Daily Horoscope: ಈ ರಾಶಿಯವರಿಗೆ ಹಳೆಯ ರೋಗಗಳು ಕಡಿಮೆಯಾಗುವ ಸಾಧ್ಯತೆ ಇದೆ, ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ

ಇಂದಿನ (2023 ಮೇ​ 5) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

Daily Horoscope: ಈ ರಾಶಿಯವರಿಗೆ ಹಳೆಯ ರೋಗಗಳು ಕಡಿಮೆಯಾಗುವ ಸಾಧ್ಯತೆ ಇದೆ, ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ
ಇಂದಿನ ರಾಶಿ ಭವಿಷ್ಯ
Follow us
ಗಂಗಾಧರ​ ಬ. ಸಾಬೋಜಿ
|

Updated on: May 05, 2023 | 5:00 AM

ಶುಭೋದಯ ಓದುಗರೇ. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದ್ರೆ ಇಂದಿನ (2023 ಮೇ​ 5) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ : ಭರಣೀ, ಮಾಸ : ವೈಶಾಖ, ಪಕ್ಷ : ಶುಕ್ಲ, ವಾರ : ಶುಕ್ರ, ತಿಥಿ : ಪೂರ್ಣಿಮಾ, ನಿತ್ಯನಕ್ಷತ್ರ : ಸ್ವಾತಿ, ಯೋಗ : ಸಿದ್ಧಿ, ಕರಣ : ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 09 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 49 ನಿಮಿಷಕ್ಕೆ, ರಾಹು ಕಾಲ 10:54 ರಿಂದ 12:29ರ ವರೆಗೆ, ಯಮಘಂಡ ಕಾಲ 03:39 ರಿಂದ 05:14ರ ವರೆಗೆ, ಗುಳಿಕ ಕಾಲ 07:44 ರಿಂದ 09:19ರ ವರೆಗೆ.

ಮೇಷ: ಆತ್ಮವಿಶ್ವಾಸವನ್ನು ಬೆಳಸಿಕೊಂಡ ನಿಮಗೆ ಸದಾ ಸಂತೋಷವು ಇರಲಿದೆ. ಮನೋರಂಜನೆಯಲ್ಲಿ ಪಾಲ್ಗೊಳ್ಳುವಿರಿ. ಮಕ್ಕಳ‌ ಮೇಲೆ ಸಿಟ್ಟಾದಂತೆ ನಟಿಸಿ ಅವರನ್ನು ನಿಯಂತ್ರಿಸುವಿರಿ. ನಿಮ್ಮ ಇಷ್ಟ ಮಿತ್ರರ ಜೊತೆ ಮಾತಕತೆ ನಡೆಸುವಿರಿ. ಸ್ನೇಹಿತರ ಸಮಸ್ಯೆಗಳಿಗೆ ಪರಿಹಾರವನ್ನು ಕೊಡಲು ಬಯಸುವಿರಿ. ಉತ್ತಮ ಭೋಜನವನ್ನು ನೀವು ಸ್ವೀಕರಿಸಲಿದ್ದೀರಿ. ನಿಮ್ಮ‌ ಮಾತುಗಳ ಸಂತೋಷದಿಂದ ಇದ್ದರೂ ಬೇಸರವಾಗುವ ಸಾಧ್ಯತೆ ಇದೆ. ವ್ಯವಹಾರದಲ್ಲಿ ಅಷ್ಟಾಗಿ ತೊಡಗಿಕೊಳ್ಳುವ ಮನಸ್ಸಿರದು. ಬಂಧುಗಳ ಭೇಟಿಯು ಖುಷಿ ಕೊಡಬಹುದು.

ವೃಷಭ: ಯಾರ ಮಾತನ್ನೂ ಕೇಳದೇ ಹಣ ಹೂಡಿಕೆ‌ ಮಾಡಿ ಕಳೆದುಕಳ್ಳುವಿರಿ. ಸಂಬಂಧಗಳು ಹದ ತಪ್ಪಬಹುದು. ಅನಿರೀಕ್ಷಿತ ಸುದ್ದಿಗಳು ನಿಮಗೆ ಸಂತೋಷವನ್ನು ತರುವುದು. ಅಸತ್ಯವನ್ನು ಸತ್ಯವೆಂದು ನಂಬಲಿದ್ದೀರಿ. ಹಣಕಾಸಿನ ವಿಚಾರದಲ್ಲಿ ಬಹಳ ತೊಂದರೆಗೆ ಸಿಕ್ಕಿಕೊಳ್ಳಬಹುದು. ಮಾನಸಿಕವಾಗಿ ಹಿಂಜರಿಕೆ ಇರಲಿದೆ. ಆಪ್ತರ ಮಾತು ನಿಮ್ಮನ್ನು ಚೇತರಿಸಿಕೊಳ್ಳಲು ಸಹಾಯ ಮಾಡಬಹುದು. ಚಟಗಳಿಂದ ಒಂದಿಷ್ಟು ಸಮಯ ಹಾಗೂ ಹಣವನ್ನು ವ್ಯರ್ಥ ಮಾಡಿಕೊಳ್ಳಲಿದ್ದೀರಿ. ಭವಿಷ್ಯದ‌ ಕುರಿತು ಆಲೋಚಿಸುವುದು ಉತ್ತಮ. ಸಕಾರಾತ್ಮಕ ವಿಚಾರದ‌ ಕಡೆ ನಿಮ್ಮ ಗಮನವಿರಲಿ.

