ದಿನ, ಸಮಯ ಎಲ್ಲರಿಗೂ ಒಂದೇ ಆದ್ರೂ ಜೀವನದಲ್ಲಿ ನಡೆಯುವ ಘಟನೆಗಳು ವಿಭಿನ್ನ. ಇದಕ್ಕೆ ಕಾರಣ ನಮ್ಮ ಜನ್ಮ ರಾಶಿಗಳಲ್ಲಾಗುವ ಬದಲಾವಣೆ. ನಮ್ಮ ಆರೋಗ್ಯ, ಯಶಸ್ಸು, ಸಂತೋಷ, ನೆಮ್ಮದಿ ಎಲ್ಲವೂ ನಮ್ಮ ರಾಶಿಗಳ ಮೇಲೆ ಅವಲಂಬಿತವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಕೆಲವರು ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗಾದರೆ ಇಂದಿನ (2023 ಮಾರ್ಚ್30) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭ ಎಂದು ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೀನ ಮಾಸ, ಮಹಾನಕ್ಷತ್ರ : ಉತ್ತರಾಭಾದ್ರ, ಮಾಸ : ಚೈತ್ರ, ಪಕ್ಷ : ಶುಕ್ಲ, ವಾರ : ಗುರು, ತಿಥಿ : ನವಮೀ, ನಿತ್ಯನಕ್ಷತ್ರ : ಪುನರ್ವಸು, ಯೋಗ : ಅತಿಗಂಡ, ಕರಣ : ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 30 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 43 ನಿಮಿಷಕ್ಕೆ. ರಾಹು ಕಾಲ ಮಧ್ಯಾಹ್ನ 02:08 ರಿಂದ 03:40ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 06:31 ರಿಂದ 08:02ರ ವರೆಗೆ, ಗುಳಿಕ ಕಾಲ ಬೆಳಗ್ಗೆ 09:34 ರಿಂದ ಮಧ್ಯಾಹ್ನ 11:05ರ ವರೆಗೆ.
ಸಿಂಹ: ಇಂದು ನಿಮ್ಮ ಮಾತು ಕಡಿಮೆ ಇದ್ದಷ್ಟೂ ನಿಮಗೂ ನಿಮ್ಮ ಕುಟುಂಬಕ್ಕೂ ಒಳ್ಳೆಯದು. ಅವಿವಾಹಿತರಿಗೆ ಮಾಂಗಲ್ಯ ಭಾಗ್ಯ ಕೂಡಿಬರಲಿದೆ. ಕ್ರೀಡೆಯಲ್ಲಿ ಜಯಗಳಿಸುವ ಸಾಧ್ಯತೆ ಇದೆ. ವಿಳಂಬವಾಯಿತು ಎಂದು ಬೇಸರಿಸದೇ ಖುಷಿಯಿರಿ. ಯಾವುದನ್ನು ಯಾವಾಗಾ ಮಾಡಿಸಬೇಕು ಎನ್ನುವುದು ಗೊತ್ತಿದೆ ವಿಧಿಗೆ. ಸ್ನೇಹಿತರ ಸಾಲವು ತೀರುವುದು. ಪ್ರೇಯಸಿ ಜೊತೆಯಲ್ಲಿ ಹೊರಗೆ ವಾಯುವಿಹಾರಕ್ಕೆ ಹೋಗುವಿರಿ. ಕೃಷಿಯು ನಿಮಗೆ ಇಷ್ಟವಲ್ಲದ ವಿಚಾರವಾದರೂ ಬೇರೆಯವರ ಒತ್ತಾಯಕ್ಕೆ ಒಪ್ಪಿಕೊಳ್ಳುವಿರಿ. ಗುರುದರ್ಶನವು ನಿಮಗೆ ಅತ್ಯಗತ್ಯವಾಗಿದೆ.
