Nithya Bhavishya: ಈ ರಾಶಿಯವರು ಇಂದು ಉದ್ಯೋಗದ ನಿಮಿತ್ತ ವಿದೇಶಕ್ಕೆ ಹೋಗುತ್ತೀರಿ

| Updated By: ವಿವೇಕ ಬಿರಾದಾರ

Updated on: Mar 11, 2023 | 6:41 AM

ಇಂದಿನ(2023 ಮಾರ್ಚ್ 11) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

Nithya Bhavishya: ಈ ರಾಶಿಯವರು ಇಂದು ಉದ್ಯೋಗದ ನಿಮಿತ್ತ ವಿದೇಶಕ್ಕೆ ಹೋಗುತ್ತೀರಿ
ಪ್ರಾತಿನಿಧಿಕ ಚಿತ್ರ
Image Credit source: www.indiamart.com
Follow us on

ಶುಭೋದಯ ಓದುಗರೇ….ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಕೆಲವರು ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದ್ರೆ ಇಂದಿನ(2023 ಮಾರ್ಚ್ 11) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1945, ಶುಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಕುಂಭ ಮಾಸ, ಮಹಾನಕ್ಷತ್ರ: ಪೂರ್ವಾಭಾದ್ರ, ಮಾಸ: ಫಾಲ್ಗುಣ, ಪಕ್ಷ: ಕೃಷ್ಣ, ವಾರ:ಶನಿವಾರ, ತಿಥಿ: ಚತುರ್ಥೀ, ನಿತ್ಯನಕ್ಷತ್ರ: ಸ್ವಾತಿ, ಯೋಗ: ಧ್ರವ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 44 ನಿಮಿಷಕ್ಕೆ, ಸೂರ್ಯಾಸ್ತ ಬೆಳಗ್ಗೆ 06 ಗಂಟೆ 41 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 09: 44 ರಿಂದ ಮಧ್ಯಾಹ್ನ 11:13ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 14:12 ರಿಂದ ಬೆಳಗ್ಗೆ 15:14ರ ವರೆಗೆ, ಗುಳಿಕ ಕಾಲ ಬೆಳಗ್ಗೆ 09:45 ರಿಂದ 0645  08:14ರ ವರೆಗೆ.

ಮೇಷ: ಇಂದು ನೀವು ಆಸಕ್ತಿದಾಯಕವಾದದ್ದನ್ನು ಮಾಡಲು ಅಥವಾ ನಿಮ್ಮ ಸ್ನೇಹಿತರೊಂದಿಗೆ ಇದ್ದು ನೀವು ಸ್ಫೂರ್ತಿಯನ್ನು ಪಡೆಯಬಹುದಾಗಿದೆ. ಹಣದ ಕೊರತೆಯಿಂದ ಸಾಲವನ್ನು ಮಾಡುವ ಸಾಧ್ಯತೆಯಿದೆ. ವಾಹನ ಖರೀದಿಯ ವಿಚಾರದಲ್ಲಿ ಗೊಂದಲಗಳು ಬರಬಹುದು. ಮನೆಯಲ್ಲಿ ಭಿನ್ನಾಭಿಪ್ರಾಯ ಇರಲಿದೆ. ಕೆಲವು ಸಮಸ್ಯೆಗಳು ನಿಮ್ಮೆದುರು ಬರಬಹುದು. ಉದ್ಯೋಗದ ನಿಮಿತ್ತ ಪರದೇಶಕ್ಕೆ ಪ್ರಯಾಣವನ್ನು ಮಾಡಬೇಕಾಗಿಬರಬಹುದು. ಸಂಗಾತಿಯ ಮಾತುಗಳನ್ನು ನೀವು ಸಹಿಸಲಾರಿರಿ. ಸಹನೆಯನ್ನು ಇಟ್ಟುಕೊಳ್ಳುವಿದೇ ನಿಜವಾದ ಶ್ರೀಮಂತಿಕೆ. ಇಂದು ನೀವು ನಿರಾಶಾವಾದಿ ದೃಷ್ಟಿಕೋನವನ್ನು ಬೆಳೆಸಿಕೊಳ್ಳಬಹುದು.

