ರಾಶಿ ಭವಿಷ್ಯ ಪ್ರತಿಯೊಬ್ಬರ ಜೀವನದಲ್ಲಿ ವಿಭಿನ್ನವಾಗಿರುತ್ತದೆ. ಪ್ರತಿನಿತ್ಯ ಬೆಳಗ್ಗೆ ಎದ್ದ ಕೂಡಲೇ ತಮ್ಮ ರಾಶಿ ಭವಿಷ್ಯ (Daily horoscope) ನೋಡುವುದು ಕೆಲವರಿಗೆ ಅಭ್ಯಾಸ. ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಜೊತೆಗೆ ಪಂಚಾಂಗವನ್ನು ಸಹ ಓದುತ್ತಾರೆ. ಹಾಗಾದರೆ ಇಂದಿನ (2023 ಆಗಸ್ಟ್ 26) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಮಘಾ, ಮಾಸ: ನಿಜ ಶ್ರಾವಣ, ಪಕ್ಷ: ಶುಕ್ಲ, ವಾರ: ಶನಿ, ತಿಥಿ: ದಶಮೀ, ನಿತ್ಯನಕ್ಷತ್ರ: ಮೂಲಾ, ಯೋಗ: ವಿಷ್ಕಂಭ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 20 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 47 ನಿಮಿಷಕ್ಕೆ, ರಾಹುಕಾಲ ಬೆಳಿಗ್ಗೆ 09:08 ರಿಂದ 11:01ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 02:07 ರಿಂದ 03:41ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 06:21 ರಿಂದ 07:54ರ ವರೆಗೆ.
ಮೇಷ ರಾಶಿ: ನಿಮ್ಮ ಅಭಿಮಾನಕ್ಕೆ ಘಾಸಿಯಾಗುವ ಮಾತುಗಳನ್ನು ಕೇಳಬೇಕಾಗಬಹುದು. ಎಲ್ಲ ಮಾತುಗಳೂ ಇಂದು ನಿಮಗೆ ನಕಾರಾತ್ಮಕವಾಗಿಯೇ ಕೇಳಿಸುವುದು. ಅತಿಥಿ ಸತ್ಕಾರಕ್ಕೆ ಹೆಚ್ಚಿನ ಮಹತ್ತ್ವವನ್ನು ಕೊಡುವಿರಿ. ವಿದ್ಯಾರ್ಥಿಗಳಿಗೆ ಪರೀಕ್ಷೆಯ ಭಯವು ಇರಲಿದೆ. ಸಂಗಾತಿಯ ಪ್ರೀತಿಯು ಇಂದು ಲಭಿಸುವುದು. ಕಳೆದ ದುಃಖದ ಸಮಯವನ್ನು ನೆನಪಿಸಿಕೊಳ್ಳುವಿರಿ. ಅರ್ಥಿಕ ವಿಚಾರದಲ್ಲಿ ಸಹೋದರರ ನಡುವೆ ಕಲಹವಾಗಬಹುದು. ವಂಚನೆಯಿಂದ ನೀವು ತಪ್ಪಿಸಿಕೊಳ್ಳುವಿರಿ. ನೆಮ್ಮದಿಗೆ ಅವಕಾಶಗಳನ್ನು ಹುಡುಕುವಿರಿ.
