ಶುಭೋದಯ ಓದುಗರೇ. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದ್ರೆ ಇಂದಿನ (2023 ಮೇ 4) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ : ಭರಣೀ, ಮಾಸ : ವೈಶಾಖ, ಪಕ್ಷ : ಶುಕ್ಲ, ವಾರ : ಗುರು, ತಿಥಿ : ಚತುರ್ದಶೀ, ನಿತ್ಯನಕ್ಷತ್ರ : ಚಿತ್ರಾ, ಯೋಗ : ವಜ್ರ, ಕರಣ : ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 09 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 49 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 02:04 ರಿಂದ 03:39ರ ವರೆಗೆ, ಯಮಘಂಡ ಕಾಲ 06:10 ರಿಂದ 07:45ರ ವರೆಗೆ, ಗುಳಿಕ ಕಾಲ 09:20 ರಿಂದ 10:54ರ ವರೆಗೆ.
ಮೇಷ: ಆರ್ಥಿಕವಾದ ತೊಂದರೆಯಲ್ಲಿ ಇರುವಾಗ ಆಕಸ್ಮಾತ್ ಸಂಪತ್ತು ನಿಮ್ಮ ಕೈ ಸೇರಬಹುದು. ಎಲ್ಲಿಗಾದರೂ ದೂರ ಹೋಗಲು ಮನಸ್ಸು ಮಾಡುವಿರಿ. ತಾಯಿಯ ಕಡೆಯಿಂದ ನಿಮಗೆ ಸಹಾಯ ಸಿಗಬಹುದು. ಧಾರ್ಮಿಕ ಕಾರ್ಯದಲ್ಲಿ ನೀವಿಂದು ತೊಡಗಿಕೊಳ್ಳಬಹುದು. ನಿಮಗೆ ಬರಬೇಕಾದ ಆಸ್ತಿಯ ಬಗ್ಗೆ ಮಾತು ನಡೆಯುವುದು. ನೀವು ಎಣಿಸಿದಂತೆ ಆಯಿತು ಎಂಬ ಖುಷಿ ಇರಲಿದೆ. ಹಿರಿಯರಿಂದ ಆಶೀರ್ವಾದ ನಿಮಗೆ ಸಿಗಬಹುದು. ಆರೋಗ್ಯದ ಮೇಲೆ ಕಾಳಜಿ ಇರಲಿ.
ವೃಷಭ: ಬಾಕಿ ಇರುವ ಕೆಲಸಗಳನ್ನು ಇಂದು ಮಾಡಿ ಮುಗಿಸುವಿರಿ. ಓದಿನಲ್ಲಿ ಆಸಕ್ತಿಯು ಕಡಿಮೆಯಾದೀತು. ಹಾಳಾದ ವಸ್ತುವಿನ ರಿಪೈರಿಗೆ ಹಣವನ್ನು ವ್ಯಯಿಸಬಹುದು. ಅಪರೂಪದ ಸ್ನೇಹಿತನ ಜೊತೆ ಹರಟೆ ಹೊಡೆಯಬಹುದು. ತಂದೆಯ ಆರೋಗ್ಯವು ಹದ ತಪ್ಪಬಹುದು. ಹಿತಶತ್ರುಗಳ ಭೀತಿಯು ಇರಲಿದೆ. ಕಾನೂನಿನ ಸಮರದಲ್ಲಿ ಜಯದ ನಿರೀಕ್ಷೆಯಲ್ಲಿ ಇರುವಿರಿ. ದತ್ತಾತ್ರೇಯರ ಧ್ಯಾನವನ್ನು ಮಾಡಿ. ದೈಹಿಕ ಶ್ರಮವು ಇಂದು ಅಧಿಕವಾಗಬಹುದು.
