ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಏಪ್ರಿಲ್ 12) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ವಸಂತ ಋತು, ಮೀನ ಮಾಸ, ಮಹಾನಕ್ಷತ್ರ: ರೇವತೀ, ಮಾಸ: ಚೈತ್ರ, ಪಕ್ಷ: ಶುಕ್ಲ, ವಾರ: ಶುಕ್ಲ, ತಿಥಿ: ಚತುರ್ಥೀ, ನಿತ್ಯನಕ್ಷತ್ರ: ರೋಹಿಣೀ, ಯೋಗ: ಆಯುಷ್ಮಾನ್, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 21 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 45 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 11:01 ರಿಂದ 12:33ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 03:39 ರಿಂದ 05:12 ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 07:55 ರಿಂದ 09:28ರ ವರೆಗೆ.
ಮೇಷ ರಾಶಿ : ಇಂದು ಸ್ವಾರ್ಥಿಗಳ ಸಹವಾಸವು ನಿಮಗೆ ಬೇಡವೆನಿಸಬಹುದು. ನಿಮ್ಮನ್ನು ಯಾರಾದರೂ ಬಳಸಿಕೊಂಡು ಕೈಬಿಡಬಹುದು. ನಂಬಿಕೆಯನ್ನು ಪಡೆದ ಅನಂತರವೇ ಕಾರ್ಯದಲ್ಲಿ ಮುನ್ನಡೆಯಿರಿ. ಸಮಸ್ಯೆಗಳಿಗೆ ಸೊಪ್ಪು ಹಾಕಿದಷ್ಟೂ ದೊಡ್ಡದಾಗುತ್ತದೆ. ಮಕ್ಕಳ ಚಲನವಲನದ ಕಡೆಗೆ ಗಮನವಿರಲಿ. ಆಹಾರದ ವ್ಯತ್ಯಾಸದಿಂದ ಆರೋಗ್ಯವನ್ನು ಹಾಳುಮಾಡಿಕೊಳ್ಳುವಿರಿ. ಕುಟುಂಬದ ಜವಾಬ್ದಾರಿಯನ್ನು ಅನಿವಾರ್ಯ ಕಾರಣಕ್ಕೆ ಪಡೆಯಬೇಕಾದೀತು. ಮನೆಯನ್ನು ಸ್ಥಳಾಂತರ ಮಾಡುವಿರಿ. ಗುರಿಯನ್ನು ಸಾಧಿಸಿದ ಸಂಭ್ರಮವು ನಿಮಗೆ ಇರುವುದು. ಆಪ್ತರಿಗೆ ನಿಮ್ಮ ಮೇಲಿರುವ ಭಾವನೆಯು ಬದಲಾಗಬಹುದು. ಸ್ಪರ್ಧಾತ್ಮಕ ಚಟುವಟಿಕೆಯಲ್ಲಿ ಹಿನ್ನಡೆಯಾಗಬಹುದು. ಸಹೋದ್ಯೋಗಿಗಳ ವರ್ತನೆಯು ಇಷ್ಟವಾಗದೇ ಸಿಟ್ಟಾಗುವಿರಿ. ಆಕಸ್ಮಿಕ ದ್ರವ್ಯ ಲಾಭದಿಂದ ಖುಷಿ ಪಡುವಿರಿ. ನಿಮ್ಮ ಉಪಕರಣಗಳು ದುರಸ್ತಿಗೆ ಬರಬಹುದು. ಯೋಗ್ಯತೆಗೆ ಅನುಗುಣವಾದ ಕಾರ್ಯವನ್ನು ಒಪ್ಪಿಕೊಳ್ಳಿ.
