ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಇದರ ಜೊತೆಗೆ ಪಂಚಾಂಗ ಹೇಗಿದೆ? ಎಂಬುದನ್ನು ಒಂದಷ್ಟು ಮಂದಿ ನೋಡುತ್ತಾರೆ. ಹಾಗಾದರೆ ಇಂದಿನ (2023 ಅಕ್ಟೋಬರ್ 19) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಚಿತ್ರಾ, ಮಾಸ: ಆಶ್ವಯುಜ, ಪಕ್ಷ: ಶುಕ್ಲ, ವಾರ: ಗುರು, ತಿಥಿ: ಪಂಚಮೀ, ನಿತ್ಯನಕ್ಷತ್ರ: ಜ್ಯೇಷ್ಠಾ, ಯೋಗ: ಸೌಭಾಗ್ಯ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 25 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 09 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 01:46 ರಿಂದ 03:14ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 06:26 ರಿಂದ 07:54ರ ವರೆಗೆ, ಗುಳಿಕ ಕಾಲ ಬೆಳಗ್ಗೆ 09:22 ರಿಂದ ಮಧ್ಯಾಹ್ನ 10:50ರ ವರೆಗೆ.
ನವರಾತ್ರಿಯ ಐದನೇ ದಿನ ಮಹಾಲಕ್ಷ್ಮೀ ಸ್ವರೂಪಳಾದ ಸಿದ್ಧಿದಾತ್ರೀ ದೇವಿಯ ಆರಾಧನೆ. ಹೆಸರೇ ಹೇಳುವಂತೆ ಸಿದ್ಧಿಯನ್ನು ನೀಡುವವಳು. ಏನನ್ನಾದರೂ ಸಿದ್ಧಿಸಿಕೊಳ್ಳಲು ಇಚ್ಛಿಸಿದರೆ ಮಹಾಮಾತೆಗೆ ಶರಣಾಗುವುದು ಅನಿವಾರ್ಯ.
ಸಿದ್ಧಗಂಧರ್ವಯಕ್ಷಾದ್ಯೈಃ
ಅಸುರೈರಮಸುರೈರಪಿ |
ಸೇವ್ಯಮಾನಾ ಸದಾ ಭೂಯಾತ್
ಸಿದ್ಧಿದಾ ಸಿದ್ಧಿದಾಯಿನೀ ||
ಮೇಷ ರಾಶಿ: ನಿಮ್ಮ ದೌರ್ಬಲ್ಯವನ್ನು ನೀವು ಸಹಾಕರಾತ್ಮಕವಾಗಿ ಪಡೆದುಕೊಂಡು ಮುನ್ನಡೆಯಬಹುದು. ಅತಿಯಾದ ನಿದ್ರೆಯಿಂದ ಮನಸ್ಸು ಕುಗ್ಗುವುದು. ಮನೆಯ ವಿಷಮ ಸ್ಥಿತಿಯನ್ನು ನಿಭಾಯಿಸುವಿರಿ. ಸಂಗಾತಿಗೆ ನಿಮ್ಮ ವಾಸ್ತವದ ಉದ್ಯೋಗದ ವಾಸ್ತವ ಚಿತ್ರಣವನ್ನು ಕೊಡುವಿರಿ. ಆಕಸ್ಮಿಕವಾಗಿ ಸ್ನೇಹಿತರಿಂದ ಉಡುಗೊರೆ ಸಿಗಲಿದೆ. ಧಾರ್ಮಿಕ ಶ್ರದ್ಧೆಯಿಂದ ಅನುಕೂಲತೆ ಇರಲಿದೆ. ಮಿತ್ರರ ಧನಸಹಾಯದಿಂದ ವಾಹನವನ್ನು ಖರೀದಿಸುವಿರಿ. ವಿದೇಶದ ಜೊತೆ ವ್ಯಾಪಾರದ ಸಂಪರ್ಕವನ್ನು ಬೆಳೆಸಿಕೊಳ್ಳುವಿರಿ. ನಿಮ್ಮಕೆಲಸದ ಬಗ್ಗೆ ಹಗುರವಾಗಿ ಮಾತನಾಡಿಯಾರು. ಶುಭಸಮಯವನ್ನು ನಿರೀಕ್ಷೆಯಷ್ಟೇ ಮಾಡಬಹುದು. ಪಾಪಿ ಸಮುದ್ರಕ್ಕಿಳಿದರೂ ಮೊಣಕಾಲು ನೀರು ಎಂಬಂತಾಗುವುದು.
ವೃಷಭ ರಾಶಿ: ಯಾರಾದರೂ ನಿಮ್ಮ ಕಿವಿಕಚ್ಚಬಹುದು. ನಿಮ್ಮ ಮನಸ್ಸು ಹೊಸ ಪರಿವರ್ತನೆಯ ಕಡೆ ಹೊರಳುವುದು. ಅಶುಭವಾರ್ತೆಗೆ ನೀವು ಕಿವಿಯಾಗಬೇಕಾದೀತು. ಸುಲಭವಾಗಿ ದೊರೆಯುವುದನ್ನು ಇಷ್ಟಪಡುವುದಿಲ್ಲ. ಒಂಟಿತನವು ನಿಮಗೆ ಅಭ್ಯಾಸವಾಗಲಿದ್ದು ನಿಶ್ಚಿಂತೆಯಿಂದ ಇರುವಿರಿ. ಲೆಕ್ಕ ಶೋಧಕರು ಹೆಚ್ಚಿನ ಒತ್ತಡದಲ್ಲಿ ಇರುವರು. ಅಪರಿಚಿತರ ಜೊತೆ ಸಲುಗೆಯ ವ್ಯವಹಾರವು ಬೇಡ. ಸಂಗಾತಿಯ ಮಾತು ನಿಮಗೆ ಇಷ್ಟವಾಗದಿರುವುದು. ವಾಹನ ಖರೀದಿಗೆ ನಿಮ್ಮ ಸಹಮತವಿರದು. ನಿಜವನ್ನು ಮುಚ್ಚಿಡಬೇಕಾಗುವುದು. ಉದ್ವೇಗದಲ್ಲಿ ಏನಾದರೂ ಹೇಳುವಿರಿ. ಸಹನೆಯು ಕೈತಪ್ಪಿ ಹೋಗುವುದು.
ಮಿಥುನ ರಾಶಿ: ಹೊಸ ಉದ್ಯಮದ ಸಲುವಾಗಿ ಉದ್ಯಮಿಗಳನ್ನು ಭೇಟಿ ಮಾಡುವಿರಿ. ಸಾಲವನ್ನು ಮಾಡಬೇಕಾಗಿಬರಬಹುದು. ಸಹೋದರನಿಂದ ಯಾವ ಸಹಕಾರವನ್ನು ನಿರೀಕ್ಷಿಸದೇ ಕಾರ್ಯಪ್ರವೃತ್ತರಾಗುವಿರಿ. ನಿಮ್ಮ ಸ್ವಭಾವವನ್ನು ಮರೆಮಾಚುವುದು ಕಷ್ಟಸಾಧ್ಯ. ಅಚಾತುರ್ಯದಿಂದ ತಪ್ಪು ನಡೆಯಬಹುದು. ಹಳೆಯ ಹೂಡಿಕೆಯು ಪ್ರಯೋಜನಕ್ಕೆ ಬರಲಿದೆ. ಕಛೇರಿಯ ಒತ್ತಡದಿಂದ ವಿರಾಮವನ್ನು ಪಡೆದು ಕುಟುಂಬಕ್ಕೆ ಸಮಯವನ್ನು ಕೊಡುವಿರಿ. ಉದ್ಯೋಗದ ನಿಮಿತ್ತ ಅನಿವಾರ್ಯವಾಗಿ ಓಡಾಟ ಮಾಡುವ ಸಂದರ್ಭವು ಬರಬಹುದು. ನಂಬಿಕೆಯನ್ನು ಉಳಿಸಿಕೊಳ್ಳಲು ನೀವು ಕಷ್ಟಪಡಬೇಕಾದೀತು. ಹೊಸ ಮಿತ್ರರ ಜೊತೆ ಸಮಾಲೋಚನೆಯನ್ನು ಮಾಡುವಿರಿ. ಬಹಳ ದಿನಗಳ ಅನಂತರ ಮನೆಯ ಬಗ್ಗೆ ಆಲೋಚನೆ ಬರಲಿದೆ.