ವೃಷಭ: ನಿಮ್ಮ ಸಂಬಂಧದಲ್ಲಿ ಅನಗತ್ಯ ಅಡೆತಡೆಗಳನ್ನು ಉಂಟುಮಾಡಬಹುದು. ಒತ್ತಡದಿಂದ ನಿಮಗೆ ವಿಶ್ರಾಂತಿಯ ಅವಶ್ಯಕತೆ ಇರುತ್ತದೆ. ಇಲ್ಲವಾದರೆ ಮಾಡುವ ಕೆಲಸವು ಅಶಿಸ್ತಿನಿಂದ ಇರಬಹುದು. ದೂರದ ಬಂಧುಗಳು ನಿಮ್ಮ ಪರಿಚಯವನ್ನು ಮಾಡಿಕೊಂಡಾರು. ನೈಜ-ಸಮಯದ ಆರ್ಥಿಕ ಲಾಭಗಳನ್ನು ನೋಡುವುದು ನಿಮ್ಮನ್ನು ಬಹಳಷ್ಟು ಪ್ರೇರೇಪಿಸುತ್ತದೆ. ಕೆಲವು ಸಂಗತಿಗಳು ಅನಿರೀಕ್ಷಿತವಾಗಿ ಬಂದು ಮನಸ್ಸಿನ ನೆಮ್ಮದಿಯನ್ನು ಹಾಳುಗೆಡವುವುವು. ಅತಿಯಾದ ಆತ್ಮವಿಶ್ವಾಸದ ಜೊತೆ ಪೂರ್ವಾಪರಜ್ಞಾನವೂ ಇರಲಿ. ಯಾರ ಮಾತನ್ನೇ ಕೇಳುವುದಿದ್ದರೂ ನಿಮ್ಮ ಸಾಮರ್ಥ್ಯವನ್ನು ನೋಡಿಕೊಂಡು ತೀರ್ಮಾನಕ್ಕೆ ಬನ್ನಿ. ಅನಾರೋಗ್ಯವು ಬಾಧಿಸಬಹುದು.

ಮಿಥುನ: ಆಪ್ತರೆಂದು ನಿಮ್ಮ ಎಲ್ಲ ವಿಚಾರಗಳನ್ನು ಯಾರ ಜೊತೆಯೂ ಹಂಚಿಕೊಳ್ಳಬೇಡಿ. ಹಗುರವಾದ ಮಾತುಗಳು ನಿಮಗೆ ಅಪಮಾನವನ್ನು ಮಾಡುವುದು. ನಿದ್ರೆಯಿಲ್ಲದೇ ಮನಸ್ಸು ಕಿರಿಕಿರಿಯನ್ನು ಅನುಭವಿಸುವುದು. ತಂದೆಯಿಂದ ಹಣವನ್ನು ಪಡೆದು ನಿಮಗೆ ಬೇಕಾದ ವಸ್ತುಗಳನ್ನು ಪಡೆಯುವಿರಿ. ಅಧಿಕ ತೂಕವು, ಭವಿಷ್ಯದಲ್ಲಿ ಗಂಭೀರ ಸಮಸ್ಯೆಯನ್ನು ಉಂಟುಮಾಡಬಹುದು. ಅವಾಕಶಗಳು ನೂರಿದ್ದರೂ ಯೋಗ್ಯತೆ ಹಾಗೂ ಸಾಮರ್ಥ್ಯವನ್ನು ಅರಿತುಕೊಂಡು ಮುಂದಡಿಯಿಡಿ. ವ್ಯಾಪಾರಸ್ಥರು ತಮ್ಮ ಗೆಳೆಯರ ಸಲಹೆಯನ್ನು ಆಲಿಸಬೇಕು. ನಕಾರಾತ್ಮಕ ಆಲೋಚನೆಗಳು ನಿಮ್ಮ ಗಮನವನ್ನು ಕಳೆದುಕೊಳ್ಳಲು ಕಾರಣವಾಗಬಹುದು.