ವೃಷಭ ರಾಶಿ : ಪುಣ್ಯಸ್ಥಳಗಳಿಂದ ನಿಮಗೆ ನೆಮ್ಮದಿ ಸಿಗಲಿದೆ. ಇತ್ತೀಚೆಗೆ ನಡೆದ ಘಟನೆಗಳು ನಿಮ್ಮನ್ನು ಕಾಡಲಿದೆ. ನಿಮ್ಮನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಲ್ಲ ಕಡೆ ಎಂದು ಅನ್ನಿಸುತ್ತಿರಬಹುದು. ಅದನ್ನು ಆಲೋಚನೆಯಿಂದ ದೂರವಿರಿಸಿ. ವ್ಯಾಪರದ ವಿಚಾರದಲ್ಲಿ ಸಹಭಾಗಿಯ ಜೊತೆ ಮಾತನಾಡಿ ಮುಂದಡಿಯಿಡಿ. ನಿಮಗೆ ಸಿಕ್ಕ ಗೌರವವನ್ನು ಬೇರೆಯವರಿಗೆ ಬಿಟ್ಟುಕೊಡುವಿರಿ. ಅಪರಿಚಿತ ಕ್ಷೇತ್ರಕ್ಕೆ ಮುಂದಡಿಯಿಡುವಾಗ ಜಾಗರೂಕತೆ ಇರಲಿ. ದೊಡ್ಡ ಯೋಜನೆಯು ಚೆನ್ನಾಗಿದ್ದರೂ ಅದನ್ನು ಕಾರ್ಯರೂಪಕ್ಕೆ ತರಲು ಆಗದು. ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಉತ್ತಮ ಅವಕಾಶ ಸಿಗಬಹುದು. ವಿದೇಶದಲ್ಲಿ ವಾಸಿಸುವವರಿಂದ ಶುಭವಾರ್ತೆ ಸಿಗುವುದು. ನಿಯಮಪಾಲನೆಯಲ್ಲಿ ನೀವು ನಿಸ್ಸೀಮರು. ಅನಾದರದಿಂದ ನಿಮಗೆ ಬೇಸರವಾದೀತು. ಎಲ್ಲ ಸಮಸ್ಯೆಯೂ ನಿಮ್ಮದೇ ಎಂಬಂತೆ ಇರುವಿರಿ. ಪುಣ್ಯಕ್ಷೇತ್ರದ ದರ್ಶನವನ್ನು ಮಾಡಿ. ಮಿತವಾದ ಮಾತು ನಿಮಗೆ ಆಗದು. ಹೊಸತನಕ್ಕೆ ತೆರೆದುಕೊಳ್ಳುವ ಅಗತ್ಯತೆಯು ಇದೆ.
ಮಿಥುನ ರಾಶಿ : ಇಂದು ನಿಮಗೆ ಶ್ರಮಕ್ಕೆ ಯೋಗ್ಯವಾದ ಫಲವು ಸಿಗದೇ ಬೇಸರಬರಬಹುದು. ಕೃಷಿಗೆ ಸಂಬಂಧಪಟ್ಟ ಕೆಲಸಗಳನ್ನು ಮಾಡಲು ಬಯಸುತ್ತೀರಿ. ನಿಮ್ಮ ಸ್ವಂತ ವಾಹನದಲ್ಲಿ ಇಂದು ಎಲ್ಲಿಗೂ ಪ್ರಯಾಣ ಮಾಡಬೇಡಿ. ಹಿರಿಯರ, ತಜ್ಞರ ಮಾತುಗಳು ನಿಮಗೆ ನಿಮ್ಮ ಬಹುದಿನದಿಂದ ಬೆಳವಣಿಗೆ ಕಾಣದ ಯೋಜನೆಯೊಂದು ಆರಂಭವಾಗುತ್ತದೆ. ವೃತ್ತಿಯಲ್ಲಿ ನಿಮ್ಮನ್ನು ಸೋಲಿಸಬಹುದು. ಮಕ್ಕಳ ಜೊತೆ ಖುಷಿಯಿಂದ ಕಳೆಯಿರಿ. ಚಿಂತನಾತ್ಮಕ ಕೆಲಸದಲ್ಲಿ ನೀವು ಆಸಕ್ತಿ ಹೊಂದಿರುತ್ತೀರಿ. ಹೊಸ ವ್ಯವಹಾರದ ಪ್ರಸ್ತಾಪವು ನಿಮಗೆ ಒಪ್ಪಿಗೆ ಆದೀತು. ನೀವು ಪಾಲುದಾರಿಕೆಯಲ್ಲಿಯೇ ಇರಲು ಇಷ್ಟಪಡುವಿರಿ. ಭೂವ್ಯವಹಾರದ ಪ್ರಸ್ತಾಪವು ಕುಟುಂಬದಲ್ಲಿ ನಡೆಯಬಹುದು. ಸ್ಥಿರಾಸ್ತಿಯ ಬಗ್ಗೆ ಸರಿಯಾದ ಮಾಹಿತಿಯನ್ನು ಪಡೆದುಕೊಳ್ಳುವಿರಿ. ಅಪಾಯವು ನಿಮ್ಮ ಕಡೆಗೆ ತಿರುಗೀತು. ಕ್ರಿಯಾಶೀಲತೆಯನ್ನು ನೀವು ಬಿಟ್ಟಿರುವುದು ನಿಮ್ಮ ಮನಸ್ಸಿಗೆ ಬರಲಿದೆ. ನೂತನ ವಸ್ತುಗಳಿಂದ ನಿಮಗೆ ಇಂದು ಸಂತೋಷವು ಸಿಗುವುದು.
