Daily Horoscope: ಧನು, ಮಕರ, ಕುಂಭ, ಮೀನ ರಾಶಿಯವರ ಇಂದಿನ ಭವಿಷ್ಯ

|

Updated on: May 03, 2023 | 6:30 AM

ನೀವು ಧನು, ಮಕರ, ಕುಂಭ, ಮೀನ ರಾಶಿಯವರೇ? ಹಾಗಿದ್ದರೆ ಇಂದಿನ (2023 ಮೇ 3) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Daily Horoscope: ಧನು, ಮಕರ, ಕುಂಭ, ಮೀನ ರಾಶಿಯವರ ಇಂದಿನ ಭವಿಷ್ಯ
ಇಂದಿನ ರಾಶಿ ಭವಿಷ್ಯ
Follow us on

ಶುಭೋದಯ ಓದುಗರೇ. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದ್ರೆ ಇಂದಿನ (2023 ಮೇ 3) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ : ಭರಣೀ, ಮಾಸ : ವೈಶಾಖ, ಪಕ್ಷ : ಶುಕ್ಲ, ವಾರ : ಬುಧ, ತಿಥಿ : ತ್ರಯೋದಶೀ, ನಿತ್ಯನಕ್ಷತ್ರ : ಚಿತ್ರಾ, ಯೋಗ : ಹರ್ಷಣ, ಕರಣ : ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 10 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 48 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 03:39 ರಿಂದ 05:13ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 09:20 ರಿಂದ 10:55ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:29 ರಿಂದ 02:04ರ ವರೆಗೆ.

ಧನು: ನಿಮ್ಮ ನಡೆಯನ್ನು ತಿಳಿಯಲು ಜನರು ಕಷ್ಟಪಡುವರು. ನಿಮ್ಮ ಮಾತಿನಲ್ಲಿ ಸ್ಪಷ್ಟತೆ ಇರಲಿ. ಯೋಜನೆಗಳನ್ನು ಸರಿಯಾಗಿ ಬಿತ್ತರಿಸಿ. ಕೆಲಸವನ್ನು ಒಂಟಿಯಾಗಿ ಮಾಡಲು ಹಿಂಜರಿಯುವಿರಿ. ಉದ್ಯೋಗದ ಸಮಯವು ಬದಲಾಗಿ ಕಿರಿಕಿರಿಯಾದೀತು. ಮನೆಯಲ್ಲಿಯೂ ಅಸಮಾಧಾನವಾಗಬಹುದು. ಎಲ್ಲರನ್ನೂ ಸುಮ್ಮನೇ ಅನುಮಾನದ ದೃಷ್ಟಿಯಿಂದ ನೋಡಬೇಡಿ. ಉದ್ಯೋಗದಲ್ಲಿ ಒಪ್ಪಂದವನ್ನು ಸರಿಯಾಗಿ ಮಾಡಿಕೊಳ್ಳಿ. ಮೋಸವಾಗುವ ಸಾಧ್ಯತೆ ಇದೆ. ಕಷ್ಟದಿಂದ ಸಂಪಾದಿಸಿದ್ದನ್ನು ಕಳೆದುಕೊಳ್ಳುವಿರಿ. ಪ್ರೀತಿಸುವ ವಸ್ತುವೊಂದು ಇಂದು ಹಾಳಾಗಿ ಹೋಗಲಿದೆ.

ಮಕರ: ಸಂಪತ್ತಿನ ಜೊತೆಗೆ ಶತ್ರುಗಳೂ ಬರುವರು. ಒಂದೇ ಸ್ಥಳದಲ್ಲಿ ಉದ್ಯೋಗವನ್ನು ಮಾಡಿ ಬೇಸರವಾಗಲಿದೆ. ಬದಲಿಸುವ ಇಚ್ಛೆ ತೋರುವಿರಿ. ಅಧಿಕಾರದ ಪಡೆಯಲು ವಾಮಮಾರ್ಗವನ್ನು ಬಳಸಬಹುದು. ಬೇರೆಯವರ ಮೇಲೆ ಪ್ರಭಾವ ಬೀರುವ ಸಂದರ್ಭಬರಬಹುದು. ರಾಜಕೀಯ ವ್ಯಕ್ತಿಗಳಾಗಿದ್ದರೆ ಒಂದು ಸಕಾರಾತ್ಮಕ ಸಂಚಲನವನ್ನು ತರುವಿರಿ. ಅಪರಿಚರ ಒಡನಾಟ ಕಡಿಮೆ ಮಾಡಿ. ಕುಟುಂಬವನ್ನು ನಡೆಸುವ ಜವಾಬ್ದಾರಿ ಸಿಗಬಹುದು. ಇಂದು ನೀವು ಅನವಶ್ಯಕ ವಸ್ತುಗಳನ್ನು ಇಷ್ಟಪಡುವಿರಿ. ಹನುಮಾನ್ ಚಾಲೀಸ್ ಅನ್ನು ಸಂಜೆ‌ ಪಠಿಸಿ.

