ಶುಭೋದಯ ಓದುಗರೇ. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದ್ರೆ ಇಂದಿನ (2023 ಏಪ್ರಿಲ್ 1) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೀನ ಮಾಸ, ಮಹಾನಕ್ಷತ್ರ : ರೇವತಿ, ಮಾಸ : ಚೈತ್ರ, ಪಕ್ಷ : ಶುಕ್ಲ, ವಾರ : ಶನಿ, ತಿಥಿ : ಏಕಾದಶೀ, ನಿತ್ಯನಕ್ಷತ್ರ : ಆಶ್ಲೇಷ, ಯೋಗ : ಧೃತಿ, ಕರಣ : ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 29 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 43 ನಿಮಿಷಕ್ಕೆ. ರಾಹು ಕಾಲ 09:33 ರಿಂದ 11:05ರ ವರೆಗೆ, ಯಮಘಂಡ ಕಾಲ 02:08 ರಿಂದ 03:40ರ ವರೆಗೆ, ಗುಳಿಕ ಕಾಲ ಬೆಳಗ್ಗೆ 06:29ರಿಂದ 08 :01ರ ವರೆಗೆ.
ಮೇಷ: ಇಂದು ನಿಮ್ಮ ವ್ಯಾಪಾರ, ವಹಿವಾಟುಗಳು ಸಮಾಧಾನವನ್ನು ತರಬಹುದು. ಉದ್ಯೋಗದ ಸ್ಥಳದಲ್ಲಿ ಸಹೋದ್ಯೋಗಿಗಳಿಗೆ ಸಹಾಯ ಮಾಡುವಿರಿ. ಮನೆಗೆ ಅವಶ್ಯವಿರುವ ವಸ್ತುಗಳನ್ನು ಖರೀದಿಸುವಿರಿ. ನಿಮ್ಮನ್ನು ವಿರೋಧಿಸುವ ವ್ಯಕ್ತಿಗಳು ಹುಟ್ಟಿಕೊಳ್ಳಬಹುದು. ಆರ್ಥಿಕತೆಯ ಸುಧಾರಣೆಗೆ ನಿಮ್ಮದೇ ಯೋಜನೆಗಳನ್ನು ಹಾಕಿಕೊಳ್ಳುವಿರಿ. ದಾಂಪತ್ಯದಲ್ಲಿ ಸುಖವಿದ್ದರೂ ನೆಮ್ಮದಿಯ ಕೊರತೆ ಕಾಣಿಸಬಹುದು. ಬಂಧುಗಳ ಜೊತೆ ದುಃಖವನ್ನು ಹಂಚಿಕೊಳ್ಳುವಿರಿ.
ವೃಷಭ: ನೀವು ಮಾಡುವ ವೃತ್ತಿಯು ನಿಮಗೆ ಯಶಸ್ಸನ್ನು ಕೊಡಬಹುದು. ಅನಿರೀಕ್ಷಿತ ತಿರುವುಗಳು ಗೊಂದಲವನ್ನು ಉಂಟುಮಾಡೀತು. ನಿಮ್ಮ ಗೆಳೆತನವು ಖುಷಿ ಕೊಡುವುದು. ಅತಿಯಾದ ಆಲೋಚನೆಗಳು ಮಾನಸಿಕ ನೆಮ್ಮದಿಯನ್ನು ದೂರಮಾಡಲಿವೆ. ಅತಿಯಾದ ಸಲುಗೆ ನಿಮಗೆ ಅಸಹ್ಯವಾದೀತು. ಭವಿಷ್ಯಕ್ಕಾಗಿ ಹಣವನ್ನು ಹೂಡಿಕೆ ಮಾಡುವ ಆಲೋಚನೆಯನ್ನು ಮಾಡುವಿರಿ. ಆರ್ಥಿಕವಾಗಿ ಸ್ವಲ್ಪ ಗಟ್ಟಿಯಾಗಬಹುದಾಗಿದೆ. ಕೃಷಿಯ ಕುರಿತು ಆಸಕ್ತಿ ಬರಲಿದೆ.