ಕಟಕ ರಾಶಿ : ಸಾಲಬಾಧೆಯು ನಿಮಗೆ ಕಿರಿಕಿರಿ ಕೊಡಬಹುದು. ಯಾರ ಮಾತಿನ ಮೇಲೂ ಪೂರ್ವಾಗ್ರಹಸಿಂದ ಪೀಡಿತರಾದವರ ಮನಃಸ್ಥಿತಿಯನ್ನು ಇರಿಸಿಕೊಳ್ಳಬೇಡಿ. ಅಧ್ಯಾತ್ಮದಲ್ಲಿ ಒಲವು ಮೂಡಬಹುದು. ಬಂಧುಗಳ ಜೊತೆ ನಿಮ್ಮ ಹೊಂದಾಣಿಕೆ ಕಷತಡವಾಗಬಹುದು. ಅದನ್ನೇ ಗಟ್ಟಿಗೊಳಿಸಿಕೊಂಡು ಮುನ್ನಡೆಯಿರಿ. ಅನೇಕ ಉತ್ತಮಮಾರ್ಗಗಳು ತೆರೆದುಕೊಳ್ಳಬಹುದು. ರಾತ್ರಿ ವಿಳಂಬ ಮಾಡದೇ ಬೇಗ ಮಲಗಿ. ಉತ್ತಮನಿದ್ರೆ ನಿಮ್ಮ ಮಾನಸಿಕ ಸ್ಥಿತಿಯನ್ನು ಉತ್ತಮಗೊಳಿಸಲಿದೆ. ನಿಮ್ಮ ಅತಿಯಾದ ಆತ್ಮವಿಶ್ವಾಸವೂ ನಿಮಗೇ ತೊಂದರೆಯನ್ನು ಉಂಟುಮಾಡೀತು. ಎಲ್ಲರಿಂದ ಹೇಳಿಸಿಕೊಳ್ಳುಬಿರಿ. ಅಚಾತುರ್ಯದಿಂದ ಆದ ತಪ್ಪನ್ನು ನೀವು ಸರಿ ಮಾಡಲು ಪ್ರಯತ್ನಿಸುವಿರಿ. ನಿಮ್ಮಲ್ಲಿ ಸಮೃದ್ಧಿಯು ಇರಲಿದೆ. ಸಮಾರಂಭಗಳಲ್ಲಿ ಬಂಧುಗಳು ನಿಮ್ಮನ್ನು ಭೇಟಿಯಾಗುವರು. ನಿಮ್ಮ ವಿರೋಧಿಗಳಗೆ ಮಾತಿನಿಂದ ಉತ್ತರಿಸಿ ಉಪಯೋಗವಿಲ್ಲ. ಕೃತಿಯಿಂದ ತೋರಿಸಿ. ಮನೆಯಿಂದ ನಿಮಗೆ ಶುಭಸಂದೇಶದ ಆಗಮನವಾಗಲಿದೆ. ಸಹೋದ್ಯೋಗಿಗಳ ಬೆಂಬಲವು ಉದ್ಯೋಗದಲ್ಲಿ ಸಿಗಲಿದೆ.