ಕುಂಭ: ಹಿರಿಯರ ಮಾತನನ್ನು ಅಹಂಕಾರದಿಂದ ಮುರಿಯಬೇಡಿ. ಬಿಸಿ ರಕ್ತವು ಆರಿದ ಮೇಲೆ ಪಶ್ಚಾತ್ತಾಪ ಪಡಬೇಕಾದೀತು. ಇಂದಿನ ಪ್ರಯಾಣವನ್ನು ಮೊಟಕುಗೊಳಿಸಿ, ಇಲ್ಲವೇ ಸ್ಥಗಿತಗೊಳಿಸಿ. ಮಾನಸಿಕ‌ ಆಲಸ್ಯ ಇಂದು ಸರಿಯಾದ ಕೆಲಸ ಸಿಗಲಿದ್ದು, ಅದನ್ನು ಅನಿವಾರ್ಯವಾಗಿ ಮಾಡುವಿರಿ. ಉದರಕ್ಕೆ ಸಂಬಂಧಿಸಿ ರೋಗವು ಕಾಣಿಸಿಕೊಳ್ಳಬಹುದು. ಸಂಗಾತಿಯನ್ನು ತಮಾಷೆ ಮಾಡಲು ಹೋಗಿ ವೈಮನಸ್ಸು ಉಂಟಾಗಬಹದು. ನಿದ್ರೆಯಲ್ಲಿ ಆಗಾಗ ಎಚ್ಚರಿಕೆ ಆಗಬಹುದು. ವಾತಶಮನಕ್ಕೆ ವೈದ್ಯರನ್ನು ಭೇಟಿಯಾಗಿ.

ಮೀನ: ವೈದ್ಯಕೀಯ ಕ್ಷೇತ್ರದ ವಿದ್ಯಾರ್ಥಿಗಳಿಗೆ ಹೆಚ್ಚು ತೊಂದರೆಯಾದೀತು‌. ಭೂಮಿಗೆ ಸಂಬಂಧಿಸಿದ ವಿಚಾರವು‌ ನ್ಯಾಯಾಲಯದ ಮೆಟ್ಟಿಲೇರಿ ಬಗೆಹರಿಯದು. ಯಾರನ್ನೂ ಕೇವಲವಾಗಿ ನೋಡುವುದು ಬೇಡ. ನಿಮ್ಮ ವಿದ್ಯೆಗೆ ಸೂಕ್ತವಾದ ಸ್ಥಾನ ಸಿಗಲಿಲ್ಲ ಎಂಬ ಬೇಸರ ಆಗಲಿದೆ. ನಿಮ್ಮ ಅತಿಯಾದ ಕಲ್ಪನೆ ಭಗ್ನವಾದೀತು. ಇದರಿಂದ ದುಃಖಿಸುವಿರಿ. ಪ್ರಣಯಸ ವಿಷಯದಲ್ಲಿ ನಿಮ್ಮ ಅಜಾಗರೂಕತೆಯಿಂದ ತಪ್ಪಿಹೋಗಬಹುದು. ಚಿಂತಿಸದೇ ಅನ್ಯ ಮಾರ್ಗವನ್ನು ಹಿಡಿಯಿರಿ. ಶಿವಮಾನಸಸ್ತೋತ್ರದಿಂದ ಶಿವನನ್ನು ಭಕ್ತಿಯಿಂದ ಪೂಜಿಸಿ.

-ಲೋಹಿತಶರ್ಮಾ ಇಡುವಾಣಿ