AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope: ರಾಶಿ ಭವಿಷ್ಯ; ಪ್ರೀತಿಯಲ್ಲಿ ಸಣ್ಣ ಕಲಹವಾಗಬಹುದು-ಎಚ್ಚರ

ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಾಗಿದ್ದರೆ. ಏಪ್ರಿಲ್ 12 ರ ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

Horoscope: ರಾಶಿ ಭವಿಷ್ಯ; ಪ್ರೀತಿಯಲ್ಲಿ ಸಣ್ಣ ಕಲಹವಾಗಬಹುದು-ಎಚ್ಚರ
ರಾಶಿ ಭವಿಷ್ಯ
TV9 Web
| Updated By: ಕಿರಣ್ ಹನುಮಂತ್​ ಮಾದಾರ್|

Updated on: Apr 12, 2024 | 12:30 AM

Share

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಏಪ್ರಿಲ್​​​​​ 12) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ವಸಂತ ಋತು, ಮೀನ ಮಾಸ, ಮಹಾನಕ್ಷತ್ರ: ರೇವತೀ, ಮಾಸ: ಚೈತ್ರ, ಪಕ್ಷ: ಶುಕ್ಲ, ವಾರ: ಶುಕ್ಲ, ತಿಥಿ: ಚತುರ್ಥೀ, ನಿತ್ಯನಕ್ಷತ್ರ: ರೋಹಿಣೀ, ಯೋಗ: ಆಯುಷ್ಮಾನ್, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 21 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 45 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 11:01 ರಿಂದ 12:33ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 03:39 ರಿಂದ 05:12 ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 07:55 ರಿಂದ 09:28ರ ವರೆಗೆ.

ಸಿಂಹ ರಾಶಿ : ನೀವು ಹಾಸಿಗೆ ಇದ್ದಷ್ಟು ಕಾಲು ಚಾಚುವುದು . ಕೈಗೆಟಕುದ ಯಾವುದಕ್ಕೂ ನಿಮ್ಮ ಪ್ರಯತ್ನವನ್ನು ಮಾಡುವುದು ಬೇಡ. ವಿವಾಹ ನಡೆದು ಇಂದು ವಾರ್ಷಿಕೋತ್ಸವ ಮಾಡಿಕೊಳ್ಳುತ್ತ ಹಳೆಯದನ್ನು ನೆನೆಸಿಕೊಳ್ಳುವಿರಿ. ಇಂದು ಮೋಸಮಾಡುವ ಮನಸ್ಸುಳ್ಳವರಾಗಿರುತ್ತೀರಿ. ಇಂದು ತಮಾಷೆಯಾಗಿ ಕಂಡರೂ ಮುಂದೆ ತಿರುಗುಬಾಣವಾಗಿ ಬರಲಿದೆ. ಇಂದು ನೀವು ವಹಿಸಿಕೊಂಡ ಜವಾಬ್ದಾರಿಯನ್ನು ಇನ್ನೊಬ್ಬರಿಗೆ ನೀಡುವಿರಿ. ಹೊಸ ಪರಿಚಯದವರ ಜೊತೆ ವೃತ್ತಿಯನ್ನು ಮಾಡಬೇಕಾದೀತು. ಪರೋಪಕಾರಗುಣವು ನಿಮ್ಮಲ್ಲಿ ಇಂದು ಅಧಿಕವಾಗುವುದು. ಪ್ರಭಾವಿ ವ್ಯಕ್ತಿತ್ವವು ನಿಮಗೆ ಅನುಸರೀಣಯವಾಗಬಹುದು. ಮಕ್ಕಳ ಪ್ರೀತಿಯನ್ನು ಪಡೆದುಕೊಳ್ಳುವಿರಿ. ಪ್ರೀತಿಯಲ್ಲಿ ಸಣ್ಣ ಕಲಹವಾಗಬಹುದು. ಸಂಗಾತಿಯ ಪ್ರೀತಿಯನ್ನು ನೀವು ಅರಗಿಸಿಕೊಳ್ಳಲಾರಿರಿ. ಆಲಂಕಾರಿಕ ವಸ್ತುಗಳ ಬಗ್ಗೆ ಆಸಕ್ತಿ ಹೆಚ್ಚಾಗಬಹುದು.

