Horoscope 6 September: ದಿನಭವಿಷ್ಯ, ಈ ರಾಶಿಯವರು ಊಹಾಪೋಹಗಳಿಗೆ ಕಿವಿಗೊಡದೆ ತಮ್ಮ ಕಾರ್ಯದಲ್ಲಿ ಮುಂದುವರಿಯಿರಿ

| Updated By: Rakesh Nayak Manchi

Updated on: Sep 06, 2023 | 12:00 AM

ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹಾಗಾದರೆ ಇಂದಿನ (2023 ಸೆಪ್ಟೆಂಬರ್ 6) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

Horoscope 6 September: ದಿನಭವಿಷ್ಯ, ಈ ರಾಶಿಯವರು ಊಹಾಪೋಹಗಳಿಗೆ ಕಿವಿಗೊಡದೆ ತಮ್ಮ ಕಾರ್ಯದಲ್ಲಿ ಮುಂದುವರಿಯಿರಿ
ಇಂದಿನ ರಾಶಿಭವಿಷ್ಯ
Image Credit source: iStock Photo
Follow us on

ರಾಶಿ ಭವಿಷ್ಯ ಪ್ರತಿಯೊಬ್ಬರ ಜೀವನದಲ್ಲಿ ವಿಭಿನ್ನವಾಗಿರುತ್ತದೆ. ಪ್ರತಿನಿತ್ಯ ಬೆಳಗ್ಗೆ ಎದ್ದ ಕೂಡಲೇ ತಮ್ಮ ರಾಶಿ ಭವಿಷ್ಯ (Daily horoscope) ನೋಡುವುದು ಕೆಲವರಿಗೆ ಅಭ್ಯಾಸ. ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಜೊತೆಗೆ ಪಂಚಾಂಗವನ್ನು ಸಹ ಓದುತ್ತಾರೆ. ಹಾಗಾದರೆ ಇಂದಿನ (2023 ಸೆಪ್ಟೆಂಬರ್ 6) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಉತ್ತರಾಫಲ್ಗುಣೀ, ಮಾಸ: ನಿಜ ಶ್ರಾವಣ, ಪಕ್ಷ: ಕೃಷ್ಣ, ವಾರ: ಬುಧ, ತಿಥಿ: ಷಷ್ಠೀ, ನಿತ್ಯನಕ್ಷತ್ರ: ಕೃತ್ತಿಕಾ, ಯೋಗ: ವ್ಯಾಘಾತ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ರಿಂದ 22ರ ವರೆಗೆ, ಸೂರ್ಯಾಸ್ತ ಸಂಜೆ 06 ಗಂಟೆ 40 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:31 ರಿಂದ 02:03ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 07:54 ರಿಂದ 09:27ರ ವರೆಗೆ, ಗುಳಿಕ ಕಾಲ ಬೆಳಗ್ಗೆ 10:59 ರಿಂದ ಮಧ್ಯಾಹ್ನ 12:31ರ ವರೆಗೆ.

ಮೇಷ ರಾಶಿ:

ಯಾವುದೋ ಆಲೋಚನೆಯಲ್ಲಿ ನಿಮ್ಮ ಮನಸ್ಸು ಇರುವುದು. ಹೆಚ್ಚಿನ ಸೌಕರ್ಯದಿಂದ ನೀವು ಸೋಮಾರಿಯಾಗುವಿರಿ. ಕೇಳಿದವರಿಗೆ ನಿಮ್ಮ‌ ಸಹಾಯವು ಸಿಗಲಿದೆ.‌ ಕೇಳಿದ್ದಕ್ಕೆ ಮಾತ್ರ ನಿಮ್ಮ ಉತ್ತರವಿರಲಿ. ಕಳೆದ ಕೆಟ್ಟ ಕಾಲವನ್ನು‌ ನೆನಪಿಸಿಕೊಳ್ಳುವಿರಿ. ಉದ್ಯೋಗದಲ್ಲಿ ನಿಮ್ಮ ಕೇಂದ್ರವಾಗಿ ಇರಿಸಿಕೊಂಡು ಮಾತನಾಡುವರು. ನೌಕರರ ಮೇಲೆ ನಿಮ್ಮದೊಂದು ಲಕ್ಷ್ಯ ಇರಬೇಕಾಗುವುದು. ಇಂದಿನ ಕೆಲವು ಸಂದರ್ಭದಲ್ಲಿ ಮೌನವಾಗಿ ಇರುವಿರಿ. ವಿದೇಶದ ಸಂಪರ್ಕವು ಇಂದು ಸಿಗಬಹುದು.