ಕರ್ಕ ರಾಶಿ: ಸಭ್ಯತೆಯ ಮಾತಿನಿಂದ ನೀವು ಕೆಲಸಗಳನ್ನು ಮಾಡಿಸಿಕೊಳ್ಳುವಿರಿ. ಉದ್ಯೋಗದಲ್ಲಿ ಗೊಂದಲ ಬರಬಹುದು. ಕಾರ್ಯಕ್ಷೇತ್ರದಲ್ಲಿ ಹೆಚ್ಚು ಸಮಯ ಕೆಲಸವನ್ನು ಮಾಡಬೇಕಾಗುವುದು. ನೂತನ ವಸ್ತ್ರಗಳನ್ನು ಖರೀದಿಸುವಿರಿ. ಆರ್ಥಿಕತೆಯ ತೊಂದರೆಯಿಂದ ನಿಮ್ಮ ಕೆಲವು ವಸ್ತುಗಳನ್ನು ಮಾರಾಟ ಮಾಡುವಿರಿ. ನಿಮ್ಮ ಅಪ್ರಾಮಣಿಕತೆಯು ಕೆಲವರಿಗೆ ಗೊತ್ತಾಗಬಹುದು. ಪ್ರಯಾಣ ಮಾಡವ ಮನಸ್ಸಿದ್ದರೂ ಶರೀರಕ್ಕೆ ಅಸಾಧ್ಯ ಎನಿಸಬಹುದು. ಹಠದ ಸ್ವಭಾವದಿಂದ ಸಹೋದ್ಯೋಗಿಗಳಿಗೆ ಸಹಾಯವನ್ನು ಮಾಡುವುದಿಲ್ಲ. ನಿಮ್ಮದೇ ವಸ್ತುವು ನಿಮಗೆ ಹೊಸದರಂತೆ ತೋರುವುದು. ಧ್ಯಾನದಲ್ಲಿ ಮನಸ್ಸನ್ನು ಇಡುವುದು ಬೇಕಾಗಬಹುದು.
ಸಿಂಹ ರಾಶಿ: ಇನ್ನೊಬ್ಬರಿಗೆ ಸಹಾಯ ಮಾಡಲು ಕೂಡಿಟ್ಟ ಹಣವನ್ನು ತೆಗೆಯಬೇಕಾದೀತು. ನಿಗದಿತ ಸಮಯಕ್ಕೆ ಕೆಲಸವಾಗದೇ ಇರುವ ಕಾರಣ ಕೆಲಸವನ್ನು ಕೊಟ್ಟವರು ನಿಮ್ಮ ಮೇಲೆ ಮುನಿಸಿಕೊಂಡಾರು. ಕಳೆದ ಸಮಯವನ್ನು ಮೆಲುಕು ಹಾಕುವಿರಿ. ಯಾರ ಜೊತೆಯೂ ಅಸಂಬದ್ಧ ಚರ್ಚೆಗೆ ಹೋಗುವುದು ಬೇಡ. ಜಾಡ್ಯದಿಂದ ಇಂದು ಕಛೇರಿಗೆ ವಿಳಂಬವಾಗಿ ಹೋಗುವಿರಿ. ಬೆಲೆಬಾಳುವ ವಸ್ತುಗಳನ್ನು ಖರೀದಿಸಲಿದ್ದು ಅದರ ರಕ್ಷಣೆಯನ್ನು ಮಾಡಬೇಕಾಗುವುದು. ಹೊಸ ವಿಚಾರಗಳ ಕಲಿಕೆಗೆ ಅವಕಾಶಗಳು ಸಿಗುವುದು. ವ್ಯಾಪಾರವನ್ನು ಹೆಚ್ಚಿನ ಆದಾಯ ಬರುವಂತೆ ಮಾಡಿಕೊಳ್ಳುವಿರಿ. ಹಳೆಯ ವಾಹನದಿಂದ ನಿಮಗೆ ಲಾಭವೇ ಆಗುವುದು. ಮಿತಿಮೀರಿದ ಓಡಾಟದಿಂದ ಆರೋಗ್ಯವು ಕೆಡಬಹುದು.
