Nithya Bhavishya: ಈ ರಾಶಿಯವರು ದುಶ್ಚಟಕ್ಕೆ ದಾಸರಾಗುವ ಸಾಧ್ಯತೆ ಇದೆ, ಶಿವಕವಚ ಓದಿ

ಇಂದಿನ (2023 ಮಾರ್ಚ್ 25) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

Nithya Bhavishya: ಈ ರಾಶಿಯವರು ದುಶ್ಚಟಕ್ಕೆ ದಾಸರಾಗುವ ಸಾಧ್ಯತೆ ಇದೆ, ಶಿವಕವಚ ಓದಿ
ಪ್ರಾತಿನಿಧಿಕ ಚಿತ್ರImage Credit source: .indianastrologysoftware.com
Follow us
ಗಂಗಾಧರ​ ಬ. ಸಾಬೋಜಿ
|

Updated on: Mar 25, 2023 | 5:00 AM

ಶುಭೋದಯ ಓದುಗರೇ. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದ್ರೆ ಇಂದಿನ (2023 ಮಾರ್ಚ್ 25) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೀನ ಮಾಸ, ಮಹಾನಕ್ಷತ್ರ : ಉತ್ತರಾಭಾದ್ರ, ಮಾಸ : ಚೈತ್ರ, ಪಕ್ಷ : ಶುಕ್ಲ, ವಾರ : ಶನಿ, ತಿಥಿ : ಚತುರ್ಥೀ, ನಿತ್ಯನಕ್ಷತ್ರ : ಭರಣೀ, ಯೋಗ : ವಿಷ್ಕಂಭ, ಕರಣ : ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 34 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 42 ನಿಮಿಷಕ್ಕೆ, ರಾಹು ಕಾಲ 09 :36 ರಿಂದ 11:07ರವರೆಗೆ, ಯಮಘಂಡ ಕಾಲ 02:09 ರಿಂದ 03:40ರ ವರೆಗೆ, ಗುಳಿಕ ಕಾಲ 06:34 ರಿಂದ 08: 05ರ ವರೆಗೆ.

ಮೇಷ: ನಿಮ್ಮನ್ನು ಭೇಟಿಯಾಗಲು ಬಂದವರನ್ನು ಅಗೌರವದಿಂದ ಕಾಣಲಿದ್ದೀರಿ. ನಿಮ್ಮ ಹತ್ತಾರು ಕನಸುಗಳಲ್ಲಿ ಒಂದು ಸಾಕಾರಗೊಳ್ಳುವುದು. ಬಂಧುಗಳ ವಿಯೋಗವಾರ್ತೆಯು ಬರಬಹುದು. ನೀವಂದು ಅಶಕ್ತರಿಗೆ ಸಹಾಯ ಮಾಡುವಿರಿ. ಅವರ ದೃಷ್ಟಿಯಲ್ಲಿ ನೀವೇ ದೇವರಾಗುವಿರಿ.ಆಲಸ್ಯದಿಂದ ಬಂದಿರುವ ಅವಕಾಶವನ್ನು ಕೈಚೆಲ್ಲಿ ಕುಳಿತುಕೊಳ್ಳಬೇಡಿ. ನಿಮ್ಮ ನಿರ್ಧಾರಕ್ಕೆ ಹಿಂದಿನ ಅನುಭವಗಳೇ ನಿಮಗೆ ಸಹಾಯವಾಗಲಿವೆ. ಇರುವವರನ್ನು ಬಿಟ್ಟು ಇನ್ನೊಬ್ಬರ ನಂಬಿ ಮೋಸಹೋಗಬೇಡಿ. ಪೂಜ್ಯರ ಭೇಟಿಯಾಗಲಿದೆ.

