ರಾಶಿ ಭವಿಷ್ಯ ಪ್ರತಿಯೊಬ್ಬರ ಜೀವನದಲ್ಲಿ ವಿಭಿನ್ನವಾಗಿರುತ್ತದೆ. ಪ್ರತಿನಿತ್ಯ ಬೆಳಗ್ಗೆ ಎದ್ದ ಕೂಡಲೇ ತಮ್ಮ ರಾಶಿ ಭವಿಷ್ಯ (Daily horoscope) ನೋಡುವುದು ಕೆಲವರಿಗೆ ಅಭ್ಯಾಸ. ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಜೊತೆಗೆ ಪಂಚಾಗವನ್ನು ಸಹ ಓದುತ್ತಾರೆ. ಹಾಗಾದರೆ ಇಂದಿನ (2023 ಜುಲೈ 28) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಭವಿಷ್ಯ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕರ್ಕಾಟಕ ಮಾಸ, ಮಹಾನಕ್ಷತ್ರ: ಪುಷ್ಯಾ, ಮಾಸ: ಅಧಿಕ ಶ್ರಾವಣ, ಪಕ್ಷ: ಶುಕ್ಲ, ವಾರ: ಶುಕ್ರ, ತಿಥಿ: ದಶಮೀ, ನಿತ್ಯನಕ್ಷತ್ರ: ಜ್ಯೇಷ್ಠಾ, ಯೋಗ: ಶುಕ್ಲ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 15 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 01 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 11:03 ರಿಂದ 12:39ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 03:50 ರಿಂದ 5:26ರ ವರೆಗೆ, ಗುಳಿಕ ಕಾಲ ಬೆಳಗ್ಗೆ 07:52 ರಿಂದ 09:27ರ ವರೆಗೆ.
ಮೇಷ: ಆಲಸ್ಯದಿಂದ ಇರುವ ಕಾರಣ ಯಾವ ಕೆಲಸವೂ ಸರಿಯಾದ ಸಮಯಕ್ಕೆ ಮಾಡಲಾಗದು. ತಪ್ಪು ಕೆಲಸದಿಂದ ಅಧಿಕಾರಿಗಳು ಬೈಯ್ಯಬಹುದು. ಆರ್ಥಿಕ ಬಲಕ್ಕೆ ನೀವು ದೈವಕ್ಕೆ ಶರಣಾಗುವಿರಿ. ಏಕಾಗ್ರವಾದ ಕೆಲಸವನ್ನು ಮಾಡಲು ಕಷ್ಟವಾದೀತು. ಸಂಗಾತಿಯಿಂದ ನಿಮಗೆ ಸಲಹೆಯಂತೆ ಮುಂದುವರಿಯಿರಿ. ಆಗಬೇಕಾದ ಕೆಲಸಕ್ಕೆ ಇಂದಿನ ಸುತ್ತಾಟವು ವ್ಯರ್ಥವಾಗಲಿದೆ. ಮನೆಯ ನಿರ್ಮಾಣದ ಕಾರ್ಯವನ್ನು ಮಾಡುವುದು ಕಷ್ಟವಾಗಲಿದೆ. ಸಹೋದ್ಯೋಗಿಗಳಿಂದ ಸಹಕಾರದ ಕೊರತೆ ಇರಲಿದೆ. ಏಕಾಂತದಲ್ಲಿ ಇರಲು ಇಷ್ಟವಾಗುವುದು.
ವೃಷಭ: ಅಪ್ತರ ಮೇಲಿನ ನಂಬಿಕೆಯು ಹೋಗಲಿದೆ. ಮನೆಯಿಂದ ದೂರವಿರುವ ನಿಮಗೆ ಅಲ್ಲಿಗೆ ಹೋಗಬೇಕು ಎಂದು ಅನ್ನಿಸಬಹುದು. ಸಂಗಾತಿಯ ಮಾತಗಳು ನಿಮಗೆ ಕಿರಿಕಿರಿ ಎನಿಸಿದರೂ ಮಾತನ್ನೇ ಅನುಸರಿಸುವಿರಿ. ಖರ್ಚಿನ ಮಾರ್ಗಗಳು ಒಂದೊಂದೇ ತೆರೆದುಕೊಂಡು ನಿಮಗೆ ಬೇಸರವನ್ನು ಉಂಟುಮಾಡಬಹುದು. ಹೊಸ ಯೋಜನೆಯನ್ನು ನೀವು ಇಂದು ಆರಂಭಿಸುವಿರಿ. ಬೆಂಬಲವು ಚೆನ್ನಾಗಿರಲಿದೆ. ನಿಮ್ಮ ಸೌಂದರ್ಯವನ್ನು ನೆಚ್ಚಿಕೊಳ್ಳುವರು. ಹಲವು ತೊಡಕುಗಳಿಂದ ನೀವು ಮುಕ್ತರಾಗಲು ಬಯಸುವಿರಿ.
