ರಾಶಿ ಭವಿಷ್ಯ ಪ್ರತಿಯೊಬ್ಬರ ಜೀವನದಲ್ಲಿ ವಿಭಿನ್ನವಾಗಿರುತ್ತದೆ. ಪ್ರತಿನಿತ್ಯ ಬೆಳಗ್ಗೆ ಎದ್ದ ಕೂಡಲೇ ತಮ್ಮ ರಾಶಿ ಭವಿಷ್ಯ (Daily horoscope) ನೋಡುವುದು ಕೆಲವರಿಗೆ ಅಭ್ಯಾಸ. ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಜೊತೆಗೆ ಪಂಚಾಗವನ್ನು ಸಹ ಓದುತ್ತಾರೆ. ಹಾಗಾದರೆ ಇಂದಿನ (2023 ಜುಲೈ 20) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕರ್ಕಾಟಕ ಮಾಸ, ಮಹಾನಕ್ಷತ್ರ: ಪುನರ್ವಸು, ಮಾಸ: ಅಧಿಕ ಶ್ರಾವಣ, ಪಕ್ಷ: ಶುಕ್ಲ, ವಾರ: ಗುರು, ತಿಥಿ: ತೃತೀಯಾ, ನಿತ್ಯನಕ್ಷತ್ರ: ಮಘಾ, ಯೋಗ: ಸಿದ್ಧ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 13 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 03 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 02:15 ರಿಂದ 03:51ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 06:14 ರಿಂದ 07:50ರ ವರೆಗೆ, ಗುಳಿಕ ಕಾಲ ಬೆಳಗ್ಗೆ 09:26 ರಿಂದ 11:02ರ ವರೆಗೆ.
ಮೇಷ: ಆದಾಯಕ್ಕಿಂತ ಅಧಿಕವಾದ ಖರ್ಚನ್ನು ನೀವು ತೋರಿಸುವಿರಿ. ನಿಮ್ಮ ಪರೀಕ್ಷೆಯ ಕಾಲವು ಇದಾಗಿದ್ದು ಎಚ್ಚರಿಕೆಯಿಂದ ಮಾತನಾಡಿ. ಗುರುಹಿರಿಯರಲ್ಲಿ ಶ್ರದ್ಧೆ, ಗೌರವದ ಅಗತ್ಯವಿದೆ. ನೇರ ನುಡಿಯಿಂದ ಶತ್ರುಗಳು ಹುಟ್ಟಿಕೊಂಡಾರು. ಸಮಯಸ್ಫೂರ್ತಿಯಿಂದ ಕೆಲಸವನ್ನು ಮಾಡುವಿರಿ. ದುರಭ್ಯಾಸದಿಂದ ನಿಮಗೆ ತೊಂದರೆಗಳು ಕಾಣಿಸಿಕೊಳ್ಳುವುದು. ಶುಭವಾರ್ತೆಯ ನಿರೀಕ್ಷೆಯಲ್ಲಿ ಇರುವಿರಿ. ಸಂಗಾತಿಯ ಜೊತೆ ವಾಯುವಿಹಾರವನ್ನು ಮಾಡಿ ಸುಖಪಡುವಿರಿ. ಪಿತ್ತದಿಂದ ಆರೋಗ್ಯವು ಕೆಡಲಿದೆ.
ವೃಷಭ: ಹೊಸ ವಿಚಾರವನ್ನು ಹುಡುಕುವುದು ನಿಮಗೆ ಪ್ರಿಯವಾದುದಾಗಿದೆ. ನೇರ ಮಾತುಗಳು ನಿಮಗೆ ಸಹಿಸಲು ಅಶಕ್ಯವಾದ ನೋವನ್ನು ಕೊಡಲಿದೆ. ನೀವು ಊಹಿಸದಷ್ಟು ಸಂಗಾತಿಯ ಸ್ವಭಾವವು ಇರುವುದಿಲ್ಲ. ಇದು ನಿಮಗೆ ಅನಂತರ ಬೇಸರವನ್ನು ತರಿಸಬಹುದು. ಏಕಪಕ್ಷೀಯವಾಗಿ ನಿರ್ಧರಿಸದೇ ಎಲ್ಲರ ಅಭಿಪ್ರಾಯವನ್ನು ಪಡೆಯುವಿರಿ. ನಿಮ್ಮ ಕೆಲಸವು ಅನೇಕರಿಗೆ ಉಪಯೋಗವಾಗುವುದು. ನಿಮ್ಮ ಮಾತುಗಳು ಅಸ್ಪಷ್ಟವಾಗಿ ಇರಲಿದೆ. ತಾಳ್ಮೆಯಿಂದ ನೀವು ಜಯಗಳಿಸುವಿರಿ. ಅಧಿಕ ಒತ್ತಡವನ್ನು ಇಂದು ನೀವು ಮಾಡಿಕೊಳ್ಳಲಾರಿರಿ.