ವೃಷಭ: ನಿಮ್ಮ ಏಳ್ಗೆಯನ್ನು ಕಂಡು ಸಂಕಟಪಡುವವರಿರುತ್ತಾರೆ. ಅವರನ್ನು ದೂರವಿಟ್ಟು ನಿಮ್ಮ ಕೆಲಸವನ್ನು ಮಾಡಿಕೊಳ್ಳಿ. ಹತ್ತಿರದೂರಿಗೆ ಪ್ರಯಾಣವನ್ನು ಮಾಡಲಿದ್ದೀರಿ. ರಾಜಕೀಯ ನಾಯಕರ ಭೇಟಿಯಾಗಿ, ನಿಮಗೊಂದು ಮಾರ್ಗವು ಸಿಗಲಿದೆ. ಅಚ್ಚರಿಯ ಕೆಲವು ಸಂಗತಿಗಳು ನಿಮಗೆ ಕಾದಿರಬಹುದು. ಅಪರಿಚಿತರ ಭೇಟಿಯಿಂದ ಸ್ವಲ್ಪ ಹಿಂದುಳಿಯಿರಿ. ನಿಮ್ಮ ಕೆಲಸಗಳು ಅಚ್ಚುಕಟ್ಟಾಗಿ ಇದ್ದು ಪ್ರಂಶಸೆಯೂ ಸಿಗಬಹುದು. ನಿಯಮಗಳನ್ನು ಮುರಿಯಬೇಕು ಎನ್ನುವ ಮನಃಸ್ಥಿತಿಯು ಇರಲಿದೆ. ದಾಂಪತ್ಯದಲ್ಲಿ ಸಣ್ಣ ಕಿರಿಯಾಗಬಹುದು. ಆರೋಗ್ಯದ ಬಗ್ಗೆ ಗಮನವಿರಲಿ.

ಮಿಥುನ: ಇಂದು ಹಿಂದೆ ಆಗಿಹೋದ ಘಟನೆಗಳನ್ನು ನೆನೆಸಿಕೊಂಡು ವ್ಯಥೆಪಡುವಿದರಲ್ಲಿ ಅರ್ಥವಿಲ್ಲ. ಸಹೋದರರ ಜೊತೆ ಪ್ರೀತಿಯಿಂದ ಇರುವಿರಿ. ಬದಲಾಗಬೇಕು ಎನ್ನುವ ಹಂಬಲವು ನಿಮ್ಮಲ್ಲಿ ಅತಿಯಾಗಿರಬಹುದು. ಸರಿಯಾದ ಬದಲಾವಣೆಯನ್ನು ಹೊಂದಿರಿ. ಉದ್ಯೋಗದಲ್ಲಿ ನಷ್ಟವಾಗಬಹುದು ಅಥವಾ ಉದ್ಯೋಗವು ನಷ್ಟವಾಗುವ ಭೀತಿಯೂ ಇರಲಿದೆ. ಮನಸ್ಸನ್ನು ಏಕಾಗ್ರಗೊಳಿಸಲು ಬೇಕಾದ ಧ್ಯಾನ, ಯೋಗವನ್ನು ಮಾಡಿ. ವಿದ್ಯಾಭ್ಯಾಸದ ಕುರಿತು ಮಕ್ಕಳಿಗೆ ಪಾಠವನ್ನು ಮನೆಯಲ್ಲಿ ಮಾಡುವರು. ನಿಮಗದು ಅಸಹ್ಯ ವಿಷಯವಾಗುವುದು. ನಿಮ್ಮ ಬೆಳವಣಿಗೆಗೆ ಸಹಕರಿಸಿದವರ ನೆನಪನ್ನು ಮಾಡಿಕೊಳ್ಳವಿರಿ. ಗಣಪತಿಗೆ ಪ್ರಿಯವಾದ ತಿಂಡಿಯನ್ನು ನೈವೇದ್ಯ ಮಾಡಿ.

ಕಟಕ: ಸರ್ಕಾರದ ಕಡೆಯಿಂದ ಆಗಬೇಕಾದ ಕೆಲಸಕ್ಕೆ ಹಣವನ್ನು ಕೊಡಬೇಕಾಗಿ ಬರಬಹುದು. ಉದ್ಯೋಗದ ಸ್ಥಳದಲ್ಲಿ ಕೆಲಸವು ವೇಗವಾಗಿ ನಡೆಯಲಿದೆ. ನೂತನ ಗೃಹನಿರ್ಮಾಣದ ಕನಸು ಕಾಣುವಿರಿ.‌ಒಳ್ಳೆಯ ಕೆಲಸವನ್ನು ಮಾಡುವ ಚಿಂತನೆಯನ್ನು ಮಾಡುವಿರಿ. ಎಲ್ಲವೂ ಕ್ಷಣದಲ್ಲಿ ಆಗಬೇಕು ಎನ್ನುವ ಉದ್ವೇಗವವನ್ನು ಬಿಟ್ಟು ಬಿಡಿ. ಭವಿಷ್ಯಕ್ಕೋಸ್ಕರ ಹಣವನ್ನು ಕೂಡಿಡುವ ಯೋಚನೆಯನ್ನು ಮಾಡುವಿರಿ. ಸಮಾಜದಲ್ಲಿ ನಿಮ್ಮ ಹೆಸರು ಕೇಳಿಬರಲಿದೆ. ಅನಾರೋಗ್ಯದಿಂದ ಕಂಗೆಡಬಹುದು. ತೈಲವ್ಯಾಪಾರಿಗಳು ಹೆಚ್ಚು ಲಾಭವನ್ನು ಪಡೆವರು. ರಾಮನಿಗೆ ಪರಮಾನ್ನ ನೈವೇದ್ಯವನ್ನು ಮಾಡಿ.