ಕನ್ಯಾ ರಾಶಿ : ಇಂದು ನಿಮ್ಮ ಬೆಂಬಲಕ್ಕೆ ಯಾರೂ ಬಾರದೇ ನಿಮ್ಮ ಮಂಡನೆಯು ವ್ಯರ್ಥವಾದೀತು. ಸರಿಯಾದ ಮಾಹಿತಿ ಪಡೆದು ಹೂಡಿಕೆ ಮಾಡಿ. ಯಾರ ಒತ್ತಾಯಕ್ಕೂ ಮಣಿಯಬೇಡಿ. ಉದ್ವೇಗಕ್ಕೆ ಒಳಗಾಗಬೇಡಿ. ಕುಟುಂಬದವರ ಜೊತೆ ಸಂತೋಷದಿಂದ ದಿನವನ್ನು ಕಳೆಯುವಿರಿ. ನಿಮ್ಮ ಪ್ರಮಾಣಿಕತೆಯೇ ನಿಮಗೆ ಮುಳ್ಳಾಗಬಹುದು. ನಿಷ್ಠೆಯಿಂದ ಕೆಲಸವನ್ನು ಮಾಡುವ ನಿಮಗೆ ಕಛೇರಿಯಲ್ಲಿ ಶುಭಸುದ್ದಿ ಇರಲಿದೆ. ಸ್ಥಾನವನ್ನು ನೀವು ಬಿಟ್ಟುಕೊಡುವುದು ಬೇಡ. ನಿಮ್ಮ ಗಮನವು ಇಂದು ದಾನ ಕಾರ್ಯಗಳ ಕಡೆ ಇರುವುದು. ಕೌಟುಂಬಿಕ ವಿಷಯಗಳಲ್ಲಿ, ನೀವು ಬಾಹ್ಯ ವ್ಯಕ್ತಿಯನ್ನು ಸಂಪರ್ಕಿಸುವುದು ಬೇಡ. ಅನಿರೀಕ್ಷತ ಸಂಕಟಕ್ಕೆ ಹಣದ ಕೊರತೆ ಕಾಣಿಸುವುದು. ಅದನ್ನು ಹೊಂದಿಸುವುದು ಕಷ್ಟವಾದೀತು. ವಾಗ್ವಾದವಾಗುವುದೆಂಬ ಭಯವೂ ನಿಮ್ಮನ್ನು ಕಾಡುವುದು. ನಿಮ್ಮ ಆರ್ಥಿಕತೆಯನ್ನು ಗೌಪ್ಯವಾಗಿ ಇಡಬೇಕು ಎನಿಸುವುದು. ಭೂಮಿಯ ವ್ಯವಹಾರವು ಪೂರ್ಣ ಲಾಭವನ್ನು ತಂದುಕೊಡದು.

ತುಲಾ ರಾಶಿ : ಬಹಳ ದಿನಗಳ ಅನಂತರ ನಿಮ್ಮ ಹಳೆಯ ಶತ್ರುವಿನ ಭೇಟಿಯಾಗಬಹುದು. ನೀವು ಏನೂ ಗೊತ್ತಿಲ್ಲದವರಂತೆ ವರ್ತಿಸುವಿರಿ. ಸಾಮಾಜಿಕ ಕಾರ್ಯದಲ್ಲಿ ತೊಡಗುವ ಮನಸ್ಸಿದ್ದರೂ ದೇಹವು ಅದಕ್ಕೆ ಸಹಕರಿಸದೇ ಇರಬಹುದು. ಭವಿಷ್ಯದ ಆರ್ಥಿಕತೆಯ ಚಿಂತನೆಯನ್ನು ನಡಸುವಿರಿ. ಸಂಗಾತಿಯ ಜೊತೆ ಶೀತಲಸಮರವು ನಡೆಯಬಹುದು. ನೀವು ಅಧ್ಯಾತ್ಮದಲ್ಲಿ ಹೆಚ್ಚು ಆಸಕ್ತಿಯನ್ನು ತೋರಿಸುವಿರಿ. ಹಿರಿಯರ ಮಾರ್ಗದರ್ಶನದಲ್ಲಿ ನೀವು ಮುಂದುವರಿಯಿರಿ. ನಿಮ್ಮ ಆಪ್ತರೊಂದಿಗೆ ನೀವು ಮನೋರಂಜನಾ ಕಾರ್ಯಕ್ರಮದಲ್ಲಿ ಭಾಗವಹಿಸುವಿರಿ. ನಿಮ್ಮ ಹಳೆಯ ಪ್ರತಿಜ್ಞೆಯನ್ನು ಇಂದು ಪೂರ್ಣ ಮಾಡಿದ ಸಂತೋಷವು ಇರುವುದು. ವಿವಾಹದ ಸುಖದಲ್ಲಿ ನೀವಿರುವಿರಿ. ಆರ್ಥಿಕ ವಿಚಾರಕ್ಕೆ ಯಾರಾದರೂ ಮಧ್ಯ ಪ್ರವೇಶಿಸುವುದರಿಂದ ಸಿಟ್ಟಾಗುವಿರಿ. ಯಾರನ್ನೂ ಸರಿಯಾಗಿ ಅರ್ಥಮಾಡಿಕೊಳ್ಳದೇ ನಿಮ್ಮ ಬಳಿ ಅವರನ್ನು ಬಿಟ್ಟುಕೊಳ್ಳಬೇಡಿ. ಹಳೆಯ ಯೋಜನೆಗಳಿಗೆ ಮರುಜೀವ ಕೊಡುವಿರಿ.