ವೃಷಭ ರಾಶಿ: ಸಂಕೀರ್ಣವಾದ ಕೆಲಸವನ್ನು ಸುಲಭ ಮಾಡಿಕೊಳ್ಳುವ ಕಲೆಯಿಂದ ಪ್ರಶಂಸೆಯು ಸಿಗಲಿದೆ. ಹಿರಿಯರ ಜೊತೆ ಮಾತಿನ ಚಕಮಕಿ ಆಗಬಹುದು. ಸರಿಯಾದ ಆಹಾರವನ್ನು ಸಕಾಲದಲ್ಲಿ ಸೇವಿಸಿ ಆರೋಗ್ಯವನ್ನು ಕೆಡಿಸಿಕೊಳ್ಳುವಿರಿ. ಅಪರಿಚಿತರು ನಿಮ್ಮ ವಶವನ್ನು ಮಾಡಿಕೊಳ್ಳಲು ಪ್ರಯತ್ನಿಸುತ್ತಿರುವರು. ಇಂದು ನಿಮ್ಮ ವಿದ್ಯೆಯ ಪರೀಕ್ಷೆಯೂ ಆಗುವುದು. ನಿಮ್ಮ ಮತ್ತೊಂದು ಮುಖದ ಪರಿಚಯವೂ ಆಪ್ತರಿಗೆ ಆಗಲಿದೆ. ಪ್ರಯಾಣದಿಂದ ಸ್ವಲ್ಪ ಆಯಾಸವಾಗಲಿದ್ದು ವಿಶ್ರಾಂತಿಯಿಂದ ಅದನ್ನು ಪರಿಹರಿಸಿಕೊಳ್ಳುವಿರಿ. ಸಿಕ್ಕ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳುವ ವಿಧಾನವನ್ನು ಚಿಂತಿಸಿ.
ಮಿಥುನ ರಾಶಿ: ವಿದ್ಯಾರ್ಥಿಗಳು ಅನಗತ್ಯ ವ್ಯವಹಾರಗಳತ್ತ ಗಮನ ಹರಿಸುತ್ತಿದ್ದು ಪೋಷಕರು ಇದರ ಬಗ್ಗೆ ವಿಚಾರಿಸುವ ಅಗತ್ಯವೂ ಬರಬಹುದು. ಮೃಷ್ಟಾನ್ನ ಭೋಜನದಿಂದ ಸಂತೃಪ್ತಿ ಇರಲಿದೆ. ಕೆಲವರ ಮಾತುಗಳು ನಿಮ್ಮ ಉತ್ಸಾಹವನ್ನು ಕುಗ್ಗಿಸಬಹುದು. ಸಂಗಾತಿಯ ಜೊತೆ ವಾಗ್ವಾದವನ್ನು ಮಾಡಲಿದ್ದೀರಿ. ಆರ್ಥಿಕಸ್ಥಿತಿಯು ಏರದೇ ಇಳಿಯದೇ ಒಂದೇ ರೀತಿಯಲ್ಲಿ ಇರಲಿದೆ. ಪ್ರಾಮಾಣಿಕ ಪ್ರಯತ್ನವು ನಿಮ್ಮ ಕಾರ್ಯಸಾಧನೆಯ ಗುಟ್ಟಾಗಲಿದೆ. ವ್ಯವಹಾರಸ್ಥರು ಎಚ್ಚರಿಕೆಯಿಂದ ವ್ಯವಹರಿಸಬೇಕಾಗಬಹುದು. ಆಸ್ತಿಯ ವಿಚಾರದಲ್ಲಿ ನೀವು ಸೊಪ್ಪು ಹಾಕದೇ ಇರುವುದು ಅದು ಅಲ್ಲಿಯೇ ಶಾಂತವಾಗುವುದು.
ಕಟಕ ರಾಶಿ: ಮತ್ತೆ ಮತ್ತೆ ಬರುವ ಅಪರಿಚಿತ ಕರೆಗೆ ನೀವು ಮಾನಸಿಕವಾಗಿ ಕುಗ್ಗುವಿರಿ. ಹೊಸ ಯೋಜನೆಗಳನ್ನು ಆರಂಭಿಸಲು ನಿಮಗೆ ಧೈರ್ಯವು ಕಡಿಮೆ ಇರುವುದು. ಏನಾದರೂ ಒಂದು ಅಸಂಬದ್ಧವನ್ನು ಮಾಡುವರು ಎಂಬ ಹಣೆಪಟ್ಟಿ ಬೀಳಬಹುದು. ಮೋಸಗಾರಿಕೆಯಿಂದ ಆಟವನ್ನು ಗೆಲ್ಲುವಿರಿ. ಶತ್ರುಗಳ ಚಲನವಲನದ ಮೇಲೆ ನಿಮ್ಮ ದೃಷ್ಟಿಯು ಇರಲಿದೆ. ಯಾರದೋ ಮಾತಿಗೆ ಸ್ನೇಹಿತರನ್ನು ದೂರ ಮಾಡಿಕೊಳ್ಳುವಿರಿ. ಗೊಂದಲ ವಿಚಾರವನ್ನು ಬಿಟ್ಟು ಬಿಡುವುದು ಒಳ್ಳೆಯದು. ಅರ್ಥಿಕ ವಿಚಾರದಲ್ಲಿ ಸ್ವಲ್ಪ ಅಭಿವೃದ್ಧಿಯು ಇರುವುದು. ಮನಸ್ಸು ಬೇಸರದಿಂದ ಯಥಾಸ್ಥಿತಿಗೆ ಮರಳಲಿದೆ.
ಸಿಂಹ ರಾಶಿ: ಕೃಷಿಯಲ್ಲಿ ನೀವು ಬಹಳ ಆಯ್ಕೆ ಸ್ವಭಾವವುಳ್ಳವರು. ವಾಗ್ವಾದದಿಂದ ನಿಮ್ಮ ಹೆಸರನ್ನು ಕೆಡಿಸಿಕೊಳ್ಳುವಿರಿ. ಸದಾ ಯಾವುದೋ ಆಲೋಚನೆಯಲ್ಲಿ ಇರುವಿರಿ. ಹುಂಬುತನದಿಂದ ಮುನ್ನುಗ್ಗುವ ಸ್ವಭಾವವನ್ನು ಕಡಿಮೆ ಮಾಡಿಕೊಳ್ಳಬೇಕಾದೀತು. ನಿಶ್ಚಿತ ಕಾರ್ಯಗಳನ್ನು ಸರಿಯಾಗಿ ಮುಗಿಸುವಿರಿ. ಆರೋಗ್ಯದ ವಿಚಾರದಲ್ಲಿ ನೀವು ವೈದ್ಯರ ಸಲಹೆಯನ್ನು ಪಡೆಯುವಿರಿ. ಅಶುಭವಾರ್ತಯು ಬರಬಹುದು. ನಿಮ್ಮ ಮಾತನ್ನು ಸತ್ಯವಾಗಿಸುವ ಭರದಲ್ಲಿ ಏನನ್ನಾದರೂ ಹೇಳುವಿರಿ. ಅಧ್ಯಯನದಲ್ಲಿ ನಿಮಗೆ ಹೆಚ್ಚು ಆಸಕ್ತಿ ಇರುವುದು. ಆರ್ಥಿಕ ಹಿನ್ನಡೆಯನ್ನು ನೀವು ಲೆಕ್ಕಿಸುವುದಿಲ್ಲ.
ಕನ್ಯಾ ರಾಶಿ: ವಿದ್ಯಾರ್ಥಿಗಳು ತಮ್ಮ ಬಹುದಿನಗಳ ಕನಸನ್ನು ನನಸು ಮಾಡಿಕೊಳ್ಳುವಿರಿ. ಮಾನಸಿಕ ನೋವನ್ನು ಯಾರ ಬಳಿಯಾದರೂ ಹೇಳಿಕೊಂಡು ಸಮಾಧಾನಪಟ್ಟುಕೊಳ್ಳಿ. ಸಣ್ಣ ವಿಚಾರವೂ ದೊಡ್ಡದಾಗಬಹುದು. ಕ್ರೀಡೆಯಲ್ಲಿ ನೀವು ಭಾಗವಹಿಸುವಿರಿ. ಎಷ್ಟೋ ವರ್ಷಗಳಿಂದ ಆಗದೇ ಇರುವ ಕೆಲಸವನ್ನು ನಿಮ್ಮಸಾಮಾಜಿಕ ಕೆಲಸದಿಂದ ಸಾಧಿಸಿ ಪ್ರಶಂಸೆಯನ್ನು ಗಳಿಸುವಿರಿ. ನಕಾರಾತ್ಮಕ ಆಲೋಚನೆಗಳು ಬಾರದಂತೆ ಯೋಗಾಭ್ಯಾಸವನ್ನು ಮಾಡಿ. ಮಕ್ಕಳ ವಿವಾಹ ಚಿಂತೆಯಲ್ಲಿ ಇರುವಿರಿ. ನಿಮ್ಮ ಮನಸ್ಸಿಗೆ ಬಂದಿದ್ದನ್ನು ಮಾತ್ರ ಮಾಡುವಿರಿ. ಯಾರ ಮಾತನ್ನೂ ಕೇಳುವ ಸ್ಥಿತಿ ಇಂದು ಇರುವುದಿಲ್ಲ.
