Daily Horoscope 11 June: ವೃತ್ತಿ ಕ್ಷೇತ್ರದಲ್ಲಿ ಮನ್ನಣೆ, ವ್ಯಾಪಾರ ವಿಸ್ತರಣೆ ಸಾಧ್ಯತೆ

ಇಂದಿನ (2023 ಜೂನ್​ 11) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

Daily Horoscope 11 June: ವೃತ್ತಿ ಕ್ಷೇತ್ರದಲ್ಲಿ ಮನ್ನಣೆ, ವ್ಯಾಪಾರ ವಿಸ್ತರಣೆ ಸಾಧ್ಯತೆ
ಪ್ರಾತಿನಿಧಿಕ ಚಿತ್ರImage Credit source: freepik
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Jun 11, 2023 | 12:02 AM

ಶುಭೋದಯ ಓದುಗರೇ ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದರೆ ಇಂದಿನ (2023 ಜೂನ್​ 10) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ರೋಹಿಣೀ, ಮಾಸ: ಜ್ಯೇಷ್ಠ, ಪಕ್ಷ: ಕೃಷ್ಣ, ವಾರ: ಭಾನು, ತಿಥಿ: ಅಷ್ಟಮೀ, ನಿತ್ಯನಕ್ಷತ್ರ: ಪೂರ್ವಾಭದ್ರ, ಯೋಗ: ಪ್ರೀತಿ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 04 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 59 ನಿಮಿಷಕ್ಕೆ, ರಾಹು ಕಾಲ ಸಂಜೆ 05:23 ರಿಂದ 06:59ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:32 ರಿಂದ 02:09ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:46 ಗಂಟೆ 05:23ರ ವರೆಗೆ.

ಮೇಷ: ಇಂದು ಅನುಭವಿ ಜನರಿಂದ ಬೆಂಬಲವನ್ನು ಪಡೆಯುತ್ತೀ ಒಡೆರಿ. ವೃತ್ತಿಜೀವನದಲ್ಲಿ ಪರಿಣಾಮ ಹೆಚ್ಚಾಗುತ್ತದೆ. ಆರ್ಥಿಕ ಪರಿಸ್ಥಿತಿ ಮಧ್ಯಮವಾಗಿ ಉತ್ತಮವಾಗಿರುತ್ತದೆ. ಆತ್ಮವಿಶ್ವಾಸ ಹೆಚ್ಚುತ್ತಿದೆ. ವೃತ್ತಿಕ್ಷೇತ್ರದಲ್ಲಿ ಅತಿಯಾದ ಉತ್ಸಾಹ ಬೇಡ. ಅನೇಕ ಸಂದರ್ಭಗಳಲ್ಲಿ, ನಿಮ್ಮ ನಿರೀಕ್ಷೆಗೆ ವಿರುದ್ಧವಾದುದು ನಡೆಯಬಹುದು. ಹೆಚ್ಚು ಕುತೂಹಲ ಬೇಡ. ಪ್ರಯಾಣದಲ್ಲಿ ಜಾಗರೂಕರಾಗಿರಿ, ಅಪಘಾತ ಸಂಭವಿಸುವ ಸಾಧ್ಯತೆ ಇದೆ. ಯಾವುದೇ ರೀತಿಯ ಆರ್ಥಿಕ ಅಪಾಯವನ್ನು ತೆಗೆದುಕೊಳ್ಳಬೇಡಿ. ಮೃದು ಮಾತು ಕ್ಷೇತ್ರದಲ್ಲಿ ಪ್ರಯೋಜನವನ್ನು ನೀಡುತ್ತದೆ ಕಠಿಣ ಮಾತುಗಳು ಕ್ಷಣಿಕವಾಗಬಹುದು.

