Daily Horoscope: ಹಣದ ವಿಚಾರದಲ್ಲಿ ಜಾಗೃತೆ, ಮಕ್ಕಳ ವಿದ್ಯಾಭ್ಯಾಸಕ್ಕೆ ಕಷ್ಟವಾದೀತು

|

Updated on: Jun 04, 2023 | 12:02 AM

ಇಂದಿನ (2023 ಜೂನ್ 4) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

Daily Horoscope: ಹಣದ ವಿಚಾರದಲ್ಲಿ ಜಾಗೃತೆ, ಮಕ್ಕಳ ವಿದ್ಯಾಭ್ಯಾಸಕ್ಕೆ ಕಷ್ಟವಾದೀತು
ಪ್ರಾತಿನಿಧಿಕ ಚಿತ್ರ
Follow us on

ಶುಭೋದಯ ಓದುಗರೇ ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದರೆ ಇಂದಿನ (2023 ಜೂನ್ 4) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ರೋಹಿಣೀ, ಮಾಸ: ಜ್ಯೇಷ್ಠ, ಪಕ್ಷ: ಶುಕ್ಲ, ವಾರ: ಭಾನು, ತಿಥಿ: ಹುಣ್ಣಿಮೆ, ನಿತ್ಯನಕ್ಷತ್ರ: ಜ್ಯೇಷ್ಠಾ, ಯೋಗ: ಧೃತಿ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 03 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 57 ನಿಮಿಷಕ್ಕೆ, ರಾಹು ಕಾಲ 05:21 ರಿಂದ 06:58ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:30 ರಿಂದ 02:07ರ ವರೆಗೆ, ಗುಳಿಕ ಕಾಲ ಬೆಳಗ್ಗೆ 03:44 ರಿಂದ 05:21ರ ವರೆಗೆ.

ಮೇಷ: ನೀವು ನಿಮ್ಮ ಘನತೆಯನ್ನು ಬಿಟ್ಟುಕೊಡಲು ಒಪ್ಪುವುದಿಲ್ಲ. ಸಮಯಕ್ಕೆ ಸರಿಯಾಗಿ ನಿಮಗೆ ಅವಶ್ಯಕತೆ ಇರುವುದು ಬಂದು ಒದಗಬಹುದು. ಏಕಾಂತದಿಂದ ನಿಮಗೆ ನೆಮ್ಮದಿಯು ಸಿಗಬಹುದು. ಆಪ್ತರನ್ನು ನೀವು ಭೇಟಿಯಾಗಲಿದ್ದೀರಿ. ಗುಟ್ಟನ್ನು ಸಮಯ ನೋಡಿ ಹೇಳಿ. ನಿಮಗೆ ಗೊತ್ತಿಲ್ಲದೇ ಮೋಜಿನಲ್ಲಿ ಸೇರಿ ಹಣವನ್ನು ನಷ್ಟ ಮಾಡಿಕೊಳ್ಳುವಿರಿ. ಬಾರದೇ ಇರುವುದರ ಬಗ್ಗೆ ಯೋಚಿಸದೇ ಸಿಕ್ಕಿದ್ದರ ಬಗ್ಗೆ ಖುಷಿ ಪಡಿ. ಧನಾಗಮನವು ಆಗಬಹುದು. ಬೇಕಾದ ವಸ್ತುಗಳನ್ನು ಜೋಪಾನ ಮಾಡಿಕೊಳ್ಳಿ.

ವೃಷಭ: ನಿಮ್ಮನ್ನು ಇಷ್ಟಪಡುವವರ ಜೊತೆ ಹೆಚ್ಚು ಸಮಯವನ್ನು ಕಳೆಯುವಿರಿ. ಕುಟುಂಬದಲ್ಲಿ ವಾದಗಳು ಆಗಬಹುದು. ಉದ್ಯೋಗವನ್ನು ನೀವು ಕಳೆದುಕೊಳ್ಳುವ ಹಂತಕ್ಕೆ ಹೋಗಬಹುದು.‌ ಸಂಗಾತಿಯನ್ನು ನೀವು ದೂಷಿಸುವಿರಿ. ಜೀವನೋಪಾಯಕ್ಕೆ ಯಾವುದಾದರೊಂದು ವೃತ್ತಿಯನ್ನು ಆಶ್ರಯಿಸುವುದು ಉತ್ತಮ. ವಿವಾದಗಳು ಶಾಂತವಾಗಿವಂತೆ ನೋಡಿಕೊಳ್ಳಿ. ಇಲ್ಲವಾದರೆ ಅದರ ಪರಿಣಾಮವು ಭಯಂಕರವಾದೀತು. ಅಪರಿಚಿತ ವ್ಯಕ್ತಿಗಳು ನಿಮ್ಮನ್ನು ಸಂಪರ್ಕ ಮಾಡಿಯಾರು. ಎಚ್ಚರವಾಗಿರಿ.

