Horoscope 27 Sep: ದಿನಭವಿಷ್ಯ, ಈ ರಾಶಿಯವರಿಗೆ ಹೊಂದಾಣಿಕೆಯ ಮನೋಭಾವವು ಇರಬೇಕಾದೀತು

| Updated By: ಆಯೇಷಾ ಬಾನು

Updated on: Sep 27, 2023 | 6:23 AM

ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹಾಗಾದರೆ ಇಂದಿನ (2023 ಸೆಪ್ಟೆಂಬರ್ 27) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

Horoscope 27 Sep: ದಿನಭವಿಷ್ಯ, ಈ ರಾಶಿಯವರಿಗೆ ಹೊಂದಾಣಿಕೆಯ ಮನೋಭಾವವು ಇರಬೇಕಾದೀತು
ಇಂದಿನ ರಾಶಿಭವಿಷ್ಯ
Image Credit source: iStock Photo
Follow us on

ರಾಶಿ ಭವಿಷ್ಯ ಪ್ರತಿಯೊಬ್ಬರ ಜೀವನದಲ್ಲಿ ವಿಭಿನ್ನವಾಗಿರುತ್ತದೆ. ಪ್ರತಿನಿತ್ಯ ಬೆಳಗ್ಗೆ ಎದ್ದ ಕೂಡಲೇ ತಮ್ಮ ರಾಶಿ ಭವಿಷ್ಯ (Daily horoscope) ನೋಡುವುದು ಕೆಲವರಿಗೆ ಅಭ್ಯಾಸ. ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಜೊತೆಗೆ ಪಂಚಾಂಗವನ್ನು ಸಹ ಓದುತ್ತಾರೆ. ಹಾಗಾದರೆ ಇಂದಿನ (2023 ಸೆಪ್ಟೆಂಬರ್ 27) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಉತ್ತರಾಫಲ್ಗುಣೀ, ಮಾಸ: ಭಾದ್ರಪದ, ಪಕ್ಷ: ಶುಕ್ಲ, ವಾರ: ಬುಧ, ತಿಥಿ: ತ್ರಯೋದಶೀ, ನಿತ್ಯನಕ್ಷತ್ರ: ಧನಿಷ್ಠಾ / ಶತಭಿಷಾ, ಯೋಗ: ಧೃತಿ / ಶೂಲ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 22 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ರಿಂದ 24 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:24 ರಿಂದ 01:54ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 07:53 ರಿಂದ 09:23ರ ವರೆಗೆ, ಗುಳಿಕ ಕಾಲ ಬೆಳಗ್ಗೆ 10:53 ರಿಂದ ಮಧ್ಯಾಹ್ನ 12:24ರ ವರೆಗೆ.

ಮೇಷ ರಾಶಿ: ಇಂದು ನೀವು ನಿಮ್ಮ ಉದ್ದೇಶಿಸಿದ್ದಕ್ಕಿಂತ ಅಧಿಕ ಮುನ್ನಡೆ ಸಾಧಿಸುವಿರಿ. ಹಣವನ್ನು ನೀಡಲು ಸಂಗಾತಿಯಿಂದ ಒತ್ತಡ ಬರಬಹುದು. ನಿಮ್ಮ ಚರ ಸ್ವತ್ತನ್ನು ರಕ್ಷಣೆ ಮಾಡಿಕೊಳ್ಳಿ. ಸ್ನೇಹಿತರಿಂದ ಅಲ್ಪ ಆರ್ಥಿಕ ಲಾಭವು ನಿಮಗೆ ಸಿಗುವುದು. ಆರಾಮಾಗಿ ಇರಲು ನೀವು ಹೆಚ್ಚು ಇಷ್ಟಪಡುವಿರಿ. ಅತಿಯಾದ ಆಯಾಸವನ್ನು ಮಾಡಿಕೊಳ್ಳದೇ ಕಾರ್ಯವನ್ನು ಮಾಡುವಿರಿ. ಕಛೇರಿಯಲ್ಲಿ ಸಹೋದ್ಯೋಗಿಗಳಿಂದ ಇಂದು ನಿಮಗೆ ಸಹಾನುಭೂತಿಯು ಸಿಗುವುದು. ಸಂಬಂಧಗಳನ್ನು ಬಳಸಿಕೊಂಡು ಇಂದಿನ ಕೆಲಸವನ್ನು ಮಾಡುವಿರಿ. ಸಾರ್ವಜನಿಕ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುವ ಹಂಬಲವು ಇರಲಿದೆ.