ಕನ್ಯಾ ರಾಶಿ: ಕಲಾವಿದರು ದೂರ ಪ್ರಯಾಣ ಮಾಡಬೇಕಾಗಿಬರಬಹುದು. ಸಂಕುಚಿತ ಸ್ವಭಾವವನ್ನು ದೂರ ಮಾಡಿಕೊಳ್ಳುವುದು ಉತ್ತಮ. ನಿಮ್ಮದಾದ ಕಾರ್ಯದಲ್ಲಿ ನೀವು ತೊಡಗಿಗೊಳ್ಳಿ. ಖಾಲಿ ಇರುವುದು ಬೇಡ. ವಾಹನ ಸಂಚಾರದಲ್ಲಿ ಅಡಚಣೆ ಆಗಲಿದೆ. ನಿದ್ರೆಯು ಸರಿಯಾಗದೇ ಮನಸ್ಸು ಭಾರವಾಗಬಹುದು. ಇಷ್ಟವಿಲ್ಲದ ವೃತ್ತಿಯನ್ನು ಅವಲಂಬಿಸಿ ಕಷ್ಟಪಡುವಿರಿ. ಸಹೋದ್ಯೋಗಿಗಳ ಅಸಹಕಾರವು ಅವರ ಮೇಲೆ ದ್ವೇಷವನ್ನು ಮೂಡಿಸಬಹುದು. ಆಕಸ್ಮಿಕವಾಗಿ ನಿಮಗೆ ಧನನಷ್ಟವಾಗಲಿದ್ದು ಚಿಂತೆ ಕಾಡುವುದು. ನಿಮ್ಮ ಸಣ್ಣ ತಪ್ಪೂ ಅಪಹಾಸ್ಯಕ್ಕೀಡಾಗುವುದು. ಗುರಿಯ ಬಗ್ಗೆ ಸರಿಯಾದ ಮಾರ್ಗದರ್ಶನ ಪಡೆದುಕೊಳ್ಳಿ. ಹಿರಿಯರ ಕಲಾವಿದರ ಭೇಟಿಯಾಗಲಿದೆ. ನಿಮ್ಮ ಸಂಕಲ್ಪವು ಫಲಿಸಲಿದ್ದು ಖುಷಿಯಾಗುವುದು.