ಕಟಕ: ನಿಮ್ಮ ಕುಟುಂಬ ಅಥವಾ ಆಸ್ತಿಯ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳಲು ಉತ್ತಮ ಸಮಯವಲ್ಲ. ನಿಮ್ಮ ಅಗತ್ಯತೆಗಳ ಯಾದಿಯು ತುಂಬಾ ದೊಡ್ಡದಿದ್ದು ಅದನ್ನು ಪೂರೈಸಲು ಸತತ ಪ್ರಯತ್ನವನ್ನು ಮಾಡುವಿರಿ. ನೀವು ಕೈಗೊಂಡ ಕಾರ್ಯಗಳು ಸಫಲವಾಗಲಿಲ್ಲ ಎಂಬ ಹತಾಶಭಾವವೂ ಸಿಟ್ಟೂ ಏಕಕಾಲಕ್ಕೆ ಬರಲಿದೆ. ಅಪರಿಚಿತರನ್ನು ಆಪ್ತರನ್ನಾಗಿ ಮಾಡಿಕೊಳ್ಳಲು ಹೋಗಿ ಅನಾಹುತವಾದೀತು. ನಿಮಗಿರುವ ಖಾಯಿಲೆಯು ಹೆಚ್ಚು ನೋವನ್ನು ಕೊಟ್ಟೀತು. ಅಲ್ಪ ಧನಲಾಭವಾಗಲಿದೆ. ವಿದ್ಯುತ್ ಉಪಕರಣಗಳ ವ್ಯಾಪಾರಿಗಳಿಗೆ ಲಾಭವಾಗಲಿದೆ. ನಿಮ್ಮ ವ್ಯಾಪಾರವನ್ನು ವಿಸ್ತರಿಸಲು ನೀವು ಬ್ಯಾಂಕ್ ಸಾಲಕ್ಕೆ ಅರ್ಜಿ ಸಲ್ಲಿಸಬಹುದು.

ಸಿಂಹ: ಅತಿಯಾದ ಚಿಂತನೆ ಮತ್ತು ಆರೋಗ್ಯ ಸಮಸ್ಯೆಗಳನ್ನು ಎದುರಿಸಲು ಸರಿಯಾದ ಆಹಾರ, ವಿಶ್ರಾಂತಿ, ವ್ಯಾಯಾಮ ಮಾಡಿ. ಜೋಪಾನವಾಗಿ ಇರಿಸಿಕೊಂಡಿರುವ ನಿಮ್ಮ ಅಮೂಲ್ಯವಾದ ವಸ್ತುಗಳು ಕಣ್ಮರೆಯಾಗಿದ್ದು ಇಂದು ತಿಳಿಯಲಿದೆ. ಏಕಾಂತವನ್ನು ಇಷ್ಟಪಡುವವರಿದ್ದೀರಿ. ನಿಮ್ಮ ಆಲೋಚನೆಗೆ ತಕ್ಕಂತೆ ಎಲ್ಲವೂ ನಡೆಯುತ್ತಿದೆ ಎಂದು ಅನ್ನಿಸಿದರೂ ಅದನ್ನು ಪರಿವರ್ತಿಸಲು ಅಸಾಧ್ಯವಾಗುವುದು. ಗೊತ್ತಿರಬೇಕಾದ ಎಷ್ಟೋ ವಿಚಾರಗಳು ಗೊತ್ತಲ್ಲವೆಂದು ಬೇಸರ ಪಡಬೇಕಾಗಿಬರಬಹುದು. ನಿಮಗೆ ಯಾವುದೇ ಆರೋಗ್ಯ ಸಮಸ್ಯೆಗಳಿದ್ದರೆ, ಅದರಿಂದ ಸಂಪೂರ್ಣ ಹೊರಬರುವ ಮಾರ್ಗಗಳನ್ನು ಅನುಸರಿಸಿ.