ಮಿಥುನ: ನಿಮ್ಮ ದಾಂಪತ್ಯದಲ್ಲಿ ಸುಖವಿರಲಿದೆ. ಮಕ್ಕಳ ಜೊತೆ ಪತಿ ಪತ್ನಿಯರಿಬ್ಬರೂ ಕಾಲವನ್ನು ಕಳೆಯುವಿರಿ. ದೂರದ ಊರಿಗೆ ಪ್ರಯಾಣ ಹೋಗುವ ಯೋಜನೆಗಳನ್ನು ಹಾಕಿಕೊಳ್ಳುವಿರಿ. ನಕಾರಾತ್ಮಕ ಭಾವನೆಗಳಿಗೆ ಅವಕಾಶವನ್ನು ಕೊಡಬೇಡಿ. ನಿಮ್ಮ ಶತ್ರುಗಳನ್ನು ನೀವು ಕಂಡುಕೊಳ್ಳುವಿರಿ. ನಿಮ್ಮ ವ್ಯಕ್ತಿತ್ವದ ಪರೀಕ್ಷೆ ಆಗಲಿದೆ. ಸಜ್ಜನರ ಸಹವಾಸವು ನಿಮಗೆ ಸಿಗಬಹುದು. ಉತ್ತಮ ಮಾರ್ಗದರ್ಶನವನ್ನು ಪಡೆಯುವಿರಿ. ಸ್ವತಂತ್ರವಾಗಿ ಆಲೋಚನೆಗಳನ್ನು ಮಾಡಲಿದ್ದೀರಿ. ಉದ್ಯೋಗದಲ್ಲಿ ತೃಪ್ತಿ ಇರಲಿದೆ.
ಕಟಕ: ಇಂದು ನೀವು ಬಹಳ ಚಾತುರ್ಯದಿಂದ ಕೆಲಸವನ್ನು ಮಾಡುವಿರಿ. ಆರೋಗ್ಯದ ವಿಚಾರದಲ್ಲಿ ಆತುರರಾಗುವುದು ಬೇಡ. ದುಪ್ಪಟ್ಟು ವ್ಯಯಿಸುವ ಸನ್ನಿವೇಶಗಳು ಬರಬಹುದು. ಉದ್ವೇಗದಿಂದ ಕೆಲವೊಂದು ಸಮಸ್ಯೆಗಳನ್ನು ತಂದುಕೊಳ್ಳುವಿರಿ. ನ್ಯಾಯಾಲಯದಲ್ಲಿ ಗೆಲುವು ಸಿಗುವ ಸಾಧ್ಯತೆ ಇದೆ. ಸಂಬಂಧಗಳ ವಿಚಾರದಲ್ಲಿ ನೀವು ಗಟ್ಟಿಯಾದ ನಿರ್ಧಾರವನ್ನು ತೆಗೆದುಕೊಳ್ಳಿ. ಇಷ್ಟ ಪಟ್ಟು ಮಾಡುವ ಕೆಲಸವು ಸಂತೋಷವನ್ನು ಕೊಡಲಿದೆ. ಸಮಯವಿದೆ ಎಂದು ಸುಮ್ಮನೆ ಕುಳಿತುಕೊಳ್ಳಬೇಡಿ.