ಮಿಥುನ: ನಿಮ್ಮವರ ಪ್ರೀತಿಯಲ್ಲಿ ನೀವು ಮನಸೋಲುವಿರಿ. ನಿಮ್ಮ ಕೆಲಸವು ಶಿಸ್ತಿನದ್ದಾಗಿದ್ದು ಪ್ರಶಂಸೆಯೂ ಸಿಗಲಿದೆ. ನೀವು ಎಲ್ಲರ ನಡುವೆ ಅಂತರವನ್ನು ಕಾಯ್ದುಕೊಂಡು ವ್ಯವಹಾರವನ್ನು ನಡೆಸುವಿರಿ. ಬಂಧುಗಳ ಭೇಟಿಯಾಗಿ ಸಂತೋಷಪಡುವಿರಿ. ಬೆನ್ನು ನೋವಿಗೆ ಸರಿಯಾದ ಚಿಕಿತ್ಸೆಯು ಸಿಗಲಿದೆ. ಇಂದು ಸಂಗಾತಿಯ ಒಲವಿನಿಂದ ವಂಚಿತರಾಗಲಿದ್ದೀರಿ. ಕಷ್ಟವಾದರೂ ಕೆಲಸವನ್ನು ಮಾಡುವ ನಿಮ್ಮ ಒಪ್ಪಂದಕ್ಕೆ ಮೆಚ್ಚಿಗೆ ಸಿಗಲಿದೆ. ಹೂಡಿಕೆಯ ಹಣವನ್ನು ಪಡೆದುಕೊಳ್ಳುವಿರಿ. ನಿಮ್ಮ ಕೆಲಸಕ್ಕೆ ಮತ್ತಾರಿಗೋ ಹೆಸರು ಸಿಗಬಹುದು. ಹಳೆಯ ನೆನಪು ಕಾಡಬಹುದು.
ಕಟಕ: ಮಹಿಳೆಯರು ತಾಯಿಯಿಂದ ಲಾಭವನ್ನು ನಿರೀಕ್ಷಿಸುವರು. ಏನನ್ನಾದರೂ ಮಾಡಬೇಕು ಎಂಬ ನಿಮ್ಮ ಹಂಬಲ ಅತಿಯಾಗಿರುವುದು. ಇನ್ನೊಬ್ಬರ ಜೊತೆ ಸಂಬಂಧವನ್ನು ಬಯಸುವಿರಿ. ವೃತ್ತಿಯನ್ನು ಬಹಳ ಹಗುರಾಗಿ ಭಾವಿಸಿ ಕೆಲಸವನ್ನು ಮಾಡುವಿರಿ. ಸಮಯಕ್ಕೆ ಬೆಲೆ ಕೊಡುವುದು ಬಾರದು. ಕೆಲವನ್ನು ನೀವು ಸರಳೀಕರಿಸಿಕೊಳ್ಳುವುದು ಉತ್ತಮ. ಮಾತನ್ನು ಅಹಂಕಾರದಿಂದ ಮಾತನಾಡಿದಂತೆ ಕೇಳುವುದು. ಸಂಯಮವನ್ನು ಬೆಳೆಸಿಕೊಳ್ಳುವ ಅಗತ್ಯ ಅತಿಯಾಗಿ ಇರಲಿದೆ. ಎಲ್ಲವನ್ನೂ ಅನುಮಾನದ ದೃಷ್ಟಿಯಿಂದ ನೋಡುವುದನ್ನು ಅಭ್ಯಾಸ ಮಾಡಿಕೊಳ್ಳುವುದು ಬೇಡ.