ವೃಷಭ ರಾಶಿ: ಉತ್ಸಾಹದಿಂದ ಏನನ್ನಾದರೂ ಮಾಡಲು ಹೋಗುವಿರಿ. ಕೆಲವು ವಿಚಾರದಲ್ಲಿ ಭಿನ್ನಾಭಿಪ್ರಾಯಗಳು ಬರುವುದು. ಹಣದಿಂದ ಕೆಲವು ತೊಂದರೆಗಳನ್ನು ದೂರಮಾಡಿಕೊಳ್ಳುವಿರಿ. ನೋವನ್ನು ನುಂಗಿ ಬದುಕುವ ರೀತಿಯು ನಿಮಗೆ ಗೊತ್ತಾಗಲಿದೆ. ಇನ್ನೊಬ್ಬರನ್ನು ನೋಯಿಸುವುದು ನಿಮಗೆ ಇಷ್ಟವಾಗದು. ನೂತನ ವಸ್ತುಗಳನ್ನು ಖರೀದಿಸುವಿರಿ. ಮನೋರಂಜನೆಯಲ್ಲಿ ನಿಮ್ಮ ಹೆಚ್ಚಿನ ಸಮಯವನ್ನು ಕಳೆಯಬೇಕಾದೀತು. ಕಛೇರಿಯ ಇಂದಿನ ಕಾರ್ಯವನ್ನು ಕಾರಣಾಂತರಗಳಿಂದ ಮುಂದೆ ಹಾಕುವಿರಿ. ನಿಮ್ಮ ಸ್ವಭಾವವನ್ನು ಸರಿ ಮಾಡಿಕೊಳ್ಳಬೇಕಾದೀತು. ಮೇಲಧಿಕಾರಿಗಳ ಬೆಂಬಲವು ನಿಮಗೆ ಬಲವನ್ನು ಕೊಡಬಹುದು.

ಮಿಥುನ ರಾಶಿ: ಇನ್ನೊಬ್ಬರ ವೈಯಕ್ತಿಕ ವಿಚಾರದಲ್ಲಿ ಹೆಚ್ಚು ಆಸಕ್ತಿ ಇರುವುದು. ಬೇಕಾದ ವ್ಯಕ್ತಿಯಿಂದ ನಿಮಗೆ ಬೇಕಾದುದನ್ನು ಕೇಳಿಕೊಳ್ಳುವಿರಿ. ಹೊಸ ಉದ್ಯಮವನ್ನು ಆರಂಭಿಸಲು ನಿಮಗೆ ಧೈರ್ಯವು ಸಾಲದು. ಉದ್ಯಮವನ್ನು ನಡೆಸಲು ಇನ್ನೊಬ್ಬರ ಜೊತೆ ಸೇರಿಕೊಳ್ಳುವಿರಿ. ದಾಂಪತ್ಯ ಜೀವನದಲ್ಲಿ ನಿಮ್ಮ ಸ್ಥಾನವು ಮುಖ್ಯವಾದಂತೆ ತೋರುವುದು. ಹೊಂದಾಣಿಕೆಯ ಮನೋಭಾವವು ಇರಬೇಕಾದೀತು. ಹಣವನ್ನು ಉಳಿಸಿಕೊಳ್ಳಲು ನಿಮ್ಮ ಪ್ರಯತ್ನವು ಫಲಕೊಡುವುದು. ಇಂದಿನ ನಿಮ್ಮ ವರ್ತನೆಯು ಗಾಂಭೀರ್ಯದಿಂದ ಇರಲಿದೆ. ಅನಾರೋಗ್ಯದ ಸಮಸ್ಯೆಯನ್ನು ನೀವು ನಿರ್ಲಕ್ಷಿಸುವುದು ಬೇಡ. ಇಂದು ನೀವು ಮಾತನ್ನು ಅಧಿಕವಾಗಿ ಆಡುವಿರಿ.

