ರಾಶಿ ಭವಿಷ್ಯ ಪ್ರತಿಯೊಬ್ಬರ ಜೀವನದಲ್ಲಿ ವಿಭಿನ್ನವಾಗಿರುತ್ತದೆ. ಪ್ರತಿನಿತ್ಯ ಬೆಳಗ್ಗೆ ಎದ್ದ ಕೂಡಲೇ ತಮ್ಮ ರಾಶಿ ಭವಿಷ್ಯ (Daily horoscope) ನೋಡುವುದು ಕೆಲವರಿಗೆ ಅಭ್ಯಾಸ. ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಜೊತೆಗೆ ಪಂಚಾಂಗವನ್ನು ಸಹ ಓದುತ್ತಾರೆ. ಹಾಗಾದರೆ ಇಂದಿನ (2023 ಸೆಪ್ಟೆಂಬರ್ 2) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಪೂರ್ವಾಫಲ್ಗುಣೀ, ಮಾಸ: ನಿಜ ಶ್ರಾವಣ, ಪಕ್ಷ: ಕೃಷ್ಣ, ವಾರ: ಶನಿ, ತಿಥಿ: ದ್ವಿತೀಯಾ, ನಿತ್ಯನಕ್ಷತ್ರ: ಉತ್ತರಾಭಾದ್ರ, ಯೋಗ: ಶೂಲ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 21 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 43 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 09:27 ರಿಂದ 10:59ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 02:05 ರಿಂದ 03:38ರ ವರೆಗೆ, ಗುಳಿಕ ಕಾಲ ಬೆಳಗ್ಗೆ 06:22 ರಿಂದ 07:54ರ ವರೆಗೆ.
ವೈದ್ಯರ ಸಲಹೆಯನ್ನು ಪಡೆದು ಮುಂದಿನ ಕಾರ್ಯವನ್ನು ಮಾಡುವಿರಿ. ನಿಮ್ಮ ಬಳಿಯ ಸಂಪತ್ತನ್ನು ಕೊಟ್ಟು ಬಿಡಬೇಕಾಗುವುದು. ಹೊಸ ಉದ್ಯೋಗಕ್ಕೆ ವಿವರಗಳನ್ನು ಕೇಳಿ ಪಡೆಯುವಿರಿ. ನಿಮ್ಮ ಮಕ್ಕಳಿಗೆ ಬೇಕಾದ ವಸ್ತುಗಳನ್ನು ಕೊಡಿಸುವಿರಿ. ಚಟುವಟಿಕೆಯಿಂದ ನೀವು ಇರುವಿರಿ. ಸಂಗಾತಿಯ ಮನೋಭಾವವು ನಿಮಗೆ ಗೊತ್ತಾಗದೇ ಹೋದೀತು. ಸಾಮಾಜಿಕ ಸಹಕಾರವನ್ನು ನೀವು ನೀಡಲಿದ್ದೀರಿ. ಸಮಾರಂಭಕ್ಕೆ ಭೇಟಿ ಕೊಡುವ ಸಾಧ್ಯತೆ ಇದೆ. ನಿಮ್ಮವರನ್ನು ನೀವು ದೂರ ಮಾಡಿಕೊಳ್ಳಬಹುದು.
ಮೃದುವಾದ ಮಾತೂ ನಿಮ್ಮಿಂದ ಬರಲಿದೆ. ನಿಮ್ಮ ಕೆಲಸಗಳ ಎಲ್ಲರನ್ನೂ ಮರೆಯುವಿರಿ. ಬಂಧುಗಳ ಸಹಯೋಗವು ನೀವು ದೂರ ಪ್ರಯಾಣವನ್ನು ಮಾಡಲಿದ್ದೀರಿ. ಡೋಲಾಯಮಾನವಾದ ಸ್ಥಿತಿಗೆ ಸರಿಯಾದ ಉತ್ತರದ ಅವಶ್ಯಕತೆಇರಲಿದೆ. ಇಂದು ವೇಗದ ನಡಿಗೆ ಇರಲಿದೆ. ಸಂಬಂಧಗಳು ಇನ್ನಷ್ಟು ಹತ್ತಿರವಾಗಬಹುದು. ಕುಲಕ್ಕೆ ಯೋಗ್ಯವಾದ ಕಾರ್ಯವನ್ನು ಮಾಡಿದ್ದಕ್ಕೆ ಪ್ರಶಂಸೆಯು ಸಿಗಬಹುದು. ವ್ಯಾಪಾರದ ತಂತ್ರವು ಫಲಿಸುವುದು. ದುರಭ್ಯಾಸವನ್ನು ರೂಢಿಸಿಕೊಳ್ಳುವಿರೊ.