ಮಿಥುನ: ನಿಮ್ಮ ಬಗ್ಗೆ ಅಪವಾದವನ್ನು ನೀವು ಜೀರ್ಣಿಸಿಕೊಳ್ಳಲು ಕಷ್ಟವಾದೀತು. ಸಂಗಾತಿಯ ವಿಚಾರದಲ್ಲಿ ನಿಮಗೆ ಸಂಪೂರ್ಣ ಖಷಿಯು ಇರದು. ವೃತ್ತಿಯಲ್ಲಿ ಖುಷಿಯಿಂದ ಈ ದಿನವನ್ನು ಕಳೆಯುವಿರಿ. ಅನ್ಯರಿಂದ ಅಪಹಾಸ್ಯಕ್ಕೆ ಒಳಗಾಗುವಿರಿ. ಅಪರಿಚಿತ ದೂರವಾಣಿ ಕರೆಗಳು ನಿಮ್ಮನ್ನು ಮೋಸ ಮಾಡಬಹುದು. ಆಹಾರದ ವ್ಯಾಪಾರವನ್ನು ನೀವು ನಡೆಸುತ್ತಿದ್ದರೆ ಎಂದಿಗಿಂತ ಅಧಿಕ ಲಾಭವು ಆಗಬಹುದು. ಕಲೆಯಲ್ಲಿ ಆಸಕ್ತಿ ಬರಬಹುದು. ಕೆಲಸದ ನಿಮಿತ್ತ ದೂರ ಪ್ರಯಾಣವನ್ನು ಮಾಡುವಿರಿ. ಮಾತಗಳನ್ನು ಇಂದು ಕಡಿಮೆ ಆಡಲಿದ್ದೀರಿ.
ಕಟಕ: ಪ್ರೀತಿ ಪಾತ್ರರನ್ನು ನೀವು ದೂರಮಾಡಿಕೊಳ್ಳುವಿರಿ. ನಿರಂತರ ಕೆಲಸವನ್ನು ಮಾಡದೇ ಸ್ವಲ್ಪ ವಿಶ್ರಾಂತಿಯನ್ನು ಪಡೆಯುವುದು ಉತ್ತಮ. ಭೂಮಿಯ ದಾಖಲೆಗಳನ್ನು ಸರಿಮಾಡಿಕೊಳ್ಳಲು ಶ್ರಮಿಸಬೇಕಾದೀತು. ವಿದ್ಯಾರ್ಥಿಗಳು ವಿದ್ಯಾಭ್ಯಾಸದಿಂದ ವಿಮುಖರಾಗುವ ಸಾಧ್ಯತೆ ಇದೆ. ಸಹೋದರನ ಆರೋಗ್ಯದಲ್ಲಿ ವ್ಯತ್ಯಾಸವಾಗಲಿದೆ. ಅಪರೂಪದ ಸ್ಥಳಕ್ಕೆ ಹೋಗಲಿದ್ದೀರಿ. ಎಲ್ಲ ಸಂದರ್ಭದಲ್ಲಿ ನಿಮ್ಮ ವರ್ತನೆಯನ್ನು ಸರಿಯಾಗಿ ಇಟ್ಟುಕೊಳ್ಳಿ. ಹಣವನ್ನು ಕಳೆದುಕೊಳ್ಳಬಹುದು. ಸಂಗಾತಿಯ ಮೇಲೆ ಸಿಟ್ಟುಗೊಳ್ಳಲಿದ್ದೀರಿ.
