ಶುಭೋದಯ ಓದುಗರೇ ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದರೆ ಇಂದಿನ (2023 ಜೂನ್ 5) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ರೋಹಿಣೀ, ಮಾಸ: ಜ್ಯೇಷ್ಠ, ಪಕ್ಷ: ಶುಕ್ಲ, ವಾರ: ಸೋಮ, ತಿಥಿ: ಪ್ರತಿಪತ್, ನಿತ್ಯನಕ್ಷತ್ರ: ಮೂಲಾ, ಯೋಗ: ಸಾಧ್ಯ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 03 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 57 ನಿಮಿಷಕ್ಕೆ, ರಾಹು ಕಾಲ 07:41 ರಿಂದ 09:17ರ ವರೆಗೆ, ಯಮಘಂಡ ಕಾಲ 10:54 ರಿಂದ 12:31ರ ವರೆಗೆ, ಗುಳಿಕ ಕಾಲ 02:08 ರಿಂದ 03:44ರ ವರೆಗೆ.
ಮೇಷ: ದೈವಭಕ್ತಿಯ ಕೊರತೆ ಹೆಚ್ಚು ಇರಲಿದೆ. ನಿಮ್ಮ ನಡತೆಯನ್ನು ಬದಲಾಯಿಸಿಕೊಳ್ಳುವುದು ಉಚಿತ. ಮನ ಬಂದಂತೆ ವರ್ತನೆಯನ್ನು ನಿಲ್ಲಿಸಿ. ನಿಮ್ಮವರು ನಿಮಗೆ ಹತ್ತಿರವಾಗಲು ಅನೇಕ ಕಾರಣಗಳು ಇರಬಹುದು. ಈ ವಿಚಾರದಲ್ಲಿ ನೀವು ಅಸಹಾಯಕರಾಗುವುದು ಯೋಗ್ಯವಿದೆ. ಸಂಗಾತಿಯನ್ನು ಹೆಚ್ಚು ಪ್ರೀತಿಸುವ ಅವಕಾಶ ಸಿಗಬಹುದು. ಆಕೆಗೆ ಬೇಕಾದ ವಸ್ತುಗಳನ್ನು ನೀವು ತಂದುಕೊಡುವಿರಿ. ನಿಮ್ಮ ನಡುವೆ ಸಂತೋಷದ ಬಾಂಧವ್ಯ ಇನ್ನಷ್ಟು ಬಿಗಿಯಾಗುವುದು. ಗುರುಚರಿತ್ರೆಯನ್ನು ಪಠಿಸಿ.
ವೃಷಭ: ಸಮಾರಂಭಗಳಿಗೆ ತೆರಳಲು ನಿಮಗೆ ಆಸಕ್ತಿ ಇರುವುದಿಲ್ಲ. ಯಂತ್ರೋಪಕರಣಗಳಿಗೆ ನೀವು ಧನವನ್ನು ನೀಡಬೇಕಾದೀತು. ಸಂಗಾತಿಯ ಮಾತನ್ನು ಕೇಳುವ ವ್ಯವಧಾನವು ಇಂದು ಕಡಿಮೆ ಇರುವುದು. ಸಾಮಾನ್ಯವಾದ ಕೆಲಸವನ್ನು ಮಾಡಲೂ ಇಂದು ಜಾಡ್ಯ ಬರಬಹುದು. ನಿಮ್ಮ ವಸ್ತುಗಳು ಮರಳಿ ಬಾರದೇ ಇರಬಹುದು. ಮಂದಗತಿಯ ನಿಮ್ಮ ಕೆಲಸಕ್ಕೆ ಸಮಯವು ಸಾಲದೆಂದು ಅನ್ನಿಸಲಿದೆ. ಬೇಸರವನ್ನು ನೀವು ನುಂಗಿಕೊಳ್ಳುವುದು ಅಭ್ಯಾಸವಾದ ಸಂಗತಿಯಾಗಿದೆ. ಸಣ್ಣ ವಿಚಾರಗಳು ನಿಮ್ಮನ್ನು ವಿಚಲಿತಗೊಳಿಸಲಾರವು.
ಮಿಥುನ: ನಿಮ್ಮದೇ ಹತ್ತಾರು ಕೆಲಸಗಳು ಇದ್ದಿರುವುದು. ಅದಕ್ಕೆ ಇನ್ನೊಂದಿಷ್ಟು ಹೊಸ ಕೆಲಸವು ಬಂದು ಸೇರುವುದು. ನಿಮ್ಮ ಶಿಸ್ತನ್ನು ಪಾಲಿಸಲಾಗದೇ ಸಹೋದ್ಯೋಗಿಗಳು ಗೊಣಗುವರು. ಕುಟುಂಬವನ್ನು ನಿಭಾಯಿಸುವ ಸಾಮರ್ಥ್ಯವನ್ನು ನೀವು ಬೆಳಸಿಕೊಂಡಿದ್ದೀರಿ. ಮಕ್ಕಳ ವಿಷಯದಲ್ಲಿ ಹೆಚ್ಚು ಕಾಳಜಿಯನ್ನು ತೋರಿಸುವಿರಿ. ವಿದೇಶಿ ಉದ್ಯೋಗದಲ್ಲಿ ಇದ್ದರೆ ನಿಮಗೆ ಹೆಚ್ಚಿನ ಲಾಭವು ಇರಲಿದೆ. ನಿಮ್ಮ ನಡೆಯನ್ನು ಆಡಿಕೊಳ್ಳುವುದು ನಿಮ್ಮವರಿಗೆ ಸಹಜವಾಗಿರುತ್ತದೆ. ಕಿವಿಗೆ ಸಂಬಂಧಿಸಿದ ರೋಗವು ಬರಬಹುದು. ತಾಯಿಯಿಂದ ಹಿತವಚನಗಳು ನಿಮಗೆ ಬರಬಹುದು. ಯಾವುದನ್ನೂ ಗಂಭೀರವಾಗಿ ತೆಗೆದುಕೊಳ್ಳುವ ಅವಶ್ಯಕತೆ ಇರುವುದಿಲ್ಲ. ಆದಿತ್ಯಹೃದಯ ಸ್ತೋತ್ರವು ನಿಮ್ಮ ಅನಾರೋಗ್ಯವನ್ನು ಕಡಿಮೆ ಮಾಡೀತು.
ಕಟಕ: ನಿಮ್ಮ ತಿಳಿವಳಿಕೆಯ ಮಟ್ಟವು ಇತರರಿಗೆ ತಿಳಿಯಲಿದೆ. ನಿಮ್ಮ ಬಹುದಿನದ ನಿರೀಕ್ಷೆ ಇಂದು ಸಾಕಾರಗೊಳ್ಳಬಹುದು. ನಕಾರಾತ್ಮಕ ಚಿಂತನೆಯನ್ನು ಮಾಡಿ ಅವಕಾಶಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ನಿಮಗೆ ಇಂದು ಅಪರಿಚಿತರಿಂದ ಅಪಮಾನವಾಗಬಹುದು. ಇದರಿಂದ ಸಿಟ್ಟುಗೊಂಡು ಇನ್ನೊಬ್ಬರ ಮೇಲೆ ತೀರಿಸುವಿರಿ. ಬೆನ್ನು ನೀವಿಗೆ ಚಿಕಿತ್ಸೆಯ ಅವಶ್ಯಕತೆ ಬರಬಹುದು. ಖಾಸಗೀ ಉದ್ಯೋಗಿಗಳಿಗೆ ವೇತನ ಹೆಚ್ಚಳಕ್ಕೆ ನಿಮ್ಮನ್ನು ಹಾಗೂ ನಿಮ್ಮ ಕಾರ್ಯವನ್ನೂ ವೀಕ್ಷಿಸಬಹುದು. ನಿಮ್ಮ ನಿರೀಕ್ಷೆಗಳು ಫಲಿಸಲಿಲ್ಲ ಎಂದು ಬೇಸರವಾಗಬಹುದು. ವಿದ್ಯಾರ್ಥಿಗಳು ಪ್ರೋತ್ಸಾಹದ ಕೊರತೆಯಿಂದ ಹಿಂದೆ ಉಳಿದಾರು.
ಸಿಂಹ: ಕಷ್ಟವು ನಿಮ್ಮನ್ನು ಒಂದರಮೇಲೊಂದು ಬಂದು ಕಾಡಿದರೂ ನಿಮ್ಮ ಧೈರ್ಯವು ಕುಗ್ಗದು. ಹೊಸ ಕೆಲಸವನ್ನು ನೀವು ಆರಂಭಿಸುವ ಹುನ್ನಾರವು ಒಳ್ಳೆಯದೇ. ಕಾಲ, ದೇಶವನ್ನು ಗಮನಿಸಿಕೊಂಡು ಮುಂದುವರಿಯುವುದು ಉತ್ತಮ. ನಿಮಗೆ ಹಣದ ಚಿಂತೆ ಇರಲಿದ್ದು ಹೊಂದಿಸಿಕೊಳ್ಳಲು ಬೇಕಾದ ಕ್ರಮವನ್ನು ಕೈಗೊಳ್ಳುವಿರಿ. ನಿಮ್ಮ ದೌರ್ಬಲ್ಯಗಳನ್ನು ನೀವು ಇಂದು ಅವಲೋಕನ ಮಾಡಿಕೊಳ್ಳಬಹುದು. ಸಂದರ್ಭಕ್ಕೆ ಯೋಗ್ಯವಾದ ಮಾತುಗಳನ್ನು ನೀವಾಡಿ. ನಿಮ್ಮ ಕೆಲಸವನ್ನು ಮುಗಿಸದೇ ಇದ್ದುದಕ್ಕೆ ಕಾರಣವನ್ನು ಹುಡುಕಬೇಡಿ.
