Daily Horoscope: ಈ ರಾಶಿಯವರ ವಿವಾಹಕ್ಕೆ ಸಂಬಂಧಿಸಿದ ತೊಂದರೆಗಳು ದೂರಾಗಿ ಮಂಗಲಕಾರ್ಯವು ನಿರ್ವಿಘ್ನವಾಗಿ ಸಾಗುವುದು
ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಏಪ್ರಿಲ್ 19) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಏಪ್ರಿಲ್ 19 ಬುಧವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ: ಅಶ್ವಿನೀ, ಮಾಸ: ಚೈತ್ರ, ಪಕ್ಷ: ಕೃಷ್ಣ, ವಾರ: ಬುಧ, ತಿಥಿ: ಚತುರ್ದಶೀ, ನಿತ್ಯನಕ್ಷತ್ರ: ಪೂರ್ವಾಭಾದ್ರ, ಯೋಗ: ಐಂದ್ರ, ಕರಣ: ಭಸದರ, ಸೂರ್ಯೋದಯ ಬೆಳಗ್ಗೆ 06 ಗಂಟೆ 17 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 45 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:32 ರಿಂದ 02:00ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 7:51 ರಿಂದ 09:25ರ ವರೆಗೆ, ಗುಳಿಕ ಕಾಲ ಬೆಳಗ್ಗೆ 10:58 ರಿಂದ ಮಧ್ಯಾಹ್ನ 12:32ರ ವರೆಗೆ.
ಸಿಂಹ: ಮನಶ್ಚಾಂಚಲ್ಯದ ಮೇಲೆ ನಿಯಂತ್ರಣ ಬೇಕಾದರೆ ಧ್ಯಾನವನ್ನು ಮಾಡಿ. ನೂತನ ಸ್ಥಳವನ್ನು ಖರೀದಿಸುವ ಯೋಜನೆ ಮಾಡುವಿರಿ. ಸಣ್ಣ ಸಮಸ್ಯೆಯನ್ನು ದೊಡ್ಡ ಮಾಡಿಕೊಳ್ಳಬೇಡಿ. ಇಂದು ಕೆಲಸ ಪಟ್ಟಿಯು ಮುಗಿಯದಂತೆ ಕಾಣದು. ಕಾರ್ಯದಲ್ಲಿ ವೇಗವಿಲ್ಲದೇ ನಿಧನಾವಾಗುವುದು. ಬಂಧುಗಳ ಸಹವಾಸದಿಂದ ನಿಮಗೆ ಉತ್ತಮ ಮಾರ್ಗವು ಸಿಗಲಿದೆ. ದಂಪತಿಗಳ ನಡುವೆ ಸಾಮರಸ್ಯವಿರುವುದು. ಎಲ್ಲವೂ ನಶ್ವರ ಎಂದನಿಸಬಹುದು. ಗೆಳೆತನಕ್ಕೆ ಹೊಸ ವ್ಯಕ್ತಿಗಳು ಸಿಗುವರು. ಯಾರನ್ನೂ ಕಡೆಗಣಿಸಬೇಡಿ. ಅವರವರ ಸಾಮರ್ಥ್ಯವನ್ನು ನೀವು ತಿಳಿದಿಲ್ಲ.
ಕನ್ಯಾ: ಕುಟುಂಬದಲ್ಲಿ ಮನಸ್ತಾಪವು ಬರಬಹುದು. ಕಚೇರಿಯಲ್ಲಿ ಮೇಲಧಿಕಾರಿಗಳಿಂದ ಬೈಗುಳ ಸಿಗಬಹುದು. ಸ್ವಂತವಾಹನದಲ್ಲಿ ದೂರಪ್ರಯಾಣವನ್ನು ಇಂದು ಮಾಡುವಿರಿ. ಸ್ನೇಹಿತರ ಕೆಟ್ಟ ಕೆಲಸದಿಂದ ನಿಮಗೆ ಸಂಕಷ್ಟವಾಗಬಹುದು. ಗೊತ್ತಿಲ್ಲದೇ ದುರಭ್ಯಾಸಕ್ಕೆ ಶರಣಾಗುವಿರಿ. ಸ್ವಭಾವವನ್ನು ತಿದ್ದಿಕೊಳ್ಳಲಾಗದೇ ಎಲ್ಲರಿಂದ ನಿಂದನೆಗೆ ಒಳಗಾಗುವಿರಿ. ಸಮಾಜದಲ್ಲಿ ಉತ್ತಮಸ್ಥಾನವನ್ನು ಪಡೆಯುವ ಸಾಧ್ಯತೆ ಇದೆ. ನೀವು ನಿಮ್ಮ ನಿಲುವನ್ನು ಬದಲಾಯಿಸಬೇಡಿ. ನಿಮಗೆ ಖುಷಿ ಎನಿಸಿದ್ದನ್ನು ಬೇರೆಯವರಿಗೆ ನೋವಾಗದಂತೆ ಮಾಡಿ.