ಕನ್ಯಾ: ಭೂಮಿಯ ವ್ಯವಹಾರವನ್ನು ಸದ್ಯಕ್ಕೆ ನಿಲ್ಲಿಸುವುದು ಅಥವಾ ಕೆಲವು ದಿನಗಳ ಅನಂತರ ನಡೆಸುವುದು ಯೋಗ್ಯವಿದೆ. ಹೊಸತನವನ್ನು ಇಷ್ಟಪಟ್ಟು ನಿಮ್ಮ ಜೀವನಶೈಲಿಯನ್ನು ಬದಲಿಸಿಕೊಳ್ಳುವ ಪ್ರಯತ್ನವನ್ನು ಮಾಡುವಿರಿ. ಲಾಭಕ್ಕಾಗಿ ಕೆಲವು ಅತ್ಯುತ್ತಮ ಅವಕಾಶಗಳಿದ್ದರೂ, ಯಾವುದೇ ಹಣಕಾಸಿನ ಬದ್ಧತೆಗಳನ್ನು ಮಾಡುವುದನ್ನು ತಪ್ಪಿಸಿ. ಭವಿಷ್ಯದ ಕುರಿತು ನಿಮಗೆ ನಿಮ್ಮದೇ ಕಲ್ಪನೆಗಳಿದ್ದು ಅದು ಸಾಕಾರಗೊಳ್ಳುವುದೋ ಇಲ್ಲವೋ ಎನ್ನುವ ಭಯವು ಕಾಡಲಿದೆ. ಅಪಮಾನವನ್ನು ಎದುರಿಸಬೇಕಾಗಬಹುದು ಎಂಬ ಆತಂಕವೂ ಮನೆ ಮಾಡಿರುತ್ತದೆ. ಹಣಕಾಸು ನಿರ್ವಹಣೆ ಮತ್ತು ಸಕಾರಾತ್ಮಕ ಕ್ರಮಗಳು ನಂತರದ ಭಾಗದಲ್ಲಿ ಕ್ರಮೇಣ ಮುನ್ನಡೆಯಲು ಮತ್ತು ಏಳಿಗೆಗೆ ದಾರಿ ಮಾಡಿಕೊಡುತ್ತದೆ.

ತುಲಾ: ಸಂಗಾತಿಯೊಂದಿಗಿನ ಭಿನ್ನಾಭಿಪ್ರಾಯ ಹಗೆತನದ ಸಂಭಾಷಣೆಗೆ ಕಾರಣವಾಗಬಹುದು. ಇಂದಿನ ನಿಮ್ಮ ಕೆಲಸವು ಶಿಸ್ತಿನಿಂದ ಇದ್ದರೂ ನಿಮ್ಮ ಜೊತೆಗಾರರು ಅದನ್ನು ಮೂದಲಿಸಲಿದ್ದಾರೆ. ವೈದ್ಯರನ್ನು ಬೇಟಿಯಾಗಿ ನಿಮಗೆ ಆಗುತ್ತಿರುವ ಶಾರೀರಿಕ ಸಮಸ್ಯೆಗಳನ್ನು ಅವರಲ್ಲಿ ಹೇಳಿಕೊಳ್ಳಿ. ನಿಮ್ಮವರ ಮೇಲೆ ತಪ್ಪು ತಿಳಿವಳಿಕೆಯನ್ನು ಹೊಂದಿ ಅವರ ತೇಜೋವಧೆಯನ್ನು ಮಾಡಿದ್ದಿರಿ. ಅದಕ್ಕೆ ಇಂದು ಪಶ್ಚಾತ್ತಾಪವನ್ನು ಅನುಭವಿಸುವಿರಿ. ದೂರದ ಪ್ರಯಾಣವನ್ನು ಮಾಡುವ ನಿರ್ಧಾರವನ್ನು ಮಾಡಲಿದ್ದೀರಿ. ವ್ಯವಸ್ಥೆಯ ಬಗ್ಗೆ ಮೊದಲೇ ತಿಳಿದುಕೊಳ್ಳಿ. ಮಕ್ಕಳು ನಿಮ್ಮ ಬಗ್ಗೆ ಅಸಡ್ಡೆಯ ಭಾವವನ್ನು ತೋರಿಸಲಿದ್ದು ಅದರಿಂದ ಬೇಸರಗೊಳ್ಳುವಿರಿ.

