Daily Horoscope: ಮೇಷ, ವೃಷಭ, ಮಿಥುನ, ಕಟಕ ರಾಶಿಗಳ ಇಂದಿನ ಭವಿಷ್ಯ ಹೀಗಿದೆ
ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಮೇ 10) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಶುಭೋದಯ ಓದುಗರೇ. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದ್ರೆ ಇಂದಿನ (2023 ಮೇ 10) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ : ಭರಣೀ, ಮಾಸ : ವೈಶಾಖ, ಪಕ್ಷ : ಕೃಷ್ಣ, ವಾರ : ಬುಧ, ತಿಥಿ : ಪಂಚಮೀ, ನಿತ್ಯನಕ್ಷತ್ರ : ಪೂರ್ವಾಷಾಢ, ಯೋಗ: ಸಾಧ್ಯ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 08 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಬೆಳಗ್ಗೆ 49 ನಿಮಿಷಕ್ಕೆ, ರಾಹು ಕಾಲ 12:29 ರಿಂದ 02:04ರ ವರೆಗೆ, ಯಮಘಂಡ ಕಾಲ 07:43 ರಿಂದ 09:18ರ ವರೆಗೆ, ಗುಳಿಕ ಕಾಲ 10:54 ರಿಂದ 12:29ರ ವರೆಗೆ.
ಮೇಷ: ಹಣಕಾಸಿನ ವ್ಯವಹಾರದಲ್ಲಿ ನಿಮಗೆ ಹೆಚ್ಚು ಸಂದೇಹಗಳು ಬರಬಹುದು. ಅತ್ಯಾಪ್ತರನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಮನೋರಂಜನೆಯನ್ನು ಇಂದು ಹೆಚ್ಚು ಇಷ್ಟಪಡುವಿರಿ. ನಿಮ್ಮ ಪರಿಕಲ್ಪನೆಯಂತೆ ಹೊಸ ಕಾರ್ಯಗಳು ಆರಂಭವಾಗಲಿದೆ. ಅದೃಷ್ಟವನ್ನು ನಂಬಿ ಮಾಡದಿದ್ದರೂ ಇರುವ ಅದೃಷ್ಟವೇ ನಿಮ್ಮನ್ನು ಕೈ ಹಿಡಿದು ನಡೆಸಲಿದೆ. ಸಾಮಾಜಿಕ ಕೆಲಸವನ್ನು ಮಾಡುವ ಹುಮ್ಮಸ್ಸು ಇಂದು ಇರಲಿದೆ. ಕೇಳಿದ ಬಂದವರಿಗೆ ಯಥಾಯೋಗ್ಯ ಸಹಾಯವನ್ನು ಮಾಡುವಿರಿ. ಕೋಪವನ್ನು ಕಡಿಮೆ ಮಾಡಿಕೊಂಡಿದ್ದರ ಪರಿಣಾಮ ನಿಮ್ಮ ಆಪ್ತರ ಸಂಖ್ಯೆ ಹೆಚ್ಚಾಗಿದೆ. ಇರುವ ಕೆಲಸದಿಂದ ಲಾಭವನ್ನು ದ್ವಿಗುಣಗೊಳಿಸಿಕೊಲ್ಳುವುದು ಉತ್ತಮ.
ವೃಷಭ: ನಿರೀಕ್ಷೆ ಮೀರಿದ ಅನುಕೂಲತೆಗಳು ಇದ್ದರೂ ಸಂತೃಪ್ತಿಯು ಇರಲಾರದು. ಪ್ರಣಯದಲ್ಲಿ ಅತಿಯಾದ ಆಸಕ್ತಿಯೂ ಇರಲಾರದು. ಹಳೆಯ ಘಟನೆಯು ಇಂದು ಕಾರಣಾಂತರದಿಂದ ನೆನಪಾಗಿ ಕಾಡಲಿದೆ. ಬಂಧುವರ್ಗವು ನಿಮಗೆ ವಿವಾಹಕ್ಕೆ ಸಂಬಂಧಿಸಿದ ಸಹಾಯವನ್ನು ಮಾಡಬಹುದು. ಕೃತಜ್ಞತೆಯನ್ನು ಇಟ್ಟುಕೊಳ್ಳುವುದನ್ನು ಮರೆಯಬೇಡಿ. ಖುಷಿಯಿಂದ ದಿನವನ್ನು ಕಳೆಯುವಿರಿ. ದೇಶವನ್ನು ಸುತ್ತುವ ಮನಸ್ಸಾದೀತು. ವೈದ್ಯಕೀಯ ವಿಚಾರದಲ್ಲಿ ನಿಮಗೆ ಕೆಲವು ಕುತೂಹಲವು ಉಂಟಾಗಬಹುದು. ಆಪ್ತರ ಜೊತೆ ಸಮಾಲೋಚನೆ ನಡೆಸುವಿರಿ.