ಸಿಂಹ: ನಿಮ್ಮ ಅಪೇಕ್ಷೆಗಳನ್ನು ನಿಯಂತ್ರಣದಲ್ಲಿ ಇರಿಸಿಕೊಂಡು ಎಂದಿನ ಕೆಲಸದಲ್ಲಿ ಪ್ರವೃತ್ತರಾಗುವಿರಿ. ಆಸ್ತಿಯ ಖರೀದಿಯಲ್ಲಿ ತಂದೆಯ ಕಡೆಯಿಂದ ನಿಮಗೆ ಸಿಂಹಪಾಲು ಸಿಗಲಿದೆ. ಗಂಭೀರವಾದ ಚರ್ಚೆಯಲ್ಲಿ ನಿಮ್ಮ ಹಾಸ್ಯೊದರಜ್ಞೆಯು ಎಲ್ಲರನ್ನು ನಗಿಸುವುದು. ಸಂಕೀರ್ಣವಾದ ಕೆಲಸವನ್ನು ಸರಳ ಮಾಡಿಕೊಳ್ಳುವುದು ನಿಮಗೆ ಕರಗತವಾಗಲಿದೆ. ನಿಮ್ಮ ಸಮಯವು ವ್ಯರ್ಥ ಎಂದನಿಸಬಹುದು. ನಿಮಗೆ ಬರಬೇಕಾದ ಹಣವನ್ನು ಬಲವಂತವಾಗಿ ಪಡೆದುಕೊಳ್ಳುವಿರಿ. ನಿಮಗೆ ಸರಿಯಾದ ನಿರ್ಧಾರಕ್ಕೆ ಬರಲು ಕಷ್ಟವಾದೀತು. ಆಪ್ತರ ಸಲಹೆಯನ್ನು ಪಡೆದುಕೊಳ್ಳಿ.
ಕನ್ಯಾ: ಶತ್ರುಗಳು ನಿಮ್ಮ ಮಿತ್ರರಾಗಲು ಬಯಸಬಹುದು. ನಿಮ್ಮ ಗಮನವು ಅವರ ಮೇಲಿರಲಿ. ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚು ಸಮಯವನ್ನು ಕಳೆಯುವಿರಿ. ವಿದ್ಯಾರ್ಥಿಗಳಿಗೆ ದುಡಿಮೆಯ ಬಗ್ಗೆ ಹೆಚ್ಚು ಆಸಕ್ತಿಯು ಹೆಚ್ಚಾಗಿ ಅಭ್ಯಾಸವನ್ನು ನಿಲ್ಲಿಸುವಿರಿ. ಬಂಧುಗಳ ಮನೆಯ ಸಮಾರಂಭಕ್ಕೆ ಹೋಗಲಿದ್ದೀರಿ. ದಾಂಪತ್ಯದಲ್ಲಿ ಮಾತಿನ ಬಿರುಸು ಅತಿಯಾಗಬಹುದು. ಕಬ್ಬಿಣದ ವ್ಯಾಪಾರವನ್ನು ಮಾಡಲು ಧನಸಹಾಯವು ಸಿಗಬಹುದು. ನಿಷ್ಟುರದ ಮಾತುಗಳನ್ನು ಆಡಿ ಸಂಬಂಧವನ್ನು ಕಳೆದುಕೊಳ್ಳುವಿರಿ. ಅಪಜಯವು ನಿಮಗೆ ಅಪಮಾನದಂತೆ ಆಗುವುದು.
ತುಲಾ: ನೀವು ಅಂದುಕೊಂಡಿದ್ದು ಆಗುತ್ತಿದ್ದರೂ ಮಾನಸಿಕ ಕಿರಿಕಿರಿ ಅಧಿಕವಾಗುವುದು. ಮಕ್ಕಳ ಕಾರಣದಿಂದ ನಿಮಗೆ ಕೆಟ್ಟ ಹೆಸರು ಬರಬಹುದು. ಯಾವ ಕೆಲಸದಲ್ಲಿಯೂ ಸಿಕ್ಕಿಹಾಕಿಕೊಳ್ಳದೇ ಇರುವಿರಿ. ಎಲ್ಲವನ್ನೂ ತಿಳಿದೂ ನೀವು ಸುಮ್ಮನಿರುವುದು ನಿಮಗೆ ಇಷ್ಟವಾಗುವುದು. ಅಧಿಕಾರಿಗಳ ವರ್ಗದಿಂದ ನಿಮಗೆ ಗೌರವ ಸಿಗಲಿದೆ. ನಿಮ್ಮವರಿಗೆ ನಿಮ್ಮ ಸರಿಯಾದ ಪರಿಚಯ ಆಗಿಲ್ಲವೆನಿಸುವುದು. ವ್ಯಾಪರವು ಒಂದೇ ಹದದಲ್ಲಿ ಹೋಗುವುದು. ಪತ್ನಿಯ ಆರೋಗ್ಯವು ಕೆಡುವ ಸಾಧ್ಯತೆ ಇದೆ. ಆಹಾರ ಸೇವೆಯನ್ನು ಮಿತವಾಗಿ ಮಾಡಿ. ದುರ್ಗಾಮಾತೆಯನ್ನು ವಿಧವಾಗಿ ಅರ್ಚಿಸಿ.
