
ನಿಮ್ಮ ನಾಯಕತ್ವದ ಗುಣಕ್ಕೆ ಪರೀಕ್ಷೆಗಳು ಎದುರಾದುವ ದಿನ ಇದಾಗಿರಲಿದೆ. ಸಣ್ಣ ಪುಟ್ಟ ವಿಚಾರಗಳಿಗೆ ಸಿಟ್ಟು ಮಾಡಿಕೊಳ್ಳದೆ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಂದಕ್ಕೆ ಹೋದರೆ ಮಾತ್ರ ಹೊಸ ಯೋಜನೆಗಳು ಸಫಲವಾಗುತ್ತವೆ. ಆರ್ಥಿಕವಾಗಿ ಹಳೆಯ ಹೂಡಿಕೆಗಳಿಂದ ಸಣ್ಣ ಮಟ್ಟದ ಲಾಭ ಬರಬಹುದು, ಆದರೆ ಆ ಹಣವನ್ನು ಮತ್ತೆ ಹೊಸ ಸಾಹಸಗಳಿಗೆ ಬಳಸಬೇಡಿ. ಕುಟುಂಬದಲ್ಲಿ ಅಣ್ಣ ಅಥವಾ ತಂದೆಯ ಸಮಾನ ರಾದಂಥ ವ್ಯಕ್ತಿಗಳ ಜೊತೆಗಿನ ಸಂಬಂಧ ಸುಧಾರಿಸಲಿದೆ. ಸೃಜನಶೀಲ ಕೆಲಸಗಳಿಗೆ ಹೆಚ್ಚಿನ ಒತ್ತು ನೀಡಿ.
ಇನ್ ಟ್ಯೂಷನ್ ಬಹಳ ಪ್ರಬಲವಾಗಿರುತ್ತದೆ, ಹಾಗಾಗಿ ಮನಸ್ಸಿನ ಮಾತಿಗೆ ಕಿವಿಗೊಡಿ. ಕಚೇರಿಯಲ್ಲಿ ಗುಂಪುಗಾರಿಕೆಯಿಂದ ದೂರವಿರುವುದು ನಿಮ್ಮ ವೃತ್ತಿಜೀವನಕ್ಕೆ ಒಳ್ಳೆಯದು. ಹಣಕಾಸಿನ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸುವುದು ಬೇಡ, ಅದು ನಿಮ್ಮನ್ನೇ ಇಕ್ಕಟ್ಟಿಗೆ ಸಿಲುಕಿಸಬಹುದು. ಕಲಾತ್ಮಕ ಹವ್ಯಾಸಗಳಿಗೆ ಸಮಯ ಮೀಸಲಿಡುವುದರಿಂದ ಮಾನಸಿಕ ನೆಮ್ಮದಿ ಸಿಗಲಿದೆ. ಪ್ರೀತಿಪಾತ್ರರೊಂದಿಗೆ ಸಣ್ಣ ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ, ಆಹಾರದ ವಿಚಾರದಲ್ಲಿ ಸ್ವಲ್ಪ ಜಾಗರೂಕರಾಗಿರಿ.
ನೀವು ಮಾತು ಕಡಿಮೆ ಮಾಡಿ ಕೆಲಸಕ್ಕೆ ಹೆಚ್ಚು ಆದ್ಯತೆ ನೀಡಿ. ಅತಿಯಾದ ಉಪದೇಶ ಮಾಡುವುದರಿಂದ ನಿಮ್ಮ ಆಪ್ತರನ್ನು ನಿಮ್ಮಿಂದ ದೂರ ಮಾಡಬಹುದು. ವೃತ್ತಿ ಕ್ಷೇತ್ರದಲ್ಲಿ ಹೊಸ ಒಪ್ಪಂದಗಳಿಗೆ ಸಹಿ ಹಾಕಲು ಅತ್ಯಂತ ಶುಭ ದಿನ. ಕೌಟುಂಬಿಕವಾಗಿ ಮಂಗಳ ಕಾರ್ಯಗಳ ಬಗ್ಗೆ ಚರ್ಚೆಗಳು ನಡೆಯಲಿವೆ. ಸಾಮಾಜಿಕ ಜವಾಬ್ದಾರಿಗಳು ಹೆಚ್ಚಾಗಲಿದ್ದು, ಸಂಘ-ಸಂಸ್ಥೆಗಳಲ್ಲಿ ಸಕ್ರಿಯರಾಗಿ ಕಾರ್ಯ ನಿರ್ವಹಿಸುತ್ತಾ ಇರುವವರಿಗೆ ಹೊಸ ಜವಾಬ್ದಾರಿ ಸಿಗಲಿದೆ. ಆರ್ಥಿಕವಾಗಿ ಇದು ಸ್ಥಿರತೆಯ ದಿನ.
ಲೇಖನ- ಎನ್.ಕೆ.ಸ್ವಾತಿ