ಸಿಂಹ: ಇಂದು ಸಂಬಂಧಗಳ ಬೆಲೆಯಯ ಅರ್ಥವಾಗಲಿದೆ. ಎಲ್ಲವುದನ್ನೂ ವಿರೋಧಿಸುವುದು ನಿಮ್ಮ ಸ್ವಭಾವವಾಗಿರಲಿದೆ. ಮನೆಯಲ್ಲಿಯೇ ಇದ್ದು ಬೇಸರವಾಗಲಿದೆ. ಹೊರಗೆ ಸುತ್ತಾಡಲು ಹೋಗಲಿದ್ದೀರಿ. ಕಛೇರಿಯಲ್ಲಿ ಬಡ್ತಿ ಸಿಗುವ ಸಾಧ್ಯತೆ ಇದೆ. ನಿಮ್ಮ ಸೇವೆಗೆ ಮೆಚ್ವುಗೆ ಸಿಗಬಹುದು. ಸ್ನೇಹಿತರು ನಿಮ್ಮ ಮಾತಿಗೆ ಬೆಲೆ ಕೊಡುವರು. ಸಕಾರಾತ್ಮಕೆ ಚಿಂತನೆಯನ್ನು ಬೆಳೆಸಿಕೊಳ್ಳುವುದು ಉತ್ತಮ. ಅಪರಿಚಿತ ಕರೆಗಳಿಗೆ ಕಿವಿಗೊಡದೇ ನಿಮ್ಮ ಕೆಲಸವನ್ನು ಮಾಡಿ. ಇಂದಿನ ಕೆಲಸಗಳು ನಿಧಾನಗತಿಯಲ್ಲಿ ಸಾಗಲಿದೆ.
ಕನ್ಯಾ: ಹೊಸದಾಗಿ ಉದ್ಯೋಗವನ್ನು ಅರಸುತ್ತಿದ್ದರೆ ಕೆಲಸಕ್ಕೆ ಹೆಚ್ಚು ಓಡಾಟಗಳು ಆಗಬಹುದು. ನಿಮ್ಮ ಆಸೆಗಳನ್ನು ಪೂರೈಸಿಕೊಳ್ಳಲು ನಿರಂತರ ಯತ್ನವನ್ನು ಮಾಡುವಿರಿ. ಉತ್ತಮವಾದ ಆಹಾರವನ್ನು ತಿನ್ನಬೇಕು ಎಂದು ಬಯಸಿ ಮನೆಯಿಂದ ದೂರ ಹೋಗುವಿರಿ. ಮನೆಯನ್ನು ಕಟ್ಟುವ ವಿಚಾರವು ಪತ್ನಿಯಿಂದ ಬರಲಿದ್ದು ಬಹಳ ಸಂತೋಷವಾಗಲಿದೆ. ತಾಯಿಯ ಆರೋಗ್ಯವು ಕೆಡಲಿದ್ದು ಚಿಕಿತ್ಸೆಯನ್ನು ಕೊಡಿಸುವಿರಿ. ಅಲ್ಪ ಭೋಜನದಿಂದ ತೃಪ್ತಿ ಇರಲಿದೆ. ವಾಹನದಿಂದ ಅಪಘಾತವಾಗಬಹುದು.
ತುಲಾ: ಇಂದು ನೀವು ಹೆಚ್ಚು ಧಾರ್ಮಿಕ ಮನಃಸ್ಥಿತಿ ಉಳ್ಳವರಾಗಿದ್ದೀರಿ. ತೀರ್ಥಕ್ಷೇತ್ರಗಳ ಅಥವಾ ಪ್ರಾಚೀನ ದೇವಾಲಯಗಳ ದರ್ಶನಕ್ಕೆ ಹೋಗುವ ಮನಸ್ಸಾಗಲಿದೆ. ಯಥಾಯೋಗ್ಯ ದಾನವನ್ನೂ ನೀವು ಕೊಡಲಿದ್ದೀರಿ. ಮಾತಗಾರರಾಗಿದ್ದರೆ ನಿಮಗೆ ಪ್ರಶಂಸೆಗಳು ಸಿಗಬಹುದು. ವಂಚನೆ ಮಾಡಿದ್ದೀರಿ ಎಂಬ ಅಪವಾದ ಬರಬಹುದು. ಹೊಸ ವಸ್ತ್ರಗಳನ್ನು ಧರಿಸುವಿರಿ. ಶ್ರಮವಹಿಸದೇ ಫಲವನ್ನು ಅಪೇಕ್ಷಿಸುವುದು ನಿಮ್ಮ ಅಸಾಮರ್ಥ್ಯವನ್ನು ತೋರಿಸುವುದು. ನಿಮ್ಮ ಮಾತುಗಾರಿಕೆಯನ್ನು ಮೆಚ್ಚಿಕೊಳ್ಳಲಿದ್ದಾರೆ.