ಕನ್ಯಾ: ನಿಮಗೆ ಸಮಾಜಮುಖೀ ಕಾರ್ಯವನ್ನು ಮಾಡಲು ಉತ್ಸಾಹವಿದ್ದು ನಿಮಗೆ ಮಾರ್ಗದರ್ಶನದ ಕೊರತೆ ಕಾಣಬಹುದು. ಕಛೇರಿಯ ಒತ್ತಡದಲ್ಲಿ ನಿಮಗೆ ಉತ್ಸಾಹವನ್ನು ಕಳೆದುಕೊಳ್ಳುವ ಸ್ಥಿತಿಯು ಬರಬಹುದು. ಪತ್ನಿಯ ವಿಚಾರದಲ್ಲಿ ನೀವು ನಿರ್ಲಕ್ಷ್ಯ ತೋರಿಸಿದ್ದೀರಿ ಎಂದು ನಿಮ್ಮನ್ನು ದೂರಬಹುದು. ಅಕಾರಣಾವಾಗಿ ಬೈಯುವುದು ಸರಿಯಲ್ಲ. ನಿಮ್ಮ ಮೇಲೆ ಅಪನಂಬಿಕೆಗಳು ಬರಬಹುದು. ಮಾನಸಿಕವಾಗಿ ನೀವು ಸ್ಥೈರ್ಯವನ್ನು ಕಳೆದುಕೊಳ್ಳಬಹುದು. ತಂದೆಯ ಸಹಕಾರವು ನಿಮಗೆ ಸಿಗಲಿದೆ. ಸೋಲಿಂದ ಹೆದರುವ ಅವಶ್ಯಕತೆ ಇಲ್ಲ. ಧೃತಿಗೆಡದೇ ಕಾರ್ಯವನ್ನು ಸಾಧಿಸಲು ಯೋಜನೆಯನ್ನು ಹೂಡಿ. ನಾರಾಯಣನ ಸ್ಮರಣೆಯನ್ನು ಮಾಡಿ.
ತುಲಾ: ಅನೀಕ್ಷಿತ ತಿರುವುಗಳು ನಿಮಗೆ ಬಹಳ ಉದ್ವೇಗವನ್ನು ಉಂಟುಮಾಡೀತು. ಆತುರದಲ್ಲಿ ಏನನ್ನಾದರೂ ಮಾಡಿಕೊಳ್ಳುವ ಸಾಧ್ಯತೆ ಇದೆ. ಪಕ್ಷಪಾತಕ್ಕೆ ಸಂಬಂಧಿಸಿದಂತೆ ಅಪವಾದಗಳು ಕೇಳಿಬರಬಹುದು. ಉಪಕಾರದ ಸ್ಮರಣೆಯನ್ನು ನೀವು ಸದಾ ಇಟ್ಟಕೊಳ್ಳಬೇಕಾದೀತು. ನಾಳೆಗೋಸ್ಕರ ಅತಿಯಾದ ಆಲೋಚನೆ ಬೇಡ. ಇವತ್ತಿನ ದಿನವನ್ನು ಸುಂದರವಾಗಿ ಇರಿಸಿಕೊಳ್ಳಲು ಬೇಕಾದ ವ್ಯವಸ್ಥೆಯನ್ನು ಮಾಡಿಕೊಳ್ಳಿ. ಮಕ್ಕಳ ಜೊತೆಗಿನ ಸಲುಗೆಯು ನಿಮಗೆ ಕಷ್ಟವಾದೀತು. ಕೆಟ್ಟ ಕೆಲಸಗಳು ನಿಮ್ಮನ್ನು ಆಕರ್ಷಿಸಬಹುದು. ಸ್ವಂತಿಕೆಯನ್ನು ಇಲ್ಲಿ ಉಪಯೋಗಿಸಿ ಕೆಲಸಮಾಡಿ.