ತುಲಾ ರಾಶಿ: ಸಮಾಧಾನಚಿತ್ತವು ನಿಮಗೆ ಅನೇಕ ಸುಂದರ ಸಮಯವನ್ನು ಅನುಭವಿಸುವಿರಿ. ಇನ್ನೊಬ್ಬರಿಂದ ದೈಹಿಕ ಹಿಂಸೆಯನ್ನು ಅನುಭವಿಸಬೇಕಾದೀತು. ಭೂಮಿಯ ವ್ಯವಹಾರದಿಂದ ಹಣವನ್ನು ಕಳೆದುಕೊಳ್ಳಬೇಕಾಗಬಹುದು. ಮನೆಯ ವಾತಾವರಣವು ನಿಮಗೆ ಹಿತವೆನಿಸುವುದು. ಧಾರ್ಮಿಕ ಆಚರಣೆಗಳಲ್ಲಿ ಮನಸ್ಸಾಗುವುದು. ಮಾನಸಿಕ ಕಿರಿಕಿರಿಯನ್ನು ತಪ್ಪಿಸಿಕೊಳ್ಳಲು ಅನ್ಯ ಮಾರ್ಗವನ್ನು ಆಶ್ರಯಿಸಿವಿರಿ. ಸ್ವಾಭಿಮಾನವು ನಿಮ್ಮ ಪ್ರತಿಷ್ಠೆಯಾಗಲಿದೆ. ಮೌನವಾಗಿರುವುದು ನಿಮಗೆ ಶೋಭೆ ತರದು.
ವೃಶ್ಚಿಕ ರಾಶಿ: ಎಲ್ಲರಿಂದ ಕಾರ್ಯಕ್ಕೆ ನಿಮಗೆ ಪ್ರಶಂಸೆ ಸಿಕ್ಕರೂ ನಿಮಗೆ ಕಾರ್ಯದಲ್ಲಿ ಸಮಾಧಾನ ಸಿಗದು. ಬಂದ ಹಣವು ಸಾಲವನ್ನು ತೀರಿಸಲಿಕ್ಕೇ ಸರಿಯಾಗುವುದು. ಅವ್ಯವಹಾರವನ್ನು ಮಾಡಲು ಸಹೋದ್ಯೋಗಿಗಳು ಪ್ರೇರಿಸಬಹುದು. ವ್ಯರ್ಥ ಎಂದುಕೊಂಡ ವಿದ್ಯೆಯು ಇಂದು ಪ್ರಯೋಜನಕ್ಕೆ ಬರಲಿದೆ. ಮನೆಗೆ ಬೇಕಾದ ವಸ್ತುವನ್ನು ಯಾರಿಗೂ ಹೇಳದೇ ತರುವಿರಿ. ಉತ್ತಮ ಹವ್ಯಾಸದ ಆಪ್ತರನ್ನು ದೂರಮಾಡಿಕೊಳ್ಳುವಿರಿ. ನಿಮ್ಮ ಕೆಲವು ಕಾರ್ಯಗಳು ನಿಷ್ಪ್ರಯೋಜಕ ಎಂದು ಅನ್ನಿಸುವುದು. ಪೂರ್ವಾಗ್ರಹ ಬುದ್ಧಿಯಿಂದ ಸರಿ ತಪ್ಪುಗಳನ್ನು ನಿರ್ಣಯಿಸುವುದು ಸಾಧ್ಯವಾಗದು. ಮಹಾಗಣಪತಿಯ ಆರಾಧನೆಯನ್ನು ಮಾಡಿ.