ಕಟಕ ರಾಶಿ: ಅತಿಯಾದ ಪ್ರಯಾಣದಿಂದ ನೀವು ದುರ್ಬಲರಾಗುವಿರಿ. ಇತ್ತೀಚಿನ ಕೆಲವು ಸ್ಥಿತಿಗಳು ಒತ್ತಡವನ್ನು ತಂದಿರಬಹುದು. ನಿಮ್ಮ ಹೊಸ ಕರ್ತವ್ಯವನ್ನು ಮರೆಯಬಹುದು. ಅಲ್ಪದರಲ್ಲಿ ನೀವು ಪಾರಾಗಿ ನೆಮ್ಮದಿ ಪಡೆಯುವಿರಿ. ಮನೆಗೆ ಬೇಕಾದ ವಸ್ತುಗಳ ಖರೀದಿ ನಡೆಸುವಿರಿ. ಆಗಬೇಕಾದ ಕೆಲಸಗಳ ಬಗ್ಗೆ ನಿಮಗೆ ಆತಂಕ ಇರುವುದು. ಕಳೆದುಕೊಂಡದ ವಸ್ತುವಿನ ಬಗ್ಗೆ ಮೋಹವಿರುವುದು. ಗೊಂದಲವನ್ನು ಮಾಡಿಕೊಳ್ಳದೇ ಕೆಲಸವನ್ನು ಸರಳ ಮಾಡಿಕೊಳ್ಳಿ. ಬಿಡುವಿನ ಸಮಯವನ್ನು ಅಧಿಕ ಸಂಪಾದನೆಗಾಗಿ ಬಳಸಿಕೊಳ್ಳುವಿರಿ. ಒಂದಕ್ಕಿಂತ ಹೆಚ್ಚು ಕೆಲಸವನ್ನು ಒಟ್ಟಿಗೇ ಮಾಡಲು ಹೋಗಿ ಅಸ್ತವ್ಯಸ್ತ ಮಾಡಿಕೊಳ್ಳುವಿರಿ.

ಸಿಂಹ ರಾಶಿ: ಬಂಧುಗಳ ಎದುರು ಮಾತನ್ನು ಹರಿಬಿಡಬೇಡಿ. ಒಬ್ಬರೇ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಬೇಡ. ಕುಟುಂಬದವರ ಜೊತೆ ನಿಮ್ಮ ಸಮಯವನ್ನು ನೀಡಿ. ಉದ್ಯೋಗದ ಸ್ಥಳವು ಇಂದು ನಿಮಗೆ ಖುಷಿಯ ಸ್ಥಳ. ಹಳೆಯ ವಸ್ತುಗಳನ್ನು ನೀವು ಮಾರಾಟ ಮಾಡುವಿರಿ. ಸಂದರ್ಭಕ್ಕೆ ತಕ್ಕಂತೆ ವರ್ತಿಸುವ ಸಂಗಾತಿಯ ನಡವಳಿಕೆಯು ಇಷ್ಟವಾಗದು. ವ್ಯಾಪರವು ಹೆಚ್ಚಿನ ಲಾಭವನ್ನು ಕೊಟ್ಟರೂ ಖರ್ಚು ಮಾಡುವ ಅನಿವಾರ್ಯತೆಯು ಬರಬಹುದು. ಸಂಗಾತಿಯ ಕಡೆಯಿಂದ ನಿಮಗೆ ಹೊಗಳಿಕೆ ಇರುವುದು. ನಿಮ್ಮ ಪ್ರಯತ್ನವು ಸಫಲತೆಯನ್ನು ಕಾಣುವುದು. ನಿಮ್ಮ ಗುರಿಯ ಬಗ್ಗೆ ಸ್ಪಷ್ಟತೆ ಇರಲಿ. ಉತ್ತಮ ದಿನಗಳ ನಿರೀಕ್ಷೆಯಲ್ಲಿ ಇರುವಿರಿ.

ಕನ್ಯಾ ರಾಶಿ: ಇಂದಿನ ಸಮಯವನ್ನು ವ್ಯರ್ಥ ಮಾಡದೇ ನಿಮ್ಮದೇ ಸಮಯಸಾರಿಣಿಯನ್ನು ರೂಪಿಸಿಕೊಳ್ಳಿ. ತೆಗೆದುಕೊಂಡ ನಿರ್ಧಾರಗಳು ಕಾರ್ಯಗತಗೊಳ್ಳುವ ಸಾಧ್ಯತೆ ಇದೆ. ವಿದ್ಯಾರ್ಥಿಗಳಿಗೆ ಪರೀಕ್ಷೆಯ ಭಯವಿದ್ದು ಶ್ರಮವು ಅಪೇಕ್ಷಿತವಾಗಬಹುದು. ಅಧ್ಯಯನ ವಿಧಾನವನ್ನು ಬದಲಿಸಿಕೊಳ್ಳಿ. ಭೂಮಿಯ ವ್ಯವಹಾರದಲ್ಲಿ ಲಾಭವಿರದೇ ಕೇಲವ ಓಡಾಟವಾಗುವುದು. ಮಾತನಾಡವೇಕಾದ ಸಂಧರ್ಭದಲ್ಲಿ ಮೌನ ವಹಿಸಿ ಎಲ್ಲರ ಕೋಪಕ್ಕೆ ಗುರಿಯಾಗುವಿರಿ. ಕಾಲ್ಪನಿಕ ಜಗತ್ತಿನಿಂದ ಹೊರಬನ್ನಿ. ಹಣದ ಹಿಂದೆ ಎಷ್ಟೇ ಬಿದ್ದರೂ ಸಿಕ್ಕುವಷ್ಟು ಮಾತ್ರ ಸಿಗುವುದು. ನಿರುಪಯುಕ್ತ ವಸ್ತುಗಳನ್ನು ಇಂದು ನೀವು ಬೇರೆಯವರಿಗೆ ಕೊಡುವಿರಿ. ಅಶುಭ ಸೂಚನೆ ಬಂದರೆ ಇಂದಿನ ಪ್ರಯಾಣವನ್ನು ಮುಂದೆ ಹಾಕಿ.