ತುಲಾ ರಾಶಿ: ಇಂದು ಯಾರನ್ನೂ ನಂಬುವ ಸ್ಥಿತಿಯಲ್ಲಿ ನೀವು ಇರಲಾರಿರಿ. ಸಾಮಾಜಿಕ ಕಾರ್ಯದಲ್ಲಿ ಅವಮಾನದ ಕಾರಣದಿಂದ ಅದನ್ನು ಮಾಡಲು ಹಿಂದೇಟು ಹಾಕುವಿರಿ. ಅಪರಿಚಿತ ಕರೆಗಳು ನಿಮಗೆ ಹಿಂಸೆಯನ್ನು ಕೊಡಬಹುದು. ಪಾಲುದಾರಿಕೆಯಲ್ಲಿ ನಿಮಗೆ ಪೂರ್ಣ ಸಮಾಧಾನ ಇರದು. ವಿವಾಹವಾದರೂ ಭವಿಷ್ಯದ ಬಗ್ಗೆ ನಕಾರಾತ್ಮಕ ಆಲೋಚನೆಯು ಇರಲಿದೆ. ನಿಮಗೆ ಅಭದ್ರತೆಯು ಕಾಡಬಹುದು. ಮಕ್ಕಳ ಸಂತೋಷದಲ್ಲಿ ನೆಮ್ಮದಿ ಇರಲಿದೆ. ನಿಮ್ಮ ಗೌಪ್ಯ ಸಂಗತಿಗಳನ್ನು ಯಾರ ಜೊತೆಯೂ ಹಂಚಿಕೊಳ್ಳುವುದು ಬೇಡ. ದೇವಾಲಯಕ್ಕೆ ಹೋಗಿ ಸ್ವಲ್ಪ ಕಾಲ ಇದ್ದು ಬರುವುದು ಉತ್ತಮ. ನಿಮ್ಮ ಬಗ್ಗೆ ಬಂಧುಗಳು ಮಾತಾನಾಡಿಕೊಳ್ಳುವುದು ಗೊತ್ತಾದೀತು.
ವೃಶ್ಚಿಕ ರಾಶಿ: ಕೃಷಿಯಲ್ಲಿ ಲಾಭವನ್ನು ಪಡೆಯಲು ಹೆಚ್ಚಿನ ಓಡಾಟ ಮಾಡಬೇಕಾಗುವುದು. ಚಿಂತಿತ ಕಾರ್ಯವನ್ನು ಪೂರೈಸಲು ನಿಮಗೆ ಬುದ್ಧಿಯು ಸೂಚಿಸದು. ಆಸ್ತಿಯನ್ನು ಪಡೆದುಕೊಳ್ಳಲು ನ್ಯಾಯಾಲಯಕ್ಕೆ ಹೋಗಬೇಕಾದೀತು. ದೇಹಪೀಡೆಯು ಮತ್ತೆ ಕಾಣಿಸಿಕೊಳ್ಳುವುದು. ಸಂಗಾತಿಯು ನಿಮ್ಮನಡೆಯನ್ನು ಅನುಮಾನಸಿಬಹುದು. ಭೂಮಿಯನ್ನು ಕೊಳ್ಳುವುದು ಇಂದು ಸುಲಭವಾಗದು. ಉದ್ಯೋಗವನ್ನು ಬದಲಾಯಿಸಲು ಇರುವ ಉದ್ಯೋಗವನ್ನು ಬಿಟ್ಟುಬಿಡುವಿರಿ. ಸ್ಪರ್ಧಾತ್ಮಕ ಪರೀಕ್ಷೆಗೆ ನಿಮ್ಮ ಪ್ರಯತ್ನ ಸಾಲದು. ಹುಡುಗಾಟದ ಮನೋಭಾವವು ಇರಲಿದೆ. ಕೆಲವು ಸಂಗತಿಗಳು ನಿಮಗೆ ಇಷ್ಟವಾಗದು. ನಿಮ್ಮನ್ನು ಪ್ರಶಂಸಿಸಿದಂತೆ ಕಂಡರೂ ಅದು ತೆಗಳಿಕೆಯಾಗಿರಲಿದೆ.
