Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಜನವರಿ 9ರ ದಿನಭವಿಷ್ಯ
ಜನವರಿ 9ರಂದು ಜನ್ಮಸಂಖ್ಯೆ 1, 2, 3ರವರಿಗೆ ಸಂಖ್ಯಾಶಾಸ್ತ್ರದ ಪ್ರಕಾರ ದಿನಭವಿಷ್ಯ ಇಲ್ಲಿದೆ. ಜನ್ಮಸಂಖ್ಯೆ 1ರವರು ಕೆಲಸದಲ್ಲಿ ತೊಡಗಿಸಿಕೊಳ್ಳಿ, ಉಳಿತಾಯಕ್ಕೆ ಒತ್ತು ನೀಡಿ. ಜನ್ಮಸಂಖ್ಯೆ 2ರವರು ಭಾವನಾತ್ಮಕ ನಿರ್ಧಾರ ಬೇಡ, ದಾಖಲೆಗಳನ್ನು ಪರಿಶೀಲಿಸಿ. ಜನ್ಮಸಂಖ್ಯೆ 3ರವರಿಗೆ ಜ್ಞಾನ ಪ್ರದರ್ಶನಕ್ಕೆ ಅವಕಾಶ, ತಂತ್ರಜ್ಞಾನ ಕಲಿಕೆ ಉತ್ತಮ. ಹಣಕಾಸು, ಕುಟುಂಬ, ಆರೋಗ್ಯದ ಬಗ್ಗೆ ಗಮನವಿರಲಿ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):
ನೀವು ಕೇವಲ ಆದೇಶ ನೀಡುವುದಕ್ಕೆ ಸೀಮಿತವಾಗಬೇಡಿ. ಕಚೇರಿಯಲ್ಲಿ ಅಥವಾ ಮನೆಯಲ್ಲಿ ಕೆಲಸಗಾರರ ಜೊತೆ ಸ್ವತಃ ನೀವೇ ಮೈದಾನಕ್ಕಿಳಿದು ಕೆಲಸ ಮಾಡಿದರೆ ಮಾತ್ರ ಅಂದುಕೊಂಡ ಗುರಿ ತಲುಪಲು ಸಾಧ್ಯ. ಆರ್ಥಿಕವಾಗಿ ಇಂದು “ಹೂಡಿಕೆಗಿಂತ ಉಳಿತಾಯ”ಕ್ಕೆ ಒತ್ತು ನೀಡಿ. ಯಾರೋ ಹೇಳಿದ ಮಾತು ಕೇಳಿ ಷೇರು ಮಾರುಕಟ್ಟೆಯಲ್ಲಿ ಹಣ ಹಾಕಬೇಡಿ. ಸಂಜೆಯ ವೇಳೆ ಸಂಗಾತಿಯೊಂದಿಗೆ ಸಣ್ಣ ವಿಷಯಕ್ಕೆ ವಾದವಾಗಬಹುದು, ಅಲ್ಲಿ ನಿಮ್ಮ ಅಹಂ ಬಿಟ್ಟು ಮೌನ ತಾಳುವುದು ಪ್ರಾಯೋಗಿಕವಾಗಿ ನಿಮಗೆ ಲಾಭದಾಯಕ.
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):
ಭಾವನಾತ್ಮಕವಾಗಿ ನಿರ್ಧಾರ ತೆಗೆದುಕೊಳ್ಳುವ ಬದಲು ಇಂದು ಅಂಕಿ-ಅಂಶಗಳ ಮೇಲೆ ಗಮನಹರಿಸಿ. ಹಣಕಾಸಿನ ವ್ಯವಹಾರದಲ್ಲಿ ಸಹಿ ಮಾಡುವ ಮುನ್ನ ದಾಖಲೆಗಳನ್ನು ಎರಡು ಬಾರಿ ಓದಿ. ಇಂದು ಹಾಲಿನ ಉತ್ಪನ್ನಗಳು ಅಥವಾ ಬಿಳಿ ಬಣ್ಣದ ವಸ್ತುಗಳ ವ್ಯಾಪಾರಸ್ಥರಿಗೆ ಉತ್ತಮ ಲಾಭ ಇದೆ. ಪ್ರಯಾಣದ ಸಂದರ್ಭದಲ್ಲಿ ಅಮೂಲ್ಯ ವಸ್ತುಗಳ ಬಗ್ಗೆ ಎಚ್ಚರವಿರಲಿ. ಕುಟುಂಬದಲ್ಲಿ ಹಿರಿಯರ ಆರೋಗ್ಯಕ್ಕಾಗಿ ಸ್ವಲ್ಪ ಹಣ ಖರ್ಚಾಗಬಹುದು, ಅದಕ್ಕಾಗಿ ಮಾನಸಿಕವಾಗಿ ಸಿದ್ಧರಾಗಿರಿ.
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):
ನಿಮ್ಮ ಜ್ಞಾನವನ್ನು ಪ್ರದರ್ಶಿಸಲು ಇಂದು ಸರಿಯಾದ ವೇದಿಕೆ ಸಿಗಲಿದೆ. ಆದರೆ, “ನನಗೆಲ್ಲಾ ಗೊತ್ತು” ಎಂಬ ಧೋರಣೆ ಬೇಡ. ಕೆಲಸದ ಸ್ಥಳದಲ್ಲಿ ಹೊಸ ತಂತ್ರಜ್ಞಾನ ಅಥವಾ ಹೊಸ ಸಾಫ್ಟ್‌ವೇರ್ ಕಲಿಯಲು ಇಂದು ಹಣ ಹೂಡಿಕೆ ಮಾಡಿ, ಇದು ಭವಿಷ್ಯದಲ್ಲಿ ದೊಡ್ಡ ಲಾಭ ನೀಡಲಿದೆ. ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರ ತೆಗೆದುಕೊಳ್ಳುವಿರಿ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಇರುವವರಿಗೆ ಕೆಲಸದ ಒತ್ತಡ ಹೆಚ್ಚಿದ್ದರೂ, ದಿನದ ಅಂತ್ಯಕ್ಕೆ ಸಮಾಧಾನ ಸಿಗಲಿದೆ.
ಲೇಖನ- ಎನ್.ಕೆ.ಸ್ವಾತಿ
