ಶುಭೋದಯ ಓದುಗರೇ, ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದ್ರೆ ಇಂದಿನ (2023 ಮೇ 9) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ: ಭರಣೀ, ಮಾಸ: ವೈಶಾಖ, ಪಕ್ಷ: ಕೃಷ್ಣ, ವಾರ: ಮಂಗಳ, ತಿಥಿ: ಚತುರ್ಥೀ, ನಿತ್ಯನಕ್ಷತ್ರ: ಮೂಲಾ, ಯೋಗ: ಸಿದ್ಧಿ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 08 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 49 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 03:39 ಗಂಟೆ 05:15ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 09:18 ರಿಂದ 10:54ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:29 ರಿಂದ 02:04ರ ವರೆಗೆ.
ಧನು: ಕೊಟ್ಟಿದ್ದನ್ನು ಪುನಃ ಕೇಳಲು ಹೋಗಬೇಡಿ. ನಿಮ್ಮದಲ್ಲ ಎಂಬ ನಿರ್ಧಾರವನ್ನು ಮಾಡಿಬಿಡಿ. ಸಂಗಾತಿಯು ಕಾಲು ಕೆರೆದು ಕಲಹಕ್ಕೆ ಬರಬಹುದು. ನಿಮ್ಮ ಕಡೆ ತಾಳ್ಮೆಯ ಗುರಾಣಿ ಇರಲಿ. ನೀವೂ ಕತ್ತಿವರಸೆ ಮಾಡಿಬಿಟ್ಟೀರ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಂಡು ಸಂತೋಷವಾಗಲಿದೆ. ವಿದೇಶಕ್ಕೆ ಸುತ್ತಾಟ ಮಾಡಲು ಹೋಗಬಹುದು. ಕೆಲಸವು ನಿಧಾವಾಗಿ ಸಾಗುವುದು. ಮನಸ್ಸಿಗೆ ಸ್ವಲ್ಪ ನೆಮ್ಮದಿ ಸಿಗಬಹುದು. ಆಪ್ತರ ಕೂಟದಲ್ಲಿ ಭಾಗಿಯಾಗಿ ನಕ್ಕು ನಲಿಯುವಿರಿ. ಅವರ ಬಳಿ ಆರ್ಥಿಕತೆಯ ಬಗ್ಗೆ ವಿಚಾರಿಸುವಿರಿ. ಪರಮೇಶ್ವರಿಯನ್ನು ಸ್ತೋತ್ರ ಮಾಡಿ. ಕೆಲಸಗಳು ಸಲೀಸಾದೀತು.
ಮಕರ: ಸಿಕ್ಕಿದ ವಸ್ತುಗಳನ್ನು ದುರುಪಯೋಗ ಮಾಡಿಕೊಳ್ಳುವ ಮನಸ್ಸು ಉಂಟಾಗಬಹುದು. ಮುಂದೆ ಉಪಯೋಗಕ್ಕೆಂದು ಇಟ್ಟಿದ್ದ ಹಣವು ಖಾಲಿಯಾಗಲಿದೆ. ವಿರುದ್ಧ ಆಹಾರವನ್ನು ಸ್ವೀಕರಿಸಿ ಅನಾರೋಗ್ಯವನ್ನು ತಂದುಕೊಳ್ಳಬಹುದು. ಆಯ್ಕೆಯ ಗೊಂದಲದಿಂದ ಚಿಂತೆಗೊಳ್ಳಬಹುದು. ಖರೀದಿಯನ್ನು ಆದಷ್ಟು ಕಡಮೆ ಮಾಡುವುದು ಉತ್ತಮ. ಸಹಾಯಕ್ಕಾಗಿ ಬರುವವರ ಮೇಲೆ ಒಂದು ಕಣ್ಣಿರಲಿ. ಅಧ್ಯಾತ್ಮವನ್ನು ನಿಮ್ಮ ರಕ್ಷಣೆಗೆ ಬಳಸಿಕೊಳ್ಳಬಹುದು. ಆಪ್ತರಿಗೆ ನಿಮ್ಮ ಒಡಲಾಳವನ್ನು ಹೇಳಿಕೊಳ್ಳುವಿರಿ. ಧಾರ್ಮಿಕ ಆಚರಣೆಗಳಲ್ಲಿ ಹಿನ್ನಡೆ ಇರಲಿದೆ.