ವೃಷಭ ರಾಶಿ:

ವಿವಾಹಕ್ಕೆ ಸಂಬಂಧಿಸಿದ ದೋಷಗಳನ್ನು ದೈವಜ್ಞರ ಬಳಿ ಕೇಳಿ ಸರಿಪಡಿಸಿಕೊಳ್ಳುವುದು ಉತ್ತಮ. ಊಹಾಪೋಹಗಳಿಗೆ ಕಿವಿಗೊಡದೇ ನಿಮ್ಮ ಕಾರ್ಯದಲ್ಲಿ ಮುಂದುವರಿಯಿರಿ. ನೀವು ಇಂದು ಮಕ್ಕಳ ಜೊತೆ ಹೆಚ್ಚಿನ ಸಮಯವನ್ನು ಕಳೆಯುವಿರಿ. ಸಿಗಬೇಕಾದ ಲಾಭದಿಂದ ವಂಚಿತರಾಗಲಿದ್ದೀರಿ. ಉಸಿರಾಟ ತೊಂದರೆಯು ಸ್ವಲ್ಪ ಕಾಣಿಸಿಕೊಳ್ಳಬಹುದು. ನೆರೆಹೊರೆಯ ವಿಚಾರದಲ್ಲಿ ಅಸಮಾಧಾನ ಇರಲಿದೆ. ಸಾಮಾಜಿಕ ಕಾರ್ಯಕ್ಕೆ ಇಂದು ಸಮಯವು ಸಿಗದು. ಗುರುವಿನ ಸಮಾಧಿಗೆ ನಮಸ್ಕರಿಸಿ.

ಮಿಥುನ ರಾಶಿ:

ಹಣವು ವ್ಯಯವಾಗಬಹುದು. ಕಳ್ಳರ ಭೀತಿಯು ಇರಲಿದೆ. ಒತ್ತಡದಿಂದ ನಿಮ್ಮ ಕಾರ್ಯವು ಮಂದಗತಿಯಲ್ಲಿ ಸಾಗುವುದು. ಸ್ವಲ್ಪ ಮಾನಸಿಕ‌ ಆಲಸ್ಯವು ಇರುವುದು. ಗೊಂದಲವನ್ನು ಇನ್ನೊಬ್ಬರ ಬಳಿ ಹೇಳಿ. ಪರಿಹಾರವನ್ನು ಕಂಡುಕೊಳ್ಳಬಹುದು. ನಿಮ್ಮ ಜಾಣ್ಮೆಯಿಂದ ನಿಮ್ಮ‌ ಸಂಸ್ಥೆಯು ಹೆಚ್ಚಿನ ಯಶಸ್ಸನ್ನು ಗಳಿಸಬಹುದು. ನಿಮ್ಮ ಆಲೋಚನೆಗಳೇ ನಿಮ್ಮನ್ನು ನಿರೂಪಿಸುತ್ತವೆ. ಇಂದು ಸಂಗಾತಿಯ ನಡುವೆ ಭಿನ್ನಾಭಿಪ್ರಾಯಗಳು ಬರಬಹುದ. ಒಬ್ಬರಾದರೂ ತಟಸ್ಥರಾಗಿರುವುದು ವಿವಾದವು ಆಗದಂತೆ ನೋಡಿಕಳ್ಳಬಹುದು. ತಾಯಿಯ ಕಡೆಯಿಂದ ಸಹಾಯವು ಸಿಗಬಹುದು.