ಮಿಥುನ: ನಿಮ್ಮನ್ನು ನಿಮ್ಮಿಂದ ಉಪಕಾರ ಪಡೆದವರು ಗೌರವಿಸುವರು. ನೀವು ಇಷ್ಟಪಡುವ ಜನರು ನಿಮಗೆ ಸಹಾಯ ಮಾಡುವರು. ಸಾಲವನ್ನು ಮಾಡಲು ಹಿಂಜರಿದರೂ ಅನಿವಾರ್ಯವಾಗಿ ಮಾಡಬೇಕಾಗಬಹುದು. ನಿದ್ರೆಯು ಇಲ್ಲದೇ ಕಿರಿಕಿರಿಯನ್ನು ಅನುಭವಿಸಬಹುದು. ಬೇಕಾದ ವಸ್ತುಗಳ ಖರೀದಿಯನ್ನು ನೀವಿಂದು ಮಾಡಲಿದ್ದೀರಿ. ಮಕ್ಕಳು ನಿಮ್ಮಿಂದ ಪ್ರೀತಿಯನ್ನು ಬಯಸಿಯಾರು. ಅವರು ಕೇಳಿದ ವಸ್ತುಗಳನ್ನು ಇಲ್ಲ ಎನ್ನದೇ ಕೊಡಿಸಿ. ಆಯುಧಗಳಿಂದ ಅಥಬಾ ಯಂತ್ರಗಳಿಂದ ದೇಹಕ್ಕೆ ನೋವಾದೀತು. ಜಾಗರೂಕರಾಗಿರಿ.
ಕಟಕ: ಸಾಮಾಜಿಕ ಕಾರ್ಯಗಳಲ್ಲಿ ತೊಡಗಿದ್ದರೆ ನಿಮಗೆ ಇಂದು ಹಿನ್ನಡೆಯಾಗಬಹುದು. ವಿದ್ಯಾರ್ಥಿಗಳು ಸಂತೋಷದಿಂದ ಈ ದಿನವನ್ನು ಕಳೆಯುವರು. ನಿಮಗೆ ಯಾರಾದರೂ ಕೆಟ್ಟವರು ಎಂದು ಅನಿಸಿದರೆ ಅವರ ಸಹವಾಸದಿಂದ ದೂರವಿರಿ. ಇಲ್ಲವಾದರೆ ಅಪತ್ತು ತಂದುಕೊಳ್ಳಬಹುದು. ನಿಮ್ಮ ಕೆಲಸಗಳಲ್ಲಿ ನೀವು ನಿಷ್ಠೆಯಿಂದ ತೊಡಗಿಕೊಳ್ಳಿ. ಅತಿಯಾದ ಆಯಾಸವೂ ಆದೀತು. ತಂದೆಯ ಆರೋಗ್ಯವೂ ದೃಢವಾಗುವುದು. ಆಕಸ್ಮಿಕವಾದ ಶುಭವಾರ್ತೆ ಬರಬಹುದು. ನಿಂತ ಕೆಲಸಗಳು ಪುನಃ ಆರಂಭ ಮಾಡಲು ಮನಸ್ಸು ಮಾಡುವಿರಿ. ಸುಬ್ರಹ್ಮಣ್ಯನ ಸ್ಮರಣೆಯನ್ನು ಮಾಡಿ.
ಸಿಂಹ: ಕಂಡಿದ್ದನ್ನು ಕಂಡಂತೆ ಹೇಳುವವರಾದರೂ ತಾಳ್ಮೆ ಇಟ್ಟುಕೊಳ್ಳುವು ಒಳ್ಳೆಯದು. ಕಂಡಿದ್ದು ಮಾತ್ರ ಸತ್ಯವೆನ್ನಲು ಬಾರದು. ಉದ್ಯೋಗದ ನಿಮಿತ್ತ ದೂರ ಇದ್ದವರಿಗೆ ತೊಂದರೆಗಳು ಬರಬಹುದು. ನಿಮ್ಮ ತಿಳಿವಳಿಕೆಯ ಹಂತವು ಗೊತ್ತಾದೀತು. ನಿಮ್ಮನ್ನು ಗುಂಪಿನಿಂದ ಹೊರಗಿಡುವ ಯೋಚನೆಯನ್ನು ಮಾಡಿಯಾರು. ನಿಮಗೆ ಸಿಕ್ಕಷ್ಟರಲ್ಲಿಯೇ ಸುಖವನ್ನು ಅನುಭವಿಸಿ. ಮೃಷ್ಟಾನ್ನ ಭೋಜನಕ್ಕೆ ತೆರಳುವಿರಿ. ದೂರ ಪ್ರಯಾಣಕ್ಕೆ ಹೋಗಿದ್ದರೆ ತೊಂದರೆಯಾಗಬಹುದು. ಅಪರಿಚರಿಂದ ಮೋಸ ಹೋಗುವ ಸಾಧ್ಯತೆ ಇದೆ.