ಮಿಥುನ: ನಿಮ್ಮ ಪ್ರಯಾಣವನ್ನು ಮುಂದೂಡಿ. ಸ್ನೇಹಿತರಿಂದ ನೀವು ದೂರವಿರುವ ಯೋಚನೆ ಮಾಡುವಿರಿ. ನಿಮಗೆ ಬೆಂಬಲವನ್ನು ಕುಟುಂಬದವರು ಕೊಡುವರು. ವ್ಯವಹಾರವನ್ನು ಶುದ್ಧವಾಗಿ ಮಾಡುವುದು ನಿಮಗೆ ಬಹಳ ಪ್ರಿಯವಾದ ಸಂಗತಿಯಾಗಲಿದೆ. ನಿಮ್ಮ ವ್ಯವಹಾರವನ್ನು ಪ್ರಶಂಸಿಸುವರು. ಅನಗತ್ಯ ಓಡಾಟದಿಂದ ನೀವು ಸಿಟ್ಟಗೊಳ್ಳಬಹುದು. ಯಾರೋ‌ ಮಾಡಿದ ತಪ್ಪಿಗೆ ನೀವು ಶಿಕ್ಷೆಯನ್ನು ಅನುಭವಿಸಬೇಕಾದೀತು. ಸ್ತ್ರೀಯರ ಜೊತೆ ಅತಿಯಾದ ಸಲುಗೆ ಬೇಡ. ‌ನಿಮ್ಮ ಕಾಯುವಿಕೆಗೆ ಹೆಚ್ಚು ಫಲವು ಸಿಗಲಿದೆ.

ಕರ್ಕ: ಎಲ್ಲರೊಂದಿಗೆ ಬೆರೆಯುವ ನಿಮ್ಮ ಸ್ವಭಾವವು ಇತರರಿಗೆ ಇಷ್ಟವಾಗದೇ ಹೋದೀತು. ನಿಮ್ಮ ಕೆಲಸವನ್ನು ನೀವೇ ಮಾಡಲು ಇಷ್ಟಪಡುವಿರಿ. ನೇರವಾದ ಮಾತು ಕೆಲವರಿಗೆ ಅಸಹ್ಯವಾದೀತು. ನಿಮ್ಮ ನುಡಿಗಳ ಮೇಲೆ ನಿಗಾ ಇರಲಿ. ಅಪರೂಪದ ಬಂಧುಗಳನ್ನು ಭೇಟಿಯಾಗುವಿರಿ. ಇದು ಸಂತೋಷವನ್ನು ನಿಮಗೂ ಅವರಿಗೂ ಕೊಡುವುದು. ಕೋಪವನ್ನು ಕಳೆದುಕೊಳ್ಳುವ ಮಾರ್ಗವನ್ನು ಕಂಡುಕೊಳ್ಳುವುದು ಉತ್ತಮ. ಆಧಿಕೃತವಾಗಿ ನಿಮ್ಮದನ್ನು ಇಟ್ಟುಕೊಳ್ಳಿ. ಇಲ್ಲವಾದರೆ ಅಧಿಕಾರವು ಬೇರೆಯದಾದೀತು. ನಿಮ್ಮನ್ನು ಕೆಲವರ ಮಾತು ಕೆರಳಿಸೀತು. ತಾಳ್ಮೆ ಬೇಕಾದೀತು.

