Daily Horoscope: ಧನು, ಮಕರ, ಕುಂಭ, ಮೀನ ರಾಶಿಯವರ ಏಪ್ರಿಲ್​ 6ರ ರಾಶಿ ಭವಿಷ್ಯ ಹೀಗಿದೆ

| Updated By: ವಿವೇಕ ಬಿರಾದಾರ

Updated on: Apr 06, 2023 | 6:15 AM

ಇಂದಿನ (2023 ಏಪ್ರಿಲ್​ 06) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭ ಎಂದು ತಿಳಿದುಕೊಳ್ಳಿ.

Daily Horoscope: ಧನು, ಮಕರ, ಕುಂಭ, ಮೀನ ರಾಶಿಯವರ ಏಪ್ರಿಲ್​ 6ರ ರಾಶಿ ಭವಿಷ್ಯ ಹೀಗಿದೆ
ರಾಶಿಭವಿಷ್ಯ
Follow us on

ದಿನ, ಸಮಯ ಎಲ್ಲರಿಗೂ ಒಂದೇ ಆದ್ರೂ ಜೀವನದಲ್ಲಿ ನಡೆಯುವ ಘಟನೆಗಳು ವಿಭಿನ್ನ. ಇದಕ್ಕೆ ಕಾರಣ ನಮ್ಮ ಜನ್ಮ ರಾಶಿಗಳಲ್ಲಾಗುವ ಬದಲಾವಣೆ. ನಮ್ಮ ಆರೋಗ್ಯ, ಯಶಸ್ಸು, ಸಂತೋಷ, ನೆಮ್ಮದಿ ಎಲ್ಲವೂ ನಮ್ಮ ರಾಶಿಗಳ ಮೇಲೆ ಅವಲಂಬಿತವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಕೆಲವರು ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗಾದರೆ ಇಂದಿನ (2023 ಏಪ್ರಿಲ್​ 06) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭ ಎಂದು ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೀನ ಮಾಸ, ಮಹಾನಕ್ಷತ್ರ : ಅಶ್ವಿನೀ, ಮಾಸ : ಚೈತ್ರ, ಪಕ್ಷ : ಕೃಷ್ಣ, ವಾರ : ಗುರು, ತಿಥಿ : ಪ್ರತಿಪತ್, ನಿತ್ಯನಕ್ಷತ್ರ : ಹಸ್ತಾ, ಯೋಗ : ವ್ಯಾಘಾತ, ಕರಣ : ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 26 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 43 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 02:07 ರಿಂದ ಮಧ್ಯಾಹ್ನ 03:39ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 06:26 ರಿಂದ 07:58ರ ವರೆಗೆ, ಗುಳಿಕ ಕಾಲ ಬೆಳಗ್ಗೆ 09:30 ರಿಂದ 11:03ರ ವರೆಗೆ.

ಧನುಸ್ಸು: ಮಕ್ಕಳು ನಿಮ್ಮ‌ಬಗ್ಗೆ ಊಜಾಪೋಹದ ಮಾತುಗಳನ್ನು ಆಡಲಿದ್ದಾರೆ. ವ್ಯವಹಾರದಲ್ಲಿ ಮೋಸವಾಗಬಹುದು. ಅನಾರೋಗ್ಯವನ್ನು ಅಲಕ್ಷಿಸಬೇಡಿ. ನೀವು ಮಾಡುವ ತಮಾಷೆಯು ಕೆಲವರಿಗೆ ನೋವಾಗಬಹುದು. ಸತ್ಯವನ್ನೇ ತಿಳಿಸುವುದಾದರೂ ಸರಿಯಾದ ಮಾರ್ಗದಲ್ಲಿ ತಿಳಿಸಿ. ತಿಳಿಸುವ ರೀತಿಯಲ್ಲಿ ತಿಳಿಸಿ. ಯಾರದೋ ಮಾತು ನಿಮಗೆ ಬೇಸರವನ್ನು ತರಿಸಬಹುದು. ಒಂದೇ ವಿಷಯವನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳಲು ಹೋಗಿ ಮನಸ್ಸನ್ನು ಗಾಯ ಮಾಡಿಕೊಳ್ಳಬೇಡಿ. ಉದ್ಯೋಗದಲ್ಲಿ ನಿಮ್ಮದೇ ಆಲೋಚನೆಗಳು ಇರಲಿ, ಇನ್ಮೊಬ್ಬರ ಯೋಜನೆಗಳಿಗೂ ಸಕಾರಾತ್ಮಕ ಧೋರಣೆಯಿರಲಿ.