ತುಲಾ ರಾಶಿ: ಮಾನಸಿಕ ವಿಶ್ರಾಂತಿ ಇಲ್ಲ ಎಂದು ಅನ್ನಿಸಬಹುದು. ನಿಮ್ಮನ್ನು ನಿರ್ಲಕ್ಷಿಸುವ ಸಹೋದ್ಯೋಗಿಗಳ ಜೊತೆ ಬೆರೆಯಲು ಪ್ರಯತ್ನಿಸಿ. ವೃತ್ತಿಯಲ್ಲಿ ನಿಮಗೆ ಅನನುಕೂಲತೆಯು ಸೃಷ್ಟಿಯಾಗಬಹುದು. ಹೊರಗಿನಿಂದ ಆಮದು ಮಾಡಿಕೊಳ್ಳುವ ವ್ಯವಹಾರದಲ್ಲಿ ತೊಡಕಾಗಬಹುದು. ಇನ್ನೊಬ್ಬರ ಬಳಿ ಇರುವ ದಾಖಲೆಯನ್ನು ಜಾಣ್ಮೆಯಿಂದ ಪಡೆದುಕೊಳ್ಳುವಿರಿ. ಸಮಯವನ್ನು ಹಾಳುಮಾಡದೇ ಕೆಲಸದಲ್ಲೇ ಗಮನವಿರಲಿ. ನಿಮ್ಮ ಮನಸ್ಸಿಗೆ ತೋಚಿದ್ದನ್ನು ಇಂದು ನೀವು ಮಾಡುವಿರಿ. ತಪ್ಪನ್ನು ಸರಿ ಮಾಡಿಕೊಂಡು ಸಾಗಬೇಕಾದೀತು. ವಾಹನದಲ್ಲಿ ಓಡಾಡುವುದನ್ನು ಕಡಿಮೆ ಮಾಡಬೇಕಾದೀತು.

ವೃಶ್ಚಿಕ ರಾಶಿ: ನಿಮ್ಮ ಗುರಿಯನ್ನು ತಲುಪಲು ಸಮಯ ಹಿಡಿಯುವುದು. ಎಂದುಕೊಂಡ ಕಾರ್ಯವು ಮುಗಿದು ಸಂಭ್ರಮದಲ್ಲಿ ಇರುವಿರಿ. ಕ್ರಿಯಾತ್ಮಕ ಚಟುವಟಿಕೆಯಲ್ಲಿ ಸಫಲತೆಯನ್ನು ಕಾಣುವಿರಿ. ಪೂರ್ವಾಗ್ರಹ ಪೀಡಿತರಾಗಿ ಮಾತನಾಡುವುದು ಬೇಡ. ಆರೋಗ್ಯದ ಸುಧಾರಣೆಗೆ ಖರ್ಚಾಗುವುದು. ಅಸಭ್ಯ ಮಾತುಗಳು ನಿಮಗೆ ಸರಿಯಾಗದು. ಎಲ್ಲರ ಜೊತೆ ಬೆರೆಯುವುದನ್ನು ಇಷ್ಟಪಡುವಿರಿ. ಮಕ್ಕಳ ಕಲಿಕೆಗೆ ಬೇಕಾದ ಸಹಕಾರವನ್ನು ನೀಡುವಿರಿ. ತಾಯಿಯ ಪ್ರೀತಿಗೆ ಸೋಲುವಿರಿ. ನೂತನ ಗೃಹವನ್ನು ಖರೀದಿ ಮಾಡುವ ಅವಕಾಶವು ಬರಬಹುದು. ಇಂದು ಸಿಕ್ಕ ಅವಕಾಶಗಳನ್ನು ಹಾಗೆಯೇ ಬಿಟ್ಟುಬಿಡುವಿರಿ. ಮಾನಸಿಕ ಒತ್ತಡದಿಂದ ಇಂದಿನ ಕೆಲಸವು ಬೇಗನೆ ಮುಗಿಸುವಿರಿ.

