳುವ ಸಮಯ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Digi Tech Desk

Updated on:Jul 06, 2023 | 2:53 PM

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಜುಲೈ 06 ಗುರುವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಭವಿಷ್ಯ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಮಿಥುನ ಮಾಸ, ಮಹಾನಕ್ಷತ್ರ: ಆರ್ದ್ರಾ, ಮಾಸ: ಆಷಾಢ, ಪಕ್ಷ: ಕೃಷ್ಣ, ವಾರ: ಗುರು, ತಿಥಿ: ತೃತೀಯಾ, ನಿತ್ಯನಕ್ಷತ್ರ: ಧನಿಷ್ಠಾ, ಯೋಗ: ವಿಷ್ಕಂಭ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 09 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 04 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 02:14 ರಿಂದ 03:51ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 06:10 ರಿಂದ 07:47ರ ವರೆಗೆ, ಗುಳಿಕ ಕಾಲ ಬೆಳಗ್ಗೆ 09:23 ರಿಂದ 11:00ರ ವರೆಗೆ.

ಮೇಷ: ನಿಮ್ಮದಲ್ಲದ ವಿಚಾರದಲ್ಲಿ ಸಲಹೆಯನ್ನು ಕೊಡಲು ಹೋಗುವುದು ಬೇಡ. ಯಾರದೋ ಅಸೆಗೆ ನೀವು ಬಲಿಯಾಗಬಹುದು. ನಿಮ್ಮ ನಡುವಲ್ಲಿ ಬಿಟ್ಟು ಆನಂದಿಸುವರು. ಗೃಹ ನಿರ್ಮಾಣ ಕಾರ್ಯದಲ್ಲಿ ಅತಿಯಾ ಗಡಿಬಿಡಿ ಬೇಡ. ಒಂದೊಂದೇ ಮೆಟ್ಟಿಲೇರಿ ತುದಿಯನ್ನು ಮುಟ್ಟಬೇಕು. ಒಂದೇ ಬಾರಿಗೆ ಆಗುವುದಿಲ್ಲ.‌ ಸಜ್ಜನರ ಸಹವಾಸ ಸಿಗಬಹುದು. ಅನಪೇಕ್ಷಿತ ವಿಷಯವನ್ನು ಯಾರ ಜೊತೆಯೂ ಮಾತನಾಡಬೇಡಿ. ನಿಮ್ಮ‌‌ ಕೆಲಸದ ಬಗ್ಗೆ ಗಮನ ಹೆಚ್ಚಿರಲಿ. ಏಕಾಗ್ರತೆಯು ಭಂಗವಾಗಲು ಅನೇಕ ಕಾರಣಗಳು ಇರಲಿವೆ.

ವೃಷಭ: ಇಂದು ನೀವು ಮಕ್ಕಳ ಜೊತೆ ಖುಷಿಯಿಂದ ಕಾಲ ಕಳೆಯುವಿರಿ. ಅನಿದ್ದನ್ನು ಹೇಳಿಕೊಂಡು ಮನಸ್ಸು ನಿರಾಳವಾಗಲಿದೆ. ವ್ಯವಹಾರದಿಂದ ವಂಚಿತರಾಗುವಿರಿ. ತಾಯಿಯು ನಿಮಗೆ ಬೇಕಾದ ಸಹಕಾರವನ್ನು ಕೊಡುವಳು. ಉಸಿರಾಟ ತೊಂದರೆ ಕಾಣಿಸಿಕೊಳ್ಳಬಹುದು. ಸಮಯಪಾಲನಯಲ್ಲಿ ಸೋಲುವಿರಿ. ಸಂದರ್ಭವನ್ನು ನೋಡಿಕೊಂಡು ಮಾತನಾಡಿ. ಅನಿರೀಕ್ಷಿತ ಸುದ್ದಿಯು ಇಂದು ಬರಬಹುದು. ನಿಮ್ಮ‌ ವಸ್ತುಗಳನ್ನು ಜೋಪಾನವಾಗಿ ಇಟ್ಟುಕೊಳ್ಳಿ. ಮನೆಯವರ ಜೊತೆ ಸಮಯವನ್ನು ಕಳೆಯುವಿರಿ.

ಮಿಥುನ: ನಿಮ್ಮ ಮಾತುಗಳು ಇನ್ನೊಬ್ಬರಲ್ಲಿ ಕರುಣೆಯನ್ನು ಉಂಟುಮಾಡುವುದು. ಇಂದಿನ ನಿಮ್ಮ ಕಾರ್ಯಪರತೆಯಿಂದ ಸಂಸ್ಥೆಯು ಯಶಸ್ಸನ್ನು ಸಾಧಿಸಬಹುದು. ನಿಮ್ಮ ಆಲೋಚನೆಗಳು ನಿಮ್ಮ ವ್ಯಕ್ತಿತ್ವವನ್ನು ರೂಪಿಸಿದೆ. ಇಂದು ಸಂಗಾತಿಯ ನಡುವೆ ಭಿನ್ನಾಭಿಪ್ರಾಯಗಳು ಏಳಬಹುದು. ಒಬ್ಬರು ತಟಸ್ಥರಾಗಿ. ವಿದ್ಯಾರ್ಥಿಗಳು ಇಂದು ಖುಷಿಪಡಲಿದ್ದಾರೆ. ಮಾತಿನಲ್ಲಿ ಹೆಚ್ಚಿನ ಎಚ್ಚರವಿರಲಿ, ಕುಹುಕವಾಡುವುದು ನಿಮ್ಮ ಇಷ್ಟದವರ ಜೊತೆ ಸಮಯವನ್ನು ಕಳೆಯುವಿರಿ. ವಿವಾದವನ್ನು ಮಾಡಿಕೊಳ್ಳಲು ಹೋಗಬೇಡಿ. ಶ್ರಮಕ್ಕೆ ತಕ್ಕ ಫಲವು ಸಿಗಬಹುದು.