ವೃಶ್ಚಿಕ: ಮಕ್ಕಳಿಂದ ಆಸ್ತಿಗೆ ಸಂಬಂಧಿಸಿದ ವಿಚಾರವನ್ನು ಪ್ರಸ್ತಾಪಿಸಿ ಒಪ್ಪಿಗೆಯನ್ನು ಪಡೆಯುವಿರಿ. ಸುಧಾರಿಸಿದ ಆರೋಗ್ಯವು ನಿಮಗೆ ಉತ್ಸಾಹವನ್ನು ಕೊಡಲಿದೆ. ಜೀವನದ ಆಕಸ್ಮಿಕ ತಿರುವುಗಳಿಗೆ ನೀವು ಚಿಂತೆಗೆ ಒಳಗಾಗುವುದಿಲ್ಲ. ಹಣದ ಉಳಿತಾಯಕ್ಕೆ ಮಾರ್ಗವನ್ನು ಹುಡುಕುವಿರಿ. ಉದ್ಯೋಗದ ಕೆಲವು ಗೌಪ್ಯ ವಿಚಾರಗಳು ನಿಮಗೆ ಗೊತ್ತಾಗಬಹುದು. ವಿಷಯಾಸಕ್ತಿಯು ಇಂದು ಅಧಿಕವಾಗಿ ಇರಲಿದೆ. ಸರ್ಕಾರದ ಕೆಲಸದಲ್ಲಿ ಹಿನ್ನಡೆಯಾಗಲಿದ್ದು ಬೇರೆಯವರ ಮೂಲಕ ಒತ್ತಡ ಹೇರಿ ಕೆಲಸವನ್ನು ಮಾಡಿಸಿಕೊಳ್ಳುವಿರಿ. ನ್ಯಾಯವಲ್ಲದ ಮಾರ್ಗದಲ್ಲಿ ನಿಮ್ಮ ಯೋಚನೆಯು ಸಾಗಬಹುದು.
ಧನುಸ್ಸು: ನಿಮ್ಮ ಮನೆಯ ಕೆಲಸವು ಹಲವು ದಿನಗಳಿಂದ ನಿಂತಿದ್ದು ಮತ್ತೆ ಆರಂಭವಾಗಲಿದೆ. ಇದು ನಿಮಗೆ ಅನಿರೀಕ್ಷಿತ ಆನಂದವನ್ನು ತರಬಹುದು. ಬಹಳ ದಿನಗಳ ಅನಂತರ ತಂದೆಯ ಜೊತೆ ಮಾತನಾಡಿ ಅವರ್ಣನೀಯ ನೆಮ್ಮದಿಯು ಪಡೆಯುವಿರಿ. ನಿಮ್ಮ ದೂರ ಪ್ರಯಾಣಕ್ಕೆ ಕುಟುಂಬದಿಂದ ಒಪ್ಪಿಗೆ ಸಿಗದೇಹೋದೀತು. ಇನ್ನೊಬ್ಬರ ನೋವಿಗೆ ಸ್ಪಂದಿಸುವ ನಿಮ್ಮ ಗುಣವು ಹಲವವರಿಗೆ ಮೆಚ್ಚುಗೆಯಾಗಬಹುದು. ನಿಮಗೆ ಸಿಕ್ಕ ವ್ಯಕ್ತಿಗಳನ್ನು ಉಳಿಸಿಕೊಳ್ಳಲು ಪ್ರಯತ್ನಿಸುವಿರಿ. ನಿಮ್ಮ ಅಭಿಪ್ರಾಯವನ್ನು ಹೇಳುವಿರಿ. ಸಾಹಸದ ಪ್ರವೃತ್ತಿಯು ಸದ್ಯಕ್ಕೆ ಬೇಡ. ನಿಮಗೆ ತಾಳ್ಮೆಯು ಕಡಿಮೆ ಇರುವುದು ಗೊತ್ತಾಗುವುದು.