ಧನು ರಾಶಿ: ತಂದೆಯ ವಿಚಾರದಲ್ಲಿ ನಿಮಗೆ ಅಸಮಾಧನವು ಇರುವುದು. ಯಾರದೋ ಕೋಪವನ್ನು ಮತ್ಯಾರದೋ ಮೇಲೆ ತೋರಿಸುವಿರಿ. ಗೆಲುವಿಗೆ ಬಹಳ ಪ್ರಯತ್ನಪಡುವಿರಿ. ವ್ಯಕ್ತಿಗಳನ್ನು ನೋಡಿ ನಿಮ್ಮ ಮಾತು ಇರಲಿ. ನಿಮ್ಮ ಸಾಧನೆಗೆ ಗೌರವವು ಸಿಗಬಹುದು. ನಿಮ್ಮ ಸ್ಥಾನದ ಬಗ್ಗೆ ನಿಮಗೆ ಭಯವಿರುವುದು. ಸಮಾರಂಭಗಳಿಗೆ ದಂಪತಿ ಸಹಿತರಾಗಿ ತೆರಳುವಿರಿ. ದುರಭ್ಯಾಸದಿಂದ ಮುಕ್ತರಾಗಲು ಹಿರಿಯರಿಂದ ಹಿತವಚನವು ಸಿಗಬಹುದು. ದ್ವೇಷವನ್ನು ಸಾಧಿಸುವುದು ನಿಮ್ಮ ಅವಗುಣಗಳಲ್ಲಿ ಒಂದಾಗಿದ್ದು ಅದನ್ನು ಬಿಡಬೇಕಾಗಬಹುದು. ಧಾರ್ಮಿಕ ಆಚರಣೆಗಳಲ್ಲಿ ಸ್ವತಃ ತೊಡಗುವಿರಿ.
ಮಕರ ರಾಶಿ: ಎಷ್ಟೇ ಹುಡುಕಿದರೂ ನಿಮಗೆ ಬೇಕಾದ ಉದ್ಯೋಗವು ಸಿಗದೇ ಜೀವನವು ನಿರುತ್ಸಾಹದಿಂದ ಕೂಡಿರಬಹುದು. ಸಾಮಾಜಿಕ ಕಾರ್ಯಗಳತ್ತ ಮನಸ್ಸು ಮಾಡುವಿರಿ. ಆರೋಗ್ಯವು ಸುಧಾರಿಸಬಹುದು. ಸಹೋದ್ಯೋಗಿಗಳು ಕಿರಿಕಿರಿಯನ್ನು ನೀಡಬಹುದು. ಮಕ್ಕಳ ಭವಿಷ್ಯಕ್ಕೆ ನೀವು ಸ್ವಲ್ಪ ಹಣವನ್ನು ಹೊಂದಿಸುವಿರಿ. ನಿಮ್ಮ ಸುತ್ತಾಟಕ್ಕೆ ಸ್ವಂತ ವಾಹನವು ಬೇಕು ಎನಿಸುವುದು. ದೂರದಲ್ಲಿದ್ದ ಮಕ್ಕಳನ್ನು ಬಹಳ ದಿನಗಳ ಅನಂತರದ ಭೇಟಿ ಮಾಡುವಿರಿ. ನಿಮ್ಮ ನಡುವೆ ಮೌನವೇ ಸಂಭಾಷಣೆ ಆಗಬಹುದು. ಲಾಭದಾಯಕ ಕೃಷಿಯನ್ನು ನೀವು ಅವಲಂಬಿಸುವಿರಿ. ನಿಮಗೆ ಇಷ್ಟವಾದ ಸ್ಥಳವು ಸಿಗದೇ ಇರುವ ಕಾರಣ ಸ್ಥಿರಾಸ್ತಿಯ ಖರೀದಿಯನ್ನು ಮುಂದೂಡುವುದು ಉತ್ತಮ.