ಕಟಕ: ಸಾರ್ವಜನಿಕವಾಗಿ ಸ್ಥಾನಮಾನವನ್ನು ಪಡೆಯಲು ಹಂಬಲಿಸುವಿರಿ. ರಾಜಕಾರಣ ಗಾಳಿ ಬೀಸಲಿದೆ. ಇದರಿಂದ ನೀವು ಪ್ರಭಾವಿತರೂ ಆಗಬಹುದು. ಆದಾಯದ ಮೂಲವನ್ನು ನೀವು ಗಟ್ಟಿ ಮಾಡಿಕೊಳ್ಳುವಿರಿ. ನಿಮ್ಮ ಸಹೋದರನ ಆರೋಗ್ಯವು ವ್ಯತ್ಯಾಸವಾಗಬಹುದು. ಸಂಗಾತಿಯೇ ನಿಮ್ಮ ಕೆಲಸಗಳನ್ನು ಮಾಡಿಕೊಡಬಹುದು. ಸರ್ಕಾರದಲ್ಲಿ ಆಗಬೇಕಾದ ನಿಮ್ಮ ಕೆಲಸವು ವೇಗವಾಗಲಿದೆ. ಜೊತೆ ಇರುವವರ ಮೇಲೆ‌ ನಂಬಿಕೆ ಕಡಿಮೆ ಆದೀತು. ಸೇವಾ ಮನೋಭಾವವು ನಿಮಗೆ ಉಂಟಾಗಲಿದೆ. ನಿಮ್ಮ ಕುಲದವರನ್ನು ಕಳೆದುಕೊಳ್ಳಬಹುದು.

ಸಿಂಹ: ಸಣ್ಣ ಪುಟ್ಟ ತೊಂದರೆಗಳಿಗೆ ನೀವು ಇಂದು ಹಿಂದೆ ಹೆಜ್ಜೆ ಇಡುವ ಅವಶ್ಯಕತೆ ಇಲ್ಲ. ಧೈರ್ಯದಿಂದ ಮುನ್ನಡೆಯಿರಿ. ಹಣಕಾಸಿನ ತೊಂದರೆಯನ್ನು ಸ್ನೇಹಿತರು ನೀಗಿಸುವರು. ಸಂಗಾತಿಯ ನಡುವಣ ಕಲಹವನ್ನು ನೀವು ಸರಿ ಮಾಡಿಕೊಳ್ಳಿ. ಸುಳ್ಳಾಡಿ ಆತ್ಮವಂಚನೆಯನ್ನು ಮಾಡಿಕೊಳ್ಳಬೇಡಿ. ನಿಮ್ಮ ವಿರುದ್ಧ ಮಾತನಾಡಿಲ್ಲವೆಂದರೆ ನಿಮ್ಮ ಕ್ರಮ ಸರಿ ಇದೆ ಎಂದಲ್ಲ. ಬೇಸರವಾಗಬಾರದೆಂದೂ ಸುಮ್ಮನಿರುವರು. ಇಂದಿನ‌ ನಿಮ್ಮ ವಾತಾರಣವು ನಿಮ್ಮ ಉತ್ಸಾಹವನ್ನು ಹೆಚ್ಚಿಸುವುದು. ನೀರಿನಿಂದ ನೀವು ಭಯಪಡುವಿರಿ. ಆರೋಗ್ಯದಲ್ಲಿ ವ್ಯತ್ಯಾಸವಾಗಲಿದ್ದು ಮನೆಯಲ್ಲಿ ಮದ್ದನ್ನು ಮಾಡಿಕೊಂಡು ಆರಾಮಾಗಿರಿ.

ಕನ್ಯಾ: ಸರಿಯಾದ ಸಮಯಕ್ಕೆ ಬುದ್ಧಿ ಸೂಚಿಸದೇ ಇದ್ದೀತು. ದುರ್ವ್ಯಸನವನ್ನು ರೂಢಿಸಿಕೊಳ್ಳುವ ಸಾಧ್ಯತೆ ಇದೆ. ಪಶ್ಚಾತ್ತಾಪದಿಂದ ನಿಮ್ಮ ತಪ್ಪುಗಳು ಸರಿಯಾಗಬಹುದು. ಆತ್ಮವಿಶ್ವಾಸವನ್ನು ಪ್ರಯತ್ನಪೂರ್ವಕವಾಗಿ ಬೆಳೆಸಿಕೊಳ್ಳಬೇಕಾಗುವುದು. ಕುಟಂಬದವರು ಸೇರಿಕೊಂಡು ಎಲ್ಲರ ಶ್ರೇಯಸ್ಸಿಗೆ ಧಾರ್ಮಿಕ ಕಾರ್ಯಗಳನ್ನು ಮಾಡುವರು. ಹೊಸ ವ್ಯವಹಾರವನ್ನು ಆರಂಭಿಸಿರುವವರಿಗೆ ಗೊಂದಲವಾಗಲಿದೆ. ದೊಡ್ಡವರ ವಿಚಾರದಲ್ಲಿ ನೀವು ಇಂದು ತಗ್ಗಿ ಬಗ್ಗಿ ನಡೆಯಬೇಕಾದೀತು. ಕೋಪವನ್ನು ಕಡಿಮೆ ಮಾಡಿಕೊಂಡು ಕಾರ್ಯದಲ್ಲಿ ತೊಡಗಿಕೊಳ್ಳಿ. ಏಕಾಗ್ರತೆಯ ಕೊರತೆಯನ್ನು ಸರಿ ಮಾಡಿಕೊಳ್ಳಿ.

Published On - 12:10 am, Thu, 6 July 23

‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