ಧನು ರಾಶಿ: ಕುಟುಂಬದ ಜವಾಬ್ದಾರಿಯನ್ನು ಹೊತ್ತು ಮುನ್ನಡೆಸಲು ನಿಮಗೆ ಕಷ್ಟವೆನಿಸುವುದು. ಉದ್ವೇಗಕ್ಕೆ ಒಳಗಾಗುವುದು ಬೇಡ, ಉತ್ತಮ ಸಮಯದ ನಿರೀಕ್ಷೆಯಲ್ಲಿ ನೀವು ಇರುವಿರಿ. ದೂರದ ಬಂಧುಗಳ ಸಮಾಗಮವಾಗಬಹುದು. ಜನರ ಜೊತೆ ಬೆರೆಯುವುದು ನಿಮಗೆ ಇಷ್ಟವಾಗದು. ನಿಮ್ಮ ನಡವಳಿಕೆಯು ಅಹಂಕಾರವಾಗಿ ಬದಲಾಗಬಹುದು. ವರ್ತನೆಯು ಸಂದರ್ಭಕ್ಕೆ ಸರಿಯಾಗಿ ಇರಲಿ. ಸರಿಯಾಗಿ ಪ್ರತಿಕ್ರಯಿಸಲು ನಿಮಗೆ ಬಾರದೇ ಇರುವುದು. ಉದ್ಯೋಗದಲ್ಲಿ ಸ್ವಲ್ಪ ಬದಲಾವಣೆಯನ್ನು ಮಾಡಿಕೊಳ್ಳಬೇಕಾದೀತು. ದಿನಗೂಲಿಯವರಿಗೆ ಕೆಲಸವು ಸಿಗದೇ ಓಡಾಟವು ಅಧಿಕವಾಗಬಹುದು. ಹಣಕಾಸಿನ‌ ವಿಚಾರದಲ್ಲಿ ಜಾಗರೂಕತೆ ಮುಖ್ಯ. ನಿಮ್ಮ‌ ಭವಿಷ್ಯವನ್ನು ಮಿತ್ರರ ಜೊತೆ ಹಂಚಿಕೊಳ್ಳಿ.

ಮಕರ ರಾಶಿ: ನಿಮ್ಮ ಆಸಕ್ತಿಯು ಹೊಸ ಕ್ರಮದ ಹಾದಿಯಲ್ಲಿ ತೋರಿಸಬಹುದು, ನಿಮ್ಮ ಆಲೋಚನೆಗಳನ್ನು ಸರಿಯಾದ ಕಡೆ ವ್ಯಕ್ತಪಡಿಸಿ. ಹೊಸ ವ್ಯವಹಾರಕ್ಕೆ ಹಿಂದೇಟು ಹಾಕುವಿರಿ. ಸಂಗಾತಿಯ ಮಾತು ಸಂಕಟವನ್ನು ತರಬಹುದು. ರಾಜಕೀಯ ವ್ಯಕ್ತಿಗಳಿಂದ ಕೆಲಸಮಾಡಿಸಿಕೊಳ್ಳಲಿದ್ದೀರಿ. ಸ್ನೇಹಿತನ ಸಹವಾಸದಿಂದ ದುರಭ್ಯಾಸಕ್ಕೆ ಬೀಳುವಿರಿ. ಆರೋಗ್ಯದ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ವಿಧವಿಧವಾದ ಔಷಧೋಪಚಾರಗಳನ್ನು ಮಾಡುವಿರಿ. ನಿಮ್ಮ ಮೇಲೆ ಬರುವ ನಕಾರಾತ್ಮಕ ಮಾತುಗಳನ್ನು ಅಲ್ಲಗಳೆಯಲಾರಿರಿ. ಒಂದೇ ರೀತಿಯ ಕೆಲಸದಲ್ಲಿ ನಿಮಗೆ ನಿರುತ್ಸಾಹವಿರಲಿದೆ. ನೆರೆ-ಹೊರೆಯವರ ಜೊತೆ ಮಾತು ಮಿತವಾಗಿರಲಿ.