ಆರೋಗ್ಯದ ಮೇಲೆ ಕಾಳಜಿಯು ಕಡಿಮೆ ಆಗಲಿದೆ. ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕಾದ ಸವಾಲು ಬರಬಹುದು. ಹಣದ ಹೊಂದಾಣಿಯು ಸ್ವಲ್ಪ ಕಷ್ಟವಾದೀತು. ಉನ್ನತ ಹುದ್ದೆಗೆ ಹೋಗಲು ಅವಕಾಶವಿದ್ದರೂ ನೀವು ಹೋಗದಿರುವಿರಿ. ಸರಿ ಹಾಗೂ ತಪ್ಪುಗಳ ತುಲನೆಯು ಕಷ್ಟವಾದೀತು. ನಿತ್ಯಕರ್ಮದಲ್ಲಿ ವ್ಯತ್ಯಾಸವು ಬರಬಹುದು. ಶುದ್ಧತೆಯ ಬಗ್ಗೆ ನೀವು ಬಹಳ ಎಚ್ಚರಿಕೆಯನ್ನು ವಹಿಸುವುದು ಅವಶ್ಯಕ. ಕಿರಿಕಿರಿ ಎನಿಸಿದ ಕಾರ್ಯಗಳನ್ನು ನೀವು ಮುಂದೂಡುವಿರಿ. ಸಂಗಾತಿಯ ಮನೋಭಾವಕ್ಕೆ ತಕ್ಕಂತೆ ವರ್ತಿಸುವುದು ಕಷ್ಟವಾದೀತು. ಸಿಕ್ಕಷ್ಟು ವಸ್ತುವನ್ನು ಜೋಪಾನವಾಗಿ ಇಟ್ಟಕೊಳ್ಳಿ.
ಆರ್ಥಿಕತೆಯ ಬಗ್ಗೆಯೇ ಹೆಚ್ಚಿನ ಒಲವು ಇಲ್ಲದ್ದರಿಂದ ಒತ್ತಡವೂ ಸಹಜವಾಗಿ ಇರಲಿದೆ. ನಿಮ್ಮ ವಸ್ತುಗಳನ್ನು ಕಳೆದುಕೊಂಡು ಪಶ್ಚಾತ್ತಾಪ ಪಡುವಿರಕ. ಹಿರಿಯ ಮಾತನ್ನು ಕೇಳದೇ ಅಸಡ್ಡೆ ಮಾಡಬಹುದು. ನೀವು ಇಡುವ ಹೆಜ್ಜೆಗಳು ಸರಿಯಾಗಿದೆಯೇ ಎಂದು ಪರೀಕ್ಷಿಸಿಕೊಳ್ಳಿ. ಅಪರಿಚಿತರ ಜೊತೆ ಅವಶ್ಯಕತೆಯಷ್ಟೇ ವ್ಯವಹಾರವಿರಲಿ. ಭವಿಷ್ಯದ ಗೊಂದಲವು ನಿಮಗೆ ಪರಿಹಾರವಾಗದೇ ಹೋಗಬಹುದು. ಅತಿಯಾದ ನಂಬಿಕೆಯಿಂದ ನಿಮಗೆ ತೊಂದರೆ ಆಗಬಹುದು. ಅತಿಥಿ ಸತ್ಕಾರವನ್ನು ನೀವು ಮಾಡುವಿರಿ. ವಿದ್ಯಾರ್ಥಿಗಳ ಆರೋಗದ ಬಗ್ಗೆ ಗಮನ ಅವಶ್ಯಕ.
ಉದ್ಯೋಗದಲ್ಲಿ ಒತ್ತಡ ಜೀವನವು ನಿಮಗೆ ಅಭ್ಯಾಸವಾಗಿ ಹೋಗಲಿದೆ. ಬಲವಂತ ವಿಚಾರಕ್ಕೆ ನೀವು ಒಪ್ಪಲಾರಿರಿ. ನಿಮ್ಮ ಕಷ್ಟಗಳಿಗೆ ದೈವದ ಮೊರೆ ಹೋಗುವುದು ಉತ್ತಮ. ಆಸ್ತಿಯನ್ನು ಉಳಿಸಿಕೊಳ್ಳ ಬಹಳ ಶ್ರಮವಹಿಸಬೇಕಾದೀತು. ನಿಮ್ಮ ತಪ್ಪುಗಳಿಗೆ ಸಮಜಾಷಿ ನೀಡುವುದು ಸರಿಯಾಗದು. ವಿದೇಶದ ಕನಸನ್ನು ನನಸುಮಾಡಿಕೊಳ್ಳಲು ಕಷ್ಟವಾಗುವುದು. ನಿಮ್ಮ ಒಂದು ತಪ್ಪಿಗೆ ನಿಮ್ಮ ವೃತ್ತಿಯ ಸಿಬ್ಬಂದಿಗಳು ಕಷ್ಟಪಡಬೇಕಾದೀತು. ಎಲ್ಲವನ್ನೂ ಸರಳವಾಗಿ ಸ್ವೀರಿಸುವ ಮನೋಭಾವದಲ್ಲಿನಿರಲಿದೆ. ನಿಯಮಬದ್ಧ ಜೀವನವನ್ನು ನೀವೇ ರೂಪಿಸಿಕೊಳ್ಳುವಿರ.
ತಾಯಿ ಆರೋಗ್ಯದಲ್ಲಿ ವ್ಯತ್ಯಾಸವು ಕಾಣಿಸಿಕೊಳ್ಳುವುದು. ನಿಮಗೆ ಇಷ್ಟವಾಗದ ಕೆಲಸವನ್ನೇ ಮಾಡಬೇಕಾದ ಸ್ಥಿತಿಯು ಬರಬಹುದು. ಉದ್ಯೋಗವನ್ನು ನಿರೀಕ್ಷಿತ ಹಂತಕ್ಕೆ ಕೊಂಡೊಯ್ಯಲು ಶ್ರಮಿಸುವಿರಿ. ವಾತದ ಪ್ರಕೋಪದಿಂದ ಕಷ್ಟವಾಗುವುದು. ನಿಮ್ಮ ಬಳಿ ಆಗದ ಕಾರ್ಯವನ್ನು ಇನ್ನೊಬ್ಬರು ಮಾಡಿ ಮುಗಿಸುವರು. ಮಕ್ಕಳಿಂದ ನಿಮಗೆ ಉಡುಗೊರೆಯು ಸಿಗಲಿದೆ. ಪ್ರಾಪಂಚಿಕ ಸುಖವು ನಿಮಗೆ ಸಾಕೆನಿಸಬಹುದು. ಇನ್ನೊಬ್ಬರ ಸಂಕಷ್ಟಕ್ಕೆ ನೀವು ಬಲಿಯಾಗಬಹುದು. ಸಹನೆಯನ್ನು ನೀವು ರೂಢಿಸಿಕೊಳ್ಳುವಿರಿ. ಏಕಾಂಗಿಯಾಗಿ ಪುಣ್ಯಸ್ಥಳಗಳಿಗೆ ಹೋಗುವಿರಿ.
ಕೈಗೊಂಡ ಕಾರ್ಯಗಳಲ್ಲಿ ನಿಮಗೆ ಜಯವು ಸಿಗಲಿದೆ. ಪ್ರಾಮಾಣಿಕತೆಗೆ ನಿಮಗೆ ಪ್ರಶಂಸೆಯು ಸಿಗಲಿದೆ. ಯಾರನ್ನೋ ಮೆಚ್ಚಿಸಲು ನೀವು ದೇಹವನ್ನು ದಂಡಿಸಿ ಕೆಲಸ ಮಾಡುವಿರಿ. ಆರ್ಥಿಕತೆಯನ್ನು ಬಲ ಮಾಡಿಕೊಳ್ಳಲು ಉದ್ಯೋಗವನ್ನು ಬದಲಿಸಬೇಕಾದೀತು. ನಿಮ್ಮ ಮಾತುಗಳು ಹಾಸ್ಯದಿಂದ ಕೂಡಿದ್ದು ಎಲ್ಲರೂ ನಗುವರು. ಹಠದ ಸ್ವಭಾವದಿಂದ ನೀವು ಪಡೆದುಕೊಳ್ಳಬಹುದಾದ ಉಪಯೋಗದಿಂದ ವಂಚಿತರಾಗುವಿರಿ. ಕಾರ್ಯದಲ್ಲಿ ನಿರಾಸಕ್ತಿಯು ಇರಲಿದೆ. ಕಾರ್ಯದ ನಡುವೆ ವಿಶ್ರಾಂತಿ ಇರಲಿ. ನಿಮ್ಮವರ ಜೊತೆ ಕಾಲ ಕಳೆಯಲು ಇಷ್ಟವಾಗದು.