ಸಿಂಹ ರಾಶಿ : ನೀವು ಹಾಸಿಗೆ ಇದ್ದಷ್ಟು ಕಾಲು ಚಾಚುವುದು . ಕೈಗೆಟಕುದ ಯಾವುದಕ್ಕೂ ನಿಮ್ಮ ಪ್ರಯತ್ನವನ್ನು ಮಾಡುವುದು ಬೇಡ. ವಿವಾಹ ನಡೆದು ಇಂದು ವಾರ್ಷಿಕೋತ್ಸವ ಮಾಡಿಕೊಳ್ಳುತ್ತ ಹಳೆಯದನ್ನು ನೆನೆಸಿಕೊಳ್ಳುವಿರಿ. ಇಂದು ಮೋಸಮಾಡುವ ಮನಸ್ಸುಳ್ಳವರಾಗಿರುತ್ತೀರಿ. ಇಂದು ತಮಾಷೆಯಾಗಿ ಕಂಡರೂ ಮುಂದೆ ತಿರುಗುಬಾಣವಾಗಿ ಬರಲಿದೆ. ಇಂದು ನೀವು ವಹಿಸಿಕೊಂಡ ಜವಾಬ್ದಾರಿಯನ್ನು ಇನ್ನೊಬ್ಬರಿಗೆ ನೀಡುವಿರಿ. ಹೊಸ ಪರಿಚಯದವರ ಜೊತೆ ವೃತ್ತಿಯನ್ನು ಮಾಡಬೇಕಾದೀತು. ಪರೋಪಕಾರಗುಣವು ನಿಮ್ಮಲ್ಲಿ ಇಂದು ಅಧಿಕವಾಗುವುದು. ಪ್ರಭಾವಿ ವ್ಯಕ್ತಿತ್ವವು ನಿಮಗೆ ಅನುಸರೀಣಯವಾಗಬಹುದು. ಮಕ್ಕಳ ಪ್ರೀತಿಯನ್ನು ಪಡೆದುಕೊಳ್ಳುವಿರಿ. ಪ್ರೀತಿಯಲ್ಲಿ ಸಣ್ಣ ಕಲಹವಾಗಬಹುದು. ಸಂಗಾತಿಯ ಪ್ರೀತಿಯನ್ನು ನೀವು ಅರಗಿಸಿಕೊಳ್ಳಲಾರಿರಿ. ಆಲಂಕಾರಿಕ ವಸ್ತುಗಳ ಬಗ್ಗೆ ಆಸಕ್ತಿ ಹೆಚ್ಚಾಗಬಹುದು.
ಕನ್ಯಾ ರಾಶಿ : ಇಂದು ನಿಮ್ಮ ಬೆಂಬಲಕ್ಕೆ ಯಾರೂ ಬಾರದೇ ನಿಮ್ಮ ಮಂಡನೆಯು ವ್ಯರ್ಥವಾದೀತು. ಸರಿಯಾದ ಮಾಹಿತಿ ಪಡೆದು ಹೂಡಿಕೆ ಮಾಡಿ. ಯಾರ ಒತ್ತಾಯಕ್ಕೂ ಮಣಿಯಬೇಡಿ. ಉದ್ವೇಗಕ್ಕೆ ಒಳಗಾಗಬೇಡಿ. ಕುಟುಂಬದವರ ಜೊತೆ ಸಂತೋಷದಿಂದ ದಿನವನ್ನು ಕಳೆಯುವಿರಿ. ನಿಮ್ಮ ಪ್ರಮಾಣಿಕತೆಯೇ ನಿಮಗೆ ಮುಳ್ಳಾಗಬಹುದು. ನಿಷ್ಠೆಯಿಂದ ಕೆಲಸವನ್ನು ಮಾಡುವ ನಿಮಗೆ ಕಛೇರಿಯಲ್ಲಿ ಶುಭಸುದ್ದಿ ಇರಲಿದೆ. ಸ್ಥಾನವನ್ನು ನೀವು ಬಿಟ್ಟುಕೊಡುವುದು ಬೇಡ. ನಿಮ್ಮ ಗಮನವು ಇಂದು ದಾನ ಕಾರ್ಯಗಳ ಕಡೆ ಇರುವುದು. ಕೌಟುಂಬಿಕ ವಿಷಯಗಳಲ್ಲಿ, ನೀವು ಬಾಹ್ಯ ವ್ಯಕ್ತಿಯನ್ನು ಸಂಪರ್ಕಿಸುವುದು ಬೇಡ. ಅನಿರೀಕ್ಷತ ಸಂಕಟಕ್ಕೆ ಹಣದ ಕೊರತೆ ಕಾಣಿಸುವುದು. ಅದನ್ನು ಹೊಂದಿಸುವುದು ಕಷ್ಟವಾದೀತು. ವಾಗ್ವಾದವಾಗುವುದೆಂಬ ಭಯವೂ ನಿಮ್ಮನ್ನು ಕಾಡುವುದು. ನಿಮ್ಮ ಆರ್ಥಿಕತೆಯನ್ನು ಗೌಪ್ಯವಾಗಿ ಇಡಬೇಕು ಎನಿಸುವುದು. ಭೂಮಿಯ ವ್ಯವಹಾರವು ಪೂರ್ಣ ಲಾಭವನ್ನು ತಂದುಕೊಡದು.