ಸಿಂಹ: ನಿಮ್ಮ ಬಳಿ ಸಂಪತ್ತಿರುವುದು ತಿಳಿದು ಇಂದು ಅದನ್ನು ಪಡೆಯಲು ನಿಮ್ಮವರು ಪ್ರಯತ್ನಿಸಬಹುದು. ಸದವಕಾಶಗಳು ಸಿಗಲಿವೆ ಇಂದು ನಿಮಗೆ. ಬಹಳ ದಿನದ ಕಾರ್ಯಗಳನ್ನು ಬೇಗನೆ ಮುಗಿಸಲಿದ್ದೀರಿ. ಮಕ್ಕಳು ನಿಮಗೆ ಅಪಮಾನ ಮಾಡುವ ಸಾಧ್ಯತೆ ಇದೆ. ನಿಮ್ಮ ನಾಯಕತ್ವವು ಎಲ್ಲರಿಗೂ ತಿಳಿಯುವುದು. ಅಧಿಕಾರಿಗಳಿಂದ ಮೆಚ್ಚುಗೆಯು ಸಿಗಲಿದೆ. ನೂತನ ಕೆಲಸಗಳು ನಿಮ್ಮನ್ನು ಹುಡುಕಿಕೊಂಡು ಬರಲಿದೆ. ಮುಂದಿನ ದಿನಕ್ಕೆ ಲಾಭವೂ ಆಗಲಿದೆ. ಕುಟುಂಬದ ಕೀರ್ತಿಯನ್ನು ಬೆಳೆಸುವವರಿದ್ದೀರಿ. ರಕ್ಷಣೆಯ ವ್ಯವಸ್ಥೆಯಲ್ಲಿ ಇರುವವರಿಗೆ ಶುಭಸುದ್ದಿ ಇರಲಿದೆ. ಶಿವಕವಚ ಓದಿ.

ಕನ್ಯಾ: ಇಂದು ಚಂಚಲವಾದ ಮನಸ್ಸನ್ನು ಏಕಾಗ್ರಗೊಳಿಸಲು‌ ಮನೆಯಿಂದ ದೂರ ಹೋಗಬೇಕಾದೀತು. ನೀವೇ ಆಯ್ದುಕೊಂಡ ಕ್ಷೇತ್ರವು ನಿಮಗೆ ಯಶಸ್ಸನ್ನು ಕೊಡಲಿದೆ. ಶ್ರಮದ ಅವಶ್ಯಕತೆ ಬಹಳ ಇರಲಿದೆ. ಸ್ನೇಹವು ಬಲಗೊಳ್ಳಬಹುದು. ಪ್ರಸಿದ್ಧ ತೀರ್ಥಕ್ಷೇತ್ರಕ್ಕೆ ಹೋಗುವ ನಿಮ್ಮ ಕನಸು ನನಸಾಗಲಿದೆ. ಕುಟುಂಬದಲ್ಲಿ ವಿವಾಹವಾರ್ತೆ ಕೇಳಿಬರಲಿದೆ. ವ್ಯಾಪಾರವು ನಿಮಗೆ ಲಾಭವನ್ನು ತರಿಸುವುದು. ಆಪ್ತರ ಭೇಟಿಯಿಂದ ಸಂತಸವಾಗಲಿದೆ. ಪ್ರಯಾಣವು ಮಾಡಿ ಆಯಾಸ ಪಡುವಿರಿ. ತಂದೆಗೆ ನೀವು ಕೊಡುವ ಉಡುಗೊರೆಯಿಂದ ಸಂತೋಷವಾಗಲಿದೆ. ಓಡಾಟವೂ ವ್ಯರ್ಥವಾದೀತು. ಧಾರ್ಮಿಕ ಕೆಲಸಗಳು ನಿಮಗೆ ಶ್ರೇಯಸ್ಸನ್ನು ತರುವುದು. ಮನೆಯಿಂದ ಹೊರಡುವಾಗ ಗೋಗ್ರಾಸವನ್ನು ಕೊಡಿ.