ಕನ್ಯಾ: ನಿಮಗೆ ಅನ್ನಿಸಿದ್ದನ್ನು ಮಾಡುವುದಾದರೂ ಹಿರಿಯರ ಒಪ್ಪಿಗೆ ಪಡೆಯಿರಿ. ಕೃಷಿಗೆ ಸಂಬಂಧಪಟ್ಟ ಚಟುವಟಿಯಲ್ಲಿ ಭಾಗವಹಿಸುವಿರಿ. ದಿನಚರಿಯಲ್ಲಿ ಬದಲಾವಣೆಯನ್ನು ಬಯಸುವಿರಿ. ಭವಿಷ್ಯದ ಕುರಿತು ನಿಮಗಿರುವ ಕಲ್ಪನೆಯನ್ನು ಪತ್ನಿಯ ಜೊತೆ ಹಂಚಿಕೊಳ್ಳುವಿರಿ. ನಿಮ್ಮವರ ಮೇಲೆ ಅನುಮಾನ ಬೇಡ. ನಂಬಿಕೆಯಿಂದಲೇ ಮಾತನಾಡಿ. ತಪ್ಪು ಮಾಡುವವನೂ ಸುಮ್ಮನಾದಾನು. ಮಗಳ ವಿವಾಹವನ್ನು ಮುಗಿಸಿ ಸ್ವಲ್ಪ ಭಾರವನ್ನು ಕಳೆದುಕೊಂಡಂತೆ ಅನ್ನಿಸಬಹುದು. ಪತಿಯನ್ನು ಪ್ರೀತಿಯ ಮಾತುಗಳಿಂದ ಓಲೈಸಿಕೊಳ್ಳುವಿರಿ.
ತುಲಾ: ಧಾರ್ಮಿಕ ಕಾರ್ಯಗಳನ್ನು ಮಾಡಲು ಮನಸ್ಸಾಗಲಿದೆ. ಅಪರಿಚಿತ ಕರೆಗೆ ನೀವು ಸ್ಪಂದಿಸಬೇಕಾಗಿಲ್ಲ. ಹಳೆಯ ರೋಗಕ್ಕೆ ಔಷಧೀಯು ಸಿಗಬಹುದು. ನಿಮ್ಮ ಇಷ್ಟದವರನ್ನು ನೀವು ಭೇಟಿಯಾಗಲಿದ್ದೀರಿ. ಅಶಿಸ್ತಿನ ವಿಚಾರಕ್ಕೆ ಕೋಪಗೊಳ್ಳುವಿರಿ. ಸ್ವಂತ ಉದ್ಯಮವನ್ನು ನಡೆಸುತ್ತಿದ್ದರೆ ಸರ್ಕಾರದಿಂದ ಒತ್ತಡವು ಬರಬಹುದು. ವೈದ್ಯರನ್ನು ಭೇಟಿ ಮಾಡಿ ನಿಮಗೆ ಆಗುತ್ತಿರುವ ನಿಮ್ಮ ಮೇಲೆ ತಪ್ಪು ತಿಳಿವಳಿಕೆಯು ಬರಬಹುದು. ಆಪ್ತರ ಜೊತೆ ದೂರದ ಊರಿಗೆ ಪ್ರಯಾಣ ಮಾಡುವ ಸಾಧ್ಯತೆ ಇದೆ. ವಿವಾಹ ಸಮಾರಂಭಗಳಿಗೆ ಹೋಗಲಿದ್ದೀರಿ. ಅತಿಯಾದ ನೀರನ ಪ್ರದೇಶದಲ್ಲಿ ಜಾಗರೂಕರಾಗಿರಿ.
