Nithya Bhavishya: ಈ ರಾಶಿಯವರು ಆಪ್ತಸ್ನೇಹಿತರ ಜೊತೆ ಉತ್ತಮ ಸಮಯ ಕಳೆಯಲಿದ್ದೀರಿ, ಹನುಮಾನ್ ಚಾಲೀಸ ಪಠಿಸಿ

ಗಂಗಾಧರ​ ಬ. ಸಾಬೋಜಿ

|

Updated on: Mar 18, 2023 | 5:00 AM

ಇಂದಿನ ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

Nithya Bhavishya: ಈ ರಾಶಿಯವರು ಆಪ್ತಸ್ನೇಹಿತರ ಜೊತೆ ಉತ್ತಮ ಸಮಯ ಕಳೆಯಲಿದ್ದೀರಿ, ಹನುಮಾನ್ ಚಾಲೀಸ ಪಠಿಸಿ
ಪ್ರಾತಿನಿಧಿಕ ಚಿತ್ರ
Image Credit source: anantjivan.in

ಶುಭೋದಯ ಓದುಗರೇ. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದ್ರೆ ಇಂದಿನ (2023 ಮಾರ್ಚ್ 18) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1945, ಶುಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಕುಂಭ ಮಾಸ, ಮಹಾನಕ್ಷತ್ರ : ಪೂರ್ವಾಭಾದ್ರ, ಮಾಸ : ಫಾಲ್ಗುಣ, ಪಕ್ಷ : ಕೃಷ್ಣ, ವಾರ :ಶನಿ, ತಿಥಿ : ಏಕಾದಶೀ, ನಿತ್ಯನಕ್ಷತ್ರ : ಶ್ರವಣಾ, ಯೋಗ : ಪರಿಘ, ಕರಣ : ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 39 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 42 ನಿಮಿಷಕ್ಕೆ, ರಾಹು ಕಾಲ 09:40 – 11:11ರ ವರೆಗೆ, ಯಮಘಂಡ ಕಾಲ 02:11 – 03:42ರವರೆಗೆ, ಗುಳಿಕ ಕಾಲ ಬೆಳಗ್ಗೆ06:40 – 08:10ರ ವರೆಗೆ.

ಮೇಷ: ನಿಮ್ಮ ಕನಸುಗಳು ನನಸಾಗಿಸುವ ಸಮಯವಿಂದು. ಇತರರ ಸಲಹೆಗಳನ್ನು ಕೇಳಿ, ನಿಮಗೆ ಸರಿ ಅನಿಸಿದಂತೆ ಮಾಡುವಿರಿ. ನಿಮಗೆ ಉತ್ತಮ ಅವಕಾಶಗಳು ಸಿಗಲಿವೆ. ಆದಾಯಕ್ಕಿಂತ ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ. ನಿಮ್ಮ ವ್ಯವಹಾರದಲ್ಲಿ ಹೊರಗಿನವರು ಬಾರದಂತೆ ನೋಡಿಕೊಳ್ಳಿ. ಉದ್ಯೋಗಿಗಳೊಂದಿಗೆ ಸಂಬಂಧವನ್ನು ಹಾಳು ಮಾಡಿಕೊಳ್ಳಬೇಡಿ. ಮುಂಬರುವ ದಿನಗಳಲ್ಲಿ ಸಹಕಾರ ನಿಮಗೆ ಅತ್ಯಗತ್ಯವಾಗಬಹು. ಕಠಿಣ ಪರಿಶ್ರಮಕ್ಕೆ ಸರಿಯಾದ ಫಲಿತಾಂಶ ಸಿಗದ ಕಾರಣ ಬೇಸರವುಂಟಾಗಬಹುದು. ಪ್ರೇಮ ವ್ಯವಹಾರದಿಂದ ದೂರವಿರುವುದು ಉತ್ತಮ. ಮನೆಯ ಸಮೀಪದ ಕುಮಾರಸ್ವಾಮಿ ದೇಗುಲಕ್ಕೆ ಹೋಗಿ ಧ್ಯಾನ ಮಾಡಿಬನ್ನಿ.