ತುಲಾ: ಇಂದು ನಿಮ್ಮ ವೇಗಕ್ಕೆ ಕೆಲಸಗಳು ಆಗುತ್ತಿಲ್ಲ ಎಂಬ ತುಡಿತ ಇರಲಿದೆ. ಆರೋಗ್ಯಕ್ಕೆ ಸಂಬಂಧಿಸಿದಂತೆ ಇಂದು ನೀವು ನಿಶ್ಚಿಂತರು. ಅಲಂಕಾರದ ವಸ್ತುಗಳನ್ನು ಇಷ್ಟಪಟ್ಟು ಖರೀದಿಸುವಿರಿ. ಏಕಾಗ್ರತೆಗಾಗಿ ಮಾಡಿದ ಪ್ರಯತ್ನಗಳು ಇಂದು ನಿಮಗೆ ಫಲವನ್ನು ಕೊಡುವುದು. ಉದ್ಯೋಗವನ್ನು ಬದಲಿಸುವ ಆಲೋಚನೆಗಳನ್ನು ಮಾಡುವಿರಿ. ಸಂಗಾತಿಯಿಂದ ಹಣದ ಸಹಾಯವು ದೊರೆಯಬಹುದು. ನಿಮಗೆ ಕುಟುಂಬವು ಬೆಂಬಲವನ್ನು ನೀಡುತ್ತದೆ. ನಿಮ್ಮ ವೃತ್ತಿಯಲ್ಲಿ ಪ್ರಸಿದ್ಧರಾಗುತ್ತೀರಿ. ದುಬಾರಿ ವಸ್ತುವನ್ನು ಖರೀದಿಸಲಿದ್ದೀರಿ. ಇನ್ನೊಬ್ಬರ ವಸ್ತುಗಳ ಮೇಲೆ ಬಯಕೆ ಆಗಬಹುದು. ಆಸೆಗಳನ್ನು ಹಿಡಿತದಲ್ಲಿ ಇಡಿ.

ವೃಶ್ಚಿಕ: ಸಾಮಾಜಿಕವಾದ ಕೆಲಸ ಮಾಡುತ್ತಿದ್ದರೆ ನಿಮಗೆ ಟೀಕೆಗಳು ಬರಲಿದೆ. ಕಟ್ಟಡವನ್ನು ನಿರ್ಮಿಸುವ ಕಾರ್ಯದಲ್ಲಿ ನೀವು ಯಶಸ್ವಿಯಾಗುವಿರಿ. ಸ್ಥಿರಾಸ್ತಿಯ ಖರೀದಿಯನ್ನು ಮಾಡುವಿರಿ. ಸಮಾಜಸೇವೆಯಿಂದ ನಿಮಗೆ ಕೀರ್ತಿಯು ಲಭಿಸುವುದು. ಇಷ್ಟು ದಿನ ಕಷ್ಟಪಟ್ಟು ಕಟ್ಟುತ್ತಿದ್ದ ಸಾಲವು ಇಂದಿಗೆ ಮುಕ್ತಾಯವಾಗಿ ನೆಮ್ಮದಿಯನ್ನು ಕಾಣುವಿರಿ. ಬಟ್ಟೆ ಉದ್ಯಮಕ್ಷೇತ್ರವು ನಿಮ್ಮ ಕೆಲಸವನ್ನು ನೋಡಿ ನಿಮ್ಮನ್ನು ಕೈಬೀಸಿ ಕರೆಯುವುದು. ಆರ್ಥಿಕವಾಗಿ ಇಂದು ಸಬಲರಾಗುವಿರಿ. ವಾತಾವರಣದ ಕಾರಣದಿಂದ ಅನಾರೋಗ್ಯವು ಉಂಟಾಗಬಹುದು. ಅತಿಯಾದ ಮಧುರ ಪದಾರ್ಥವನ್ನು ಸೇವಿಸಬೇಡಿ.