ತುಲಾ ರಾಶಿ : ಬಹಳ ದಿನಗಳ ಅನಂತರ ನಿಮ್ಮ ಹಳೆಯ ಶತ್ರುವಿನ ಭೇಟಿಯಾಗಬಹುದು. ನೀವು ಏನೂ ಗೊತ್ತಿಲ್ಲದವರಂತೆ ವರ್ತಿಸುವಿರಿ. ಸಾಮಾಜಿಕ ಕಾರ್ಯದಲ್ಲಿ ತೊಡಗುವ ಮನಸ್ಸಿದ್ದರೂ ದೇಹವು ಅದಕ್ಕೆ ಸಹಕರಿಸದೇ ಇರಬಹುದು. ಭವಿಷ್ಯದ ಆರ್ಥಿಕತೆಯ ಚಿಂತನೆಯನ್ನು ನಡಸುವಿರಿ. ಸಂಗಾತಿಯ ಜೊತೆ ಶೀತಲಸಮರವು ನಡೆಯಬಹುದು. ನೀವು ಅಧ್ಯಾತ್ಮದಲ್ಲಿ ಹೆಚ್ಚು ಆಸಕ್ತಿಯನ್ನು ತೋರಿಸುವಿರಿ. ಹಿರಿಯರ ಮಾರ್ಗದರ್ಶನದಲ್ಲಿ ನೀವು ಮುಂದುವರಿಯಿರಿ. ನಿಮ್ಮ ಆಪ್ತರೊಂದಿಗೆ ನೀವು ಮನೋರಂಜನಾ ಕಾರ್ಯಕ್ರಮದಲ್ಲಿ ಭಾಗವಹಿಸುವಿರಿ. ನಿಮ್ಮ ಹಳೆಯ ಪ್ರತಿಜ್ಞೆಯನ್ನು ಇಂದು ಪೂರ್ಣ ಮಾಡಿದ ಸಂತೋಷವು ಇರುವುದು. ವಿವಾಹದ ಸುಖದಲ್ಲಿ ನೀವಿರುವಿರಿ. ಆರ್ಥಿಕ ವಿಚಾರಕ್ಕೆ ಯಾರಾದರೂ ಮಧ್ಯ ಪ್ರವೇಶಿಸುವುದರಿಂದ ಸಿಟ್ಟಾಗುವಿರಿ. ಯಾರನ್ನೂ ಸರಿಯಾಗಿ ಅರ್ಥಮಾಡಿಕೊಳ್ಳದೇ ನಿಮ್ಮ ಬಳಿ ಅವರನ್ನು ಬಿಟ್ಟುಕೊಳ್ಳಬೇಡಿ. ಹಳೆಯ ಯೋಜನೆಗಳಿಗೆ ಮರುಜೀವ ಕೊಡುವಿರಿ.