ಸಿಂಹ: ದಾಂಪತ್ಯದಲ್ಲಿ ಪ್ರೀತಿಯು ಅಧಿಕವಾಗಿದ್ದು ಬಹಳ ಸಂತೋಷವನ್ನು ಅನುಭವಿಸುವಿರಿ. ಅಪರಿಚಿತರು ನಿಮ್ಮ ಮನೆಗೆ ಭೇಟಿಯಾಗಲಿದ್ದೀರಿ. ವೃತ್ತಿಯಲ್ಲಿ ನಿಮ್ಮ ಸಹಕಾರವು ಅಧಿಕವಾಗಿದ್ದು ಪ್ರಶಂಸೆಯು ಸಿಗಲಿದೆ. ಭವಿಷ್ಯದ ಬಗ್ಗೆ ಭಯಗೊಂಡಿದ್ದು ಮಾರ್ಗದರ್ಶನವನ್ನು ಪಡೆಯುವಿರಿ. ನಿಮ್ಮ ಬಗ್ಗೆ ದೂರು ಸಲ್ಲಿಸುವರು. ಯಾರದೋ ಮಾತು ನಿಮಗೆ ಹಿಂಸೆಯನ್ನು ತರಬಹುದು. ಕಳೆದುಹೋದ ಸಂಬಂಧವನ್ನು ಮತ್ತೆ ಕೂಡಿಸಿಕೊಳ್ಳಲಿದ್ದೀರಿ. ವೈದ್ಯರ ಚಿಕಿತ್ಸೆಯಿಂದ ನಿಮ್ಮ ಖಾಯಿಲೆಯು ಸರಿಯಾಗುವುದು. ಪ್ರಯಾಣವು ಕಾರಣಾಂತರಗಳಿಂದ ಸ್ಥಗಿತವಾಗುವುದು.
ಕನ್ಯಾ: ವಾಹನ ಖರೀದಿಸಲು ನಿಮಗೆ ಹಣಕಾಸಿನ ಸಹಾಯವು ಸಿಗಲಿದೆ. ತಂದೆಯ ಮಾತು ನಿಮಗೆ ಕಿರಿಕಿರಿ ಎನಿಸಬಹುದು. ದಾಂಪತ್ಯದಲ್ಲಿ ಕಲಹವಿರಲಿದ್ದು ಮುಂದುವರಿಸುವುದು ಬೇಡ. ಹೆಚ್ಚು ಪ್ರಯತ್ನದಿಂದ ಅಲ್ಪ ಲಾಭವಾಗಲಿದೆ. ಕೃಷಿಯಲ್ಲಿ ಇಂದು ನೀವು ಹೆಚ್ಚು ತೊಡಗಿಸಿಕೊಳ್ಳುವಿರಿ. ನೇರವಾದ ಮಾತಿನಿಂದ ಇತರರಿಗೆ ನೋವನ್ನು ಉಂಟುಮಾಡುವಿರಿ. ಬಂಧುಗಳ ಭೇಟಿಯು ನಿಮಗೆ ಸಮಾಧಾನವನ್ನು ತರಲಿದೆ. ಪತ್ನಿಯ ಕಡೆಯಿಂದ ಹಣಕಾಸಿನ ಸಹಾಯವನ್ನು ಮಾಡಲಿದ್ದೀರಿ. ತಾಯಿಯ ಜೊತೆ ವಾಗ್ವಾದವನ್ನು ಮಾಡಲಿದ್ದೀರಿ.
ತುಲಾ: ಆರ್ಥಿಕ ಸಹಾಯವನ್ನು ನಿಮ್ಮ ಸ್ನೇಹಿತರು ನಿಮ್ಮಿಂದ ಬಯಸುವರು. ಹೆಚ್ಚಿನ ಒತ್ತಡವನ್ನು ಮಾಡಿಕೊಳ್ಳದೇ ಕೆಲಸವನ್ನು ಮುಗಿಸುವಿರಿ. ವಿದೇಶಪ್ರಯಾಣವನ್ನು ಹೆಚ್ಚು ಅನಂದದಿಂದ ಮಾಡುವಿರಿ. ಸೌಂದರ್ಯಪ್ರಜ್ಞೆಯು ಇಂದು ಅಧಿಕವಾಗಿ ಇರಲಿದೆ. ನಿಮ್ಮ ಭಾವನೆಗಳನ್ನು ಆಪ್ತರ ಜೊತೆ ಹಂಚಿಕೊಂಡು ಸಮಾಧಾನ ಪಡುವಿರಿ. ವಿವಾಹದ ಮಾತುಕತೆಗಳು ನಿಮಗೆ ಸಂತೋಷವನ್ನು ಕೊಡುವುದು. ಅನಪೇಕ್ಷಿತ ಸ್ಥಳದಲ್ಲಿ ನೀವು ಇರಲು ಬಯಸುವುದಿಲ್ಲ. ವಾತಸಂಬಂಧಿ ಖಾಯಿಲೆಯು ಹೆಚ್ಚಾಗಬಹುದು. ದಾನ ಮಾಡವ ಮನಸ್ಸಾಗಲಿದೆ.