ವೃಶ್ಚಿಕ ರಾಶಿ : ಸಹನಯೇ ನಿಮ್ಮ ಎಲ್ಲ ಕಾರ್ಯಗಳನ್ನು ಸಕ್ಷಮವಾಗಿ ಕರೆದೊಯ್ಯುವುದಾಗಿದೆ. ಸ್ನೇಹಿತರು ನಿಮಗೆ ಉತ್ತಮ ಕೆಲಸ ಹಾಗು ಸಂಬಳದ ಸ್ಥಳವನ್ನು ತಿಳಿಸಬಹುದು. ಎಲ್ಲರನ್ನೂ ಮೆಚ್ಚಿಸುವ ಪ್ರಯತ್ನವು ವ್ಯರ್ಥವೇ ಸರಿ. ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಕೆಲಸವನ್ನು ಮಾಡಿ. ಯಾರಿಗೂ ಭರವಸೆಯನ್ನು ನೀಡಲು ಹೋಗಬೇಡಿ. ಸಂಗತಿಯ ಜೊತೆ ಈ ದಿನವನ್ನು ಆನಂದದಿಂದ ಕಳೆಯಿರಿ. ಅನಾರೋಗ್ಯದಿಂದ ನೀವು ದುರ್ಬಲರಾಗುವಿರಿ. ಸಾಮಾಜಿಕ ಸೇವಾಕ್ಷೇತ್ರಕ್ಕೆ ಪ್ರಶಂಸೆ ಸಿಗುವುದು. ಸ್ನೇಹಿತರ ಬೆಂಬಲವು ನಿಮಗೆ ಅಗತ್ಯವಾಗಿ ಸಿಗಲಿದೆ. ಕೆಲವು ಅಪರಿಚಿತರ ಜೊತೆ ನೀವು ಎಚ್ಚರಿಕೆಯಿಂದ ಇರುವುದು ಮುಖ್ಯವಾಗಲಿ. ಅವಸರದಲ್ಲಿ ಯಾವುದೇ ಕಾರ್ಯವನ್ನು ಮಾಡುವುದು ಬೇಡ. ಮನೆಗೆ ಬೇಕಾದ ವಸ್ತುಗಳ ಖರೀದಿಯಲ್ಲಿ ನೀವು ಮಗ್ನರಾಗುವಿರಿ. ಗೃಹನಿರ್ಮಾಣದ ದಾಖಲಾತಿಗೆ ನೀವು ಓಡಾಟ ಮಾಡಬೇಕಾಗುವುದು. ಸಾರ್ವಜನಿಕ ಮನ್ನಣೆಯನ್ನು ಗಳಿಸವಿರಿ. ಉದ್ಯಮದ ವಿಸ್ತರಣೆಗೆ ನಿಮ್ಮ ಕ್ರಮವು ಯಶಸ್ವಿಯಾಗುವುದು.

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!