ಮಿಥುನ: ಯಾರನ್ನೂ ಹಗುರವಾಗಿ ಕಾಣುವುದು ಬೇಡ. ನಿಮ್ಮ ಸಾಮರ್ಥ್ಯವನ್ನು ಪ್ರದರ್ಶಿಸುವ ಅವಶ್ಯಕತೆ ಇಲ್ಲ. ಅದು ತಾನಾಗಿಯೇ ಗೊತ್ತಾಗಲಿದೆ. ನೂತನ ಅಧಿಕಾರವೂ ನಿಮಗಾಗಿ ಸೃಷ್ಟಿಯಾದೀತು. ಕಾರ್ಯದಲ್ಲಿ ಇರುವ ದಕ್ಷತೆಯನ್ನು ಎಲ್ಲರೂ ಮೆಚ್ಚುವರು. ಸಮಯಕ್ಕೆ ಹೆಚ್ಚು ಮಹತ್ವವನ್ನು ನೀವು ಕೊಡಲಿದ್ದೀರಿ. ಕಛೇರಿಯ ಕೆಲಸವೇ ಇಂದು ಅಧಿಕವಾದೀತು. ನಿಮ್ಮ ಆಲೋಚನೆಗಳನ್ನು ಅನುಷ್ಠಾನಕ್ಕೆ ತರುವ ಪ್ರಯತ್ನ ಮಾಡುವಿರಿ. ಇನ್ನೊಬ್ಬರ ಸ್ಥಿತಿಯನ್ನು ಕಂಡು ನೀವು ನೆಮ್ಮದಿಯಿಂದ ಇರುವಿರಿ. ಸಂಗಾತಿಯಿಂದ ಅನಿರೀಕ್ಷಿತ ಸಮಾಚಾರ ಬರಬಹುದು.
ಕಟಕ: ಸ್ವಾಭಿಮಾನಕ್ಕೆ ಧಕ್ಕೆ ಬಂದು ಮನಸ್ಸಿನಲ್ಲಿ ಬಹಳ ಹಿಂಸೆಯನ್ನು ಅನುಭವಿಸಬಹುದು. ಸ್ನೇಹಿತರ ಜೊತೆ ಸುತ್ತಟ ಹಾಗೂ ಭೋಜನವನ್ನು ಮಾಡುವಿರಿ. ದಾಂಪತ್ಯದಲ್ಲಿ ಸುಖವಿದ್ದರೂ ಸಣ್ಣ ಕಿರಿಕಿರಿಗಳು ಬಂದು ಹೋಗಬಹುದು. ದಿನಚರ್ಯೆಯಲ್ಲಿ ವ್ಯತ್ಯಾಸವನ್ನು ಇಂದು ಕಾಣಬಹುದಾಗಿದೆ. ಹಠ ಸ್ವಭಾವವನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳುವುದು ಉತ್ತಮ. ಕ್ಷಣದ ಕೋಪವು ನಿಮ್ಮ ಉತ್ಸಾಹವನ್ನು ಕುಂದಿಸೀತು. ಮಾತಿನಲ್ಲಿ ಕಠೋರತಯು ಕಡಿಮೆಯಾದರೆ ಒಳ್ಳೆಯದು. ಕಫಪ್ರಕೃತಿಯು ನಿಮ್ಮನ್ನು ಹಿಂಸಿಸಬಹುದು.