ಧನು: ಇಂದು ದುಶ್ಚಟಕ್ಕೆ ದಾಸರಾಗುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಭಡ್ತಿಯು ಸಿಗಲಿದೆ. ಮಕ್ಕಳಿಂದ ಸಂತೋಷವಾರ್ತೆಯು ಇರುತ್ತದೆ. ಅಪರಿಚಿತ ವ್ಯಕ್ತಿಗಳ ಸಹವಾಸದಿಂದ ನಿಮಗೆ ವಂಚನೆಯಾಗಬಹುದು. ಕೃಷಿಯಲ್ಲಿ ನೀವು ಮಾಡಿದ ಕೆಲಸವು ಪ್ರಶಂಸೆಗೆ ಒಳಗಾಗುವುದು. ಉತ್ತಮ ಇಳುವರಿಯನ್ನು ಪಡೆಯುವಿರಿ. ವಾಹನದಲ್ಲಿ ಸಂಚಾರ ಮಾಡಿ ಖುಷಿ ಪಡುವಿರಿ. ಆಕಸ್ಮಿಕವಾದ ಆರ್ಥಿಕವಾದ ಸವಾಲು ಬಂದು, ಮಿತ್ರರ ಸಹಾಯವನ್ನು ಪಡೆಯುವಿರಿ. ಬಂಧುಗಳ ಮನೆಯಲ್ಲಿ ಇಂದು ನಿಮ್ಮ ವಾಸವಿರಲಿದೆ. ಮಕ್ಕಳು ಕಲಿಕೆಯಲ್ಲಿ ಆಸಕ್ತಿಯನ್ನು ತೋರಿಸದೇ ಇರುವುದರಿಂದ ಬೈಯ್ಯುವಿರಿ. ಆಲಸ್ಯದಿಂದ ಹೊರಬರಬೇಕಾದ ಸ್ಥಿತಿಯು ಇದೆ. ಹೊಸ ಆಲೋಚನೆಗೆ ನೀವು ತೆರೆದುಕೊಳ್ಳುವಿರಿ.

ಮಕರ: ಇಂದು ಅನಗತ್ಯವಾಗಿ ಸುತ್ತಾಟವಾಗುವುದೇ ವಿನಃ ಪ್ರಯೋಜನವಾಗದು. ಇದರಿಂದ ಸಿಟ್ಟೂ ಹತಾಶೆಯೂ ಇರಲಿದೆ. ನಿಧಾನವಾಗಿ ಸಾಗುವ ಸಾಗುತ್ತಿರುವ ಕೆಲಸದಿಂದ ಬೇಸರವಾಗಲಿದೆ. ತಂದೆಯೊಂದಿಗೆ ಕಲಹವಾಗಬಹುದು. ಮನಸ್ಸು ಉದ್ವೇಗಕ್ಕೆ ಒಳಗಾಗದಂತೆ ನೋಡಿಕೊಳ್ಳಿ. ದೈವದ ಸಹಾಯವನ್ನು ನೀವು ಪಡೆಯಬೇಕಾಗಿರುವುದು ಅನಿವಾರ್ಯ. ಆಪ್ತರ ಸಲಹೆಗಳು ನಿಮಗೆ ಅನುಕೂಲಕರವಾಗಿರಲಿವೆ. ಪುಣ್ಯಕ್ಷೇತ್ರಗಳ ಭೇಟಿಯಿಂದ ನಿಮಗೆ ಸಂತಸ ಸಿಗಲಿದೆ‌. ಶಿಕ್ಷಕವೃತ್ತಿಯವರಿಗೆ ಮಕ್ಕಳಿಂದ ಗೌರವಾದರಗಳು ಸಿಗಲಿವೆ. ನಿಮ್ಮನ್ನು ಪ್ರೀತಿಮಾಡಿಕೊಳ್ಳಲಿದ್ದಾರೆ. ನಿಮ್ಮವರಿಂದಲೇ ವಂಚಿತರಾಗುವಿರಿ. ವಿಶ್ವಾಸವು ಇಲ್ಲದೇ ಹೋಗಿ ಸಂಬಂಧವೂ ಒಡೆದುಹೋಗಲಿದೆ. ರಾಮ ಸೀತೆಯರನ್ನು ಒಂದು ಮಾಡಿದ ಸುಂದರಕಾಂಡದ ಹನುಮನನ್ನು ಪೂಜಿಸಿ. ಮಾನಸಿಕ ಒಡಕುಗಳು ದೂರವಾಗಲಿದೆ.

