Daily Horoscope: ಮೇಷ, ವೃಷಭ, ಮಿಥುನ, ಕಟಕ ರಾಶಿಗಳ ಇಂದಿನ ಭವಿಷ್ಯ ಹೀಗಿದೆ
ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಮೇ 04) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಶುಭೋದಯ ಓದುಗರೇ. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದ್ರೆ ಇಂದಿನ (2023 ಮೇ 4) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ : ಭರಣೀ, ಮಾಸ : ವೈಶಾಖ, ಪಕ್ಷ : ಶುಕ್ಲ, ವಾರ : ಗುರು, ತಿಥಿ : ಚತುರ್ದಶೀ, ನಿತ್ಯನಕ್ಷತ್ರ : ಚಿತ್ರಾ, ಯೋಗ : ವಜ್ರ, ಕರಣ : ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 09 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 49 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 02:04 ರಿಂದ 03:39ರ ವರೆಗೆ, ಯಮಘಂಡ ಕಾಲ 06:10 ರಿಂದ 07:45ರ ವರೆಗೆ, ಗುಳಿಕ ಕಾಲ 09:20 ರಿಂದ 10:54ರ ವರೆಗೆ.
ಮೇಷ: ಆರ್ಥಿಕವಾದ ತೊಂದರೆಯಲ್ಲಿ ಇರುವಾಗ ಅಕಸ್ಮಾತ್ ಸಂಪತ್ತು ನಿಮ್ಮ ಕೈ ಸೇರಬಹುದು. ಎಲ್ಲಿಗಾದರೂ ದೂರ ಹೋಗಲು ಮನಸ್ಸು ಮಾಡುವಿರಿ. ತಾಯಿಯ ಕಡೆಯಿಂದ ನಿಮಗೆ ಸಹಾಯ ಸಿಗಬಹುದು. ಧಾರ್ಮಿಕ ಕಾರ್ಯದಲ್ಲಿ ನೀವಿಂದು ತೊಡಗಿಕೊಳ್ಳಬಹುದು. ನಿಮಗೆ ಬರಬೇಕಾದ ಆಸ್ತಿಯ ಬಗ್ಗೆ ಮಾತು ನಡೆಯುವುದು. ನೀವು ಎಣಿಸಿದಂತೆ ಆಯಿತು ಎಂಬ ಖುಷಿ ಇರಲಿದೆ. ಹಿರಿಯರಿಂದ ಆಶೀರ್ವಾದ ನಿಮಗೆ ಸಿಗಬಹುದು. ಆರೋಗ್ಯದ ಮೇಲೆ ಕಾಳಜಿ ಇರಲಿ.
ವೃಷಭ: ಬಾಕಿ ಇರುವ ಕೆಲಸಗಳನ್ನು ಇಂದು ಮಾಡಿ ಮುಗಿಸುವಿರಿ. ಓದಿನಲ್ಲಿ ಆಸಕ್ತಿಯು ಕಡಿಮೆಯಾದೀತು. ಹಾಳಾದ ವಸ್ತುವಿನ ರಿಪೈರಿಗೆ ಹಣವನ್ನು ವ್ಯಯಿಸಬಹುದು. ಅಪರೂಪದ ಸ್ನೇಹಿತನ ಜೊತೆ ಹರಟೆ ಹೊಡೆಯಬಹುದು. ತಂದೆಯ ಆರೋಗ್ಯವು ಹದ ತಪ್ಪಬಹುದು. ಹಿತಶತ್ರುಗಳ ಭೀತಿಯು ಇರಲಿದೆ. ಕಾನೂನಿನ ಸಮರದಲ್ಲಿ ಜಯದ ನಿರೀಕ್ಷೆಯಲ್ಲಿ ಇರುವಿರಿ. ದತ್ತಾತ್ರೇಯರ ಧ್ಯಾನವನ್ನು ಮಾಡಿ. ದೈಹಿಕ ಶ್ರಮವು ಇಂದು ಅಧಿಕವಾಗಬಹುದು.
ಮಿಥುನ: ನಿಮ್ಮನ್ನು ನಿಮ್ಮಿಂದ ಉಪಕಾರ ಪಡೆದವರು ಗೌರವಿಸುವರು. ನೀವು ಇಷ್ಟಪಡುವ ಜನರು ನಿಮಗೆ ಸಹಾಯ ಮಾಡುವರು. ಸಾಲವನ್ನು ಮಾಡಲು ಹಿಂಜರಿದರೂ ಅನಿವಾರ್ಯವಾಗಿ ಮಾಡಬೇಕಾಗಬಹುದು. ನಿದ್ರೆಯು ಇಲ್ಲದೇ ಕಿರಿಕಿರಿಯನ್ನು ಅನುಭವಿಸಬಹುದು. ಬೇಕಾದ ವಸ್ತುಗಳ ಖರೀದಿಯನ್ನು ನೀವಿಂದು ಮಾಡಲಿದ್ದೀರಿ. ಮಕ್ಕಳು ನಿಮ್ಮಿಂದ ಪ್ರೀತಿಯನ್ನು ಬಯಸಿಯಾರು. ಅವರು ಕೇಳಿದ ವಸ್ತುಗಳನ್ನು ಇಲ್ಲ ಎನ್ನದೇ ಕೊಡಿಸಿ. ಆಯುಧಗಳಿಂದ ಅಥಬಾ ಯಂತ್ರಗಳಿಂದ ದೇಹಕ್ಕೆ ನೋವಾದೀತು. ಜಾಗರೂಕರಾಗಿರಿ.
ಕಟಕ: ಸಾಮಾಜಿಕ ಕಾರ್ಯಗಳಲ್ಲಿ ತೊಡಗಿದ್ದರೆ ನಿಮಗೆ ಇಂದು ಹಿನ್ನಡೆಯಾಗಬಹುದು. ವಿದ್ಯಾರ್ಥಿಗಳು ಸಂತೋಷದಿಂದ ಈ ದಿನವನ್ನು ಕಳೆಯುವರು. ನಿಮಗೆ ಯಾರಾದರೂ ಕೆಟ್ಟವರು ಎಂದು ಅನಿಸಿದರೆ ಅವರ ಸಹವಾಸದಿಂದ ದೂರವಿರಿ. ಇಲ್ಲವಾದರೆ ಅಪತ್ತು ತಂದುಕೊಳ್ಳಬಹುದು. ನಿಮ್ಮ ಕೆಲಸಗಳಲ್ಲಿ ನೀವು ನಿಷ್ಠೆಯಿಂದ ತೊಡಗಿಕೊಳ್ಳಿ. ಅತಿಯಾದ ಆಯಾಸವೂ ಆದೀತು. ತಂದೆಯ ಆರೋಗ್ಯವೂ ದೃಢವಾಗುವುದು. ಆಕಸ್ಮಿಕವಾದ ಶುಭವಾರ್ತೆ ಬರಬಹುದು. ನಿಂತ ಕೆಲಸಗಳು ಪುನಃ ಆರಂಭ ಮಾಡಲು ಮನಸ್ಸು ಮಾಡುವಿರಿ. ಸುಬ್ರಹ್ಮಣ್ಯನ ಸ್ಮರಣೆಯನ್ನು ಮಾಡಿ.