AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Horoscope: ಧನು, ಮಕರ, ಕುಂಭ, ಮೀನ ರಾಶಿಯವರ ಇಂದಿನ ಭವಿಷ್ಯ

ನೀವು ಧನು, ಮಕರ, ಕುಂಭ, ಮೀನ ರಾಶಿಯವರೇ? ಹಾಗಿದ್ದರೆ ಇಂದಿನ (2023 ಮೇ 4) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Daily Horoscope: ಧನು, ಮಕರ, ಕುಂಭ, ಮೀನ ರಾಶಿಯವರ ಇಂದಿನ ಭವಿಷ್ಯ
ಪ್ರಾತಿನಿಧಿಕ ಚಿತ್ರ
ಗಂಗಾಧರ​ ಬ. ಸಾಬೋಜಿ
|

Updated on: May 04, 2023 | 6:15 AM

Share

ಶುಭೋದಯ ಓದುಗರೇ. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದ್ರೆ ಇಂದಿನ (2023 ಮೇ​ 4) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ : ಭರಣೀ, ಮಾಸ : ವೈಶಾಖ, ಪಕ್ಷ : ಶುಕ್ಲ, ವಾರ : ಗುರು, ತಿಥಿ : ಚತುರ್ದಶೀ, ನಿತ್ಯನಕ್ಷತ್ರ : ಚಿತ್ರಾ, ಯೋಗ : ವಜ್ರ, ಕರಣ : ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 09 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 49 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 02:04 ರಿಂದ 03:39ರ ವರೆಗೆ, ಯಮಘಂಡ ಕಾಲ 06:10 ರಿಂದ 07:45ರ ವರೆಗೆ, ಗುಳಿಕ ಕಾಲ 09:20 ರಿಂದ 10:54ರ ವರೆಗೆ.

ಧನು: ನೀವು ಇಂದು ನಿಮ್ಮ ಸ್ಥಿತಿಯನ್ನು ನೋಡಿ ಪಶ್ಚಾತ್ತಾಪ ಪಡಬೇಕಿಲ್ಲ. ಸಮಯವನ್ನು ನಿರೀಕ್ಷಿಸಿ. ಗಾಳಿಯ ಹೊಡೆತಕ್ಕೆ ಸಿಗುವ ಸಣ್ಣ ಗಿಡವೂ ಗಾಳಿಯನ್ನು ಎದುರಿಸುವ, ಸಾವಿರಾರು ಜನರಿಗೆ ಆಶ್ರಯವಾಗುವ ಹೆಮ್ಮರವಾಗಿಯೇ ಬೆಳೆಯುತ್ತದೆ. ಧಾರ್ಮಿಕ ಆಚರಣೆಯಲ್ಲಿ ಶ್ರದ್ಧೆ ಇರಲಿದೆ. ನೆಮ್ಮದಿಯನ್ನು ಒಡೆಯಲು ದೇವಾಲಯಕ್ಕೆ ಹೋಗಿ ಕುಳಿತುಕೊಳ್ಳಿ. ಮನಸ್ಸಿಗೆ ಸಮಾಧಾನವಾದೀತು. ವಿವಾಹ ನಿಶ್ಚಯವಾಗಿದ್ದು ಕಾರಣಾಂತರಗಳಿಂದ ರದ್ದಾಗಬಹುದು. ಪಿತ್ರಾರ್ಜಿತ ಆಸ್ತಿಯನ್ನು ಪಡೆಯಲು ಯಾರಾದರೂ ಕುಮ್ಮಕ್ಕು ಕೊಡಬಹುದು. ಶತ್ರುಗಳು ಮಿತ್ರರಾಗಲಿದ್ದಾರೆ.

ಮಕರ: ಬೆಂಕಿಯ ಕಿಡಿ ಸಣ್ಣದೇ ಆದರೂ ಒಣಗಿಸ ವಸ್ತುವಿನ ಮೇಲೆ‌ ಬಿದ್ದರೆ ಪ್ರಜ್ವಲಿಸುವುದಲ್ಲವೆ? ಕಲಹವು ಸಣ್ಣದೇ ಆಗಿರಬಹುದು ಆ‌ ಸಮಯಕ್ಕೆ ಬಿರುಕು ಬರುವಷ್ಟು ಸಾಕು. ಮಾತಿನ ಮೇಲೆ ಎಚ್ಚರವಿರಲಿ. ಯಾರಾದರೂ ನಿಮ್ಮ ಬಳಿ ಇರುವ ವಸ್ತುವನ್ನು ಕೇಳಬಂದರೆ ಇಲ್ಲ ಎನಬೇಡಿ. ಇರುವುದನ್ನು ಕೊಟ್ಟು ಕಳುಹಿಸಿ. ಮಹಿಳೆಯರು ತಮ್ಮದೇ ಆದ ಉದ್ಯೋಗವನ್ನು ನಡೆಸಲು ಚಿಂತಿಸಬಹುದು. ದೂರದ ಸಂಬಂಧಿಗಳ ಮನೆಯಲ್ಲಿ ಇಂದು ವಾಸ‌ಮಾಡುವಿರಿ. ಬೆನ್ನು ನೋವು ಉಂಟಾಗಬಹುದು. ಸೂಕ್ತ ಕ್ರಮಗಳನ್ನು ಮಾಡಿಕೊಳ್ಳಿ. ಕುಲದೇವತೆಯ ಆರಾಧನೆಯನ್ನು ಮಾಡಿ ಭಕ್ತಿಯಿಂದ ಮಾಡಿ.