ಕಟಕ ರಾಶಿ:

ಶುಭ ಕಾರ್ಯದಲ್ಲಿ ನೀವು ಭಾಗವಹಿಸುವಿರಿ. ಕಳೆದುಕೊಂಡ ಸಂಪತ್ತು ಮತ್ತಾವುದೋ ರೀತಿಯಲ್ಲಿ ಬರಬಹುದು. ಸಣ್ಣ ಮಕ್ಕಳಿಂದ ನೆಮ್ಮದಿಯು ಸಿಗಲಿದೆ. ನಿಮ್ಮ ಯಶಸ್ಸನ್ನು ಮನೆಯವರು ಸಂಭ್ರಮಿಸಬಹುದು. ರಾಜಕಾರಣದತ್ತ ನಿಮ್ಮ ಒಲವು ಹೆಚ್ಚಾಗುವುದು. ಪ್ರಭಾವಿ ವ್ಯಕ್ತಿಗಳು ನಿಮ್ಮನ್ನು ಪರಿವರ್ತಿಸುವರು. ಆದಾಯದ ಮೂಲವು ಸರಿಯಾಗಿ ಇರಲಿದೆ. ನಿಮ್ಮ ಸಹೋದರನ ಆರೋಗ್ಯದಲ್ಲಿ ವ್ಯತ್ಯಾಸವು ಕಾಣಿಸಬಹುದು. ಹೂಡಯಲ್ಲಿ ನಿಮಗೆ ಆಸಕ್ತಿಯು ಇಂದು ಕಡಿಮೆ ಇರಲಿದೆ. ಹೊಸ ವಸ್ತುಗಳನ್ನು ಖರೀದಿಸಬೇಕು ಎಂಬ ತುಡಿತ ಇರುವುದು. ಸುಮ್ಮನೇ ಆಡಿದ ಮಾತು ಸತ್ಯವಾಗಬಹುದು.

ಸಿಂಹ ರಾಶಿ:

ವಿದ್ಯಾರ್ಥಿಗಳಿಗೆ ಅಹಂಕಾರದ ವರ್ತನೆಯನ್ನು ತೋರಿಸಬಹುದು. ತಿಳಿವಳಿಕೆಯನ್ನು ಹೇಳಬೇಕಾದೀತು. ಎಲ್ಲವನ್ನೂ ನಂಬಿಕೆಯ ಆಧಾರದ ಮೇಲೆ ಸ್ವೀಕರಿಸಬೇಕಿಲ್ಲ. ಸರ್ಕಾರಿ ಉದ್ಯೋಗಿಗಳಿಗೆ ನಿಮ್ಮ ಚಾತುರ್ಯದ ಕಾರಣದಿಂದ ಹೆಚ್ಚಿನ ಅಧಿಕಾರವು ಪ್ರಾಪ್ತವಾಗುವುದು. ಧೈರ್ಯದಿಂದ ಮುನ್ನಡೆದರೆ ಯಾವ ತೊಂದರೆಯೂ ತೊಂದರೆಯಾಗಿ ಉಳಿಯದು. ದಾಂಪತ್ಯದಲ್ಲಿ ಉಂಟಾದ ಕಲಹವನ್ನು ನೀವೇ ಸರಿ ಮಾಡಿಕೊಳ್ಳಿ. ನಿಮ್ಮನ್ನೇ ನೀವು ವಂಚಿಸಿಕೊಳ್ಳುವಿರಿ. ಕಲಾವಿದರಿಗೆ ಸಿಕ್ಕ ಅವಕಾಶಗಳು ತಪ್ಪಿಹೋಗಬಹುದು. ಸಣ್ಣ ವಿಚಾರವನ್ನು ನೀವೇ ದೊಡ್ಡ ಮಾಡಿಕೊಳ್ಳುವಿರಿ.

ಕನ್ಯಾ ರಾಶಿ:

ನ್ಯಾಯಾಲಯದ ವಿಚಾರದಲ್ಲಿ ನಿಮಗೆ ಹಿನ್ನಡೆಯಾಗಬಹುದು. ನಿಮಗೆ ಬರಬೇಕಾದ ಹಣದ ವಿಚಾರದಲ್ಲಿಯೂ ನಿಮಗೆ ಸೋಲಾಗುವುದು. ಮನೆಯಲ್ಲಿಯೂ ನಿಮ್ಮ ಮಾತಿಗೆ ಸರಿಯಾದ ಬೆಲೆಯೂ ಸಿಗದು. ಕಛೇರಿಯಲ್ಲಿ ಇಂದು ನಿಮ್ಮಿಂದ ತಪ್ಪಾಗಿದ್ದು ಅದನ್ನು ನೀವು ಒಪ್ಪಿಕೊಳ್ಳಲಾರಿರಿ. ದುರ್ವ್ಯಸನದಿಂದ ಸಂಪತ್ತನ್ನು ನಷ್ಟ ಮಾಡಿಕೊಳ್ಳುವಿರಿ. ನಿಮ್ಮ ತಪ್ಪಿಗೆ ಪಶ್ಚಾತ್ತಾಪವಾದರೂ ಕೊನೆಯ ಹಂತವಾಗಿ ಇರಲಿ. ಕುಟಂಬದವರು ಸೇರಿಸಿಕೊಂಡು ಧಾರ್ಮಿಕ ಕಾರ್ಯಗಳನ್ನು ಮಾಡುವಿರು. ಹೊಸ ವ್ಯವಹಾರವನ್ನು ಆರಂಭಿಸಿರುವವರಿಗೆ ಪೂರ್ಣ ಚಿತ್ರಣವು ಸಿಗದು. ಹಿರಿಯರ ಎದುರು ಸಭ್ಯತೆಯಿಂದ ನಡೆದುಕೊಳ್ಳಿ.