ವೃಷಭ: ಕಾರ್ಯವನ್ನು ಆರಂಭಿಸವ ಮೊದಲು ಸಂಪೂರ್ಣ ಯೋಜನೆಯನ್ನು ತಯಾರಿಸಿಕೊಳ್ಳುವುದು ಉತ್ತಮ. ಮನೆಗೆ ಸಂಬಂಧಿಸಿದಂತೆ ಸರಿಯಾದ ಖರ್ಚುಗಳ ಮಾಹಿತಿ ಇಲ್ಲದೇ ಅಧಿಕ ಖರ್ಚನ್ನು ಮಾಡಬೇಕಾಗಿಬರಬಹುದು. ಸ್ನೇಹಿತರ ಜೊತೆಗಿನ ಸಂಬಂಧವು ಹಾಳಾಗಂತೆ ನೋಡಿಕೊಳ್ಳಿ. ಇಂದು ಹೊರಾಂಗಣ ಚಟುವಟಿಕೆಗಳಲ್ಲಿ ಸಮಯ ವ್ಯರ್ಥವಾಗಲಿದೆ. ಓಡಾಟದಿಂದ ಸರಿಯಾದ ಫಲಿತಾಂಶವು ಸಿಗದು. ಮನಸ್ಸು ಉದ್ವೇಗಕ್ಕೆ ಒಳಗಾದೀತು. ಅಹಂಕಾರವು ಒಳ್ಳೆಯದಲ್ಲ. ಇಂದು ವೈವಾಹಿಕ ಸಂಬಂಧದಲ್ಲಿ ಸಮಸ್ಯೆಗಳನ್ನು ಉಂಟು ಮಾಡಬಹುದು. ದುರ್ಗಾಪರಮೇಶ್ವರಿಯನ್ನು ಆರಾಧಿಸಿ.

ಮಿಥುನ: ನೀವು ಸಂಪತ್ತನ್ನು ದಾನ‌ ಮಾಡಲಿದ್ದೀರಿ. ವಿವಿಧ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮನಸ್ಸು ನಿಮ್ಮಲ್ಲಿರಲಿದೆ. ಅಪರಿಚಿತರು ಭೇಟಿಯಾಗಿ ನಿಮ್ಮ ಕಿವಿಚುಚ್ಚಲಿದ್ದೀರಿ. ನೀವು ಮಾಡಲಿರುವ ಕೆಲಸದ‌ ಮೇಲೆ ನಿಮ್ಮ ಗಮನವಿರಲಿ. ಭೂಮಿಗೆ ಸಂಬಂಧಿಸಿದಂತೆ ಕೆಲವು ಯೋಜನೆ ಜಾರಿಗೊಳಿಸುವ ಅನಿವಾರ್ಯತೆ ಬರಲಿದೆ. ಅನಗತ್ಯ ಖರ್ಚುಗಳನ್ನು ಮಾಡಬೇಕಾಗಿಬರಬಹುದು. ವ್ಯಾಪಾರ ಇಂದು ನಿಧಾನಗತಿಯಲ್ಲಿ ಸಾಗಲಿದೆ. ಪತಿ-ಪತ್ನಿಯರ ನಡುವೆ ಕಲಹ ದೂರವಾಗಿ ಹೊಂದಾಣಿಕೆ ಇರಲಿದೆ. ಮನೆಯ ಹಿರಿಯ ಆರೋಗ್ಯದಲ್ಲಿ ವ್ಯತ್ಯಾಸವು ಆಗಲಿದೆ. ಮೃತ್ಯುಂಜಯ ಜಪ ಮಾಡಿ.