ವೃಷಭ: ವೃತ್ತಿಜೀವನದಲ್ಲಿ ನೀವು ಮಾಡುವ ಪ್ರಯತ್ನಗಳು ಯಶಸ್ವಿಯಾಗುತ್ತವೆ. ಆದರೆ ನೀವು ಕೆಲಸ ಮಾಡುವ ವಿಧಾನದಲ್ಲಿ ಸಮಸ್ಯೆ ಇರಬಹುದು. ವೃತ್ತಿಜೀವನದಲ್ಲಿ ನಿಮ್ಮ ಪ್ರಭಾವ ಹೆಚ್ಚಾಗುತ್ತದೆ. ಕುಟುಂಬ ಜೀವನವು ಆಹ್ಲಾದಕರವಾಗಿರುತ್ತದೆ. ನೀವು ಸಣ್ಣ ಸಮಸ್ಯೆಗಳನ್ನು ನಿರ್ಲಕ್ಷಿಸಿದರೆ, ನೀವು ಕುಟುಂಬದಲ್ಲಿ ಸಂತೋಷವನ್ನು ಪಡೆಯುತ್ತೀರಿ. ಕೆಲವು ಉತ್ತಮ ಪ್ರಯೋಜನಗಳ ಯೋಗವಿದೆ. ನಿಮ್ಮ ಕಠಿಣ ಪರಿಶ್ರಮವು ಫಲವನ್ನು ನೀಡುತ್ತದೆ. ಯಾವುದೇ ಸೂಕ್ತ ನಿರ್ಧಾರವು ನಿಮ್ಮ ಗೌರವವನ್ನು ಹೆಚ್ಚಿಸುತ್ತದೆ. ಮಕ್ಕಳ ಅಜಾಗರೂಕತೆಯಿಂದ ಒತ್ತಡ ಹೆಚ್ಚಾಗುತ್ತದೆ.

ಮಿಥುನ: ರಾಜಕೀಯದಲ್ಲಿ ನಿಮ್ಮ ಪ್ರಭಾವ ಹೆಚ್ಚಾಗಲಿದೆ. ಶಿಕ್ಷಣ ಕ್ಷೇತ್ರದಲ್ಲಿ ನಿಮ್ಮ ಅನುಭವವು ಕೆಲಸ ಮಾಡುವುದು. ಇಂದು ನೀವು ದೊಡ್ಡ ಲಾಭವು ಪಡೆದುಕೊಳ್ಲಿ ಯತ್ನಿಸುವಿರಿ. ಹೊಸ ಮನೆಯ ನಿರ್ಮಾಣದ ಸಾಧ್ಯತೆಗಳು ಬಹಳ ಇರಲಿವೆ. ಬಹುನಿರೀಕ್ಷಿತ ಕೆಲಸದಿಂದ ಯಶಸ್ಸಿದೆ. ಲಾಭ ಪಡೆಯಲು ಮಾಡಿದ ಪ್ರಯತ್ನಗಳು ಯಶಸ್ವಿಯಾಗುವುದು. ಮಿತ್ರರ ಸಂಪೂರ್ಣ ಬೆಂಬಲವನ್ನು ಪಡೆಯುವಿರಿ. ಮಾತಿನಲ್ಲಿ ಕಠೋರತೆ ಬೇಡ. ವಿವೇಚನೆಯನ್ನು ಬಳಸಿ.

ಕಟಕ: ನೀವು ಗಮನ ಕೊಡದಿದ್ದರೆ, ಅನೇಕ ಉತ್ತಮ ಅವಕಾಶಗಳು ಕಳೆದುಹೋಗುತ್ತವೆ. ಆರೋಗ್ಯವು ಒತ್ತಡಕ್ಕೆ ಕಾರಣವಾಗಬಹುದು. ಕುಟುಂಬ ಮತ್ತು ಸಹೋದ್ಯೋಗಿಗಳ ಮಹತ್ವವನ್ನು ಅರ್ಥಮಾಡಿಕೊಳ್ಳಿ ಮತ್ತು ಅವರೊಂದಿಗೆ ನಿಮ್ಮ ವ್ಯವಹಾರದಲ್ಲಿ ಜಾಗರೂಕರಾಗಿರಿ. ಪೋಷಕರ ಆರೋಗ್ಯವು ಚಿಂತೆಯುಂಟುಮಾಡಬಹುದು. ಅಲ್ಪಾವಧಿಯ ಹೂಡಿಕೆ ಲಾಭದಾಯಕವಾಗುತ್ತದೆ. ಕೆಲಸದ ಹೊರೆಯೊಂದಿಗೆ ಒತ್ತಡ ಕಾಣುತ್ತಿದೆ. ತಪ್ಪು ಲೆಕ್ಕಾಚಾರದಿಂದ ನಷ್ಟವಾಗುವ ಸಾಧ್ಯತೆಯಿದೆ. ನಿಮ್ಮವರ ಎದುರು ಅಹಂಕಾರವನ್ನು ತೋರಿಸಬೇಡಿ. ಮಕ್ಕಳೊಂದಿಗೆ ವಿವಾದಗಳು ಉಂಟಾಗಬಹುದು..