ವೃಶ್ಚಿಕ ರಾಶಿ : ಸಹನಯೇ ನಿಮ್ಮ ಎಲ್ಲ ಕಾರ್ಯಗಳನ್ನು ಸಕ್ಷಮವಾಗಿ ಕರೆದೊಯ್ಯುವುದಾಗಿದೆ. ಸ್ನೇಹಿತರು ನಿಮಗೆ ಉತ್ತಮ ಕೆಲಸ ಹಾಗು ಸಂಬಳದ ಸ್ಥಳವನ್ನು ತಿಳಿಸಬಹುದು. ಎಲ್ಲರನ್ನೂ ಮೆಚ್ಚಿಸುವ ಪ್ರಯತ್ನವು ವ್ಯರ್ಥವೇ ಸರಿ. ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಕೆಲಸವನ್ನು ಮಾಡಿ. ಯಾರಿಗೂ ಭರವಸೆಯನ್ನು ನೀಡಲು ಹೋಗಬೇಡಿ. ಸಂಗತಿಯ ಜೊತೆ ಈ ದಿನವನ್ನು ಆನಂದದಿಂದ ಕಳೆಯಿರಿ. ಅನಾರೋಗ್ಯದಿಂದ ನೀವು ದುರ್ಬಲರಾಗುವಿರಿ. ಸಾಮಾಜಿಕ ಸೇವಾಕ್ಷೇತ್ರಕ್ಕೆ ಪ್ರಶಂಸೆ ಸಿಗುವುದು. ಸ್ನೇಹಿತರ ಬೆಂಬಲವು ನಿಮಗೆ ಅಗತ್ಯವಾಗಿ ಸಿಗಲಿದೆ. ಕೆಲವು ಅಪರಿಚಿತರ ಜೊತೆ ನೀವು ಎಚ್ಚರಿಕೆಯಿಂದ ಇರುವುದು ಮುಖ್ಯವಾಗಲಿ. ಅವಸರದಲ್ಲಿ ಯಾವುದೇ ಕಾರ್ಯವನ್ನು ಮಾಡುವುದು ಬೇಡ. ಮನೆಗೆ ಬೇಕಾದ ವಸ್ತುಗಳ ಖರೀದಿಯಲ್ಲಿ ನೀವು ಮಗ್ನರಾಗುವಿರಿ. ಗೃಹನಿರ್ಮಾಣದ ದಾಖಲಾತಿಗೆ ನೀವು ಓಡಾಟ ಮಾಡಬೇಕಾಗುವುದು. ಸಾರ್ವಜನಿಕ ಮನ್ನಣೆಯನ್ನು ಗಳಿಸವಿರಿ. ಉದ್ಯಮದ ವಿಸ್ತರಣೆಗೆ ನಿಮ್ಮ ಕ್ರಮವು ಯಶಸ್ವಿಯಾಗುವುದು.
ಧನು ರಾಶಿ : ಇತರರು ನಿಮ್ಮ ಬಗ್ಗೆ ಸಕಾರಾತ್ಮವಾಗಿ ಹೇಳಿದರೂ ನೀವು ನಂಬುವ ಮಾನಸಿಕತೆ ನಿಮ್ಮಲ್ಲಿ ಇರುವುದಿಲ್ಲ. ಕುಟುಂಬದ ಕಾಳಜಿಯೇ ನಿಮ್ಮೆದುರು ಮತ್ತೆ ಮತ್ತೆ ಬರಬಹುದು. ಸಜ್ಜನರ ಸಹವಾಸ ಸಿಗಲಿದೆ. ಅನ್ಯಚಿಂತೆಯಿಂದ ಕೆಲಸಗಳು ಹಾಗೆಯೇ ಉಳಿದಿರಬಹುದು. ಇಂದು ನೀವು ಕೆಲವು ವಿಷಯಗಳನ್ನು ರಹಸ್ಯವಾಗಿ ಇಡಬೇಕಾಗುತ್ತದೆ. ಸುಮ್ಮನೇ ಯಾರದೋ ಸಲಹೆಯನ್ನು ಅನುಸರಿಸುವುದರಿಂದ ಅರ್ಥವಿಲ್ಲ. ನಾಯಕತ್ವ ಕೌಶಲ್ಯಗಳು ಇತರರಿಗೆ ಗೊತ್ತಾಗುವುದು. ನಿಮ್ಮ ಭರವಸೆಗಳನ್ನು ಸಮಯಕ್ಕೆ ಸರಿಯಾಗಿ ಪೂರೈಸಲು ಪ್ರಯತ್ನಿಸಿ. ದಾಂಪತ್ಯ ಜೀವನದಲ್ಲಿ ಮಾಧುರ್ಯವಿರುತ್ತದೆ ಮತ್ತು ಕುಟುಂಬ ಸಂಬಂಧಗಳಿಗೆ ಪ್ರಾಮುಖ್ಯವನ್ನು ನೀಡುತ್ತದೆ. ಭೂಮಿಯ ಲಾಭಕ್ಕಾಗಿ ಓಡಾಟವನ್ನು ಮಾಡಬೇಕಾದೀತು. ಒಂದು ರೀತಿಯಲ್ಲಿ ನಿಮಗೆ ಆತಂಕದ ದಿನವೂ ಇದಾಗಬಹುದು. ನೀವು ಕೆಲವು ಅಪೂರ್ಣ ಕಾರ್ಯಗಳನ್ನು ಮಾಡಿ ಮುಗಿಸುವಿರಿ.
