ರಜ್ಜು ಯೋಗ, ಮುಸಲ ಯೋಗ, ನಲ ಯೋಗ: ನಿಮ್ಮ ಜಾತಕದಲ್ಲಿ ಈ ಮೂರು ಯೋಗಗಳಿವೆಯೇ ನೋಡಿಕೊಳ್ಳಿ

ರಜ್ಜು ಯೋಗ, ಮುಸಲ ಯೋಗ, ನಲ ಯೋಗ ಈ ಯೋಗಗಳು ಅಪರೂಪಕ್ಕೆ ಬರುವಂತಹ ಯೋಗಗಳಾಗಿವೆ. ಎಲ್ಲರ ಕಾಯಕದಲ್ಲಿ ಈ ಯೋಗವು ಇರುತ್ತದೆ ಎನ್ನಲಾಗದು. ಆದರೆ ಇಂತಹ ಯೋಗಗಳು ಸಂಭವಿಸುತ್ತವೆ ಎನ್ನುವುದು ಸತ್ಯ ಮತ್ತು ಅದಕ್ಕೆ ಫಲವೂ ಇರುತ್ತದೆ.

ರಜ್ಜು ಯೋಗ, ಮುಸಲ ಯೋಗ, ನಲ ಯೋಗ: ನಿಮ್ಮ ಜಾತಕದಲ್ಲಿ ಈ ಮೂರು ಯೋಗಗಳಿವೆಯೇ ನೋಡಿಕೊಳ್ಳಿ
ಪ್ರಾತಿನಿಧಿಕ ಚಿತ್ರ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಗಂಗಾಧರ​ ಬ. ಸಾಬೋಜಿ

Updated on: Jul 28, 2023 | 1:30 AM

ಈ ಯೋಗಗಳು ಅಪರೂಪಕ್ಕೆ ಬರುವಂತಹ ಯೋಗ (Yoga) ಗಳಾಗಿವೆ. ಎಲ್ಲರ ಕಾಯಕದಲ್ಲಿ ಈ ಯೋಗವು ಇರುತ್ತದೆ ಎನ್ನಲಾಗದು. ಆದರೆ ಇಂತಹ ಯೋಗಗಳು ಸಂಭವಿಸುತ್ತವೆ ಎನ್ನುವುದು ಸತ್ಯ ಮತ್ತು ಅದಕ್ಕೆ ಫಲವೂ ಇರುತ್ತದೆ. ನಿಮ್ಮ ಜಾತಕ ಕುಂಡಲಿಯಲ್ಲಿ ನೀವು ಜನಿಸಿದ ಸಮಯಕ್ಕೆ ಚರರಾಶಿಯಲ್ಲಿ ಅಂದರೆ, ಮೇಷ, ಕರ್ಕಾಟಕ, ತುಲಾ ಮತ್ತು ಮಕರ ರಾಶಿಗಲ್ಲಿ ಗ್ರಹರಿದ್ದರೆ ಇದನ್ನು ರಜ್ಜು ಯೋಗ ಎನ್ನುವರು.

ಹಾಗಯೇ ಸ್ಥಿರ ರಾಶಿಯಲ್ಲಿ ಎಂದರೆ, ವೃಷಭ, ಸಿಂಹ, ವೃಶ್ಚಿಕ, ಕುಂಭ ರಾಶಿಗಳಲ್ಲಿ ಎಲ್ಲರ ಗ್ರಹರೂ ಇದ್ದರೆ ಅದನ್ನು ಮುಸಲ ಯೋಗ ಎನ್ನುತ್ತಾರೆ. ಹಾಗೆಯೇ ಉಭಯ ರಾಶಿಯಲ್ಲಿ ಎಲ್ಲ ಗ್ರಹರಿದ್ದರೆ, ಅಂದರೆ ಮಿಥುನ, ಕನ್ಯಾ, ಧನು, ಮೀನ ರಾಶಿಗಳಲ್ಲಿ ಎಲ್ಲ ಗ್ರಹರಿದ್ದರೆ ನಲ ಯೋಗವು ಆಗುತ್ತದೆ.