ತುಲಾ: ವಿವಾಹಕ್ಕೆ ಸಂಬಂಧಿಸಿದ ತೊಂದರೆಗಳು ದೂರಾಗಿ ಮಂಗಲಕಾರ್ಯವು ನಿರ್ವಿಘ್ನವಾಗಿ ಸಾಗುವುದು. ಸ್ನೇಹಿತರು ನಿಮಗೆ ಓಡಾಟಕ್ಕೆಂದು ಸ್ವಂತವಾಹನವನ್ನು ಕೊಟ್ಟಾರು. ಇನ್ನೊಬ್ಬರ ವ್ಯವಹಾರವನ್ನು ಕೆಡಿಸಲು ಹೋಗಬೇಡಿ. ಚೆನ್ನಾಗಿ ಮಾತನಾಡುತ್ತೇನೆಂದು ಬೇರೆಯವರಿಗೆ ನೋವನ್ನು ಕೊಡಬೇಡಿ. ನಗುಮುಖದಿಂದ ಇಂದು ಇದ್ದರು ನಿಮ್ಮ ಬಳಿ ಅನೇಕರು ಮಾತನಾಡಲು ಬರಬಹುದು. ವ್ಯಾಪರ ಸುಗಮವಾಗಿ ಸಾಗುವುದು. ಮನೆಯವರಿಂದ ದೂರವಿದ್ದೇನೆಂಬ ಭಾವವು ಕಾಡಬಹುದು.
ವೃಶ್ಚಿಕ: ಆರ್ಥಿಕಸ್ಥಿಯನ್ನು ಬಲ ಮಾಡಿಕೊಳ್ಳಲು ನಿಮ್ಮ ಪ್ರಯತ್ನ ಎಂದಿನಂತೆ ಇರಲಿದೆ. ಮಾತುಗಳಿಂದಲೇ ಎಲ್ಲವನ್ನೂ ಸಾಧಿಸಬಹುದು ಎಂಬುದನ್ನು ಮರೆತು, ತಾಳ್ಮೆ, ಮೌನದಿಂದ ಸಾಧ್ಯ ಎಂಬುದನ್ನು ನಂಬಿ. ಸಂಕಟಬಂದಾಗ ವೆಂಕಟರಮಣ ಎನ್ನುವಂತೆ ತೊಂದರೆ ಬಂದ ಕಾರಣ ನೀವು ಜ್ಯೋತಿಷಿಗಳ ಬಳಿ ಹೋಗುವಿರಿ. ಅವರ ಸಲಹೆಯನ್ನು ಸ್ವೀಕರಿಸಿ ಕ್ರಮಬದ್ಧವಾಗಿ ಆಚರಿಸಿ. ಸಮಸ್ಯೆಯು ಏನನ್ನೂ ಮಾಡದೇ ಸುಮ್ಮನಾಗುತ್ತದೆ. ಸಜ್ಜನರ ಸಹವಾಸ ಸಿಗುವುದು. ಅವರನ್ನು ಆಡಿಕೊಳ್ಳಬೇಡಿ. ಮಕ್ಕಳು ನಿಮ್ಮನ್ನು ಕಂಡು ಹಾಸ್ಯ ಮಾಡಿಯಾರು. ಅದಕ್ಕೆ ಏನನ್ನಾದರೂ ಹೇಳಬೇಡಿ.
-ಲೋಹಿತಶರ್ಮಾ ಇಡುವಾಣಿ