ಮಿಥುನ: ಮನೆಯಿಂದ ದೂರ ಉದ್ಯೋಗದ ನಿಮಿತ್ತ ಇರಬೇಕಾಗಿ ಬರಬಹುದು. ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ಪ್ರಯತ್ನಿಸುವರು. ತಂದೆಯಿಂದ ಸಂಪತ್ತು ಸಿಗುವ ಸಾಧ್ಯತೆ ಇದೆ. ನಿರೀಕ್ಷೆಗೆ ತಕ್ಕ ಸಂಪತ್ತನ್ನು ಗಳಿಸುವಿರಿ. ಮೇಲಧಿಕಾರಿಗಳ ವಿಶ್ವಾಸವನ್ನು ಗಳಿಸುವ ಪ್ರಯತ್ನ ಮಾಡುವಿರಿ. ಹಿರಶತ್ರುಗಳು ನಿಮ್ಮನ್ನು ಗಮನಿಸುತ್ತಿರುವರು. ನಿಮ್ಮ ಏಳ್ಗೆಗೆ ದೈವಾನುಕೂಲವು ಸಹಾಯ ಮಾಡಲಿದೆ. ಪ್ರತಿಕೂಲ‌ ಸಂದರ್ಭವನ್ನು ಸರಿಯಾಗಿ ನಿಭಾಯಿಸುವಿರಿ. ತೊಂದರೆಗಳು ಬರುವುದು ನಿಲ್ಲುವುದು. ಇರುವುದನ್ನು ಸರಿ ಮಾಡಿಕೊಳ್ಳುವ ಜವಾಬ್ದಾರಿಯು ನಿಮ್ಮ ಮೇಲಿದೆ.

ಕಟಕ: ತೊಂದರೆಗಳಿಂದ ಮನಸ್ಸು ಕುಗ್ಗಬಹುದು. ಗೌಪ್ಯತೆಯನ್ನು ನೀವು ಕಾಪಾಡಿಕೊಳ್ಳಲಿದ್ದೀರಿ. ನೆರೆಹೊರೆಯವರು ನಿಮ್ಮ ಮನೆಗೆ ಬರಬಹುದು. ಸರ್ಕಾರಿ‌ ಕೆಲಸ ಕೊನೆಯ ಹಂತದಲ್ಲಿ ನಿಂತಿದ್ದು ಮುಂದುವರಿಸುವ ಪ್ರಯತ್ನ ಮಾಡುವಿರಿ. ಮಾತಿನ‌ ಮೇಲೆ ಯಾರನ್ನೂ ಅಳೆಯಬೇಡಿ. ಜೀವನ ನಿರ್ವಹಣೆಗೆ ಮತ್ತೊಂದು ವೃತ್ತಿಯನ್ನು ಆಶ್ರಯಿಸಬಹುದು. ಅತಿಯಾದ ಆಲಸ್ಯದಿಂದ ಮನೆಯ ಕೆಲಸಗಳು ಹಾಗೆಯೇ ಉಳಿದುಕೊಳ್ಳಬಹುದು. ದೂರದ ಪ್ರಯಾಣವನ್ನು ಅಪೇಕ್ಷಿಸುವಿರಿ. ಧಾರ್ಮಿಕವಾದ ಚಿಂತನೆಯನ್ನು ನಡೆಸಬಹುದು.

