Horoscope Today: ಮೇಷ, ವೃಷಭ, ಮಿಥುನ, ಕಟಕ ರಾಶಿಗಳ ಇಂದಿನ ಭವಿಷ್ಯ ಹೀಗಿದೆ
2023 ಮಾರ್ಚ್ 30 ಗುರುವಾರ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಮಾರ್ಚ್ 30 ಗುರುವಾರ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೀನ ಮಾಸ, ಮಹಾನಕ್ಷತ್ರ : ಉತ್ತರಾಭಾದ್ರ, ಮಾಸ : ಚೈತ್ರ, ಪಕ್ಷ : ಶುಕ್ಲ, ವಾರ : ಗುರು, ತಿಥಿ : ನವಮೀ, ನಿತ್ಯನಕ್ಷತ್ರ : ಪುನರ್ವಸು, ಯೋಗ : ಅತಿಗಂಡ, ಕರಣ : ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 30 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 43 ನಿಮಿಷಕ್ಕೆ. ರಾಹು ಕಾಲ ಮಧ್ಯಾಹ್ನ 02:08 ರಿಂದ 03:40ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 06:31 ರಿಂದ 08:02ರ ವರೆಗೆ, ಗುಳಿಕ ಕಾಲ ಬೆಳಗ್ಗೆ 09:34 ರಿಂದ ಮಧ್ಯಾಹ್ನ 11:05ರ ವರೆಗೆ.
ಮೇಷ: ನೀವಿಂದು ಏಕಾಂತವಾಗಿ ಇರಲು ಬಯಸದಿದ್ದರೂ ಏಕಾಂಗಿಯಾಗಿ ಇರುವಿರಿ. ನಿಮ್ಮೊಳಗೆ ಅತೃಪ್ತಭಾವವು ಇರಲಿದೆ. ಯಾರದೋ ಕೆಲಸದಲ್ಲಿ ಮಗ್ನರಾಗುವಿರಿ. ಆಲಸ್ಯವು ಮೈತುಂಬಿಕೊಂಡು ನಿದ್ರೆಯನ್ನು ಮಾಡುವ ಮನಃಸ್ಥಿತಿಯಲ್ಲಿ ಇರುವಿರಿ. ಹೊಸ ಉದ್ಯೋಗವನ್ನು ಸೃಷ್ಟಿಸಿಕೊಳ್ಳುವ ಯೋಚನೆ ದಟ್ಟವಾಗಿ ಮನದಲ್ಲಿ ಬೇರೂರಲಿದೆ. ಆಪ್ತರ ಜೊತೆ ಹೊಸ ಉದ್ಯೋಗದತ್ತ ಗಮನಹರಿಸುವಿರಿ. ಬೆನ್ನುನೋವು ಕಾಣಿಸಿಕೊಂಡೀತು. ಯೋಗಾಸನದ ಮೂಲಕ ಸರಿಮಾಡಿಕೊಳ್ಳಿ.
ವೃಷಭ: ಇಂದು ಯಾವ ವಿಚಾರಕ್ಕೂ ವಾದ-ವಿವಾದಗಳು ಮಾಡಿಕೊಳ್ಳಲು ಹೋಗಬೇಡಿ. ಸಾಮಾಜಿಕ ಜಾಲತಾಣದಲ್ಲಿ ಸಮಯವನ್ನು ಹೆಚ್ಚು ಕಳೆಯಬಹುದು. ಜೀವನದ ತೊಂದರೆಗಳನ್ನು ಸಂಬಂಧಿಕರೊಂದಿಗೆ ಹಂಚಿಕೊಳ್ಳಬೇಡಿ. ಸಣ್ಣ ಹುಣ್ಣನ್ನು ದೊಡ್ಡ ಗಾಯ ಮಾಡುವರು. ಗೃಹನಿರ್ಮಾಣ ಅಥವಾ ಗೃಹವನ್ನು ಖರೀದಿಸುವ ಯೋಚನೆ ಮಾಡಲಿದ್ದೀರಿ. ಸಣ್ಣ ಮೊತ್ತವನ್ನೂ ಹಣವೆಂದೇ ಭಾವಿಸಿ. ಇದೇ ನಿಮಗೆ ಮುಂದಿನ ಸಂಪತ್ತನ್ನು ಕೊಡಿಸುವುದು. ಸದ್ಯ ಗುರುಬಲವೇ ನಿಮ್ಮ ಬಲವಾಗಲಿದೆ.
ಮಿಥುನ: ನಿಮಗಿಂದು ಅತ್ಯುತ್ಸಾಹವಿದ್ದು ದೇಹವು ಸಹಕರಿಸುವುದೋ ಎಂದು ನೋಡಿಕೊಳ್ಳಿ. ಮಕ್ಕಳ ತುಂಟಾಟಕ್ಕೆ ಅವರಿಗೆ ಬೈದು ಅವರ ದ್ವೇಷಕ್ಕೆ ಕಾರಣರಾಗುವಿರಿ.ದಾಂಪತ್ಯದಲ್ಲಿ ಆಪ್ತಭಾವವಿರಲಿದೆ. ಕಛೇರಿಯಲ್ಲಿ ಆದ ಒತ್ತಡವನ್ನು ಮನೆಗೆ ತರಬೇಡಿ. ವ್ಯವಹಾರದ ವಿಚಾರದಲ್ಲಿ ಶುದ್ಧತೆ ಮುಖ್ಯವಾಗಿ ಬೇಕಿದೆ. ನಿಮ್ಮ ಮೇಲೆ ನಿಮಗಾಗದವರು ಅಪವಾದವನ್ನು ತರಬಹುದು. ದೂರದಲ್ಲಿರುವ ನಿಮಗೆ ಮನೆಯ ವಾತಾವರಣ ಹಿತವೆನಿಸಬಹುದು. ಮನಸ್ಸು ಸ್ಥಿರವಾಗಿರಲಿ.
ಕರ್ಕ: ಇಂದು ನಿಮಗೆ ಅನಿರೀಕ್ಷಿತ ರೂಪದಲ್ಲಿ ವೈವಾಹಿಕ ಸಂಬಂಧಗಳು ಕೂಡಿ ಬರಲಿದೆ. ಒಪ್ಪಿಕೊಂಡು ಮುಂದುವರಿಯುವುದು ಉತ್ತಮ. ಆರೋಗ್ಯ ಉತ್ತಮವಾಗಿದೆ ಎಂದು ಏನನ್ನಾದರೂ ತಿನ್ನಲು ಹೋಗಬೇಡಿ. ಇಂದು ಏನನ್ನೂ ಸಾಲವಾಗಿ ಕೊಡುವುದು ಬೇಡ. ಇಂದು ನಿಮ್ಮ ಕೆಲಸದ ಸ್ಥಳದಲ್ಲಿ ಪ್ರೀತಿ ಮೇಲುಗೈ ಸಾಧಿಸುತ್ತದೆ. ನಿಮ್ಮ ಸಹಾಯಕ್ಕೆ ಸಹೋದ್ಯೋಗಿಗಳು ಬರುವರು. ಗಾಂಭೀರ್ಯವನ್ನು ಬಿಟ್ಟು ನಗುಮೊಗದಲ್ಲಿ ಇರಿ.