ಮಕರ: ಸಹೋದರನ ಸಹಾಕಾರವು ಸ್ವಲ್ಪಮಟ್ಟಿಗೆ ಅನುಕೂಲವಾಗುವುದು. ನೂತನ ವಾಹನದ ಖರೀದಿಯನ್ನು ಮಾಡುವ ಬಯಕೆಯು ಇಂದು ಪೂರ್ಣಗೊಳ್ಳಬಹುದು. ಹಿತಶತ್ರು ನಿಮ್ಮ ಪತನವನ್ನೇ ನಿರೀಕ್ಷಿಸುತ್ತ ಅದಕ್ಕೆ ಬೇಕಾದುದನ್ನು ಮಾಡುವರು.ಮಕ್ಕಳಿಗಾಗಿ ನೀವು ಹಣವನ್ನು ಖರ್ಚು ಮಾಡುವಿರಿ. ವೈವಾಹಿಕ ಜೀವನ ಆನಂದದಿಂದ ಇರಲಿದೆ. ಪರಸ್ಪರ ದುಃಖವನ್ನು ಹಂಚಿಕೊಂಡು ದಂಪತಿಗಳ ಮನಸ್ಸು ಹಗುರಾಗುವುದು. ಇಂದಿನ ಕಾರ್ಯದ ಯಾದಿ ಮಾಡಿಕೊಂಡು ಕಾರ್ಯದಲ್ಲಿ ಮಗ್ನರಾಗಿ. ನಿಮ್ಮ ಸಂಪೂರ್ಣ ತಲ್ಲೀನತೆಯು ಕಾರ್ಯವನ್ನು ಮುಗಿಸಲು ಸಹಾಯಕವಾಗಲಿದೆ.
ಕುಂಭ: ನಿಮ್ಮ ಇಂದಿನ ಸುತ್ತಾಟ ವ್ಯರ್ಥವಾಗುವುದು. ಅಶುಭ ಸೂಚನೆಗಳನ್ನು ಗಮನಿಸಿಯೂ ಉದ್ಧಟತನದಿಂದ ಮುನ್ನುಗ್ಗುವಿರಿ. ಆಪ್ತಬಂಧುವನ್ನೊಬ್ಬರನ್ನು ಕಳೆದುಕೊಳ್ಳಲೂಬಹುದು. ಎಲ್ಲರೆದುರು ಮುಖಭಂಗವಾಗಬಹುದು. ವೈವಾಹಿಕ ಜೀವನದ ಕನಸನ್ನು ನೀವು ಕಾಣುವಿರಿ. ನಿಮ್ಮ ದೂರಾಲೋಚನೆಯು ವಾಸ್ತವಕ್ಕಿಂತ ದೂರವಿರುವುದು. ಏನನ್ನಾದರೂ ಸಾಧಿಸಬೇಕು ಎನ್ನುವ ಛಲವಿದ್ದರೂ ಅದು ಕೆಲ ಕಾಲವಷ್ಟೇ ಇದ್ದು ಮರೆಯಾಗಬಹುದು. ಸದಭಿರುಚಿಯು ನಿಮಗೆ ವರವಾಗಬಹುದು. ನಿಮ್ಮ ಭಾವವನ್ನು ಪ್ರಕಟಗೊಳಿಸಿ.
ಮೀನ: ಕುಟುಂಬವು ನಿಮ್ಮ ಶ್ರೇಯಸ್ಸನ್ನು ಹಾರೈಸಲಿದೆ. ಪಾಲುದಾರಿಕೆಯಲ್ಲಿ ಹಣಕಾಸಿನ ವಿಚಾರವು ವಿವಾದಕ್ಕೆ ಕಾರಣವಾಗಲಿದೆ. ಕಾರ್ಯಗಳಲ್ಲಿ ಉಂಟಾದ ವಿಘ್ನವನ್ನು ಪುರುಷಪ್ರಯತ್ನದಿಂದ ಸಾಧಿಸುವಿರಿ. ಸಂಗಾತಿಯನ್ನು ಬೇಸರದಲ್ಲಿದ್ದು ನೀವು ಸಮಾಧಾನ ಮಾಡುವಿರಿ. ನಿಮಗೆ ಸಾಕಷ್ಟು ಸಮಯವುವ ಇಂದು ಇರಲಿದ್ದು ಏನನ್ನೂ ಮಾಡದೇ ಕಾಲವನ್ನು ಕಳೆಯುವಿರಿ. ಉತ್ತಮ ಹವ್ಯಾಸವನ್ನು ಬೆಳೆಸಿಕೊಳ್ಳುವ ಹಂಬಲವಿರುವುದು. ನೀವು ಸಿದ್ಧತಗೆ ಹೆಚ್ಚು ಸಮಯವನ್ನು ತೆಗೆದುಕೊಳ್ಳುವಿರಿ. ನಿಮ್ಮ ಮೇಲೆ ಕೆಟ್ಟ ಕಣ್ಣುಗಳು ಬೀಳಬಹುದು. ಹನುಮಾನ್ ಚಾಲೀಸ್ ಪಠಿಸಿ.