ಧನು ರಾಶಿ: ದಾಂಪತ್ಯದಲ್ಲಿ ಪರಸ್ಪರ ಸದ್ಭಾವವನ್ನು ಇಟ್ಟುಕೊಳ್ಳುವುದು ಮುಖ್ಯವಾಗುದು. ನಿಮ್ಮ ಶ್ರಮವು ದುರುಪಯೋಗವಾಗುವುದು. ದೂರಪ್ರಯಾಣದಿಂದ ನಿಮಗೆ ಖರ್ಚಾಗುವುದು ಗೊತ್ತಾಗದೇ ಹೋಗಬಹುದು. ನ್ಯಾಯಸಮ್ಮತ ಮಾರ್ಗದಲ್ಲಿ ನೀವು ಇರುವುದು ಸೂಕ್ತ. ಹಿರಿಯರ ಜೊತೆ ಔಚಿತ್ಯ ರೀತಿಯಿಂದ ವ್ಯವಸ್ಥೆ ವ್ಯವಹರಿಸಿ. ಸ್ತ್ರೀಯರಿಂದ ಅಪಮಾನವಾಗುವ ಸಾಧ್ಯತೆ ಇದೆ. ಕುಟುಂಬದಿಂದ ಅನಾದರಕ್ಕೆ ಒಳಗಾಗುವಿರಿ. ಆಕಸ್ಮಿಕ ಧನಲಾಭವು ನಿಮಗೆ ಆಶ್ಚರ್ಯ ಉಂಟಾಗಬಹುದು. ಸಂಗಾತಿಯ ಜೊತೆ ಆರಾಮಾಗಿ ಮಾತನಾಡುವಿರಿ. ಕುಟುಂಬದ ಜೊತೆ ಕಳೆಯುವ ಕಾಲವು ನಿಮಗೆ ನೆನಪಿನಲ್ಲಿ ಉಳಿಯುವಂತೆ ಆಗುವುದು. ಕಾರ್ಯದಲ್ಲಿ ಶ್ರದ್ಧೆಯನ್ನು ಇಟ್ಟುಕೊಳ್ಳುವುದು ಮುಖ್ಯವಾಗುವುದು.
ಮಕರ ರಾಶಿ: ನಿರುಪಯೋಗಿ ವಸ್ತುಗಳನ್ನು ನೀವು ದೂರ ಮಾಡುವಿರಿ. ನಿರುದ್ಯೋಗವೇ ನಿಮಗೆ ಅಭ್ಯಾಸವಾಗುವ ಸಾಧ್ಯತೆ ಇದೆ. ಸ್ತ್ರೀಯರಿಗೆ ಪ್ರಯಾಣದಲ್ಲಿ ತೊಂದರೆ ಬರಬಹುದು. ಯಾರದೋ ಪ್ರಭಾವವನ್ನು ಬಳಸಿ ನೀವು ಕೆಲಸವನ್ನು ಮಾಡಿಸಿಕೊಳ್ಳುವಿರಿ. ನಿಮಗೆ ಕಾರ್ಯದಲ್ಲಿ ನಿಷ್ಠೆ ಇಲ್ಲ ಎಂದು ಸಾಬೀತಾಗಬಹುದು. ವ್ಯವಹಾರದಲ್ಲಿ ಮುಗ್ಗರಿಸುವ ಸಂದರ್ಭವು ಬರಬಹುದು. ಸಾಲವನ್ನು ಕೊಡುವ ಸಂದರ್ಭವು ಬರಬಹುದು. ಏನಾದರೂ ಹೇಳಿ ತಪ್ಪಿಸಿಕೊಳ್ಳುವುದು ಸೂಕ್ತ. ನಿಮ್ಮ ನೌಕರರ ತಪ್ಪಿಗೆ ನೀವು ಉತ್ತರಿಸಬೇಕಾದೀತು. ತಂದೆಯ ವ್ಯವಹಾರದಲ್ಲಿ ಮಧ್ಯ ಪ್ರವೇಶ ಮಾಡುವುದು ಬೇಡ. ದ್ವಿಚಕ್ರ ವಾಹನದ ಮೇಲೆ ಜಿಗುಪ್ಸೆ ಬಂದೀತು.