ವೃಶ್ಚಿಕ: ಸಾಮಾಜಿಕ ಗೌರವವು ನಿಮಗೆ ಸಿಗಲಿದ್ದು ಇದರಿಂದ ಅಹಂಕಾರವೂ ಬರಬಹುದು. ಪರಿಚಿತರ ವಿಚಾರದಲ್ಲಿ ನೀವು ನಕಾರಾತ್ಮಕವಾಗಿ ಮಾತನಾಡುವುದು ಸರಿಯಾಗದು. ಮಕ್ಕಳಿಗೆ ನಿಮ್ಮ ಪ್ರೀತಿಯ ಅವಶ್ಯಕತೆ ಇರಲಿದೆ. ಸಂಪತ್ತಿನ ಕಡೆ ಅಧಿಕವಾದ ಗಮನ ಇರಲಿದ್ದು ಸಂಬಂಧಗಳು ಸಡಿಲಾಗುವುದು. ಭೂಮಿಯ ಮೇಲೆ ಹೂಡಿಕೆ ಮಾಡುವ ನಿಮ್ಮ ಯೋಜನೆಗೆ ಪ್ರೋತ್ಸಾಹವು ಸಿಗಬಹುದು. ಸಭೆಗೆ ನೀವು ಅತಿಥಿಗಳಾಗಿ ಹೋಗುವಿರಿ. ಉದ್ಯಮದಲ್ಲಿ ನಿಮಗೆ ಆದಾಯವು ಕಡಿಮೆ ಆಗಬಹುದು. ಒಪ್ಪಿಕೊಂಡ ಕೆಲಸವನ್ನು ಸಮಯಕ್ಕೆ ಸರಿಯಾಗಿ ಮುಗಿಸಿ.
ಧನಸ್ಸು: ಒಂದು ಕಡೆ ಹಣದ ವ್ಯವಹಾರವನ್ನು ಮುಕ್ತಾಯ ಮಾಡಿದರೆ ಮತ್ತೊಂದು ಕಡೆಗೆ ತೆರೆದುಕೊಳ್ಳುವುದು. ಸಂಗಾತಿಯ ಒತ್ತಾಯದ ಮೇರೆಗೆ ಹೊಸ ಉದ್ಯೋಗಕ್ಕೆ ಹೋಗುವ ಮನಸ್ಸು ಮಾಡುವಿರಿ. ವಿದ್ಯಾರ್ಥಿಗಳಿಗೆ ಮನಸ್ಸು ಚಂಚಲವಾಗಿದ್ದು ಗಂಭೀರವಾಗಿ ಇದನ್ನು ಪರಿಗಣಿಸಬೇಕಾದೀತು. ಸಮಾರಂಭಗಳಿಗೆ ಭೇಟಿ ನೀಡುವಿರಿ. ಹೂಡಿಕೆಯ ಹಣವು ಎಷ್ಟೋ ವರ್ಷಗಳ ಅನಂತರ ಸಿಗಲಿದ್ದು ನಿಮ್ಮ ಸರಿಯಾಗಿ ಉಪಯೋಗಕ್ಕೆ ಬರಲಿದೆ. ಸುಲಭವಾದ ಕೆಲಸವನ್ನು ಸಂಕೀರ್ಣ ಮಾಡಿಕೊಳ್ಳುವ ಸಾಧ್ಯತೆ ಇದೆ. ಸಂಗಾತಿಗಳು ಒಂದೆಡೆ ಕುಳಿತು ನಿಮ್ಮ ಮನಸ್ಸನ್ನು ಹಂಚಿಕೊಳ್ಳಿ.
ಮಕರ: ಶತ್ರುಗಳ ಕಾಟವನ್ನು ಕಡಿಮೆ ಮಾಡಿಕೊಳ್ಳಲು ಯೋಜನೆಯನ್ನು ರೂಪಿಸಿಕೊಳ್ಳುವಿರಿ. ಉದ್ಯಮವನ್ನು ಮಾಡುವವರಿಗೆ ಕೆಲವು ತೊಂದರೆಗಳು ಬರಬಹುದು. ಸರ್ಕಾರಿ ಉದ್ಯೋಗದಲ್ಲಿ ಇದ್ದವರಿಗೆ ಕೆಲಸದ ಒತ್ತಡವು ಮೇಲಧಿಕಾರಿಗಳಿಂದ ಬರಲಿದೆ. ದೂರ ಪ್ರಯಾಣವನ್ನು ಮಾಡಲು ಬೇಕಾದ ತಯಾರಿಯ ಜೊತೆ ಹೊರಡಿ. ಆಗಬೇಕಾದ ವಿವಾಹವು ಕಾರಾಣಾಂತರದಿಂದ ಮುಂದೆ ಹೋಗಲಿದೆ. ಸಹೋದರನಿಗೆ ಸಹಾಯವನ್ನು ಮಾಡುವ ಮನಸ್ಸು ಇರಲಿದೆ. ಅಮೂಲ್ಯ ವಸ್ತುಗಳನ್ನು ಖರೀದಿಸುವಿರಿ. ಕೊಟ್ಟಿರುವ ಹಣದ ನಿರೀಕ್ಷೆಯಲ್ಲಿ ಇರುವಿರಿ. ದೈವಾನುಗ್ರಹದ ಕೊರತೆ ಇರಲಿದೆ.