ತಾಯಿಯ ಪ್ರೀತಿಯನ್ನು ಕಳೆದುಕೊಳ್ಳಬೇಕಾದೀತು. ನಿಮ್ಮ ಆಸೆಯನ್ನು ಪೂರೈಸಲು ಇಂದಿನಿಂದ ಆರಂಭಸುವಿರಿ. ಆರೋಗ್ಯದ ವಿಷಯದಲ್ಲಿ ಮುಂಜಾಗ್ರತೆ ಇರಬೇಕಾಗುವುದು. ಹೊಸ ಉದ್ಯಮಕ್ಕೆ ಆಪ್ತರ ಹಾಗೂ ಅನುಭವಿಗಳ ಸಲಹೆಯನ್ನು ಪಡೆಯಿರಿ. ದಾಂಪತ್ಯದ ಒಡಕು ಎಲ್ಲರಿಗೂ ಗೊತ್ತಾಗುವ ಮೊದಲೇ ಸರಿ ಮಾಡಿಕೊಳ್ಳಿ. ಆಕಸ್ಮಿಕ ವಾರ್ತೆಯು ನಿಮಗೆ ಆಘಾತವನ್ನು ಉಂಟುಮಾಡಬಹುದು. ಅದಾಯವು ಹೆಚ್ಚಾಗಲಿದೆ. ಖುಷಿಯನ್ನು ಮನೆಯವರ ಜೊತೆ ಹಂಚಿಕೊಳ್ಳುವಿರಿ. ಕಲಹಕ್ಕೆ ಯಾರಾದರೂ ಬಂದರೆ ಮೌನ ವಹಿಸಿ.
ನಿಮ್ಮ ಕೆಲಸದಲ್ಲಿ ನಿಮಗೆ ತಪ್ಪು ಕಾಣಿಸಬಹುದು. ಸಮ್ಮಾನವನ್ನು ನೀವು ಇಷ್ಟಪಡುವುದಿಲ್ಲ. ನಿಮ್ಮ ಬಯಕೆಗಳು ಇನ್ಮೊಬ್ಬರಿಂದ ಪ್ರೇರಣೆಯಿಂದ ಬರಲಿದೆ. ಮನಸ್ಸಿನ ನಿಯಂತ್ರಣವನ್ನು ಸಾಧಿಸಲು ನಿಮಗೆ ಆಗದು. ಸಂಗಾತಿಯ ಮನೋಭಾವವನ್ನು ಅರ್ಥಮಾಡಿಕೊಳ್ಳಲು ಕಷ್ಟವಾಗುವುದು. ನಿಮ್ಮ ನೌಕರರು ಸರಿಯಾಗಿ ಕೆಲಸ ಮಾಡದೇ ಕೊನೆಗೆ ನಿಮ್ಮ ಮೇಲೇ ಭಾರವು ಬರುವುದು. ನಿಮ್ಮ ಮಾತು ಇನ್ನೊಬ್ಬರಿಗೆ ನೋವುಂಟುಮಾಡುವಂತೆ ಇರಲಿದೆ. ವಿದ್ಯಾಭ್ಯಾಸಕ್ಕೆ ನೀವು ಇಷ್ಟಪಟ್ಟ ವಿಚಾರವೇ ಸಿಗಲಿದೆ. ಸಾಮಾಜಿಕ ಕಾರ್ಯಗಳನ್ನು ನೀವು ಸಾಮೂಹಿಕವಾಗಿ ಮಾಡವಿರಿ. ಕಳ್ಳತನದ ಆರೋಪವು ಬರಬಹುದು.
ಉದ್ಯೋಗದ ಸ್ಥಳದಲ್ಲಿ ಪಕ್ಷಪಾತವನ್ನು ಮಾಡಿ ದ್ವೇಷವನ್ನು ಬಿತ್ತುವ ಸಾಧ್ಯತೆ ಇದೆ. ಕಲಾವಿದರಿಗೆ ಹೆಚ್ಚಿನ ಅವಕಾಶಗಳು ಸಿಗಲಿದೆ. ಸಾಲದ ವಿಚಾರವಾಗಿ ಕುಟುಂಬದ ಜೊತೆ ವಾಗ್ವಾದವು ಆಗಲಿದೆ. ಇಂದು ನಿಮ್ಮ ವೈಯಕ್ತಿಕ ಕೆಲಸಗಳೇ ಬಹಳ ಇರಲಿದ್ದು ಇನ್ನೊಂದರ ಕುರಿತು ಯೋಚನೆಯು ನಿಮಗೆ ಸಾಧ್ಯವಾಗದು. ಇಂದು ನಿಮ್ಮ ಗೌರವವನ್ನು ಕಂಡು ಕೆಲವು ಮಿತ್ರರೂ ಶತ್ರುಗಳಾದಾರು. ನಿಮ್ಮ ಆಲೋಚನೆಯನ್ನು ಯಾರ ಬಳಿಯೂ ಹೇಳಿಕೊಳ್ಳದೇ ಕಾರ್ಯರೂಪಕ್ಕೆ ತರುವುದು ಒಳ್ಳೆಯದು. ಏಕಾಂತವನ್ನು ಇಂದು ಹೆಚ್ಚು ಇಷ್ಟಪಡುವಿರಿ. ದೇವರಲ್ಲಿ ಭಕ್ತಿಯು ಇರಲಿದೆ. ಕ್ರಮಬದ್ಧ ಜೀವನವನ್ನು ನೀವು ನಡೆಸುವಿರಿ.