ತುಲಾ ರಾಶಿ:

ವ್ಯಾಪಾರದಲ್ಲಿ ಹಿತಶತ್ರುಗಳ ಕಾಟದಿಂದ ನಿಮಗೆ ತೊಂದರೆಗಳು ಆಡಬಹುದು. ಇದರಿಂದ ನಿಮ್ಮ ನೆಮ್ಮದಿಯೂ ದೂರವಾದೀತು. ವಿದ್ಯಾಭ್ಯಾಸದಲ್ಲಿ ಯಶಸ್ಸನ್ನು ಸಾಧಿಸಲು ಅನೇಕ ಮಾರ್ಗಗಳು ಇರಲಿದೆ. ವಿವಾಹಕ್ಕೆ ಸಂಬಂಧಿಸಿದಂತೆ ಸ್ಪಷ್ಟವಾದ ನಿಮ್ಮ ಅಭಿಪ್ರಾಯವನ್ನು ತಿಳಿಸಿ. ನಿಮ್ಮವರ ತಪ್ಪುಗಳನ್ನು ತಿದ್ದಿಕೊಳ್ಳಲು ಸಮಯವನ್ನು ಕೊಡಿ. ಭೂಮಿಯ ವ್ಯವಹಾರದಿಂದ ಅಲ್ಪ ಅಭಿವೃದ್ಧಿಯು ಆಗಲಿದೆ. ಆರ್ಥಿಕ ಒತ್ತಡದಿಂದ ಮನೆಯ ನೆಮ್ಮದಿಯು ಕದಡಬಹುದು. ತಜ್ಞರ ಜೊತೆ ಇಂದಿನ ಸಮಯವನ್ನು ಕಳೆಯುವಿರಿ. ಸಂಗಾತಿಯ ಬಗ್ಗೆ ಹೆಚ್ಚು ಕರುಣೆ ಬರಬಹುದು.

ವೃಶ್ಚಿಕ ರಾಶಿ:

ಕುಟುಂಬದಲ್ಲಿ ಎಲ್ಲರೂ ಸುಖದಿಂದ ಜೀವಿಸುವ ಕಾರಣ ನಿಮ್ಮಲ್ಲಿಯೂ ನೆಮ್ಮದಿಯು ಕಾಣಿಸುವುದು. ಮನೆಗೆ ಸಹಕಾರವನ್ನು ನೀವು ನೀಡಲಿದ್ದು ಬಂಧುಗಳಿಂದ ಪ್ರಶಂಸೆಯು ಸಿಗಲಿದೆ. ಅಂದುಕೊಂಡಂತೆ ಕಾರ್ಯವು ಸಾಗದು ಎಂಬ ಕೊರಗು ಇರುವುದು. ನಿಮ್ಮ ಬಲದ ಮೇಲೇ ಕೆಲಸವನ್ನು ಪ್ರಾರಂಭಿಸಿ. ಇನ್ನೊಬ್ಬರ ಗೊತ್ತಿಲ್ಲದ ವಿಚಾರವನ್ನು ಹೇಳುವುದು ಬೇಡ. ಅನೇಕ ದಿನಗಳಿಂದ ಉದ್ಯೋಗ ನಿರ್ವಹಣೆಯಲ್ಲಿ ಬೇಸರ ಉಂಟಾಗಿದ್ದು ಹೊರಗೆ ಸುತ್ತಾಡುವ, ವಿರಾಮವನ್ನು ಪಡೆಯುವ ಮನಸ್ಸು ಇರಲಿದೆ. ನಿಮ್ಮ ಮಾತಿಗೆ ಬೆಲೆ ಇಲ್ಲವಾದೀತು. ಕಾರ್ತಿಕೇಯನು ನಿಮಗೆ ಬಲವನ್ನು ತುಂಬುವನು.

