Daily Horoscope: ಧನು, ಮಕರ, ಕುಂಭ, ಮೀನ ರಾಶಿಯವರ ಏಪ್ರಿಲ್​ 8ರ ಭವಿಷ್ಯ ಹೀಗಿದೆ

|

Updated on: Apr 08, 2023 | 6:13 AM

ನೀವು ಧನು, ಮಕರ, ಕುಂಭ, ಮೀನ ರಾಶಿಯವರೇ? ಹಾಗಿದ್ದರೆ ಇಂದಿನ (2023 ಏಪ್ರಿಲ್​ 08) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Daily Horoscope: ಧನು, ಮಕರ, ಕುಂಭ, ಮೀನ ರಾಶಿಯವರ ಏಪ್ರಿಲ್​ 8ರ ಭವಿಷ್ಯ ಹೀಗಿದೆ
ಇಂದಿನ ರಾಶಿ ಭವಿಷ್ಯ
Follow us on

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಏಪ್ರಿಲ್​ 8 ಶನಿವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೀನ ಮಾಸ, ಮಹಾನಕ್ಷತ್ರ : ಅಶ್ವಿನೀ, ಮಾಸ : ಚೈತ್ರ, ಪಕ್ಷ : ಕೃಷ್ಣ, ವಾರ : ಶನಿ, ತಿಥಿ : ದ್ವಿತೀಯಾ, ನಿತ್ಯನಕ್ಷತ್ರ : ಸ್ವಾತಿ, ಯೋಗ : ವಜ್ರ, ಕರಣ : ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 24 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 44 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 09:29 ರಿಂದ 11:02ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 02:07 ರಿಂದ 03:39ರ ವರೆಗೆ, ಗುಳಿಕ ಕಾಲ ಬೆಳಗ್ಗೆ 06:25 ರಿಂದ 07:57ರ ವರೆಗೆ.

ಧನುಸ್ಸು: ನಿಮ್ಮ ಬಂಧುಗಳು ಹಣಕಾಸಿನ ಸಹಾಯಕ್ಕಾಗಿ ನಿಮ್ಮಲ್ಲಿಗೆ ಬರುವರು. ಕಾರ್ಯದ ಒತ್ತಡದ ನಡುವೆಯೂ ಕುಟುಂಬದಲ್ಲಿನ ಆಗು ಹೋಗುಗಳತ್ತ ಗಮನಹರಿಸುವುದು ಒಳ್ಳೆಯದು. ಹಳೆಯ ಸ್ನೇಹಿತರ ಅಪರೂಪಕ್ಕೆ ದೊರೆತಿದ್ದರಿಂದ ಸಂತೋಷಪಡುವಿರಿ. ಲೆಕ್ಕ ಪರಿಶೋಧಕರು ಬಹಳ ಒತ್ತಡದಲ್ಲಿ ಇರುವರು. ಷೇರು ವ್ಯವಹಾರಗಳಲ್ಲಿ ಏಳಿಗೆಯು ಅಷ್ಟಾಗಿ ಇರುವುದಿಲ್ಲ. ಸೂಕ್ತ ವೈವಾಹಿಕ ಸಂಬಂಧ ದೊರೆಯುವ ಸಾಧ್ಯತೆ ಇದೆ, ಪ್ರಯತ್ನಶೀಲರಾಗಿ. ಹಿರಿಯರಿಂದ ನಿಮ್ಮ ವಂಶದದವರ ಬಗ್ಗೆ ತಿಳಿದುಕೊಳ್ಳುವಿರಿ.