ವೃತ್ತಿಯ ಕಾರಣಕ್ಕೆ ನೀವು ವಿದೇಶಪ್ರಯಾಣವನ್ನು ಮಾಡಲಿದ್ದೀರಿ. ಬಂಧುಗಳ ನೋವಿಗೆ ಸ್ಪಂದಿಸುವಿರಿ. ಪ್ರಯಾಣದಿಂದ ನಿಮಗೆ ಆಲಸ್ಯವಿರಲಿದೆ. ಅಪಮಾನವನ್ನು ನೀವು ನುಂಗಿಕೊಳ್ಳುವಿರಿ. ಕೋಪವನ್ನು ಮಾಡಿಕೊಳ್ಳಲು ನಿಮಗೆ ಕಾರಣವೇ ಬೇಕಾಗದು. ನೌಕರರಿಂದ ನಿಮಗೆ ಎದುರುತ್ತರ ಸಿಗಲಿದೆ. ವಿವೇಚನೆ ಇಲ್ಲದೇ ಆಡಿದ ನಿಮ್ಮ ಮಾತುಗಳು ಕಲಹಕ್ಕೆ ಕಾರಣವಾಗಬಹುದು. ನಿಮ್ಮ ಪ್ರತಿಭೆಯನ್ನು ತೋರಿಸಲು ಇದು ಸೂಕ್ತ ಸಮಯ. ನಿಮ್ಮ ವಸ್ತುವನ್ನು ಇನ್ನೊಬ್ಬರ ಉಪಯೋಗಕ್ಕೆ ದಾನವಾಗಿ ಕೊಡುವಿರಿ. ಇಂದು ಕೆಲಸವನ್ನು ಮುಗಿಸಿ ಆರಾಮಾಗಿ ಇರಬೇಕು ಎಂದು ಅಂದುಕೊಳ್ಳುವಿರಿ
ಅನಿವಾರ್ಯ ಕಾರಣದಿಂದ ನಿಮಗೆ ಅಧಿಕಾರ ಲಾಭವಾಗಬಹುದು. ಉದ್ಯೋಗದಲ್ಲಿ ಒತ್ತಡದಿಂದ ಕೆಲವು ಸಮಸ್ಯೆಗಳು ಆಗಬಹುದು. ವ್ಯಾಪಾರದಲ್ಲಿ ಲಾಭದ ಅಂಶವು ಕಡಿಮೆ ಇರಬಹುದು. ಸಮಯವನ್ನು ನಿರ್ಧರಿಸಿಕೊಂಡು ಕೆಲಸವನ್ನು ಆರಂಭಿಸಿದರೆ ಸಕಾಲಕ್ಕೆ ಎಲ್ಲವೂ ಮುಗಿಯಲಿದೆ. ಆಸಕ್ತಿಯು ಇಲ್ಲದಿದ್ದರೂ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುವಿರಿ. ಆಪತ್ತಿನಲ್ಲಿ ಇದ್ದರೆ ಸ್ನೇಹಿತರ ಸಹಾಯ ಸಿಗಬಹುದು. ಖರ್ಚಿಗೆ ಇಂದು ಬಹಳ ಆತಂಕಪಡುವಿರಿ. ಭೂಮಿಗೆ ಸಂಬಂಧಿಸಿದ ನಿಮ್ಮ ಕಲಹವು ನ್ಯಾಯಾಲಯಕ್ಕೆ ಹೋಗಬಹುದು. ನಿಮ್ಮ ಬಳಿ ಯಾರಾದರೂ ಕೇಳಿ ಬರಬಹುದು. ಪ್ರೀತಿಯಲ್ಲಿ ನಿಮಗೆ ಸೋಲಾಗಬಹುದು.
-ಲೋಹಿತಶರ್ಮಾ (ವಾಟ್ಸ್ಆ್ಯಪ್- 8762924271)
Published On - 12:00 am, Sat, 2 September 23