ವೃಶ್ಚಿಕ: ಇಂದು ನಿಮ್ಮವರೊಬ್ಬರು ಮತ್ತು ನಿಮ್ಮವರಂತೆ ಕಾಣುವವರು ಯಾರು ಎಂಬುದರ ಸ್ಪಷ್ಟ ನಿಲುವು ಇರಲಿದೆ. ವ್ಯಾಪರ ಅಥವಾ ಉದ್ಯಮವು ನಿಧಾನವಾಗಿ ಒಂದೊಂದೇ ಹೆಜ್ಜೆಯನ್ನು ಇಟ್ಟು ಮೇಲೇರಲು ಆರಂಭಿಸಿದೆ. ಕೃಷಿಯ ಕಾರ್ಯದಲ್ಲಿ ಮನಸ್ಸಾಗಿ ಕೆಲವು ಅಪರೂಪದ ಸಸ್ಯಗಳನ್ನು ನೆಡಲಿದ್ದೀರಿ. ವಿದ್ಯಾರ್ಥಿಗಳಿಗೆ ಸ್ವಲ್ಪ ಹಿಂಜರಿಕೆ ಇರಲಿದೆ. ಸಂಗಾತಿಯನ್ನು ಹುಡುಕುವ ಕೆಲಸವು ನಿಮಗೆ ಬೇಸರವನ್ನು ತರಿಸುವುದು. ಮರ್ಯಾದೆಗೆ ಹೆದರಿ ಮಾಡಬೇಕಾದ ಕೆಲಸವನ್ನು ಮಾಡದೇ ಇರುವಿರಿ. ಮಾತುಗಳನ್ನು ಕಡೆ ಆಡುವುವಿರಿ.
ಧನು: ಇಂದು ಬಹಳ ದಿನಗಳಿಂದ ದೋಲಾಯಮಾನವಾಗಿದ್ದ ಕಂಕಣಭಾಗ್ಯವು ಇಂದು ಸ್ಪಷ್ಟ ನಿರ್ಧಾರಕ್ಕೆ ಬರಲಿದೆ. ರಾಜಕೀಯ ಕುಟಂಬದ ವ್ಯಕ್ತಿಯನ್ನು ನೀವು ಭೇಟಿ ಮಾಡಲಿದ್ದು ಕೆಲವು ಅನುಕೂಲತೆಗಳು ಆಗಲಿವೆ. ಅತಿಯಾದ ಆತ್ಮವಿಶ್ವಾಸದಿಂದ ನಿಮ್ಮ ಕೆಲಸವನ್ನು ಪೂರೈಸುವಿರಿ. ಸ್ನೇಹಿತರ ಆಗಮನವು ಸಂಕಟವನ್ನು ತಂದರೂ ಹೇಳಿಕೊಳ್ಳಲಾಗದ ಸ್ಥಿತಿಯಲ್ಲಿ ಇರುವುದಿಲ್ಲ. ಸ್ವಾವಲಂಬಿಗಳಾಗಿ ಬದುಕಬೇಕು ಎನ್ನುವುದು ನಿಮ್ಮ ದೃಢವಾದ ನಂಬುಗೆಯಾಗಿದೆ. ಯಂತ್ರೋದ್ಯಮವನ್ನು ನಡೆಸುತ್ತಿದ್ದರೆ ನಿಮಗೆ ಲಾಭವಿದೆ. ವೈವಾಹಿಕ ಜೀವನವು ನಿಮಗೆ ಬೇಸರವೆನಿಸಬಹುದು.