ಸಿಂಹ: ಸಮಯವು ಬಹಳ ಉತ್ಸಾಹ ಮತ್ತು ನೆಮ್ಮದಿಯಿಂದ ಕಳೆದುಹೋಗುತ್ತದೆ. ಅತಿಯಾದ ಆಲೋಚನೆಗಳು ತಲೆನೋವಿಗೆ ಕಾರಣವಾಗಬಹುದು. ಸಹೋದರ ಸಮಸ್ಯೆ ಒತ್ತಡಕ್ಕೆ ಕಾರಣವಾಗಬಹುದು. ತಂದೆಯ ಒರಟು ಸ್ವಭಾವದಿಂದ ಕಿರಿಕಿರಿಯಾಗಲಿದೆ. ಹೊಸ ಆದಾಯದ ಮೂಲಗಳು ಕಂಡುಬರುವುದು. ರಾಜಕಾರಣಿಗಳಿಗೆ ಸಮಯ ಒಳ್ಳೆಯದು. ವಂಚನೆಯಿಂದ ನಷ್ಟವಾಗುವ ಸಾಧ್ಯತೆಯಿದೆ. ದುರಾಸೆಯಲ್ಲಿ ಸಿಕ್ಕಿಹಾಕಿಕೊಳ್ಳಬೇಡಿ, ಇಲ್ಲದಿದ್ದರೆ ಮೋಸ ಹೋಗಬಹುದು. ಸಂಬಂಧಿಕರ ಜೊತೆ ಮನಸ್ತಾಪವಾಗುವ ಸಾಧ್ಯತೆಯಿದೆ.

ಕನ್ಯಾ: ಈ ವಿವೇಕದಿಂದ ಮಾಡಿದ ಕೆಲಸದ ಬಗ್ಗೆ ನಿಮಗೆ ಮೆಚ್ಚುಗೆ ಸಿಗುತ್ತದೆ. ವೃತ್ತಿಜೀವನದಲ್ಲಿ ಗೌರವ ಸಿಗುತ್ತದೆ. ಹೊಸ ಉದ್ಯಮಗಳು ಅಭಿವೃದ್ಧಿ ಹೊಂದುತ್ತವೆ. ಕುಟುಂಬದಲ್ಲಿ ಸಂತೋಷ ನೆಲೆಸುತ್ತದೆ. ಪ್ರಮುಖ ಜನರೊಂದಿಗೆ ಸಂಬಂಧಗಳು ರೂಪುಗೊಳ್ಳುತ್ತವೆ. ಹತ್ತಿರದವರ ವಿಚಿತ್ರ ವರ್ತನೆಯು ಕೋಪವನ್ನು ಉಂಟುಮಾಡುವುದು. ನೀವು ಭೌತಿಕ ಸಂತೋಷವನ್ನು ಪಡೆಯುತ್ತೀರಿ. ಸ್ವಲ್ಪ ಪ್ರಯತ್ನದಿಂದ ನೀವು ದೊಡ್ಡ ಲಾಭವನ್ನು ಪಡೆಯಬಹುದಿ. ಮಗುವಿಗೆ ಸಂಬಂಧಿಸಿದ ಸುವಾರ್ತೆಯೊಂದಿಗೆ ಮನಸ್ಸು ಸಂತೋಷವಾಗುತ್ತದೆ.

ತುಲಾ: ಅನೇಕ ಉತ್ತಮ ಅವಕಾಶಗಳ ದುರುಪಯೋಗಮಾಡಿಕೊಳ್ಳುವಿರಿ. ಕೆಲಸದಲ್ಲಿ ಸಣ್ಣ ಅಡ್ಡಿ ಉಂಟುಮಾಡಬಹುದು. ಆಧ್ಯಾತ್ಮಿಕತೆಯ ಬಗ್ಗೆ ಆಸಕ್ತಿ ಹೆಚ್ಚಾಗಲಿದೆ. ನೆರೆಯವರ ವಿಲಕ್ಷಣ ವರ್ತನೆಯು ದುಃಖಕ್ಕೆ ಕಾರಣವಾಗಬಹುದು. ಹೊಸ ಕೆಲಸವನ್ನು ಪ್ರಾರಂಭಿಸಬೇಡಿ. ಪ್ರೇಮ ಸಂಬಂಧಗಳಲ್ಲಿ ಗೊಂದಲ ಉಂಟಾಗಬಹುದು. ಸಹೋದರನ ಪ್ರಗತಿಯಿಂದ ಸಂತೋಷವಾಗುತ್ತದೆ. ವೃತ್ತಿಕ್ಷೇತ್ರದಲ್ಲಿ ಸಿಗಬೇಕಾದ ಬೆಂಬಲ ಸಿಗಲಿದೆ. ಆರೋಗ್ಯವು ಮಧ್ಯಮವಾಗಿ ಉತ್ತಮವಾಗಿರುತ್ತದೆ. ವ್ಯವಹಾರದಲ್ಲಿ ಲಾಭ ಗಳಿಸುವಿರಿ. ಆರ್ಥಿಕ ವಹಿವಾಟಿನಲ್ಲಿ ಜಾಗರೂಕರಾಗಿರಿ. ಅರ್ಥವಿಲ್ಲದ ಚರ್ಚೆಯನ್ನು ತಪ್ಪಿಸಿ.