ಕರ್ಕಾಟಕ: ಮಾಧ್ಯಮ ಕ್ಷೇತ್ರಕ್ಕೆ ಸಂಬಂಧಿಸಿದ ಕಾರ್ಯಗಳನ್ನು ಮಾಡಲು ಆಸಕ್ತಿಯನ್ನು ಇಟ್ಟುಕೊಂಡಿರುವಿರಿ. ಮನೆಯಿಂದ ಬರುವ ದೂರವಾಣಿ ಕರೆಗಳನ್ನು ನಿರ್ಲಕ್ಷಿಸಲಿದ್ದೀರಿ. ಇಂದು ನೀವು ಪ್ರಮುಖ ನಿರ್ಧಾರಗಳನ್ನು ಸ್ವೀಕರಿಸುವ ಸಾಧ್ಯತೆ ಇದೆ. ಭವಿಷ್ಯದ ನಿರ್ಧಾರಗಳನ್ನು ಬದಲಿಸಿಕೊಳ್ಳಲಿದ್ದೀರಿ. ಉದ್ಯೋಗದಲ್ಲಿ ಇರುವವರ ಕೆಲಸದ ಬಗ್ಗೆ ಹೆಚ್ಚು ಗಮನ ಹರಿಸುವಿರಿ. ನಿಮ್ಮ ಸಂಗಾತಿಯು ನಿಮ್ಮ ಕೆಲಸಗಳಿಗೆ ಸಲಹೆಯನ್ನು ನೀಡಲಿದ್ದಾರೆ. ಇದರಿಂದ ನಿಮಗೆ ಪ್ರಯೋಜನವಾಗಲಿದೆ. ಕುಲಗುರವಿನ ಆಶೀರ್ವಾದವನ್ನು ಪಡೆಯಿರಿ. ಆಪತ್ತುಗಳು ದೂರವಾಗಲಿವೆ.

ಸಿಂಹ: ಇಂದು ಅನೇಕ ದಿನಗಳಿಂದ ಬಾಕಿ ಇದ್ದ ಕೆಲಸಗಳು ಪೂರ್ಣಗೊಳ್ಳುವುದು. ಆತ್ಮವಿಶ್ವಾಸವು ಋಣಾತ್ಮಕ ಸಂದರ್ಭದಲ್ಲಿಯೂ ಧೈರ್ಯದಿಂದ ಇರುವಂತೆ ಮಾಡುತ್ತದೆ. ಒಂದು ಪ್ರಮುಖ ವಿಚಾರವನ್ನು ಆಪ್ತರೊಂದಿಗೆ ಹಂಚಿಕೊಳ್ಳುವಿರಿ. ಆಸ್ತಿಯ ವಿಚಾರವಾಗಿ ನೆರೆ-ಹೊರೆಯವರೊಂದಿಗೆ ವಿವಾದವಾಗಬಹುದು. ತಪ್ಪಾಗುವ ಚಟುವಟಿಕೆಗಳಿಗೆ ಬಗ್ಗೆ ಗಮನ ಕೊಡಬೇಡಿ. ರಾಜಕೀಯ ವ್ಯವಹಾರಗಳಲ್ಲಿ ತೊಡಗಿಕೊಳ್ಳುವಿರಿ. ವಾಹನ ಸಂಚಾರದಲ್ಲಿ ಎಚ್ಚರಿಕೆ ಇರಲಿ. ಕಾರ್ತಿಕೇಯನ ಸ್ಮರಣೆಯನ್ನು ಮಾಡಿ.