ಇದನ್ನೂ ಓದಿ: ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ನಿಮ್ಮ ಅಂಗೈಯಲ್ಲಿರುವ ಈ 3 ರೇಖೆ ನಿಮ್ಮನ್ನು ಶ್ರೀಮಂತರನ್ನಾಗಿ ಮಾಡಬಹುದು

ಈ ಯೋಗಗಳಿಂದ ಏನಾಗುತ್ತದೆ ಹಾಗಿದ್ದರೆ?

ರಜ್ಜು ಯೋಗ: ಈ ಯೋಗವನ್ನು ಇಟ್ಟುಕೊಂಡು ಹುಟ್ಟಿರುವವರು ಇನ್ನೊಬ್ಬರ ಅಭಿವೃದ್ಧಿಯನ್ನು ಇಷ್ಟಪಡುವುದಿಲ್ಲ. ಮನೆಯಿಂದ ದೂರವಿರಲು ಅಥವಾ ವಿದೇಶಗಳಿಗೂ ಹೋಗಬಹುದು. ಓಡಾಟದಲ್ಲಿ ಅತಿಯಾದ ಆಸಕ್ತಿ ಉಳ್ಳವನಾಗುವನು.

ಮುಸಲ ಯೋಗ: ಮರ್ಯಾದಸ್ಥ ಕುಟುಂಬದಲ್ಲಿ ಜನಿಸಿ, ಕುಟುಂಬಕ್ಕೆ ಯೋಗ್ಯವಾದ ಕೆಲಸವನ್ನು ಮಾಡುವರು. ಮಾನವಂತರಾಗಿಯೂ ಧನವಂತರಾಗಿಯೂ ಇವರು ಇರುವರು.

ಇದನ್ನೂ ಓದಿ: Virgo Zodiac Sign: ಕನ್ಯಾ ರಾಶಿಯವರು ಬೇರೆ ಅವರಲ್ಲಿ ಹೆಚ್ಚು ತಪ್ಪನ್ನು ಹುಡುಕುತ್ತಾರಾ? ವೈಯಕ್ತಿಕ, ವೃತ್ತಿಪರ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದಲು ಈ ಸಲಹೆಗಳನ್ನು ಅನುಸರಿಸಿ

ನಲ ಯೋಗ: ಈ ಯೋಗದಲ್ಲಿ ಜನಿಸಿದವರು ಅಂಗ ಊನ ಇರುವವರು ಆಗಿರುತ್ತಾರೆ. ಎಲ್ಲ ಕೆಲಸಗಳಲ್ಲಿಯೂ ಆಸಕ್ತಿ ಇರಲಿದೆ. ಸ್ಥಿರವಾದ ಸಂಪತ್ತನ್ನು ಉಳಿಸಿಕೊಂಡಿರುತ್ತೀರಿ.

ಈ ಎಲ್ಲ ಯೋಗಗಳೂ ಯಾವಾಗಲೂ ಫಲಿಸುತ್ತಿರುವುದಿಲ್ಲ. ಆದರೆ ಗ್ರಹಗಳ ಆಧಾರದ ಮೇಲೆ ಸ್ಥಾನದ ಮೇಲೆ, ಅಲ್ಲಿರುವ ಗ್ರಹಗಳ ಬಲಾಬಲದ ಮೇಲೆ ಇದು ನಿರ್ಧಾರವಾಗುವುದು. ದಶೆ ಮತ್ತು ಭುಕ್ತಿಯ ಸಮಯದಲ್ಲಿವ ಅವುಗಳ ಫಲವು ಹೆಚ್ಚಾಗುವುದು. ಆದರೆ ಸ್ವಪ್ಪ ಮಟ್ಟಿಗೆ ತಮ್ಮ ಪ್ರಭಾವವನ್ನು ಬೀರುತ್ತಲೇ ಇರುತ್ತವೆ.

ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್