ವೃಶ್ಚಿಕ: ಸಹೋದ್ಯೋಗಿಗಳೊಂದಿಗೆ ನೀವು ಕೆಲವು ಸಮಸ್ಯೆಗಳನ್ನು ಎದುರಿಸಬಹುದು. ವಿದೇಶದಲ್ಲಿ ಕೆಲಸಮಾಡಲು ನಿಮಗೆ ಅನೇಕ ಅವಕಾಶಗಳು ಸಿಗಬಹುದು. ಹಣದ ವಿಚಾರದಲ್ಲಿ ಜಾಗರೂಕರಾಗಿರಿ. ಅನಿರೀಕ್ಷಿತ ಧನವ್ಯಯವು ಆಗಬಹುದು. ವಿದ್ಯಾರ್ಥಿಗಳು ನಿಮ್ಮ ಮುಂದಿನ ವಿಷಯಗಳ ಕುರಿತು ಚರ್ವೆಗಳನ್ನು ಮಾಡಿ ಮುಂದುವರಿಯಿರಿ. ದಾಂಪತ್ಯದಲ್ಲಿ ಉಂಟಾದ ಕಲಹವು ಮಕ್ಕಳ‌ ಮೇಲೆ ಪ್ರಭಾವವನ್ನು ಬೀರಲಿದೆ. ಉದ್ಯೋಗಸ್ಥಾನದಲ್ಲಿ ಕೆಲವು ಮಾತುಗಳು ನಿಮ್ಮ ವಿರುದ್ಧವಾಗಿಯೂ ಇರಬಹುದು.

ಧನು: ವಿದ್ಯಾರ್ಥಿಗಳ ಒಟ್ಟಾರೆ ಕಾರ್ಯಕ್ಷಮತೆ ಗಮನಾರ್ಹವಾಗಿ ಸುಧಾರಿಸಿರಬಹುದು. ನಿಮ್ಮ ಅಂದಿನ ಸ್ಥಿತಿಯನ್ನು ನೆನೆಸಿಕೊಂಡು ಹೆಮ್ಮೆಪಡಲಿದ್ದೀರಿ. ಪಿತ್ರಾರ್ಜಿತ ಆಸ್ತಿಯನ್ನು ಪಡೆಯಲು ಹವಣಿಸುವಿರಿ. ನೀವು ಆಪ್ತರಿಗೋಸ್ಕರ ಸಮಯವನ್ನು ಇಡಲಿದ್ದೀರಿ. ಹಳೆಯ ಪ್ರೇಮಪ್ರಕರಣವು ಇಂದು ಬೆಳಕಿಗೆ ಬರಬಹುದು. ನಿಮಗೆ ಬೆಲೆ ಕೊಡದೇ ಇರುವದನ್ನು ಕಂಡು ಬೇಸರಿಸುವಿರಿ. ಅಗಾಧವಾದ ನಿರೀಕ್ಷೆಗಳನ್ನು ಎದುರಿಸುತ್ತಿದ್ದರೂ, ಪರಿಸರವು ಸಾಮಾನ್ಯವಾಗಿ ಅನುಕೂಲಕರವಾಗಿರುತ್ತದೆ ಖುಷಿಪಡುವ ಸಂಗತಿಗಳಿದ್ದರೂ ದುಃಖಿಗಳಾಗುವ ಸಾದ್ಯತೆ ಇದೆ. ಶತ್ರುಗಳು ನಿಮ್ಮನ್ನು ಮಿತ್ರರನ್ನಾಗಿ ಮಾಡಿಕೊಳ್ಳಲು ಬರಬಹುದು. ಬ್ಯಾಂಕ್ ಉದ್ಯೋಗಿಗಳಿಗೆ ಉನ್ನತಸ್ಥಾನವನ್ನು ನೀಡುವ ಪ್ರಸ್ತಾಪ ಬರಬಹುದು.

ಮಕರ: ಗೆಳೆತನವು ಪ್ರೀತಿಯಾಗಿ ಬದಲಾಗಿ ವಿವಾಹಕ್ಕೆ ತಯಾರಾಗಿದೆ. ಕ್ಷಣಕಾಲದಲ್ಲಿ ಆದ ಅನಾಹುತಕ್ಕೆ ಬಹಳ ಕಷ್ಟವನ್ನು ಅನುಭವಿಸುವಿರಿ. ತಂದೆ ಮತ್ತು ಮಕ್ಕಳಲ್ಲಿ ಸ್ವಲ್ಪಮಟ್ಟಿಗೆ ಕಲಹವಿರುವುದು. ಇಂದಿನ ನಿಮ್ಮ ಕೆಲಸಗಳು ಆಯಾಸವನ್ನು ತರಿಸುವುದು. ಕಲಾವಿದರು ಅವಕಾಶಗಳನ್ನು ಸೃಷ್ಟಿಕೊಳ್ಳಲಿದ್ದಾರೆ. ಗೃಹನಿರ್ಮಾಣದ ಪ್ರಸ್ತಾಪವು ಇರಲಿದೆ. ವಾಹನವನ್ನು ನಿಧಾನವಾಗಿ ಚಲಾಯಿಸಿ. ಬೇರೆಯವರ ತಪ್ಪಿನಿಂದ ನಿಮಗೆ ತೊಂದರೆಗಳು ಆಗಬಹುದು. ಆಪ್ತರ ಭೇಟಿಯು ನಿಮಗೆ ಸಂತೋಷವನ್ನು ಕೊಡಲಿದೆ. ಹಿಂದಿನ ಹೂಡಿಕೆಗಳು ಬಹಳ ಆದಾಯವು ಸಿಗಲಿದೆ.