ಮಕರ ರಾಶಿ : ನಿಮ್ಮ ಹೂಡಿಕೆ ವಿಚಾರವನ್ನು ರಹಸ್ಯವಾಗಿ ಇಡುವಿರಿ. ಇದನ್ನು ಯಾರಿಗೂ ತಿಳಿಸಲು ಇಷ್ಟಪಡುವುದಿಲ್ಲ. ನಿಮ್ಮನ್ನು ಇಷ್ಟಪಟ್ಟವರಿಗೆ ಇಂದು ನಿಮ್ಮಿಂದ ಅಸಮಾಧಾನವಾಗುವ ಸಾಧ್ಯತೆ ಇದೆ. ಯಾವುದಾರೂ ಸ್ಪರ್ಧೆಯಲ್ಲಿ ಭಾಗವಹಿಸುವುದಿದ್ದರೆ ಇಂದು ಜಯ ನಿಮ್ಮದೇ. ಎಲ್ಲದಕ್ಕೂ ಹೊಂದಾಣಿಕೆ ಮಾಡಿಕೊಂಡು ಬೇಸರವಾಗಿದ್ದರೂ ಅದನ್ನು ಮಾಡಿಕೊಳ್ಳದೇ ವಿಧಿಯಿಲ್ಲ. ನಿಮ್ಮ ಅಗತ್ಯ ಕೆಲಸಗಳು ಸಮಯಕ್ಕೆ ಪೂರ್ಣಗೊಳ್ಳಬಹುದು. ನೀವು ಧರ್ಮ ಕಾರ್ಯಗಳಲ್ಲಿ ಮುನ್ನಡೆಯುವುದು ಉತ್ತಮ. ಮಕ್ಕಳಿಗೆ ನೀವು ಆದರ್ಶರಾಗುವಿರಿ. ಹಿರಿಯ ಸದಸ್ಯರಿಗೆ ನಿಮ್ಮ ಸಹಕಾರವು ಇರಲಿದೆ. ನೆರಮನೆಯವರ ಜೊತೆ ಭೂಮಿಯ ವಿಚಾರಕ್ಕೆ ವಾಗ್ವಾದವು ಆಗಬಹುದು. ಕೃಷಿಯಲ್ಲಿ ಲಾಭ ಗಳಿಸಬೇಕೆಂದು ನಾನಾ ಪ್ರಯತ್ನವನ್ನು ಮಾಡುವಿರಿ. ಇಂದಿನ ಆದಾಯಕ್ಕೆ ತಕ್ಕಂತೆ ಖರ್ಚೂ ಇರಲಿದೆ. ವೃತ್ತಿಯ ಕುರಿತು ಯಾರಾದರೂ ಕೇಳಿಯಾರು. ಆದಾಯವನ್ನೂ ಕೇಳಬಹುದು. ಉನ್ನತ ವಿದ್ಯಾಭ್ಯಾಸವು ಯಶಸ್ವಿಯಾಗಿ ಪೂರೈಸುವಿರಿ.
