AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Numerology Horoscope 4th November: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ನವೆಂಬರ್ 4ರ ದಿನಭವಿಷ್ಯ

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ನವೆಂಬರ್ 4ರ ಮಂಗಳವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

Numerology Horoscope 4th November: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ನವೆಂಬರ್ 4ರ ದಿನಭವಿಷ್ಯ
ಸಂಖ್ಯಾಶಾಸ್ತ್ರ
ಸ್ವಾತಿ ಎನ್​ಕೆ
| Edited By: |

Updated on: Nov 04, 2025 | 1:33 AM

Share

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ನಿಮಗೆ ಒಂದು ವೇಳೆ ಆಪ್ತರು, ಸ್ನೇಹಿತರು ಅಥವಾ ಸಂಬಂಧಿಗಳ ಪೈಕಿ ಯಾರ ಮೇಲಾದರೂ ಸಿಟ್ಟು- ಸೆಡವು ಇದ್ದಲ್ಲಿ ಅದು ಮೆತ್ತಗೆ ಆಗಿಬಿಡುವಂಥ ಸನ್ನಿವೇಶ ಸೃಷ್ಟಿ ಆಗಲಿದೆ. ಸಣ್ಣ ಪುಟ್ಟ ಬೇಸರ ಮರೆತು ಮುನ್ನಡೆಯುವ ಚಿಂತನೆ ಮಾಡಲಿದ್ದೀರಿ. ಕಾನೂನು ಕೋರ್ಟ್ ವ್ಯಾಜ್ಯಗಳಿಗೆ ಸಂಬಂಧಿಸಿ ಓಡಾಟ ನಡೆಸುತ್ತಾ ಇದ್ದಲ್ಲಿ ರಾಜೀ- ಸಂಧಾನದ ಮೂಲಕ ಬಗೆಹರಿಸಿಕೊಳ್ಳುವ ವೇದಿಕೆ ಸಿಗಲಿದೆ. ರಾತ್ರಿ ಪ್ರಯಾಣ ಮಾಡಲೇಬೇಕು ಅಂತಾದಲ್ಲಿ ಮಾತ್ರ ಎಚ್ಚರಿಕೆ ತೆಗೆದುಕೊಳ್ಳಿ. ಅದರಲ್ಲೂ ನೀವೇ ಚಾಲನೆ ಮಾಡುವ ಸಂದರ್ಭ ಬಾರದಿರುವಂತೆ ನೋಡಿಕೊಳ್ಳಿ. ಮನೆಯ ಆಸ್ತಿಗೆ ಸಂಬಂಧ ಪಟ್ಟ ಕಾಗದ- ಪತ್ರಗಳಿಗೆ ಅರ್ಜಿ ಹಾಕಿಕೊಂಡಿದ್ದಲ್ಲಿ ಸರ್ಕಾರದಿಂದ ಆಗಬೇಕಾದ ಕೆಲಸ- ಕಾರ್ಯಗಳು ತುಂಬ ಸಮಯ ತೆಗೆದುಕೊಳ್ಳಬಹುದು ಎಂಬ ಸೂಚನೆ ದೊರೆಯಲಿದೆ. ಎಲ್ಲರಿಗೂ ಮೊದಲು ಕಾರ್ಯ ಮುಗಿಸಬೇಕು ಎಂದು ಆಲೋಚಿಸುವುದಕ್ಕಿಂತ ತಪ್ಪಿಲ್ಲದಂತೆ ಮಾಡುವ ಕಡೆಗೆ ಲಕ್ಷ್ಯ ನೀಡಿ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ನಿತ್ಯವೂ ನಿಮಗೆ ಒಂದಲ್ಲ ಒಂದು ಬಗೆಯಲ್ಲಿ ಮುಜುಗರ ಸಿಟ್ಟಾಗುವಂತೆ ಮಾಡುವ ವ್ಯಕ್ತಿಗಳಿಗೆ ಮುಖಕ್ಕೆ ಹೊಡೆದಂತೆ ಮಾತನಾಡಿ ಬಿಡುತ್ತೀರಿ. ಇಷ್ಟು ಸಮಯ ಯಾವೆಲ್ಲ ವಿಚಾರ ಅದುಮಿಟ್ಟು ಕೊಂಡಿದ್ದೀರೋ ಅವೆಲ್ಲ ಹೊರಹಾಕುವಂತೆ ಈ ದಿನ ಕೆಲ ಘಟನೆಗಳು ನಡೆಯಲಿವೆ. ನಿಮ್ಮಲ್ಲಿ ಕೆಲವರಿಗೆ ಚರ್ಮಕ್ಕೆ ಸಂಬಂಧಿಸಿದ ಅನಾರೋಗ್ಯ ಕಾಡಬಹುದು. ಅದರಲ್ಲೂ ಎಣ್ಣೆ ಅಥವಾ ಹಾಲಿನ ಪದಾರ್ಥಗಳ ಸೇವನೆಯಿಂದ ಅಲರ್ಜಿ ಆಗುವ ಸಾಧ್ಯತೆಗಳಿವೆ. ಆಹಾರ ತಯಾರಿಕೆಯಲ್ಲಿ ಬಳಸುವ ಪದಾರ್ಥಗಳ ಗುಣಮಟ್ಟದ ಕಡೆಗೆ ಗಮನ ನೀಡಿ. ಒಂದು ವೇಳೆ ಮನೆಯಿಂದ ಹೊರಗಿನ ಆಹಾರ ಪದಾರ್ಥ ಸೇವನೆ ಹೆಚ್ಚು ಮಾಡುವಂಥವರು ಇದೊಂದು ದಿನ ಹೊರಗಿನ ಪದಾರ್ಥಗಳನ್ನು ತಿನ್ನಬೇಡಿ. ಐಟಿ- ಬಿಪಿಒಗಳಲ್ಲಿ ಉದ್ಯೋಗ ಮಾಡುತ್ತಾ ಇರುವವರಿಗೆ ಕೆಲಸದ ಒತ್ತಡ ಜಾಸ್ತಿ ಆಗಲಿದೆ. ಅದರಿಂದ ನೀವು ಕೆಲವು ತಪ್ಪುಗಳನ್ನು ಮಾಡುವ ಸಾಧ್ಯತೆ ಸಹ ಇದೆ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ಇನ್ಯಾರದೋ ಒಳ್ಳೆಯದಕ್ಕಾಗಿ, ಲಾಭಕ್ಕಾಗಿ, ಏಳ್ಗೆಗಾಗಿ ನಿಮ್ಮ ಸ್ವಂತ ಶ್ರಮ, ಹಣ, ಪ್ರಭಾವ ಎಲ್ಲವನ್ನೂ ಮೀಸಲಿಡುವಂತೆ ಆಗಲಿದೆ. ಅವರು ಆ ಸಹಾಯಕ್ಕೆ ಅರ್ಹರಾ ಎಂಬುದನ್ನು ಆಲೋಚಿಸಿ, ಆ ನಂತರ ಮುಂದಿನ ಹೆಜ್ಜೆಯನ್ನು ಇಡುವುದು ಒಳ್ಳೆಯದು. ಪ್ರತಿಷ್ಠೆಗೆ ಬಿದ್ದು, ಆ ಮೇಲೆ ಪರಿತಪಿಸುವಂತೆ ಆಗದಿರಲಿ. ನೀವೇನಾದರೂ ಬ್ಯಾಂಕ್ ಗಳಲ್ಲಿ, ಬ್ಯಾಂಕೇತರ ಹಣಕಾಸು ಸಂಸ್ಥೆಗಳಲ್ಲಿ ಉದ್ಯೋಗ ಮಾಡುವಂಥವರಾದರೆ ಹಣದ ವಿಷಯದ ಅಪಾಯ ಮೈ ಮೇಲೆ ಹಾಕಿಕೊಳ್ಳಬೇಡಿ. ಇನ್ನು ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವ ಕೆಲವರಿಗೆ ಬಡ್ತಿ, ಪದೋನ್ನತಿ ಅಥವಾ ತಾತ್ಕಾಲಿಕ ಸಮಯಕ್ಕೆ ಹೆಚ್ಚುವರಿ ಜವಾಬ್ದಾರಿ ಹೆಗಲೇರಬಹುದು. ದೂರ ಪ್ರಯಾಣ ಮಾಡುತ್ತಿದ್ದೀರಿ ಎಂದಾದಲ್ಲಿ ನಿಮ್ಮ ಲಗೇಜ್, ವಸ್ತುಗಳ ಬಗ್ಗೆ ಹೆಚ್ಚು ಜಾಗ್ರತೆ ವಹಿಸಿ. ನಿಮ್ಮ ಕರ್ತವ್ಯ/ಜವಾಬ್ದಾರಿಯನ್ನು ನೀವೇ ಪೂರ್ಣ ಮಾಡುವುದು ಒಳ್ಳೆಯದು. ಇತರರನ್ನು ನಂಬಿ, ವಹಿಸದಿರುವುದು ಕ್ಷೇಮ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ತಾಯಿಯ ಜೊತೆಗೆ ಉತ್ತಮ ಸಮಯ ಕಳೆಯುವ ಯೋಗ ಇದೆ. ನಿಮ್ಮಲ್ಲಿ ಕೆಲವರು ತಾಯಿಗೆ ಅಥವಾ ತಾಯಿ ಸಮಾನರಿಗೆ ಸೀರೆ, ಒಡವೆ ಅಥವಾ ಇನ್ಯಾವುದೇ ಅವರು ಕೇಳಿದ ಬೆಲೆ ಬಾಳುವ ವಸ್ತು ಖರೀದಿ ಮಾಡುವ ಯೋಗ ಇದೆ. ಹೆಣ್ಣುಮಕ್ಕಳು ತವರು ಮನೆ ಕಾರ್ಯಕ್ರಮಗಳಿಗೆ ಹೆಚ್ಚಿನ ಓಡಾಟ ಮಾಡಬೇಕಾಗಲಿದೆ. ಒಂದು ವೇಳೆ ಸೋದರ ಅಥವಾ ಸೋದರಿ ವಿವಾಹಕ್ಕೆ ಪ್ರಯತ್ನ ಮಾಡುತ್ತಾ ಇದ್ದಲ್ಲಿ ಸೂಕ್ತ ಸಂಬಂಧ ದೊರಕುವ ಸಾಧ್ಯತೆ ಹೆಚ್ಚಿದೆ. ಅದರಲ್ಲೂ ನಿಮ್ಮ ಶ್ರಮ ಹಾಗೂ ಪ್ರಯತ್ನದಿಂದ ಸಂಬಂಧ ನಿಕ್ಕಿ ಆಗುವ ಯೋಗ ಇದೆ. ಸೈಟು- ಮನೆ ಖರೀದಿ ಮಾಡುವುದಕ್ಕಾಗಿ ಹುಡುಕಾಟ ನಡೆಸುತ್ತಾ ಇರುವವರಿಗೆ ಮನಸ್ಸಿಗೆ ಒಪ್ಪುವಂಥದ್ದು ದೊರೆಯುವ ಯೋಗ ಇದೆ. ಅಥವಾ ಬೇರೆಯವರಿಗೆ ಹುಡುಕಾಟ ನಡೆಸುವಾಗ ನಿಮಗೆ ಇಷ್ಟ ಆಗುವಂಥದ್ದು ಸಿಗುವ ಅವಕಾಶ ಹೆಚ್ಚಿದೆ. ನಿಮ್ಮಲ್ಲಿ ಕೆಲವರು ಕುಟುಂಬ ಸದಸ್ಯರಿಗಾಗಿ ಸೆಕೆಂಡ್ ಹ್ಯಾಂಡ್ ವಾಹನ ಖರೀದಿಗೆ ಪ್ರಯತ್ನಿಸುತ್ತೀರಿ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ನಿಮ್ಮ ಮಾತನ್ನು ಕೇಳಿಸಿಕೊಳ್ಳುತ್ತಿದ್ದಾರೆ ವಿನಾ ಕೇಳುತ್ತಿಲ್ಲ ಎಂಬುದು ಈ ದಿನ ಆಕ್ಷೇಪಕ್ಕೆ ಕಾರಣ ಆಗಲಿದೆ. ನೀವು ಒಪ್ಪಿಕೊಂಡ ಕೆಲಸಗಳು ಅಥವಾ ಜವಾಬ್ದಾರಿಯನ್ನು ಸರಿಯಾಗಿ ಪೂರ್ತಿ ಮಾಡಿಲ್ಲ ಎಂದು ಕೆಲವರ ಬಗ್ಗೆ ಬೇಸರ ವ್ಯಕ್ತಪಡಿಸಲಿದ್ದೀರಿ. ನಿಧಾನವಾಗಿ ಮುಗಿದರೂ ಪರವಾಗಿಲ್ಲ ಎಂದು ಹೇಳಿದ್ದ ಕೆಲವು ಆರ್ಡರ್ ಅಥವಾ ಕೆಲಸವನ್ನು ನೀವೇ ಒತ್ತಡ ಹಾಕಿ, ಬೇಗ ಬೇಗನೇ ಪೂರ್ಣ ಮಾಡುವಂತೆ ದುಂಬಾಲು ಬೀಳಲಿದ್ದೀರಿ. ಕೃಷಿ ಉತ್ಪನ್ನಗಳ ಮಾರಾಟ- ವಿತರಣೆಯಲ್ಲಿ ತೊಡಗಿರುವವರಿಗೆ ಆದಾಯಕ್ಕೆ ಹೆಚ್ಚು ಮೂಲಗಳು ತೆರೆದುಕೊಳ್ಳಲಿವೆ. ಈ ಹಿಂದೆ ನೀವು ಹಾಕಿದ್ದ ಶ್ರಮ ಫಲ ನೀಡುವ ಸಮಯ ಇದು ಎಂಬ ಅಂಶ ಮನದಟ್ಟಾಗಲಿದೆ. ನಿಮ್ಮಲ್ಲಿ ಕೆಲವರು ಸಾಮರ್ಥ್ಯ ಮೀರಿ ಖರ್ಚು- ವೆಚ್ಚ ಮಾಡಲಿದ್ದೀರಿ. ಇದರಿಂದ ಸ್ವಲ್ಪ ಮಟ್ಟಿಗೆ ಆತಂಕ ಎದುರಾದರೂ ಇತರರ ಸಂತೋಷ ಗಮನದಲ್ಲಿ ಇಟ್ಟುಕೊಂಡು ಸಮಾಧಾನ ಮಾಡಿಕೊಳ್ಳಲಿದ್ದೀರಿ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ಒಪ್ಪಿಕೊಂಡ ಕೆಲಸ- ಕಾರ್ಯಗಳಲ್ಲಿ ನೀವು ಅಂದುಕೊಳ್ಳದ ರೀತಿಯಲ್ಲಿ ದೊಡ್ಡ ಯಶಸ್ಸು ದೊರೆಯಲಿದೆ. ಉದ್ಯೋಗ ಸ್ಥಳದಲ್ಲಿ ವೇತನ ಹೆಚ್ಚಳ ಅಥವಾ ಬಡ್ತಿ ನಿರೀಕ್ಷೆಯಲ್ಲಿ ಇರುವವರಿಗೆ ಅದು ಸಿಗುವ ಸೂಚನೆ- ಸುಳಿವು ದೊರೆಯಲಿದೆ. ವಿದೇಶದಲ್ಲಿ ವ್ಯಾಸಂಗ ಅಥವಾ ಉದ್ಯೋಗಕ್ಕಾಗಿ ಪ್ರಯತ್ನ ಮಾಡುತ್ತಿದ್ದಲ್ಲಿ ಮತ್ತು ನಿಮ್ಮ ವಯಸ್ಸು ಇಪ್ಪತ್ತೆಂಟರ ಒಳಗೆ ಇದ್ದಲ್ಲಿ ಒಂದೊಳ್ಳೆ ನೆರವು- ಮಾರ್ಗದರ್ಶನ ದೊರೆಯಲಿದೆ. ಚಿನ್ನ- ಬೆಳ್ಳಿ ಇಂಥ ಲೋಹಗಳ ಮೇಲೆ ಹೂಡಿಕೆ ಮಾಡಿದಂಥವರು ಅದರಲ್ಲಿ ತುಂಬ ದೊಡ್ಡ ಪ್ರಮಾಣವನ್ನು ಮಾರಾಟ ಮಾಡಿ, ಅದರಿಂದ ಬಂದ ಹಣವನ್ನು ಬೇರೆಡೆ ಹೂಡಿಕೆ ಮಾಡುವ ಬಗ್ಗೆ ತೀರ್ಮಾನ ಮಾಡುವ ಸಾಧ್ಯತೆ ಇದೆ. ನಿಮ್ಮಲ್ಲಿ ಯಾರು ಕಮಿಷನ್ ಆಧಾರದಲ್ಲಿ ಆದಾಯ ಪಡೆಯುತ್ತಾ ಇದ್ದೀರೋ ಅಂಥವರಿಗೆ ಪಾರ್ಟನರ್ ಷಿಪ್ ನಲ್ಲಿ ಮಾಡಿದ ವ್ಯವಹಾರವೊಂದು ದೊಡ್ಡ ಮೊತ್ತವನ್ನು ತಂದುಕೊಡಲಿದೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ಉದ್ಯೋಗಕ್ಕಾಗಿ ಪ್ರಯತ್ನ ಮಾಡುತ್ತಾ ಇರುವವರಿಗೆ ಪ್ರತಿಷ್ಠಿತ ಸಂಸ್ಥೆಯಲ್ಲಿ ಉತ್ತಮ ವೇತನದ ಕೆಲಸ ದೊರೆಯುವ ಸಾಧ್ಯತೆ ಇದೆ. ಈಗಾಗಲೇ ಇಂಟರ್ ವ್ಯೂ ನೀಡಿಯಾಗಿದೆ ಎಂದಾದಲ್ಲಿ ಅಲ್ಲಿಂದ ಉದ್ಯೋಗದ ಆಫರ್ ಬರುವ ಯೋಗ ಇದೆ. ನಿಮ್ಮಲ್ಲಿ ಕೆಲವರು ಮನೆ ದೇವರ ಪೂಜೆಗೆ ಸಮಯ, ಹಣವನ್ನು ಮೀಸಲು ಇಡಲಿದ್ದೀರಿ. ಇನ್ನೂ ಕೆಲವರು ಹುಟ್ಟಿದ ಊರಿನ ಗ್ರಾಮ ದೇವತೆ ಪೂಜೆಗೆ ಶಾಶ್ವತ ವ್ಯವಸ್ಥೆ ಮಾಡುವ ಸಲುವಾಗಿ ದೊಡ್ಡ ಮಟ್ಟದಲ್ಲಿ ಸಂಪನ್ಮೂಲ ಸಂಗ್ರಹದಲ್ಲಿ ತೊಡಗುವ ನಿರ್ಧಾರ ಮಾಡಲಿದ್ದೀರಿ. ಧಾರ್ಮಿಕ ಸಂಸ್ಥೆಗಳಲ್ಲಿ ಪ್ರಮುಖ ಹುದ್ದೆಯಲ್ಲಿ ಇರುವವರಿಗೆ ಸಂಘ- ಸಂಸ್ಥೆಗಳಿಂದ ಸನ್ಮಾನ ಆಗುವ ಸಾಧ್ಯತೆಗಳಿವೆ. ಸವಾಲು ಎನಿಸುವಂಥ ಕೆಲವು ಜವಾಬ್ದಾರಿಗಳನ್ನು ಮುಗಿಸಿಕೊಂಡು ಬರುವಂತೆ ನೀವು ಬಹಳ ಗೌರವಿಸುವ ಅಥವಾ ಗುರು ಸಮಾನ ಎನಿಸಿದ ವ್ಯಕ್ತಿಯೊಬ್ಬರು ನಿಮಗೆ ಸೂಚಿಸಲಿದ್ದಾರೆ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ಮಕ್ಕಳ ಆರೋಗ್ಯ ವಿಚಾರ ಚಿಂತೆಗೆ ಕಾರಣ ಆಗಬಹುದು. ಅದರಲ್ಲೂ ಜೀರ್ಣ ಸರಿಯಾಗಿ ಆಗುತ್ತಿಲ್ಲ ಅಂತಲೋ ಅಥವಾ ಪದೇಪದೇ ಜ್ವರ ಬರುತ್ತಿದೆ ಅಂತಲೋ ಮನೆಯಲ್ಲಿ ಎಲ್ಲ ಸದಸ್ಯರು ಆತಂಕಕ್ಕೆ ಕಾರಣ ಆಗುವಂತೆ ಸನ್ನಿವೇಶ ಉದ್ಬವಿಸಬಹುದು. ಆಸ್ತಿ ವಿಚಾರಕ್ಕೆ ನೀವು ಈ ಹಿಂದೆ ಯಾರಿಗೇ ಮಾತು ನೀಡಿದ್ದರೂ ಅದು ಈಗ ದೊಡ್ಡ ಜವಾಬ್ದಾರಿ ಎಂಬಂತೆ ಅಥವಾ ಏನು ಮಾಡಬೇಕು ಎಂದು ತಿಳಿಯದಂಥ ಪರಿಸ್ಥಿತಿಯನ್ನು ನಿಮ್ಮೆದುರು ತಂದಿಡಲಿದೆ. ನಿಮ್ಮ ಸ್ವಂತ ವಿಷಯದಲ್ಲಿ ಬೇರೆಯವರಿಗೆ ಅಥವಾ ಎಲ್ಲೆಡೆ ಸುಳ್ಳು ಹೇಳಿಕೊಂಡು ಬರುತ್ತಿದ್ದ ವ್ಯಕ್ತಿ ಯಾರು ಎಂಬ ಸಂಗತಿ ನಿಮಗೆ ಗೊತ್ತಾಗುವ ಸಾಧ್ಯತೆ ಈ ದಿನ ಇದೆ. ತುಂಬ ಆಸಕ್ತಿ ವಹಿಸಿ ಆರಂಭಿಸಿದ್ದ ಕೆಲಸವೊಂದನ್ನು ಈಗ ಯಾವ ಸ್ಥಿತಿಯಲ್ಲಿ ಇದೆಯೋ ಅಲ್ಲಿಗೇ ನಿಲ್ಲಿಸಬೇಕಾದ ಪರಿಸ್ಥಿತಿ ಎದುರಾಗಲಿದೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ನಿಮ್ಮ ಆತ್ಮವಿಶ್ವಾಸ ಸ್ವಲ್ಪ ಮಟ್ಟಿಗೆ ಕುಸಿದುಹೋಗುವಂತೆ ಕೆಲವು ಸುದ್ದಿ ಕಿವಿಗೆ ಬೀಳಲಿದೆ. ವಿಚಿತ್ರ ಏನೆಂದರೆ, ನಿಮಗೆ ಆ ಸುದ್ದಿ ತಲುಪಿಸುವಂಥ ವ್ಯಕ್ತಿಯ ವಿಶ್ವಾಸಾರ್ಹತೆ ಆತಂಕಕ್ಕೆ ದೂಡುವಂತೆ ಮಾಡಲಿದೆ. ನಿಮ್ಮ ಜೊತೆಗೆ ಇರುವ ಹಾಗೂ ನಿಮಗೆ ಬಹಳ ಆಪ್ತರಾದ ವ್ಯಕ್ತಿಯೊಬ್ಬರ ಆರ್ಥಿಕ ಒತ್ತಡ ನಿಮ್ಮನ್ನೂ ಒತ್ತಡಕ್ಕೆ ಬೀಳುವಂತೆ ಮಾಡಲಿದೆ. ಯಾಕೆ ಕೆಲವರನ್ನು ಹೀಗೆ ವಿಪರೀತ ಹಚ್ಚಿಕೊಳ್ಳುತ್ತೇನೆ ಎಂದು ಹಲವು ಬಾರಿ ನಿಮಗೆ ನೀವೇ ಹೇಳಿಕೊಳ್ಳುವಂತೆ ಆಗಲಿದೆ. ಮನೆ ನಿರ್ಮಾಣ ಅಥವಾ ಸೈಟು- ಜಮೀನಿನಲ್ಲಿ ಕೆಲಸ ಹಿಡಿಸಿರುವವರಿಗೆ ಸಾಲ ತರಲೇಬೇಕಾದ ಸನ್ನಿವೇಶ ಸೃಷ್ಟಿ ಆಗಲಿದೆ. ನಿಮ್ಮದಲ್ಲದ ಜವಾಬ್ದಾರಿ ಅಥವಾ ನಿಮಗೆ ಸಂಬಂಧಿಸಿದ ವಿಷಯದಲ್ಲಿ ಉದ್ಭವಿಸಿದ ಸಮಸ್ಯೆಯನ್ನು ನೀವೇ ಬಗೆಹರಿಸಬೇಕು ಎನ್ನುವಂತೆ ಆಗಲಿದೆ. ಗೊಂದಲ ಎನಿಸುವಂಥ ಸವಾಲುಗಳು ಎದುರಾದರೆ ಅನುಭವಿಗಳ ಸಲಹೆ ಪಡೆಯಿರಿ.

ಲೇಖನ- ಎನ್‌.ಕೆ.ಸ್ವಾತಿ

ಕಾಡ್ಗಿಚ್ಚಿನಿಂದ ನಾಶವಾಯ್ತು ನಂದಾ ದೇವಿ ಅರಣ್ಯದ ಅಪರೂಪದ ಸಸ್ಯ ಸಂಪತ್ತು
ಕಾಡ್ಗಿಚ್ಚಿನಿಂದ ನಾಶವಾಯ್ತು ನಂದಾ ದೇವಿ ಅರಣ್ಯದ ಅಪರೂಪದ ಸಸ್ಯ ಸಂಪತ್ತು
ತಮಿಳುನಾಡಿನ ಮಧುರೈನಲ್ಲಿ ಜಲ್ಲಿಕಟ್ಟು ಸ್ಪರ್ಧೆ ಆರಂಭ
ತಮಿಳುನಾಡಿನ ಮಧುರೈನಲ್ಲಿ ಜಲ್ಲಿಕಟ್ಟು ಸ್ಪರ್ಧೆ ಆರಂಭ
ಸಾವಿನಿಂದ ಕೂದಲೆಳೆ ಅಂತರದಲ್ಲಿ ಪಾರಾದ ಕ್ರಿಕೆಟಿಗ
ಸಾವಿನಿಂದ ಕೂದಲೆಳೆ ಅಂತರದಲ್ಲಿ ಪಾರಾದ ಕ್ರಿಕೆಟಿಗ
ಹತ್ಯೆಗೈದು ಎಲ್ಲರ ಮುಂದೆ ನಾಟಕವಾಡಿದ್ದ ಆರೋಪಿಗಳು ಸಿಕ್ಕಿಬಿದ್ದಿದ್ದೇಗೆ?