ಕುಂಭ: ಇಂದು ನೀವು ಬಹಳ ಕಷ್ಟಪಟ್ಟು ಕೆಲಸ ಮಾಡಲಿದ್ದೀರಿ. ತಾತ್ಸಾರಮಾಡದೇ ಕ್ರಮಬದ್ಧವಾಗಿ ಶತ್ರುಗಳನ್ನು ಗೆಲ್ಲಿರಿ. ಕ್ರೀಡಪಟುಗಳು ತಮ್ಮ ಅವಿರತಶ್ರಮವನ್ನು ನಡೆಸಲಿದ್ದಾರೆ. ತಾಯಿಯಿಂದ ನಿಮಗೆ ಧನವು ಲಾಭವಾಗಬಹುದು. ಪಿತ್ತಕ್ಕೆ ಸಂಬಂಧಿಸಿದ ಖಾಯಿಲೆಗಳು ಬರಬಹುದು. ತಂತ್ರಜ್ಞಾನ ಕ್ಷೇತ್ರಗಳಲ್ಲಿ ನೀವು ಸಾಧ್ಯವಾದಷ್ಟು ಜ್ಞಾನವನ್ನು ಪಡೆಯಲು ಪ್ರಯತ್ನಿಸುತ್ತಿರುವಿರಿ. ವ್ಯಾಪರದಲ್ಲಿ ಸ್ವಲ್ಪ ನಷ್ಟವನ್ನು ಕಾಣುವಿರಿ. ಕೃಷಿಕರು ತಮ್ಮ ಮುಂದಿನ ಯೋಚನೆಗಳನ್ನು ಮಾಡುವರು. ಸಂದರ್ಭಕ್ಕೆ ಯೋಗ್ಯವಾಗಿ ವರ್ತಿಸಿ.

ಮೀನ: ಹೊಸ ಯೋಜನೆಯನ್ನು ಪ್ರಾರಂಭಿಸುವ ಸಮಯ ಬಂದಿದೆ. ತಡಮಾಡದೇ ಆರಂಭಿಸಿ. ಆಪ್ತರ ಸಹಕಾರವು ಸಿಗಲಿದೆ. ದಾಯಾದಿ ಕಲಹವು ನ್ಯಾಯಾಲಯದ ವರಗೂ ಹೋಗಬಹುದು. ಪುಣ್ಯಕ್ಷೇತ್ರಗಳ ದರ್ಶನವನ್ನು ಪಡೆಯುವಿರಿ. ನಿಮ್ಮ ಯೋಜನೆಗಳು ಎಣಿಸಿದಂತೆ ಆಗದೇ ಇರಬಹುದು. ಒತ್ತಡದಿಂದ ಹೊರಬರುವ ಪ್ರಯತ್ನಮಾಡುವಿರಿ. ಅಪರಿಚಿತಸ್ಥಳವು ಆಪ್ತವೂ ಆಗಲಿದೆ. ಮನೆಯಿಂದ ದೂರದಲ್ಲಿ ಇರುವವರಿಗೆ ಮನೆಯ ಹಂಬಲವಾಗುವುದು. ಒಂಟಿಯಾಗಿ ಇರಲು ಇಷ್ಟಪಡುವಿರಿ. ಅಧ್ಯಯನದಿಂದ ನಿಮ್ಮನ್ನು ಚಂಚಲವಾಗಿಸುವ ಅನಗತ್ಯ ವಾದಗಳನ್ನು ಬಿಡಿ.

-ಲೋಹಿತಶರ್ಮಾ, ಇಡುವಾಣಿ

Published On - 6:41 am, Sat, 11 March 23