ವೃಶ್ಚಿಕ: ಎಲ್ಲ ಕೆಲಸಗಳನ್ನೂ ನೀವು ಒಬ್ಬರೇ ಮಾಡಬೇಕು ಎನ್ನುವ ನಿರ್ಧಾರವನ್ನು ಮಾಡಿಕೊಂಡು ಕೆಲಸಗಳು ಅಪೂರ್ಣವಾಗಲಿದೆ. ವಸ್ತ್ರಗಳನ್ನು ಮಾರಾಟ ಮಾಡುವವರು ನೀವು ಆಗಿದ್ದರೆ ಅಲ್ಪ ಲಾಭವನ್ನೂ ಪಡೆಯುವಿರಿ. ಉದ್ಯೋಗದಲ್ಲಿ ನಿಮ್ಮ ಸಮೂಹದ ಜೊತೆ ಕಲಹ ಮಾಡಿಕೊಳ್ಳುವಿರಿ. ವಾಹನ ಚಲಿಸುವಾಗ ಎಚ್ಚರಿಕೆ ಇರಲಿ. ಅಪಘಾತವಾಗುವ ಸಾಧ್ಯತೆ ಇದೆ. ಕಲೆಗಳನ್ನು ಅಭ್ಯಾಸ ಮಾಡುತ್ತಿದ್ದರೆ ಇಂದು ನಿಮಗೆ ಅದು ಸಾಕು ಎನಿಸಬಹುದು. ಒಂದೇ ರೀತೀಯ ಕೆಲಸದಿಂದ ಬೇಸರವಾಗಿ ಸ್ವಲ್ಪ ವಿರಾಮವನ್ನು ತೆಗೆದುಕೊಂಡು ಸುತ್ತಾಟ ನಡೆಸುವಿರಿ. ಲಕ್ಷ್ಮೀನಾರಾಯಣರ ಸ್ತೋತ್ರವನ್ನು ಮಾಡಿ. ಬರುವ ಆಪತ್ತು ಕಡಿಮೆಯಾದೀತು.
ಧನು: ನೀವು ಇಂದು ನಿಮ್ಮ ಸ್ಥಿತಿಯನ್ನು ನೋಡಿ ಪಶ್ಚಾತ್ತಾಪ ಪಡಬೇಕಿಲ್ಲ. ಸಮಯವನ್ನು ನಿರೀಕ್ಷಿಸಿ. ಗಾಳಿಯ ಹೊಡೆತಕ್ಕೆ ಸಿಗುವ ಸಣ್ಣ ಗಿಡವೂ ಗಾಳಿಯನ್ನು ಎದುರಿಸುವ, ಸಾವಿರಾರು ಜನರಿಗೆ ಆಶ್ರಯವಾಗುವ ಹೆಮ್ಮರವಾಗಿಯೇ ಬೆಳೆಯುತ್ತದೆ. ಧಾರ್ಮಿಕ ಆಚರಣೆಯಲ್ಲಿ ಶ್ರದ್ಧೆ ಇರಲಿದೆ. ನೆಮ್ಮದಿಯನ್ನು ಒಡೆಯಲು ದೇವಾಲಯಕ್ಕೆ ಹೋಗಿ ಕುಳಿತುಕೊಳ್ಳಿ. ಮನಸ್ಸಿಗೆ ಸಮಾಧಾನವಾದೀತು. ವಿವಾಹ ನಿಶ್ಚಯವಾಗಿದ್ದು ಕಾರಣಾಂತರಗಳಿಂದ ರದ್ದಾಗಬಹುದು. ಪಿತ್ರಾರ್ಜಿತ ಆಸ್ತಿಯನ್ನು ಪಡೆಯಲು ಯಾರಾದರೂ ಕುಮ್ಮಕ್ಕು ಕೊಡಬಹುದು. ಶತ್ರುಗಳು ಮಿತ್ರರಾಗಲಿದ್ದಾರೆ.
ಮಕರ: ಬೆಂಕಿಯ ಕಿಡಿ ಸಣ್ಣದೇ ಆದರೂ ಒಣಗಿಸ ವಸ್ತುವಿನ ಮೇಲೆ ಬಿದ್ದರೆ ಪ್ರಜ್ವಲಿಸುವುದಲ್ಲವೆ? ಕಲಹವು ಸಣ್ಣದೇ ಆಗಿರಬಹುದು ಆ ಸಮಯಕ್ಕೆ ಬಿರುಕು ಬರುವಷ್ಟು ಸಾಕು. ಮಾತಿನ ಮೇಲೆ ಎಚ್ಚರವಿರಲಿ. ಯಾರಾದರೂ ನಿಮ್ಮ ಬಳಿ ಇರುವ ವಸ್ತುವನ್ನು ಕೇಳಬಂದರೆ ಇಲ್ಲ ಎನಬೇಡಿ. ಇರುವುದನ್ನು ಕೊಟ್ಟು ಕಳುಹಿಸಿ. ಮಹಿಳೆಯರು ತಮ್ಮದೇ ಆದ ಉದ್ಯೋಗವನ್ನು ನಡೆಸಲು ಚಿಂತಿಸಬಹುದು. ದೂರದ ಸಂಬಂಧಿಗಳ ಮನೆಯಲ್ಲಿ ಇಂದು ವಾಸಮಾಡುವಿರಿ. ಬೆನ್ನು ನೋವು ಉಂಟಾಗಬಹುದು. ಸೂಕ್ತ ಕ್ರಮಗಳನ್ನು ಮಾಡಿಕೊಳ್ಳಿ. ಕುಲದೇವತೆಯ ಆರಾಧನೆಯನ್ನು ಮಾಡಿ ಭಕ್ತಿಯಿಂದ ಮಾಡಿ.