ಕನ್ಯಾ: ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸಿ ಸಂತೋಷಗೊಳ್ಳುವಿರಿ. ಸಮಾಜದಿಂದ ಗೌರವ ಸಮ್ಮಾನಗಳು ಸಿಗಲಿವೆ. ಆಸ್ತಿ ಖರೀದಿಸುವ ಯೋಚನೆ ಇದ್ದರೆ ಖರೀದಿಸಿ. ಇಂದು ಕಾಲ ಚೆನ್ನಾಗಿದೆ. ಕೋಪವನ್ನು ತೋರಿಸಲು ಹೋಗಬೇಡಿ. ಪ್ರಭಾವಿ ವ್ಯಕ್ತಿಗಳ ಸಂಪರ್ಕವಾಗಲಿದೆ. ನಿಮ್ಮ ಜೀವನಕ್ಕೆ ದಿಕ್ಕು ಸಿಗುವ ಸಾಧ್ಯತೆ ಇದೆ. ದಿನವನ್ನು ಸರಿಯಾಗಿ ಬಳಸುವ ಕುರಿತು ಸಮಯವನ್ನು ಹಾಕಿಕೊಳ್ಳಿ. ವ್ಯರ್ಥವಾಗುವ ಸಮಯದಲ್ಲಿ ಸದುಪಯೋಗವನ್ನು ಮಾಡಿಕೊಳ್ಳಿ. ವಿಷ್ಣುಸಸಹ್ರನಾಮದಿಂದ ನಿಮಗೆ ಶುಭವಾದುದು ಸಂಭವಿಸಲಿದೆ.

ತುಲಾ: ಆಪ್ತರಿಂದ ಹಲವು ದಿನಗಳ ಅನಂತರ ಸಂತೋಷದ ವಾತಾವರಣವನ್ನು ಪಡೆಯುವಿರಿ. ಪರಸ್ಪರ ಸಂವಹನದ ಮೂಲಕ ವ್ಯಾಪಾರದಲ್ಲಿ ಉತ್ತಮ ಪ್ರಗತಿಯನ್ನು ಕಾಣುವಿರಿ. ಮನೆಕೆಲಸದಲ್ಲಿ ಭಾಗಿಯಾಗುವಿರಿ. ಮಕ್ಕಳ ಜೊತೆ ಹೆಚ್ಚು ಕಾಲ ಕಳೆಯುವಿರಿ. ಯಾರೊಂದಿಗಾದರೂ ವಿವಾದವನ್ನು ಮಾಡುವ ಪರಿಸ್ಥಿತಿ ಇರಬಹುದು, ಗಮನವಿರಲಿ. ನಿಮ್ಮ ಯಶಸ್ಸನ್ನು ಅತಿಯಾಗಿ ಯೋಚನೆ ಮಾಡದೇ ಶಾಂತವಾಗಿ ನಿಮ್ಮ ಕಾರ್ಯಗಳನ್ನು ಮಾಡಿ. ಯಶಸ್ಸು ತಾನಾಗಿಯೇ ಬರಲಿದೆ. ವ್ಯವಹಾರದಲ್ಲಿ ಬಂಧುಗಳನ್ನು ಇಟ್ಟುಕೊಳ್ಳುವ ಮನಸ್ಸು ಬೇಡ. ತ್ರಿಪುರಸುಂದರಿಯನ್ನು ಧ್ಯಾನಿಸಿ.

ವೃಶ್ಚಿಕ: ಆಸ್ತಿಗೆ ಸಂಬಂಧಿಸಿದಂತೆ ಪ್ರಕರಣವಿಂದು ಹಲವು ವರ್ಷಗಳಿಂದ ನಡೆಯುತ್ತಿದ್ದು, ಇಂದು ಅದರ ಫಲವು ಗೊತ್ತಾಗಲಿದೆ. ಭವಿಷ್ಯದ ಕುರಿತು ಹತ್ತಾರು ಯೋಜನೆಗಳನ್ನು ಹಾಕಿಕೊಳ್ಳುವಿರಿ. ಸಾಲದಿಂದ ಬೆಂದ ನಿಮಗೆ ಇಂದು ಅದು ಮುಕ್ತಾಯಗೊಳ್ಳಲಿದೆ. ಸಂತೃಪ್ತಿಯಿಂದ ಇರಲಿದ್ದೀರಿ. ನಮ್ಮ ಇಷ್ಟದ ಕೆಲಸದತ್ತ ಹೆಚ್ಚು ಗಮನ ಹರಿಸುವಿರಿ. ಕೆಲಸಗಳಲ್ಲಿ ಅನಿರೀಕ್ಷಿತ ತೊಡಕುಗಲಕು ಉಂಟಾಗುವ ಸಾಧ್ಯತೆ ಇದೆ. ವೃತ್ತಿಪರರು ಗೌರವವನ್ನು ಉಳಿಸಿಕೊಳ್ಳಲು ಪ್ರಯತ್ನಿಸುವರು. ಪತಿ-ಪತ್ನಿ ಸಂಬಂಧವು ಮಧುರವಾಗಿರುತ್ತದೆ. ಗಂಗಾಧರನಿಗೆ ನಿರ್ಮಲ‌ಜಲದ ಅಭಿಷೇಕ ಮಾಡಿ.