ವೃಶ್ಚಿಕ: ನಿಮ್ಮ ಆರೋಗ್ಯ ಸಮಸ್ಯೆಯ ಬಗ್ಗೆ ಸಂಪೂರ್ಣ ಕಾಳಜಿ ವಹಿಸಿ. ವಾದಗಳು ಮತ್ತು ಅನಗತ್ಯ ಟೀಕೆಗಳನ್ನು ತಪ್ಪಿಸಿ ಇಲ್ಲದಿದ್ದರೆ ಸಮಸ್ಯೆ ಉಂಟಾಗಬಹುದು. ಆಧ್ಯಾತ್ಮಿಕತೆಯ ಬಗ್ಗೆ ಆಸಕ್ತಿ ಹೆಚ್ಚಾಗುತ್ತದೆ. ನೀವು ಉದ್ಯಮದಲ್ಲಿ ಉತ್ತಮ ಫಲಿತಾಂಶವನ್ನು ಪಡೆಯುವಿರಿ. ಆದಾಯವು ಸಾಮಾನ್ಯವಾಗಿಯೇ ಇರುತ್ತದೆ. ಇಂದು ಸಂತೋಷವು ಕಡಿಮೆಯಿರಬಹುದು. ನಿಮ್ಮ ಪ್ರತಿಭೆಯನ್ನು ಪ್ರಕಟಪಡಿಸಲು ಹಲವು ಅವಕಾಶಗಳು ಸಿಗಲಿವೆ. ಸಹೋದ್ಯೋಗಿಯ ಸಲಹೆಯನ್ನು ಸ್ವೀಕರಿಸಿ. ಪೂರ್ವಾಪರ ಯೋಚಿಸಿ ನಿರ್ಧಾರ ಮಾಡಿ. ವೃತ್ತಿಜೀವನದಲ್ಲಿ ಸವಾಲುಗಳಿವೆ. ತಾಯಿಯ ಕಡೆಯ ಸಂಬಂಧಿಕರಿಂದ ಒತ್ತಡವಿರಬಹುದು.

ಧನುಸ್ಸು: ಇಂದು ಬಹಳ ಸಂತೋಷದಾಯಕವಾಗಿರುತ್ತದೆ. ಅಧೀನ ನೌಕರರು ಮತ್ತು ಸಹೋದ್ಯೋಗಿಗಳಿಂದ ಪ್ರಯೋಜನ ಪಡೆಯುವಿರಿ. ಸಮಾಜದಲ್ಲಿ ಗೌರವ ಇರುತ್ತದೆ. ವ್ಯವಹಾರದ ಬೆಳವಣಿಗೆಯಿಂದ ವಿದೇಶಿ ಸಂಪರ್ಕಗಳು ಪ್ರಯೋಜನ ಪಡೆಯುತ್ತವೆ. ಪ್ರಮುಖ ನಿರ್ಧಾರಗಳಲ್ಲಿ ತಜ್ಞರ ಸಲಹೆ ಅಗತ್ಯ. ಅತೀಂದ್ರಿಯ ಜ್ಞಾನದ ಮೇಲಿನ ಆಸಕ್ತಿ ಬೌದ್ಧಿಕ ಸಮೃದ್ಧಿಯನ್ನು ಹೆಚ್ಚಿಸುತ್ತದೆ. ಹೊಸ ನಿರೀಕ್ಷೆಗಳು ಸಂತೋಷವನ್ನು ತರುತ್ತವೆ. ಅಲ್ಪಾವಧಿಯ ಹೂಡಿಕೆಯಿಂದ ಲಾಭವಾಗುತ್ತದೆ.