ಮಕರ: ನೀವು ಇಂದು ಹೊಸ ಕೆಲಸವೊಂದನ್ನು ಆರಂಭಿಸಲು ಯೋಚಿಸಿದ್ದೀರಿ. ನಿಮ್ಮವರೇ ನಕಾರಾತ್ಮಕ ಮಾತುಗಳನ್ನು ಹೇಳಿ ದಾರಿಬತಪ್ಪಿಸುವರು ಅಥವಾ ಅವಮಾನ ಮಾಡುವರು. ನೀವು ವೈದ್ಯವೃತ್ತಿಯಲ್ಲಿ ನಿರತರಾಗಿದ್ದರೆ ಇಂದು ಅತಿಯಾದ ಮಾನಸಿಕ ಒತ್ತಡದಲ್ಲಿ ಇರುವಿರಿ. ಸಂಪತ್ತನ್ನು ಅಪರಿಚಿತ ಸ್ಥಳದಲ್ಲಿ ಇಟ್ಟು ಕಳೆದುಕೊಳ್ಳುವಿರಿ. ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ಸಹೋದರಿಂದ ಸಂಪತ್ತಿನ ಸಹಾಯವು ಸಿಗಲಿದೆ. ದ್ವೇಷವನ್ನು ಬಿಟ್ಟು ಮುಂದುವರಿಯುವುದು ಒಳ್ಳೆಯದು.
ಕುಂಭ: ಇಂದು ಬಹಳ ಸುಖವಾಗಿರುವ ದಿನ. ಉತ್ತಮ ಭೋಜನ ಸಿಗಲಿದೆ. ನಿಮಗೆ ಪ್ರಶಂಸೆಗಳು ಸಿಗಲಿವೆ. ಯಾವುದನ್ನೂ ಪರಿಶೀಲಿಸದೇ ಸ್ವೀಕರಿಸಬೇಡಿ. ಅನಿರೀಕ್ಷಿತ ಹಣವೂ ಸಿಗಬಹುದು. ಆತ್ಮಗೌರವಕ್ಕೆ ಧಕ್ಕೆ ಬರುವ ಕಾರ್ಯಗಳನ್ನು ಬಿಡುವಿರಿ. ನಿಮ್ಮ ತಲೆಯಲ್ಲಿ ಇರುವ ನೂರಾರು ಯೋಜನೆಯನ್ನು ಹೇಳಲು ಹೋಗಿ ನಿಮ್ಮ ಮೌಲ್ಯವನ್ನು ಕಳೆದುಕೊಳ್ಳುವಿರಿ. ವಿದ್ಯಾರ್ಥಿಗಳು ಅಭ್ಯಾಸದತ್ತ ಗಮನಹರಿಸಬೇಕು. ಸ್ನೇಹಿತರ ಸಹವಾಸದಿಂದ ದುಶ್ಚಟಕ್ಕೆ ಬೀಳುವ ಸಾಧ್ಯತೆ ಇದೆ. ಆದಷ್ಟು ಎಚ್ಚರಿಕೆಯಿಂದ ಇರಿ.
ಮೀನ: ಇಂದು ನಿಮಗೆ ಹಿರಿಯರ, ಗುರುಸಮಾನರ ಭೇಟಿಯಾಗಲಿದೆ. ಅವರಿಂದ ಶುಭಾಶಂಸನೆ ಸಿಗಲಿದೆ. ಅತಿಯಾಗಿ ಉದ್ಯೋಗವನ್ನು ಬದಲಾಯಿಸುವುದು ಸೂಕ್ತವಲ್ಲ. ಅವಮಾನವಾಗು ಸಂದರ್ಭವಿದ್ದರೆ ಅಲ್ಲಿಂದ ದೂರನಡೆಯಿರಿ. ನಿಮ್ಮ ವ್ಯಕ್ತಿತ್ವವನ್ನು ಹುಡುಕಿಕೊಂಡು ಬರುವವರಿದ್ದಾರೆ. ಒಳ್ಳೆಯ ಕೆಲಸವು ಆಗಿಲ್ಲ ಎಂಬ ನೋವು ಇರಲಿದೆ. ತಾಳ್ಮೆಯನ್ನು ಇಟ್ಟುಕೊಂಡು ವ್ಯವಹರಿಸವುದು ಉತ್ತಮ. ಮನಃಶಾಂತಿಯನ್ನು ಬಯಸಿ ಪ್ರಶಾಂತವಾದ ಪ್ರದೇಶಕ್ಕೆ ಹೋಗಬಹುದು.
ಲೋಹಿತಶರ್ಮಾ ಇಡುವಾಣಿ