ಕುಂಭ: ಕಛೇರಿಯ ಕೆಲಸದಲ್ಲಿ ತೊಡಗಿಕೊಂಡು ವೈಯಕ್ತಿಕ ಕೆಲಸವು ಮರೆತುಹೋದೀತು. ಇನ್ನೊಬ್ಬರನ್ನು ಕಂಡು ಅಸೂಯೆಪಡುವಿರಿ. ಶ್ರಮವಹಿಸಿದರೂ ನಿರೀಕ್ಷಿತ ಸಂಪತ್ತು ಸಿಗದೆ ಚಿಂತೆಗೆ ಒಳಗಾಗುವಿರಿ. ಅಧಿಕಾರಿವರ್ಗದಿಂದ ನಿಮ್ಮ ಮೇಲೆ ಒತ್ತಡ ಬರಬಹುದು. ನಿಮ್ಮ ಜನರು ಕಡೆಗಣಿಸುವ ಜನರೆದು ನೀವು ಎದ್ದು ನಿಲ್ಲಬೇಕು ಎನ್ನುವ ಹಠ ಇರಲಿದೆ. ಯಾವ ಕೆಲಸವು ಮುಕ್ತಾಯವಾಗದೇ ಅಸಮಾಧಾನವು ಇರಲಿದೆ. ಆಗಬೇಕಾದುದು ಆಗುತ್ತದೆ ಎಂದು ಕೊಂಡು ನಿಮ್ಮ ಕರ್ತವ್ಯವನ್ನು ಮಡುವಿರಿ. ಸಾಡೇಸಾಥ್ ಶನಿಯು ನಿಮ್ಮ ರಾಶಿಯಲ್ಲಿಯೇ ಇರುವುದನ್ನು ನೀವು ಗಮನದಲ್ಲಿ ಇಟ್ಟುಕೊಳ್ಳಿ.
ಮೀನ: ಭೂಮಿಯ ವ್ಯವಹಾರವನ್ನು ಒಬ್ಬರೇ ಮಾಡಬೇಡಿ. ಕುಟುಂಬದವರ ಜೊತೆ ಚರ್ಚಿಸಿ. ಸ್ಥಳದ ಕುರಿತೂ ಮಾಹಿತಿಯನ್ನು ಸಂಗ್ರಹಿಸಿ. ಮನೋರಂಜನೆಯ ಕಾರ್ಯದಲ್ಲಿ ತೊಡಗುವಿರಿ. ಕೆಲಸವನ್ನು ಕಳೆದುಕೊಂಡಿದ್ದರೆ ಸ್ನೇಹಿತರಿಂದ ಸಹಾಯ ಪಡೆಯುವಿರಿ. ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ. ಹೊಸತನ್ನು ಕಲಿಯಬೇಕು ಎನ್ನುವ ಬಯಕೆ ಇರಲಿದೆ. ಉದ್ಯೋಗದ ನಿಮಿತ್ತ ಮನೆಯಿಂದ ದೂರವಿರಬೇಕಾಗುದು. ಪತ್ನಿಗೆ ಸಹಾಯ ಮಾಡಲಿದ್ದೀರಿ. ಮಿತ್ರರರನ್ನು ದ್ವೇಷಿಸುವ ಸನ್ನಿವೇಶವು ಎದುರಾಗಬಹುದು. ಗಣಪತಿಗೆ ಪ್ರಿಯವಾದ ದೂರ್ವಾಪತ್ರವನ್ನು ಸಮರ್ಪಿಸಿ.
ಲೋಹಿತಶರ್ಮಾ 8762924271 (what’s app only)