ಸಿಂಹ: ಸಹೋದ್ಯೋಗಿಗಳಿಂದ‌ ಕಛೇರಿಯಲ್ಲಿ ನಿಮಗೆ ಒತ್ತಡ ಪರಿಸ್ಥಿತಿ ಬರಬಹುದು. ಇದನ್ನು ನೀವು ಸವಾಲಾಗಿ ಸ್ವೀಕರಿಸಿ ಸೈ ಎನಿಸಿಕೊಳ್ಳಲಿದ್ದೀರಿ. ನಿಮ್ಮ ಆಪ್ತವಲಯವು ಇನ್ನೂ ದೊಡ್ಡದಾಗಬಹುದು. ಭೂಮಿಯನ್ನು ಖರೀದಿಸಲು ಸ್ಥಳ ಪರಿಶೀಲನೆಗೆ ಹೋಗುವ ಸಾಧ್ಯತೆ ಇದೆ. ಯಾರಾದರೂ ಹಣಕಾಸಿನ‌ ವಿಚಾರಕ್ಕೆ ಬಂದರೆ ಅಪಮಾನ ಮಾಡುವ ಸಾಧ್ಯತೆ ಇದೆ. ನಿಮ್ಮ ಕೆಲಸವನ್ನು ಉತ್ಸಾಹದಿಂದ ಮಾಡುವಿರಿ. ಯಾರನ್ನೂ ಅವಲಂಬಿಸುವ ಯೋಜನೆಯನ್ನು ನೀವು ಬಿಡುವಿರಿ. ಸಣ್ಣ ವಿವಾದಗಳು ಆಗಬಹುದು.‌ ಅಲ್ಲಿಯೇ ಬಗೆಹರಿಸಿಕೊಳ್ಳಿ. ದೊಡ್ಡ ಮಾಡಿಕೊಳ್ಳುವುದು ಬೇಡ.

ಕನ್ಯಾ: ಹಳೆಯ ರೋಗಗಳು ಕಡಿಮೆಯಾಗುವ ಸಾಧ್ಯತೆ ಇದೆ. ಕುಟುಂಬದಲ್ಲಿ ಮಂಗಲ ಕಾರ್ಯಗಳು ನಡೆಯಬಹುದು. ಸಂಗಾತಿಯ ಮಾತನ್ನು ಆಲಿಸಿ, ಇಲ್ಲವಾದರೆ ಸಿಟ್ಟಾದಾರು. ಮಕ್ಕಳ ವಿದ್ಯಾಭ್ಯಾಸ ಚಿಂತೆ ಕಾಡಬಹುದು. ಕಛೇರಿಯಲ್ಲಿ ನಿಮ್ಮ ಕೆಲಸವು ವೇಗವಾಗಿ ಮುಗಿದು ಆರಾಮಾಗಿ ಇರುವಿರಿ. ವಸ್ತ್ರಗಳನ್ನು ಖರೀದಿಸಬಹುದು. ಆಪ್ತರಿಂದ ನಿಮಗೆ ಉಡುಗೊರೆ ಸಿಗಬಹುದು. ತಾಯಿಯ ಜೊತೆ ಹರಟೆ ಹೊಡೆದು ಅವರ ಮನಸ್ಸನ್ನು ಹಗುರ ಮಾಡುವಿರಿ. ಮನಸ್ಸಿನ ದ್ವಂದ್ವಗಳನ್ನು ಸರಿದೂಗಿಸುವ ಸಾಮರ್ಥ್ಯವನ್ನು ಹೊಂದುವಿರಿ.

ತುಲಾ: ಉದ್ಯೋಗವನ್ನು ಬದಲಿಸುವುದು ನಿಮಗೆ ನಿತ್ಯದ ಕೆಲಸದಂತೆ ಸಲೀಸಾಗಬಹುದು. ಒಂದೇ ಉದ್ಯೋಗವನ್ನು ಹೆಚ್ವು ಕಾಲ ಮಾಡಲು ಇಷ್ಟ ಪಡದೇ ಬದಲಿಸುವಿರಿ. ಹೊಸ ಜನರನ್ನು ಭೇಟಿಯಾಗುವುದು ನಿಮಗೆ ಇಷ್ಟದ ಕೆಲಸದಲ್ಲಿ ಒಂದಾಗಿದೆ. ವಾತಾವರಣಕ್ಕೆ ಹೊಂದಿಕೊಳ್ಳುವ ಸ್ವಭಾವವನ್ನು ಬೆಳಿಸಿಕೊಳ್ಳಬೇಕಾಗಬಹುದು. ಸ್ನೇಹಿತರಿಂದ‌ ಏನನ್ನಾದರೂ ಇಂದು ನಿರೀಕ್ಷಿಸುವಿರಿ. ಸ್ತ್ರೀಯರ ಜೊತೆ ಹೆಚ್ಚು ಒಡನಾಟವಿರಬಹುದು. ಸಾಂಸಾರಿಕ‌ ಜೀವನವನ್ನು ಬಹಳ ಗಂಭೀರವಾಗಿ ಸ್ವೀಕರಿಸಿದ್ದೀರಿ. ಸಂಧಿಗಳಲ್ಲಿ ನೋವುಗಳು ಹೆಚ್ಚಾಗಬಹುದು. ನಿಷ್ಕಾಳಜಿ ಮಾಡಬೇಡಿ.