ಕುಂಭ: ಪ್ರೇಮಿಯ ಜಾಣತನದ ಮಾತಿಗೆ ಮಾರು ಹೋಗಿ ಮಾತು ಕೊಟ್ಟುಬಿಡಬಹುದು. ನಿಮ್ಮ ಮೇಲೆ ನಿಮಗೆ ನಿಗಾ ಇರಲಿ. ಕಛೇರಿಯ ವ್ಯವಹಾರಗಳು ಸಂಪೂರ್ಣವಾಗಿ ಅರ್ಥವಾಗದೇ ಏನನ್ನೂ ಮಾಡಲು ಹೋಗಬೇಡಿ. ಅಂತಿಮವಾಗಿ ನಿಮ್ಮ ತಲೆಗೇ ಬಂದೀತು. ಅತಿಯಾದ ಕೆಲಸದಿಂದ ಸುಸ್ತಾಗಿ ಜ್ವರ ಬರುವ ಸಾಧ್ಯತೆ ಇದೆ. ಅದಕ್ಕೂ ಮೊದಲೇ, ಬಾರದಂತೆ ಜಾಗರೂಕರಾಗಿರಿ, ಬೇಕಿದ್ದಲ್ಲಿ ವಿಶ್ರಾಂತಿ ಪಡೆಯಿರಿ. ಹೂಡಿಕೆಯ ಬಗ್ಗೆ ಮನಸ್ಸಿದ್ದರೂ ಅದು ಅರ್ಥವಾಗದೇ ಸುಮ್ಮನೇ ಇರುವಿರಿ. ಅಕಾರಣವಾಗಿ ಸುತ್ತಾಟ ಮಾಡಬಹುದು. ನಾರಾಯಣನ ಸ್ತೋತ್ರವನ್ನು ಮಾಡಿ.
ಮೀನ: ಸಂತೋಷದ ಅನಂತರ ದುಃಖ ಎಂಬ ಮೂಢನಂಬಿಕೆಯನ್ನು ಬಿಡಿ. ಸಂತೋಷವಾಗಿ ದಿನವನ್ನು ಕಳೆಯಿರಿ. ಖರ್ಚಿಗೆ ಬರುವ ಎಲ್ಲ ಮಾರ್ಗವನ್ನೂ ನೀವು ನಿಲ್ಲಿಸುವಿರಿ. ಕೆಲಸಕ್ಕಾಗಿ ದೂರದ ಊರಿಗೆ ಹೋಗಬೇಕಾಗಬಹುದು. ಕೆಲಸಕ್ಕಾಗಿ ನೀವು ಕಾಯಬೇಕಾದೀತು. ಬಂಧುಗಳ ಮನೆಯಲ್ಲಿ ಇಂದು ವಾಸ ಮಾಡಲಿದ್ದೀರಿ. ಪತ್ನಿಯ ಜೊತೆ ಕಲಹವಾಗಬಹುದು. ದ್ವೇಷವನ್ನು ಸಾಧಿಸಲು ಹೋಗುವುದಿಲ್ಲ. ಮರೆತು ಸಹಜಸ್ಥಿತಿಗೆ ಬರುವುದು ಒಳ್ಳೆಯದು. ಹನುಮಾನ್ ಚಾಲೀಸ್ ಪಠನವು ನಿನಗೆ ಶ್ರೇಯಃಪ್ರದವಾಗಲಿದೆ.
-ಲೋಹಿತಶರ್ಮಾ ಇಡುವಾಣಿ
Published On - 6:26 am, Tue, 9 May 23