ಕುಂಭ: ಕಛೇರಿಯ ಕೆಲಸದಲ್ಲಿ ತೊಡಗಿಕೊಂಡು ವೈಯಕ್ತಿಕ ಕೆಲಸವು ಮರೆತುಹೋದೀತು. ಇನ್ನೊಬ್ಬರನ್ನು ಕಂಡು ಅಸೂಯೆಪಡುವಿರಿ. ಶ್ರಮವಹಿಸಿದರೂ ನಿರೀಕ್ಷಿತ ಸಂಪತ್ತು ಸಿಗದೆ ಚಿಂತೆಗೆ ಒಳಗಾಗುವಿರಿ. ಅಧಿಕಾರಿವರ್ಗದಿಂದ ನಿಮ್ಮ‌ ಮೇಲೆ ಒತ್ತಡ ಬರಬಹುದು. ನಿಮ್ಮ ಜನರು ಕಡೆಗಣಿಸುವ ಜನರೆದು ನೀವು ಎದ್ದು ನಿಲ್ಲಬೇಕು ಎನ್ನುವ ಹಠ ಇರಲಿದೆ. ಯಾವ ಕೆಲಸವು ಮುಕ್ತಾಯವಾಗದೇ ಅಸಮಾಧಾನವು ಇರಲಿದೆ. ಆಗಬೇಕಾದುದು ಆಗುತ್ತದೆ ಎಂದು ಕೊಂಡು ನಿಮ್ಮ ಕರ್ತವ್ಯವನ್ನು ಮಡುವಿರಿ. ಸಾಡೇಸಾಥ್ ಶನಿಯು ನಿಮ್ಮ ರಾಶಿಯಲ್ಲಿಯೇ ಇರುವುದನ್ನು ನೀವು ಗಮನದಲ್ಲಿ ಇಟ್ಟುಕೊಳ್ಳಿ.

ಮೀನ: ಭೂಮಿಯ ವ್ಯವಹಾರವನ್ನು ಒಬ್ಬರೇ ಮಾಡಬೇಡಿ. ಕುಟುಂಬದವರ ಜೊತೆ ಚರ್ಚಿಸಿ. ಸ್ಥಳದ ಕುರಿತೂ ಮಾಹಿತಿಯನ್ನು ಸಂಗ್ರಹಿಸಿ. ಮನೋರಂಜನೆಯ ಕಾರ್ಯದಲ್ಲಿ ತೊಡಗುವಿರಿ. ಕೆಲಸವನ್ನು ಕಳೆದುಕೊಂಡಿದ್ದರೆ ಸ್ನೇಹಿತರಿಂದ ಸಹಾಯ ಪಡೆಯುವಿರಿ. ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ. ಹೊಸತನ್ನು ಕಲಿಯಬೇಕು ಎನ್ನುವ ಬಯಕೆ ಇರಲಿದೆ. ಉದ್ಯೋಗದ ನಿಮಿತ್ತ ಮನೆಯಿಂದ ದೂರವಿರಬೇಕಾಗುದು. ಪತ್ನಿಗೆ ಸಹಾಯ ಮಾಡಲಿದ್ದೀರಿ. ಮಿತ್ರರರನ್ನು ದ್ವೇಷಿಸುವ ಸನ್ನಿವೇಶವು ಎದುರಾಗಬಹುದು. ಗಣಪತಿಗೆ ಪ್ರಿಯವಾದ ದೂರ್ವಾಪತ್ರವನ್ನು ಸಮರ್ಪಿಸಿ.

ಲೋಹಿತಶರ್ಮಾ 8762924271 (what’s app only)

ಚಂದ್ರ ಕುಂಭ ರಾಶಿಯಲ್ಲಿ ಸಂಚಾರ: ಇಂದಿನ ದಿನ ಭವಿಷ್ಯ ಇಲ್ಲಿದೆ
ಚಂದ್ರ ಕುಂಭ ರಾಶಿಯಲ್ಲಿ ಸಂಚಾರ: ಇಂದಿನ ದಿನ ಭವಿಷ್ಯ ಇಲ್ಲಿದೆ
ಚನ್ನಪಟ್ಟಣದ ದಶವಾರ ಗ್ರಾಮದಲ್ಲಿ ಬಿ. ಸರೋಜಾದೇವಿ ಅಂತ್ಯಕ್ರಿಯೆಗೆ ಸಿದ್ಧತೆ
ಚನ್ನಪಟ್ಟಣದ ದಶವಾರ ಗ್ರಾಮದಲ್ಲಿ ಬಿ. ಸರೋಜಾದೇವಿ ಅಂತ್ಯಕ್ರಿಯೆಗೆ ಸಿದ್ಧತೆ
ಸಿಎಂರನ್ನು ಉದ್ದೇಶಪೂರ್ವಕವಾಗಿ ಆಹ್ವಾನಿಸಿಲ್ಲವಾದರೆ ಖಂಡನಾರ್ಹ: ರಾಜಣ್ಣ
ಸಿಎಂರನ್ನು ಉದ್ದೇಶಪೂರ್ವಕವಾಗಿ ಆಹ್ವಾನಿಸಿಲ್ಲವಾದರೆ ಖಂಡನಾರ್ಹ: ರಾಜಣ್ಣ
ಟನಲ್ ಯೋಜನೆಯಲ್ಲಿ ಭ್ರಷ್ಟಾಚಾರ ಆರೋಪ: ತೇಜಸ್ವಿ ಸೂರ್ಯಗೆ ಸಿಎಂ ತಿರುಗೇಟು
ಟನಲ್ ಯೋಜನೆಯಲ್ಲಿ ಭ್ರಷ್ಟಾಚಾರ ಆರೋಪ: ತೇಜಸ್ವಿ ಸೂರ್ಯಗೆ ಸಿಎಂ ತಿರುಗೇಟು
ಬಿ.ಸಿ. ಪಾಟೀಲ್ ಸಿನಿಮಾಗೆ ಸಮಸ್ಯೆ ಆದಾಗ ಸಹಾಯ ಮಾಡಿದ್ದ ಬಿ. ಸರೋಜಾದೇವಿ
ಬಿ.ಸಿ. ಪಾಟೀಲ್ ಸಿನಿಮಾಗೆ ಸಮಸ್ಯೆ ಆದಾಗ ಸಹಾಯ ಮಾಡಿದ್ದ ಬಿ. ಸರೋಜಾದೇವಿ
ಪ್ರತಿಭಟನೆಯ ಭಾಗವಾಗೇ ನಿತಿನ್ ಗಡ್ಕರಿಗೆ ಪತ್ರ ಬರೆದಿರೋದು: ಸಿದ್ದರಾಮಯ್ಯ
ಪ್ರತಿಭಟನೆಯ ಭಾಗವಾಗೇ ನಿತಿನ್ ಗಡ್ಕರಿಗೆ ಪತ್ರ ಬರೆದಿರೋದು: ಸಿದ್ದರಾಮಯ್ಯ
ಕರ್ನಾಟಕದಲ್ಲಿ 3 ಲಕ್ಷ ಕೋಟಿ ರೂ. ವೆಚ್ಚದ ಕಾಮಗಾರಿ ಜಾರಿಯಲ್ಲಿವೆ: ಸಚಿವ
ಕರ್ನಾಟಕದಲ್ಲಿ 3 ಲಕ್ಷ ಕೋಟಿ ರೂ. ವೆಚ್ಚದ ಕಾಮಗಾರಿ ಜಾರಿಯಲ್ಲಿವೆ: ಸಚಿವ
ಕೀಟನಾಶಕ‌ ಮಿಶ್ರಿತ ನೀರು ಕುಡಿದು 12 ಮಂದಿ ಮಕ್ಕಳು ಅಸ್ವಸ್ಥ
ಕೀಟನಾಶಕ‌ ಮಿಶ್ರಿತ ನೀರು ಕುಡಿದು 12 ಮಂದಿ ಮಕ್ಕಳು ಅಸ್ವಸ್ಥ
ಬಿ. ಸರೋಜಾದೇವಿ ಬರೆದಿದ್ದ ವಿಲ್​ಗೆ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಸಹಿ
ಬಿ. ಸರೋಜಾದೇವಿ ಬರೆದಿದ್ದ ವಿಲ್​ಗೆ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಸಹಿ
ವಿಷಸರ್ಪಗಳು ಏನೂ ಮಾಡೋದಿಲ್ಲ, ತಮ್ಮ ಪಾಡಿಗೆ ತಾವು ಸರಿದಾಡುತ್ತವೆ: ನೈನಾ
ವಿಷಸರ್ಪಗಳು ಏನೂ ಮಾಡೋದಿಲ್ಲ, ತಮ್ಮ ಪಾಡಿಗೆ ತಾವು ಸರಿದಾಡುತ್ತವೆ: ನೈನಾ