
ಹಠಾತ್ ಬದಲಾವಣೆಗಳಿಗೆ ಸಾಕ್ಷಿಯಾಗಲಿದ್ದೀರಿ. ಅಂದುಕೊಂಡ ಕೆಲಸ ಕೊನೆ ಕ್ಷಣದಲ್ಲಿ ರದ್ದಾಗಬಹುದು, ಅದಕ್ಕೆ ಧೃತಿಗೆಡಬೇಡಿ. ಬದಲಿಗೆ ಸಿಕ್ಕ ಬಿಡುವಿನ ವೇಳೆಯನ್ನು ಬಾಕಿ ಉಳಿದ ಕೆಲಸ ಮುಗಿಸಲು ಬಳಸಿ. ತಾಂತ್ರಿಕ ದೋಷಗಳಿಂದಾಗಿ ಮೊಬೈಲ್ ಅಥವಾ ಲ್ಯಾಪ್‌ಟಾಪ್ ರಿಪೇರಿಗೆ ಬರಬಹುದು. ಸಾಮಾಜಿಕ ಜಾಲತಾಣಗಳಲ್ಲಿ ಅನಗತ್ಯ ಪೋಸ್ಟ್ ಹಾಕಿ ವಿವಾದ ಮೈಮೇಲೆ ಎಳೆದುಕೊಳ್ಳಬೇಡಿ. ಸರ್ಕಾರಿ ಕೆಲಸಗಳು ಸ್ವಲ್ಪ ನಿಧಾನಗತಿಯಲ್ಲಿ ಸಾಗಲಿವೆ, ತಾಳ್ಮೆಯೇ ಮುಖ್ಯ.
ವ್ಯವಹಾರ ಹಾಗೂ ವ್ಯಾಪಾರದಲ್ಲಿ ‘ಬಾಯಿ ಮಾತಿನ ವ್ಯವಹಾರ’ ಇಂದು ಕೈಕೊಡಬಹುದು, ಎಲ್ಲವನ್ನೂ ಲಿಖಿತ ರೂಪದಲ್ಲಿ ಇಟ್ಟುಕೊಳ್ಳಿ. ದಲ್ಲಾಳಿ ಕೆಲಸ ಅಥವಾ ಕಮಿಷನ್ ಆಧಾರಿತ ಕೆಲಸ ಮಾಡುವವರಿಗೆ ದೊಡ್ಡ ಮೊತ್ತದ ಹಣ ಕೈ ಸೇರಲಿದೆ. ಪ್ರೀತಿ-ಪ್ರೇಮದ ವಿಚಾರದಲ್ಲಿ ಹೊಸ ಪ್ರಸ್ತಾವನೆ ಸಲ್ಲಿಸಲು ಇದು ಸಕಾಲವಲ್ಲ. ನಿಮ್ಮ ಆಹಾರ ಪದ್ಧತಿಯಲ್ಲಿ ಶಿಸ್ತು ತನ್ನಿ, ವಿಶೇಷವಾಗಿ ಹೊರಗಿನ ಆಹಾರ ಸೇವನೆಯಿಂದ ಹೊಟ್ಟೆಯ ಸಮಸ್ಯೆ ಕಾಡಬಹುದು. ಹಳೆಯ ಸಾಲ ವಸೂಲಿಗೆ ಪ್ರಯತ್ನಿಸಿ, ಯಶಸ್ಸು ಸಿಗಲಿದೆ. ನರ್ಸರಿ ನಡೆಸುತ್ತಿರುವವರಿಗೆ ಲಾಭವಿದೆ.
ಇಂದಿನ ವಾರದವಾದ ಶುಕ್ರವಾರ ನಿಮ್ಮ ಜನ್ಮ ಸಂಖ್ಯೆಗೆ ಹೆಚ್ಚು ಪೂರಕವಾಗಿದೆ. ಸೌಂದರ್ಯವರ್ಧಕ, ಬಟ್ಟೆ ಅಥವಾ ಅಲಂಕಾರಿಕ ವಸ್ತುಗಳ ವ್ಯಾಪಾರಿಗಳಿಗೆ ‘ಬಂಪರ್’ ದಿನ. ಮನೆಯನ್ನು ನವೀಕರಿಸುವ ಬಗ್ಗೆ ಸಂಗಾತಿಯೊಂದಿಗೆ ಚರ್ಚಿಸುವಿರಿ. ಐಷಾರಾಮಿ ವಸ್ತುಗಳ ಮೇಲೆ ಅತಿಯಾದ ಖರ್ಚು ಮಾಡುವುದನ್ನು ನಿಯಂತ್ರಿಸಿ, ಇಲ್ಲದಿದ್ದರೆ ತಿಂಗಳ ಅಂತ್ಯಕ್ಕೆ ಆರ್ಥಿಕ ಮುಗ್ಗಟ್ಟು ಎದುರಾಗಬಹುದು. ಕಚೇರಿಯಲ್ಲಿ ಸ್ತ್ರೀ ಸಹೋದ್ಯೋಗಿಗಳಿಂದ ಸಹಾಯ ಲಭಿಸಲಿದೆ. ಶುಭ್ರವಾದ ಬಿಳಿ ಬಟ್ಟೆ ಧರಿಸುವುದರಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚಿಸಲಿದೆ.
ಲೇಖನ- ಎನ್.ಕೆ.ಸ್ವಾತಿ