ಕುಂಭ: ಸ್ತ್ರೀಯರು ಇಂದು ಅನೇಕ ಲಾಭವನ್ನು ಪಡೆದುಕೊಳ್ಳುವ ಸಾಧ್ಯತೆ ಇದೆ. ನಿಮ್ಮ ಶ್ರಮಕ್ಕೆ ದೈವವು ಅನುಕೂಲವನ್ನು ಮಾಡಲಿದೆ‌. ಮಾತಿನಲ್ಲಿ ಮೆಚ್ಚುಗೆಯು ನಿಮಗೆ ಸಿಗಲಿದೆ. ನಿಮಗೆ ಕೆಲವು ಜವಾಬ್ದಾರಿಗಳು ಬರಬಹುದು. ಧನಾಗಮನವನ್ನು ನೀವು ನಿರೀಕ್ಷಿಸಬಹುದು. ಸಣ್ಣ ಉಧಯಮವನ್ನು ಮಾಡುವವರಗೆ ಸ್ವಲ್ಪ ಹೆಚ್ಚು ಆದಾಯವು ದೊರೆಯಲಿದೆ. ಅಂತರ್ಜಾಲದ ಜಾಹಿರಾತುಗಳನ್ನು ನೋಡಿ ಮನಸೋತು ಏನನ್ನೂ ಮಾಡಬೇಡಿ. ಅಪರಿಚಿತ ದೂರವಾಣಿಯು ನಿಮ್ಮನ್ನು ದಿಗಿಲುಗೊಳಿಸಬಹುದು. ಸುಳ್ಳಾಡಿ ನಿಮ್ಮ ಕೆಲಸವನ್ನು ಮಾಡಿಕೊಳ್ಳುವಿರಿ. ಅನಾರೋಗ್ಯದಿಂದ ಕಿರಿಕಿರಿ ಅನುಭವಿಸಿದರೆ ಇಂದು ಸ್ವಲ್ಪ ಕಿಡಮೆ ಆಗಲಿದೆ. ಶನೈಶ್ಚರನು ನಿಮ್ಮ ಮಾನಸಿಕ ಸಂಕಷ್ಟವನ್ನು ಪರಿಹರಿಸುವನು.

ಮೀನ: ಮನಸ್ಸಿನ ಗೊಂದಲವು ಇಂದು ಪರಿಹಾರವಾಗಲಿದೆ. ವೈವಾಹಿಕ ಜೀವನವು ಸುಖಮಯವಾಗಿ ಸಾಗಲಿದೆ. ದುಡುಕಿನ ನಿರ್ಧಾರಗಳನ್ನು ತಗೆದುಕೊಂಡು ಸಂಕಟಪಡಬೇಕಾದೀತು. ನಿಮ್ಮವರೆದು ಕಠೋರ ಮಾತುಗಳನ್ನು ಆಡುವರಿ. ಸುತ್ತಾಡುವ ಮನಸ್ಸಿರಲಿದೆ. ಗಂಡನಿಗೆ ವಿರುದ್ಧವಾದ ಕೆಲಸವನ್ನು ಮಾಡಿ ಮಾತಿಗೆ ಗುರಿಯಾಗುವಿರಿ. ನಿಮ್ಮನ್ನು ನಿಂದಿಸಲು ಕೆಲವು ಹೊಂಚು ಹಾಕಿದ್ದು ತಿಳಿದು ಅದನ್ನು ಸರಿ ಮಾಡಿಕೊಳ್ಳುವಿರಿ. ಬಂಧುಗಳು ನಿಮಗೊದಗಿದ ಸಂಕಟಕ್ಕೆ ಜೊತೆಯಾಗುವರು. ರಾಜಕೀಯಕ್ಷೇತ್ರವು ನಿಮಗೆ ಕೈಹಿಡಿಯಬಹುದು. ಆದಷ್ಟು ಆಲೋಚಿಸಿ ಮುಂದಡಿ ಇಡಿ. ತಾಳ್ಮೆ ಇರಲಿ. ಗುರುವಿನ ದರ್ಶನದಿಂದ ಕೆಲವು ಸಮಸ್ಯೆಗಳು ಪರಿಹಾರವಾದೀತು.

ಲೋಹಿತಶರ್ಮಾ ಇಡುವಾಣಿ