ಸಿಂಹ: ಅನ್ಯ ಕಾರ್ಯಗಳಿಂದ ನಿಮ್ಮ ಸಮಯವು ವ್ಯರ್ಥವಾಗಿ ನಿಮ್ಮ ಕೆಲಸಕ್ಕೆ ಸಮಯದ ಅಭಾವವಾದೀತು. ಇಂದು ನೀವು ಮಾತು ಕಡಿಮೆ ಮಾಡಿದಷ್ಟೂ ನಿಮಗೆ ಅನುಕೂಲವಿದೆ. ಅವಿವಾಹಿತರು ವಿವಾಹಕ್ಕೆ ಮಾಂಗಲ್ಯ ಭಾಗ್ಯ ಬರಲಿದೆ. ಕ್ರೀಡೆಯಲ್ಲಿ ಉತ್ಸಾಹದಿಂದ ನೀವು ಭಾಗವಹಿಸುವಿರಿ. ಕೆಲಸಗಳು ನೀವಂದುಕೊಂಡ ವೇಗವನ್ನು ಪಡೆದುಕೊಳ್ಳದೇ ಹೋಗಬಹುದು. ವ್ಯಾಪಾರವು ಅಧಿಕ ಲಾಭವನ್ನು ಗಳಿಸಬಹುದು. ಸಮಯಕ್ಕೆ ಅನುಸಾರವಾಗಿ ನೀವು ಕೆಲಸಗಳನ್ನು ಮಾಡಿ. ಆಪದ್ಧನವನ್ನು ಕೂಡಿಡಿ. ವೃತ್ತಿಯನ್ನು ನೀವು ಇಷ್ಟಪಡುವಿರಿ. ಆದರೆ ಅದು ಸಂಕೀರ್ಣತೆಯಿಂದ ಕೂಡಿದ್ದು ಗೊತ್ತಾಗುತ್ತದೆ. ಕುಟುಂಬದವರ ಜೊತೆ ಕಾಲವನ್ನು ಕಳೆಯುವಿರಿ.

ಕನ್ಯಾ: ಸ್ನೇಹಿತರು ಸರಿಯಾಗಿ ಪ್ರತಿಕ್ರಯಿಸಿಲ್ಲ ಎಂಬ ಕಾರಣಕ್ಕಾಗಿ ನೀವು ಬೇಸರಗೊಳ್ಳುವಿರಿ. ನಿಮ್ಮ ಮಾತುಗಳು ಇತರರಿಗೆ ಬಹಳ ಬಾಲಿಶ ಎನಿಸಬಹುದು. ನೀವು ಇಂದು ಬದಲಾಗಲು ಯೋಚಿಸುತ್ತಿದ್ದರೆ ನಿಮ್ಮವರು ಅದನ್ನು ಬಿಟ್ಟುಕೊಡರು. ವಿದ್ಯಾರ್ಥಿಗಳು ಓದಿನ‌ಕಡೆಗೆ ಗಮನ ಕೊಡಲು ಕಷ್ಟವಾದೀತು. ಧ್ಯಾನ ಯೋಗಗಳನ್ನು ಮಾಡುವುದು ಯೋಗ್ಯವಿದೆ. ಎಂದೋ ಮಾಡಲ್ಪಟ್ಟ ಸಹಕಾರಕ್ಕೆ ಇಂದು ಫಲವು ಸಿಗಲಿದೆ. ನೀವು ಇಂದು ಆಗದಿರುವ ಕೆಲಸಗಳಿಗೆ ಬೇಸರಪಡುವುದು ಬೇಡ. ನಿಮ್ಮ ವಿವಾಹವು ದೈವದ ಇಚ್ಛೆಯಂತೆ ಆಗಿದ್ದು ಅದನ್ನು ನಂಬಿ ನಡೆಯಿರಿ.

ತುಲಾ: ಅಪರಿಚಿತರಿಂದ‌ ನೀವು ಬೈಗುಳ ತಿನ್ನಬೇಕಾಗಬಹುದು. ಇನ್ನೊಬ್ಬರಿಗೆ ಬಗ್ಗೆ ಮಾತನಾಡುವಾಗ ಪೂರ್ವಾಪರ ಆಲೋಚನೆ ಇರಲಿ. ಉದ್ಯೋಗದ ಸ್ಥಳದಿಂದ ನಿಮ್ಮನ್ನು ಹೊರ ಹಾಕಿಯಾರು. ನೀವು ಇನ್ನೊಬ್ಬರ ಜೀವನವನ್ನು ಕಂಡು ಅವರಂತೆ ಇರಲು ಬಯಸಬಹುದು. ದಾಂಪತ್ಯದಲ್ಲಿ ಕೆಲವು ಮಾರ್ಪಾಡುಗಳನ್ನು ನೀವು ಮಾಡಿಕೊಳ್ಳಲಿದ್ದೀರಿ. ವ್ಯಾಪಾರವು ಇಂದು ಚೆನ್ನಾಗಿ ಆಗಲಿದೆ. ಆಪ್ತರೊಂದಿಗೆ ಹೊಸ ಉದ್ಯೋಗವನ್ನು ಆರಂಭಿಸುವ ಆಲೋಚನೆ ಮಾಡಿಕೊಳ್ಳುವುದು ಉತ್ತಮ. ಆದರೆ ಪಾಲುದಾರಿಕೆಯನ್ನು ಮಾಡುವಾಗ ಹಲವು ಬಾರಿ ಯೋಚಿಸಿ. ರಮಣೀಯ ಸ್ಥಳಕ್ಕೆ ನೀವು ಹೋಗಲಿದ್ದೀರಿ.