ಧನು ರಾಶಿ:

ಭೂಮಿಯ ಲಾಭದ ವಿಚಾರದಲ್ಲಿ ಚರ್ಚೋಪಚರ್ಚೆಗಳು ಆಗಬಹುದು. ಆರೋಪ ಪ್ರತ್ಯಾರೋಪಗಳಿಂದ ಪರಸ್ಪರ ಕಲಹವೂ ಆಗುವುದು. ದುಸ್ಸಾಧ್ಯ ಎನಿಸಿದ ಕಾರ್ಯವನ್ನು ಮಾಡಲು ಪ್ರಯತ್ನಿಸುವುದು ಬೇಡ. ಸ್ಥಿರಾಸ್ತಿಯನ್ನು ಮಾರಾಟ ಮಾಡುವ ಪ್ರಯತ್ನದಲ್ಲಿ ಇರುವಿರಿ. ಇಂದಿನ ಮನೆಯ ಕೆಲಸದಿಂದ ನಿಮಗೆ ಶ್ರಮವಾಗುವುದು. ಕೃಷಿಯ ಚಟುವಟಿಕೆಯಲ್ಲಿ ಹೆಚ್ಚು ತೊಡಗುವಿರಿ. ಹಳೆಯ ಆಸೆಯನ್ನು ನೀವು ತೀರಿಸಿಕೊಳ್ಳುವ ಅವಕಾಶವಿರಲಿದೆ. ‌ಇಂದು ನಿಮ್ಮ ಅನಗತ್ಯ ಮಾತುಗಳು ಕಲಹಕ್ಕೆ ಕಾರಣವಾಗಬಹುದು. ಇನ್ನೊಬ್ಬರ ವಸ್ತುಗಳನ್ನು ನೀವು ಹಾಳು ಮಾಡುವಿರಿ. ವಿದ್ಯಾಭ್ಯಾಸದ ಸಾಲವನ್ನು ನೀವು ತೀರಿಸುವಿರಿ. ಮಹಾಲಕ್ಷ್ಮಿಯ ಉಪಾಸನೆಯನ್ನು‌ ಮಾಡಿ.

ಮಕರ ರಾಶಿ:

ಸ್ಥಿರಾಸ್ತಿಗಾಗಿ ಹೆಚ್ಚು ಓಡಾಟವಿರುವುದು. ವಿದೇಶ ಪ್ರಯಾಣವು ನಿಮಗೆ ಇಷ್ಟವಿಲ್ಲದಿದ್ದರೂ ಮಾಡಬೇಕಾದೀತು. ಉದ್ಯಮವು ಒಂದೊಂದೇ ಹೆಜ್ಜೆ ಬೆಳೆಯುತ್ತಿರುವುದು ಸಂತೋಷ ಕೊಡುವುದು. ಅಪರಿಚಿತರಿಗೆ ನೀವು ಹಣವನ್ನು ಕೊಡುವಿರಿ. ಮೈಮರೆತು ಇಂದಿನ ತುರ್ತು ಕಾರ್ಯವನ್ನು ಮರೆಯುವಿರಿ. ಅಸಹಜ ವರ್ತನೆಯಿಂದ ಸಂಗಾತಿಗೆ ಅನುಮಾನ ಬರಲಿದೆ. ಮನೆಯ ಹಿರಿಯರನ್ನು ಅನಾದರದಿಂದ ನೋಡುವುದು ಉಚಿತವಲ್ಲ. ನಿಮ್ಮ ಕಛೇರಿಯಲ್ಲಿ ಉಂಟಾದ ಅಸಮಾಧಾನವನ್ನು ಆಪ್ತರ ಜೊತೆ ಹಂಚಿಕೊಳ್ಳಿ. ಇಂದು ನೀವು ಬಹಳ ಸಿಟ್ಟಗೊಂಡರೂ ಬೇಗ ಶಾಂತರಾಗುವಿರಿ. ಸ್ವಾವಲಂಬನೆ ನಿಮಗೆ ಇಷ್ಟವಾಗುವುದು.