ಕುಂಭ: ಅಪರೂಪದ ದ್ರವ್ಯಗಳು ಸಿಗಲಿದೆ. ಕುಟುಂಬದ ಜೊತೆ ಸಮಯವನ್ನು ಕಳೆದುದಕ್ಕೆ ಮನಸ್ಸು ನೆಮ್ಮದಿಯಿಂದ ಇರಲಿದೆ. ಗಣ್ಯರ ವ್ಯಕ್ತಿತ್ವವು ನಿಮ್ಮ ಮೇಲೆ ಪ್ರಭಾವವನ್ನು ಬೀರಬಹುದು. ಖರ್ಚನ್ನು ಕಡಿಮೆ ಮಾಡಿಕೊಂಡ ಕಾರಣ ಆರ್ಥಿಕತೆಯು ಉತ್ತಮವಾದಂತೆ ಅನ್ನಿಸುವುದು. ಸುಮ್ಮನೇ ಆಡಿದ ಮಾತುಗಳೂ ನಿಮಗೆ ತೊಂದರೆಯಾಗಬಹುದು. ನಿಮ್ಮ ವಿರುದ್ಧ ನಡೆಯುವ ಪಿತೂರಿಯನ್ನು ತಿಳಿದುಕೊಳ್ಳುವಿರಿ. ಹಿರಿಯರಿಗೆ ಅಗೌರವವನ್ನು ತೋರುವಿರಿ. ದೇವರ ಸನ್ನಿಧಿಯಲ್ಲಿ ನಿಮಗೆ ನೆಮ್ಮದಿಯು ಸಿಗಲಿದೆ. ಆಗಿರುವ ನಕಾರಾತ್ಮಕತೆಯನ್ನು ಮರೆತು ಮುನ್ನಡೆಯುವಿರಿ.
ಮೀನ: ನೂತನ ವಸ್ತ್ರಾದಿಗಳು ಬಂಧುಗಳಿಂದ ನಿಮಗೆ ಸಿಗಲಿದೆ. ಕೆಲಸದಲ್ಲಿ ಬದಲಾವಣೆಯನ್ನು ನೀವು ಬಯಸುವಿರಿ. ಅಧಿಕಾರಿಗಳಿಂದ ಪ್ರಶಂಸೆಯು ಸಿಕ್ಕಿ ಕೆಲಸದಲ್ಲಿ ಉತ್ಸಾಹವು ಇರಲಿದೆ. ಖಾಸಗಿ ಉದ್ಯೋಗಿಗೆ ಮುಖ್ಯಸ್ಥರಿಂದ ಕಿರಿಕಿರಿ ಆಗಬಹುದು. ಸ್ನೇಹಿತರ ಸಮಸ್ಯೆಯನ್ನು ಬಿಡಿಸಲು ನೀವು ಮುಂದಾಗುವಿರಿ. ನಿಮ್ಮ ಕೆಲಸಗಳನ್ನು ಮುಗಿಸುವ ಚಿಂತೆಯಲ್ಲಿ ಇರುವಿರಿ. ಹಣಕಾಸಿನ ಹರಿವಿನಿಂದ ಸಂತೋಷವಾಗಲಿದೆ. ಸಂಪಾದನೆಗೆ ಅವಕಾಶಗಳು ನಿಮಗೆ ಸಿಗಬಹುದು. ಇಂದು ಕಾರ್ಯದ ಒತ್ತಡವು ಅಧಿಕವಾಗಿ ಇರಲಿದೆ. ದೈವಬಲಕ್ಕೆ ಪುರುಷಪ್ರಯತ್ನವೂ ಇರಲಿ.
ಲೋಹಿತಶರ್ಮಾ – 8762924271 (what’s app only)