ಕನ್ಯಾ: ಇಂದು ನೀವು ನಿಮ್ಮ ಕೆಲಸದ ಮೇಲೆ ಮಾತ್ರ ಗಮನಹರಿಸಿದರೆ ಉತ್ತಮ. ಏನಾದರೂ ಬಾಲಿಶವಾದದ್ದನ್ನು ಮಾಡುವ ಮೊದಲು ನಿಮ್ಮ ವರ್ತನೆಯ ಪರಿಣಾಮದ ಬಗ್ಗೆ ಆಲೋಚಿಸಿ. ವಿದ್ಯಾರ್ಥಿಗಳ ಚಂಚಲಮನಸ್ಸು ಸಲ್ಲದನ್ನು ಮಾಡಿಸಬಹುದು. ಎಂದೋ ಮಾಡಿದ ಸಹಾಯ ಇಂದು ನಿಮ್ಮ ಕೈ ಹಿಡಿಯುವುದು. ನೀವು ಆಗದಿರುವ ಕೆಲಸಗಳಿಂದ ನಿರಾಸೆಯನ್ನು ಅನುಭವಿಸುವುದು ಬೇಡ. ಅದು ದೈವೇಚ್ಛೆ ಎಂದು ಬಿಟ್ಟು ಮುಂದಿನ ಕೆಲಸಕ್ಕೆ ತೆರಳಿ. ದಾಂಪತ್ಯಜೀವನ ಅಪರೂಪದ ಕ್ಷಣಗಳನ್ನು ಸವಿಯುವಿರಿ. ಮಕ್ಕಳು ನಿಮ್ಮ ಜೊತೆ ಇರುವರು.
ತುಲಾ: ಸ್ವಭಾವತಃ ಮುಂಗೋಪಿಯಾಗಿರುವ ನೀವು ಇಂದು ಪೂರ್ವಾಪರ ಆಲೋಚನೆ ಇಲ್ಲದೇ ಕೋಪಗೊಳ್ಳುವಿರಿ. ಉದ್ಯೋಗದಿಂದ ಹೊರನಡೆಯುವ ಸಾಧ್ಯತೆ ಇದೆ. ನೆಮ್ಮದಿಯನ್ನು ಕಾಣುವಾಗಲೇ ಈ ಘಟನೆ ನಿಮ್ಮನ್ನು ಆತಂಕಕ್ಕೆ ದೂಡಲಿದೆ. ಪ್ರೇಮಕ್ಕೆ ಸಂಬಂಧಿಸಿದಂತೆ ಹೆಚ್ಚು ಬೇಡಿಕೆಗಳು ಬರಬಹುದು. ಆಪ್ತರೊಂದಿಗೆ ಹೊಸ ಉದ್ಯೋಗವನ್ನು ಆರಂಭಿಸುವ ಆಲೋಚನೆ ಮಾಡುವಿರಿ. ಆದರೆ ಪಾಲುದಾರಿಕೆ ಜೊತೆ ಕೈಜೋಡಿಸುವಾಗ ಯೋಚಿಸಿ. ಹೆಚ್ಚು ಪ್ರಯತ್ನಪೂರ್ವಕವಾಗಿ ನಿಮ್ಮ ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳುವಿರಿ.
ವೃಶ್ಚಿಕ: ಇಂದು ನೀವು ಕಾರ್ಯ ಹೆಚ್ಚು ಮಾಡಿ, ಮಾತು ಕಡಿಮೆ ಮಾಡಲಿದ್ದೀರೊ. ಇಂದಾದ ಕೆಲಸಗಳು ನಿಮಗೇ ಆಶ್ಚರ್ಯವನ್ನು ತರಬಹುದು. ಪ್ರಭಾವೀ ವ್ಯಕ್ತಿಗಳ ಭೇಟಿ ಉದ್ಯೋಗಕ್ಕೆ ಹೊಸ ದಾರಿ ತೆರೆದುಕೊಳ್ಳುವುದು. ಕುಟುಂಬದ ಹಿರಿಯರು ನಿಮ್ಮ ಜೊತೆ ಸಮಯವನ್ನು ಕಳೆಯಲು ಬಯಸುವರು. ನಿಮ್ಮ ಗೆಳತಿಯ ಜೊತೆ ಅಸಭ್ಯವಾಗಿ ನಡೆದುಕೊಳ್ಳಬೇಡಿ. ಆಹಾರದ ಉದ್ಯೋಗವಿದ್ದರೆ ಇಂದು ಅಧಿಕಲಾಭವಾಗುವುದು. ಹರಟೆ ಮಾಡುತ್ತ ನಿಮ್ಮ ಕೆಲವು ಸಮಯ ವ್ಯರ್ಥವಾಗಬಹುದು. ಸಮಯಕ್ಕೆ ಬೆಲೆ ಕೊಡುವುದು ಮುಖ್ಯವಾಗಿರಲಿ.