ಕುಂಭ ರಾಶಿ:

ವಾಸಸ್ಥಳವನ್ನು ನೀವು ಇಂದು ಬದಲಿಸುವ ಆಲೋಚನೆ ಮಾಡುವಿರಿ. ಸರ್ಕಾರದ ನಿಮ್ಮ ಕೆಲಸವು ಬೇಗನೆ ಮುಗಿದುಹೋಗುವುದು. ಮಿತ್ರರ ಕಾರಣದಿಂದ ವೃಥಾ ಕಾಲಹರಣವಾಗಲಿದ್ದು ಕಛೇರಿಯ ಕೆಲಸದ ಬಗ್ಗೆಯೇ ಚಿಂತೆ ಇರುವುದು. ಮಾರಾಟದ ವಿಚಾರವಾಗಿ ನೀವು ಬೇರೆ ಊರಿಗೆ ಹೋಗಬೇಕಾಗಬಹುದು. ನಿಮಗೆ ಅವಿವಾಹಿತನಾಗಿದ್ದೇನೆ ಎಂಬ ಕೊರಗು ಕಾಡಬಹುದು. ನಿಮ್ಮ ಸ್ವಭಾವಕ್ಕೆ ಹೊಂದಿಕೊಳ್ಳುವ ಸಂಗಾತಿಯು ಸಿಗುವುದು ಕಷ್ಟವಾದೀತು. ಇಂದು ಮಾಡುವ ಪ್ರಯಾಣದಲ್ಲಿ ಅಪರಿಚಿತರ ಗೆಳೆತನವಾಗಬಹುದು. ನಿಮ್ಮ ಎಲ್ಲ ವಿವರಗಳನ್ನು ಇನ್ನೊಬ್ಬರ ಜೊತೆ ಹೇಳಿಕೊಳ್ಳುವುದು ಬೇಡ. ಅಧಿಕ‌‌ ಭೋಜನದಿಂದ ನಿಮಗೆ ಕಷ್ಟವಾದೀತು.

ಮೀನ ರಾಶಿ:

ಆಪ್ತರ ಜೊತೆಗಿನ ಮಾತುಕತೆಯು ನಿಮಗೆ ಆಹ್ಲಾದವನ್ನು ಉಂಟುಮಾಡುವುದು. ಇಂದಿನ ಕೆಲಸದಲ್ಲಿ ಮಂದಗತಿ ಇರಲಿದೆ. ಇತರರಿಂದ ಗೌರವ ಪ್ರಾಪ್ತವಾಗಬಹುದು. ವ್ಯಾಪಾರದಲ್ಲಿ ಅಲ್ಪ ಲಾಭವೇ ಆದರೂ ನೆಮ್ಮದಿ ಇರಲಿದೆ. ಯಾರಿಗೋ ಸಹಾಯ ಮಾಡಲು ಹೋಗಿ ಆಪತ್ತಿನಲ್ಲಿ ಸಿಕ್ಕಿಕೊಳ್ಳಬಹುದು. ಸ್ನೇಹಿತರ ಜೊತೆ ನೋವನ್ನು ಹಂಚಿಕೊಂಡು ಸಮಾಧಾನ ತಂದುಕಳ್ಳುವಿರಿ. ತಂದೆಯ ಜೊತೆ ಅಪರೂಪದ ಸಮಾರಂಭಕ್ಕೆ ಹೋಗುವಿರಿ. ಖರೀದಿಯಲ್ಲಿ ನೀವು ಸ್ಥೂಲವಾಗಿ ಖರ್ಚನ್ನು ಅಂದಾಜಿಸಿಕೊಳ್ಳಿ. ಮಕ್ಕಳು ನಿಮ್ಮ ಬಳಿ ಹೊಸತನ್ನು ತಿಳಿದುಕೊಳ್ಳಲು ಬಯಸುವರು. ಇಂದು ನೀವು ನಿಮ್ಮ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಿರಿ.

-ಲೋಹಿತಶರ್ಮಾ (ವಾಟ್ಸ್​ಆ್ಯಪ್- 8762924271)

ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