ವೃಶ್ಚಿಕ: ಹೊಸ ಆದಾಯದ ಮೂಲವನ್ನು ಹುಡುಕಲು ಆರಂಭ ಮಾಡುವಿರಿ. ಇದಕ್ಕೆ ಸಹೋದರನ ಬೆಂಬಲವೂ ಸಹಕಾರವೂ ಸಿಗಲಿದೆ. ಅನಗತ್ಯ ಓಡಾಟದಿಂದ ಶರೀರಕ್ಕೆ ಆಯಾಸವಾಗಬಹುದು. ನಿಮ್ಮ ವಾಹನವನ್ನು ಅಪರಿಚಿತರ ಕೈಗೆ ನೀಡಬೇಡಿ. ಇಂದು ನೀವು ಸೋಲನ್ನು ಒಪ್ಪಿಕೊಳ್ಳುವ ಮನಃಸ್ಥಿತಿಯಲ್ಲಿ ಇರುವುದಿಲ್ಲ. ಅನಾರೋಗ್ಯವಿದ್ದರೂ ಉತ್ಸಾಹದಿಂದ ನೀವು ಕೆಲಸವನ್ನು ಮಾಡುವಿರಿ. ವಿದ್ಯಾರ್ಥಿಗಳು ತಮ್ಮ ಅನುಭವವನ್ನು ಹೆಚ್ಚಿಸಿಕೊಳ್ಳುವರು. ಅನೇಕ ಕ್ಷೇತ್ರಗಳಲ್ಲಿ ಬೆಳೆಯಬೇಕು ಎಂಬ ತುಡಿತ ಉಂಟಾಗಬಹುದು. ಯಾರ ಜೊತೆ ಸ್ಪರ್ಧೆಗೆ ಇಳಿಯೇ ನಿಮ್ಮ ಕೆಲಸವನ್ನು ಮುಂದುರಿಸುವುದು ಉತ್ತಮ.

ಧನು: ಮಾತಿನ ಮೇಲೆ ಹಿಡಿತವಿರಲಿ. ನೀವಾಡುವ ಅನವಶ್ಯಕ ಹಾಗೂ ನಿಷ್ಪ್ರಯೋಜಕ‌ ಮಾತಿನಿಂದ ನಿಮ್ಮನ್ನು ಅಳೆಯಬಹುದು. ಯಾರದೋ ಮಾತಿಗೆ ಮಣಿದು ನಿಮ್ಮ ಗುರಿಯನ್ನು ಬದಲಿಸಿಕೊಳ್ಳುವುದು ಸರಿಯಲ್ಲ. ನೀವು ಬಹಳ ವೇಗವಾಗಿ ನಡೆಯುವಿರಿ ಹಾಗೂ ವೇಗವಾಗಿ ಮಾತನಾಡುವಿರಿ. ಸ್ತ್ರೀಯರಿಂದ ಸಹಕಾರವು ಸಿಗಬಹುದು. ಕಛೇರಿಯಲ್ಲಿ ಸ್ತ್ರೀಸಂಬಂಧವಾದ ಅಪವಾದವೂ ಹುಟ್ಟಿಕೊಂಡೀತು. ನಿಮ್ಮವರನ್ನು ನೀವು ಬಿಟ್ಟುಕೊಡಲಾರಿರಿ. ನಿಮ್ಮ ಕೆಲಸವು ನಿಮಗೆ ತೃಪ್ತಿಕರವಾಗಿ ಇರಲಿದೆ. ಆತ್ಮೀಯರ ಜೊತೆ ಇಂದಿನ ವಿಶೇಷವನ್ನು ಹಂಚಿಕೊಳ್ಳುವಿರಿ.