ಕುಂಭ ರಾಶಿ : ನಿಮ್ಮನ್ನು ನಂಬಿದವರಿಗೆ ನಂಬಿಕೆ ಬರುವಂತೆ ಕೆಲಸವನ್ನು ಮಾಡಿ. ಹಣದ ತೊಂದರೆ ಎದ್ದು ಕಾಣಿಸುತ್ತದೆ. ಇದರಿಂದ ಚಿಂತೆಯೂ ಆಗಬಹುದು. ಮನೆಯವರ ಸಹಾಯವು ಅನಿವಾರ್ಯವಾದರೆ ಸಿಗಲಿದೆ. ಉತ್ತಮವಾದ ಅಭ್ಯಾಸವನ್ನು ಆರಂಭಿಸಲು ಸಕಲ. ಉತ್ಸಾಹಕ್ಕೆ ಭಂಗವಾಗುವ ಯಾವ ವಿಚಾರಗಳೂ ಇಂದ ಆಗದು. ನಿಶ್ಚಿಂತೆಯಿಂದ ಇರಬಹುದು. ಗೆಳಯರ ಜೊತೆ ಕಳೆದ ದಿನಗಳನದನು ನೆನಪಿಸಿಕೊಂಡು ಖುಷಿಪಡುವಿರಿ. ಆಹಾರದ ಬಗ್ಗೆ ನಿರಾಸಕ್ತಿ ಬರಬಹುದು. ನಿಮ್ಮ ಆದಾಯವನ್ನು ಹೆಚ್ಚಿಸುವ ಪ್ರಯತ್ನಗಳು ಪೂರ್ಣವಾಗಿ ಸಫಲವಾಗದು. ನೀವು ಸ್ನೇಹಿತರು ಮತ್ತು ಸಹೋದ್ಯೋಗಿಗಳಿಂದ ಹಣಕಾಸಿನ ಬೆಂಬಲವನ್ನು ಪಡೆಯುತ್ತೀರಿ. ಕಾರ್ಯಕ್ಷೇತ್ರದಲ್ಲಿ, ನೀವು ಬಯಸಿದ ಕೆಲಸವನ್ನು ಮಾಡುವಿರಿ. ನೀವು ಶುಭ ಕಾರ್ಯಗಳಿಗೆ ಹಣವನ್ನು ಖರ್ಚು ಮಾಡುತ್ತೀರಿ. ಕಾರ್ಯನಿರ್ವಹಣೆಗೆ ಪ್ರಶಂಸೆಯು ಸಿಗಲಿದೆ. ಗ್ರಾಹಕರಿಂದ ಮೋಸ ಹೋಗಬೇಕಾದೀತು.
ಮೀನ ರಾಶಿ : ಇಂದು ನಿರೀಕ್ಷಿತ ಸುದ್ದಿಯಿಂದ ನಿಮಗೆ ಸಂತೋಷವಗಲಿದೆ. ಮನಸ್ಸು ಮತ್ತು ದೇಹಕ್ಕೂ ಶ್ರಮವಾಗಬಹುದು. ಯೋಗ ಹಾಗೂ ಧ್ಯಾನವನ್ನು ಮಾಡಿ. ಶ್ರಮಪರಿಹಾರವಾಗುವುದು. ವಿನಾಕಾರಣ ಖರ್ಚನ್ನು ಹೆಚ್ಚು ಮಾಡಿಕೊಳ್ಳುವಿರಿ. ಕೆಲಸಗಳನ್ನು ಮುಂದೂಡುವ ಮನಃಸ್ಥಿತಿಯನ್ನು ಹೊಂದಿದ್ದೀರಿ. ಮಾತುಗಳನ್ನು ಆಡುವಾಗ ಗಮನವಿರಲಿ. ನಿಮ್ಮ ಬಹುಕಾಲದಿಂದ ಬಾಕಿ ಉಳಿದಿರುವ ಕಾರ್ಯಗಳನ್ನು ಪೂರ್ಣಗೊಳಿಸುವ ದಿನವಾಗಿದೆ. ನಿಮ್ಮ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯದಿಂದ ಪ್ರಯೋಜನವುದೆ. ಸಂಗಾತಿಯ ಮಾತುಗಳಿಂದ ಮನೋಬಲವು ಹೆಚ್ಚಾಗುವುದು. ನಿರ್ಮಾಣ ಕಾರ್ಯದ ಅಗತ್ಯವನ್ನು ಪೂರೈಸುವಿರಿ. ಸ್ನೇಹಿತರ ಮಾತಿನಿಂದ ವಿದೇಶಕ್ಕೆ ಹೋಗುವ ಆಸೆ ಅತಿಯಾಗುವುದು. ನ್ಯಾಯಾಲಯಕ್ಕೆ ಸಂಬಂಧಿಸಿದಂತೆ ಸಕಾರಾತ್ಮಕ ನಿಲುವು ಇರಲಿ. ಮಕ್ಕಳು ನಿಮ್ಮ ಜೊತೆ ವಾಗ್ವಾದ ಬರಬಹುದು. ಒಳ್ಳೆಯ ಸುದ್ದಿಯು ನಿಮ್ಮ ಉತ್ಸಾಹವನ್ನು ಹೆಚ್ಚಿಸುವುದು.
-ಲೋಹಿತ ಹೆಬ್ಬಾರ್ – 8762924271 (what’s app only