ವೃಶ್ಚಿಕ: ನಿಮ್ಮ ಗುರಿಗಳು ಸ್ಪಷ್ಟವಾಗಿ ಇದ್ದರೂ ಇನ್ನೊಬ್ಬರ ಪ್ರೋತ್ಸಾಹವನ್ನು ನೀವು ಬಯಸುವಿರಿ. ಪ್ರಯಾಣವು‌ ಇಂದು ನಿಮಗೆ ಇಷ್ಟವಾಗದೇ ಹೋಗುವುದು. ಹಣದ ವಿಚಾರದಲ್ಲಿ ಕೆಲವು ವ್ಯತ್ಯಾಸಗಳು ಆಗಲಿದೆ. ನೀವು ಇಂದು ಹೆಚ್ಚು ಕೆಲಸವನ್ನೂ ಕಡಿಮೆ ಮಾತುಗಳನ್ನೂ ಆಡುವುದು ಮುಖ್ಯ. ಪ್ರಮುಖ ಜನರ ಭೇಟಿಯಿಂದ ಉದ್ಯೋಗಕ್ಕೆ ಹೊಸ ಬಲವೂ ಬರಲಿದೆ. ಕುಟುಂಬದ ಹಿರಿಯರು ನಿಮ್ಮ ಜೊತೆ ಸಮಯವನ್ನು ಕಳೆಯಲು ಇಷ್ಟಪಡುವರು. ನಿಮ್ಮ ಗೆಳತಿಯ ಜೊತೆ ಅಸಭ್ಯವಾಗಿ ನಡೆದುಕೊಂಡು ಅವರಿಂದ ದೂರವೂ ಆಗಬಹುದು. ವಾಹನ ಖರೀದಿಗೆ ನಿಮಗೆ ಸಮಯವಿದೆ. ಆತುರ ಬೇಡ.

ಧನುಸ್ಸು: ಯಾರ ಬಗ್ಗೆಯೂ ಗೊತ್ತಿಲ್ಲದೇ ಮಾತನಾಡುವುದು ಬೇಡ. ಸ್ವಾಭಿಮಾವನ್ನು ಬಿಟ್ಟು ವ್ಯವಹರಿಸಲು ಕಷ್ಟವಾದರೂ ಅನಿವಾರ್ಯವಾಗಿ ಬಿಡಬೇಕಾದೀತು.‌ ಮನೆಯ ಕೆಲಸದಲ್ಲಿ ನೀವು ನೀವಿಂದು ಮಗ್ನರಾಗಿರುವಿರಿ. ಉತ್ತಮ ಮತ್ತು ಗೊಂದಲಮಯವಾಗಿರುವ ಕೆಲವು ಘಟನೆಗಳು ಆಗಬಹುದು. ಏಕಾಗ್ರತೆಯನ್ನು ನೀವು ಭಂಗ ಮಾಡಿಕೊಳ್ಳುವುದು ಬೇಡ. ಮಕ್ಕಳ ಆರೋಗ್ಯದ ಮೇಲೆ ಗಮನವಿರುವುದು ಮುಖ್ಯ. ಅಸ್ಪಷ್ಟವಾದ ಯೋಚನೆಗಳು ನಿಮಗೆ ಕಿರಿಕಿರಿ ಉಂಟುಮಾಡಿಯಾವು. ಸಾಮಾಜಿಕ ಕಾರ್ಯದಲ್ಲಿ ಹಿನ್ನಡೆಯಾಗಬಹುದು.

ಮಕರ: ನಿಮ್ಮವರೇ ಆದರೂ ಅವರ ಜೊತೆ ಹೆಚ್ಚಿನ ವ್ಯವಹಾರವು ಬೇಡಿ. ಹಣದ ವಿಚಾರವು ಯಾರನ್ನೂ ಬಿಡದು. ನಿಮ್ಮ ಸಹೋದರನಿಂದ ಹೊಸ ಉದ್ಯೋಗಕ್ಕೆ ಸಂಬಂಧಿಸಿದ ಮಾಹಿತಿಗಳು ಸಿಗಲಿವೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಹಣ ಹೊಂದಿಸುವುದು ಕಷ್ಟವಾದೀತು. ಇಂದು ನಿಮ್ಮ ಸಾಮಾರ್ಥ್ಯವನ್ನು ವ್ಯಕ್ತಪಡಿಸಲು ಅವಕಾಶವನ್ನು ಹುಡುಕುತ್ತಿದ್ದರೆ ನಿಮಗೆ ಅದು ಒಳ್ಳೆಯ ಕಾಲ. ಹಠದ ಸ್ವಭಾವವನ್ನು ಕಡಿಮೆ‌ಮಾಡಿಕೊಳ್ಳಬೇಕಾಗಬಹುದು. ಇನ್ನೊಬ್ಬರ ರಹಸ್ಯ ವಿಚಾರಗಳನ್ನು ನೀವು ಕೇಳಲು ಆಸಕ್ತರಾಗುವಿರಿ.