ಧನು: ಇಂದು ನಿಮಗೆ ಬಹಳ ಚೈತನ್ಯವಿರಲಿದೆ. ಕೌಟುಂಬಿಕ ಸಮಸ್ಯೆಗಳನ್ನು ಪರಿಹರಿಸಿಕೊಂಡು ನಿರಾಳವಾಗುವಿರಿ. ಮಕ್ಕಳ ಹಣಕಾಸಿನ ಸಮಸ್ಯೆಯಿಂದ ನಿಮ್ಮ ಸಮಸ್ಯೆಗಳನ್ನು ದೊಡ್ಡ ಮಾಡಿಕೊಳ್ಳುವಿರಿ. ಸ್ವ ಉದ್ಯೋಗವನ್ನು ಮಾಡುತ್ತಿದ್ದರೆ ನಿರ್ಲಕ್ಷ್ಯ ಬೇಡ. ಸಂಗಾತಿಯ ಬೆಂಬಲವು ನಿಮಗೆ ಬಲವನ್ನು ಕೊಡುವುದು. ದಿನದ ಕೊನೆಯಲ್ಲಿ ಆಯಾಸದಿಂದ ಕೋಪ ಉಂಟಾಗುತ್ತದೆ. ಸ್ವಲ್ಪ ಹೊತ್ತು ವಿಶ್ರಾಂತಿ‌ಮಾಡಿ.

ಮಕರ: ಆಪ್ತಸ್ನೇಹಿತರ ಜೊತೆ ಉತ್ತಮ ಸಮಯವನ್ನು ಕಳೆಯಿರಿ. ನಿಮ್ಮ ಅರ್ಹತೆಯ ಯೋಗ್ಯವಾದ ಕೆಲವು ಪ್ರಮುಖ ನಿರ್ಧಾರಗಳನ್ನು ಮಾಡುತ್ತೀರಿ. ಮಕ್ಕಳ ಯಶಸ್ಸಿನಿಂದಾಗಿ ಕುಟುಂಬದಲ್ಲಿ ಸಂತೋಷದ ವಾತಾವರಣ ಇರುತ್ತದೆ. ಅಕ್ರಮ ಕೆಲಸಗಳು ಮಾಡುವಂತಹ ಸಂದರ್ಭ ಬಂದಲ್ಲಿ ಅದರಿಂದ ದೂರವಿರಿ. ಇಲ್ಲದಿದ್ದರೆ ತೊಂದರೆಗೆ ಸಿಲುಕಬಹುದು. ಇದು ನಿಮ್ಮ ದಕ್ಷತೆಯ ಮೇಲೂ ನಕಾರಾತ್ಮಕ ಪರಿಣಾಮ ಬೀರಬಹುದು. ಸಹೋದರರೊಂದಿಗೆ ಸಂಬಂಧವನ್ನು ಉಳಿಸಿಕೊಳ್ಳುವ ಅವಶ್ಯಕತೆಯಿದೆ. ಹೆಚ್ಚು ಚಿಂತಿಸುವುದರಿಂದ ಯಾವ ಪ್ರಯೋಜನವಾಗದು. ಹನುಮಾನ್ ಚಾಲೀಸ್ ಪಠಿಸಿರಿ.