ವೃಶ್ಚಿಕ: ನಿಮ್ಮರ ಜೊತೆ ನಿಮಗೆ ಕೆಲಸ ಮಾಡಲು ಸಾಧ್ಯವಾಗದೇ ಇರಬಹುದು. ನಿಮ್ಮ ಜೊತೆ ಕೆಲಸ ಮಾಡುವವರೂ ನಿಮ್ಮ ವರ್ತನೆಯನ್ನು ಸಹಿಸಲಾರದೇ ದೂರ ಉಳಿಯಬಹುದು. ಇಂದು ನೀವು ನಿಮಗೆ ಅನುಕೂಲವಾದ ಸ್ಥಿತಿಯನ್ನು ನಿರ್ಮಾಣ ಮಾಡಿಕೊಳ್ಳಲು ಬಯಸುವಿರಿ. ಆದರೆ ಅದು ಪೂರ್ಣ ಪ್ರಮಾಣದಲ್ಲಿ ಫಲವನ್ನು ಕೊಡುವುದಿಲ್ಲ. ಆಂತರಿಕ ಕಲಹವು ಅತಿಯಾದ ವ್ಯಥೆಯನ್ನು ಉಂಟುಮಾಡೀತು. ಸೌಂದರ್ಯಕ್ಕೆ ಮನಸೋಲುವ ಸಾಧ್ಯತೆ ಇದೆ. ನಿಮ್ಮ ಮನಸ್ಸಿನ ಮೇಲೆ ಆದಷ್ಟು ನಿಯಂತ್ರಣವಿರಲಿ. ಬೇಡದ್ದರ ಕಡೆಗೆ ಮನಸ್ಸನ್ನು ಹರಿಸುವುದು ಬೇಡ.
ಧನು: ನಿಮ್ಮ ಗೌಪ್ಯತೆಯನ್ನು ಕಾಪಾಡಲು ನೀವು ವಿಫಲರಾಗುವಿರಿ. ಉದ್ಯೋಗದಲ್ಲಿ ನೀವು ದಿಕ್ಕು ತೋಚದೆ ಬಹಳ ಆತಂಕ ಪಡುವಿರಿ. ನಿಮ್ಮದೇ ಆದ ಕೆಲಸಗಳು ನಿಮಗೆ ಬೇಕಾದಷ್ಟು ಇದ್ದರೂ ನೀವು ಅವುಗಳನ್ನು ಲೆಕ್ಕಿಸದೇ ನೀವು ಆರಾಮಾಗಿ ಇರುವಿರಿ. ವಿದೇಶಕ್ಕೆ ಹೋಗುವ ಸೂಚನೆ ಇಂದು ಸಿಗಬಹುದು. ಯಂತ್ರಗಳ ಉದ್ಯಮವನ್ನು ಮಾಡುತ್ತಿದ್ದರೆ ಅಧಿಕಲಾಭವು ಆಗಬಹುದು. ಅವಶ್ಯಕತೆಗೆ ಅನುಸಾರವಾಗಿ ನಿಮ್ಮ ಖರ್ಚನ್ನು ಮಾಡಿ. ಮಕ್ಕಳಿಂದ ಸ್ವಲ್ಪ ಕಿರಿಕಿರಿಯಾದೀತು. ಮಾತನಾಡದೇ ನಿಮ್ಮ ಕೆಲಸದಲ್ಲಿ ಮಗ್ನರಾಗಿರಿ. ಕುಜನು ಅಷ್ಟಮದಲ್ಲಿ ಇದ್ದು ಏನಾದರೂ ಅನಾಹುತವನ್ನು ಮಾಡಿಸಿಯಾನು. ಸುಬ್ರಹ್ಮಣ್ಯನ ಸ್ತೋತ್ರ ಮಾಡಿ.
ಮಕರ: ನಿಮಗೆ ಇಂದು ಧೈರ್ಯವು ಕಡಿಮೆ ಆದಂತೆ ತೋರುತ್ತದೆ. ಯಾವ ಕೆಲಸವನ್ನೂ ನೀವು ಭಯಮುಕ್ತವಾಗಿ ಮಾಡಲಾರಿರಿ. ಆಸ್ತಿಯನ್ನು ಇನ್ನೊಬ್ಬರು ಒಡೆದುಕೊಳ್ಳಲು ಸಂಚು ರೂಪಿಸುತ್ತಿರುವರು. ಆಹಾರವು ನಿಮಗೆ ಸರಿಯಾದ ಸಮಯಕ್ಕೆ ಸಿಗದು. ಯಾರಾದರೂ ಯೋಗ್ಯರನ್ನು ಕರೆದು ಭೋಜನದಿಂದ ಸಂತೃಪ್ತಿ ಪಡಿಸಿ. ನಿಮ್ಮದೇ ಮಕ್ಕಳು ನಿಮ್ಮ ವಿರುದ್ಧ ಮಾತನಾಡುವ ಸಾಧ್ಯತೆ ಇದೆ. ತಾಯಿಯಿಂದ ನಿಮಗೆ ಬೆಂಬಲವು ಸಿಗಬಹುದು. ಆಲಸ್ಯದಿಂದ ಹೊರಬಂದರೆ ನಿಮಗೆ ಹತ್ತಾರು ದಾರಿಗಳು ಕಾಣಿಸಿಕೊಂಡಾವು. ಮಿತಿ ಮೀರಿದ ನಿಮ್ಮ ವರ್ತನೆಯು ಕಿರಿಕಿರಿಯನ್ನು ಉಂಟುಮಾಡೀತು.