ಕುಂಭ: ನಿಮ್ಮ ಮನಸ್ಸಿಗೆ ಬಂದ ಘಟನೆಗಳು ಹಾಗೆಯೇ ನಡೆಯುತ್ತದೆ. ಇದು ನಿಮಗೆ ಆಶ್ಚರ್ಯವನ್ನು ನೀಡುವುದು. ಆತುರದ ತೀರ್ಮಾನ ಹಾಗೂ ಒತ್ತಡಕ್ಕೆ ಸಿಲಿಕದೇ ಜಾಗರೂಕರಾಗುರಿ. ಇಂದು ನಿಮ್ಮ ಸಾಲವು ಮರಳಿಬರಹುದು. ಸ್ನೇಹಿತರು ತಮ್ಮ ಜೊತೆ ಕರೆದುಕೊಂಡು ಹೋಗಬಹುದು. ಹಣವು ವ್ಯರ್ಥವಾಗುವದು ನಿಮ್ಮದಾಗಿರುತ್ತದೆ. ಆಯಾಸವಾಗಿ ವಿಶ್ರಾಂತಿಯನ್ನು ಪಡೆಯಬೇಕಾಗಬಹುದು. ನಿಮ್ಮ ವಿರುದ್ಧ ಸಲ್ಲದ ಮಾತುಗಳನ್ನು ಕೇಳಬೇಕಾಗಬಹುದು. ಎಲ್ಲವನ್ನೂ ನೀವು ಸಮರ್ಥಿಸಿಕೊಳ್ಳುವಿರಿ. ದೈನಂದಿನ ಕೆಲಸಗಳು ನಿಮಗೆ ಭಾರವೆನಿಸಬಹುದು.‌ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವ ರೀತಿ ಬೇರೆಯಾದೀತು.

ಮೀನ: ಇಷ್ಟು ದಿನ ನಿಮ್ಮದೂ ಎಂದ ಕೊಂಡ ವಸ್ತುವು ಇನ್ನೊಬ್ಬರ ಸ್ವತ್ತಾಗುವ ಸಾಧ್ಯತೆ ಇದೆ. ನೀವು ಮಾಡಬೇಕೆಂದುಕೊಂಡ ಕೆಲಸವು ವಿಪರೀತ ಪರಿಣಾಮವನ್ನು ಬೀರೀತು. ಸಾಲಬಾಧೆಯು ನಿಮ್ಮನ್ನು ಕೆಟ್ಟ ಕೆಲಸಕ್ಕೆ ಪ್ರೇರಿಸಬಹುದು. ಸ್ನೇಹಿತರು ನಿಮ್ಮ ಜೊತೆಗೇ ಇದ್ದು ನಿಮ್ಮ ಎಲ್ಲ ವಿಚಾರದಲ್ಲಿ ಜೊತೆಯಾಗಬಹುದು. ಉದ್ವಿಗ್ನಕ್ಕೆ ಸಿಲುಕದೇ ಸಮಾಧಾನದಿಂದ ಇರಬೇಕಾದ ಅವಶ್ಯಕತೆ ಇರುವುದು. ವ್ಯಸನಕ್ಕೆ ತುತ್ತಾಗಿ ಆರೋಗ್ಯವನ್ನು ಕಳೆದುಕೊಳ್ಳುವಿರಿ. ತೈಲ‌ ಮುಂತಾದ ವ್ಯಾಪರದಲ್ಲಿ ಲಾಭವಾಗಲಿದೆ. ವಿದ್ಯಾರ್ಥಿಗಳ ಹೆಚ್ಚಿನ ಪರಿಶ್ರಮವು ಗುರಿಯನ್ನು ಸಾಧಿಸಲು ಸಾಧ್ಯ.

ಲೋಹಿತಶರ್ಮಾ – 8762924271 (what’s app only)