ಕುಂಭ ರಾಶಿ: ಸುಲಭವಾಗಿ ಸಿಗುವ ಸಂಪತ್ತು ನಿಮಗೆ ಧಕ್ಕದು. ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ಇರುವುದು. ನಿಮ್ಮ ನೆಚ್ಚಿನ ವ್ಯಕ್ತಿಗಳನ್ನು ಆಕಸ್ಮಾತ್ತಾಗಿ ಭೇಟಿಯಾಗುವಿರಿ. ಕುಟುಂಬದ ಜೊತೆ ಪ್ರಯಾಣವನ್ನೂ ಮಾಡುವ ಆಲೋಚನೆಯು ಇರಲಿದೆ. ನಿಮಗೆ ಕೊಟ್ಟ ಕೆಲಸವನ್ನು ಬಿಟ್ಟು ಅನ್ಯರ ಕಾರ್ಯದಲ್ಲಿ ಮಗ್ನರಾಗುವಿರಿ. ನಿಮ್ಮವರ ಸ್ವೇಚ್ಛಾಚಾರದ ನಡವಳಿಕೆಯು ನಿಮಗೆ ಇಷ್ಡವಾಗದು. ಅದನ್ನು ಬೇರೆ ಮಾತಿನ ಮೂಲಕ ತಿಳಿಸುವಿರಿ. ಹಣವನ್ನು ಕೊಟ್ಟು ವಸ್ತುವನ್ನೂ ಕಳೆದುಕೊಳ್ಳುವ ಸ್ಥಿತಿಯು ಬರಬಹುದು. ಕಛೇರಿಗೆ ವಿರಾಮವಿದ್ದರೂ ತನ್ನಿಮಿತ್ತವಾದ ಕಾರ್ಯವನ್ನೇ ನೀವು ಮಾಡಬೇಕಾಗುವುದು. ಸಂಗಾತಿಯ ದೌರ್ಬಲ್ಯಗಳನ್ನು ಎತ್ತಿ ಆಡುವಿರಿ.
ಮೀನ ರಾಶಿ: ಮನಃಕ್ಲೇಶವನ್ನು ಕಡಿಮೆ ಮಾಡಿಕೊಳ್ಳುವುದು ಅನಿವಾರ್ಯವಾಗುವುದು. ಕಳ್ಳತನದ ಭೀತಿಯು ಇರಬಹುದು. ನೆಮ್ಮದಿಯಿಂದ ಇರಲು ಹಿತಶತ್ರುಗಳು ಬಿಡುವುದಿಲ್ಲ. ಇಂದು ನಿಮ್ಮ ಸ್ವಂತ ಉದ್ಯೋಗದ ಮೇಲೆ ಕಾಳಜಿಯು ಕಾರಣಾಂತರದಿಂದ ಕಡಿಮೆಯಾಗುವುದು. ಇದರಿಂದ ಸ್ವಲ್ಪ ನಷ್ಟವೂ ಆದೀತು. ವೃತ್ತಿಪರರಾದ ನಿಮಗೆ ಕಛೇರಿಯಿಂದ ಅಶುಭವಾರ್ತೆಯು ಬರಬಹುದು. ಹಳೆಯ ಸಂಗಾತಿಯ ನೆನಪು ಇಂದು ಮತ್ತೆ ಮತ್ತೆ ನೆನಪಾಗುವುದು. ಮನೆಯಲ್ಲಿ ಧಾರ್ಮಿಕ ಸಮಾರಂಭವನ್ನು ಯೋಜಿಸುವಿರಿ. ಅಪರೂಪದ ಸ್ನೇಹಿತರ ಜೊತೆ ಮನೆಯಲ್ಲಿ ಸಂತೋಷಕೂಟವನ್ನು ಏರ್ಪಡಿಸುವಿರಿ.
-ಲೋಹಿತಶರ್ಮಾ 8762924271 (what’s app only)
Published On - 5:17 am, Sat, 26 August 23