ಕುಂಭ: ಅಪರೂಪದ ವಿಶೇಷ ವ್ಯಕ್ತಿಗಳನ್ನು ಸಂಪರ್ಕಿಸುವಿರಿ. ಅದರಿಂದ ನಿಮ್ಮ ಸ್ಥಾನಮಾನ, ಅಲೋಚನಾ ಕ್ರಮಗಳು ಬದಲಾಗುವುವು.‌ ಇಂದು ನಿಮ್ಮ ಕೆಲಸದ ಬಗ್ಗೆ ಹೆಚ್ಚು ತಿಳಿದಿರುವುದು ಮತ್ತು ಏಕಾಗ್ರತೆಯನ್ನು ಹೊಂದಿರುವುದು ಖಂಡಿತವಾಗಿಯೂ ನಿಮಗೆ ಯಶಸ್ಸನ್ನು ನೀಡುತ್ತದೆ. ನಿಮ್ಮ ಹತ್ತಿರ ಇರುವವರ ಟೀಕಿಸುವರು. ಅದು ನಿಮ್ಮನ್ನು ಹತಾಶೆಗೊಳಿಸಬಹುದು. ಯಾರನ್ನೂ ಹೆಚ್ಚು ಅವಲಂಬಿಸಬೇಡಿ ಮತ್ತು ನಿಮ್ಮ ಯೋಜನೆಗಳನ್ನು ಘೋಷಿಸಿ. ಪಾಲುದಾರಿಕೆ ವ್ಯವಹಾರದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವುದು ಮುಖ್ಯ. ಆಂಜನೇಯನನ್ನು ಧ್ಯಾನಿಸಿ ಕಾರ್ಯಕ್ಕೆ ತೆರಳಿ.

ಮೀನ: ಬಹಳ ದಿನಗಳಿಂದ ಹಾಗೆಯೇ ಇದ್ದ ಕೆಲಸಗಳು ಮುಕ್ತಾಯಗೊಳ್ಳವುವು. ಹತ್ತಿರದ ಸಂಬಂಧಿಗಳೊಂದಿಗೆ ಪ್ರಮುಖ ಚರ್ಚೆಯನ್ನು ಮಾಡುವಿರಿ. ವಿದ್ಯಾರ್ಥಿಗಳು ಉತ್ತಮ ಫಲಿತಾಂಶದತ್ತ ಗಮನಹರಿಸುವರು. ನಿಮ್ಮ ಕೋಪವನ್ನು ನಿಯಂತ್ರಿಸಿ. ಪರಿಸ್ಥಿತಿಯ ಪ್ರತಿಕೂಲತೆಯು ನಿಮ್ಮ ಕೋಪಕ್ಕೆ ಕಾರಣವಾಗಬಹುದು. ಅಪರಿಚಿತರನ್ನು ನಂಬಿ ಹಣವನ್ನು ಕಳೆದುಕೊಳ್ಳಬೇಡಿ. ಗಂಡ-ಹೆಂಡತಿ ತಮ್ಮ ಕೆಲಸದಲ್ಲಿ ನಿರತರಾಗಿರುವರು. ಮಕ್ಕಳಿಗೆ ಸಮಯ ಕೊಡಲಾಗದೇ ಬೇಸರಿಸಬಹುದು. ಶ್ರಮ ಹೆಚ್ಚು ಆದಾಯ ಕಡಿಮೆ ಎಂದು ಅನ್ನಿಸಬಹುದು. ಶಿವ ಸ್ತೋತ್ರ ಮಾಡಿ.

ಲೋಹಿತಶರ್ಮಾ ಇಡುವಾಣಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada