Daily Horoscope 30 July: ಪರೀಕ್ಷಿಸಿದೆ ಯಾವುದನ್ನೂ ನಂಬುವುದು ಬೇಡ, ಕ್ಲಿಷ್ಟಕರ ಸನ್ನಿವೇಶಗಳಿಂದ ಸುಲಭವಾಗಿ ಪಾರಾಗುವಿರಿ

| Updated By: ಗಂಗಾಧರ​ ಬ. ಸಾಬೋಜಿ

Updated on: Jul 30, 2023 | 12:02 AM

ಇಂದಿನ (2023 ಜುಲೈ​ 30) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

Daily Horoscope 30 July: ಪರೀಕ್ಷಿಸಿದೆ ಯಾವುದನ್ನೂ ನಂಬುವುದು ಬೇಡ, ಕ್ಲಿಷ್ಟಕರ ಸನ್ನಿವೇಶಗಳಿಂದ ಸುಲಭವಾಗಿ ಪಾರಾಗುವಿರಿ
ಪ್ರಾತಿನಿಧಿಕ ಚಿತ್ರ
Follow us on

ರಾಶಿ ಭವಿಷ್ಯ ಪ್ರತಿಯೊಬ್ಬರ ಜೀವನದಲ್ಲಿ ವಿಭಿನ್ನವಾಗಿರುತ್ತದೆ. ಪ್ರತಿನಿತ್ಯ ಬೆಳಗ್ಗೆ ಎದ್ದ ಕೂಡಲೇ ತಮ್ಮ ರಾಶಿ ಭವಿಷ್ಯ (Daily horoscope) ನೋಡುವುದು ಕೆಲವರಿಗೆ ಅಭ್ಯಾಸ. ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಜೊತೆಗೆ ಪಂಚಾಗವನ್ನು ಸಹ ಓದುತ್ತಾರೆ. ಹಾಗಾದರೆ ಇಂದಿನ (2023 ಜುಲೈ​ 30) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕರ್ಕಾಟಕ ಮಾಸ, ಮಹಾನಕ್ಷತ್ರ: ಪುಷ್ಯಾ, ಮಾಸ: ಅಧಿಕ ಶ್ರಾವಣ, ಪಕ್ಷ: ಶುಕ್ಲ, ವಾರ: ಭಾನು, ತಿಥಿ: ದ್ವಾದಶೀ, ನಿತ್ಯನಕ್ಷತ್ರ: ಪೂರ್ವಾಷಾಢ, ಯೋಗ: ಐಂದ್ರ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 16 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 01 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 09:27 ರಿಂದ 11:03ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 02:14 ರಿಂದ 03:50ರ ವರೆಗೆ, ಗುಳಿಕ ಕಾಲ ಬೆಳಗ್ಗೆ 06:16 ರಿಂದ 07:52ರ ವರೆಗೆ.

ಮೇಷ: ಸಾಮಾಜಿಕ ಕಳಕಳಿಯನ್ನು ನೀವು ಹೆಚ್ಚಿಸಿಕೊಳ್ಳುವಿರಿ. ಆದಾಯಕ್ಕಿಂತ ಖರ್ಚು ಹೆಚ್ಚಾಗಿ ಆತಂಕವಾಗಬಹುದು. ಕುಟುಂಬದ ಸದಸ್ಯರ ಪ್ರೀತಿಯು ಸಿಗಲಿದೆ. ಆಕಸ್ಮಿಕ ವಾರ್ತೆಯನ್ನು ನೀವು ಸಮಾಧಾನದಿಂದ ತೆಗೆದುಕೊಳ್ಳಬೇಕಾದೀತು.‌ ನಿಮ್ಮ ಕೆಲಸಕ್ಕೆ ಪ್ರಶಂಸೆಯು ಸಿಗಲಿದೆ. ಸಂಗಾತಿಯನ್ನು ಸಂತೋಷಪಡಿಸಲು ಇಷ್ಟಪಡುವಿರಿ‌. ಕಾಲು ನೋವಿನಿಂದ ಕಷ್ಟಪಡಬೇಕಾದೀತು. ಸನ್ನಿವೇಶಗಳನ್ನು ಅರ್ಥಮಾಡಿಕೊಳ್ಳಲು ಕಷ್ಟವಾದೀತು. ಅಲ್ಪ ಶ್ರಮದಿಂದ ಹೆಚ್ಚು ಗಳಿಸುವ ತಂತ್ರವನ್ನು ಹೂಡುವಿರಿ.

ವೃಷಭ: ನೆಮ್ಮದಿಗೆ ನಿಮ್ಮದೇ ಸೂತ್ರಗಳನ್ನು ನೀವು ಅನುಸರಿಸುವಿರಿ.‌ ಕೆಲವು ಅಭ್ಯಾಸವನ್ನು ಬಿಟ್ಟುಬಿಡುವಿರಿ. ಸ್ನೇಹಿತರ ಜೊತೆ ಹೆಚ್ಚಿನ ಸಮಯವನ್ನು ಕಳೆಯುವಿರಿ. ಸಂಸಾರವನ್ನು ನಿಭಾಯಿಸುವ ಕಲೆಯನ್ನು ನೀವು ತಿಳಿದುಕೊಳ್ಳಬಹುದು. ತಾಯಿಯಿಂದ ನಿಮಗೆ ಹಿತವಚನವು ಸಿಗಲಿದೆ. ಯಾವುದನ್ನೂ ಗೊತ್ತಿಲ್ಲದೇ ನಂಬುವುದು ಬೇಡ. ನಿಮ್ಮ ವರ್ತನೆಯು ಎಂದಿಗಿಂತ ಭಿನ್ನವಾಗಿರುವುದು. ಕ್ಲಿಷ್ಟಕರ ಸನ್ನಿವೇಶಗಳನ್ನು ನೀವು ಸುಲಭವಾಗಿ ನಿಭಾಯಿಸುವ ಕಲೆಯನ್ನು ಅರಿತಿರುವಿರಿ.

ಮಿಥುನ: ಪ್ರೇಮವನ್ನು ನೀವು ಒಪ್ಪಿಕೊಳ್ಳದೇ ನಿಮ್ಮದೇ ವಾದವನ್ನು ಮಾಡುವಿರಿ. ಸಂಗಾತಿಯ ಮಾತುಗಳು ನಿಮಗೆ ಕಿರಿಕಿರಿಯನ್ನು ತಂದೀತು. ಸುಲಭದ ಕೆಲಸಗಳನ್ನು ಸಂಕೀರ್ಣ ಮಾಡಿಕೊಳ್ಳುವಿರಿ. ಸಂಗಾತಿಯಿಂದ ಹಣದ ಸಹಾಯವನ್ನು ಪಡೆಯುವಿರಿ. ಶೋಧಕರಿಗೆ ಹೆಚ್ಚಿನ ಅವಕಾಶಗಳು ಸಿಗುವ ಸಾಧ್ಯತೆ ಇದೆ. ಅನಾರೋಗ್ಯದಲ್ಲಿಯೂ ನೀವು ಉತ್ಸಾಹದಿಂದ ಮಾಡುವ ಕೆಲಸಕ್ಕೆ ಪ್ರಶಂಸೆ ಸಿಗಲಿದೆ. ಸಾಮಾಜಿಕ ಕೆಲಸಗಳು ನಿಮಗೆ ಅಭ್ಯಾಸದಂತೆ‌ ಅಗುವುದು. ಬಂಧುಗಳ ಆಗಮನವು ಖುಶಷಿಕೊಡುವುದು.

ಕಟಕ: ಇಂದು ನೀವು ವ್ಯವಹಾರದಲ್ಲಿ ಜಾಗರೂಕರಾಗಿ ಇರಬೇಕಸದೀತು. ಹಣವನ್ನು ತಪ್ಪಾದ ಕಡೆಯಲ್ಲಿ ಹೂಡುವಿರಿ. ಸುಮ್ಮನೇ ಎಲ್ಲದಕ್ಕೂ ಒಪ್ಪಿಗೆಯನ್ನು ಕೊಡುವುದು ಬೇಡ. ನಿಮ್ಮ‌ ಅಭಿಪ್ರಾಯವನ್ನು ಹಂಚಿಕೊಳ್ಳಿ. ನಿಮ್ಮ ಸ್ವಭಾವವನ್ನು ಬದಲಾಯಿಸಿಕೊಳ್ಳುವಿರಿ. ನಿಮ್ಮ ವಸ್ತುಗಳ ಬಳಕೆಯನ್ನು ನೀವು ನಿರ್ಲಕ್ಷ್ಯದಿಂದ‌ ಮಾಡುವಿರಿ. ಸರಳ ಮಾತುಗಳನ್ನು ಆಡುವುದು ನಿಮಗೆ ಬಾರದು. ಹೊಸ ಕೆಲಸಕ್ಕೆ ಸೇರುವ ಉತ್ಸಾಹದಲ್ಲಿ ನೀವಿರುವಿರಿ. ಮಕ್ಕಳನ್ನು ನೀವು ಶಿಸ್ತಿಗೆ ತರುವ ಪ್ರಯತ್ನವನ್ನು ಮಾಡುವಿರಿ.

ಸಿಂಹ: ಆನುವಂಶಿಕ ಖಾಯಿಲೆಯಿಂದ ನೀವು ಬಳಲುವ ಸಾಧ್ಯತೆ ಇದೆ. ಪ್ರಾಮಾಣಿಕತೆ ನಿಮಗೆ ವರವಾಗಬಹುದು. ನಿಮ್ಮ ಸರಳತೆಯು ನಿಮಗೆ ಧನಾತ್ಮಕ ಅಂಕಗಳನ್ನು ನೀಡುವುದು. ಸ್ತ್ರೀಯರಿಂದ ನೀವು ಸಂತೋಷವನ್ನು ಅನುಭವಿಸುವಿರಿ. ನಿಮಗೆ ಕೊಡುವ ಉಡುಗೊರೆಯನ್ನು ನೀವು ನಿರಾಕರಿಸುವಿರಿ. ನಿಮ್ಮವರೇ ನಿಮಗೆ ತೊಂದರೆಯನ್ನು ಕೊಡುವರು. ವಿವಾಹ ವಿಚಾರವನ್ನು ನೀವು ಆತುರದಿಂದ ಮಾಡುವುದು ಬೇಡ. ಮಕ್ಕಳ‌ ಮೇಲೆ ಮೋಹವು ಅಧಿಕವಾಗುವುದು. ಸಿಕ್ಕ ಸಂಪತ್ತನ್ನು ಜೋಪಾನವಾಗಿ ಇರಿಸಿಕೊಳ್ಳಿ.

ಕನ್ಯಾ: ಹಳೆಯ ವಿಚಾರಕ್ಕೆ ಸಂಗಾತಿಯ ಜೊತೆ ಕಲಹವಾಗಲಿದೆ. ಆದಷ್ಟು ಒಬ್ಬರು ಸುಮ್ಮನಿದ್ದರೆ ಕಲಹವು ಶಾಂತವಾಗಲಿದೆ. ಶ್ರೇಷ್ಠ ವಸ್ತುಗಳ ಲಾಭವಿದ್ದರೂ ಅದನ್ನು ಉಳಿಸಿಕೊಳ್ಳುವುದು ಕಷ್ಟವಾದೀತು. ಮನೆಯ ಶುಭ ಕಾರ್ಯಗಳಿಗೆ ನೀವು ಕೈಲಾದ ಸಹಕಾರವನ್ನು ಕೊಡಬಹುದು. ಮಂದಗತಿಯ ಕೆಲಸಕ್ಕೆ ವೇಗವನ್ನು ಹೆಚ್ಚಿಸುವಿರಿ. ನಿಮ್ಮ ಮೇಲೆ‌ ಯಾರಾದರೂ ಪ್ರಭಾವವನ್ನು ಬೀರಬಹುದು. ಕೆಲವು ಘಟನೆಗಳನ್ನು ನೀವು ಮರೆತು ಮುಂದಡಿ ಇಡಬೇಕಾದೀತು.‌ ಸಂಗಾತಿಯ ಬೆಂಬಲವನ್ನು ನಿರಾಕರಿಸುವಿರಿ. ತಪ್ಪಿಗೆ ಕ್ಷಮೆ ಕೇಳಿ ದೊಡ್ಡವರಾಗಲಿದ್ದೀರಿ.

ತುಲಾ: ಕಲಾತ್ಮಕ ವಿಚಾರದಲ್ಲಿ ಇಂದು ಹೆಚ್ಚು ಆಸಕ್ತಿಯನ್ನು ಇಟ್ಟುಕೊಳ್ಳುವಿರಿ. ನಿಮ್ಮ ನಿರ್ಧಾರವನ್ನು ಇನ್ನೊಬ್ಬರ ಮೇಲೆ‌ ಹೇರುವುದು ಬೇಡ. ಸಾಮದ ಮೂಲಕವೇ ಶತ್ರುಗಳನ್ನು ಕಡಿಮೆ‌ ಮಾಡಿಕೊಳ್ಳುವುದು ಉತ್ತಮ. ರಾಜಕೀಯ ವಲಯದಲ್ಲಿ ನಿಮ್ಮ ಮಾತು ನಡೆಯಲಿದ್ದು ಅದನ್ನು ಸದುಪಯೋಗವಾಗಿವಂತೆ ಮಾಡಿಕೊಳ್ಳಿ. ಮನೆಯ ಮೇಲೆ‌‌ ಚೋರರ ಭಯವು ಕಾಡಬಹುದು. ಕೃಷಿಯಲ್ಲಿ ಸ್ವಲ್ಪಮಟ್ಟಿಗೆ ನಷ್ಟವಾಗುವ ಸಾಧ್ಯತೆ ಇದೆ. ಅನುಭವಿಗಳ ಮಸರ್ಗದರ್ಶನವು ನಿಮಗೆ ಸಿಗಲಿದೆ. ಸಣ್ಣ ವ್ಯಾಪಾರಿಗಳಿಗೆ ಸ್ವಲ್ಪ ಲಾಭವಾಗುವುದು. ಸಂಬಂಧವು ನಿಮಗೆ ಹೊಸ ಉತ್ಸಾಹವನ್ನು ಕೊಡಬಹುದು.

ವೃಶ್ಚಿಕ: ಅಪರಿಚಿತರ ಜಾಲಕ್ಕೆ ಸಿಕ್ಕಿ ಮೋಸ ಹೋಗಬಹುದು. ನಿಮ್ಮ ಉದ್ಯಮದ ಸುಧಾರಣೆಗೆ ತುರ್ತು ಸಭೆಯನ್ನು ಮಾಡುವಿರಿ. ಹೊಸ ವಾಹನ ಖರೀದಿಯ ಪ್ರಸ್ತಾಪ ಬರಬಹುದು. ಆರ್ಥಿಕ ಬಲವನ್ನು ನೋಡಿ ಇಂದು ಮುಂದುವರಿಯಿರಿ. ಸ್ನೇಹಿತರು ನಿಮ್ಮ ಬಳಿ ಹಣದ ಸಹಾಯವನ್ನು ಕೇಳಬಹುದು. ವೃತ್ತಿಯಲ್ಲಿ ನೀವು ಹೊಸತನ್ನು ತರಲು ಯೋಚಿಸಬಹುದು. ಸ್ತ್ರೀಯರಿಂದ ನಿಮಗೆ ಬೇಕಸದ ಸಹಾಯವು ಸಿಗಲಿದೆ. ಇನ್ನೊಬ್ಬರ ಆದಾಯಕ್ಕೆ ತೊಂದರೆಯನ್ನು ಕೊಡುವುದು ಒಳ್ಳೆಯದಲ್ಲ. ಎಂದೋ ಮಾಡಿದ ಉಪಕಾರವು ನಿಮಗೆ ವರವಾಗಿ ಬರಬಹುದು. ‌ನಾಚಿಕೆಯ ಸ್ವಭಾವವು ನಿಮ್ಮ ಅವಕಾಶಗಳನ್ನು ಕಸಿದುಕೊಳ್ಳುವುದು.

ಧನುಸ್ಸು: ಧನದ‌ ಲಾಭವನ್ನು ನಿರೀಕ್ಷಿಸದೇ ಕೆಲಸವನ್ನು ಆರಂಭಿಸಿ. ನೀವು ಮಿಂಚಿನ‌ ವೇಗದಲ್ಲಿ ಮಾಡುವ ಕೆಲಸವು ಎಲ್ಲರಿಗೂ ಇಷ್ಟವಾಗುವುದು. ಮಕ್ಕಳನ್ನು ತಿದ್ದುವ ಕೆಲಸದಲ್ಲಿ ಸಮಯವು ಹೋಗುವುದು. ನಿಮ್ಮ‌ ಸ್ವಭಾವದ ದುರುಪಯೋಗವಾಗಲಿದೆ. ಇದರಿಂದ ನೀವು ವಂಚನೆಗೊಳ್ಳುವಿರಿ. ಹತ್ತಾರು ವಿಚಾರದಲ್ಲಿ ನಿಮಗೆ ಓಡುವುದು. ಗಂಭೀರವಾದ ಚಿಂತನೆಯನ್ನು ಮಾಡುವುದು ನಿಮಗೆ ಇಷ್ಟವಿಲ್ಲದ ಕೆಲಸವಾಗಲಿದೆ. ಸಮಾರಂಭದಲ್ಲಿ ಆಪ್ತರ ಸಮಾಗಮವಾಗಲಿದೆ. ಹಳೆಯ ಗೆಳತಿಯು ಸಿಗಬಹುದು. ನಿಮ್ಮ ವೈಯಕ್ತಿಕ ವಿಚಾರವನ್ನು ಇತರರಿಗೆ ತಿಳಿದುಕೊಳ್ಳುವ ಕುತೂಹಲ ಇರಲಿಕ್ಕಿದೆ.

ಮಕರ: ವಿಶ್ವಾಸಘಾತವು ನಿಮಗೆ ದುಃಖವನ್ನು ತರಿಸಬಹುದು. ಆಹಾರದ ಕೊರತೆಯಿಂದ ನಿಮಗೆ ಸಂಕಟವಾಗಲಿದೆ. ದುಡಿಮೆಯ ಬೆನ್ನೇರಿ ಸಂಬಂಧಗಳನ್ನು ಅಗೌರವದಿಂದ ಕಾಣುವ ಸ್ವಭಾವವನ್ನು ಬೆಳೆಸಿಕೊಂಡಿರುವಿರಿ. ಖಾಸಗಿ ಸಂಸ್ಥೆಯು ನಿಮಗೆ ಉನ್ನತ ಸ್ಥಾನವನ್ನು ಕೊಡಲಿದೆ. ನಿಮ್ಮ ಮತ್ತು ನೌಕರರ ನಡುವಿನ ಸಂಬಂಧವು ಹದ ತಪ್ಪಬಹುದು. ಸಣ್ಣ ವಿಚಾರಗಳೇ ಸಂಗಾತಿ ವಿಚಾರಲ್ಲಿ ವೈಮನಸ್ಯ ಉಂಟಾಗುವಂತೆ ಮಾಡುವುದು. ವಿಶೇಷ ಕೆಲಸಕ್ಕೆ ಹೊರಡುವಾಗ ಕುಲದೇವರ ಸ್ಮರಣೆಯನ್ನು ಮರೆಯುವುದು ಬೇಡ. ನೇರ ನುಡಿಯಿಂದ ಎದುರಿನವನಿಗೆ ತೊಂದರೆಯಾದೀತು.

ಕುಂಭ: ಸಂಗಾತಿಯ ಪುನರಾವರ್ತಿತ ಘಟನೆಯಿಂದ ನಿಮಗೆ ಬಹಳ ಬೇಸರವಾಗುವುದು. ಸಂಗಾತಿಯ ಮಾತು ನಿಮಗೆ ಸಿಟ್ಟನ್ನ ತರಿಸೀತು. ಯಾವುದೇ ಫಲಾಪೇಕ್ಷೆ ಇಲ್ಲದೇ ಸ್ನೇಹಿತರನ್ನು ಮಾಡಿಕೊಳ್ಳುವಿರಿ. ಇಂದಿನ ನಿಮ್ಮ ವ್ಯಾಪಾರವು ಎಂದಿಗಿಂತ ಹೆಚ್ಚು ಕಳೆಗಟ್ಟಲಿದೆ. ಹೂಡಕೆಯ ಹಣವು ನಿಮಗೆ ಸರಿಯಾಗಿ ಸಿಗಲಿದೆ. ನಿವೃತ್ತಿಯಾದವರಿಗೆ ಬರಬೇಕಾದ ಹಣವನ್ನು ಪಡೆಯಲು ತೊಂದರೆಯಾದೀತು. ನಿಮ್ಮ ನಿಯಮಗಳನ್ನು ನೀವೇ ಮುರಿದುಕೊಳ್ಳುವಿರಿ. ಮಕ್ಕಳ‌ ಮೇಲೆ ಅಶಿಸ್ತಿನ ಕಾರಣಕ್ಕೆ ಸಿಟ್ಟಾಗುವಿರಿ. ಮನೆಗೆ ಬಂದವರನ್ನು ಖಾಲಿ ಕೈಯಲ್ಲಿ ಕಳುಹಿಸಿ ಅನಂತರ ಪಶ್ಚಾತ್ತಾಪಪಡುವಿರಿ.

ಮೀನ: ಇಂದು ನಿಮಗೆ ದೇವತಾರಾಧನೆಯಲ್ಲಿ ಮನಸ್ಸಾಗುವುದು. ಸಿಟ್ಟಾಗಬೇಕಾದ ಸ್ಥಿತಿಯಲ್ಲಿಯೂ ನೀವು ಪ್ರಶಾಂತರಾಗಿರುವುದು‌ ಆಶ್ಚರ್ಯಕರ ಸಂಗತಿಯಾಗಿದೆ. ಮನೆಯ ಕೆಲಸದಲ್ಲಿ ನೀವು ಮಗ್ನರಾಗುವಿರಿ. ಉದ್ಯೋಗದ ನಿಮಿತ್ತ ನೌಕರರ ತುರ್ತು ಸಭೆಯನ್ನು ಕರೆಯಲಿದ್ದೀರಿ. ಮನೆ ಮತ್ತು ಕೆಲಸವನ್ನು ಸಮಾನವಾಗಿ ಇಟ್ಟುಕೊಳ್ಳಿ. ಕಟ್ಟಡವನ್ನು ನಿರ್ಮಾಣ ಮಾಡುವವರಿಗೆ ಹೆಚ್ಚು ಕೆಲಸವು ಇರಲಿದೆ. ಹಳೆಯ ಖಾಯಿಲೆಯಿಂದ ಬಳಲಬಹುದು. ಹಣದ ಲೆಕ್ಕಾಚಾರದಲ್ಲಿ ನಿಮಗೆ ಮೋಸವಾದುದ್ದು ತಿಳಿದುಬರುವುದು.

-ಲೋಹಿತಶರ್ಮಾ – 8762924271 (what’s app only)