ಮಕರ: ಸಣ್ಣ ಘಟನೆಯನ್ನು ದೊಡ್ಡಮಾಡಿ ಕುಳಿತುಕೊಳ್ಳುವುದು ಬೇಡ. ನಿಮ್ಮ ಮಾತುಗಳು ಇತರರಿಗೆ ಪ್ರಯೋಜನವೆಂದಾದರೆ ಮಾತ್ರ ನೀವು ಮಾತನಾಡಿ. ಸುಮ್ಮನೆ ಕಾಲಹರಣ‌ಮಾಡುವ ಅವಶ್ಯಕತೆ ಇರಬಾರದು. ಇಂದು ಸಂಗಾತಿಗೆ ಹೆಚ್ಚು ಸಮಯವನ್ನು ಕೊಡುತ್ತೀರಿ. ದ್ವಿಚಕ್ರ ವಾಹನದಲ್ಲಿ ಹೋಗುವಾಗ ಎಚ್ಚರವಹಿಸಿ. ರಕ್ಷಣೆಯ ಬಗ್ಗೆ ಗಮನವಿರಲಿ. ಸಂಗಾತಿಗೆ ಗೌಪ್ಯವಾದ ಉಡುಗೊರೆಯೊಂದು ಸಿಗಲಿದೆ. ಸಜ್ಜನರ ಸಹವಾಸ ಮಾಡಲಿದ್ದೀರಿ.

ಕುಂಭ: ನಿಮ್ಮನ್ನು ದಾಳವಾಗಿ ಉಪಯೋಗಿಸಿಕೊಳ್ಳುವ ಸಾಧ್ಯತೆ ಇದೆ. ಧಾರ್ಮಿಕ ಆಚರಣೆಗಳು ಮೌಢ್ಯವೆನ್ನಿಸಬಹುದು. ನಿಮ್ಮ‌ ಸಾಮರ್ಥ್ಯ ಹಾಗೂ ಪ್ರಭಾವವು ನಿಮ್ಮವರಿಗೆ ಗೊತ್ತಾಗಲಿದೆ. ಅಲ್ಪಾವಧಿಯ ಪ್ರಯಾಣವನ್ನು ಮಾಡುವುದು ಪ್ರಯೋಜನಕಾರಿಯಾಗಿರುವುದರಿಂದ ಸಲಹೆ ನೀಡಲಾಗುತ್ತದೆ. ನಿಮ್ಮ ಪ್ರಯತ್ನಕ್ಕೆ ದೈವಾನುಕೂಲವು ಇರಲಿದೆ. ನಿಮ್ಮನ್ನು ಪುಣ್ಯಕರ್ಮವೇ ಕಾಪಾಡಿದೆ. ಉದರಕ್ಕೆ ಸಂಬಧಿಸಿದ ನೋವುಗಳು ಅಧಿಕವಾದೀತು. ಮನೆ ಮದ್ದನ್ನೇ ಬಳಸಿ.

ಮೀನ: ಸಿಟ್ಟಿನಿಂದ ಎಲ್ಲವನ್ನೂ ಸರಿ ಮಾಡುತ್ತೇನೆ ಎಂಬ ಹುಮ್ಮಸ್ಸು ಹಾಗೂ ಹುಂಬುತನ ಒಳ್ಳೆಯದಲ್ಲ. ನಿಮಗೆ ಹಿಂದಿನ‌ ಎಲ್ಲ ದಿನಗಳಿಗಿಂತ ಉತ್ತಮವಾಗಿದೆ. ಆದೆಊ ನಷ್ಟದ ಸ್ಥಿತಿಯು ಇರಲಿದೆ. ಅದ್ಭುತ ಸಮಯಗಳು ಸಮೀಪಿಸುತ್ತಿದ್ದಂತೆ ನಿಮ್ಮ ಕೆಲಸದ ಹೊರೆ ಏರಲು ಪ್ರಾರಂಭವಾಗುತ್ತದೆ, ಮೋಜಿನ ಚಟುವಟಿಕೆಗಳಿಗೆ ಗಣನೀಯವಾಗಿ ಕಡಿಮೆ ಉಚಿತ ಸಮಯವನ್ನು ನೀಡುತ್ತದೆ. ನೂತನ ಕೆಲಸಕ್ಕೆ ಅರ್ಜಿ ಹಾಕಿದ್ದರೆ ಮುಂದಿನ ಸುತ್ತಿನ ಸಂದರ್ಶನಕ್ಕೂ ಹೋಗಬಹುದು. ಒಂಟಿಯಾಗಿ ಸುತ್ತಾಡುವ ಆಸೆ ನಿಮಗೆ ಇರಲಿದೆ.

-ಲೋಹಿತಶರ್ಮಾ ಇಡುವಾಣಿ – 8762924271