ಮಕರ: ಅಧಿಕಾರಿಗಳ ಭೇಟಿಯಿಂದ ನಿಮ್ಮ ಉದ್ಯೋಗದಲ್ಲಿ ಆದಾಯ, ಪ್ರಭಾವಗಳು ಹೆಚ್ಚಾಗಲಿದೆ‌. ಆದಾಯವು ನಿರೀಕ್ಷಿತ ಮಟ್ಟದಲ್ಲಿದ್ದರೂ ಖರ್ಚು ಅದಕ್ಕಿಂತಲೂ ಹೆಚ್ಚಾಗಬಹುದು. ಸಂಸಾರದಲ್ಲಿ ಸಣ್ಣ ಸಣ್ಣ ವಿಚಾರಗಳಿಗೆ ಕಲಹವಾಗಬಹುದು. ಯಾರಾದರೂ ತಟಸ್ಥರಾದರೆ ಶಾಂತವಾಗಲಿದೆ. ದೇಹದ ಕೆಲವು ಭಾಗಗಳಲ್ಲಿ ನೋವುಗಳು ಕಾಣಿಸಬಹುದು. ಕೃಷಿಗೆ ಸಂಬಂಧಿಸಿದ ವ್ಯವಹಾರಗಳಲ್ಲಿ ಸ್ವಲ್ಪ ಹಿನ್ನಡೆ ಆಗಬಹುದು. ಸರ್ಕಾರಿ ಉದ್ಯೋಗದಲ್ಲಿ ಹೊಸ ಸ್ಥಾನ ದೊರೆಯುವ ಸಾಧ್ಯತೆ ಇದೆ.

ಕುಂಭ: ಬರಬೇಕಾದ ಹಳೆಯ ಬಾಕಿಗಳು ಇಂದು ಬಂದು ಸೇರಲಿದೆ. ನಿಮ್ಮ ಕೆಲಸಗಳಿಗೆ ಇಂದು ಹೆಚ್ಚು ಪ್ರಾಮುಖ್ಯ ನೀಡಿ. ಸಾಹಸ ಮಾಡಲು ಹೋಗಿ ಮುಖಭಂಗವಾದೀತು. ಆಪ್ತರಿಂದ ಏನಾನ್ನಾದರೂ ನಿರೀಕ್ಷಿಸಿ, ಪಡೆದುಕೊಳ್ಳುವಿರಿ. ವಿದ್ಯಾಭ್ಯಾಸಕ್ಕಾಗಿ ಮನೆಯಿಂದ ದೂರವಿರಬೇಕಸದೀತು. ವ್ಯಾಪಾರದಲ್ಲಿ ಚೇತರಿಕೆ ಕಂಡು ಸಂತಸವಾದೀತು. ವೃತ್ತಿಯಲ್ಲಿ ಬಹಳ ಜಾಣ್ಮೆಯಿಂದ ಕೆಲಸವನ್ನು ನಿಭಾಯಿಸುವಿರಿ. ಹೊಸ ಯೋಜನೆಯನ್ನು ರೂಪಿಸುವಿರಿ. ಪತ್ನಿಯ ಸಹಾಯ ನಿಮಗೆ ಸಿಗಲಿದೆ.

ಮೀನ: ನಿಮ್ಮ ಸಂಕಷ್ಟಕ್ಕೆ ಇತರರ ಸಹಾಯವನ್ನು ಪಡೆದುಕೊಳ್ಳುವಿರಿ. ಸಮಾಜಮುಖೀ ಕಾರ್ಯಗಳ ಕಡೆ ಗಮನಹರಿಸುವಿರಿ. ರಾಜಕೀಯ ವ್ಯಕ್ತಿಗಳಿಗೆ ಓಡಾಟ ಹೆಚ್ಚಾಗಿ, ಹೆಚ್ಚು ಜನಸಂಪರ್ಕ ಮಾಡಬೇಕಾದ ಅನಿವಾರ್ಯತೆ ಇರಲಿದೆ. ಬಂಧುಗಳು ತಾವು ಮಾಡಿದ ತಪ್ಪನ್ನು ನಿಮ್ಮ ಮೇಲೆ ಹಾಕಲು ಯತ್ನಿಸುವರು ಎಚ್ಚರದಿಂದಿರಿ. ವೃತ್ತಿಯಲ್ಲಿ ಬರುವ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಬಹುದು. ಅದರಲ್ಲಿ ಉತ್ತಮ ಫಲಿತಾಂಶ ಬರುವ ಯೋಗವಿದೆ. ಕೊನೆಯ ಕ್ಷಣದವರೆಗೂ ನಿಮ್ಮ ಛಲವನ್ನು ಬಿಡಬೇಡಿ.

-ಲೋಹಿತಶರ್ಮಾ ಇಡುವಾಣಿ