ಕುಂಭ: ನಿಮ್ಮ ಮಾತುಗಳನ್ನು ನಿರ್ಲಕ್ಷ್ಯ ಮಾಡಿದ್ದು ನಿಮಗೆ ಗೊತ್ತಾಗಿ ನೀವು ಅವರನ್ನು ದೂರವಿಡುವಿರಿ. ಅವಸರದಿಂದ ಏನನ್ನೂ ಮಾಡಲು ಹೋಗುವುದು ಬೇಡ. ಪ್ರೇಮವು ಬೂದಿ ಮುಚ್ಚಿದ ಕಂಡದಂತೆ ಇರುವುದು. ಹೊರ ಬರಲು ಸಮಯವನ್ನು ಕಾಯಬೇಕಾಬಹುದು. ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವ ಮನಸ್ಸಾಗಲಿದೆ. ಯಾರ ಸಹವಾಸವೂ ಬೇಡ ಎಂಬ ನಿರ್ಲಿಪ್ತ ಭಾವವೂ ನಿಮ್ಮಲ್ಲಿ ಉಂಟಾಗಬಹುದು. ನಿಮಗಿಂತ ಹಿರಿಯರಿಗೆ ಗೌರವವನ್ನು ಕೊಡುವುದು ನೆನಪಿನಲ್ಲಿ ಇರಲಿ. ಭೂಮಿಯ ವ್ಯವಹಾರವು ಸ್ವಲ್ಪ ಹಿಮ್ಮುಖವಾಗಿ ಹೋಗಬಹುದು. ಭೂವರಾಹನ ಸ್ಮರಣೆಯ ಜೊತೆ ಇಂದಿನ ಕೆಲಸವನ್ನು ಆರಂಭಿಸಬಹುದು.
ಮೀನ: ನಿಮ್ಮ ಕಾರ್ಯಗಳಿಗೆ ಇಂದು ಸಂಗಾತಿಯು ಬೆಂಬಲ ನೀಡಬಹುದು. ಕಛೇರಿಯಲ್ಲಿ ಉಳಿದ ಕೆಲಸಗಳನ್ನು ಮಾಡಲು ನೀವು ಇಂದು ಆದ್ಯತೆ ನೀಡುವಿರಿ. ಸರ್ಕಾರಿ ಕೆಲಸಗಳು ನಿಧಾನಗತಿಯಲ್ಲಿ ಸಾಗಲಿದ್ದು ಅದರ ವೇಗವನ್ನು ನೀವು ಹೆಚ್ಚಿಸುವಿರಿ. ಯಂತ್ರೋಪಕರಣಗಳು ಹಾಳಾಗಿ ಹಣವು ಖರ್ಚಾಗಬಹುದು. ನಿಮ್ಮನ್ನು ನಂಬಿದವರಿಗೆ ಸರಿಯಾದ ವ್ಯವಸ್ಥೆಯನ್ನು ಮಾಡಿಕೊಡುವಿರಿ. ನಿಮ್ಮ ಕಲ್ಪನೆಗಳು ವಾಸ್ತವಕ್ಕೆ ಹತ್ತಿರವಿರಲಿ. ಯುಕ್ತಿಯಿಂದ ಕೆಲಸವನ್ನು ಮಾಡಿ. ಅಧಿಕಾರಿಗಳಿಂದ ಕಿರಿಕಿರಿ ಆಗುವ ಸಂಭವವಿದೆ. ಶನೈಶ್ಚರನಿಗೆ ನಮಸ್ಕರಿಸಿ ನೀವು ಮುಂದುವರಿಯುವುದು ಒಳ್ಳೆಯದು.
ಲೋಹಿತಶರ್ಮಾ – 8762924271 (what’s app only)