ಕುಂಭ ರಾಶಿ: ಆಶಾವಾದದಲ್ಲಿಯೇ ನಿಮ್ಮ ಇಂದಿನ ದಿನವನ್ನು ಕಳೆಯುವಿರಿ. ಯೋಜಿತ ಉದ್ಯಮದಲ್ಲಿ ಪಾಲುದಾರರನ್ನು ಸೇರಿಸಿಕೊಂಡು ಮುಂದುವರಿಯಿರಿ. ಸಾಮಾಜಿಕ ಕಾರ್ಯಗಳಿಗೆ ಒತ್ತಡಗಳು ಇರಲಿದೆ. ಪ್ರೀತಿಪಾತ್ರರ ಮೇಲೆ ಸುಖಾಸುಮ್ಮನೆ ಅನುಮಾನ ಬೇಡ. ಸ್ಥಿರಾಸ್ತಿಯ ವಿಚಾರಕ್ಕೆ ಬಿಸಿ ಮಾತುಗಳು ಕುಟುಂಬದಲ್ಲಿ ಬರಬಹುದು. ಕಾನೂನಾತ್ಮಕ ವಿಷಯವನ್ನು ಚರ್ಚಿಸಿ ಕಾರ್ಯರೂಪಕ್ಕೆ ತೆಗೆದುಕೊಂಡು ಬನ್ನಿ. ಕಡಿಮೆ ಖರ್ಚಿನಲ್ಲಿ ಇಂದಿನ ಕಾರ್ಯವು ನೋಡಿಕೊಳ್ಳಿ. ಉತ್ಸಾಹವನ್ನು ನಿಮ್ಮವರ ಚುಚ್ಚು ಮಾತು ಕಡಿಮೆ ಮಾಡಬಹುದು. ಮಾತನಾಡಿ ತಪ್ಪಿನಲ್ಲಿ ಸಿಕ್ಕಿಬೀಳುವ ಸಾಧ್ಯತೆ ಇದೆ. ಅಪರಿಚಿತ ಸ್ಥಳಗಳಿಗೆ ಹೋಗುವ ಸಂದರ್ಭವು ಬರಬಹುದು.

ಮೀನ ರಾಶಿ: ಇಂದು ಕೌಂಟುಬಿಕ ವ್ಯವಹಾರದಲ್ಲಿ ಮಹತ್ತ್ವದ ತಿರುವು ಸಿಗುವ ಸಂಭವವಿದೆ. ಕಠಿಣ ಪರಿಶ್ರಮದಿಂದ ನಿಮ್ಮ ವೃತ್ತಿಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುವಿರಿ. ಪಾಲುದಾರಿಕೆಯಲ್ಲಿ ಉಂಟಾದ ಗೊಂದಲ್ಲವನ್ನು ಸರಿ ಮಾಡಿಕೊಂಡೂ ಮೈತ್ರಿ ಮಾಡಿಕೊಂಡಲ್ಲಿ ಇಬ್ಬರಿಗೂ ಅನುಕೂಲವಿದೆ. ನಿಮ್ಮ ಸ್ಥಿರಾಸ್ತಿ ಪರಿಶೀಲನೆಯನ್ನು ಇಂದು ಮಾಡಿಕೊಳ್ಳಿ. ನಿಮ್ಮ‌ ಕಷ್ಟವನ್ನು ಸ್ನೇಹಿತರ ಜೊತೆ ಹಂಚಿಕೊಳ್ಳುವುದೂ ಕಷ್ಟವಾದೀತು. ನಿಮಗೆ ಕೊಟ್ಟ ಜವಾಬ್ದಾರಿಯನ್ನು ಅತ್ಯಂತ ಕಾಳಜಿಯಿಂದ ನೋಡಿಕೊಳ್ಳುವಿರಿ. ನಿಮ್ಮ ಯಶಸ್ಸೇ ನಿಮಗೆ ಮುಳುವಾಗಬಹುದು. ಹಿರಿಯರ ಮಾರ್ಗದರ್ಶನವನ್ನು ಅಲ್ಲಗಳೆಯುವಿರಿ. ಸೌಲಭ್ಯಗಳನ್ನು ಸದುಪಯೋಗವಾಗುವಂತೆ ನೋಡಿಕೊಳ್ಳಿ.

-ಲೋಹಿತಶರ್ಮಾ (ವಾಟ್ಸ್​ಆ್ಯಪ್ 8762924271)

Published On - 12:00 am, Wed, 27 September 23