ಮಕರ: ಹಳೆಯ ಪ್ರಣಯವು ಮತ್ತೆ ಚಿಗುರಿಡೆಯಬಹುದು. ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು ನೀವು ಸೋಲಬಹುದು. ನಿಮ್ಮ ಆಲೋಚನೆಗಳನ್ನು ಬೇರೆಯವರ ಮೇಲೆ ಹೇರಬೇಡಿ. ಅನ್ಯರ ತಪ್ಪುಗಳನ್ನು ಮನ್ನಿಸುವ ಗುಣವನ್ನು ಇಟ್ಟುಕೊಳ್ಳುವುದು ಒಳ್ಳೆಯದು. ಪುಣ್ಯಕ್ಷೇತ್ರಗಳಿಗೆ ಬಂಧುಗಳ ಜೊತೆ ಹೋಗಲಿದ್ದೀರಿ. ಆಕಸ್ಮಿಕವಾದ‌ ಕೆಲವು ಘಟನೆಗಳು ನಿಮ್ಮನ್ನು ಚಿಂತೆಯಲ್ಲಿ ಇರುವಂತೆ ಮಾಡುವುದು. ಯುಕ್ತಿಯಿಂದ ನಿಮ್ಮ‌ ಕಾರ್ಯವನ್ನು ಸಾಧಿಸಿಕೊಳ್ಳಿ. ಎಲ್ಲಿಯೂ ಕಲಹವಾಗದೇ ಕೆಲಸವು ಮುಕ್ತಾಯವಾಗುವುದು. ವಿಶೇಷ ಸಂದರ್ಭದಲ್ಲಿ ಭಾಗವಹಿಸಲಿದ್ದೀರಿ.

ಕುಂಭ: ದಿನಸಿ ವ್ಯಾಪಾರವನ್ನು ಮಾಡುತ್ತಿದ್ದರೆ ನಿಮಗೆ ಅನುಕೂಲವಿದೆ. ಶತ್ರುಗಳ ಕಾಟವಿರಬಹುದು. ಮಾನಸಿಕವಾಗಿ ಅವರು ನಿಮಗೆ ಇಂದು ತೊಂದರೆಯನ್ನು ಕೊಡಬಹುದು. ಕುಟುಂಬದಲ್ಲಿ ಆಸ್ತಿಗೆ ಸಂಬಂಧಿಸಿದಂತೆ ಕಲಹಗಳು ಆಗಬಹುದು. ಅದು ಆಗದಂತೆ ನೋಡಿಕೊಳ್ಳುವುದು ಉತ್ತಮ. ಬರಬೇಕಾದ ಸಂಪತ್ತು ಕೈಗೆ ಸಿಗದೇ ಸಾಲವನ್ನು ಮಾಡಬೇಕಾದೀತು. ಕುಟುಂಬದಲ್ಲಿ ನಿರ್ವಹಣೆತು ಸರಿಯಾಗಿ ಆಗುತ್ತಿಲ್ಲ ಎಂದು ದಾಂಪತ್ಯದಲ್ಲಿ ಕಲಹವು ಉಂಟಾಗಬಹುದು. ವಾತಕ್ಕೆ ಸಂಬಂಧಿಸಿದ ರೋಗಗಳು ಹೆಚ್ಚಾಗಬಹುದು. ಔಷಧೋಪಚಾರವನ್ನು ಸರಿಯಾಗಿ ಮಾಡಿಕೊಳ್ಳುವುದು ಉತ್ತಮ.

ಮೀನ: ನಿಮ್ಮ ನಿರೀಕ್ಷೆಯಂತೆ ಬರಬೇಕಾದ ಹಣವು ಬರಬಹುದು. ಆಯ್ಕೆ ವಿಚಾರದಲ್ಲಿ ನೀವು ಸೋಲಬಹುದು. ಸಿಹಿ ನೆನಪು ಕಾಡಲಿದೆ. ಸಂಗಾತಿಯ ಜೊತೆ ವಾಸ್ತವದ ಬಗ್ಗೆ ಆಲೋಚಿಸಿ. ನಿಮ್ಮವರ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇದೆ. ಪತ್ನಿಯ ಜೊತೆ ದೂರದ ಊರಿಗೆ ಪ್ರಯಾಣವನ್ನು ಮಾಡುವಿರಿ. ಭೂಮಿಯ ವ್ಯವಹಾರಕ್ಕೆ ಸದ್ಯ ಕೈ ಹಾಕುವುದು ಬೇಡ. ಮಕ್ಕಳು ನಿಮ್ಮಿಂದ ಹಣವು ಖಾಲಿಯಾಗುವಂತೆ ಮಾಡಿಯಾರು. ಅವರು ಬೇಸರಗೊಳ್ಳದಂತೆ ನೋಡಿಕೊಳ್ಳಿ. ಸಮೀಪದ ಶಿವಾಲಯಕ್ಕೆ ಹೋಗಿ ರುದ್ರಾಭಿಷೇಕವನ್ನು ಮಾಡಿಸಿ.

ಲೋಹಿತಶರ್ಮಾ 8762924271 (what’s app only)