ಕುಂಭ ರಾಶಿ: ಅಂದುಕೊಂಡಿದ್ದಕ್ಕಿಂತ ಖರ್ಚು ಅಧಿಕವಾಗಿದ್ದು ಗಳಿಕೆಯ ಬಗ್ಗೆ ಆಲೋಚಿಸುವಿರಿ. ಧಾರ್ಮಿಕ ಕಾರ್ಯದಲ್ಲಿ ತೊಡಗಿರುವವರಿಗೆ ಆದಾಯವು ಹೆಚ್ಚು ಇರಲಿದೆ. ಕುಟುಂಬದ ಪೋಷಣೆಯಲ್ಲಿ ಇಂದು ಸಹಭಾಗಿತ್ವ ಇರುವುದು. ವೃತ್ತಿಯ ಸ್ಥಳದಲ್ಲಿ ತೇಜೋವಧೆಯಾಗುವ ಸಂದರ್ಭವು ಬರಬಹುದು. ಬೇಕೆಂದೇ ನಿಮ್ಮ ಮೇಲೆ ಒತ್ತಡ ತರಬಹುದು. ಸ್ನೇಹಿತರು ನಿಮ್ಮನ್ನು ದೂರವಿಟ್ಟಾರು. ಸಂಗಾತಿಯ ಅನಾದರವು ನಿಮ್ಮನ್ನು ಬಹಳ ಕಾಡಬಹುದು. ವೈಫಲ್ಯವನ್ನು ಸಕಾರಾತ್ಮಕ ದೃಷ್ಟಿಯಿಂದ ನೋಡಿ. ಮಕ್ಕಳಿಗೆ ಕಡಿವಾಣ ಹಾಕಲು ಹೋಗುವುದು ಬೇಡ. ಅವರ ಮೇಲೆ ನಿಮ್ಮ ನಿಗಾ ಇರಲಿ. ಆಹಾರದ ಕಾರಣಕ್ಕೆ ಉದರಬಾಧೆಯು ಕಾಣಿಸಿಕೊಂಡೀತು.
ಮೀನ ರಾಶಿ: ನೌಕರರು ಇಂದು ಹೆಚ್ಚಿನ ಸೌಲಭ್ಯವನ್ನು ಪಡೆದುಕೊಳ್ಳುವರು. ಸಮಾನ ಚಿಂತನಶೀಲರ ನಡುವೆ ಸಖ್ಯವಾಗುವುದು. ಇನ್ನೊಬ್ಬರಿಂದ ಸಹಕಾರವನ್ನು ಬಯಸುವುದಿಲ್ಲ. ನಿಮ್ಮಷ್ಟಕ್ಕೆ ಕಾರ್ಯದಲ್ಲಿ ಮಗ್ನರಾಗಿರುವಿರಿ. ಸಂಧಾನಕ್ಕೆ ಕರೆದರೆ ಮಾತ್ರ ಹೋಗಿ. ಮನಸ್ಸಿನ ಸೋಮಾರಿತನವು ನಿಮ್ಮ ಕಾರ್ಯವನ್ನು ಹಿಂದಿಕ್ಕುವುದು. ಗ್ರಾಹಕರಿಗೆ ನಿಮ್ಮ ಅಸಮಾಧಾನವೂ ಆಗುವುದು. ಇಂದು ಜ್ಞಾನವೃದ್ಧರ ಸೇವೆಗೆ ಅವಕಾಶ ಸಿಗಲಿದೆ. ಅಪಘಾತದಿಂದ ಉಂಟಾದ ನೋವಿನಿಂದ ನಿಧಾನವಾಗಿ ಆಚೆ ಬರಬಹುದು. ಅರ್ಥಿಕವಾಗಿ ಕಷ್ಟವಿದ್ದರೂ ವಿದ್ಯಾಭ್ಯಾಸದ ಛಲವಿರಲಿದೆ. ಯಾರದ್ದಾದರೂ ಸಣ್ಣ ಸಹಾಯವನ್ನೂ ನೀವು ನಿರೀಕ್ಷಿಸುವಿರಿ. ಸಕಾಲಕ್ಕೆ ಸಿಕ್ಕ ಸೌಕರ್ಯದಿಂದ ನಿಮ್ಮ ಕಾರ್ಯವು ಸುಲಲಿತವಾಗುವುದು.
ಲೋಹಿತಶರ್ಮಾ – 8762924271 (what’s app only)