ಹತ್ಯೆಗೈದು ಎಲ್ಲರ ಮುಂದೆ ನಾಟಕವಾಡಿದ್ದ ಆರೋಪಿಗಳು ಸಿಕ್ಕಿಬಿದ್ದಿದ್ದೇಗೆ?
ವೈಭವ್ ಸೂರ್ಯವಂಶಿ ವಿಕೆಟ್ ಹಾರಿಸಿದ ಕೊಹ್ಲಿಯ ಅಪ್ಪಟ ಅಭಿಮಾನಿ
ವೈಭವ್ ಸೂರ್ಯವಂಶಿ ವಿಕೆಟ್ ಹಾರಿಸಿದ ಕೊಹ್ಲಿಯ ಅಪ್ಪಟ ಅಭಿಮಾನಿ
ಬಿಗ್ ಬಾಸ್ ಫಿನಾಲೆ: ಗಿಲ್ಲಿ ಗೆಲ್ಲಲಿ ಎಂದು ವಿಶೇಷ ಪೂಜೆ ಮಾಡಿಸಿದ ಫ್ಯಾನ್ಸ್
ಬಿಗ್ ಬಾಸ್ ಫಿನಾಲೆ: ಗಿಲ್ಲಿ ಗೆಲ್ಲಲಿ ಎಂದು ವಿಶೇಷ ಪೂಜೆ ಮಾಡಿಸಿದ ಫ್ಯಾನ್ಸ್
ಗವಿಗಂಗಾಧರೇಶ್ವರ ಸನ್ನಿಧಿಯಲ್ಲಿ ವಿಸ್ಮಯ: ಶಿವಲಿಂಗಕ್ಕೆ ಸೂರ್ಯರಶ್ಮಿ ಸ್ಪರ್ಶ
ಗವಿಗಂಗಾಧರೇಶ್ವರ ಸನ್ನಿಧಿಯಲ್ಲಿ ವಿಸ್ಮಯ: ಶಿವಲಿಂಗಕ್ಕೆ ಸೂರ್ಯರಶ್ಮಿ ಸ್ಪರ್ಶ
ತರಕಾರಿ ಮಾರಿದ ಹಣದಲ್ಲಿ ಬೆಳ್ಳಿ ಬಾಗಿಲು ಮಾಡಿಸಿದ್ದ ದಾನಜ್ಜಿ ಭೀಕರ ಹತ್ಯೆ
ತರಕಾರಿ ಮಾರಿದ ಹಣದಲ್ಲಿ ಬೆಳ್ಳಿ ಬಾಗಿಲು ಮಾಡಿಸಿದ್ದ ದಾನಜ್ಜಿ ಭೀಕರ ಹತ್ಯೆ
ಮೊದಲ ಪಂದ್ಯದಲ್ಲೇ 5 ವಿಕೆಟ್ ಉರುಳಿಸಿದ ಹೆನಿಲ್ ಪಟೇಲ್
ಮೊದಲ ಪಂದ್ಯದಲ್ಲೇ 5 ವಿಕೆಟ್ ಉರುಳಿಸಿದ ಹೆನಿಲ್ ಪಟೇಲ್
ಶ್ರೀರಾಮನಿಗೆ ಮುಸ್ಲಿಂ ಶಾಸಕ ಪೂಜೆ , ಹಿಂದೂ ಧರ್ಮದ ಬಗ್ಗೆ ಹೇಳಿದ್ದಿಷ್ಟು
ಶ್ರೀರಾಮನಿಗೆ ಮುಸ್ಲಿಂ ಶಾಸಕ ಪೂಜೆ , ಹಿಂದೂ ಧರ್ಮದ ಬಗ್ಗೆ ಹೇಳಿದ್ದಿಷ್ಟು