AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಫೆಬ್ರವರಿ 3ರ ದಿನಭವಿಷ್ಯ

ಜನ್ಮಸಂಖ್ಯೆ 7, 8, 9ರ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆ ಆಧಾರದಲ್ಲಿ ಫೆಬ್ರವರಿ 3ರ ಮಂಗಳವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ಈ ದಿನ ಹಲವು ರೀತಿಯ ಅನುಕೂಲಗಳು ಆಗಲಿವೆ. ಕೆಲಸದಲ್ಲಿ ಆತ್ಮವಿಶ್ವಾಸ ಹೆಚ್ಚಾಗಲಿದೆ. ಕೆಲವರಿಗೆ ಬಡ್ತಿ, ವೇತನ ಹೆಚ್ಚಳದ ಬಗ್ಗೆ ಇತರರ ಮೂಲಕ ಸುಳಿವು ದೊರೆಯಲಿದೆ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಫೆಬ್ರವರಿ 3ರ ದಿನಭವಿಷ್ಯ
NumerologyImage Credit source: Herzindagi
ಸ್ವಾತಿ ಎನ್​ಕೆ
| Edited By: |

Updated on: Feb 03, 2026 | 12:20 AM

Share

ಈ ದಿನ ಮಹಾಲಕ್ಷ್ಮೀ ಅಷ್ಟಕವನ್ನು ಶ್ರವಣ ಮಾಡುವುದರಿಂದ ಆರ್ಥಿಕ ಹರಿವಿನಲ್ಲಿ ಅನುಭವಿಸುತ್ತಿರುವ ಅಸ್ಥಿರತೆ ಸಮಸ್ಯೆ ನಿವಾರಣೆ ಆಗುತ್ತದೆ. ದೀರ್ಘ ಕಾಲದಿಂದ ಬರಬೇಕಾದ ಹಣವೇನಾದರೂ ಬಾಕಿ ಉಳಿದಿದ್ದಲ್ಲಿ ಅದು ನಿಮ್ಮ ಕೈ ಸೇರುವುದಕ್ಕೆ ಮಾರ್ಗೋಪಾಯ ಗೋಚರ ಆಗಲಿದೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ಬಹಳ ಚಟುವಟಿಕೆಯಿಂದ ಈ ದಿನ ಕಳೆದು ಹೋಗುತ್ತದೆ. ಸೋಷಿಯಲ್ ಮೀಡಿಯಾ ಇನ್ ಫ್ಲುಯೆನ್ಸರ್ ಗಳಿಗೆ, ಮಾರಾಟ ವಿಭಾಗದಲ್ಲಿ ಕಾರ್ಯ ನಿರ್ವಹಿಸುವವರಿಗೆ, ವ್ಯಾಪಾರ- ವ್ಯವಹಾರ ಮಾಡುತ್ತಾ ಇರುವವರಿಗೆ ಆದಾಯದಲ್ಲಿ ಹೆಚ್ಚಳ ಆಗುವಂಥ ಯೋಗ ಇದೆ. ನಿಮಗೆ ಹೊಸದಾಗಿ ಪರಿಚಯ ಆಗುವ ವ್ಯಕ್ತಿಗಳ ಮೂಲಕವಾಗಿ ಭವಿಷ್ಯದಲ್ಲಿ ದೊಡ್ಡ ಮಟ್ಟದ ಅನುಕೂಲ ಆಗಲಿದೆ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ನವ ವಿವಾಹಿತರಿಗೆ ಸಂತೋಷವಾಗಿ ಕಳೆಯುವಂಥ ಯೋಗ ಇದೆ. ಪ್ರೀತಿ- ಪ್ರೇಮದಲ್ಲಿ ಇರುವವರು ಮನೆಯಲ್ಲಿ ಈ ವಿಚಾರವನ್ನು ಪ್ರಸ್ತಾವ ಮಾಡುವ ಬಗ್ಗೆ ನಿರ್ಧಾರ ಮಾಡಲಿದ್ದೀರಿ. ವಿವಾಹಿತರು ಇದ್ದಲ್ಲಿ ಸಂಗಾತಿ ಮೂಲಕ ಹಣಕಾಸಿನ ನೆರವು ದೊರೆಯಲಿದೆ. ಕಲೆ, ಫ್ಯಾಷನ್, ಸೌಂದರ್ಯ, ವಿನ್ಯಾಸ ಈ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಶುಭ ಫಲ ಸಿಗುತ್ತದೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ಸರಿ- ತಪ್ಪುಗಳ ಬಗ್ಗೆ ಆತ್ಮವಿಶ್ಲೇಷಣೆ ಮಾಡಿಕೊಳ್ಳುವುದಕ್ಕೆ ಸೂಕ್ತವಾದ ದಿನ ಇದಾಗಿರುತ್ತದೆ. ಗಂಭೀರವಾದ ಸಂಗತಿಗಳ ಬಗ್ಗೆ ಪ್ಲಾನಿಂಗ್- ಬಜೆಟ್ ಸಿದ್ಧ ಮಾಡಿಕೊಳ್ಳುವುದಕ್ಕಾಗಿ ನೀವು ಒಬ್ಬರೇ ದೂರದ ಪ್ರದೇಶಗಳಿಗೆ ಏಕಾಂಗಿಯಾಗಿ ತೆರಳುವುದಕ್ಕೆ ನಿರ್ಧಾರ ಮಾಡಲಿದ್ದೀರಿ. ಉದ್ಯೋಗ ಸ್ಥಳದಲ್ಲಿ ನಿಮ್ಮ ಸಾಮರ್ಥ್ಯವನ್ನು ಹೀಗಳೆದು ಮಾತನಾಡುವುದರಿಂದ ಏಕಾಗ್ರತೆ ಕಳೆದುಕೊಳ್ಳುವಂತೆ ಆಗಲಿದೆ. ತುಂಬ ಮುಖ್ಯವಾದ ಕೆಲಸ ಮಾಡುತ್ತಿದ್ದೀರಿ ಅಂತಾದಲ್ಲಿ ದಿನ ಮಟ್ಟಿಗೆ ಅದನ್ನು ಮುಂದೂಡುವುದು ಕ್ಷೇಮ.

ಲೇಖನ- ಸ್ವಾತಿ ಎನ್.ಕೆ.

ಬೈಕ್ ಶೋರೂಂನೊಳಗೆ ನುಗ್ಗಿದ ಕಾಡುಕೋಣ; ಶಾಕಿಂಗ್ ವಿಡಿಯೋ ವೈರಲ್
ಬೈಕ್ ಶೋರೂಂನೊಳಗೆ ನುಗ್ಗಿದ ಕಾಡುಕೋಣ; ಶಾಕಿಂಗ್ ವಿಡಿಯೋ ವೈರಲ್
ಚಾರ್ಮಾಡಿ ಅರಣ್ಯದಲ್ಲಿ ಬೆಂಕಿ: ಹೊತ್ತಿ ಉರಿದ ವನ್ಯಸಂಪತ್ತು
ಚಾರ್ಮಾಡಿ ಅರಣ್ಯದಲ್ಲಿ ಬೆಂಕಿ: ಹೊತ್ತಿ ಉರಿದ ವನ್ಯಸಂಪತ್ತು
ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್