ಮಕರ: ಇಂದು ಕುಟುಂಬದಲ್ಲಿ ಸಂತೋಷ ಇರಲಿದೆ. ನಿದ್ರೆಯಲ್ಲಿ ಕನಸುಗಳು ಹೆಚ್ಚಾಗುತ್ತವೆ. ವೆಚ್ಚವನ್ನು ನಿಯಂತ್ರಿಸಲು ಕಷ್ಟಪಡುವಿರಿ. ವ್ಯಾಪಾರವು ಲಾಭದಾಯಕವಾಗಿ ಇರಲಿದೆ. ಅಧೀನ ಜನರ ಬೆಂಬಲ ಸಿಗುತ್ತದೆ. ಸ್ವಲ್ಪ ಆರೋಗ್ಯದಲ್ಲಿ ವ್ಯತ್ಯಾಸ ಇರಬಹುದು. ಕ್ಷೇತ್ರದಲ್ಲಿ ಉನ್ನತ ಅಧಿಕಾರಿಗಳ ಸಹಕಾರ ಇರುತ್ತದೆ. ದೈಹಿಕ ಸೌಲಭ್ಯಗಳು ಹೆಚ್ಚಾಗುತ್ತವೆ. ಧೈರ್ಯದಿಂದ ಮುನ್ನುಗ್ಗಿ ಪ್ರಯೋಜನ ಪಡೆಯುವಿರಿ. ಮೃದು ಸ್ವಭಾವವು ಗೌರವವನ್ನು ಹೆಚ್ಚಿಸುತ್ತದೆ. ಆಧ್ಯಾತ್ಮಿಕ, ಧ್ಯಾನ ಮತ್ತು ಯೋಗವು ಅಂತಃಶಕ್ತಿಯನ್ನು ಹೆಚ್ಚಿಸಿಕೊಳ್ಳಿ.

ಕುಂಭ: ನಿಮ್ಮ ಆಶಯಗಳು ಈ ದಿನ ಈಡೇರಬಹುದು.‌ ನೀವು ಪರಿಚಿತರಿಂದ ಪ್ರಯೋಜನ ಪಡೆಯುವಿರಿ. ನಿಮ್ಮ ಶತ್ರುಗಳು ಪರೋಕ್ಷವಾಗಿ ಪ್ರಯೋಜನ ಪಡೆಯುತ್ತಾರೆ. ವೃತ್ತಿಜೀವನದಲ್ಲಿ ಅಧಿಕಾರಿಗಳಿಂದ ಸಹಾಯ ಸಿಗಬಹುದು. ಇಂದು ವ್ಯವಹಾರದಲ್ಲಿ ಅಧಿಕ ಲಾಭ ಇರಲಿದೆ. ಈ ಸಮಯವು ಪ್ರೀತಿಗೆ ಒಳ್ಳೆಯದು. ಯಾರಿಗೂ ಅಗೌರವ ತೋರಿಸುವುದು ಬೇಡ. ಸಹೋದ್ಯೋಗಿಗಳ ಸ್ವಭಾವದದಿಂದ ಸಿಟ್ಟು ಬರಬಹುದು. ತಪ್ಪು ನಿರ್ಧಾರಗಳಿಂದ‌ ನಿಮಗೇ ತೊಂದರೆ ಉಂಟಾಗಲಿದೆ. ಕಾನೂನನ್ನು ಗೌರವಿಸಿ, ಪಾಲಿಸಿ. ವೈದ್ಯಕೀಯ ಚಿಕಿತ್ಸೆಗೆ ತೆರಳಬೇಕಾದೀತು.

ಮೀನ: ಇಂದು ನೀವು ವೃತ್ತಿಜೀವನದ ಪ್ರಯೋಜನವನ್ನು ಪಡೆಯುವಿರಿ. ನಿಮ್ಮ ವ್ಯಾಪಾರದ ವಿಸ್ತಾರವನ್ನು ನೀವು ಮಾಡುವಿರಿ. ನಿಮ್ಮ ವೃತ್ತಿ ಕ್ಷೇತ್ರದಲ್ಲಿ ಸ್ಥಾನಮಾನ, ಹೆಚ್ಚಾಗಲಿದೆ. ಅಧಿಕಾರದಲ್ಲಿರುವ ಜನರಿಗೆ ಪ್ರಶಂಸೆ ಮತ್ತು ಗೌರವ ಸಿಗುವುದು. ಯಾವುದೇ ರೀತಿಯ ಚರ್ಚೆಯನ್ನು ತಪ್ಪಿಸಿಕೊಳ್ಳಿ. ಆಪ್ತರ ಜೊತೆ ಭಿನ್ನಾಭಿಪ್ರಾಯ ಉಂಟಾಗಬಹುದು. ಅಲ್ಪಾವಧಿಯ ಹೂಡಿಕೆಯಿಂದ ಲಾಭವಾಗುತ್ತದೆ. ಸಂಗಾತಿಯ ಬೆಂಬಲ ಸಿಗುತ್ತದೆ. ಸಹೋದರನ ಸ್ವಭಾವದಲ್ಲಿ ಕಿರಿಕಿರಿ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಸಂಬಳ ವಿಳಂಬವು ದುಃಖಕರವಾಗಿರುತ್ತದೆ.

ಲೋಹಿತಶರ್ಮಾ – 8762924271 (what’s app only)

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್